Tag: ಸುತ್ತೂರು ಜಾತ್ರೆ

  • ಮನೆ ಬಾಗಿಲಿಗೆ ಶರ್ಟ್‌, ಪ್ಯಾಂಟ್‌ ಹೋಗುತ್ತೆ.. ರೈತರಿಗೆ ಗೊಬ್ಬರ ಯಾಕೆ ಹೋಗಲ್ಲ – ಹೆಚ್‌.ಆರ್‌.ರಂಗನಾಥ್‌ ಪ್ರಶ್ನೆ

    ಮನೆ ಬಾಗಿಲಿಗೆ ಶರ್ಟ್‌, ಪ್ಯಾಂಟ್‌ ಹೋಗುತ್ತೆ.. ರೈತರಿಗೆ ಗೊಬ್ಬರ ಯಾಕೆ ಹೋಗಲ್ಲ – ಹೆಚ್‌.ಆರ್‌.ರಂಗನಾಥ್‌ ಪ್ರಶ್ನೆ

    ಮೈಸೂರು: ಮನೆ ಬಾಗಿಲಿಗೆ ಶರ್ಟ್, ಪ್ಯಾಂಟ್ ತಲುಪಿಸುವ ವ್ಯವಸ್ಥೆ ಇದ್ದಾಗ.. ರೈತರ ಬಳಕೆಯ ಉಪಕರಣಗಳು, ಗೊಬ್ಬರವನ್ನು ಸರ್ಕಾರ ಯಾಕೆ ತಲುಪಿಸಲು ಆಗಲ್ಲ ಎಂದು ʼಪಬ್ಲಿಕ್‌ ಟಿವಿʼ (Public TV) ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ (H.R.Ranganath) ಪ್ರಶ್ನಿಸಿದರು.

    ಮೈಸೂರಿನ (Mysuru) ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಸುತ್ತೂರು ಜಾತ್ರೆಯ (Suttur Jatra) ಅಂಗವಾಗಿ ಶನಿವಾರ ಸಿರಿಧಾನ್ಯಗಳ ಕುರಿತ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ರೈತರ ಮನೆ ಬಾಗಿಲಿಗೆ ಗೊಬ್ಬರ, ಕೃಷಿ ಉಪಕರಣಗಳು ತಲುಪಿಸಬೇಕಿದೆ. ಇದಕ್ಕಾಗಿ ಗ್ರಾಮೀಣ ಅಮೆಜಾನ್ (Amazon) ಅನ್ನು ಸರ್ಕಾರವೇ ಆರಂಭಿಸಬೇಕು. ಈ ಮೂಲಕ ಹೇಗೆ ತಾಲ್ಲೂಕು ಕೇಂದ್ರಗಳಿಗೆ ಅಮೆಜಾನ್‌ನಿಂದ ಜನ ಬಳಕೆಯ ಉತ್ಪನ್ನಗಳು ಅವರ ಮನೆ ಬಾಗಿಲು ತಲುಪುತ್ತದೆಯೋ, ಅದೇ ರೀತಿ ಕೃಷಿ ಉತ್ಪನ್ನಗಳು ತಲುಪಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಬಿರುಗಾಳಿ ಬೀಸುತ್ತಿದೆ: ಬೊಮ್ಮಾಯಿ

    ನಮ್ಮ ಪೂರ್ವಜರ ಆರೋಗ್ಯ ಪದ್ಧತಿ ಬಹಳ ಉತ್ಕೃಷ್ಟವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದನ್ನು ನಾವು ಕಳೆದುಕೊಂಡೆವು. ಆ ಪದ್ಧತಿ ಕಳೆದುಕೊಂಡ ಮೇಲೆ ನಮಗೆ ಅದರ ಬಗ್ಗೆ ಈಗ ಜ್ಞಾನ ಮೂಡುತ್ತಿದೆ. ಹೀಗಾಗಿ ಸಿರಿಧಾನ್ಯದ ಬಗ್ಗೆ ಎಲ್ಲರೂ ಮಾತಾಡುತ್ತಿದ್ದಾರೆ. ಸಿರಿಧಾನ್ಯದ ಕ್ರಾಂತಿ ಆಗಬೇಕು. ನಮ್ಮ ಆರೋಗ್ಯ, ಭೂಮಿ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಸಿರಿಧಾನ್ಯ ಬೇಸಾಯ ಹೆಚ್ಚಾಗಬೇಕಿದೆ ಎಂದು ತಿಳಿಸಿದರು.

    ಸರ್ಕಾರದ ಹಲವು ಯೋಜನೆಗಳು ಜನರಿಗೆ ಗೊತ್ತೇ ಆಗುವುದಿಲ್ಲ. ಸಿರಿಧಾನ್ಯ ಬೆಳೆದರೆ ಅದರ ಮಾರುಕಟ್ಟೆ ಹೇಗೆ ಎಂಬುದನ್ನು ಸರ್ಕಾರ ಮೊದಲು ತಿಳಿಸಬೇಕು. ಬರೀ ಸಿರಿಧಾನ್ಯದ ಭಾಷಣ ಮಾಡಿದರೆ ಸಾಲದು, ಸಿರಿ ಧಾನ್ಯದ ಬೆಳೆಯನ್ನು ಲಾಭಕ್ಕೆ ಮಾರುವುದು ಹೇಗೆ ಎಂಬುದನ್ನು ಮೊದಲ ತಿಳಿಸಿ. ಮೈಸೂರಿನ ಯಾವುದಾದರೂ ತಾಲೂಕನ್ನು ಸಿರಿಧಾನ್ಯದ ತಾಲೂಕಾಗಿ ಗುರುತಿಸಿ ಎಂದು ಹೇಳಿದರು. ಇದನ್ನೂ ಓದಿ: ಉಚಿತ ಭಾಗ್ಯದ ಗೊಂದಲ ಬಗೆಹರಿಸಲು ಅಖಾಡಕ್ಕೆ ಇಳಿದ್ರಾ ವಿಪಕ್ಷ ನಾಯಕ ಸಿದ್ದರಾಮಯ್ಯ

    ಸಿರಿಧಾನ್ಯ ಬೆಳೆಯಲು ರೈತರಿಗೆ ಆರ್ಥಿಕ ಮಾರ್ಗಗಳ ಧೈರ್ಯ ತುಂಬಿ. ರೈತರ ಮನೆಗೆ ಸರ್ಕಾರಗಳು ಗೊಬ್ಬರ ಕಳಿಸಬೇಕು. ಕೃಷಿ ಉಪಕರಣಗಳನ್ನು ಸರ್ಕಾರ ರೈತರ ಮನೆಗೆ ಗ್ರಾಮೀಣ ಅಮೆಜಾನ್ ಸೃಷ್ಟಿಯಾಗಬೇಕು. ಗ್ರಾಮೀಣ ಅಮೆಜಾನ್ ಸೃಷ್ಟಿಯಾದರೆ, ಸಾವಿರಾರು ಯುವಕರಿಗೆ ಕೆಲಸ ಸಿಗುತ್ತದೆ. ತಾಲೂಕು ಮಟ್ಟಕ್ಕೆ ಶರ್ಟ್, ಪ್ಯಾಂಟ್ ತಲುಪಿಸುವ ವ್ಯವಸ್ಥೆ ಇದ್ದಾಗ ರೈತರ ಬಳಕೆಯ ಉಪಕರಣಗಳು, ಗೊಬ್ಬರವನ್ನು ಸರ್ಕಾರ ಯಾಕೆ ತಲುಪಿಸಲು ಆಗಲ್ಲ ಎಂದು ಪ್ರಶ್ನಿಸಿದರು.

    ಗ್ರಾಮೀಣ ಭಾರತ ಈಗ ಬಹಳ ವೇಗವಾಗಿ ನಗರ ಭಾರತವಾಗುತ್ತಿದೆ. ನಗರ ಭಾರತವಾಗುತ್ತಿರುವುದು ಕೃಷಿ ಚಟುವಟಿಕೆ ಕಡಿಮೆ ಆಗುತ್ತಿರುವುದರ ಸೂಚಕ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಮಿತ್ ಶಾ ಮತ್ತೊಂದು ಟೂರ್ – ಬೆಂಗಳೂರು, ಮಂಡ್ಯ ಗೇಮ್ ಪ್ಲ್ಯಾನ್?

    ವಿಚಾರ ಸಂಕಿರಣದಲ್ಲಿ ಪ್ರಗತಿಪರ ಕೃಷಿಯಲ್ಲಿ ಸಾಧನೆ ಮಾಡಿರುವ ರೈತರನ್ನು ಸನ್ಮಾನಿಸಲಾಯಿತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ವಿಚಾರ ಸಂಕಿರಣದ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆರ್‌ಎಸ್‌ಎಸ್‌ನ ಮುಕಂದ್ ಅವರು ಸೇರಿದಂತೆ ಹಲವು ಗಣ್ಯರು, ಸ್ವಾಮೀಜಿಗಳು ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸುತ್ತೂರು ಜಾತ್ರೆಯಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಅವಾಂತರ- ಛೀಮಾರಿ ಹಾಕಿದ್ರು ಭಕ್ತರು

    ಸುತ್ತೂರು ಜಾತ್ರೆಯಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಅವಾಂತರ- ಛೀಮಾರಿ ಹಾಕಿದ್ರು ಭಕ್ತರು

    ಮೈಸೂರು: ಜಾತ್ರೆ ನಡೆಯುತ್ತಿದ್ದ ವೇಳೆ ಪೊಲೀಸ್ ಪೇದೆಯೋರ್ವ ಕುಡಿದ ಮತ್ತಿನಲ್ಲಿ ದೌಲತ್ತು ತೋರಿಸಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಘಟನೆ ಜಿಲ್ಲೆಯ ಸುತ್ತೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಕೌವಲಂದೆ ಪೊಲೀಸ್ ಠಾಣೆಯ ಪೇದೆ ಮಹದೇವಸ್ವಾಮಿ ಇಂತಹ ದುರ್ವತನೆ ತೋರಿದ್ದಾರೆ. ಜಾತ್ರೆಯಲ್ಲಿ ಕುಡಿದು ಕರ್ತವ್ಯಕ್ಕೆ ಬಂದ ಪೇದೆ ಮಹದೇವಸ್ವಾಮಿ ಕ್ಯಾಂಟೀನ್‍ನಲ್ಲಿ ಊಟ ಕೇಳಿದ್ದಾರೆ. ಈ ವೇಳೆ ಊಟ ಖಾಲಿಯಾಗಿದೆ ಟೀ ಇದೆ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಈ ಉತ್ತರಕ್ಕೆ ಕೋಪಗೊಂಡ ಪೇದೆ ಹೋಟೆಲ್‍ನಲ್ಲಿದ್ದ ಟೀ ಫ್ಲಾಸ್ಕ್ ಒಡೆದು ರೋಷಾವೇಷ ಪ್ರದರ್ಶಿಸಿದ್ದಾರೆ. ದೇವರ ಜಾತ್ರೆಗೆ ಬಂದ ಪೊಲೀಸರೇ ಈ ರೀತಿ ಬೇಜವಾಬ್ದಾರಿ ವರ್ತನೆ ಮೆರೆದರೆ ಹೇಗೆ ಎಂದು ಸ್ಥಳೀಯರು ಪೇದೆ ವಿರುದ್ಧ ಗರಂ ಆಗಿದ್ದಾರೆ.

    ನಂತರ ಕಾರಿನಲ್ಲಿ ಕುಳಿತ ಮಹದೇವಸ್ವಾಮಿಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ಪೇದೆಯ ಕಾರು ಅಡ್ಡಗಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊನೆಗು ಕೈಮುಗಿದು ಕ್ಷಮೆಯಾಚಿಸಿದ ಬಳಿಕ ಪೇದೆ ಮಹದೇವಸ್ವಾಮಿಯನ್ನು ಜನರು ಅಲ್ಲಿಂದ ಹೋಗಲು ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಾಜಿ ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಟ ದರ್ಶನ್

    ಮಾಜಿ ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಟ ದರ್ಶನ್

    ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮದ ವೇದಿಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದ ದರ್ಶನ್ ಆಶೀರ್ವಾದ ಪಡೆದು ಸರಳತೆ ಮೆರೆದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ನಾನು ಕೂಡ ಜೆಎಸ್‍ಎಸ್ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದು, ಆದರೆ 6 ತಿಂಗಳು ಮಾತ್ರ ಇಲ್ಲಿ ಓದಿದೆ. ಅಲ್ಲದೇ ನಮ್ಮ ತಂದೆ ಅವರ ಅನಾರೋಗ್ಯದ ವೇಳೆ ಜೆಎಸ್‍ಎಸ್ ಆಸ್ಪತ್ರೆ ನನಗೆ ತುಂಬಾ ಸಹಾಯ ಮಾಡಿದೆ. ಅಲ್ಲದೇ ಸುತ್ತೂರು ಮಠ ಕೂಡ ಆತ್ಮೀಯವಾಯಿತು ಎಂದು ಹಿಂದಿನ ನೆನಪುಗಳನ್ನು ಸ್ಮರಿಸಿಕೊಂಡರು.

    ಶಿಕ್ಷಣ ಮಹತ್ವದ ಬಗ್ಗೆ ಮಾತನಾಡಿದ ದರ್ಶನ್ ಅವರು, ನೀವು ಪಡೆಯುವ ಪದವಿ ಒಂದು ಕೋಟಿಗೆ ಸಮನಾಗಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಿಕ್ಷಣ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಶಿಕ್ಷಣ ಇಲ್ಲದಿದ್ದರೆ ಎಂತಹ ಸಮಸ್ಯೆಗಳು ಎದುರಾಗುತ್ತದೆ ಎಂಬುವುದು ನನಗೆ ಚೆನ್ನಾಗಿ ಗೊತ್ತಿದೆ. ಯಾವುದೇ ಕಾರಣಕ್ಕೂ ಎರಡು ದೋಣಿ ಮೇಲೆ ಕಾಲಿಡಬೇಡಿ ಎಂದು ಸಲಹೆ ನೀಡಿದರು.

    ಸುತ್ತೂರು ಜಾತ್ರೆಯಲ್ಲಿ ನಾನು ಕೂಡ ಬಹಳಷ್ಟು ಬಾರಿ ಆರಾಮಾಗಿ ಓಡಾಡುತ್ತಿದ್ದೆ, ಆದರೆ ಈಗ ಅದು ಸಾಧ್ಯವಿಲ್ಲ. ಇಲ್ಲಿ ನೆರೆದಿರುವ ದನಗಳ ಜಾತ್ರೆ ನೋಡುವುದು ನನಗೆ ತುಂಬಾ ಇಷ್ಟ. ಸೆಲೆಬ್ರಿಟಿ ಆಗಿರುವ ಕಾರಣ ನೀವು ನನ್ನನ್ನು ಓಡಾಡಲು ಬಿಡೋಲ್ಲ. ಸಣ್ಣ ಪಾತ್ರಗಳನ್ನು ಮಾಡಿದ್ದ ನನ್ನನ್ನು ನೀವು ಇಲ್ಲಿಗೆ ತಂದು ನಿಲ್ಲಿಸಿದ್ದೀರಾ. ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ ಎಂದರು. ಇತ್ತ ನಟ ದರ್ಶನ್ ಆಗಮಿಸುತ್ತಿದಂತೆ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಮತ್ತಷ್ಟು ಸಂತಸಗೊಂಡು ಸ್ವಾಗತಿಸಿದರು.

    ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಆತ್ಮೀಯರು: ವಿಧಾನಸಭಾ ಚುನಾವಣೆಯ ಬಳಿಕ ಒಮ್ಮೆಯೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್ ಸಿ ಮಹದೇವಪ್ಪ ಅವರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. ಈ ಹಿಂದೆ ಹಲವು ಬಾರಿ ನಮ್ಮ ಮಧ್ಯೆ ಯಾವುದೇ ಬಿನ್ನಭಿಪ್ರಾಯ ಇಲ್ಲ ಎಂದು ಹೇಳಿದ್ದ ನಾಯಕರು ಒಮ್ಮೆಯೂ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇಂದು ಸುತ್ತೂರು ವೇದಿಕೆಯಲ್ಲಿ ಹಲವು ದಿನಗಳ ನಂತರ ಭಾಗವಹಿಸಿದ್ದರು. ಸುತ್ತೂರು ಶ್ರೀಗಳ ಅಕ್ಕಪಕ್ಕದಲ್ಲಿ ಕುಳಿತು ಇಬ್ಬರು ಪರಸ್ಪರ ಮಾತುಕತೆ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv