Tag: ಸುದಿಪ್ತೋ ಸೇನ್

  • ‘ಜೈಲರ್‌’ ಬಳಿಕ ಹೆಚ್ಚಿದ ಬೇಡಿಕೆ- ‘ದಿ ಕೇರಳ ಸ್ಟೋರಿ’ ಡೈರೆಕ್ಟರ್ ಜೊತೆ ಶಿವಣ್ಣ ಸಿನಿಮಾ?

    ‘ಜೈಲರ್‌’ ಬಳಿಕ ಹೆಚ್ಚಿದ ಬೇಡಿಕೆ- ‘ದಿ ಕೇರಳ ಸ್ಟೋರಿ’ ಡೈರೆಕ್ಟರ್ ಜೊತೆ ಶಿವಣ್ಣ ಸಿನಿಮಾ?

    ‘ಜೈಲರ್’ (Jailer) ಕಿಂಗ್ ಶಿವಣ್ಣಗೆ ಭರ್ಜರಿ ಬೇಡಿಕೆ ಶುರುವಾಗಿದೆ. ಬಹುಭಾಷೆಗಳಿಂದ ಶಿವರಾಜ್‌ಕುಮಾರ್‌ಗೆ (Shivarajkumar) ಬುಲಾವ್ ಬರುತ್ತಿದೆ. ಕಾಲಿವುಡ್‌ನಲ್ಲಿ (Kollywood) ಶಿವಣ್ಣ ಮಿಂಚಿದ್ದಾಯ್ತು, ಈಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಇದೀಗ ಬೆಂಗಳೂರಿಗೆ ಆಗಮಿಸಿದ ಶಿವಣ್ಣರನ್ನು ‘ದಿ ಕೇರಳ ಸ್ಟೋರಿ’ (The Kerala Story) ನಿರ್ದೇಶಕ ಸುದಿಪ್ತೋ ಸೇನ್ ಭೇಟಿಯಾಗಿದ್ದಾರೆ.

    ‘ದಿ ಕೇರಳ ಸ್ಟೋರಿ’ ಸಿನಿಮಾ ಬಾಲಿವುಡ್ ಗಲ್ಲಾಪೆಟ್ಟಿಗೆ ಬಂಗಾರದ ಬೆಳೆ ತೆಗೆಯಿತು. ಈ ಸಿನಿಮಾದ ಸಕ್ಸಸ್ ನಂತರ ಹೊಸ ಚಿತ್ರಕ್ಕೆ ತಯಾರಿ ನಡೆಸುತ್ತಿರುವ ನಿರ್ದೇಶಕ ಸುದಿಪ್ತೋ ಸೇನ್ ಈಗ ಶಿವರಾಜ್‌ಕುಮಾರ್‌ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಒಂದು ಪಾತ್ರ ಮಾಡುವಂತೆ ಶಿವಣ್ಣಗೆ ಕೇಳಿಕೊಂಡಿದ್ದಾರೆ. ಸದ್ಯ ಶಿವಣ್ಣ ಜೊತೆಗೆ ಸುದಿಪ್ತೋ ಸೇನ್ ಇರುವ ಫೋಟೋವೊಂದು ವೈರಲ್ ಆಗಿದೆ. ಇದನ್ನೂ ಓದಿ:ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಜೊತೆ ಕಾಲ ಕಳೆದ ಮಹೇಶ್‌ ಬಾಬು ಪುತ್ರ

    ಸದ್ಯ ಕಥೆ ಬಗ್ಗೆ ಶಿವಣ್ಣ ಜತೆಗೆ ಸುದಿಪ್ತೋ ಸೇನ್ (Sudipto Sen) ಮೊದಲ ಹಂತದ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಶಿವಣ್ಣ ಕೂಡ ಪಾಸಿಟಿವ್ ಆಗಿಯೇ ರೆಸ್ಪಾನ್ಸ್ ಮಾಡಿದ್ದಾರಂತೆ. ಆದರೆ ಇನ್ನೂ ಯಾವುದೂ ಅಧಿಕೃತಗೊಂಡಿಲ್ಲ. ಕಮರ್ಷಿಯಲ್ ಅಂಶಗಳು, ಡೇಟ್ಸ್ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಾಜೆಕ್ಟ್ ಬಗ್ಗೆ ಶಿವಣ್ಣ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಶೀಘ್ರದಲ್ಲೇ ಬಾಲಿವುಡ್ ಅಂಗಳದಲ್ಲಿ ಶಿವಣ್ಣ ಮಿಂಚೋದು ಪಕ್ಕಾ.

    ಜೈಲರ್ (Jailer) ಸಿನಿಮಾದಲ್ಲಿ ಮಂಡ್ಯ ಮೂಲದ ಗ್ಯಾಂಗ್ ಸ್ಟಾರ್ ಆಗಿ ನಟಿಸಿದ್ದರು. ನಾಯಕನ ಮಗನ ಹುಡುಕಾಟಕ್ಕೆ ಸಾಥ್ ನೀಡೋ ಪಾತ್ರದಲ್ಲಿ ಶಿವಣ್ಣ ಜೀವತುಂಬಿದ್ದರು. ಈ ಬೆನ್ನಲ್ಲೇ ಮತ್ತಷ್ಟು ಸೌತ್ ಸಿನಿಮಾಗಳ ಆಫರ್ ಶಿವಣ್ಣಗೆ ಸಿಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

    ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

    ಬಾಲಿವುಡ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಹವಾ ಎಬ್ಬಿಸಿದ್ದೇ ತಡ ಹಲವು ಫೈಲ್ಸ್ ಗಳು ಅಲ್ಲಲ್ಲಿ ಓಪನ್ ಆಗುತ್ತಿವೆ. ನಾನಾ ರೀತಿಯ ಫೈಲ್ಸ್ ಗಳು ಇನ್ನೂ ಸಿನಿಮಾವಾಗಿ ಬರಲಿ ಎಂಬ ಹಲವರ ಬೇಡಿಕೆಯ ಬೆನ್ನೆಲ್ಲೆ ಕೇರಳದಲ್ಲೊಂದು ಸಿನಿಮಾ ಶುರುವಾಗುತ್ತಿದೆ. ಅದಕ್ಕೆ ‘ದಿ ಕೇರಳ ಸ್ಟೋರಿ’ ಎಂದು ಹೆಸರಿಟ್ಟಿದ್ದಾರೆ ನಿರ್ದೇಶಕ ಸುದಿಪ್ತೋ ಸೇನ್.

    ನಿರ್ದೇಶಕರು ಕೇವಲ ಘೋಷಣೆ ಮಾಡಿಲ್ಲ, ಟೀಸರ್ ಕೂಡ ರಿಲೀಸ್ ಮಾಡಿದ್ದಾರೆ. ಆ ಟೀಸರ್ ನಲ್ಲಿ ಭಯಾನಕ ಸತ್ಯವೊಂದನ್ನು ಹೊರಗೆಡವಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಕೇರಳದ ಮಾಜಿ ಸಿಎಂ ಅಚ್ಯುತಾನಂದ್ ಅವರ ವಿಡಿಯೋ ತುಣಕಕ್ಕೂ ಟೀಸರ್ ನಲ್ಲಿ ಸೇರಿಸಿದ್ದಾರೆ. ಹೀಗಾಗಿ ದಿ ಕೇರಳ  ಸ್ಟೋರಿ ಟೀಸರ್ ನಿಂದಲೇ ಕೇರಳದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲಿ ಅಮೀರ್‌ ಮೇಲೆ ಕ್ರಷ್‌ ಆಗಿತ್ತು.. ಲವ್‌ ಲೆಟರ್‌ ಕೂಡ ಬರೆದಿದ್ದೆ: ಬಾಲಿವುಡ್‌ ನಟಿ

    ಈ ಸಿನಿಮಾದಲ್ಲಿ ಕೇರಳದಲ್ಲಿ ನಡೆದಿದೆ ಎನ್ನಲಾದ ಮಾನವ ಕಳ್ಳಸಾಗಣೆಯ ಕುರಿತಾದ ಸ್ಟೋರಿಯನ್ನು ಹೇಳಲು ಹೊರಟಿದ್ದಾರಂತೆ ನಿರ್ದೇಶಕ ಸೇನ್. ದಶಕವೊಂದರ ಕಾಲದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಮಾನವ ಕಳ್ಳಸಾಗಣೆ ಕುರಿತಾದ ಸಂಶೋಧನೆ ಇದರಲ್ಲಿ ಇದೆಯಂತೆ. ಇದನ್ನೂ ಓದಿ: ಮಾಧುರಿ ದೀಕ್ಷಿತ್ ಇರೋದು ಮನೇಲಿ ಅಲ್ಲ, ಅರಮನೆಯಲ್ಲಿ: ಹೊಸ ಮನೆಗೆ ದೇವದಾಸ್ ಬೆಡಗಿ

    ಕೇರಳವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಮುಸ್ಲಿಂ ಸಂಘಟನೆಯೊಂದರು ಸಂಚು ರೂಪಿಸಿದ್ದ ಮತ್ತು ನಿಷೇಧಿತ ಸಂಘಟನೆ ಎನ್.ಡಿ.ಎಫ್ ಸಹ ಇಂಥದ್ದೇ ಆಲೋಚನೆ ಹೊಂದಿತ್ತು. ಇವರ ಗುರಿಯು ಕೇರಳವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವುದೇ ಆಗಿತ್ತು ಎಂದು ಕೇರಳ ಮಾಜಿ ಸಿಎಂ ಅಚ್ಯುತಾನಂದ್ ಹೇಳಿದ್ದರು ಎನ್ನಲಾದ ವಿಡಿಯೋವನ್ನು ಟೀಸರ್ ನಲ್ಲಿ ಹಾಕಿದ್ದಾರೆ. ಈಗ ಅದು ವೈರಲ್ ಕೂಡ ಆಗಿದೆ. ಇದನ್ನೂ ಓದಿ : ಈ ವಾರ ಕರ್ನಾಟಕದಲ್ಲೇ 250ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಆರ್.ಆರ್.ಆರ್’: ಪುನೀತ್ ‘ಜೇಮ್ಸ್’ ಏನಾಗತ್ತೆ?

    ಕಳೆದ ಹತ್ತು ವರ್ಷಗಳಲ್ಲಿ ಕೇರಳದಿಂದ 32 ಸಾವಿರಕ್ಕೂ ಹೆಚ್ಚು ಯುವತಿಯರನ್ನು ಯುದ್ಧ ಪೀಡಿತ ದೇಶಗಳಿಗೆ ರವಾನಿಸಲಾಗಿದೆ ಎನ್ನುವ ಮಾಹಿತಿಯನ್ನೂ ಆ ಟೀಸರ್ ಬಿಟ್ಟುಕೊಡುತ್ತದೆ. ಈ ಹುಡುಗಿಯರ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ ಎಂದಿದ್ದಾರೆ ನಿರ್ದೇಶಕರು. ಆ ಯುವತಿಯರ ಬದುಕಿನ ಬಗ್ಗೆ ಈಗಾಗಲೇ ಸಂಶೋಧನೆ ಮಾಡಿರುವ ನಿರ್ದೇಶಕರು ಈ ಸತ್ಯ ಘಟನೆಯನ್ನು ಯಥಾವತ್ತಾಗಿ ತರಲು ನಿರ್ದೇಶಕರು ನಿರ್ಧರಿಸಿದ್ದಾರಂತೆ.