Tag: ಸುಡುಮದ್ದು

  • ಸುಡುಮದ್ದು ಸ್ಫೋಟಕ್ಕೆ ಯುವಕ ಬಲಿ

    ಸುಡುಮದ್ದು ಸ್ಫೋಟಕ್ಕೆ ಯುವಕ ಬಲಿ

    ತಿರುವನಂತಪುರಂ: ಕೇರಳದ ಕಣ್ಣೂರಿನಲ್ಲಿ ಭಾನುವಾರ ಸುಡುಮದ್ದು ಸ್ಫೋಟಗೊಂಡಿದ್ದು ಯುವಕ ಬಲಿಯಾಗಿದ್ದಾನೆ. ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮೃತ ಯುವಕ ಜಿಷ್ಣು(28) ಭಾನುವಾರ ಮದ್ಯಾಹ್ನ 2 ಗಂಟೆ ಸುಮಾರಿಗೆ ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿ ನವವಿವಾಹಿತರ ಮನೆಗೆ ಮರಳುತ್ತಿದ್ದ. ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಪ್ರಜಾಪ್ರಭುತ್ವದ ಹಬ್ಬ ಮಾಡಿ: ಮೋದಿ

    ವರದಿಗಳ ಪ್ರಕಾರ ಮದುವೆಯ ಹಿಂದಿನ ದಿನ ಸಂಗೀತ ಕಾರ್ಯಕ್ರಮದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿತ್ತು. ಮದುವೆಯ ಬಳಿಕ ಮೆರವಣಿಗೆ ಸಂದರ್ಭದಲ್ಲಿ ಸುಡುಮದ್ದನ್ನು ಎಸೆಯಲಾಗಿತ್ತು. ಯಾರೋ ಎಸೆದ ಸುಡುಮದ್ದು ಆಕಸ್ಮಿಕವಾಗಿ ಜಿಷ್ಣು ತಲೆಗೆ ಬಡಿದಿದೆ. ಇದರಿಂದ ಜಿಷ್ಣು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅಗತ್ಯ ಬಿದ್ದರೆ ಬೊಗಳುತ್ತೇನೆ, ಇಲ್ಲವೇ ಕಚ್ಚುತ್ತೇನೆ: ಹರೀಶ್ ರಾವತ್

    ಮೆರವಣಿಗೆಯಲ್ಲಿ ಸುಮಾರು 50 ಮಂದಿ ಪಾಲ್ಗೊಂಡಿದ್ದು, ಅದರಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.