Tag: ಸುಖ್ಬೀರ್ ಸಿಂಗ್

  • ಮೈಗೆ ಮಣ್ಣು ಬಳಿದುಕೊಂಡು ಅಗ್ನಿಯ ಮಧ್ಯೆ ಬಿಜೆಪಿ ಸಂಸದನ ಯೋಗಾಸನ

    ಮೈಗೆ ಮಣ್ಣು ಬಳಿದುಕೊಂಡು ಅಗ್ನಿಯ ಮಧ್ಯೆ ಬಿಜೆಪಿ ಸಂಸದನ ಯೋಗಾಸನ

    ಜೈಪುರ್: ಆರನೇ ವಿಶ್ವ ಯೋಗ ದಿನವಾದ ಇಂದು ದೇಶ ಹಾಗೂ ವಿದೇಶದಲ್ಲಿ ಅನೇಕರು ತಾವು ಯೋಗಾಸನ ಮಾಡುತ್ತಿರುವ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಕೇಂದ್ರ ಸಚಿವರು, ಸೈನಿಕರು ಸೇರಿದಂತೆ ಅನೇಕರು ಯೋಗಾಸನ ಮಾಡಿದ್ದಾರೆ.

    ಆದರೆ ರಾಜಸ್ಥಾನದ ಟೋಂಕ್ ಸವಾಯಿ ಮಾಧೋಪುರದ ಬಿಜೆಪಿ ಸಂಸದ ಸುಖ್ಬೀರ್ ಸಿಂಗ್ ಜೌನಾಪುರಿಯಾ ಅವರು ತುಂಬಾ ವಿಭಿನ್ನವಾಗಿ ಹಾಗೂ ಅಪಾಯಕಾರಿ ಯೋಗಾಸನ ಮಾಡುವ ಮೂಕ ಸುದ್ದಿಯಾಗಿದ್ದಾರೆ. ಸಂಸದರು ಮೈಗೆ ಮಣ್ಣು ಬಳಿದುಕೊಂಡು ಸುಡುವ ಬಿಸಿಲಿನಲ್ಲಿ ಬೆಂಕಿಯ ವೃತ್ತವೊಂದರ ಮಧ್ಯೆ ಕುಳಿತ ಹಾಗೂ ನಿಂತ ಭಂಗಿಯಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದಾರೆ.

    ಬಳಿಕ ಸಂಸದ ಸುಖ್ಬೀರ್ ಸಿಂಗ್ ಅವರು, ಯೋಗ ಮಾಡಿ ಆರೋಗ್ಯವಂತರಾಗಿ ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತಾವು ಪ್ರತಿದಿನ 3ರಿಂದ 4 ಗಂಟೆ ಕಾಲ ಯೋಗ, ಜಿಮ್ ಮತ್ತು ಧ್ಯಾನದಲ್ಲಿ ಸಮಯ ಕಳೆಯುವುದಾಗಿ ಹೇಳಿಕೊಂಡಿದ್ದಾರೆ.

    ಸಂಸದರ ಹೇಳಿಕೆ ಬಗ್ಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜೊತೆಗೆ ಸುಖ್ಬೀರ್ ಸಿಂಗ್ ಅವರು ಯೋಗಾಸನ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.