ಮಂಗಳೂರು: ರಾಜ್ಯಾದ್ಯಂತ ಸದ್ದು ಮಾಡಿದ್ದ ಧರ್ಮಸ್ಥಳ (Dharmasthala) ಬುರುಡೆ ಪ್ರಕರಣ ತನಿಖೆ ಬಹುತೇಕ ಅಂತ್ಯದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (ಅ.27) ಮತ್ತೊಂದು ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ (SIT) ನೋಟಿಸ್ ನೀಡಿತ್ತು. ಆದರೆ ಸುಜಾತ್ ಭಟ್ (Sujatha Bhat) ಹೊರತುಪಡಿಸಿ, ಇನ್ನುಳಿದ ನಾಲ್ವರು ವಿಚಾರಣೆಗೆ ಗೈರಾಗಿದ್ದಾರೆ.
ಸೋಮವಾರ ಬೆಳಗ್ಗೆ 10:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್, ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ ಹಾಗೂ ಸುಜಾತ್ ಭಟ್‌ಗೆ ಬಿಎನ್‌ಎಸ್ 35(3) ಅಡಿಯಲ್ಲಿ ನೋಟಿಸ್ ಜಾರಿ ಮಾಡಿತ್ತು. ತನಿಖೆಯಲ್ಲಿ ಕಂಡುಕೊಂಡಂತೆ ಪ್ರಕರಣದ ಕುರಿತಂತೆ ಹಲವು ಸಂಗತಿಗಳನ್ನು ಮತ್ತು ಸಂದರ್ಭಗಳನ್ನು ತಮ್ಮಿಂದ ಖಚಿತಪಡಿಸಿಕೊಳ್ಳಲು ನಿಮ್ಮನ್ನು ವಿಚಾರಿಸುವುದು ಅಗತ್ಯವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದರು. ಜೊತೆಗೆ ವಿಚಾರಣೆಗೆ ಹಾಜರಾಗದಿದ್ದರೆ, ಬಂಧನ ಮಾಡುವ ಎಚ್ಚರಿಕೆಯನ್ನೂ ನೀಡಿದ್ದರು.ಇದನ್ನೂ ಓದಿ: ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ: ಹೈಕೋರ್ಟ್
ವಿಚಾರಣೆ ಸಂಬಂಧ ಬೆಳ್ಳಂಬೆಳಗ್ಗೆ ಸುಜಾತ್ ಭಟ್ ಬೆಂಗಳೂರಿನಿಂದ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿದ್ದರು. ಬುರುಡೆ ಗ್ಯಾಂಗ್ ಗೈರಾಗಿರುವುದನ್ನು ಕಂಡು ಎಸ್‌ಐಟಿ ಮಧ್ಯಾಹ್ನ 2 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಡೆಡ್‌ಲೈನ್ ನೀಡಿದ್ದರು. ಅದಕ್ಕೂ ಬಗ್ಗದ ಗ್ಯಾಂಗ್ ಕೊನೆಗೆ ವಿಚಾರಣೆಗೆ ಹಾಜರಾಗದೇ ತಮ್ಮ ವಕೀಲರನ್ನು ಕಳುಹಿಸಿದ್ದರು.
ತಿಮರೋಡಿ ಪರ ವಕೀಲರಾದ ಅಂಬಿಕಾ ಪ್ರಭು ಹಾಗೂ ತಂಡ ಆಗಮಿಸಿ, ಮಹೇಶ್ ಶೆಟ್ಟಿ ತಿಮರೋಡಿ ಇಂದು ವಿಚಾರಣೆಗೆ ಬರಲು ಆಗಲ್ಲ, ಹೀಗಾಗಿ ನಾಲ್ವರಿಗೂ ಏಳು ದಿನ ಸಮಯ ಕೊಡಿ ಎಂದು ಎಸ್‌ಐಟಿ ಬಳಿ ಕೇಳಿಕೊಂಡಿದ್ದರು. ಅದರಂತೆ ಎಸ್‌ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಗೆ ಏಳು ದಿನ ಹಾಗೂ ಇನ್ನುಳಿದ ಮೂವರು ನಾಲ್ಕು ದಿನದ ಒಳಗೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡಿದ್ದಾರೆ.ಇದನ್ನೂ ಓದಿ: ಮೊರಾದಾಬಾದ್ ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ – ಓರ್ವ ಮಹಿಳೆ ಸಾವು, ಆರು ಮಂದಿಗೆ ಗಾಯ
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯಾ ಭಟ್ ಕಟ್ಟುಕತೆ ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಮುಂದುವರಿಸಿದೆ. ಇದೀಗ ಬಹುಭಾಷಾ ನಟ, ನಿರ್ದೇಶಕನ ಸಹೋದರನಿಗೆ ಎಸ್‌ಐಟಿ (SIT) ನೋಟಿಸ್ ನೀಡಲು ಮುಂದಾಗಿದೆ.
ಧರ್ಮಸ್ಥಳ (Dharmasthala) ಬುರುಡೆ ಫೈಲ್ಸ್ ವಿಚಾರದಲ್ಲಿ ದಿನೇ ದಿನೇ ಹೊಸ ಬೆಳವಣಿಗೆಗಳಾಗುತ್ತಲೇ ಇದೆ. ಈ ಮೊದಲು ಅನನ್ಯಾ ಭಟ್ ಬಗ್ಗೆ ಕಟ್ಟುಕತೆ ಕಟ್ಟಿ ಸುಜಾತಾ ಭಟ್ ಎಲ್ಲರನ್ನು ನಂಬಿಸುವ ಕೆಲಸ ಮಾಡಿದ್ದರು. ಬಳಿಕ ಇದೆಲ್ಲವನ್ನು ಜಮೀನು ವಿಚಾರವಾಗಿ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಇದೀಗ ಅನನ್ಯಾ ಭಟ್ ಕೇಸ್ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಂದುವರಿಸಿದೆ.ಇದನ್ನೂ ಓದಿ: Koalr | ಸೇತುವೆ ಮೇಲಿಂದ ಕಾರು ಬಿದ್ದು ಓರ್ವ ಸಾವು, ನಾಲ್ವರಿಗೆ ಗಾಯ
ವಾಸಂತಿ ಕೇಸ್ ಬಗ್ಗೆ ತನಿಖೆಗಿಳಿದಾಗ ಎಸ್‌ಐಟಿಗೆ ಬಹುಭಾಷಾ ನಟನ ಸಹೋದರನ ಹೆಸರು ಕೇಳಿಬಂದಿದೆ. ನಟನ ಸಹೋದರ ಕೂಡ ಕಾಲಿವುಡ್ ನಟನಾಗಿದ್ದು, ವಾಸಂತಿ ಗಂಡನ ಗೆಳೆಯ ಎಂದು ತಿಳಿದುಬಂದಿದೆ. ಸದ್ಯ ಕಾಲಿವುಡ್ ನಟ ಚೆನ್ನೈನಲ್ಲಿರುವುದಾಗಿ ಮಾಹಿತಿಯಿದ್ದು, ಆತನ ವಿಳಾಸ ಪತ್ತೆ ಮಾಡುವಲ್ಲಿ ಎಸ್‌ಐಟಿ ಕಾರ್ಯನಿರತವಾಗಿದೆ. ವಿಳಾಸ ಸಿಗದ ಹಿನ್ನೆಲೆ ನೋಟಿಸ್ ನೀಡಲು ವಿಳಂಬವಾಗಿದೆ.
ಮಡಿಕೇರಿ: ಸುಜಾತಾ ಭಟ್ (Sujatha Bhat) ಅವರು ಕ್ಷಣಕ್ಷಣಕ್ಕೂ ಒಂದೊಂದು ಹೇಳಿಕೆ ನೀಡುತ್ತಿರುವುದರಿಂದ ಆಕೆಯ ಹೇಳಿಕೆ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ನನ್ನ ಸಹೋದರಿ ವಸಂತಿ ಎಷ್ಟು ತಾಯಿಂದಿರಿಗೆ ಮಗಳು ಆಗಲು ಸಾಧ್ಯ. ಮೊದಲು ಸುಜಾತಾ ಭಟ್ ಅವರನ್ನು ಪೊಲೀಸರು ವಶಕ್ಕೆ ಪಡೆಯಬೇಕು ಎಂದು ವಾಸಂತಿ ಸಹೋದರ ಎಂ.ವಿಜಯ್ ಅಕ್ರೋಶ ಹೊರಹಾಕಿದ್ದಾರೆ.
ಕೊಡಗಿನ ವಿರಾಜಪೇಟೆಯಲ್ಲಿ ‘ಪಬ್ಲಿಕ್ ಟಿವಿ’ಯೊಂದಿಗೆ ಮಾತಾನಾಡಿದ ಅವರು, ಈ ಧರ್ಮಸ್ಥಳ ಪ್ರಕರಣದ ಬಗ್ಗೆ ಹಾಗೂ ಸುಜಾತಾ ಭಟ್ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಎಳೆಎಳೆಯಾಗಿ ಅವರ ಮುಖವಾಡ ಬಿಚ್ಚುಡುತ್ತಿದೆ. ಹೀಗಾಗಿ, ಮೊದಲು ಪಬ್ಲಿಕ್ ಟಿವಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೊಂದೇ ಸತ್ಯಗಳು ಹೊರಗೆ ಬರ್ತಿದೆ: ವೀರೇಂದ್ರ ಹೆಗ್ಗಡೆ
ಸುಜಾತಾ ಭಟ್ ದಿನಕ್ಕೊಂದು ಸುಳ್ಳು ಸೃಷ್ಟಿ ಮಾಡುತ್ತಿದ್ದಾರೆ. ರಾತ್ರಿ ಮಗಳು ಅಲ್ಲ ಅನ್ನುತ್ತಾರೆ, ಬೆಳಿಗ್ಗೆ ಮಗಳು ಎನ್ನುತ್ತಾರೆ. ಒಂದೊಂದು ಸಲ ಒಂದೊಂದು ರೀತಿಯ ಹೇಳಿಕೆ ನೀಡುತ್ತಾರೆ. ನನ್ನ ಸಹೋದರಿ ವಾಸಂತಿ ಎಷ್ಟು ಜನರಿಗೆ ಮಗಳು ಆಗಬೇಕು? ಎಲ್ಲರಿಗೂ ಮಗಳ ಇವಳು? ಎಲ್ಲಾ ಸುಳ್ಳು ಹೇಳುತ್ತ ಇದ್ದಾರೆ. ಈ ಹಿಂದೆ ಸುಜಾತಾ ಭಟ್ ಅವರು ವಿರಾಜಪೇಟೆಗೆ ಬಂದು ಡೆತ್‌ಸರ್ಟಿಫಿಕೇಟ್ ತೆಗೆದುಕೊಂಡು ಹೋಗಿದ್ದಾರೆ. ಯಾವಾಗ ಬಂದು ತೆಗೆದುಕೊಂಡು ಹೋಗಿದ್ದಾರೆ ಎಂದು ನನಗೆ ಮಾಹಿತಿ ಇಲ್ಲ. ಸುಜಾತಾ ಭಟ್ ಅವರ ಬಾಯಿಯಿಂದಲೇ ಮಾಧ್ಯಮಗಳ ಮುಖಾಂತರ ಕೇಳಿದ್ದೇನೆ. ವಾಸಂತಿ ಅವರ ಪಾಸ್‌ಪೋರ್ಟ್ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿದ್ದಾರೆ. ಅವರ ಪೋಟೊ ಆಲ್ಬಮ್, ಬಟ್ಟೆಗಳು ಸೇರಿದಂತೆ ಸುಮಾರು 15 ಲಕ್ಷದಷ್ಟು ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
2004 ರಿಂದ ರಂಗಪ್ರಸಾದ್ ಹಾಗೂ ಸುಜಾತಾ ಭಟ್ ಅವರೊಂದಿಗೆ ಸಂಬಂಧ ಇದೆ. ಸುಜಾತಾ ಭಟ್ ಅವರ ಮೇಲೆ ಸಾಕಷ್ಟು ಅನುಮಾನ ಇದೆ. ವಾಸಂತಿ ಸತ್ತ ಸಂದರ್ಭದಲ್ಲೇ ಅದು ಅನುಮಾನದ ಸಾವು ಎಂದು ದೂರು ನೀಡಿದ್ದೆವು. ಸಿಬಿಐ ತನಿಖೆ ಆಗಿತ್ತು. ಅದರಲ್ಲಿ ಆತ್ಮಹತ್ಯೆ ಎಂದು ವರದಿ ಬಂದಿದೆ. ನನ್ನ ಬಳಿ ವಾಸಂತಿ ಭಟ್ ಅವರ ಹಲವಾರು ದಾಖಲೆಗಳು ಇವೆ. ಎಸ್‌ಐಟಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಸ್ಕ್‌ಮ್ಯಾನ್ ಚಿನ್ನಯ್ಯನ ಅಣ್ಣ ಪೊಲೀಸರ ವಶಕ್ಕೆ
ಸುಜಾತಾ ಭಟ್ ಅವರು ಒಂದಲ್ಲ ಒಂದು ಸುಳ್ಳು ಹೇಳಿಕೊಂಡು ಪ್ರಕರಣ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಪೊಲೀಸರು ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದು ವಿಜಯ್ ಒತ್ತಾಯಿಸಿದ್ದಾರೆ.
ಮಂಗಳೂರು: ಅನನ್ಯಾ ಭಟ್ ನಾಪತ್ತೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ಸುಜಾತಾ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ಅನಾರೋಗ್ಯ ಸಮಸ್ಯೆ ಕಾರಣಕ್ಕೆ ಆ.29ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
2003ರಲ್ಲಿ ಧರ್ಮಸ್ಥಳಕ್ಕೆ ಹೋಗಿ ಕಾಣೆಯಾಗಿದ್ದಾಳೆ. ನನ್ನ ಮಗಳ ವಿಧಿವತ್ತಾದ ಅಂತ್ಯಸಂಸ್ಕಾರ ಮಾಡಲು ಮೃತದೇಹದ ಅಸ್ಥಿಪಂಜರ ಹುಡುಕಿ ಕೊಡಲು ವಿನಂತಿ ಎಂಬಿತ್ಯಾದಿಯಾಗಿ ನೀಡಿದ ದೂರು ಅರ್ಜಿಯು ಎಸ್‌ಐಟಿಗೆ ವರ್ಗಾವಣೆ ಆಗಿದೆ. ಅರ್ಜಿ ವಿಚಾರಣೆಗೆ ಹೆಚ್ಚಿನ ಮಾಹಿತಿಯು ಅಗತ್ಯ ಇರುವುದರಿಂದ ತಾವು ಶನಿವಾರ ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ನೋಟಿಸ್ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಸುಜಾತಾ ಭಟ್, ಅನಾರೋಗ್ಯದ ಸಮಸ್ಯೆ ಕಾರಣ ನಾನು ಶನಿವಾರ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆ.29 ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ. ಅದಕ್ಕೆ ಅನುಮತಿ ನೀಡುವಂತೆ ಎಂದು ಎಸ್‌ಐಟಿಗೆ ಮನವಿ ಮಾಡಿಕೊಂಡಿದ್ದಾರೆ.
ಮಂಗಳೂರು: ಸ್ನೇಹಿತರ ಜೊತೆ ಧರ್ಮಸ್ಥಳಕ್ಕೆ (Dharmasthala) ಹೋಗಿದ್ದ ನನ್ನ ಮಗಳು ಕಾಣೆಯಾಗಿದ್ದಳು ಅಂತ ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದ ಸುಜಾತಾ ಭಟ್ ವಿಚಾರದಲ್ಲಿ ಒಂದೊಂದೇ ಸತ್ಯಗಳು ಹೊರ ಬರುತ್ತಿವೆ. ತಮ್ಮ ಮಗಳು ಅಂತ ಸುಜಾತಾ ಭಟ್ ಫೋಟೋ ರಿಲೀಸ್ ಮಾಡುತ್ತಿದ್ದಂತೆ ಸಾಕಷ್ಟು ಹಲ್‌ಚಲ್ ಎದ್ದಿದೆ. ಯಾರದ್ದೋ ಮನೆಯ ಸೊಸೆ ಫೋಟೋ ತೋರಿಸಿ ತಮ್ಮ ಮಗಳು ಎನ್ನುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ವಸಂತಾ ಎಂಬುವವರ ಸಹೋದರ ನನ್ನ ತಂಗಿ ಫೋಟೋ ಬಳಸಿಕೊಂಡಿದ್ದಾರೆ ಅಂತ ಆರೋಪ ಮಾಡಿದ್ರು. ಇದೀಗ ಅನನ್ಯಾ ಭಟ್ ಅವರ ಪೂರ್ವಾಪರ ಕೆದಕಲು ಎಸ್‌ಐಟಿ ತಂಡ ಮುಂದಾಗಿದೆ, ಈ ಬೆನ್ನಲ್ಲೇ ಸುಜಾತಾ ಭಟ್‌ಗೆ (Sujatha Bhat) ನೋಟಿಸ್ ನೀಡಿದೆ.
ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ (Belthangady SIT office) ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ಸುಜಾತಾ ಭಟ್ ಅವರಿಗೆ ನೋಟಿಸ್ ನೀಡಿದೆ. ಬೆಳ್ತಂಗಡಿ ಕಚೇರಿ ಸಿಬ್ಬಂದಿ ಬೆಂಗಳೂರಿಗೆ ಬಂದು ನೋಟಿಸ್ ಜಾರಿಮಾಡಿದ್ದಾರೆ. ನೋಟೀಸ್ ಸ್ವೀಕರಿಸಿ ಶೀಘ್ರದಲ್ಲೇ ವಿಚಾರಣೆಗೆ ಬರೋದಾಗಿ ಸುಜಾತ ಭಟ್ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಮನೆ ಖಾಲಿ ಮಾಡೋದಾಗಿ ಹೇಳಿದ್ದಾರಂತೆ ಸಮೀರ್
ಪ್ರಕರಣದ ಪೂರ್ವಾಪರ ಕೆದಕಿದ ತನಿಖಾ ತಂಡ
ಅನನ್ಯಾ ಭಟ್ ನಾಪತ್ತೆ ಆಗಿದ್ದಾರೆ ಅನ್ನೋ ವಿಚಾರದಲ್ಲಿ ಇದೀಗ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಪ್ರಕರಣದ ಬೆನ್ನುಹತ್ತಿರೋ ಎಸ್‌ಐಟಿ ತಂಡ ಪ್ರಕರಣದ ಪೂರ್ವಾಪರ ಕೆದಕಲು ಮುಂದಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್- ಮೊದಲ ಬಾರಿಗೆ ಮೌನ ಮುರಿದ ಸಿಎಂ
ಈಗಾಗಲೇ ಅನನ್ಯಾ ಭಟ್ ಅಸ್ತಿತ್ವದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಶಿವಮೊಗ್ಗ, ಬೆಂಗಳೂರು, ಉಡುಪಿಯಲ್ಲಿ ದಾಖಲೆ ಸಂಗ್ರಹಿಸಿದೆ. ಈ ಮಾಹಿತಿಗಳ ಆಧಾರದಲ್ಲಿ ಸುಜಾತ್ ಭಟ್‌ರನ್ನ ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ವಿಚಾರಣೆ ಬಳಿಕ ಸುಜಾತ ಭಟ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಎಡಪಂಥೀಯರು ಸಿಎಂ ಮನೆಯಲ್ಲೇ ಸಭೆ ಮಾಡಿ SIT ತನಿಖೆ ಶುರು ಮಾಡಿಸಿದ್ದಾರೆ: ಆರ್. ಅಶೋಕ್ ಕಿಡಿ
– ಮನೆ ಖಾಲಿ ಮಾಡೋಕೆ ಹೇಳ್ತಿದ್ದಾರೆ, ನಾನು ಏನ್ ತಪ್ಪು ಮಾಡಿದ್ದೀನಿ?
ಬೆಂಗಳೂರು: ನಾನು ಯಾರ ಹಣಕ್ಕಾಗಿಯೂ ಹೀಗೆ ಮಾಡಿಲ್ಲ. ನನ್ನ ಮಗಳು ಇಲ್ಲ ಅಂತಾ ಕೊರಗುತ್ತಿದ್ದೀನಿ. ಇದ್ದಿದ್ರೆ ನನ್ನ ನೋಡಿಕೊಳ್ಳುತ್ತಿದ್ದಳು ಎಂದು ಸುಜಾತಾ ಭಟ್ (Sujatha Bhat) ಕಣ್ಣೀರು ಹಾಕಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡುವಾಗ, ತಮ್ಮ ಬಗ್ಗೆ ಹೊರಗಡೆ ಕೇಳಿಬರುತ್ತಿರುವ ಮಾತುಗಳನ್ನು ನೆನೆದು ಕಣ್ಣೀರಿಟ್ಟರು. ಯಾವ ಹಣಕ್ಕಾಗಿ ಮಾಡಿಲ್ಲ. ಏನಕ್ಕೆ ಹಣ ತೆಗೆದುಕೊಳ್ಳಬೇಕು? ಯಾರ ಹತ್ತಿರ ಯಾಕೆ ತೆಗೆದುಕೊಳ್ಳಬೇಕು? ಯಾರ ಹತ್ತಿರ ಭಿಕ್ಷೆ ಬೇಡಿದ್ದೇನೆ. ಯಾರು ಕೊಡ್ತಾರೆ ಹಣ ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ಇದನ್ನೂ ಓದಿ: ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್
ಪಾರ್ಕ್ನಲ್ಲಿ ಜ್ಯೂಸ್ ಮಾರಾಟದ ಬಗ್ಗೆ ಮಾತನಾಡಿ, ಬೆಳಗ್ಗೆ 2:30 ಕ್ಕೆ ಎದ್ದೇಳುತ್ತೇನೆ. ಎಲ್ಲಾ ರೆಡಿ ಮಾಡಿಕೊಂಡು ಹೋಗ್ತೀನಿ. ಸ್ವಾಭಿಮಾನಿಯಾಗಿ ಬದುಕಿದ್ದೀನಿ. ಕಾಲ್ಪನಿಕ ಆಗಿದ್ರೆ ನಿಮ್ಹಾನ್ಸ್‌ಗೆ ಕರೆದುಕೊಂಡು ಹಾಕಬೇಕಿತ್ತು. ನಕ್ಸಲೆಟ್ ಅಂತಾರೆ. ವಯಸ್ಸಾಗಿದೆ ಅನ್ನೋದಕ್ಕಾದ್ರು ಮರ್ಯಾದೆ ಕೊಡಬೇಕಲ್ಲ. ನನ್ನ ಮಗಳು ಇದ್ದಿದ್ದು ನಿಜ. 9 ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡಿದ್ದೀನಿ. ಒಂದು ತಿಂಗಳ ಮಗುವನ್ನ ನದಿಯಲ್ಲಿ ಹಾಕ್ತಿದ್ರು. ನೋವಾಗುತ್ತೆ ಅಲ್ವಾ. ನಾನು ಸತ್ತು ಹೋಗಿದ್ದಾಳೆ ಅಂದ್ಮೇಲೆ ಡೆತ್ ಸರ್ಟಿಫಿಕೇಟ್ ಡಿಕ್ಲೇರ್ ಮಾಡೋಕೆ ಹೇಳಲಿ. ಅವರ ಮನೆ ಬಾಗಿಲಿಗೆ ಹೋಗಿಲ್ಲ. ಮನೆ ಕೆಲಸ ಮಾಡಿದ್ದೀನಿ. ನನ್ನನ್ನ ಸಾಕಿದ್ರೆ ಅವರು ನನ್ನ ಬಗ್ಗೆ ಮಾತನಾಡಬೇಕು ಎಂದು ಟೀಕೆಗಳಿಗೆ ನೊಂದು ನುಡಿದರು.
ರಂಗಪ್ರಸಾದ್‌ರನ್ನ ನಾನು ನೋಡಿಕೊಂಡಿದ್ದೇನೆ. ನನಗೆ ಬಟ್ಟೆ ಇಲ್ಲದಿದ್ದರೂ ಪರವಾಗಿಲ್ಲ, ಅವರಿಗೆ ಎಲ್ಲಾ ಮಾಡಿದ್ದೇನೆ. ನನ್ನ ಕಣ್ಣೆದುರಲ್ಲೇ ಸತ್ತು ಹೋಗಿದ್ದಾರೆ. ನನ್ನ ಮಗಳು ಕಣ್ಣೆದುರು ಇದ್ರೆ ಹೇಗಿರುತ್ತಿದ್ದಳು. ನಾನು ಯಾರ ದುಡ್ಡಿಗಾಗಿ ಮಾಡುತ್ತಿಲ್ಲ. ನನಗೆ ದುಡ್ಡಿನ ಅವಶ್ಯಕತೆ ಇಲ್ಲ. ಯಾರೋ ಪುಣ್ಯಾತ್ಮರು ಊಟ ಹಾಕ್ತಾರೆ. ಮಕ್ಕಳಿದ್ರೂ ತಂದೆಯನ್ನ ನೋಡಿಕೊಳ್ಳಲಿಲ್ಲ. ಇನ್ಸುಲಿನ್ ಕೊಡಿಸಲು ಆಗಿಲ್ಲ ಅಂದ್ರೆ ತಂದೆ ಎಷ್ಟು ನೋವನ್ನ ಅನುಭವಿಸರಬೇಕು. ಸಾಯೋ ಹಿಂದಿನ ದಿನವೂ ಎಷ್ಟು ಕಷ್ಟ ಪಡುತ್ತಿದ್ದೀಯ ಅಂತಿದ್ರು ಎಂದು ನೆನೆದು ಕಣ್ಣೀರಿಟ್ಟರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
ಯಾವ ಹೋರಾಟಗಾರರು ನನ್ನ ಸಂಪರ್ಕದಲ್ಲಿಲ್ಲ. ನಾನೇ ವಕೀಲರನ್ನ ಸಂಪರ್ಕಿಸಿ ಅಪ್ರೋಚ್ ಮಾಡಿದ್ದೇನೆ. ಒಂದು ಲೆಟರ್ ಕೊಡೋಣ ಅಂದ್ರು ಹೋದ್ವಿ. ನನ್ನ ಮಗಳ ಅಸ್ಥಿ ಕೊಡಿ ಅಂತಾ ಕೇಳಿದ್ದೇನೆ. ನಾನು ತನಿಖೆ ಮಾಡಿ ಅಂತಾ ಹೇಳಿಲ್ಲ. ಧರ್ಮಸ್ಥಳದಲ್ಲಿ ಆಗಿದೆ ಅಂತಾ ಎಲ್ಲೂ ಹೇಳಿಲ್ಲ. ದಾಖಲೆಗಳನ್ನ ನಾನು ಏನು ಕೊಟ್ಟಿಲ್ಲ. ನಾನು ಏನ್ ಕೇಳಿದ್ದೀನಿ ಅದಕ್ಕೆ ಅವರು ಬದ್ಧರಾಗಿದ್ದಾರೆ. ಅಸ್ಥಿ ಸಿಕ್ಕಿದ್ರೆ ಡಿಎನ್‌ಎ ಟೆಸ್ಟ್ ಮಾಡಿ ಕೊಡಿಸಿ. ಹಿಂದೂ ಸನಾತನ ಸಂಪ್ರದಾಯಂತೆ ಅಂತ್ಯಕ್ರಿಯೆ ಮಾಡ್ತೀನಿ. ತನಿಖೆ ಮಾಡಿ ಅಂತಾ ಹೇಳಿಲ್ಲ. ಆಗ ಇಲ್ಲದೇ ಇರೋ ತನಿಖೆ ಈಗ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ನನಗೆ ಯಾರ ಮೇಲೂ ಅನುಮಾನ ಇದೆ ಅಂತಾ ಹೇಳಿಲ್ಲ, ಹೇಳ್ತಾನೆ ಇಲ್ಲ. ಇಷ್ಟು ವರ್ಷ ಇಲ್ಲದೇ ಇರೋದ್ರಿಂದ ನನ್ನ ಮಗಳು ಇಲ್ಲ ಅಂದುಕೊಂಡಿದ್ದೇನೆ. ನನ್ನ ಮಗಳು ಸತ್ತು ಹೋಗಿದ್ದಾಳೆ ಅಂತಾನೆ ಡಿಕ್ಲೇರ್ ಮಾಡಿಕೊಂಡಿದ್ದೇನೆ. ನನ್ನ ಆತ್ಮಕ್ಕೆ ನನ್ನ ಮಗಳು ಇಲ್ಲ ಅಂದುಕೊಂಡಿದ್ದೇನೆ. ಈಗ ಒಂಟಿಯಾಗಿ ಬದುಕುತ್ತಿದ್ದೀನಿ. ದಿನ ಬೆಳಗಾದ್ರೆ ನಾನು ಮಾನಸಿಕವಾಗಿ ಕೊರಗುತ್ತಿದ್ದೇನೆ. ನನ್ನ ಮಗಳು ಇಲ್ಲ ಅಂತಾ ಕೊರಗುತ್ತಿದ್ದೀನಿ. ಇದ್ದಿದ್ರೆ ನನ್ನ ನೋಡಿಕೊಳ್ತಿದ್ದಳು. ನನ್ನ ಮಗಳು ಇದ್ದಿದ್ದು ನಿಜ, ಹುಟ್ಟಿದ್ದು ಸತ್ಯ. ಅನಿಲ್ ಭಟ್‌ಗೆ ಹುಟ್ಟಿದ್ದು ಸತ್ಯ. ಇದು ಕಾಲ್ಪನಿಕವಲ್ಲ… ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಬೇಸರದಿಂದ ನುಡಿದರು.
ಅರವಿಂದ್‌ಗೆ ಮಗುವನ್ನ ಕೊಡಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, ನಾನು ಕೊಡೋಕೆ ಕಾರಣ ಇಲ್ಲ. ನನ್ನ ತಂದೆಯ ಫ್ಯಾಮಿಲಿ ಅವರು ಕಾರಣ, ನನ್ನ ಅಕ್ಕಂದಿರು. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನ ನೀರಲ್ಲಿ ಯಾಕೆ ಬಿಡಲಿ. ಅವತ್ತೆ ನಾನು ಕರೆದುಕೊಂಡು ಹೋಗಿ ಸಾಕಬಹುದಾಗಿತ್ತಲ್ಲ. ನನಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಬೇರೆಯವರಿಗೆ ಹಾಕಿದ ಬಟ್ಟೆಯನ್ನ ನನಗೆ ಕೊಡ್ತಿದ್ದರು. ನನಗೆ ಒಳ್ಳೆಯ ಬಟ್ಟೆ ಕೊಡಿಸುತ್ತಿರಲಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಮಾಡಿದ್ದಾರೆ ಎಂದು ಹೇಳಿದರು.
ಇವತ್ತು ಮಾತನಾಡುತ್ತಿದ್ದನಲ್ಲ. ಅವನ ಹೆಂಡ್ತಿಗೆ ಸೀರೆ ಕೊಡಿಸೋಕೆ 2 ಸಾವಿರ ತೆಗೆದುಕೊಂಡಿದ್ದಾರೆ. ಅವರ ಮದುವೆಯಲ್ಲಿ ನನಗೆ ಯಾರೋ ಹಾಕಿದ ಹಳೆಯ ಸೀರೆ ಕೊಟ್ಟಿದ್ದಾರೆ. ನನಗೆ ತುಂಬ ನೋವಾಗಿದೆ. ನೋವು ಅನುಭವಿಸಿದ್ದೀನಿ. ಯಾರ ಹತ್ತಿರನೂ ಹೇಳಿಕೊಳ್ಳಲಿಕ್ಕೆ ಇಷ್ಟ ಇಲ್ಲ. ದುಡ್ಡು ಯಾವ ದುಡ್ಡು, ನನ್ನ ಬ್ಯಾಂಕ್ ಬ್ಯಾಲೆನ್ಸ್ ತೋರಿಸಲಾ? ದುಡಿದು ತಿನ್ನುತ್ತೀನಿ. ಒಂದೊತ್ತು ಊಟ ಇಲ್ಲ ಅಂದ್ರೂ ಇರ್ತೀನಿ. ಎರಡು ದಿನದಿಂದ ಊಟ ಇಲ್ಲ. ಮನೆಯಿಂದ ಹೊರಗೆ ಹೋಗೋಕೆ ಆಗ್ತಿಲ್ಲ. ಮನೆ ಖಾಲಿ ಮಾಡೋಕೆ ಹೇಳ್ತಿದ್ದಾರೆ. ನಾನು ಏನ್ ತಪ್ಪು ಮಾಡಿದ್ದೀನಿ. ಮಗಳು ಇಲ್ಲ ಅನ್ನೋದನ್ನ ಹೇಳೋದೆ ತಪ್ಪಾ? ಮನೆ ಖಾಲಿ ಮಾಡಿಸೋಕೆ ಯಾರು ಇವರು? ನಾನೇನು ಕ್ರೈಂ ಮಾಡಿದ್ದೀನಿ. ಕಳ್ಳತನನಾ..? ಕೊಲೆನಾ..? ಬದುಕೋದೆ ತಪ್ಪಾ..? ಯಾರ ಕೊಡ್ತಾರೆ ಅಂತೆ ದುಡ್ಡು? ಯಾವ ದುಡ್ಡು? ಇಷ್ಟು ವರ್ಷ ಸಣ್ಣಪುಟ್ಟ ಕೆಲಸ ಮಾಡಿ ಬದುಕಿದ್ದೀನಿ. ನಾನು ಯಾರ ಹತ್ತಿರನು ಕೈ ಚಾಚಿಲ್ಲ. ಮನೆಯಲ್ಲಿ ಅಕ್ಕಿ ಇದ್ಯಾ ಬೆಳೆ ಇದ್ಯಾ ಅಂತಾ ಯಾರು ಕೇಳಿಲ್ಲ. ಭಿಕ್ಷೆ ಎತ್ತಿಲ್ಲ. ಮಗಳು ಇಲ್ಲ ಅನ್ನೋ ನೋವು, ಇದು ಕಾಲ್ಪನಿಕ ಅಲ್ಲ. ಹೇಗೆ ಮಗಳು ಇಲ್ಲ ಅಂತಾ ಹೇಳೋಕೆ ಸಾಧ್ಯ. ಕಾಲ್ಪನಿಕ ಅಂತಾರೆ ಇವರು ಯಾರು ಹೇಳೋಕೆ? 9 ತಿಂಗಳು ಏನ್ ಕಷ್ಟದಲ್ಲಿ ಎತ್ತಿದ್ದೀನಿ ಅನ್ನೋದು ನನಗೆ ಗೊತ್ತು. ತಾಯಿ ಆದವಳಿಗೆ ಗೊತ್ತಿರಲ್ವಾ? ತಪ್ಪಲ್ವಾ ಹೇಳೋದು ಎಂದು ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ರಂಗಪ್ರಸಾದ್ ಅವರ ಫೋಟೊ ತೋರಿಸಿದರು. ಜೊತೆಗೆ ತನ್ನ ತಾಯಿ ಫೋಟೊವನ್ನು ತೋರಿಸಿ, ನನ್ನ ಅಮ್ಮನಿಗೂ ಅನನ್ಯಾ ಭಟ್‌ಗೂ ಹೋಲಿಕೆ ಇಲ್ವಾ ಎಂದು ಕೇಳಿದರು.
– ತನಿಖೆ ಮಾಡಿ ಅಂತ ಎಲ್ಲೂ ಹೇಳಿಲ್ಲ; ಮಗಳ ಅಸ್ಥಿ ಸಿಕ್ಕರೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡ್ತೀನಿ – ಅನಾಮಿಕ ವ್ಯಕ್ತಿ ಧನ್ಯವಾದ ಎಂದ ಸುಜಾತಾ ಭಟ್
ಬೆಂಗಳೂರು: ನನ್ನ ಮಗಳು ಅನನ್ಯಾ ಭಟ್ (Ananya Bhat) ಇದ್ದಿದ್ದು ಸತ್ಯ. ಅನನ್ಯಾ ಬಗ್ಗೆ ತನಿಖೆ ಮಾಡಿ ಅಂತ ಎಲ್ಲೂ ಹೇಳಿಲ್ಲ. ಮಗಳ ಅಸ್ಥಿ ಸಿಕ್ಕರೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡ್ತೀನಿ ಎಂದು ಸುಜಾತಾ ಭಟ್ (Sujatha Bhat) ಹೇಳಿದರು.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಸುಜಾತಾ ಭಟ್, ನನ್ನ ಮಗಳು ಧರ್ಮಸ್ಥಳದಲ್ಲಿ (Dharmasthala) ಕಾಣೆಯಾಗಿದ್ದಾಳೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯ್ತು. ದೂರು ತೆಗೆದುಕೊಂಡಿಲ್ಲ. ನಿಮ್ಮ ಮಗಳು ಎಲ್ಲಿ ಹೋಗಿದ್ದಾಳೆ ನೋಡಿ, ಹುಡುಕಾಟ ನಡೆಸೋಕೆ ಆಗಲ್ಲ ಅಂದ್ರು. ಈಗ ಅನಾಮಿಕ ಕೋರ್ಟ್‌ಗೆ ಹೋಗಿದ್ದನ್ನ ನಾನು ಟಿವಿಯಲ್ಲಿ ನೋಡಿದೆ. ನನ್ನ ಮಗಳ ಮೃತದೇಹ ಸಿಕ್ಕಿದ್ರೆ ಡಿಎನ್‌ಎ ಟೆಸ್ಟ್ ಮಾಡಿಸಿ ಕೊಡಿ ಅಂತಾ ಕೇಳಿದ್ದೇನೆ. ನಾನು ತನಿಖೆ ಮಾಡಿ ಅಂತಾ ಹೇಳಿಲ್ಲ. ಅನನ್ಯ ಭಟ್ ಇದ್ದಿದ್ದು ಸತ್ಯ. ಅಸ್ತಿ ಸಿಕ್ಕಿದ್ರೆ ಸನಾತನ ಹಿಂದೂ ಸಂಪ್ರಾದಯಂತೆ ಮಾಡ್ತೀನಿ ಅಂತಾ ಹೋಗಿರೋದು. ನಾನು ತನಿಖೆ ಮಾಡಿ ಅಂತಾ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರಪಂಚದಲ್ಲಿ ಒಂದೇ ರೀತಿ 7 ಜನ ಇರ್ತಾರೆ, ಫೋಟೋಗಳಿಗೆ ಸಾಮ್ಯತೆ ಇರಬಹುದು: ಸುಜಾತ ಭಟ್
ಎಂಬಿಬಿಎಸ್ ಓದಿಲ್ಲ ಅನ್ನೋ ರೆಕಾರ್ಡನ್ನೇ ಕಾಣೆ ಮಾಡಿಸಿದ್ದಾರೆ. ಸುರತ್ಕಲ್‌ನಲ್ಲಿರುವ ಮನೆಯನ್ನ ಸುಟ್ಟು ಹಾಕಿದ್ದಾರೆ. ಅರವಿಂದ್, ವಿಮಲಾ ನನ್ನ ಮಗಳನ್ನ ಸಾಕಿದ್ರು. 1983 ರಲ್ಲಿ ನನ್ನ ಮಗಳು ಜನನವಾಗಿದ್ದು. ಅನಿಲ್ ಭಟ್ ಎನ್ನುವವರನ್ನ ಮನೆಯವರಿಗೆ ಗೊತ್ತಿಲ್ಲದಂತೆ ಮದುವೆಯಾಗಿದ್ದೆ. ಇದರಿಂದ ನಮ್ಮ ಕುಟುಂಬದಿಂದ ಬೆದರಿಕೆ ಇತ್ತು ಎಂದು ತಿಳಿಸಿದರು.
ಒಂದು ಹುಡುಗಿಯಂತೆ 7 ಜನ ಇರುತ್ತಾರೆ. ಅವರು ಯಾರು ಅಂತಾನೆ ಗೊತ್ತಿಲ್ಲ. ಯಾವ ಅಲ್ಬಂ ಮನೆಯಲ್ಲಿ ಇಲ್ಲ. ನನ್ನ ಬಳಿ ಇದ್ದಿದ್ದು ಪಾಸ್‌ಪೋರ್ಟ್ ಫೋಟೊ. ಅಡ್ಮಿಷನ್ ಮಾಡಿಸಲು ಆ ಫೋಟೊ ಇಟ್ಟುಕೊಂಡಿದ್ದೆ. 2003ರಲ್ಲಿ ನನ್ನ ಮಗಳು ಕಾಣೆಯಾಗಿದ್ದಳು. ನನ್ನ ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯ್ತು. ದೂರು ತೆಗೆದುಕೊಂಡಿಲ್ಲ. ಧರ್ಮಸ್ಥಳ ವ್ಯಕ್ತಿಯೊಬ್ಬರ ಬಳಿ ಕೇಳಿದಾಗ, ನಿನ್ನ ಮಗಳನ್ನ ಹುಡುಕಿಕೊ ಅಂತಾ ಹೇಳಿದ್ರು ಎಂದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
ಕೆಲವರು ನಿಮ್ಮ ಮಗಳನ್ನ ಇಲ್ಲಿ ನೋಡಿದ್ದೀನಿ ಅಂತಾ ನನ್ನ ಕರೆದುಕೊಂಡು ಹೋದ್ರು. ಕಣ್ಣಿಗೆ ಬಟ್ಟೆ ಕಟ್ಟಿದ್ರು. ರಾತ್ರಿ ಎಲ್ಲಾ ಕೂಡಿ ಹಾಕಿದ್ರು. ರೂಮಿನಿಂಗ ಹೊರಗೆ ಕರೆದುಕೊಂಡ ಬಂದ್ರು. ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿದ್ರು. ನನ್ನ ಮಗಳನ್ನ ತೋರಿಸಿ ಅಂತಾ ಕೇಳಿದೆ. ಮರಿಯಾದೆಯಾಗಿ ಇಲ್ಲಿಂದ ಹೋಗಿ ಅಂತಾ ಹೇಳಿದ್ರು. ಮತ್ತೊಬ್ಬ ನನ್ನ ತಲೆಗೆ ಹೊಡೆದನು. ಆಗ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಆ ಆನಾಮಿಕ ವ್ಯಕ್ತಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಕಾಂಟ್ರ್ಯಾಕ್ಟ್ ಬೇಸಿಕ್‌ನಲ್ಲಿ ಕೆಲಸ ಮಾಡೋಳು. ನನ್ನ ಫ್ಯಾಮಿಲಿಯಲ್ಲಿ ಯಾರೂ ನನ್ನ ಓದಿಸಲಿಲ್ಲ. ನನ್ನ ಫ್ಯಾಮಿಲಿಯಿಂದ ಸಾಕಷ್ಟು ಟಾರ್ಚರ್ ಅನುಭಿಸಿದ್ದೇನೆ. ಮೂರನೇ ಅಕ್ಕನ ಮದುವೆ ಬಳಿಕ ನಾನು ಮನೆ ಬಿಟ್ಟು ಬಂದೆ ಎಂದು ವಿವರಿಸಿದರು. ಇದನ್ನೂ ಓದಿ: Exclusive ಸುಜಾತ ಭಟ್ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್
ವಸಂತಿ ಯಾರೆಂದು ಗೊತ್ತಿಲ್ಲ. ಅವರನ್ನ ನೋಡಿಲ್ಲ. ಅವರ ಅಣ್ಣನೂ ಗೊತ್ತಿಲ್ಲ. ನನಗೂ ಅವರಿಗೂ ಸಂಬಂಧವಿಲ್ಲ. ಕೆಂಗೇರಿಯಲ್ಲಿ ರಂಗಪ್ರಸಾದ್ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದೆ. ಅವರ ಮಗನ ಬಗ್ಗೆ ಗೊತ್ತಿಲ್ಲ, ಅವಳು ಸತ್ತಿರುವ ಬಗ್ಗೆ ಗೊತ್ತಿಲ್ಲ. ವಸಂತಿ ಅವರ ಯಾವ ಅಲ್ಬಂ ಕೂಡ ಇಲ್ಲ ಎಂದರು.
– ಧರ್ಮಸ್ಥಳ ಶವ ಅಗೆತ ಪ್ರಕರಣಕ್ಕೆ ಟ್ವಿಸ್ಟ್; ರಿಪ್ಪನ್‌ಪೇಟೆಯ ವ್ಯಕ್ತಿಯ ಜೊತೆ ವಾಸವಿದ್ದ ಸುಜಾತಾ ಭಟ್? – ನೆರೆಹೊರೆಯವರು ಹೇಳಿದ್ದೇನು?
ಶಿವಮೊಗ್ಗ: ಧರ್ಮಸ್ಥಳದ ಅನನ್ಯಾ ಭಟ್ ಪ್ರಕರಣ ರಾಜ್ಯಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೂ ರಿಪ್ಪನ್‌ಪೇಟೆಗೂ ಲಿಂಕ್ ಇರುವ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣ (Dharmasthala Mass Burial Case) ಎಸ್‌ಐಟಿ ಕಾರ್ಯಾಚರಣೆಯ ಶೋಧದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಈ ನಡುವೆ ಅನನ್ಯಾ ಭಟ್ ನಾಪತ್ತೆ ಪ್ರಕರಣದ ಬಗ್ಗೆ ಅವರ ತಾಯಿ ಸುಜಾತಾ ಭಟ್ (Sujatha Bhat) ಎಸ್‌ಐಟಿಗೆ ದೂರು ನೀಡಿದ್ದರು. ಅದರೆ, ಸುಜಾತಾ ಭಟ್ ಶಿವಮೊಗ್ಗದಲ್ಲಿಯೂ ಕೆಲ ವರ್ಷ ವಾಸವಾಗಿದ್ದರು. ಈ ವೇಳೆ ಸುಜಾತಾ ಭಟ್ ಪುತ್ರಿ ಅನನ್ಯಾ ಭಟ್ ಬಗ್ಗೆ ಸ್ಥಳೀಯರಿಗೆ ಮಾಹಿತಿಯೇ ಇದ್ದಿಲ್ಲವೆಂಬ ಅಂಶ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್!
1999 ರಿಂದ 2007 ರವರೆಗೆ ರಿಪ್ಪನ್ ಪೇಟೆಯಲ್ಲಿ ವಾಸವಿದ್ದ ಪ್ರಭಾಕರ್ ಬಾಳಿಗ ಅವರ ಜೊತೆ ಸುಜಾತಾ ಭಟ್ 18 ವರ್ಷವಾಸವಿದ್ದರು. ದಂಪತಿ, ನಾಯಿಗಳನ್ನು ಮಕ್ಕಳು ಎಂದು ಸಾಕುತ್ತಿದ್ದರು. ಸ್ಥಳೀಯರ ಪ್ರಕಾರ, ಸುಜಾತಾ ಭಟ್ ಹಾಗೂ ಪ್ರಭಾಕರ್ ಬಾಳಿಗ ಅವರಿಗೆ ಮಕ್ಕಳೇ ಇರಲಿಲ್ಲವಂತೆ. ಅಲ್ಲದೆ, ಸುಜಾತಾ ಇರುವಷ್ಟು ದಿನ ಅಕ್ಕಪಕ್ಕದ ಜನರೊಂದಿಗೆ ಹಾಗೂ ಬ್ರಾಹ್ಮಣ ಸಮಾಜ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿಲ್ಲ.
ಧರ್ಮಸ್ಥಳ ಶವ ಅಗೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗೆದ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಪತ್ತೆಯಾಗದಿರುವ ಅಂಶ ಒಂದೆಡೆಯಾದರೆ. ಇತ್ತ ನಾಪತ್ತೆಯಾದವರ ಬಗ್ಗೆ ಎಸ್‌ಐಟಿಗೆ ದೂರು ನೀಡಿದವರ ಬಗ್ಗೆ ಬಗೆದಷ್ಟು ಅಂಶಗಳು ಬಯಲಾಗುತ್ತಿವೆ.