Tag: ಸುತ್ತೂರು ಶ್ರೀ

  • ಆನಿಮೇಷನ್ ಸಿನಿಮಾವಾದ ಸುತ್ತೂರು ಮಠದ ಇತಿಹಾಸ

    ಆನಿಮೇಷನ್ ಸಿನಿಮಾವಾದ ಸುತ್ತೂರು ಮಠದ ಇತಿಹಾಸ

    13ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ಹೊಸದೊಂದು ಪರಂಪರೆಗೆ ನಾಂದಿ ಹಾಡಿತು. ಮೈಸೂರಿನ ಸುತ್ತೂರು ಮಠದ ಸಾವಿರ ವರ್ಷಗಳ ಇತಿಹಾಸವನ್ನು ಕಟ್ಟಿಕೊಡುವ ‘ಸುತ್ತೂರು ಗುರು ಪರಂಪರೆ’ ಹೆಸರಿನ ಆನಿಮೇಷನ್ ಸಿನಿಮಾವನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಈ ಪ್ರದರ್ಶನಕ್ಕೆ ಸುತ್ತೂರು ಮಠದ ಶಿವಮೂರ್ತಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಆಗಮಿಸಿದ್ದರು. ಇದೇ ಮೊದಲ ಬಾರಿಗೆ ಚಿತ್ರೋತ್ಸವದಲ್ಲಿ ಹೆಸರಾಂತ ಎರಡು ಮಠದ ಸ್ವಾಮಿಗಳು ಆಗಮಿಸಿದ್ದು ವಿಶೇಷ. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

    ಈಗಾಗಲೇ ಈ ಆನಿಮೇಷನ್ ಸಿನಿಮಾ ಜಪಾನ್, ಅಮೆರಿಕಾ, ಇಟಲಿ ಸೇರಿದಂತೆ ಹಲವು ದೇಶಗಳಲ್ಲಿ ಪ್ರದರ್ಶನವಾಗಿದೆ. ಹಲವು ಬಹುಮಾನಗಳನ್ನೂ ಪಡೆದಿದೆ. ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕರ್ನಾಟಕದಲ್ಲಿ ಪ್ರದರ್ಶನವಾಗಿದ್ದು ವಿಶೇಷ. ಸಿನಿಮಾ ಪ್ರದರ್ಶನದ ನಂತರ ಮಾತನಾಡಿದ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ‘ಚಿತ್ರೋತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂಥದ್ದೊಂದು ವಿಸ್ಮಯ ನಡೆದಿದೆ. ಚಿತ್ರೋತ್ಸವಕ್ಕೆ ಈ ಮೂಲಕ ಹೊಸ ಆಯಾಮ ಸಿಕ್ಕಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಪ್ರಂಶಸೆ ವ್ಯಕ್ತ ಪಡಿಸಿದ್ದಾರೆ” ಎಂದರು. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ಪ್ರದರ್ಶನದ ವೇಳೆ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಜೈರಾಜ್, ಜಾನಪದತಜ್ಞ ಗೊ.ರು.ಚನ್ನಬಸಪ್ಪ, ಆನಿಮೇಷನ್ ಚಿತ್ರ ನಿರ್ದೇಶಕ ಅಬ್ದುಲ್ ಕರೀಂ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

  • ಸುತ್ತೂರು ಶ್ರೀಗಳಿಗೆ ಮಾತೃ ವಿಯೋಗ – ಮುಖ್ಯಮಂತ್ರಿಗಳ ಸಂತಾಪ

    ಸುತ್ತೂರು ಶ್ರೀಗಳಿಗೆ ಮಾತೃ ವಿಯೋಗ – ಮುಖ್ಯಮಂತ್ರಿಗಳ ಸಂತಾಪ

    – ಎಸ್‍ಟಿಎಸ್, ಮುರುಗೇಶ್ ನಿರಾಣಿಯಿಂದಲೂ ಸಂತಾಪ

    ಬೆಂಗಳೂರು/ಮೈಸೂರು: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಪೂರ್ವಾಶ್ರಮದ ಮಾತೃಶ್ರೀ ಶಿವನಾಗಮ್ಮ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಎಸ್.ಟಿ ಸೋಮಶೇಖರ್, ಮುರುಗೇಶ್ ನಿರಾಣಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಧ್ಯಾತ್ಮಿಕ ಸಾಧನೆಯಲ್ಲಿ ಶಿವವನಾಗಮ್ಮ ಅವರು ಗಾಢ ಪ್ರಭಾವ ಬೀರಿದ್ದರು. ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮಿಕ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಅವರು ತಮ್ಮ ಮಕ್ಕಳು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದ್ದರು. ಮತೃರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಸೋಮಶೇಖರ್ ಸಂತಾಪ:
    ಸುತ್ತೂರು ಶ್ರೀಗಳ ಪೂರ್ವಶ್ರಮದ ಮಾತೃಶ್ರೀ ಶಿವನಾಗಮ್ಮನವರು ಲಿಂಗೈಕ್ಯರಾದದ್ದು ತುಂಬಾ ನೋವಿನ ಸಂಗತಿ. ಸುಮಾರು 90 ವರ್ಷಗಳು ಸಾರ್ಥಕವಾಗಿ ಬದುಕಿ ಬಾಳಿದವರು ಅವರು. ವಕೀಲರಾಗಿದ್ದ ದಿವಂಗತ ಎಸ್.ಎಂ. ಪ್ರಭುಸ್ವಾಮಿಯವರ ಶ್ರೀಮತಿಯಾಗಿ ತಮ್ಮ 6 ಜನ ಮಕ್ಕಳಿಗೆ ಬಾಲ್ಯದಲ್ಲಿ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಟ್ಟು ಸಮಾಜಕ್ಕೆ ಆಸ್ತಿಯಾಗಿ ಬೆಳೆಸಿದರು. ಶಿವನಾಗಮ್ಮ ಅವರ ಲಿಂಗೈಕ್ಯದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ಎಸ್‍ಟಿ ಸೋಮಶೇಖರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಹೇಶ್ವರಯ್ಯ ನಿಧನ

    ಮುರುಗೇಶ್ ನಿರಾಣಿ ಸಂತಾಪ:
    ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ತಮ್ಮ ಪೂರ್ವಾಶ್ರಮದ ಮಾತೃಶೀ ಶ್ರೀಮತಿ ಶಿವನಾಗಮ್ಮ ಅವರಿಂದ ಪ್ರೇರೇಪಣೆ ಪಡೆದು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕಾರಣೀಭೂತರಾಗಿದ್ದರು ಎಂದು ಸ್ಮರಿಸಿದ್ದಾರೆ. ಸುತ್ತೂರು ಶ್ರೀಗಳು ಶಿಕ್ಷಣ, ಅನ್ನದಾಸೋಹ, ಆರೋಗ್ಯ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗೆ ಶಿವವನಾಗಮ್ಮ ಅವರ ಮಾರ್ಗದರ್ಶನ ಕಾರಣವಾಗಿತ್ತು. ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮಿಕ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಅವರು ಶ್ರೀಗಳನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದ್ದ ಅಪರೂಪದ ಮಹಾನ್ ತಾಯಿ ಎಂದು ಬಣ್ಣಿಸಿದ್ದಾರೆ. ಮತೃರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ನಿರಾಣಿ ಅವರು ತಮ್ಮ ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.

    ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸುತ್ತೂರು ಶ್ರೀಗಳ ಪೂರ್ವಾಶ್ರಮದ ತಾಯಿ ಶಿವನಾಗಮ್ಮ(90) ಇಂದು ಮುಂಜಾನೆ ಮೈಸೂರಿನ JSS ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ.

  • ಸುತ್ತೂರು ಶ್ರೀಗಳಿಂದ ಆಶೀರ್ವಾದ ಪಡೆದ ಸಚಿವ ವಿ.ಸೋಮಣ್ಣ

    ಸುತ್ತೂರು ಶ್ರೀಗಳಿಂದ ಆಶೀರ್ವಾದ ಪಡೆದ ಸಚಿವ ವಿ.ಸೋಮಣ್ಣ

    ಮೈಸೂರು: ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೊರೊನಾ 2ನೇ ಅಲೆಗೆ ಬಹಳಷ್ಟು ಜೀವಗಳು ಬಲಿಯಾಗಿವೆ . ಬಹಳಷ್ಟು ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ಕೊರೊನಾಗೆ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾಗುತ್ತಿರುವ ಮಕ್ಕಳ ಕರುಣಾಜನಕ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸಂಕಷ್ಟ ಪರಿಸ್ಥಿತಿಯನ್ನು ಅರಿತ ಸುತ್ತೂರು ಮಠ, ಅಂತಹ ಮಕ್ಕಳಿಗೆ ಜೀವನ ಪರ್ಯ0ತ ಉಚಿತ ಶಿಕ್ಷಣವನ್ನು ನೀಡುವಂತಹ ದೂರದೃಷ್ಟಿಯ ಚಿಂತನೆಯನ್ನು ಮಾಡುವದರೊಂದಿಗೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಿಮ್ಮ ಜೇಬು ತುಂಬಿದ್ರೆ ಸಾಕೆ?, ಬಡವರ ಸ್ಥಿತಿ ಏನಾಗ್ಬೇಕು?: ಸರ್ಕಾರಕ್ಕೆ ಡಿ.ಕೆ ಶಿವಕುಮಾರ್ ಪ್ರಶ್ನೆ

    ಆರೋಗ್ಯ, ಶಿಕ್ಷಣ ಮತ್ತು ಅನ್ನ ದಾಸೋಹಕ್ಕೆ ಹೆಸರಾದ ಸುತ್ತೂರು ಮಠ ಹಳೆ ಮೈಸೂರು ಭಾಗದ ಆಶಾಕಿರಣ ಎಂದು ಬಣ್ಣಿಸಿದ ಸಚಿವರು ಶ್ರೀ ಮಠವು ತನ್ನ ಅಧೀನದ ಸಮುದಾಯ ಭವನಗಳು, ಹಾಸ್ಟಲ್‍ಗಳು, ಕಲ್ಯಾಣಮಂಟಪ ಮುಂತಾದವುಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಪರಿವರ್ತಿಸಲು ಮುಂದಾಗಿರುವುದು ಶ್ರೀಗಳ ಮಾತೃಹೃದಯದ ಕಳಕಳಿಯನ್ನು ತೋರುತ್ತದೆ ಎಂದು ನುಡಿದರು.

  • ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಹುಣಸೂರು ನೂತನ ಶಾಸಕ

    ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಹುಣಸೂರು ನೂತನ ಶಾಸಕ

    ಮೈಸೂರು: ಸುತ್ತೂರು ಮಠಕ್ಕೆ ಹುಣಸೂರು ನೂತನ ಕಾಂಗ್ರೆಸ್ ಶಾಸಕ ಹೆಚ್ ಪಿ ಮಂಜುನಾಥ್ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.

    ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ತೆರಳಿ ಸುತ್ತೂರು ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು. ನಂತರ ಸುತ್ತೂರು ಶ್ರೀಗಳು ಶಾಸಕ ಮಂಜುನಾಥ್ ಅವರನ್ನು ಆತ್ಮೀಯವಾಗಿ ಗೌರವಿಸಿದರು. ಶ್ರೀಗಳ ಜೊತೆ ಶಾಸಕ ಎಚ್ ಪಿ ಮಂಜುನಾಥ್ ಕೆಲ ಕಾಲ ಚರ್ಚೆ ನಡೆಸಿದರು.

    ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿಯ ವಿಶ್ವನಾಥ್ ಅವರನ್ನು ಹೆಚ್ ಪಿ ಮಂಜುನಾಥ್ ಸೋಲಿಸಿದ್ದರು. ಬಿಜೆಪಿ ಪರವಾಗಿ 52,998 ಮತಗಳು ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 92,725 ಮತಗಳನ್ನು ಪಡೆದಿದ್ದರು. ಕಳೆದ ಬಾರಿ 8,575 ಮತಗಳ ಅಂತರದಿಂದ ಗೆದ್ದ ವಿಶ್ವನಾಥ್ ಈ ಬಾರಿ 39,727 ಮತಗಳ ಅಂತರದಿಂದ ಸೋತಿದ್ದರು.

  • ಕತ್ತಲೆಯಲ್ಲಿಯ ಜನರ ಬಾಳಲ್ಲಿ ಬೆಳಕು ನೀಡುತ್ತಿದೆ ಈ ಕಾರ್ಯಕ್ರಮ: ಸುತ್ತೂರು ಶ್ರೀಗಳು

    ಕತ್ತಲೆಯಲ್ಲಿಯ ಜನರ ಬಾಳಲ್ಲಿ ಬೆಳಕು ನೀಡುತ್ತಿದೆ ಈ ಕಾರ್ಯಕ್ರಮ: ಸುತ್ತೂರು ಶ್ರೀಗಳು

    ಬೆಂಗಳೂರು: ನಾನು ಹೋದರೆ ಜಗತ್ತು ಹೇಗಿರುತ್ತೆಂದು ಸೂರ್ಯ ಯೋಚನೆ ಮಾಡ್ತಾಯಿದ್ದನಂತೆ. ಅವಾಗ ಕೊಠಡಿಯಲ್ಲಿದ್ದ ಸಣ್ಣ ಹಣತೆ ನೀನು ಅಸ್ತ ಆಗಬಹುದು. ನಾನು ಈ ಸಣ್ಣ ಕೊಠಡಿಯನ್ನು ಬೆಳಗ್ತಿನಿ. ಆದರೆ ಇಡೀ ಜನಗತ್ತನ್ನ ನಾನು ಬೆಳಗಲಾರೆ. ನನ್ನ ಸುತ್ತಲಿನ ಜನರಿಗೆ ಬೆಳಕನ್ನ ನೀಡಬಲ್ಲೆ ಎಂಬ ಉದಾಹರಣೆಯೊಂದಿಗೆ ಪಬ್ಲಿಕ್ ಟಿವಿ ಯ ಬೆಳಕು ಕಾರ್ಯಕ್ರಮ ಕತ್ತಲೆ ಯ ಜನರಿಗೆ ಬೆಳಕನ್ನು ನೀಡುವ ಕಾರ್ಯಕ್ರಮ ನೀಡುತ್ತಿದೆ ಎಂದು ಸುತ್ತೂರು ಶ್ರೀಗಳು ಹೇಳಿದ್ರು.

    ಕಾರ್ಗಿಲ್ ಯುದ್ಧವಾದ ನಂತರ ಜನರಿಂದ ಧನ ಸಹಾಯ ಕೇಳಲು ಹೊರಟಾಗ ಬೆಳಗ್ಗೆ ಒಂದು ಆಭರಣದ ಅಂಗಡಿಗೆ ಹೋದಾಗ ಅವರು ಇವಾಗ ಅಂಗಡಿ ಓಪನ್ ಮಾಡಿದ್ದೀನಿ.. ಇನ್ನೂ ಬೋನಿಯಾಗಿಲ್ಲ. ಇವಾಗ ಕೊಡಕಾಗಲ್ಲಬ ಎಂದು ಹೇಳಿ ಕಳಿಸದರು. ಮುಂದೆ ಒಬ್ಬ ಗಾಡಿ ಎಳೆಯುವ ಕೂಲಿ ಕಾರ್ಮಿಕ ಮುಂದಾದಗ ಆತ ನಮ್ಮನ್ನ ನೋಡಿ ತನ್ನು ಜೇಬಿನಲ್ಲಿರುವ ಹಿಂದಿನ ದಿನದ ಉಳಿಸಿದ ಹಣವೆನ್ನಲ್ಲಾ ನಮಗೆ ನೀಡಿದ. ವ್ಯಕ್ತಿಗೆ ಕೊಡೋ ಮನಸ್ಸಿರಬೇಕು ಅದು ಎಷ್ಟು ಅನ್ನೋದು ಮಹತ್ವ ಅಲ್ಲ ಎಂದು ಶ್ರೀಗಳು ತಿಳಿಸಿದರು.

    ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಒಂದು ಕೆಲಸವನ್ನು ಮಾಡಲು ಅದಕ್ಕೆ ಒಗ್ಗಿಕೊಳ್ಳಬೇಕು. ವ್ಯವಹಾರಿಕವಾಗಿ ಕೆಲಸ ಮಾಡದೇ ಅದನ್ನು ಮನಸ್ಸಿನಿಂದ ಮಾಡಿದಾಗ ಮಾತ್ರ ಅದು ಯಶ್ವಸಿಯಾಗುತ್ತದೆ.

    ಕೆಲವ್ರಿಗೆ ಕೊಡೊ ಮನಸ್ಸಿರುತ್ತೆ. ಆದರೆ ಅದು ಸರಿಯಾಗಿ ಉಪಯೋಗ ಆಗಲ್ಲ ಅನ್ನೋ ನಂಬಿಕೆಯಿರುತ್ತದೆ. ಆದರೆ ಇದನ್ನೆಲ್ಲಾ ಮೀರಿ ಬೆಳಕು ಕಾರ್ಯಕ್ರಮ ಮುಂದುವರಿಯುತ್ತದೆ.