Tag: ಸುಚಿತ್ರಾ ಕೃಷ್ಣಮೂರ್ತಿ

  • ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಬೆಚ್ಚಿಬಿದ್ದ ನಟಿ ಸುಚಿತ್ರಾ ಕೃಷ್ಣಮೂರ್ತಿ

    ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಬೆಚ್ಚಿಬಿದ್ದ ನಟಿ ಸುಚಿತ್ರಾ ಕೃಷ್ಣಮೂರ್ತಿ

    ಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ (Suchitra Krishnamoorthi) ಮಾಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್‌ವೊಂದು ಸದ್ದು ಮಾಡುತ್ತಿದೆ. ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ತಮಗಾದ ಕಹಿ ಅನುಭವವನ್ನು ಗಾಯಕಿ ಸುಚಿತ್ರಾ ಹಂಚಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಇರಲಾರದೆ 20 ನಿಮಿಷಕ್ಕೆ ಓಡಿ ಬಂದೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಧ್ಯಾನ್, ಸದಾ ನಟನೆಯ ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ

    ಸುಚಿತ್ರಾ ಕೃಷ್ಣಮೂರ್ತಿ ಎಕ್ಸ್‌ನಲ್ಲಿ ಘಟನೆ ಹಂಚಿಕೊಂಡಿದ್ದು, ಬಾಡಿ ಪಾಸಿಟಿವಿಯಿಂದ ಬರ್ಲಿನ್‌ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ಭಾಗವಹಿಸಿದೆ. ಭಾಗಿಯಾದ ಬಳಿಕ ತಲೆ ಕೆಡುವಷ್ಟು ಓಪನ್ ಆಗಿರಬೇಡಿ ಎಂಬ ಮಾತು ನೆನಪಾಯ್ತು. ಅಲ್ಲಿಂದ ಓಡೋಡಿ ಬಂದೆ. ಈ ಪಾರ್ಟಿಯಿಂದ ಬಂದ ತಕ್ಷಣ ಸ್ನಾನ ಮಾಡಿ ವಿಶ್ರಾಂತಿ ಪಡೆದು ಗಾಯತ್ರಿ ಮಂತ್ರ ಪಠಿಸಿದೆ ಎಂದು ಹೇಳಿಕೊಂಡಿದ್ದಾರೆ.

    ಈ ಕುರಿತು ಸುಚಿತ್ರಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬರ್ಲಿನ್‌ನಲ್ಲಿ ಇದು ತುಂಬಾ ಅಂದರೆ ತುಂಬಾ ಸಾಮಾನ್ಯ ವಿಷಯವಾಗಿದೆ. ದೇಹದ ಕುರಿತು ಪಾಸಿಟಿವಿಟಿ ಬೆಳೆಸಿಕೊಳ್ಳಲು ಉತ್ತೇಜನ ನೀಡುವುದು ಇದರ ಉದ್ದೇಶ. ಈ ಕುರಿತು ಕೇಳಿದಾಗ, ನೋಡುವ, ಜೀವನದಲ್ಲಿ ಒಂದು ಅನುಭವ ಆಗಲಿ ಎಂದುಕೊಂಡೆ. ಸ್ನೇಹಿತರೊಬ್ಬರ ಸ್ನೇಹಿತರಿಗೆ ಸೇರಿದ ಬಾರ್‌ವೊಂದರಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ನಾನು ಕೂಡ ಅತಿಥಿಗಳ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದೆ. ಅಲ್ಲಿಗೆ ಹೋಗಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ನಾನು ತುಂಬಾ ದೇಸಿ ಹುಡುಗಿ. ಇನ್ನೊಬ್ಬರ ಖಾಸಗಿ ಭಾಗಗಳನ್ನು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಸುಚಿತ್ರಾ ಕೃಷ್ಣಮೂರ್ತಿ ಹೇಳಿದ್ದಾರೆ.

    ಅಲ್ಲಿನ ಪರಿಸರಕ್ಕೆ ಅದು ಉತ್ತಮ. ಇದು ಮೋಜು ಮತ್ತು ಸಕಾರಾತ್ಮಕ ವಿಷಯವಾಗಿದೆ. ಇದು ಅಶ್ಲೀಲವೂ ಅಲ್ಲ. ಆದರೆ ಭಾರತೀಯರಾದ ನಮಗೆ ಅದು ಸೂಕ್ತವಲ್ಲ. ನಮ್ಮ ದೇಹದ ಕುರಿತು ಸಾಕಷ್ಟು ಜಾಗೃತರಾಗಿರುವಂತೆ ಬೆಳೆಸಲಾಗಿದೆ. ಅಲ್ಲಿನವರಿಗೆ ಇದು ಸಾಮಾನ್ಯ ವಿಚಾರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾತ್ರಿಯಿಂದ ಬೆಳಗಿನ ತನಕ ಆಯೋಜಿಸಲಾದ ಪಾರ್ಟಿ ಅದಾಗಿತ್ತು. ಆದರೆ, ನನಗೆ ಅಲ್ಲಿ ಸುಮಾರು 20 ನಿಮಿಷ ಇರುವುದು ಕಷ್ಟವಾಯ್ತು. ಜೀವನದಲ್ಲಿ ಒಂದು ಹೊಸ ಅನುಭವವಾಯ್ತು. ನಾನು ದೇಸಿ ಹುಡುಗಿ, ಇದು ನಮಗೆ ಸರಿ ಹೊಂದಲ್ಲ ಎಂದು ಗಾಯಕಿ ಸುಚಿತ್ರಾ ಮಾತನಾಡಿದ್ದಾರೆ.

    ಅಂದಹಾಗೆ, 90ರ ದಶಕದಲ್ಲಿ ಮಿಂಚಿದ ನಟಿ ಇವರು. 1994ರಲ್ಲಿ ಬಿಡುಗಡೆಯಾದ ‘ಕಭಿ ಹಾನ್ ಕಭಿ ನಾ’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಸುಚಿತ್ರಾ ಕೃಷ್ಣಮೂರ್ತಿ ನಟಿಸಿದರು. ಈ ಚಿತ್ರ ಅವರಿಗೆ ಜನಪ್ರಿಯತೆ ನೀಡಿತ್ತು. ಬಳಿಕ ನಟನೆ ಜೊತೆ ಗಾಯಕಿಯೂ ಗುರುತಿಸಿಕೊಂಡಿದ್ದಾರೆ.

  • ಪ್ರೀತಿ ಜಿಂಟಾರಿಂದ ನನ್ನ ಸಂಸಾರ ಕೊನೆಯಾಯಿತು ಎಂದು ದೂರಿದ ನಟಿ

    ಪ್ರೀತಿ ಜಿಂಟಾರಿಂದ ನನ್ನ ಸಂಸಾರ ಕೊನೆಯಾಯಿತು ಎಂದು ದೂರಿದ ನಟಿ

    ಟಿ- ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ (Suchitra Krishnamoorthy) ಅವರು ಕೆಲ ವರ್ಷಗಳ ಹಿಂದೆ ಹಿಂದಿ ನಿರ್ದೇಶಕ ಶೇಖರ್ ಕಪೂರ್ ಅವರನ್ನು ಮದುವೆಯಾಗಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2007ರಲ್ಲಿ ಡಿವೋರ್ಸ್ ಪಡೆದರು. ಇದೀಗ ಚೆನ್ನಾಗಿದ್ದ ನಮ್ಮ ಸಂಸಾರ ಹಾಳಾಗಿದ್ದಕ್ಕೆ ಕಾರಣ ನಟಿ ಪ್ರೀತಿ ಜಿಂಟಾ (Preity Zinta) ಎಂದು ಸುಚಿತ್ರಾ ಆರೋಪ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ಹೇಳಿರುವ ಮಾತು ಈಗ ಭಾರೀ ವೈರಲ್ ಆಗುತ್ತಿದೆ.

    ಗಾಯಕಿ ಸುಚಿತ್ರಾ ಅವರು 1999ರಲ್ಲಿ ಬಾಲಿವುಡ್ ನಿರ್ದೇಶಕ ಶೇಖರ್ ಕಪೂರ್ (Shekar Kapoor) ಅವರನ್ನು ಮದುವೆಯಾದರು. ವಯಸ್ಸಿನಲ್ಲಿ ತಮಗಿಂತ ೩೦ ವರ್ಷ ದೊಡ್ಡವರಾದ ಶೇಖರ್ ಕಪೂರ್ ಅವರನ್ನು ಪ್ರೀತಿಸುತ್ತಿದ್ದರು. ಈ ದಂಪತಿಗೆ ಹೆಣ್ಣು ಮಗು ಜನಿಸಿತು. ಇಬ್ಬರೂ 2007ರಲ್ಲಿ ಡಿವೋರ್ಸ್ ಪಡೆದರು. ಮದುವೆಗೂ ಮುನ್ನ ಸಾಕಷ್ಟು ಬೇಡಿಕೆ ಹೊಂದಿದ್ದ ಸುಚಿತ್ರಾ ಮದುವೆಯ ನಂತರ ತಮಗೆ ಸೂಕ್ತ ಎನಿಸುವಂತಹ ಪಾತ್ರದಲ್ಲಿ ನಟಿಸಲು ಶುರು ಮಾಡಿದರು. ಡಿವೋರ್ಸ್ ಆಗಿ ಎರಡು ದಶಕ ಕಳೆಯುತ್ತಾ ಬಂದರೂ ಕಹಿ ಘಟನೆಯನ್ನ ನಟಿ ಮರೆತಿಲ್ಲ. ಇದನ್ನೂ ಓದಿ:ಕ್ಲಬ್, ಪಬ್ಬು ಸುತ್ತಾಟ ನಿಹಾರಿಕಾಗೆ ಮುಳುವಾಯ್ತಾ?: ಮಾವನ ಗುರುತರ ಆರೋಪ

    ಶೇಖರ್ ಕಪೂರ್ ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲಿಲ್ಲ. ನಟಿ ಪ್ರೀತಿ ಜಿಂಟಾ ಅವರೊಂದಿಗೆ ಶೇಖರ್ ಕ್ಲೋಸ್ ಆಗಿದ್ದರು. ನಾನು ಪ್ರೀತಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಪ್ರೀತಿ ಜಿಂಟಾ ಅವರೇ ಡಿವೋರ್ಸ್ಗೆ ಕಾರಣ ಎಂದು ಅವರು ಹೇಳಿದ್ದಾರೆ. ಈ ಮೊದಲು ಕೂಡ ಸುಚಿತ್ರಾ ಇದೇ ರೀತಿಯ ಆರೋಪ ಮಾಡಿದ್ದರು. ಆದರೆ, ಪ್ರೀತಿ ಜಿಂಟಾ ಈ ಆರೋಪಗಳನ್ನು ನಿರಾಕರಿಸಿದ್ದರು. ಸುಚಿತ್ರಾ ಅವರೇ ನನ್ನ ಬಗ್ಗೆ ಹಾಗೆ ಮಾತಾಡಬೇಡಿ. ನಿಮ್ಮ ಮನಸ್ಥಿತಿ ಸರಿಯಿಲ್ಲ. ನೀವು ಮನೋವೈದ್ಯರನ್ನು ಭೇಟಿ ಮಾಡುವುದು ಉತ್ತಮ ಎಂದು ಪ್ರೀತಿ ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆಯೂ ಸುಚಿತ್ರಾಗೆ ಕೇಳಲಾಯಿತು.

    ನನಗೆ ಅವರ ಪ್ರತಿಕ್ರಿಯೆ ಬೇಕಿಲ್ಲ. ಇದು ಮುಕ್ತ ಜಗತ್ತು. ಅವರಿಗೆ ಏನು ಅನ್ನಿಸಿತೋ ಅದನ್ನು ಅವರು ಹೇಳಬಹುದು. ನಾನು ಗೃಹಿಣಿ ಆಗಿರುವುದಕ್ಕೆ ಖುಷಿ ಇದೆ. ಕಳೆದ 20 ವರ್ಷದಿಂದ ತಾಯಿ ಆಗಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸುಚಿತ್ರಾ ಹೇಳಿದ್ದಾರೆ. ತಾನು ನಟನಾ ಕ್ಷೇತ್ರದಲ್ಲಿರೋದು ಪತಿ ಶೇಖರ್‌ಗೆ ಇಷ್ಟವಿರಲಿಲ್ಲ. ಅವರ ಪತ್ನಿ ಆಕ್ಟ್‌ ಮಾಡೋದನ್ನ ಅವರು ಇಷ್ಟಪಡುತ್ತಿರಲಿಲ್ಲ. ಹಾಗಾಗಿ ಸಿನಿಮಾ ಮಾಡೋದನ್ನ ನಿಲ್ಲಿಸಿದೆ ಎಂದು ಮಾಜಿ ಪತಿ ಬಗ್ಗೆ ಸುಚಿತ್ರಾ ಕಿಡಿಕಾರಿದ್ದಾರೆ.ಈ ವೇಳೆ, ಮಗಳು ಕಾವೇರಿ ಕಪೂರ್ ಬಾಲಿವುಡ್‌ಗೆ ಎಂಟ್ರಿ ಕೊಡುವ ಬಗ್ಗೆ ಸುಚಿತ್ರಾ ಮಾತನಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]