Tag: ಸುಕುಮಾರ ಶೆಟ್ಟಿ

  • ನಾನು ತಟಸ್ಥ, ಆದ್ರೆ ಪಕ್ಷ ವಿರೋಧಿ ಕೆಲಸ ಮಾಡಲ್ಲ : ಶಾಸಕ ಸುಕುಮಾರ ಶೆಟ್ಟಿ

    ನಾನು ತಟಸ್ಥ, ಆದ್ರೆ ಪಕ್ಷ ವಿರೋಧಿ ಕೆಲಸ ಮಾಡಲ್ಲ : ಶಾಸಕ ಸುಕುಮಾರ ಶೆಟ್ಟಿ

    ಉಡುಪಿ: ನನ್ನ ಮನಸ್ಸಿಗೆ ಆಗಿರುವ ನೋವು, ಆಘಾತ ಇನ್ನೂ ಕಡಿಮೆಯಾಗಿಲ್ಲ‌. ನಾನು ಈ ಕ್ಷಣದವರೆಗೆ ತಟಸ್ಥವಾಗಿದ್ದೇನೆ. ನಾಡಿದ್ದು ಹೋಗಿ ಬಿಜೆಪಿಗೆ (BJP) ಮತ ಹಾಕುತ್ತೇನೆ ಎಂದು ಉಡುಪಿ ಜಿಲ್ಲೆಯ ಬೈಂದೂರು (Baindur) ಶಾಸಕ ಸುಕುಮಾರ ಶೆಟ್ಟಿ (Sukumar Shetty) ತಿಳಿಸಿದರು.

    ‌ಟಿಕೆಟ್ ತಪ್ಪಿದ ಶಾಸಕರು ಒಂದೋ ಪಕ್ಷಾಂತರ ಮಾಡಿದ್ದಾರೆ. ಇಲ್ಲ ಪಕ್ಷದ ನಿಯಮವನ್ನು ಒಪ್ಪಿ ಅಭ್ಯರ್ಥಿಗಳ ಜೊತೆ ಗೆಲುವಿಗಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಕರಾವಳಿ ಜಿಲ್ಲೆಯ ಪೈಕಿ ಸುಕುಮಾರ ಶೆಟ್ಟಿ ಮಾತ್ರ ವಿಭಿನ್ನ ನಿಲುವನ್ನ ತಳೆದಿದ್ದಾರೆ. ಬೇಸರವನ್ನು ಇನ್ನು ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಸುಕುಮಾರಶೆಟ್ಟಿ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಮಾಡುವ ಸಣ್ಣ ಮನುಷ್ಯ ನಾನಲ್ಲ. ಎದುರಾಳಿ ಪಕ್ಷದ ಜೊತೆ ಕೈಜೋಡಿಸಿದ್ದೇನೆ ಎಂದು ಆರೋಪಿಸುವವರು ಕೀಳು ಮನಸ್ಸಿನವರು. ಪಕ್ಷಾಂತರ ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಹೇಳಿದರು.

    ಹಿರಿಯ ನಾಯಕರ ಮೇಲೆ ಗೌರವ ಇದೆ. ಆದರೆ ಪಕ್ಷಕ್ಕೆ ನನ್ನ ಅಭ್ಯರ್ಥಿತನ ಬೇಡವಾಗಿದೆ. ಹಾಗಾಗಿ ನಾನು ಯಾವುದೇ ಪ್ರಚಾರ ಸಭೆ, ರಾಲಿಗಳಲ್ಲಿ ಭಾಗಿ ಆಗಿಲ್ಲ ಯಾವ ಕಾರಣಕ್ಕೆ ನನಗೆ ಟಿಕೆಟ್ ಕೊಡಲಿಲ್ಲ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮೋದಿ, ಶಾ, ನಡ್ಡಾ, ಸಿಎಂ ಬಂದ್ರು ಸುಕುಮಾರ್ ಶೆಟ್ಟಿ ಬಂದಿಲ್ಲ: ಕರಾವಳಿ ಜಿಲ್ಲೆ ಉಡುಪಿಯ (Udupi) ಚುನಾವಣಾ (Election) ಕದನ ಕುತೂಹಲ ಕೆರಳಿಸಿದೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಪೈಕಿ 4 ಕಡೆ ಈ ಬಾರಿ ಹೊಸ ಅಭ್ಯರ್ಥಿಗಳು ನಾಲ್ವರು ಹಾಲಿ ಶಾಸಕರ ಪೈಕಿ ಬೈಂದೂರು ಶಾಸಕರು ತಟಸ್ಥವಾಗಿದ್ದಾರೆ. ಟಿಕೆಟ್ ತಪ್ಪಿದ ಬೇಸರದಿಂದ ಸುಕುಮಾರಶೆಟ್ಟಿ ಇನ್ನೂ ಹೊರ ಬಂದಿಲ್ಲ. ಚುನಾವಣಾ ಪ್ರಚಾರ ನಡೆಸುತ್ತಿಲ್ಲ ಯಾವುದೇ ಸಭೆಗೂ ಶಾಸಕ ಸುಕುಮಾರ ಶೆಟ್ಟಿ ಬರುತ್ತಿಲ್ಲ.

    ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಎಲ್ಲಾ ಶಾಸಕರು, ಅಭ್ಯರ್ಥಿಗಳು ಭಾಗವಹಿಸಬೇಕಿತ್ತು. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸುಕುಮಾರಶೆಟ್ಟಿ ಗೈರಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವತಃ ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರಕ್ಕೆ ಬಂದು ಅಭ್ಯರ್ಥಿ ಗುರುರಾಜ್ ಗಂಟೆ ಹೊಳೆ ಪರ ಮತಯಾಚನೆ ಮಾಡಿದ್ದಾರೆ. ಈ ರೋಡ್ ಶೋದಲ್ಲೂ ಶಾಸಕ ಸುಕುಮಾರ ಶೆಟ್ಟಿ ಭಾಗಿಯಾಗಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಯಾವ ಸಮಯದಲ್ಲಿ ಎಲ್ಲಿ? ಯಾವ ರಸ್ತೆಯಲ್ಲಿ ಸಂಚಾರ?

    ಸುಮಾರು 20,000 ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಜಮಾಯಿಸಿದ್ದರು. ಈ ಕಾರ್ಯಕ್ರಮದಿಂದಲೂ ಶಾಸಕ ಶೆಟ್ಟಿ ದೂರ ಉಳಿದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಂದಾಗಲೂ ಕರೆ ಮಾಡಿದ್ದರು. ಅದಕ್ಕೂ ಸುಕುಮಾರ್ ಶೆಟ್ಟಿ ಪೂರಕವಾಗಿ ಸ್ಪಂದನೆ ಮಾಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಡುವ ಸಂದರ್ಭವು ಸುಕುಮಾರಶೆಟ್ಟಿ ಭೇಟಿಯಾಗದೆ ಸಬೂಬು ಹೇಳಿದ್ದರು.

    ರಾಜ್ಯದ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ 4 ಬಾರಿ ಫೋನ್ ಕರೆ ಮಾಡಿ ಚುನಾವಣಾ ಓಡಾಟದಲ್ಲಿ ಭಾಗಿ ಆಗುವಂತೆ ಅಭ್ಯರ್ಥಿ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೂ ಸುಕುಮಾರ ಶೆಟ್ಟಿ ಒಪ್ಪಿಲ್ಲ. ಬಿ.ವೈ ರಾಘವೇಂದ್ರ ರಾಜ್ಯದ ಸಚಿವರು ಆರ್ ಎಸ್ ಎಸ್, ಸಂಘ ಪರಿವಾರದ ಮುಖಂಡರು ಮನವೊಲಿಸಿದರು ಸುಕುಮಾರಶೆಟ್ಟಿ ಕರಗಿಲ್ಲ. ಇದನ್ನೂ ಓದಿ: ರೋಡ್‌ ಶೋನಲ್ಲಿ ಸರ್ಕಾರದ ಸಾಧನೆ, ಬೆಂಗಳೂರು ಕೊಡುಗೆಗಳ ಉಲ್ಲೇಖದ ಫ್ಲೆಕ್ಸ್‌ ಅಳವಡಿಕೆ

  • ಬೈಂದೂರಲ್ಲಿ 550 ಕೋಟಿ ಕುಡಿಯುವ ನೀರಿನ ಯೋಜನೆ- ಬಿ.ವೈ ರಾಘವೇಂದ್ರ, ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ಸಭೆ

    ಬೈಂದೂರಲ್ಲಿ 550 ಕೋಟಿ ಕುಡಿಯುವ ನೀರಿನ ಯೋಜನೆ- ಬಿ.ವೈ ರಾಘವೇಂದ್ರ, ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ಸಭೆ

    ಉಡುಪಿ: ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಸಭೆ ಮಂಗಳವಾರ ಹೆಮ್ಮಾಡಿಯಲ್ಲಿ ನಡೆಯಿತು. 550 ಕೋಟಿ ರುಪಾಯಿ ವೆಚ್ಚದಲ್ಲಿ 2 ಕ್ಲಸ್ಟರ್ ಮಾಡಲಾಗಿದ್ದು, ಆರಂಭದಲ್ಲಿ 60 ಸಾವಿರ ಮನೆಗಳಿಗೆ ಕುಡಿಯುವ ನೀರು ತಲುಪಿಸುವ ಯೋಜನೆ ಇದಾಗಿದೆ.

    ಬಹು ನೀರಿನ ಕುಡಿಯುವ ಯೋಜನೆ ಪ್ರಕಾರ ಭವಿಷ್ಯದ ದೃಷ್ಟಿಯಿಂದ 71 ಸಾವಿರ ಮನೆಗಳಿಗೆ ನೀರು ಒದಗಿಸುವ ಯೋಜನೆ ಇದಾಗಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಹೆಮ್ಮಾಡಿಯಲ್ಲಿ ನಡೆದ ಸಭೆಯಲ್ಲಿ ಮೊದಲ ಹಂತದ ಚರ್ಚೆ ಅಭಿಪ್ರಾಯ ಸಂಗ್ರಹ ನಡೆಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ವರಾಹಿ ಡ್ಯಾಂ ಮತ್ತು ಗುಲ್ವಾಡಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ನೀರು ಪೂರೈಸಲಾಗುವುದು. ವಿಧಾನಸಭಾ ಕ್ಷೇತ್ರದಲ್ಲಿ 220 ಟ್ಯಾಂಕ್ ನಿರ್ಮಾಣವಾಗಲಿದೆ. 2 ವರ್ಷದಲ್ಲಿ ಕೆಲಸ ಪೂರ್ಣ ಮಾಡ್ತೇವೆ ಎಂದರು. ಸಿಎಂ ಯಡಿಯೂರಪ್ಪ ಪ್ರತಿನಿಧಿಸಿದ ಕ್ಷೇತ್ರ ಇದಾಗಿದ್ದು ಆದ್ಯತೆ ಮೇರೆಗೆ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ದೇಶದ ಪ್ರತಿ ಗ್ರಾಮಕ್ಕೂ, ಪ್ರತಿ ಮನೆಗೂ ನೀರು ತಪುಪಿಸುತ್ತೇವೆ ಎಂದರು.

    ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಐದು ನದಿಗಳು ಹರಿದು ಸಮುದ್ರ ಸೇರಿದರೂ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಕುಡಿಯುವ ಸ್ಥಿತಿ ಇದೆ. ಆದ್ಯತೆ ಮೇರೆಗೆ ಬೈಂದೂರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದೆ. ತಾಲೂಕಿನಲ್ಲಿ ಉಪ್ಪು ನೀರಿಗೆ ತಡೆಯೊಡ್ಡುವ ಉದ್ದೇಶದಿಂದ ಅಲ್ಲಲ್ಲಿ 110 ಕೋಟಿ ವೆಚ್ಚದಲ್ಲಿ ವೆಂಟೆಂಡ್ ಡ್ಯಾಂ ನಿರ್ಮಿಸುತ್ತೇವೆ. ಮೀನುಗಾರಿಕಾ ಬಂದರು, ಜಟ್ಟಿ, ರಸ್ತೆಗಳು ಹೀಗೆ ಅಭಿವೃದ್ಧಿ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಈಗಾಗಲೇ ಜಿಲ್ಲೆಗೆ 1,350 ಕೋಟಿ ರುಪಾಯಿಯ ವಿವಿಧ ಯೋಜನೆ ತಂದಿದ್ದೇವೆ. ಸಮಗ್ರ ತಾಲೂಕು ಅಭಿವೃದ್ಧಿ ಪಣ ತೊಟ್ಟು ಕೆಲಸ ಮಾಡುತ್ತಿದ್ದೇನೆ ಎಂದರು.

    ಜಿಲ್ಲಾ ಪಂಚಾಯತ್ ಸಿಇಒ ನವೀನ್ ಭಟ್, ಎಸಿ ಕೆ, ರಾಜು, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್, ದೀಪಕ್ ಕುಮಾರ್ ಶೆಟ್ಟಿ, ಕುಂದಾಪುರ ತಾ.ಪಂ ಇಒ ಕೇಶವ ಶೆಟ್ಟಿಗಾರ್, ಜಿ.ಪಂ, ತಾಲೂಕು ಪಂಚಾಯತ್ ಸದಸ್ಯರು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.

  • ಪೋಷಕರಿಗೆ ಆರ್ಥಿಕ ಸಂಕಷ್ಟ – 70 ಲಕ್ಷ ಫೀಸ್ ಮನ್ನಾ ಮಾಡಿದ ಶಾಸಕ ಸುಕುಮಾರ ಶೆಟ್ಟಿ

    ಪೋಷಕರಿಗೆ ಆರ್ಥಿಕ ಸಂಕಷ್ಟ – 70 ಲಕ್ಷ ಫೀಸ್ ಮನ್ನಾ ಮಾಡಿದ ಶಾಸಕ ಸುಕುಮಾರ ಶೆಟ್ಟಿ

    ಉಡುಪಿ: ದೇಶಾದ್ಯಂತ ಕೊರೊನಾ ಆವರಿಸಿದ್ದು, ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಪೋಷಕರು ತಮ್ಮ ಮಕ್ಕಳ ಫೀಸ್ ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಈ ವರ್ಷ ತಮ್ಮ ಶಿಕ್ಷಣ ಸಂಸ್ಥೆಗಳ 70 ಲಕ್ಷ ಫೀಸ್ ಮನ್ನಾ ಮಾಡಲು ನಿರ್ಧಾರ ಮಾಡಿದ್ದಾರೆ.

    ಕಳೆದ ವರ್ಷದ ಒಂದೂವರೆ ಕೋಟಿ ಫೀಸ್ ಮಕ್ಕಳಿಂದ ಬಾಕಿಯಿದೆ. ಮಕ್ಕಳಿಗೆ ನಾವು ಶುಲ್ಕಕ್ಕಾಗಿ ಯಾವತ್ತೂ ಒತ್ತಡ ಹೇರಿಲ್ಲ. ಈ ಬಾರಿ ಫೀಸ್ ಶುಲ್ಕದ ಪೈಕಿ 70 ಲಕ್ಷ ರುಪಾಯಿ ಮನ್ನಾ ಮಾಡ್ತೇವೆ. ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿರುವ ಅವರು, ನಾಲ್ಕು ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ಪ್ರಾಥಮಿಕದಿಂದ ಪದವಿವರೆಗೆ ನಾಲ್ಕು ಸಂಸ್ಥೆಗಳನ್ನು ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ.

    ಸಮಾಜದ ಕಟ್ಟ ಕಡೆಯ ಕುಟುಂಬದ ಮಕ್ಕಳಿಗೆ ಫೀಸ್ ತೆಗೆದುಕೊಳ್ಳಲ್ಲ. ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತೇವೆ. ಕೆಲ ಕುಟುಂಬಗಳಿಗೆ ಅರ್ಧ ಫೀಸ್ ತೆಗೆದುಕೊಳ್ಳುತ್ತೇವೆ. ಶ್ರೀಮಂತರ ಮಕ್ಕಳಿಗೆ ಫುಲ್ ಫೀಸ್ ಎಂದು ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ. ಶಿಕ್ಷಣ ಗುಣಮಟ್ಟ ವಿಚಾರದಲ್ಲಿ ರಾಜಿ ಇಲ್ಲ. ಒತ್ತಡ ಹೇರಿ, ಬಲವಂತವಾಗಿ ಫೀಸ್ ಕಿತ್ತುಕೊಳ್ಳುವ ಪರಿಪಾಠ ಹಿಂದಿನಿಂದಲೇ ಇಲ್ಲ. ಮುಂದೆಯೂ ಮಾಡದಂತೆ ಸಿಬ್ಬಂದಿಗೆ ಸೂಚಿಸಿರುವುದಾಗಿ ಶಾಸಕರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ನಮ್ಮ ನಾಲ್ಕು ಶಾಲೆಗಳನ್ನು ಬೆಂಗಳೂರಿನ ಶಾಲೆಗಳ ಜೊತೆ ತುಲನೆ ಮಾಡಬೇಡಿ. ನಮ್ಮ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ 15-18 ಸಾವಿರ, ಪಿಯುಸಿ, ಪದವಿ ಮಕ್ಕಳಿಗೆ 20 ಸಾವಿರ ಫೀಸ್ ಇದೆ. ಮೂರು ಅಥವಾ ನಾಲ್ಕು ಕಂತಿನಲ್ಲಿ ಫೀಸ್ ತೆಗೆದುಕೊಳ್ಳುತ್ತೇವೆ. ಈ ಬಾರಿ ಕೊರೊನಾ ಎಲ್ಲರನ್ನು ಜರ್ಜರಿತ ಮಾಡಿದೆ. ಪೋಷಕರ ಕೈಯಲ್ಲಿ ಕಾಸಿಲ್ಲ, ಹಾಗಂತ ಮಕ್ಕಳಿಗೆ ಶಿಕ್ಷಣ ಕೊಡುವುದು ಅತ್ಯಾವಶ್ಯಕ ಎಂದು ಸುಕುಮಾರ್ ತಿಳಿಸಿದ್ದಾರೆ.

    ಶಿಕ್ಷಕರಿಗೆ ಸಂಬಳ, ಬಸ್ ನಿರ್ವಹಣೆ, ಸಿಬ್ಬಂದಿ ಸಂಬಳ 45 ಲಕ್ಷದಷ್ಟು ಪ್ರತೀ ತಿಂಗಳಿಗೆ ಖರ್ಚು ಬರುತ್ತದೆ. ಬೈಂದೂರು ಗ್ರಾಮೀಣ ಭಾಗದ ಶಾಲೆ, ಇಲ್ಲಿನ ಮಕ್ಕಳನ್ನು ಪ್ರತಿಭಾವಂತರನ್ನು ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯತೆ ಇದೆ. ಆರ್ಥಿಕವಾಗಿ ಸಬಲರಾಗಿರುವವರು ಫೀಸ್ ವಿಚಾರದಲ್ಲಿ ಚೌಕಾಶಿ ಮಾಡಬಾರದು ಎಂದು ಶಾಸಕ ಸುಕುಮಾರ ಶೆಟ್ಟಿ ವಿನಂತಿ ಮಾಡಿದರು.

  • ಬೋರ್‌ವೆಲ್‌ಗೆ ಬಿದ್ದ ಯುವಕನ ರಕ್ಷಣೆ- ತಂಡಕ್ಕೆ 25 ಸಾವಿರ ನಗದು ಘೋಷಿಸಿದ ಸುಕುಮಾರ ಶೆಟ್ಟಿ

    ಬೋರ್‌ವೆಲ್‌ಗೆ ಬಿದ್ದ ಯುವಕನ ರಕ್ಷಣೆ- ತಂಡಕ್ಕೆ 25 ಸಾವಿರ ನಗದು ಘೋಷಿಸಿದ ಸುಕುಮಾರ ಶೆಟ್ಟಿ

    ಉಡುಪಿ: ಜಿಲ್ಲೆಯ ಮರವಂತೆಯಲ್ಲಿ ಬೋರ್‌ವೆಲ್‌ಗೆ ಬಿದ್ದ ರೋಹಿತ್ ಖಾರ್ವಿ ರಕ್ಷಣೆ ಮಾಡಿದ ತಂಡಕ್ಕೆ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.

    ಮರವಂತೆಯ ಅಗ್ನಿಶಾಮಕ ದಳದ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ 25 ಸಾವಿರ ನಗದು ನೀಡಿ, ಮರವಂತೆಯಲ್ಲೇ ಸನ್ಮಾನ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ಮೊತ್ತ ಎಂದು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಬೋರ್‌ವೆಲ್‌ ಪಕ್ಕ ಭೂಕುಸಿತ – 6 ಗಂಟೆ ಹೋರಾಡಿ ಸಾವನ್ನೇ ಗೆದ್ದ ಯುವಕ

    ಯುವಕ ರೋಹಿತ್ ಖಾರ್ವಿಗೆ ಯಾವುದೇ ಗಾಯವಾಗದಂತೆ ರಕ್ಷಣೆಯಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಿ ಎಲ್ಲರಿಗೂ ಶಕ್ತಿ ಕೊಟ್ಟಳು. ಅಗ್ನಿಶಾಮಕ, ಜಿಲ್ಲಾಡಳಿತ ಕಾರ್ಯ ಯಶಸ್ವಿಯಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯರು, ಮಾಧ್ಯಮಗಳು ನಿರಂತರ ಕೆಲಸ ಮಾಡಿವೆ. ಅವರೆಲ್ಲರಿಗೂ ಅಭಿನಂದನೆ ಎಂದು ಹೇಳಿದರು.

    ಬೆಂಗಳೂರಿನಲ್ಲಿ ವಿಧಾನಸಭಾ ಕಲಾಪದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಕಾರಣ ಸ್ಥಳಕ್ಕೆ ಭೇಟಿ ನೀಡಿಲ್ಲ. ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರು, ಭಜನಾ ಮಂಡಳಿಗಳು ಸಹಕಾರ ನೀಡಿವೆ. ಎಲ್ಲರಿಗೂ ಧನ್ಯವಾದ ಎಂದು ಶಾಸಕ ಸುಕುಮಾರ ಶೆಟ್ಟಿ ತಿಳಿಸಿದರು. ಇದನ್ನೂ ಓದಿ: ಬೋರ್‌ವೆಲ್‌ ಪಕ್ಕ ಭೂಕುಸಿತ- ಕುತ್ತಿಗೆವರೆಗೆ ಹೂತ ಯುವಕ

  • ಒಂದು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಆಗ್ತಾರೆ: ಶಾಸಕ ಸುಕುಮಾರ ಶೆಟ್ಟಿ ಭವಿಷ್ಯ

    ಒಂದು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಆಗ್ತಾರೆ: ಶಾಸಕ ಸುಕುಮಾರ ಶೆಟ್ಟಿ ಭವಿಷ್ಯ

    – ಮೋಜು-ಮಸ್ತಿ ಮಾಡಿಲ್ಲ, ನಡುಗುವ ಚಳಿಯಲ್ಲಿ ಗಂಗಾಸ್ನಾನ ಮಾಡಿದೆ

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇನ್ನೊಂದು ತಿಂಗಳಲ್ಲಿ ಸಿಎಂ ಆಗುತ್ತಾರೆ ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಭವಿಷ್ಯ ನುಡಿದಿದ್ದಾರೆ.

    ಗುರುಗ್ರಾಮದ ರೆಸಾರ್ಟ್ ನಿಂದ ಉಡುಪಿಗೆ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಆಶ್ಚರ್ಯಕರ, ಚಮತ್ಕಾರದ ರೀತಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಬರುತ್ತಾರೆ. ಅದ್ಯಾವ ಮ್ಯಾಜಿಕ್ ಮಾಡಿ ಹೇಗೆ ಸಿಎಂ ಆಗ್ತಾರೆ ಅಂತ ನಾನು ಈಗ ಹೇಳಲ್ಲ. ನೀವೇ ನೋಡಿ. ಯಡಿಯೂರಪ್ಪ ಈ ತಿಂಗಳು ಕಳೆಯುವ ಒಳಗೆ ಮುಖ್ಯಮಂತ್ರಿ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದರು.

    ದೆಹಲಿ, ಹರಿಯಾಣದಲ್ಲಿ ನಾನು ಮೋಜು ಮಸ್ತಿ ಮಾಡಿಲ್ಲ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡೆ. ಅದನ್ನು ಮುಗಿಸಿ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆ ನಡೆಯಿತು. ಅಲ್ಲಿಂದ ಹರಿದ್ವಾರಕ್ಕೆ ಹೋಗಿದ್ದೆ. ನಡುಗುವ ಚಳಿಯಲ್ಲಿ ಗಂಗಾಸ್ನಾನ ಮಾಡಿದ್ದೇನೆ. ಮೂರು ಸಾರಿ ಮುಳುಗಿ ಎದ್ದೆ. ನಾನು ನನ್ನ ಕ್ಷೇತ್ರ ಮರೆಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರ, ರಾಜ್ಯ ಮತ್ತು ದೇಶದ ಜನಕ್ಕಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು. ಮಾಧ್ಯಮಗಳಲ್ಲಿ ಶಾಸಕರನ್ನು ಕೂಡಿ ಹಾಕಿದ್ದಾರೆ ಎಂದು ಪ್ರಸಾರವಾಗುತ್ತಿತ್ತು. ಕೂಡಿ ಹಾಕಲು ನಾನು ಮಗು ಅಲ್ಲ ಅಂತ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದರು.

    ಸನ್ಯಾಸಿಗೆ ಕೋಟಿ ಯಾಕೆ?
    ನಾನೊಬ್ಬ ಸನ್ಯಾಸಿಯಂತೆ ಬದುಕುವ ವ್ಯಕ್ತಿ. ನನಗೆ ಅಧಿಕಾರವೂ ಬೇಡ, ಕೋಟಿಯೂ ಬೇಡ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಅಂತ ಅಂದರು. ಬಿಜೆಪಿ ತೊರೆಯುವ ವಿಚಾರ ಒಂದು ಮಾಧ್ಯಮದಲ್ಲಿ ಪ್ರಸಾರವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಅಪಪ್ರಚಾರವಾಗಿದೆ. ನಾನೊಬ್ಬ ಪ್ರಖರ ಹಿಂದುತ್ವವಾದಿ. ನಾನು ಬಿಜೆಪಿ ಬಿಡಲ್ಲ. ಸನ್ಯಾಸಿ ಜೀವನ ನಡೆಸುವವನಿಗೆ ಹಣ, ಅಧಿಕಾರ ಆಮಿಷದ ಅಗತ್ಯವಿಲ್ಲ. ಗಂಜಿ ಊಟ ಮಾಡುವವನಿಗೆ ಕೋಟಿ ಯಾಕೆ ಬೇಕು ಎಂದು ಪ್ರಶ್ನಿಸಿದರು.

    ಇಷ್ಟಕ್ಕೂ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರನ್ನು ನೋಡಿ 18 ವರ್ಷ ಆಗಿದೆ. ತಿಂಗಳ ಹಿಂದೆ ಯು.ಟಿ ಖಾದರ್ ಪರಿಚಯ ಆಗಿದೆ. ಕಾಂಗ್ರೆಸಿಗರು ನನ್ನನ್ನು ಈವರೆಗೆ ಸಂಪರ್ಕ ಮಾಡಿಯೇ ಇಲ್ಲ. ನಾನು ಯಡಿಯೂರಪ್ಪನವರ ಅತೀ ಹತ್ತಿರದ ವ್ಯಕ್ತಿ. ಜನ ಬಿಜೆಪಿಯಿಂದ ನನ್ನನ್ನು ಗೆಲ್ಲಿಸಿದ್ದಾರೆ. ಅಪಪ್ರಚಾರ ಮಾಡಿದವರ ವಿರುದ್ಧ ಮೊಕದ್ದಮೆ ಹೂಡುತ್ತೇನೆ ಎಂದು ಬಿಜೆಪಿ ಶಾಸಕ ಸುಕುಮರ ಶೆಟ್ಟಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮುದ್ರಸ್ನಾನದ ವೇಳೆ ಅಲೆಯ ಹೊಡೆತಕ್ಕೆ ಸಿಕ್ಕಿ ಎಸೆಯಲ್ಪಟ್ಟ ಬೈಂದೂರು ಶಾಸಕ!

    ಸಮುದ್ರಸ್ನಾನದ ವೇಳೆ ಅಲೆಯ ಹೊಡೆತಕ್ಕೆ ಸಿಕ್ಕಿ ಎಸೆಯಲ್ಪಟ್ಟ ಬೈಂದೂರು ಶಾಸಕ!

    ಉಡುಪಿ: ಮಹಾಲಯ ಸಮುದ್ರ ಸ್ನಾನದ ವೇಳೆ ಅರಬ್ಬಿ ಸಮುದ್ರದ ದೊಡ್ಡ ಅಲೆಗೆ ಸಿಕ್ಕಿ ಬೈಂದೂರು ಶಾಸಕ ಜಾರಿ ಬಿದ್ದಿದ್ದಾರೆ. ಉಡುಪಿಯಲ್ಲಿ ಇಂದು ಮಧ್ಯಾಹ್ನ ಸಮುದ್ರ ಪ್ರಕ್ಷುಬ್ಧವಾಗಿರುವಾಗಲೇ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸಮುದ್ರಕ್ಕೆ ಇಳಿದಿದ್ದರಿಂದ ಈ ಘಟನೆ ನಡೆದಿದೆ.

    ಇವತ್ತು ಮಹಾಲಯ ಅಮವಾಸ್ಯೆ. ಮಹಾಲಯ ಅಮವಾಸ್ಯೆಯಂದು ಸಮುದ್ರ ಸ್ನಾನ ಮಾಡಬೇಕು ಎಂಬ ನಂಬಿಕೆ ಕರಾವಳಿ ಭಾಗದಲ್ಲಿದೆ. ಸಾವಿರಾರು ಜನ ಬೆಳಗ್ಗೆಯಿಂದ ಸಾಗರತೀರದಲ್ಲಿ ಸಮುದ್ರಸ್ನಾನ ಮಾಡಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಕೂಡಾ ಸಮುದ್ರಕ್ಕಿಳಿದಿದ್ದಾರೆ. ಜನರೆಲ್ಲಾ ಬೆಳಗ್ಗೆಯೇ ಸಮುದ್ರಸ್ನಾನ ಮುಗಿಸಿದ್ದರು. ಆದರೆ ಶಾಸಕರು ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ತ್ರಾಸಿ ಎಂಬಲ್ಲಿನ ಬೀಚ್ ಗೆ ಮಧ್ಯಾಹ್ನ ಬಂದಿದ್ದರು.

    ಬಿಜೆಪಿ ಶಾಸಕರ ಜೊತೆಗಿದ್ದವರು ಸಮುದ್ರಕ್ಕೆ ಇಳಿದು ಹೋಗಬೇಡಿ. ಮಧ್ಯಾಹ್ನ 12 ಗಂಟೆ ನಂತರ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ. ದಡದಲ್ಲೇ ಮುಳುಗುಹಾಕಿ ಅಂತ ಮನವಿ ಮಾಡಿಕೊಂಡರೂ ಶಾಸಕರು ಯಾರ ಮಾತನ್ನು ಲೆಕ್ಕಿಸದೇ, ಪುಣ್ಯಸ್ನಾನಕ್ಕೆ ಇಳಿದಿದ್ದರು. ಪರಿಣಾಮ ಅರಬ್ಬಿ ಸಮುದ್ರದ ಭಾರೀ ಅಲೆ ಸುಕುಮಾರ ಶೆಟ್ಟಿ ಅವರನ್ನು ಪಲ್ಟಿ ಹೊಡೆಸಿದೆ.

    ಕೂಡಲೇ ಜೊತೆಗಿದ್ದವರ ಸಹಾಯದಿಂದ ಶಾಸಕರು ಸುರಕ್ಷಿತವಾಗಿ ವಾಪಾಸ್ಸಾಗಿದ್ದಾರೆ. ಪ್ರತಿ ವರ್ಷ ಸುಕುಮಾರ ಶೆಟ್ಟಿ ಸಮುದ್ರಸ್ನಾನ ಮಾಡುತ್ತಾ ಬಂದಿದ್ದು, ಈ ಬಾರಿ ಮೊದಲ ಸಲ ಶಾಸಕನಾಗಿ ಸಮುದ್ರಸ್ನಾನ ಮಾಡಿದ್ದಾರೆ. ಸುತ್ತಮುತ್ತಲಿನ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ಸುಕುಮಾರ ಶೆಟ್ಟಿ, ಸಮುದ್ರಕ್ಕೆ ಇಳಿದವರು ಅಲೆಯ ಹೊಡೆತಕ್ಕೋ ಅಥವಾ ಕಾಲ ಬುಡದಲ್ಲಿರುವ ಮರಳು ಜಾರಿದಾಗ ಬೀಳಲೇಬೇಕು. ಕಾಲು ಜಾರಿದರೆ ಆನೆಯೇ ಬೀಳುತ್ತೆ ಸ್ವಾಮಿ. ನಾನೊಬ್ಬ ಸಾಮಾನ್ಯ ಮನುಷ್ಯ. ನನಗೇ ಟೆನ್ಶನ್ ಇಲ್ಲ. ನಿಮಗೆ ಯಾಕೆ ಸ್ವಾಮಿ ಇಷ್ಟೊಂದು ಟೆನ್ಶನ್ ಅಂತ ಹೇಳಿದರು. 20 ವರ್ಷದಿಂದ ಸಮುದ್ರದಲ್ಲಿ- ಕೆರೆಯಲ್ಲಿ ಸ್ನಾನ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ಶಿವನಿಗೆ ಪ್ರತಿದಿನ ಪೂಜೆ- ಅಭಿಷೇಕ ಮಾಡುವದರಿಂದ ದೇವರ ಆಶೀರ್ವಾದ ನನ್ನ ಜೊತೆಗಿದೆ. ಜನಸೇವೆ ಬಹಳ ಮಾಡುವುದಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/e7Tv2PnnOig