Tag: ಸುಕೀರ್ತಿ ಮಾಧವ್ ಮಿಶ್ರಾ

  • ಪ್ರಾಣ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ಪೊಲೀಸ್ ಪೇದೆ: ಫೋಟೋ ವೈರಲ್

    ಪ್ರಾಣ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ಪೊಲೀಸ್ ಪೇದೆ: ಫೋಟೋ ವೈರಲ್

    ಜೈಪುರ್: ಪೊಲೀಸ್ ಪೇದೆಯೊಬ್ಬರು ಗಲಭೆಕೋರರು ಸುಟ್ಟುಹಾಕಿದ ಸುಡುವ ಕಟ್ಟಡಗಳ ಹಿಂದಿನ ಕಿರಿದಾದ ಕಾಲುದಾರಿಯ ಮೂಲಕ ಮಗುವೊಂದನ್ನು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ರಾಜಸ್ಥಾನದ ಕರೌಲಿಯಲ್ಲಿ ನಡೆದಿದೆ.

    31 ವರ್ಷ ವಯಸ್ಸಿನ ಪೇದೆ ನೇತ್ರೇಶ್ ಶರ್ಮಾ ಕೋಮು ಗಲಭೆ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಇಡೀ ಊರಿಗೆ ಬೆಂಕಿ ಬಿದ್ದಿತ್ತು. ಆಗ ಒಂದು ಮನೆಯೊಳಗೆ ಇಬ್ಬರು ಮಹಿಳೆಯರು ಬೆಂಕಿಯಲ್ಲಿ ಸಿಲುಕಿದ್ದರು. ಅವರ ಜೊತೆಗೆ ಒಂದು ಮಗುವೂ ಇತ್ತು. ಈ ವೇಳೆ ಶರ್ಮಾ ಅವರು ಮಗುವನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಅದನ್ನು ತನ್ನ ಎದೆಗೆ ಅಪ್ಪಿಕೊಂಡು ಸುರಕ್ಷಿತ ಪ್ರದೇಶಕ್ಕೆ ತಲುಪಿಸಲು ಓಡಿದರು. ಆ ವೇಳೆ ತೆಗೆದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬಿಜೆಪಿ, ಅವರ ದೊಡ್ಡ ಪರಿವಾರದವರು ಅನೇಕ ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ: ರಾಮಲಿಂಗಾ ರೆಡ್ಡಿ

    ಘಟನೆ ಕುರಿತ ಈ ಚಿತ್ರವನ್ನು ಐಪಿಎಸ್ ಅಧಿಕಾರಿ ಸುಕೀರ್ತಿ ಮಾಧವ್ ಮಿಶ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮೂಲ್ಯವಾದ ಜೀವವೊಂದನ್ನು ಉಳಿಸಿದ್ದಕ್ಕಾಗಿ ಪೋಲೀಸ್ ಪೇದೆ ನೇತ್ರೇಶ್ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಸಕಾಲ ಯೋಜನೆಯಲ್ಲಿ ಶೀಘ್ರವೇ ತತ್ಕಾಲ್ ಸೇವೆ- ಬಿ.ಸಿ. ನಾಗೇಶ್

    ಶನಿವಾರ ರಾಜಸ್ಥಾನದ ಕರೌಲಿ ಪ್ರದೇಶದಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ಏಪ್ರಿಲ್ 2 ರಂದು ರಾಜಸ್ಥಾನದ ಕರೌಲಿಯಲ್ಲಿ ಧಾರ್ಮಿಕ ಮೆರವಣಿಗೆಯ ಭಾಗವಾಗಿ ತೆಗೆದ ಮೋಟಾರ್‌ ಸೈಕಲ್ ರ್‍ಯಾಲಿ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದರಿಂದ ನಾಲ್ವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 42 ಜನರು ಗಾಯಗೊಂಡಿದ್ದಾರೆ.

    ಹಿಂದೂ ಹೊಸ ವರ್ಷದ ಮೊದಲ ದಿನವಾದ ಯುಗಾದಿ ಹಬ್ಬದ ಸಂದರ್ಭದಲ್ಲಿ ಮೋಟಾರ್ ಬೈಕ್ ರ್ಯಾಲಿಯೊಂದನ್ನು ಎರ್ಪಡಿದ್ದರು. ರ್‍ಯಾಲಿಯಲ್ಲಿ ಉಂಟಾದ ಹಿಂಸಾಚಾರವು ಗಲಭೆಕೋರರಿಂದ ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇಲ್ಲಿಯವರೆಗೆ 30 ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ತಿಳಿಸಿದ್ದಾರೆ.