Tag: ಸುದೀಪ್ ಅಭಿಮಾನಿ

  • ಟಿಕೆಟ್ ಹಣ ನೀಡುತ್ತಿದ್ದಂತೆ ಥಿಯೇಟರ್‌ನಲ್ಲೇ ಕುಸಿದು ಬಿದ್ದ ಕಿಚ್ಚನ ಅಭಿಮಾನಿ

    ಟಿಕೆಟ್ ಹಣ ನೀಡುತ್ತಿದ್ದಂತೆ ಥಿಯೇಟರ್‌ನಲ್ಲೇ ಕುಸಿದು ಬಿದ್ದ ಕಿಚ್ಚನ ಅಭಿಮಾನಿ

    ಧಾರವಾಡ: ಕೋಟಿಗೊಬ್ಬ-3 ಸಿನಿಮಾ ಇವತ್ತು ರಾಜ್ಯಾದ್ಯಂತ ತೆರೆ ಕಾಣಬೇಕಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆಯಾಗಲೇ ಇಲ್ಲ. ಈ ಹಿನ್ನೆಲೆ ಸುದೀಪ್ ಅಭಿಮಾನಿ ಸಿನಿಮಾ ಮಂದಿರದಲ್ಲೇ ಕುಸಿದು ಬಿದ್ದಿದ್ದಾರೆ.

    ಧಾರವಾಡದ ಪದ್ಮಾ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದ ಸುದೀಪ್ ಅಭಿಮಾನಿಗಳು, ಸಿನಿಮಾ ರಿಲೀಸ್ ಆಗುವುದಿಲ್ಲ ಎಂದು ಬೇಸರಗೊಂಡು ವಾಪಸ್ ಆಗಿದ್ದಾರೆ. ಈ ನಡುವೆ ಸುದೀಪ್ ಅಭಿಮಾನಿಯೊಬ್ಬರು ಹಳ್ಳಿಯೊಂದರಿಂದ ಕೋಟಿಗೊಬ್ಬ-3 ನೋಡಲು ಬಂದಿದ್ದರು. ಕಿಚ್ಚನ ಸಿನಿಮಾ ಬಿಡುಗಡೆಯಾಗಲಿದೆ ಎಂದು ಟಿಕೆಟ್ ತೆಗೆದುಕೊಂಡಿದ್ದರು. ಆದರೆ ಸಿನಿಮಾ ರಿಲೀಸ್ ಆಗುವುದಿಲ್ಲ ಎಂದು ಚಿತ್ರಮಂದಿರ ಹಣವನ್ನು ವಾಪಸ್ ನೀಡಿದೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಹಣವನ್ನು ವಾಪಸ್ ಕೊಡುತಿದ್ದಂತೆಯೇ ಸಿನಿಮಾ ಹಾಲ್ ಎದುರು ಸುದೀಪ್ ಅಭಿಮಾನಿ ಕುಸಿದು ಬಿದ್ದದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಜನರು ಆ ಅಭಿಮಾನಿಗೆ ನೀರು ಕುಡಿಸಿ ವಾಪಸ್ ಕಳಿಸಿದರು. ಸಿನಿಮಾ ನೋಡಲು ಬಂದಿದ್ದ ಯುವಕ ಬೆಳಗ್ಗೆ ಯಾವುದೇ ಆಹಾರ ಸೇವಿಸದೇ ಬಂದಿದ್ದ ವಿಚಾರ ತಿಳಿದುಬಂದಿದೆ.

  • ಅಪಘಾತದಲ್ಲಿ ಸುದೀಪ್ ಅಭಿಮಾನಿ ಸಾವು

    ಅಪಘಾತದಲ್ಲಿ ಸುದೀಪ್ ಅಭಿಮಾನಿ ಸಾವು

    ತುಮಕೂರು: ನಟ ಕಿಚ್ಚ ಸುದೀಪ್ ಅಭಿಮಾನಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತುಮಕೂರಿನ ಹನುಮಂತಪುರದ ಪಂಜಾಬಿ ಡಾಬಾ ಬಳಿ ನಡೆದಿದೆ.

    ಪುನೀತ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದೀಪ್ ಅಭಿಮಾನಿ. ಮೃತ ಪುನೀತ್ ಕಿಚ್ಚ ಸುದೀಪ್ ಅಭಿಮಾನಿ ಸಂಘದ ತುಮಕೂರು ಜಿಲ್ಲಾ ಮಾಜಿ ಉಪಾಧ್ಯಕ್ಷರಾಗಿದ್ದರು. ಶನಿವಾರ ರಾತ್ರಿ ತುಮಕೂರಿನ ಹನುಮಂತಪುರದ ಪಂಜಾಬಿ ಡಾಬಾ ಬಳಿ ಪುನೀತ್ ಬೈಕ್ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.

    ಅಪಘಾತ ಬಳಿಕ ಪುನೀತ್ ಇಬ್ಬರು ಸ್ನೇಹಿತರಿಗೆ ಫೋನ್ ಮಾಡಿದ್ದಾರೆ. ಆದರೆ ತಡರಾತ್ರಿಯಾಗಿದ್ದರಿಂದ ಇಬ್ಬರು ಸ್ನೇಹಿತರು ಫೋನ್ ರಿಸೀವ್ ಮಾಡಿಲ್ಲ. ಕೊನೆಗೆ ಅಪಘಾತದಲ್ಲಿ ತೀವ್ರ ರಕ್ತ ಸ್ರಾವದಿಂದ ನಿತ್ರಾಣಗೊಂಡು ಸ್ಥಳದಲ್ಲೇ ಪುನೀತ್ ಮೃತಪಟ್ಟಿದ್ದಾರೆ.

    ಈ ಬಗ್ಗೆ ಮಾಹಿತಿ ಸ್ಥಳಕ್ಕೆ ಪೊಲೀಸರು ಹೋಗಿ ಜಿಲ್ಲಾ ಆಸ್ಪತ್ರೆಗೆ ಪುನೀತ್ ಶವವನ್ನು ರವಾನೆ ಮಾಡಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಭಿಮಾನಿಯಿಂದ ರಕ್ತದಲ್ಲಿ ಪತ್ರ – ಗರಂ ಆದ ಕಿಚ್ಚ

    ಅಭಿಮಾನಿಯಿಂದ ರಕ್ತದಲ್ಲಿ ಪತ್ರ – ಗರಂ ಆದ ಕಿಚ್ಚ

    ಬೆಂಗಳೂರು: ಅಭಿಮಾನಿಗಳು ತನ್ನ ನೆಚ್ಚಿನ ನಟ-ನಟಿಯರಿಗೆ ಪತ್ರ ಬರೆಯುವುದು ಸಾಮಾನ್ಯವಾಗಿದೆ. ಆದರೆ ಯುವತಿಯೊಬ್ಬಳು ನಟ ಕಿಚ್ಚ ಸುದೀಪ್ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

    ಸೌಮ್ಯಾ ಎಂಬಾಕೆ ಸುದೀಪ್‍ಗಾಗಿ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಸುದೀಪ್ ಅವರನ್ನು ನೋಡಬೇಕು ಎಂಬ ಆಸೆಯನ್ನು ಪತ್ರದಲ್ಲಿ ವ್ಯಕ್ತಪಡಿದ್ದಾರೆ. ಆದರೆ ಸೌಮ್ಯ ಬರೆದ ಪತ್ರವನ್ನು ನೋಡಿ ಕೋಪ ಮಾಡಿಕೊಂಡು ಮತ್ತೆ ರೀತಿ ಮಾಡಬೇಡಿ ಎಂದು ಕಿಚ್ಚ ಸುದೀಪ್ ತಿಳಿ ಹೇಳಿದ್ದಾರೆ.

    ಪತ್ರದಲ್ಲಿ ಏದಿದೆ?
    ನನ್ನ ಹೆಸರು ಸೌಮ್ಯ. ನನಗೆ ತಂದೆ ತಾಯಿ ಇಲ್ಲ. ಅಂದರೆ ತೀರಿಕೊಂಡಿದ್ದಾರೆ. ನಾನು ನಿಮ್ಮ ಭೇಟಿಗಾಗಿ ತುಂಬಾ ಪ್ರಯತ್ನ ಪಟ್ಟಿದ್ದೀನಿ. ಆದರೆ ಭೇಟಿಯಾಗಲೂ ಸಾಧ್ಯವಾಗಿಲ್ಲ. ಅದಕ್ಕೆ ಈಗ ನನ್ನ ರಕ್ತದಲ್ಲಿ ಈ ಪತ್ರ ಬರೀತಿದ್ದೀನಿ. ನನಗೆ ನಿಮ್ಮ ಸಂಘ ಮತ್ತು ನಿಮ್ಮ ಜೊತೆ ಇರುವ ಒಬ್ಬ ವ್ಯಕ್ತಿಯನ್ನು ನಿಮ್ಮನ್ನು ಭೇಟಿ ಮಾಡಿಸುವಂತೆ ತುಂಬಾ ಕೇಳಿಕೊಂಡೆ. ಆದರೆ ಅವರಿಂದ ನಿರಾಸೆ-ನೋವು ಜಾಸ್ತಿಯಾಗಿದೆ. ಹೀಗಾಗಿ ಈ ನನ್ನ ಪ್ರಯತ್ನಕ್ಕೆ ದಯವಿಟ್ಟು ನೀವೇ ಒಂದು ದಿನ ನನ್ನನ್ನು ಭೇಟಿ ಮಾಡಬೇಕು. ನೀವೇ ದಿನಾಂಕವನ್ನು ಹೇಳಿ. ರಾಕೇಶ್ ಮತ್ತು ಮಂಜಣ್ಣ ದಾವಣಗೆರೆ ಇವರಿಗೆ ನಾನು ಗೊತ್ತು ಎಂದು ಬರೆದಿದ್ದಾರೆ.

    ಈ ಪತ್ರವನ್ನು ಸುದೀಪ್ ಅವರ ಅಭಿಮಾನಿ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿ ಪತ್ರವನ್ನು ನೋಡಿ ಸುದೀಪ್ ಅವರು, “ಅವರ ಅಭಿಮಾನ ನೋಡಿ ನನಗೆ ಖುಷಿಯಾಯಿತು. ಆದರೆ ರಕ್ತದಲ್ಲಿ ಪತ್ರ ಬರೆದಿದ್ದು ನೋಡಿ ನೋವಾಯಿತು. ಸೌಮ್ಯಾ ಅವರ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಖಂಡಿತ ನಾನು ಶೀಘ್ರದಲ್ಲಿಯೇ ನಿಮ್ಮನ್ನು ಭೇಟಿಯಾಗುತ್ತೇನೆ. ಆದರೆ ದಯವಿಟ್ಟು ಹೀಗೆಲ್ಲ ಯಾರೂ ಮಾಡಬೇಡಿ. ನನ್ನ ಮಾತಿನ ಮೇಲೆ ಗೌರವ ಇದ್ದರೆ ಇನ್ನೊಮ್ಮೆ ಈ ರೀತಿ ಮಾಡಬೇಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಮಕ್ಕೆ ಸುದೀಪ್ ಬರಬೇಕೆಂದು ನಾಲ್ಕು ದಿನಗಳಿಂದ ಊಟ ಬಿಟ್ಟು ಆಸ್ಪತ್ರೆ ಸೇರಿದ ಅಭಿಮಾನಿಗಳು

    ಗ್ರಾಮಕ್ಕೆ ಸುದೀಪ್ ಬರಬೇಕೆಂದು ನಾಲ್ಕು ದಿನಗಳಿಂದ ಊಟ ಬಿಟ್ಟು ಆಸ್ಪತ್ರೆ ಸೇರಿದ ಅಭಿಮಾನಿಗಳು

    ಬೆಳಗಾವಿ: ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ಗ್ರಾಮಕ್ಕೆ ಬರಬೇಕೆಂದು ಪಟ್ಟು ಹಿಡಿದು ಕಳೆದ ನಾಲ್ಕು ದಿನಗಳಿಂದ ಉಪವಾಸ ಮಾಡಿ ಆಸ್ಪತ್ರೆ ಸೇರಿದ್ದಾರೆ.

    ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ಗ್ರಾಮದ ಪ್ರವೀಣ್ ಪಾಟೀಲ್, ಸಚಿನ್ ಅಸ್ವಸ್ಥ ಯುವಕರು. ಮಾರ್ಚ್ 8ರಂದು ಸುದೀಪ್ ನೋಡಬೇಕು ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸೀಮೆ ಎಣ್ಣೆ ತೆಗೆದುಕೊಂಡು ಬೆಳಗಾವಿ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಟ್ಟು ಕಳುಹಿಸಿದ್ದರು.

    ಇಬ್ಬರು ಯುವಕರ ಸುದ್ದಿ ತಿಳಿದ ನಟ, ಸುದೀಪ್ ಇಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡು ಆತ್ಮೀಯವಾಗಿ ಮಾತನಾಡಿಸಿ ಇನ್ನೊಮ್ಮೆ ಹೀಗೆ ಮಾಡದಂತೆ ತಿಳಿ ಹೇಳಿದ್ದರು. ಆದರೆ ನಟ ಸುದೀಪ್ ತಮ್ಮ ಗ್ರಾಮಕ್ಕೆ ಆಗಮಿಸಬೇಕು ಎಂದು ಇದೀಗ ಅಭಿಮಾನಿಗಳು ಪಟ್ಟು ಹಿಡಿದ್ದಾರೆ. ಅಸ್ವಸ್ಥರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.