Tag: ಸುತ್ತಿಗೆ

  • ಸುತ್ತಿಗೆಯಿಂದ ಹೊಡೆದು ತಂದೆಯ ಕೊಲೆ – ಶವವನ್ನು ಪೀಸ್ ಪೀಸ್ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿದ ಪಾಪಿ ಮಗ

    ಸುತ್ತಿಗೆಯಿಂದ ಹೊಡೆದು ತಂದೆಯ ಕೊಲೆ – ಶವವನ್ನು ಪೀಸ್ ಪೀಸ್ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿದ ಪಾಪಿ ಮಗ

    ಲಕ್ನೋ: ಆಸ್ತಿ ವಿವಾದಕ್ಕಾಗಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಸುತ್ತಿಗೆಯಿಂದ (Hammer) ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ (Uttar Pradesh) ಗೋರಖ್‍ಪುರದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಸೂರಜ್ ಕುಂಡ್ ಕಾಲೋನಯಲ್ಲಿ ಈ ಘಟನೆ ನಡೆದಿದೆ. ಮುರುಳಿಧರ್ ಗುಪ್ತ (62) ಮೃತ ವ್ಯಕ್ತಿ ಹಾಗೂ ಆರೋಪಿಯನ್ನು ಸಂತೋಷ್ ಕುಮಾರ್ ಗುಪ್ತಾ ಅಲಿಯಾಸ್ ಪ್ರಿನ್ಸ್ (30) ಎಂದು ಗುರುತಿಸಲಾಗಿದೆ.

    ಆಸ್ತಿ ಕುರಿತು ತಂದೆ ಹಾಗೂ ಮಗನ ನಡುವೆ ಜಗಳ ನಡೆದಿದೆ. ಈ ವೇಳೆ ಮುರುಳಿಧರ್ ಒಬ್ಬನೇ ಇದ್ದುದ್ದನ್ನು ನೋಡಿದ ಸಂತೋಷ್ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮುರುಳಿಧರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅದಾದ ಬಳಿಕ ಮುರುಳಿಧರ್‌ನ ದೇಹವನ್ನು ವಿಲೇವಾರಿ ಮಾಡಲು ದೇಹವನ್ನು ತುಂಡಾಗಿ ಕತ್ತರಿಸಿದ್ದಾನೆ. ನಂತರ ಸಂತೋಷ್ ಸಹೋದರನ ಕೊಠಡಿಯಿಂದ ಸೂಟ್‍ಕೇಸ್ (Suitcase) ಅನ್ನು ತಂದು ಶವದ ತುಂಡುಗಳನ್ನು ಅದರಲ್ಲಿ ಹಾಕಿದ್ದಾನೆ. ಸೂಟ್‍ಕೇಸ್‍ನ್ನು ಮನೆಯ ಹಿಂದಿನ ರಸ್ತೆಯಲ್ಲಿ ಬಚ್ಚಿಟ್ಟಿದ್ದಾನೆ.

    ಘಟನೆಗೆ ಸಂಬಂಧಿಸಿ ಆರೋಪಿ ಸಂತೋಷ್‍ನ ಸಹೋದರ ಪ್ರಶಾಂತ್ ಗುಪ್ತಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಮಟಳ್ಳಿಗೆ ಗೋಕಾಕ್ ಕ್ಷೇತ್ರ ಬಿಟ್ಟುಕೊಡಲಿ- ರಮೇಶ್ ಜಾರಕಿಹೊಳಿಗೆ ಸವದಿ ಪುತ್ರ ಸವಾಲ್

    ಆರೋಪಿಯ ಸಹೋದರನ ಮಾಹಿತಿಯ ಮೇರೆಗೆ, ಪೊಲೀಸರು ದೇಹದ ಭಾಗಗಳನ್ನು ವಶಪಡಿಸಿಕೊಂಡರು ಮತ್ತು ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ಇದನ್ನೂ ಓದಿ: ಮೋದಿ ಸ್ವಾಗತ ವೇಳೆ ಫೈಟರ್ ರವಿ- ಪ್ರಧಾನಿ ಹುದ್ದೆಗೆ ಕಳಂಕವೆಂದು ಕುಟುಕಿದ ಕಾಂಗ್ರೆಸ್

  • 30 ವರ್ಷದ ಹಳೆ ದ್ವೇಷ – ವೃದ್ಧದಂಪತಿ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಮಾಜಿ ಸೈನಿಕ

    30 ವರ್ಷದ ಹಳೆ ದ್ವೇಷ – ವೃದ್ಧದಂಪತಿ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಮಾಜಿ ಸೈನಿಕ

    ತಿರುವನಂತಪುರಂ: 30 ವರ್ಷದ ಹಳೆ ವೈಷಮ್ಯ ಹಿನ್ನೆಲೆ ಮಾಜಿ ಸೈನಿಕನೊಬ್ಬ ವೃದ್ಧ ದಂಪತಿಯ ತಲೆಗೆ ಸುತ್ತಿಗೆಯಿಂದ ಹಲ್ಲೆ ನಡೆಸಿ ನಂತರ ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿ (Thiruvananthapuram) ನಡೆದಿದೆ.

    ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಭಾಕರ ಕುರುಪ್ ಮತ್ತು ಅವರ ಪತ್ನಿ ವಿಮಲಾ ಕುಮಾರಿ ಮೃತ ದುರ್ದೈವಿಗಲಾಗಿದ್ದು, ಆರೋಪಿಯನ್ನು ಶಶಿಧರನ್ ನಾಯರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಶೇ.60 ರಷ್ಟು ಸುಟ್ಟ ಗಾಯಗಳಾಗಿದ್ದರಿಂದ ದಂಪತಿಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೀಗ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಘಟನೆ ವೇಳೆ ವೃದ್ಧ ದಂಪತಿಯಷ್ಟೇ ಮನೆಯಲ್ಲಿದ್ದರು ಎಂಬ ವಿಚಾರ ತಿಳಿದುಬಂದಿದೆ.

    ಘಟನೆಗೆ ಕಾರಣವೇನು?
    ಶಶಿಧರನ್ ನಾಯರ್ ಅವರ ಮಗ ಸುಮಾರು ಮೂವತ್ತು ವರ್ಷಗಳ ಹಿಂದೆ ಬಹ್ರೇನ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಭಾಕರ ಕುರುಪ್ ಅವರು ಶಶಿಧರ್ ನಾಯರ್ ಅವರ ಮಗನಿಗೆ ವಿದೇಶಕ್ಕೆ ಹೋಗಲು ಸಹಾಯ ಮಾಡಿದ್ದರು. ಆದರೆ ಅವರು ಬಯಸಿದ ಕೆಲಸ ಸಿಗಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಅವರು ನಂತರ ಆತ್ಮಹತ್ಯೆಗೆ ಶರಣಾದರು. ತಮ್ಮ ಮಗ ಸಾಯಲು ಪ್ರಭಾಕರ ಕುರುಪ್ ಕೂಡ ಕಾರಣ ಎಂದು ಶಶಿಧರನ್ ನಾಯರ್ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ : ನಮ್ಮ ಇಲಾಖೆಯಲ್ಲಿರುವ ಕಳ್ಳ ಅಧಿಕಾರಿಗಳಿಗೆ ನಾನೇ ಬಾಸ್‌ ಎಂದಿದ್ದ ಕೃಷಿ ಸಚಿವ ರಾಜೀನಾಮೆ

    ಹಲವು ವರ್ಷಗಳ ಕಾಲ ಈ ಪ್ರಕರಣವನ್ನು ಎಳೆದಾಡಿದ್ದ ನ್ಯಾಯಾಲಯ ಶುಕ್ರವಾರ ಪ್ರಭಾಕರ್ ಕುರುಪ್ ಅವರನ್ನು ನಿರಪರಾಧಿ ಎಂದು ಘೋಷಿಸಿದೆ. ಇದರಿಂದ ಆಕ್ರೋಶಗೊಂಡ ಶಶಿಧರ್ ನಾಯರ್ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ಶನಿವಾರ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಯಿತು. ಈ ವೇಳೆ ವಿಮಲಾ ಕುಮಾರಿ ಅವರು ಪ್ರಭಾಕರ ಕುರುಪ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಶಶಿಧರ್ ನಾಯರ್ ಸುತ್ತಿಗೆಯಿಂದ ಇಬ್ಬರ ತಲೆಗೆ ಹೊಡೆದಿದ್ದಾನೆ. ಬಳಿಕ ದಂಪತಿ ಮೇಲೆ ಬಾಟಲಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

    ಈ ವೇಳೆ ಮನೆಯಿಂದ ಬೆಂಕಿ ಹೊತ್ತಿ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ದಂಪತಿಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜೊತೆಗೆ ಘಟನೆ ವೇಳೆ ಶಶಿಧರನ್‍ಗೂ ಸುಟ್ಟಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಮೃತ ಸರೋವರ ಯೋಜನೆಯಡಿ ಕೆರೆ ಅಭಿವೃದ್ಧಿ- ನಿರ್ಮಾಣಗೊಂಡ 45 ದಿನಕ್ಕೆ ತಡೆಗೋಡೆ ಕುಸಿತ

    Live Tv
    [brid partner=56869869 player=32851 video=960834 autoplay=true]

  • ಅನೈತಿಕ ಸಂಬಂಧ ಶಂಕೆ – ತಲೆಗೆ ಸುತ್ತಿಗೆಯಿಂದ ಹೊಡೆದು ವಿಧವೆಯ ಹತ್ಯೆ

    ಅನೈತಿಕ ಸಂಬಂಧ ಶಂಕೆ – ತಲೆಗೆ ಸುತ್ತಿಗೆಯಿಂದ ಹೊಡೆದು ವಿಧವೆಯ ಹತ್ಯೆ

    ಲಕ್ನೋ: ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ವಿಧವೆಯಾಗಿದ್ದ ಅತ್ತಿಗೆಯ ತಲೆಗೆ ವ್ಯಕ್ತಿಯೋರ್ವ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ.

    ಟ್ವಿಂಕಲ್(25) ಮೃತ ಮಹಿಳೆಯಾಗಿದ್ದು, ಆರೋಪಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಟ್ವಿಂಕಲ್‍ಗೆ ಮೂವರು ಮಕ್ಕಳಿದ್ದಾರೆ. ಟ್ವಿಂಕಲ್, ಮೀರತ್ ಜಿಲ್ಲೆಯ ಜಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾನ್ಪುರ್ ಗ್ರಾಮದ ಗೌರವ್ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಆದರೆ ಅವರ ಪತಿ 2021ರ ಟ್ರಕ್ ಅಪಘಾತದಲ್ಲಿ ನಿಧನರಾದರು. ಇದನ್ನೂ ಓದಿ: ನಾನು ಇನ್ನೆರಡು ತಿಂಗಳು ಇರೋದಿಲ್ಲ, ನಾನು ಎಲ್ಲದಕ್ಕೂ ರೆಡಿ ಇದ್ದೀನಿ: ಶಂಕಿತ ಉಗ್ರ

    ಅತ್ತಿಗೆ ಪದೇ, ಪದೇ ಫೋನ್‍ನಲ್ಲಿ ಮಾತನಾಡುತ್ತಿರುವುದನ್ನು ಕಂಡು ಆರೋಪಿ ಅಭಿಷೇಕ್‍ಗೆ ಆಕೆಯ ನಡವಳಿಕೆಯ ಮೇಲೆ ಅನುಮಾನ ಮೂಡಿತ್ತು. ಭಾನುವಾರ ರಾತ್ರಿ ಮೊದಲ ಮಹಡಿಯಲ್ಲಿರುವ ಆಕೆಯ ಕೋಣೆಯನ್ನು ತಲುಪಿದ ಅಭಿಷೇಕ್ ಮನಬಂದಂತೆ ಸುತ್ತಿಗೆಯಿಂದ ಟ್ವಿಂಕಲ್ ತಲೆಗೆ ಹೊಡೆದು ದೇಹವನ್ನು ಸೀಳಿಹಾಕಿದ್ದಾನೆ ಎಂದು ಸರ್ಕಲ್ ಆಫೀಸರ್ ರಜನೀಶ್ ಉಪಾಧ್ಯಾಯ ಹೇಳಿದ್ದಾರೆ.

    ಇದೀಗ ಅಭಿಷೇಕ್ ಅನ್ನು ಬಂಧಿಸಲಾಗಿದ್ದು, ಕೃತ್ಯವೆಸಗಲು ಆರೋಪಿ ಬಳಸಿದ್ದ ಸುತ್ತಿಗೆಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಟ್ವಿಂಕಲ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಸದ್ದಿಗೆ ಗಾಬರಿಯಿಂದ ಜನರ ಮೇಲೆ ಓಡಿದ ಕುದುರೆ – 6 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಸುತ್ತಿಗೆಯಿಂದ ಹೊಡೆದು ನೌಕಾ ಪಡೆ ಸಿಬ್ಬಂದಿಯ ಕೊಲೆಗೈದ ಪತ್ನಿ

    ಸುತ್ತಿಗೆಯಿಂದ ಹೊಡೆದು ನೌಕಾ ಪಡೆ ಸಿಬ್ಬಂದಿಯ ಕೊಲೆಗೈದ ಪತ್ನಿ

    ಪಣಜಿ: ಪ್ರತಿನಿತ್ಯ ಮನೆಗೆ ಕುಡಿದು ಬಂದು ದೌರ್ಜನ್ಯ ಎಸಗುತ್ತಿದ್ದ ಪತಿಯನ್ನು ಸುತ್ತಿಗೆಯಿಂದ ಹೊಡೆದು ಪತ್ನಿ ಕೊಲೆ ಮಾಡಿದ ಘಟನೆ ಗೋವಾದಲ್ಲಿ ನಡೆದಿದೆ.

    ಐಎನ್‍ಎಸ್ ಹನ್ಸಾ ದಲ್ಲಿ ಕೆಲಸ ಮಾಡುತ್ತಿದ್ದ ಕೌಶಲೇಂದ್ರ ಸಿಂಗ್ ಮೃತ ದುದೈರ್ವಿ. ಕೊಲೆಗೈದ ಪತ್ನಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕೌಶಲೇಂದ್ರ ಅವರು ನಿತ್ಯ ಮದ್ಯದ ಅಮಲಿನಲ್ಲಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರು. ಅಲ್ಲದೆ ಪತ್ನಿಗೆ ಹೊಡೆದು ಬಡೆದು ಕಿರುಕುಳ ನೀಡುತ್ತಿದ್ದರು. ಹೀಗಾಗಿ ಕಿರುಕುಳದಿಂದ ಬೇಸತ್ತ ಮಹಿಳೆ ಪತಿಯನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿಟ್ಟಿನಲ್ಲಿದ್ದ ಪತ್ನಿ ಶನಿವಾರ ಕೌಶಲೇಂದ್ರ ಮಲಗಿದ್ದಾಗ ಅಡುಗೆ ಮನೆಯಲ್ಲಿದ್ದ ಸುತ್ತಿಗೆ ತಂದು ಹಲ್ಲೆ ಮಾಡಿದ್ದಾಳೆ. ಪರಿಣಾಮ ಮದ್ಯದ ಅಮಲಿನಲ್ಲಿದ್ದ ಕೌಶಲೇಂದ್ರ ಹಲ್ಲೆ ನಡೆಸಿದರೂ ಏನೂ ಪ್ರತಿಕ್ರಿಯೆ ನೀಡಲಿಲ್ಲ. ಆಗ ಭಯಗೊಂಡ ಪತ್ನಿ ನೆರೆಹೊರೆಯವರ ಸಹಾಯದಿಂದ ನೌಕಾಪಡೆಯ ಆಸ್ಪತ್ರೆಗೆ ಪತಿಯನ್ನು ಕರೆದುಕೊಂಡು ಹೋಗಿದ್ದಾಳೆ. ಅದರಂತೆ ಪತಿ ಹಣೆಯ ಭಾಗಕ್ಕೆ 12 ರಿಂದ 14 ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವ ಹೆಚ್ಚಾಗಿ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.

  • 8 ವರ್ಷದ ಪ್ರೀತಿಯನ್ನ ಕೊನೆಮಾಡಿದ್ದಕ್ಕೆ ಸುತ್ತಿಗೆಯಿಂದ ಪ್ರೇಯಸಿಯ ತಲೆಗೆ ಹೊಡೆದ

    8 ವರ್ಷದ ಪ್ರೀತಿಯನ್ನ ಕೊನೆಮಾಡಿದ್ದಕ್ಕೆ ಸುತ್ತಿಗೆಯಿಂದ ಪ್ರೇಯಸಿಯ ತಲೆಗೆ ಹೊಡೆದ

    ನವದೆಹಲಿ: ಪ್ರೀತಿಯ ಸಂಬಂಧವನ್ನು ಕೊನೆಮಾಡಿದ್ದಕ್ಕೆ 24 ವರ್ಷದ ಪ್ರಿಯತಮನೊಬ್ಬ ಸುತ್ತಿಗೆಯಿಂದ ಪ್ರೇಯಸಿಯ ತಲೆಗೆ ಹೊಡೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಆರೋಪಿಯನ್ನು ನಿಶಾಂತ್ ಸೈನಿ ಎಂದು ಗುರುತಿಸಲಾಗಿದ್ದು, ಈತ ದೆಹಲಿಯ ಸರೋಜಿನಿ ನಗರದಲ್ಲಿ ವಾಸಿಸುತ್ತಿದ್ದನು. ಈಗ ಆರೋಪಿ ಸೈನಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

    ಸೈನಿ ಮತ್ತು ಯುವತಿ ಕಳೆದ ಎಂಟು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಪ್ರೇಮಿಗಳಿಬ್ಬರು ಹೋಟೆಲ್ ನಲ್ಲಿ ಭೇಟಿಯಾಗಿದ್ದಾರೆ. ಆಗ ಪ್ರೇಯಸಿ ನೀನು ಯಾವುದೇ ಕೆಲಸವನ್ನು ಹೊಂದಿಲ್ಲ. ಹಾಗಾಗಿ ನಮ್ಮಿಬ್ಬರ ಸಂಬಂಧವನ್ನು ಇಲ್ಲಿಗೆ ಮುಗಿಸಿ, ಇಬ್ಬರು ದೂರವಾಗೋಣ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಸೈನಿ ಸುತ್ತಿಗೆಯಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಡಿಸಿಪಿ ದೇವೇಂದ್ರ ಆರ್ಯ ಅವರು ಹೇಳಿದ್ದಾರೆ.

    ಆರೋಪಿ ಸೈನಿ ಮುಂಬೈನಲ್ಲಿ ಟಿವಿ ಧಾರಾವಾಹಿಗೆ ಆಡಿಶನ್ ಕೊಟ್ಟಿದ್ದೇನೆ ಎಂದು ಸುಳ್ಳು ಹೇಳಿದ್ದ. ಆದರೆ ಅವನಿಗೆ ಯಾವುದೇ ಕೆಲಸವಿಲ್ಲ. ಹೀಗಾಗಿ ನಾನು ಅವನಿಂದ ದೂರವಾಗಲು ನಿರ್ಧರಿಸಿದ್ದೆ. ಆದರೆ ಇದರಿಂದ ಕೋಪಗೊಂಡ ಸೈನಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಅಂತ ಹಲ್ಲೆಗೊಳಗಾದ ಯುವತಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

    ತಕ್ಷಣ ಯುವತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಇತ್ತ ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಸೈನಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗನಿಂದಾಗಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಂದು ಪತಿ ಎಸ್ಕೇಪ್!

    ಮಗನಿಂದಾಗಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಂದು ಪತಿ ಎಸ್ಕೇಪ್!

    ನವದೆಹಲಿ: ಮಗನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ತಾರಕಕ್ಕೇರಿ ಪತಿ ತನ್ನ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಘಟನೆ ನವದೆಹಲಿಯಲ್ಲಿ ನಡೆದಿದೆ.

    28 ವರ್ಷದ ದಿವ್ಯ ತನ್ನ ಪತಿ ಅಫ್ತಬ್ ಅಹ್ಮದ್(32) ನಿಂದ ಕೊಲೆಗೀಡಾಗಿದ್ದಾಳೆ. ಪತಿಗೆ ಅಕ್ರಮ ಸಂಬಂಧ ಇರುವ ಶಂಕೆಯೇ ಈಕೆಯ ಕೊಲೆಗೆ ಕಾರಣವಾಗಿದೆ.

    ಘಟನೆ ವಿವರ:
    ದಿವ್ಯಾ ಹಾಗೂ ಅಫ್ತಬ್ ಮನೆಯ ವಿರೋಧದ ನಡುವೆಯೇ ಮದುವೆಯಾಗಿದ್ದು, ಬಳಿಕ ದೆಹಲಿಯ ನಜಾಫ್ ಗ್ರಹ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲ ದಿನಗಳವರೆಗೆ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಕ್ಲುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಮಾತುಕತೆಗಳು ನಡೆಯುತ್ತಿತ್ತು. ತದನಂತರ ದಿವ್ಯ, ಪತಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾಳೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಿನಕಳೆದಂತೆ ಇಬ್ಬರ ಮಧ್ಯೆ ಮೈನಸ್ಸು ಮೂಡಿತ್ತು. ಹೀಗಾಗಿ ಬುಧವಾರ ರಾತ್ರಿ ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

    ಪ್ರಕರಣ ಸಂಬಂಧ ಆರೋಪಿ ಪತಿ ಅಫ್ತಬ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದು, ಅಫ್ತಬ್ ಪತ್ತೆಗೆ ಬಲೆ ಬೀಸಲಾಗಿದೆ. ಈ ಘಟನೆ ನಜಾಫ್ ಗ್ರಹ್ ನ ರಣಜಿ ಎನ್ಕ್ಲೇವ್ ಎಂಬ ಪ್ರದೇಶದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಆರೋಪಿ ಅಫ್ತಬ್ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದನು.

    ದಂಪತಿಗೆ 3 ವರ್ಷದ ಮಗನಿದ್ದಾನೆ. ಅಫ್ತಬ್ ಗೆ ಅಕ್ರಮ ಸಂಬಂಧವಿದೆಯೆಂದು ದಿವ್ಯ ಸಂಶಯ ವ್ಯಕ್ತಪಡಿಸಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತಿತ್ತು. ಕಳೆದ ಎರಡು ವಾರಗಳ ಹಿಂದೆ ತನ್ನ ಮಗನನ್ನ ಅಫ್ತಬ್ ತಂದೆ-ತಾಯಿ ಮನೆಯಲ್ಲಿ ಬಿಟ್ಟು ಮಂಗಳವಾರವಷ್ಟೇ ವಾಪಸ್ಸಾಗಿದ್ದನು. ಆದ್ರೆ ಮಗನನ್ನು ತನ್ನ ಹೆತ್ತವರ ಮನೆಯಲ್ಲಿ ಬಿಟ್ಟು ಬಂದಿರೋ ವಿಚಾರವನ್ನು ಅಫ್ತಬ್, ಪತ್ನಿ ದಿವ್ಯಳ ಬಳಿ ಹೇಳಿರಲಿಲ್ಲ ಅಂತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಅಫ್ತಬ್ ಮಂಗಳವಾರ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಜೊತೆ ಮಗ ಇಲ್ಲದಿರುವುದನ್ನು ಕಂಡು ರೊಚ್ಚಿಗೆದ್ದ ದಿವ್ಯ, ಪತಿ ಜೊತೆ ಖ್ಯಾತೆ ತೆಗೆದಿದ್ದಾಳೆ. ಅಲ್ಲದೇ ನನ್ನ ಮಗನನ್ನು ಮಾರಾಟ ಮಾಡಿದ್ದಿ ಅಂತ ಹೇಳಿ ತಗಾದೆ ತೆಗೆದಿದ್ದಾಳೆ. ಪತ್ನಿಯ ಗಲಾಟೆಯಿಂದ ಬೇಸತ್ತ ಅಫ್ತಬ್, ಪಕ್ಕದಲ್ಲೇ ಇದ್ದ ಸುತ್ತಿಗೆಯನ್ನು ತೆಗೆದುಕೊಂಡು ದಿವ್ಯ ತಲೆಗೆ ಹೊಡೆದಿದ್ದಾನೆ. ಅಲ್ಲದೇ ಚಾಕುವಿನಿಂದ ಕುತ್ತಿಗೆಯನ್ನು ಸೀಳಿದ್ದಾನೆ. ಪರಿಣಾಮ ದಿವ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬಳಿಕ ಆತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

    ಬುಧವಾರ ಸಂಜೆಯಾಗುತ್ತಿದ್ದಂತೆಯೇ ದಿವ್ಯ ಕಾಣದಿದ್ದರಿಂದ ಸಂಶಯಗೊಂಡ ನೆರೆಮನೆಯವರು ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆ ಬಾಗಿಲು ಒಡೆದು ನೋಡಿದಾಗ ದಿವ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಈ ಮೂಲಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದು ತಾನೂ ಆತ್ಮಹತ್ಯೆ ಮಾಡ್ಕೊಂಡ!

    ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದು ತಾನೂ ಆತ್ಮಹತ್ಯೆ ಮಾಡ್ಕೊಂಡ!

    ಮಂಡ್ಯ: ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದು, ಬಂಧನ ಭೀತಿಯಿಂದ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಸಪ್ಪ ಕಳೆದ ರಾತ್ರಿ ತನ್ನ ಪತ್ನಿ ಬಸಮಣಿ ಎಂಬಾಕೆಗೆ ಸುತ್ತಿಗೆಯಿಂದ ಹೊಡೆದು ತಲೆ ಮರೆಸಿಕೊಂಡಿದ್ದನು. ತಕ್ಷಣ ಬಸಮಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಸಮಣಿ ಸಾವನ್ನಪ್ಪಿದ್ರು.

    ಪತ್ನಿ ಸಾವಿನ ವಿಷಯ ತಿಳಿದು, ಗಂಡ ಬಸಪ್ಪ ಗ್ರಾಮದ ಹೊರ ವಲಯದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಪದೇ ಪದೇ ನಡೆಯುತ್ತಿದ್ದ ಗಂಡ ಹೆಂಡತಿಯ ಜಗಳ ರಾತ್ರಿ ಕೂಡ ಮುಂದುವರಿದಿದೆ. ಇದ್ರಿಂದ ಕುಪಿತಗೊಂಡ ಗಂಡ ಬಸಪ್ಪ, ಹೆಂಡತಿ ಮಲಗಿದ ನಂತರ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಚಿಕ್ಕಬಳ್ಳಾಪುರದಲ್ಲಿಯೂ ಇಂತದ್ದೇ ಘಟನೆ ನಡೆದಿತ್ತು. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊಮ್ಮಸಂದ್ರ ಗ್ರಾಮದಲ್ಲಿ ತನ್ನ ಕೈಯಿಂದಲೇ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಪತ್ನಿಯನ್ನು ಕಂಡು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಮ್ಮಸಂದ್ರ ಗ್ರಾಮದ ನಿವಾಸಿಗಳಾದ ದೇವರಾಜ್ (28) ಮತ್ತ ಶ್ಯಾಮಲಾ (22) ಸಾವನ್ನಪ್ಪಿದ ದಂಪತಿ. ಸೋಮವಾರ ದೇವರಾಜ್ ಹಾಗೂ ಶ್ಯಾಮಲ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದ್ದು, ಇದರಿಂದ ಕುಪಿತನಾದ ದೇವರಾಜ್ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಯ ಸಾವನ್ನು ಕಂಡ ಪತಿ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv