Tag: ಸುಂದರ್ ಪಿಚೈ

  • 25 ವರ್ಷ ಪೂರೈಸಿದ ಸಂಭ್ರಮದಲ್ಲಿ ಗೂಗಲ್

    25 ವರ್ಷ ಪೂರೈಸಿದ ಸಂಭ್ರಮದಲ್ಲಿ ಗೂಗಲ್

    ವಾಷಿಂಗ್ಟನ್: ಜಾಗತಿಕವಾಗಿ ಇಂಟರ್ನೆಟ್ ಅಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಎಂಜಿನ್ ಗೂಗಲ್ (Google) ಇಂದು 25 ವರ್ಷವನ್ನು ಪೂರೈಸಿದೆ. ಬುಧವಾರ ವಿಭಿನ್ನವಾದ ಡೂಡಲ್‌ನೊಂದಿಗೆ ಗೂಗಲ್ ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.

    ಗೂಗಲ್ ಈ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ. ಕಳೆದ 25 ವರ್ಷಗಳಲ್ಲಿ ಕಂಪನಿ ಬೆಳೆದು ಬಂದ ಹಾದಿ, 1998ರಿಂದ 2023ರ ವರೆಗೆ ತನ್ನ ಬದಲಾದ ಲೋಗೋಗಳನ್ನು ತೋರಿಸುವ ಡೂಡಲ್ ಅನ್ನು ತನ್ನ ಬ್ಲಾಗ್‌ನಲ್ಲಿ ಹಂಚಿಕೊಂಡಿದೆ.

    90ರ ದಶಕದ ಉತ್ತರಾರ್ಧದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಕಾರ್ಯಕ್ರಮದಲ್ಲಿ ಭೇಟಿಯಾದ ಡಾಕ್ಟರೇಟ್ ವಿದ್ಯಾರ್ಥಿಗಳಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರು ಗೂಗಲ್ ಅನ್ನು ಅಭಿವೃದ್ಧಿಪಡಿಸಿದರು. ಇದನ್ನು ಜಾಗತಿಕ ವಿಸ್ತರಿಸಲು ಅವರು ಸಿಲಿಕಾನ್ ವ್ಯಾಲಿಯಲ್ಲಿ ಹೂಡಿಕೆದಾರರನ್ನು ಹುಡುಕಿದರು. ಇದಕ್ಕೆ ಸನ್ ಮೈಕ್ರೊಸಿಸ್ಟಮ್ಸ್ 1 ಲಕ್ಷ ಅಮೆರಿಕನ್ ಡಾಲರ್ ಅನ್ನು ಗೂಗಲ್‌ನಲ್ಲಿ ಹೂಡಿತು. ಬಳಿಕ ಗೂಗಲ್ 1998ರ ಸೆಪ್ಟೆಂಬರ್ 27ರಂದು ಕ್ಯಾಲಿಫೋರ್ನಿಯಾದಲ್ಲಿ ಅಧಿಕೃತವಾಗಿ ಆರಂಭವಾಯಿತು. ಇದನ್ನೂ ಓದಿ: ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್

    ಗೂಗಲ್‌ನ ಪ್ರಸ್ತುತ ಸಿಇಒ ಸುಂದರ್ ಪಿಚೈ ಅವರು ಕಳೆದ ತಿಂಗಳು ಕಂಪನಿಯ ಹುಟ್ಟುಹಬ್ಬವನ್ನು ಗುರುತಿಸಲು ಟಿಪ್ಪಣಿಯನ್ನು ಬರೆದಿದ್ದರು. ಅವರು ಕಂಪನಿಯ ಪ್ರಯಾಣ, ತಂತ್ರಜ್ಞಾನವನ್ನು ಪರಿವರ್ತಿಸುವಲ್ಲಿ ಅದರ ಪಾತ್ರ ಮತ್ತು ಭವಿಷ್ಯದ ಹಾದಿಯನ್ನು ರೂಪಿಸಿದ ಬಗ್ಗೆ ಮೆಲುಕು ಹಾಕಿದರು. ಗೂಗಲ್‌ನ ಯಶಸ್ಸಿನ ಭಾಗವಾಗಿರುವ ಬಳಕೆದಾರರು, ಉದ್ಯೋಗಿಗಳು ಮತ್ತು ಪಾಲುದಾರರಿಗೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಹೊಸತನದ ನಿರಂತರ ಸವಾಲು ಮತ್ತು ಹಿಂದಿನ ಮತ್ತು ಪ್ರಸ್ತುತ ಗೂಗ್ಲರ್‌ಗಳ ಸಮರ್ಪಣೆಗಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಳೆದ 25 ವರ್ಷಗಳಲ್ಲಿ ಗೂಗಲ್ ಕೇವಲ ಸರ್ಚ್ ಎಂಜಿನ್ ಆಗಿ ಉಳಿದಿರದೇ ಇಮೇಲ್, ಯೂಟ್ಯೂಬ್‌ನಿಂದ ಹಿಡಿದು ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ವರೆಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಬೆಳೆದು ನಿಂತಿದೆ. ಇದನ್ನೂ ಓದಿ: ಆರು ವರ್ಷದ ನಂತರ ಕಾರವಾರಕ್ಕೆ ಬಂದಿಳಿದ ಟುಪೋಲೆವ್ ಯುದ್ಧ ವಿಮಾನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿಗಾಗಿ ಬೃಹತ್‌ ಔತಣ ಕೂಟ – ಮುಖೇಶ್‌ ಅಂಬಾನಿ, ಸುಂದರ್‌ ಪಿಚೈ ಸೇರಿ ಹಲವು VIP ಗಣ್ಯರು ಭಾಗಿ: ಇಲ್ಲಿದೆ ಫುಲ್‌ ಲಿಸ್ಟ್‌

    ಮೋದಿಗಾಗಿ ಬೃಹತ್‌ ಔತಣ ಕೂಟ – ಮುಖೇಶ್‌ ಅಂಬಾನಿ, ಸುಂದರ್‌ ಪಿಚೈ ಸೇರಿ ಹಲವು VIP ಗಣ್ಯರು ಭಾಗಿ: ಇಲ್ಲಿದೆ ಫುಲ್‌ ಲಿಸ್ಟ್‌

    ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ  (Narendra Modi) ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರ ಗೌರವಾರ್ಥವಾಗಿ ಅಧ್ಯಕ್ಷ ಜೋ ಬೈಡನ್‌ (Joe Biden) ಅವರು ಆಯೋಜಿಸಿದ್ದ ಔತಣಕೂಟದಲ್ಲಿ (State Dinner) ಭಾರತದ ಘಟಾನುಟಿ ನಾಯಕರು ಸೇರಿದಂತೆ ಅಮೆರಿಕದ (USA) ವಿವಿಧ ಗಣ್ಯರು ಭಾಗಿಯಾಗಿದ್ದರು.

    ಶ್ವೇತ ಭವನದಲ್ಲಿ ನಡೆದ ಔತಣ ಕೂಟದಲ್ಲಿ ಕೈಗಾರಿಕೋದ್ಯಮಿಗಳಾದ ಮುಖೇಶ್‌ ಅಂಬಾನಿ (Mukesh Ambani), ಆನಂದ್‌ ಮಹೀಂದ್ರಾ (Anand Mahindra) ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಲ್ಲದೇ ಪ್ರಮುಖ ಭಾರತೀಯ ಮೂಲದ ಉನ್ನತ ಹುದ್ದೆಯಲ್ಲಿರುವ ಗೂಗಲ್‌ ಸಿಇಒ ಸುಂದರ್ ಪಿಚೈ (Sundar Pichai), ಸತ್ಯ ನಾಡೆಲ್ಲಾ, ಇಂದ್ರಾ ನೂಯಿ, ಆಪಲ್ ಸಿಇಒ ಟಿಮ್ ಕುಕ್ (Tim Cook) ಸಹ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಪ್ರಧಾನಿಯಾಗಿ ಬಂದಾಗ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಈಗ 5ನೇ ಸ್ಥಾನಕ್ಕೆ ಜಿಗಿದಿದೆ : ಅಮೆರಿಕದಲ್ಲಿ ಮೋದಿ

    ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಸೇರಿದಂತೆ ಭಾರತ ಸರ್ಕಾರದ ಪ್ರತಿನಿಧಿಗಳು ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಭಾರತೀಯ ಮೂಲದ ಯುಎಸ್ ಪ್ರತಿನಿಧಿಗಳಾದ ರೋ ಖನ್ನಾ ಮತ್ತು ರಾಜಾ ಕೃಷ್ಣಮೂರ್ತಿ, ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಪ್ರಸಿದ್ಧ ಫ್ಯಾಷನ್ ಡಿಸೈನರ್ ರಾಲ್ಫ್ ಲಾರೆನ್ ಔತಣಕೂಟದಲ್ಲಿ ಅತಿಥಿಗಳಾಗಿದ್ದರು. ಇದನ್ನೂ ಓದಿ: 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

    ಮೆನುವಿನಲ್ಲಿ ಏನೇನಿತ್ತು?
    ಶ್ವೇತಭವನದಲ್ಲಿ ನಡೆದ ಬೃಹತ್‌ ಔತಣ ಕೂಟದಲ್ಲಿ ನಿಂಬೆ-ಸಬ್ಬಸಿಗೆ, ಮೊಸರು ಸಾಸ್, ಕ್ರಿಸ್ಪಿ ರಾಗಿ ಕೇಕ್‌, ಬೇಸಿಗೆ ಆಹಾರ, ಮ್ಯಾರಿನೇಡ್ ರಾಗಿ, ಸಲಾಡ್, ಕಲ್ಲಂಗಡಿ, ಟ್ಯಾಂಜಿ ಆವಕಾಡೊ ಸಾಸ್, ಸ್ಟಫ್ಡ್ ಪೋರ್ಟೊಬೆಲ್ಲೋ ಮಶ್ರೂಮ್‌ಮ್‌ ಸೇರಿದಂತೆ ಬಗೆ ಬಗೆ ಖಾದ್ಯಗಳನ್ನ ತಯಾರಿಸಲಾಗಿತ್ತು.

    ಔತಣ ಕೂಟದಲ್ಲಿ ಮೋದಿಯೊಂದಿಗೆ ಯಾರೆಲ್ಲಾ ಇದ್ದರು?

    ಹುಮಾ ಅಬೇದಿನ್ ಮತ್ತು ಹೆಬಾ ಅಬೇದಿನ್
    ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ
    ಜೇಮ್ಸ್ ಬಿಡೆನ್ ಮತ್ತು ಸಾರಾ ಬಿಡೆನ್
    ಟಿಮ್ ಕುಕ್ ಮತ್ತು ಲಿಸಾ ಜಾಕ್ಸನ್
    ಜಿಮ್ ಕ್ರೌನ್ ಮತ್ತು ಪೌಲಾ ಕ್ರೌನ್
    ಲ್ಯಾರಿ ಕಲ್ಪ್ ಮತ್ತು ವೆಂಡಿ ಕಲ್ಪ್
    ಸ್ಟೆಫನಿ ಕಟ್ಟರ್ ಮತ್ತು ಕೆಲ್ಲಿ ಮೈಮನ್ ಹಾಕ್
    ಅಶ್ರಫ್ ಮನ್ಸೂರ್ ದಾಹೋದ್ ಮತ್ತು ಡಾ ಶಮೀಮ್ ಅಶ್ರಫ್ ದಾಹೋದ್
    ರೋನಕ್ ದೇಸಾಯಿ ಮತ್ತು ಡಾ ಬನ್ಸಾರಿ ಶಾ
    ದರ್ಶನ್ ಧಲಿವಾಲ್ ಮತ್ತು ಡೆಬ್ರಾ ಧಲಿವಾಲ್
    ಗ್ಯಾರಿ ಡಿಕರ್ಸನ್ ಮತ್ತು ಕೋನಿ ಡಿಕರ್ಸನ್
    ಸುಂದರ್‌ ಪಿಚೈ
    ಅನುರಾಗ್ ಜೈನ್
    ಎಸ್‌. ಜೈಶಂಕರ್, ಭಾರತದ ವಿದೇಶಾಂಗ ಸಚಿವ
    ಆಪಲ್ ಸಿಇಒ ಟಿಮ್ ಕುಕ್

    ರೀಮ್ ಅಕ್ರಾ ಮತ್ತು ಡಾ ನಿಕೋಲಸ್ ತಬ್ಬಲ್
    ರೇವತಿ ಅದ್ವೈತಿ ಮತ್ತು ಜೀವನ್ ಮುಳಗುಂದ
    ಸಲ್ಮಾನ್ ಅಹ್ಮದ್, ನೀತಿ ಯೋಜನಾ ಸಿಬ್ಬಂದಿ ನಿರ್ದೇಶಕರು, ಯುಎಸ್
    ಕಿರಣ್ ಅಹುಜಾ, ಐುಎಸ್‌ ಆಫೀಸ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ
    ಸ್ಯಾಮ್ ಆಲ್ಟ್ಮನ್ ಮತ್ತು ಆಲಿವರ್ ಮುಲ್ಹೆರಿನ್
    ಲಾಯ್ಡ್ ಆಸ್ಟಿನ್, ರಕ್ಷಣಾ ಕಾರ್ಯದರ್ಶಿ, ಯುಎಸ್
    ಅರಿಂದಮ್ ಬಾಗ್ಚಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ
    ಬೇಲಾ ಬಜಾರಿಯಾ ಮತ್ತು ರೇಖಾ ಬಜಾರಿಯಾ
    ಭರತ್ ಬಾರೈ ಮತ್ತು ಪನ್ನಾ ಬಾರೈ
    ಜಾನ್ ಬಾಸ್, ಮ್ಯಾನೇಜ್‌ಮೆಂಟ್‌ನ ಅಂಡರ್‌ಸೆಕ್ರೆಟರಿ, ಯುಎಸ್‌
    ಜೋಶ್ ಬೆಕೆನ್‌ಸ್ಟೈನ್ ಮತ್ತು ಅನಿತಾ ಬೆಕೆನ್‌ಸ್ಟೈನ್
    ಜೋಶುವಾ ಬೆಲ್
    ಅಮಿ ಬೆರಾ ಮತ್ತು ಡಾ ಜನೈನ್ ವಿವಿಯೆನ್ನೆ ಬೆರಾ
    ಆಂಥೋನಿ ಬರ್ನಾಲ್, ಅಧ್ಯಕ್ಷರ ಸಹಾಯಕ ಮತ್ತು ಪ್ರಥಮ ಮಹಿಳೆಯ ಹಿರಿಯ ಸಲಹೆಗಾರ
    ಹಂಟರ್ ಬಿಡೆನ್ ಮತ್ತು ಮೆಲಿಸ್ಸಾ ಕೊಹೆನ್ ಬಿಡೆನ್
    ಆಶ್ಲೇ ಬಿಡೆನ್ ಮತ್ತು ಸೀಮಾ ಸದಾನಂದನ್
    ಜೇಮ್ಸ್ ಬಿಡೆನ್ ಮತ್ತು ಸಾರಾ ಬಿಡೆನ್
    ನವೋಮಿ ಬಿಡೆನ್ ನೀಲ್ ಮತ್ತು ಪೀಟರ್ ನೀಲ್
    ಆಂಟೋನಿ ಜೆ. ಬ್ಲಿಂಕೆನ್, ಸಹಾಯಕ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ
    ಲಿಂಡೆನ್ ಪ್ರೌಸ್ ಬ್ಲೂ ಮತ್ತು ಡಾ ಚೋಲ್ಲಾಡಾ ಬ್ಲೂ
    ಡಾ ಏಂಜೆಲ್ ಕ್ಯಾಬ್ರೆರಾ ಮತ್ತು ಬೆತ್ ಕ್ಯಾಬ್ರೆರಾ
    ಡೇವಿಡ್ ಕ್ಯಾಲ್ಹೌನ್ ಮತ್ತು ಬಾರ್ಬರಾ ಕ್ಯಾಲ್ಹೌನ್
    ಆಂಥೋನಿ ಕ್ಯಾಪುವಾನೋ
    ಮನೇಶ್ ಚಂದ್ವಾನಿ ಮತ್ತು ಅಲ್ಪನಾ ಪಟೇಲ್
    ಜಗತಾರ್ ಚೌಧರಿ
    ಕೆನೆತ್ ಚೆನಾಲ್ಟ್ ಮತ್ತು ಕ್ಯಾಥರಿನ್ ಚೆನಾಲ್ಟ್
    ಮರಿಯಾ ಗ್ರಾಜಿಯಾ ಚಿಯುರಿ ಮತ್ತು ಕರಿಷ್ಮಾ ಸ್ವಾಲಿ
    ಮೈಕೆಲ್ ಕೋಹೆನ್ ಮತ್ತು ಡರಾಲಿನ್ ಸ್ಯಾಮ್ಯುಯೆಲ್ಸ್
    ಮಾರ್ಕ್ ಡೌಗ್ಲಾಸ್ ಮತ್ತು ಮೆಡೆಲೀನ್ ಡೌಗ್ಲಾಸ್
    ಅಜಿತ್ ದೋವಲ್, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ
    ಜೋಸ್ ಡಬ್ಲ್ಯೂ. ಫೆರ್ನಾಂಡಿಸ್,
    ಜಾನ್ ಫೈನರ್, ಪ್ರಧಾನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ
    ಲಿಯೊನಾರ್ಡ್ ಫಾರ್ಸ್ಮನ್ ಮತ್ತು ಜನ ರೈಸ್
    ಜೇನ್ ಫ್ರೇಸರ್ ಮತ್ತು ಆಲ್ಬರ್ಟೊ ಪೀಡ್ರಾ
    ಅಡೆನಾ ಫ್ರೀಡ್ಮನ್ ಮತ್ತು ಮೈಕ್ ಫ್ರೀಡ್ಮನ್
    ಥಾಮಸ್ ಎಲ್. ಫ್ರೀಡ್ಮನ್ ಮತ್ತು ಆನ್ ಬಿ. ಫ್ರೀಡ್ಮನ್
    ರುಫಸ್ ಗಿಫೋರ್ಡ್, ಪ್ರೋಟೋಕಾಲ್‌ ಚೀಫ್‌, ಯುಎಸ್‌
    ಆನಂದ್ ಗಿರಿಧರದಾಸ್
    ಸಂಜಯ್ ಗೋವಿಲ್ ಮತ್ತು ವಿದ್ಯಾ ಗೋವಿಲ್
    ಪಲಾಶ್ ಗುಪ್ತಾ ಮತ್ತು ಖುಷಿ ಗುಪ್ತಾ
    ರಾಹುಲ್ ಗುಪ್ತಾ, ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ಕಚೇರಿಯ ನಿರ್ದೇಶಕ ಮತ್ತು ಸೀಮಾ ಗುಪ್ತಾ
    ಇಸಾಬೆಲ್ಲಾ ಗುಜ್ಮನ್, ಸಣ್ಣ ವ್ಯಾಪಾರ ಆಡಳಿತದ ನಿರ್ವಾಹಕರು ಮತ್ತು ಜೇವಿಯರ್ ಗುಜ್ಮನ್
    ಕಮಲಾ ಹ್ಯಾರಿಸ್
    ಫ್ರಾಂಕ್ ಇಸ್ಲಾಂ ಮತ್ತು ಡೆಬ್ಬಿ ಡ್ರೈಸ್‌ಮನ್
    ಹಿರೇನ್ ಜೋಶಿ, ವಿಶೇಷ ಕರ್ತವ್ಯದ ಅಧಿಕಾರಿ, ಭಾರತ
    ನಿಖಿಲ್ ಕಾಮತ್
    ವೃಂದಾ ಕಪೂರ್
    ವಿಮಲ್ ಕಪೂರ್
    ಆಲ್ಫ್ರೆಡ್ ಎಫ್. ಕೆಲ್ಲಿ, ಜೂನಿಯರ್ ಮತ್ತು ಮಾರ್ಗರೇಟ್ ಪಿ. ಕೆಲ್ಲಿ
    ಮ್ಯಾಕ್ಸ್‌ವೆಲ್ ಟೇಲರ್ ಕೆನಡಿ ಮತ್ತು ವಿಕ್ಕಿ ಎಸ್. ಕೆನಡಿ
    ಮ್ಯಾಕ್ಸ್ ಕೆನಡಿ
    ನೀರಜ್ ಖೇಮ್ಲಾನಿ ಮತ್ತು ಹೀದರ್ ಕ್ಯಾಬಟ್ ಖೇಮ್ಲಾನಿ
    ರೋ ಖನ್ನಾ, ಯುಎಸ್‌ ಪ್ರತಿನಿಧಿ

  • ಭಾರತದಲ್ಲಿ 75 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ ಗೂಗಲ್‌

    ಭಾರತದಲ್ಲಿ 75 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ ಗೂಗಲ್‌

    ಬೆಂಗಳೂರು: ಮುಂದಿನ ದಿನಗಳಲ್ಲಿ ಡಿಜಿಟಲ್‌ ಕ್ಷೇತ್ರದಲ್ಲಿ ಅದರಲ್ಲೂ ಭಾರತದಲ್ಲಿ ಭಾರೀ ಬೆಳವಣಿಗೆ ಆಗಲಿದೆ ಎಂಬುದನ್ನು ಊಹಿಸಿರುವ ಬಹುರಾಷ್ಟ್ರೀಯ ಕಂಪನಿಗಳು ಈಗ ದೇಶದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದು, ಗೂಗಲ್‌ ಒಟ್ಟು 10 ಶತಕೋಟಿ ಡಾಲರ್‌(75 ಸಾವಿರ ಕೋಟಿ ರೂ.) ಹೂಡಿಕೆ ಮಾಡುವುದಾಗಿ ತಿಳಿಸಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ಬಳಿಕ ಗೂಗಲ್‌ ಕಂಪನಿಯ ಸಿಇಒ ಸುಂದರ್‌ ಪಿಚೈ 10 ಶತಕೋಟಿ ಡಾಲರ್‌ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಭಾರತದಲ್ಲಿ ಡಿಜಿಟೈಸೇಶನ್‌ಗಾಗಿ ಗೂಗಲ್‌ ಕಂಪನಿ 10 ಶತಕೋಟಿ ಡಾಲರ್‌ ಫಂಡ್‌ ಘೋಷಿಸಲು ಬಹಳ ಉತ್ಸುಕನಾಗಿದ್ದೇನೆ. ಡಿಜಿಟಲ್ ಇಂಡಿಯಾಕ್ಕಾಗಿ ಪ್ರಧಾನಿ ಮೋದಿಯವರ ದೂರದೃಷ್ಟಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

    ಮುಂದಿನ 5-7 ವರ್ಷಗಳಲ್ಲಿ ನಾವು 75 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಮಾಡುತ್ತೇವೆ. 100 ಕೋಟಿ ಜನ ಆನ್‌ಲೈನ್‌ಗೆ ಬರುವ ಮೂಲಕ ದೇಶ ಪ್ರಗತಿಯನ್ನು ಸಾಧಿಸಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು, ಕೈಗೆಟುಕುವ ದತ್ತಾಂಶ ಮತ್ತು ವಿಶ್ವ ದರ್ಜೆಯ ಟೆಲಿಕಾಂ ಮೂಲಸೌಕರ್ಯಗಳು ಈ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಟ್ಟಿವೆ ಎಂದು ಪಿಚೈ ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    4 ಕ್ಷೇತ್ರದಲ್ಲಿ ಹೂಡಿಕೆ:
    1. ಮೊದಲನೆಯದಾಗಿ ಸ್ಥಳೀಯ ಭಾಷೆಗಳಲ್ಲಿ ಸುಲಭವಾಗಿ ಜನರ ಕೈಗೆ ಮಾಹಿತಿ ಒದಗಿಸುವುದು.
    2. ಭಾರತದ ವಿಶಿಷ್ಟ ಅಗತ್ಯಕ್ಕೆ ತಕ್ಕಂತೆ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ತಯಾರಿಸುವುದು.
    3. ಡಿಜಿಟಲ್‌ ರೂಪಾಂತರ ವ್ಯವಹಾರಕ್ಕೆ ಪ್ರೋತ್ಸಾಹಿಸುವುದು.
    4. ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌(ಎಐ) ಅನ್ನು ಸಾಮಾಜಿಕ ಒಳಿತಿಗಾಗಿ ಸದುಪಯೋಗಪಡಿಸಿಕೊಳ್ಳುವುದು.

    ಸುಂದರ್‌ ಪಿಚೈ ಜೊತೆಗಿನ ಮಾತುಕತೆಯ ಬಳಿಕ ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ಇಂದು ಬೆಳಗ್ಗೆ ಸುಂದರ್‌ ಪಿಚೈ ಅವರ ಜೊತೆ ಅತ್ಯಂತ ಫಲಪ್ರದವಾದ ಸಂವಾದ ನಡೆಸಿದ್ದೇನೆ. ನಾವು ಬಹಳಷ್ಟು ವಿಚಾರಗಳ ಕುರಿತು ಮಾತನಾಡಿದ್ದೇವೆ. ವಿಶೇಷವಾಗಿ ತಂತ್ರಜ್ಞಾನದ ಶಕ್ತಿಯ ಮೂಲಕ ಭಾರತದ ರೈತರು, ಯುವಕರು ಮತ್ತು ಉದ್ಯಮಿಗಳ ಜೀವನವನ್ನು ಪರಿವರ್ತಿಸಲು ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

  • ಸುಂದರ್ ಪಿಚೈಗೆ 1,704 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ- ಜನವರಿಯಿಂದ ಹೆಚ್ಚಾಗಲಿದೆ ಸಂಬಳ

    ಸುಂದರ್ ಪಿಚೈಗೆ 1,704 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ- ಜನವರಿಯಿಂದ ಹೆಚ್ಚಾಗಲಿದೆ ಸಂಬಳ

    – ಹಾಗಾದರೆ ಸುಂದರ್ ಪಿಚೈ ಸಂಬಳ ಎಷ್ಟು?

    ನವದೆಹಲಿ: ಇತ್ತೀಚೆಗಷ್ಟೇ ಗೂಗಲ್ ಮಾತೃ ಸಂಸ್ಥೆಗೆ ಸಿಇಒ ಆಗಿ ಆಯ್ಕೆಯಾಗಿರುವ ಗೂಗಲ್ ಸಿಇಒ ಸಹ ಆಗಿರುವ ಸುಂದರ್ ಪಿಚೈ ಅವರ ವೇತನದಲ್ಲಿ ಭಾರೀ ಹೆಚ್ಚಳವಾಗಿದ್ದು, ಕಂಪನಿ ವಿಶೇಷ ಪ್ಯಾಕೇಜ್ ಘೋಷಿಸಿದೆ.

    ಈ ವಿಶೇಷ ವೇತನ ಪ್ಯಾಕೇಜ್ 2020ರಿಂದ ಅನ್ವಯವಾಗಲಿದ್ದು, ಪ್ರಸ್ತುತ ಸುಂದರ್ ಪಿಚೈ ಅವರಿಗಿರುವ ವಾರ್ಷಿಕ 14.22 ಕೋಟಿ ರೂ.(2 ಮಿಲಿಯನ್ ಡಾಲರ್) ಸಂಬಳವಲ್ಲದೆ, ಹೆಚ್ಚುವರಿಯಾಗಿ (ಸ್ಟಾಕ್ ಅವಾರ್ಡ್) 1,704 ಕೋಟಿ ರೂ.(240 ಮಿಲಿಯನ್ ಡಾಲರ್)ಗಳ ಪ್ಯಾಕೇಜ್‍ನ್ನು ಕಂಪನಿ ಘೋಷಿಸಿದೆ. ಇದರಲ್ಲಿ 640 ಕೋಟಿ ರೂ.(90 ಮಿಲಿಯನ್ ಡಾಲರ್)ಗಳು ಅಲ್ಫಾಬೆಟ್ ಕಂಪನಿಯ ಕಾರ್ಯಕ್ಷಮತೆಗೆ ಸಂಬಂಧಿಸಿದ್ದಾಗಿದೆ.

    ಜನವರಿ 1ರಿಂದ ಸುಂದರ್ ಪಿಚೈ ಅವರ ಸಂಬಳ ಗಣನೀಯವಾಗಿ ಹೆಚ್ಚಳವಾಗಲಿದ್ದು, 24 ಕೋಟಿ ಡಾಲರ್ ನಲ್ಲಿ 12 ಕೋಟಿ ಡಾಲರ್ ಸ್ಟಾಕ್ ಅವಾರ್ಡ್ ತ್ರೈಮಾಸಿಕ ಕಂತಿಗಳಲ್ಲಿ ಸಿಗಲಿದೆ. ಉಳಿದಿದ್ದು ಪಿಚೈ ತಮಗೆ ನೀಡಿರುವ ಟಾರ್ಗೆಟ್ ಪೂರ್ಣಗೊಳಿಸಿದಾಗ ಸಿಗಲಿದೆ. ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ ಹಾಗೂ ಗೂಗಲ್ ಸಂಸ್ಥೆಯ ಸಿಇಒ ಆಗಿದ್ದರಿಂದ ಸಂಬಳ ಹೆಚ್ಚಳ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    2018ರಲ್ಲಿ ಸುಂದರ್ ಪಿಚೈ ಒಟ್ಟು 19 ಲಕ್ಷ ಡಾಲರ್ (135 ಕೋಟಿ ರೂ.) ಭತ್ಯೆ ಒಳಗೊಂಡಂತೆ ಸಂಬಳವನ್ನು ಪಡೆದುಕೊಂಡಿದ್ದರು. ಇದರಲ್ಲಿ 6.5 ಲಕ್ಷ ಡಾಲರ್ (4.6 ಕೋಟಿ ರೂ.) ಬೇಸಿಕ್ ಸ್ಯಾಲರಿ ಇತ್ತು. 2018ರಲ್ಲಿ ಸ್ಟಾಕ್ ಅವಾರ್ಡ್ ತೆಗೆದುಕೊಂಡಿರಲಿಲ್ಲ. ಸದ್ಯ ಸಿಗುತ್ತಿರುವ ಸಂಬಳವೇ ಹೆಚ್ಚಿದೆ, ಅದನ್ನು ತೆಗೆದುಕೊಂಡು ಏನು ಮಾಡಲಿ ಎಂದಿದ್ದರು. 1704 ಕೋಟಿ ರೂ. ಮೌಲ್ಯದ ಸ್ಟಾಕ್ ಅವಾರ್ಡ್ ಇದುವರೆಗಿನ ಹೆಚ್ಚಿನ ಮೊತ್ತದಾಗಿದೆ.

    ಇತ್ತೀಚೆಗಷ್ಟೇ ಭಾರತ ಮೂಲದ ಸುಂದರ್ ಪಿಚೈ ಜಾಗತಿಕ ಐಟಿ ದಿಗ್ಗಜ ಗೂಗಲ್ ಕಂಪನಿಯ ಮಾತೃ ಸಂಸ್ಥೆ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗಿದ್ದರು. ಗೂಗಲ್ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಅಲ್ಫಾಬೆಟ್‍ನಿಂದ ಹೊರನಡೆದಿದ್ದು, ಆ ಸಂಸ್ಥೆಯನ್ನು ಇನ್ನು ಮುಂದೆ ಸುಂದರ್ ಪಿಚೈ ನೋಡಿಕೊಳ್ಳಲಿದ್ದಾರೆ. ಸರ್ಜಿ ಬ್ರಿನ್ ಮತ್ತು ಲ್ಯಾರಿ ಪೇಜ್ ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಐದು ವರ್ಷಗಳ ಹಿಂದೆ 2005ರ ಅಕ್ಟೋಬರ್ 2 ರಂದು ಗೂಗಲ್, ಕ್ಯಾಲಿಕೋ, ಗೂಗಲ್ ಫೈಬರ್, ಡೀಪ್ ಮೈಂಡ್ ಸೇರಿದಂತೆ ಎಲ್ಲವನ್ನೂ ಒಗ್ಗೂಡಿಸಲು ಗೂಗಲ್ ಮಾತೃ ಸಂಸ್ಥೆ ಅಲ್ಫಾಬೆಟ್ ಸ್ಥಾಪಿಸಿ ಪೇಜ್ ಮತ್ತು ಬಿನ್ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು.

    ಕಂಪನಿಯ ಮುಖ್ಯಸ್ಥರನ್ನಾಗಿ ಸುಂದರ್ ಪಿಚೈ ಅವರನ್ನು ನೇಮಕ ಮಾಡುವುದಕ್ಕೂ ಮುನ್ನ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಈ ಕುರಿತು ಪತ್ರ ಬರೆದು, ಇನ್ನು ಮುಂದೆ ಗೂಗಲ್ ಮತ್ತು ಅಲ್ಫಾಬೆಟ್ ಕಂಪನಿಗೆ ಇಬ್ಬರು ಸಿಇಒಗಳು ಇರುವುದಿಲ್ಲ. ಎರಡೂ ಕಂಪನಿಯನ್ನು ಒಬ್ಬರೇ ನೋಡಿಕೊಳ್ಳಲಿದ್ದಾರೆ. ಸುಂದರ್ ನಮ್ಮ ಜೊತೆ 15 ವರ್ಷಗಳಿಂದ ಇದ್ದು, ಈತ ತಂತ್ರಜ್ಞಾನವನ್ನು ಪ್ರೀತಿಸುವ ವ್ಯಕ್ತಿಯಾಗಿದ್ದಾನೆ. ಆತನ ಮೇಲೆ ನಮಗೆ ಪೂರ್ಣ ನಂಬಿಕೆಯಿದೆ. ಈ ಸಂಸ್ಥೆಯನ್ನು ಮುನ್ನಡೆಸಲು ಸುಂದರ್ ಅವರಿಗಿಂತ ಸಮರ್ಥ ವ್ಯಕ್ತಿ ಬೇರೆ ಇಲ್ಲ. ತಂತ್ರಜ್ಞಾನ, ಉದ್ಯಮ, ಭವಿಷ್ಯದ ಯೋಜನೆ ಕುರಿತು ಅವರಿಗೆ ಸ್ಪಷ್ಟವಾದ ಜ್ಞಾನವಿದೆ ಎಂದು ಹೇಳಿ ಸುಂದರ್ ಅವರನ್ನು ಹೊಗಳಿದ್ದರು.

    ಯಾರು ಸುಂದರ್ ಪಿಚೈ?
    ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್, ಆಂಡ್ರಾಯ್ಡ್ ಅಪ್ಲಿಕೇಶನ್ ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ, ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು. ಸುಂದರ್ ಗೂಗಲ್ ಸೇರಿದ್ದು 2004ರ ಏಪ್ರಿಲ್ 1ರಂದು. ಈ ದಿನವೇ ಗೂಗಲ್ ಜಿಮೇಲ್ ಸೇವೆಯನ್ನು ಆರಂಭಿಸಿತ್ತು.

  • ಗೂಗಲ್ ಮಾತೃ ಸಂಸ್ಥೆಯ ಮುಖ್ಯಸ್ಥರಾಗಿ ಸುಂದರ್ ಪಿಚೈ ನೇಮಕ

    ಗೂಗಲ್ ಮಾತೃ ಸಂಸ್ಥೆಯ ಮುಖ್ಯಸ್ಥರಾಗಿ ಸುಂದರ್ ಪಿಚೈ ನೇಮಕ

    ಸ್ಯಾನ್‍ಫ್ರಾನ್ಸಿಸ್ಕೋ: ಭಾರತ ಮೂಲದ ಸುಂದರ್ ಪಿಚೈ ಈಗ ಜಾಗತಿಕ ಐಟಿ ದಿಗ್ಗಜ ಗೂಗಲ್ ಕಂಪನಿಯ ಮಾತೃ ಸಂಸ್ಥೆ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

    ಗೂಗಲ್ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಅಲ್ಫಾಬೆಟ್‍ನಿಂದ ಹೊರನಡೆದಿದ್ದು ಆ ಸಂಸ್ಥೆಯನ್ನು ಇನ್ನು ಮುಂದೆ ಸುಂದರ್ ಪಿಚೈ ನೋಡಿಕೊಳ್ಳಲಿದ್ದಾರೆ. ಸರ್ಜಿ ಬ್ರಿನ್ ಮತ್ತು ಲ್ಯಾರಿ ಪೇಜ್ ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಐದು ವರ್ಷಗಳ ಹಿಂದೆ 2005ರ ಅಕ್ಟೋಬರ್ 2 ರಂದು ಗೂಗಲ್, ಕ್ಯಾಲಿಕೋ, ಗೂಗಲ್ ಫೈಬರ್, ಡೀಪ್ ಮೈಂಡ್ ಸೇರಿದಂತೆ ಎಲ್ಲವನ್ನೂ ಒಗ್ಗೂಡಿಸಲು ಗೂಗಲ್ ಮಾತೃ ಸಂಸ್ಥೆ ಅಲ್ಫಾಬೆಟ್ ಸ್ಥಾಪಿಸಿ ಪೇಜ್ ಮತ್ತು ಬಿನ್ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು.

    ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಪತ್ರ ಬರೆದಿದ್ದು, ಇನ್ನು ಮುಂದೆ ಗೂಗಲ್ ಮತ್ತು ಅಲ್ಫಾಬೆಟ್ ಕಂಪನಿಗೆ ಇಬ್ಬರು ಸಿಇಒಗಳು ಇರುವುದಿಲ್ಲ. ಎರಡೂ ಕಂಪನಿಯನ್ನು ಒಬ್ಬರೇ ನೋಡಿಕೊಳ್ಳಲಿದ್ದಾರೆ. ಸುಂದರ್ ನಮ್ಮ ಜೊತೆ 15 ವರ್ಷಗಳಿಂದ ಇದ್ದು, ಈತ ತಂತ್ರಜ್ಞಾನವನ್ನು ಪ್ರೀತಿಸುವ ವ್ಯಕ್ತಿಯಾಗಿದ್ದಾನೆ. ಆತನ ಮೇಲೆ ನಮಗೆ ಪೂರ್ಣ ನಂಬಿಕೆಯಿದೆ. ಈ ಸಂಸ್ಥೆಯನ್ನು ಮುನ್ನಡೆಸಲು ಸುಂದರ್ ಅವರಿಗಿಂತ ಸಮರ್ಥ ವ್ಯಕ್ತಿ ಬೇರೆ ಇಲ್ಲ. ತಂತ್ರಜ್ಞಾನ, ಉದ್ಯಮ, ಭವಿಷ್ಯದ ಯೋಜನೆ ಕುರಿತು ಅವರಿಗೆ ಸ್ಪಷ್ಟವಾದ ಜ್ಞಾನವಿದೆ ಎಂದು ಹೇಳಿ ಸುಂದರ್ ಅವರನ್ನು ಹೊಗಳಿದ್ದಾರೆ.

     

    ಸುಂದರ್ ಪಿಚೈ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗುತ್ತಿದ್ದಂತೆ ಭಾರತೀಯ ಕಂಪನಿಗಳ ಮುಖ್ಯಸ್ಥರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸುತ್ತಿದ್ದಾರೆ.

    ಯಾರು ಸುಂದರ್ ಪಿಚೈ?
    ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್, ಆಂಡ್ರಾಯ್ಡ್ ಅಪ್ಲಿಕೇಶನ್ ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ, ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು. ಸುಂದರ್ ಗೂಗಲ್ ಸೇರಿದ್ದು 2004 ರ ಏಪ್ರಿಲ್ 1 ರಂದು. ಈ ದಿನವೇ ಗೂಗಲ್ ಜಿಮೇಲ್ ಸೇವೆಯನ್ನು ಆರಂಭಿಸಿತ್ತು.

  • ಬಿಕಾರಿ ಎಂದು ಹುಡುಕಿದ್ರೆ ಬರುತ್ತೆ ಇಮ್ರಾನ್ ಖಾನ್ ಫೋಟೋ – ಸುಂದರ್ ಪಿಚೈಗೆ ಪಾಕ್ ಸಮನ್ಸ್

    ಬಿಕಾರಿ ಎಂದು ಹುಡುಕಿದ್ರೆ ಬರುತ್ತೆ ಇಮ್ರಾನ್ ಖಾನ್ ಫೋಟೋ – ಸುಂದರ್ ಪಿಚೈಗೆ ಪಾಕ್ ಸಮನ್ಸ್

    ನವದೆಹಲಿ: ಗೂಗಲ್ ಇಮೇಜಸ್‍ನಲ್ಲಿ ಕಳ್ಳ, ಕ್ರಿಮಿನಲ್ ಎಂದು ಸರ್ಜ್ ಮಾಡಿದರೆ ಕುಖ್ಯಾತರ ಫೋಟೋಗಳು ಕಾಣಿಸುತ್ತವೆ. ಆದರೆ ಬಿಕಾರಿ (Bhikhari) ಅಂತ ಉರ್ದು ಭಾಷೆಯಲ್ಲಿ ಹುಡುಕಿದರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಫೋಟೋ ಬರುತ್ತಿವೆ.

    ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ವಿಧಾನಸಭೆ ಸಮನ್ಸ್ ಜಾರಿ ಮಾಡಿದೆ.

    ಗೂಗಲ್ ಸರ್ಚ್ ನಲ್ಲಿ ಈ ಹಿಂದೆ ಈಡಿಯಟ್ ಎಂದು ಹುಡುಕಿದಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರವರ ಫೋಟೋ ಕಾಣಸಿಗುತ್ತಿತ್ತು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಈ ಸಂಬಂಧ ಉತ್ತರವನ್ನು ಅಮೆರಿಕದ ಸೆನೆಟ್ ನಲ್ಲಿ ನೀಡಿದ್ದರು.

    2018ರ ಡಿಸೆಂಬರ್ ನಲ್ಲಿ ಗೂಗಲ್ ಡೇಟಾ ಸಂಗ್ರಹದ ಪಾರದರ್ಶಕತೆ, ಉತ್ತಾರದಾಯಿತ್ವ ವಿಚಾರದ ಬಗ್ಗೆ ಎದಿದ್ದ ಸಂದೇಹಗಳಿಗೆ ಉತ್ತರ ನೀಡಲು ಸುಂದರ್ ಪಿಚೈ ಆಗಮಿಸಿದ್ದರು. ಸುಮಾರು ಮೂರುವರೆ ಗಂಟೆಗಳ ಕಾಲ ಪ್ರಶ್ನೋತ್ತರ ವಿಚಾರಣೆ ನಡೆಯಿತು.

    ಈ ಸಮಯದಲ್ಲಿ ಸೆನೆಟರ್ ಜೂಹಿ ಲೊಫ್ಗ್ರೆನ್ ಅವರು, ಗೂಗಲ್‍ನಲ್ಲಿ ಈಡಿಯೆಟ್ ಎಂದು ಸರ್ಚ್ ಮಾಡಿದರೆ, ಟ್ರಂಪ್ ಅವರ ಫೋಟೋ ಹಾಗೂ ಅವರಿಗೆ ಸಂಬಂಧಿಸಿದ ಸುದ್ದಿಗಳು ಬರುತ್ತವೆ. ಈ ಪದವನ್ನು ಟೈಪ್ ಮಾಡಿದ ಕೂಡಲೇ ಟ್ರಂಪ್ ಫೋಟೋ ಬರಲು ಹೇಗೆ ಸಾಧ್ಯ? ಇದರಲ್ಲಿ ವ್ಯಕ್ತಿಗಳ ಕೈವಾಡವಿದೆಯೇ ಎಂದು ಪ್ರಶ್ನಿಸಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಸುಂದರ್ ಪಿಚೈ, ಈ ರೀತಿಯ ಫಲಿತಾಂಶ ಬರಲು ಯಾವುದೇ ವ್ಯಕ್ತಿಗಳ ಕೈವಾಡವಿಲ್ಲ. ಗೂಗಲ್ ಕೀವರ್ಡ್ ಗಳನ್ನು ಬಳಸಿಕೊಂಡು ನಿಖರ ಸರ್ಚ್ ರಿಸಲ್ಟ್ ಗಳನ್ನು ನೀಡುತ್ತದೆ. ಕೀವರ್ಡ್ ಗಳನ್ನು ಪಡೆದು ನಂತರ 200 ಸಿಗ್ನಲ್‍ಗಳ ಮೂಲಕ ಮ್ಯಾಚ್ ಮಾಡಲಾಗುತ್ತದೆ. ಅತಿ ಹೆಚ್ಚು ಸರ್ಚ್, ಪ್ರಸ್ತುತ ಅದರ ಅಗತ್ಯತೆ ಈ ಎಲ್ಲ ವಿಚಾರಗಳನ್ನು ನೋಡಿಕೊಂಡು ಫಲಿತಾಂಶ ಬರುವಂತೆ ಸಿದ್ಧಪಡಿಸಲಾಗಿದೆ. ಎಲ್ಲ ಸರ್ಚ್‍ಗಳನ್ನು ನಾವು ಪರಿಶೀಲಿಸುವುದಿಲ್ಲ ಎಂದು ತಿಳಿಸಿದ್ದರು.

    ಗೂಗಲ್‍ನಲ್ಲಿ ಈ ರೀತಿಯ ಫಲಿತಾಂಶ ಬರುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಫೇಕ್ ಎನ್ನುವ ಪದವನ್ನು ಗೂಗಲ್ ನಲ್ಲಿ ಟೈಪ್ ಮಾಡಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ತೋರಿಸುತ್ತಿತ್ತು. ಅಲ್ಲದೇ ಪಪ್ಪು ಎಂದು ಟೈಪ್ ಮಾಡಿದಾಗ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಫೋಟೋ ಕೂಡ ಬಂದಿತ್ತು.

  • ಗೂಗಲ್‍ನಲ್ಲಿ #MeToo ಗಾಳಿ- 48 ಸಿಬ್ಬಂದಿಗೆ ಗೇಟ್ ಪಾಸ್

    ಗೂಗಲ್‍ನಲ್ಲಿ #MeToo ಗಾಳಿ- 48 ಸಿಬ್ಬಂದಿಗೆ ಗೇಟ್ ಪಾಸ್

    ವಾಷಿಂಗ್ಟನ್: ಮೀಟೂ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಶ್ವದ ಐಟಿ ದಿಗ್ಗಜ ಕಂಪನಿ ಗೂಗಲ್ ಕಳೆದ 2 ವರ್ಷಗಳಲ್ಲಿ 48 ಸಿಬ್ಬಂದಿಗೆ ಗೇಟ್ ಪಾಸ್ ನೀಡಿದೆ.

    ಈ ಆರೋಪದಲ್ಲಿ 13 ಹಿರಿಯ ಅಧಿಕಾರಿಗಳು ಮತ್ತು 48 ಸಿಬ್ಬಂದಿ ಹೆಸರು ಕೇಳಿಬರುತ್ತಿದ್ದಂತೆ ಭಾರತೀಯ ಮೂಲದ ಗೂಗಲ್ ನ ಕಾರ್ಯನಿರ್ವಾಹಕ ಅಧಿಕಾರಿಯಾದ ಸುಂದರ್ ಪಿಚೈ ಅವರೆಲ್ಲರನ್ನು ಹೊರ ಹಾಕಿದ್ದಾರೆ.

    ಗೂಗಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಗೂಗಲ್ ನ ಆಂಡ್ರಾಯ್ಡ್ ಮುಖ್ಯಸ್ಥ ಆಂಡಿ ರೂಬಿನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಗೂಗಲ್ ಆಂಡಿ ರೂಬಿನ್ ಗೆ 9 ಕೋಟಿ ಡಾಲರ್(659 ಕೋಟಿ ರೂ.) ನಿರ್ಗಮನದ ಪ್ಯಾಕೇಜ್ ನೀಡಿ ಕೆಲಸದಿಂದ ತೆಗೆದು ಹಾಕಿತ್ತು. ಈ ಆರೋಪದಲ್ಲಿ ಆಂಡಿ ಮಾತ್ರವಲ್ಲದೇ 13 ಹಿರಿಯ ಅಧಿಕಾರಿಗಳ ಹೆಸರು ಕೇಳಿಬಂದಿದ್ದು, ಅವರನ್ನು ಸಹ ತಮ್ಮ ಕೆಲಸದಿಂದ ಹೊರಹಾಕಿದೆ ಎಂದು ಗೂಗಲ್ ವಕ್ತಾರರೊಬ್ಬರು ಮಾಧ್ಯಮವೊಂದಕ್ಕೆ ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಗೂಗಲ್ ತನ್ನ ಉಪಾಧ್ಯಕ್ಷರು ಮತ್ತು ಹಿರಿಯ ಉಪಾಧ್ಯಕ್ಷರು ಕಂಪನಿಯ ಇತರೆ ಸಿಬ್ಬಂದಿಯ ಜೊತೆಗೆ ಯಾವುದೇ ಪ್ರೇಮ ಸಂಬಂಧವನ್ನ ಹೊಂದುವುದನ್ನು ನಿಷೇಧಿಸಿದೆ. ಈ ಕುರಿತಾಗಿ ವಿಶೇಷ ನೀತಿಯನ್ನು ಜಾರಿಗೆ ತರಲಾಗಿದೆ.

    ಕಾರ್ಯಸ್ಥಳವನ್ನ ಸುರಕ್ಷಿತವಾಗಿ ನಿರ್ಮಾಣ ಮಾಡುವುದು ನಮ್ಮ ಗುರಿ, ಎರಡು ವರ್ಷದಲ್ಲಿ ನಮ್ಮ ಕಂಪನಿಯು ಅನೇಕ ಬದಲಾವಣೆಗಳನ್ನ ಮಾಡಿದೆ. ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಹ ಕೆಲಸಗಾರರಿಗೆ ಲೈಂಗಿಕ ಕಿರುಕುಳ ಅಥವಾ ದುರ್ವರ್ತನೆಗೆ ಸಂಬಂಧಿಸಿದ ಪ್ರತಿಯೊಂದು ದೂರನ್ನು ನಾವು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತೇವೆ ಎಂದು ಸುಂದರ್ ಪಿಚೈ ಇಮೇಲ್ ಮೂಲಕ ಉದ್ಯೋಗಿಗಳಿಗೆ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮೆರಿಕದ ಟಾಪ್ ಕಂಪೆನಿಗಳ ಸಿಇಒಗಳ ಜೊತೆ ಮೋದಿ ಚರ್ಚೆ: ಸಭೆ ಬಳಿಕ ಸಿಇಒಗಳು ಹೇಳಿದ್ದು ಹೀಗೆ

    ಅಮೆರಿಕದ ಟಾಪ್ ಕಂಪೆನಿಗಳ ಸಿಇಒಗಳ ಜೊತೆ ಮೋದಿ ಚರ್ಚೆ: ಸಭೆ ಬಳಿಕ ಸಿಇಒಗಳು ಹೇಳಿದ್ದು ಹೀಗೆ

    ವಾಷಿಂಗ್ಟನ್: ಉದ್ಯಮ ಸ್ನೇಹಿ ರಾಷ್ಟ್ರವಾಗಿ ಭಾರತ ಬದಲಾಗುತ್ತಿದ್ದು, ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ)ಯಿಂದಾಗಿ ಮತ್ತಷ್ಟು ಉದ್ಯಮ ಸ್ನೇಹಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಟಾಪ್ ಕಂಪೆನಿಗಳ ಸಿಇಒಗಳ ಜೊತೆ ಸಂವಹನ ನಡೆಸಿದರು. ಜಿಎಸ್‍ಟಿ ಗೇಮ್ ಚೇಂಜರ್ ಆಗಿದ್ದು ದೇಶದಲ್ಲಿ ಮತ್ತಷ್ಟು ಬಂಡವಾಳವನ್ನು ಹೂಡುವಂತೆ ಕೇಳಿಕೊಂಡಿದ್ದಾರೆ.

    ಆಪಲ್ ನ ಟಿಮ್ ಕುಕ್, ಗೂಗಲ್ ನ ಸುಂದರ್ ಪಿಚ್ಚೈ, ಅಮೇಜಾನ್ ಸ್ಥಾಪಕ ಜೆಫ್ ಬಿಜೋಸ್, ಅಡೋಬ್ ಶಂತನು ನಾರಾಯಣ ಸೇರಿದಂತೆ 21 ಕಂಪೆನಿಗಳ ಸಿಇಒಗಳ ಜೊತೆ ಮಾತನಾಡಿದ್ದಾರೆ.

    ಗೂಗಲ್ ಸಿಇಒ ಸುಂದರ್ ಪಿಚೈ ಪ್ರತಿಕ್ರಿಯಿಸಿ, ಬಹಳ ಚೆನ್ನಾಗಿ ಚರ್ಚೆ ನಡೆಯಿತು. ಈ ರೀತಿಯ ಚರ್ಚೆಗಳು ಹಲವು ದೇಶಗಳ ನಡುವೆ ನಡೆಯಬೇಕು. ಪ್ರಧಾನಿ ಮೋದಿ ಅವರ ಮಾತುಗಳನ್ನು ಕೇಳಿ ನಾವು ಸೇರಿದಂತೆ ಹಲವು ಮಂದಿ ಭಾರತದಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.

     

  • ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಕ್ಯಾಲಿಫೋರ್ನಿಯಾ: ಗೂಗಲ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ 44 ವರ್ಷದ ಸುಂದರ್ ಪಿಚೈ ಅವರಿಗೆ 200 ದಶಲಕ್ಷ ಡಾಲರ್(ಅಂದಾಜು 1,285 ಕೋಟಿ ರೂ.) ಸಂಭಾವನೆ ನೀಡಿದೆ.

    2015ರ ಸಂಬಳಕ್ಕೆ ಹೋಲಿಸಿದರೆ ಸಂಬಳ ಡಬಲ್ ಆಗಿದೆ. 2015ರಲ್ಲಿ ವಾರ್ಷಿಕ ಪರಿಹಾರ ಮೊತ್ತ ಸೇರಿದಂತೆ 6,50,000 ಡಾಲರ್ ಸಂಬಳ ಸಿಕ್ಕಿತ್ತು. 2015ರಲ್ಲಿ ಷೇರು ರೂಪದಲ್ಲಿ 99.8 ದಶಲಕ್ಷ ಡಾಲರ್ ಪಡೆದಿದ್ದ ಸುಂದರ್ ಪಿಚೈ ಅವರು 2016ರಲ್ಲಿ 198.7 ದಶಲಕ್ಷ ಡಾಲರ್ ಹಣವನ್ನು ಪಡೆದಿದ್ದಾರೆ.

    ಕಂಪೆನಿಯ ಪರವಾಗಿ ಉತ್ತಮ ಉತ್ಪನ್ನವನ್ನು ಹೊರ ತಂದಿದ್ದಕ್ಕೆ ಗೂಗಲ್ ಸಂಬಳವನ್ನು ಏರಿಕೆ ಮಾಡಿದೆ ಎಂದು ಸಿಎನ್‍ಎನ್ ವರದಿ ಮಾಡಿದೆ.

    2016ರಲ್ಲಿ ಗೂಗಲ್ ಹೊಸ ಸ್ಮಾರ್ಟ್ ಫೋನ್, ವರ್ಚುವಲ್ ರಿಯಾಲಿಟಿ ಹೆಡ್ ಸೆಟ್, ರೂಟರ್, ವಾಯ್ಸ್ ಆಧಾರಿತ ಸ್ಪೀಕರ್ ಬಿಡುಗಡೆ ಮಾಡಿತ್ತು. ಈ ಎಲ್ಲ ಕೆಲಸಕ್ಕೆ ಗೂಗಲ್ ಪಿಚೈ ಸಂಬಳವನ್ನು ಭಾರೀ ಏರಿಕೆ ಮಾಡಿದೆ.

    ಯಾರು ಸುಂದರ್ ಪಿಚೈ:
    ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಮೂಲತಃ ಚೆನ್ನೈರವರಾದ ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್,ಆಂಡ್ರಾಯ್ಡ್ ಅಪ್ಲಿಕೇಶನ್, ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ,ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು.

  • ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

    ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

    ಕ್ಯಾಲಿಫೋರ್ನಿಯಾ: 7 ವರ್ಷದ ಬಾಲಕಿಯೊಬ್ಬಳು ಗೂಗಲ್ ಸಿಇಒ ಸುಂದರ್ ಪಿಚೈಗೆ ಕೆಲಸ ಬೇಕೆಂದು ಬರೆದ ಪತ್ರ ಈಗ ವೈರಲ್ ಆಗಿದೆ.

    ಇಂಗ್ಲೆಂಡಿನ ಕೋಲೆ ಬ್ರಿಡ್ಜ್ ವಾಟರ್ ಎಂಬಾಕೆ ನನಗೆ ಗೂಗಲ್‍ನಲ್ಲಿ ಉದ್ಯೋಗ ಬೇಕೆಂದು ನೇರವಾಗಿ ಸುಂದರ್ ಪಿಚೈಗೆ ಪತ್ರ ಬರೆದಿದ್ದಾಳೆ. ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಪಿಚೈ, ಶ್ರಮವಹಿಸಿ ಓದಿ ನಿನ್ನ ಕನಸನ್ನ ನನಸು ಮಾಡು. ಶಾಲಾ ಶಿಕ್ಷಣದ ಬಳಿಕ ಗೂಗಲ್‍ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸು ಎಂದು ಮರು ಪತ್ರ ಬರೆದಿದ್ದಾರೆ.

    ಕೆಲ ದಿನಗಳ ಹಿಂದೆ ಬಾಲಕಿ ತನ್ನ ತಂದೆಯ ಜೊತೆ ಉದ್ಯೋಗಕ್ಕೆ ಯೋಗ್ಯವಾದ ಸ್ಥಳ ಯಾವುದು ಎಂದು ಪ್ರಶ್ನೆ ಕೇಳಿದ್ದಾಳೆ. ಇದಕ್ಕೆ ತಂದೆ ಗೂಗಲ್ ಅತ್ಯುತ್ತಮ ಸ್ಥಳ ಎಂದು ಉತ್ತರಿಸಿದ್ದಾರೆ. ಗೂಗಲ್ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳಿದ ಈಕೆ ಕೊನೆಗೆ ನಾನು ಗೂಗಲ್‍ನಲ್ಲಿ ಉದ್ಯೋಗ ಮಾಡಬೇಕು ಎಂದು ಕೇಳಿದ್ದಾಳೆ.

    ಈಕೆಯ ಪ್ರಶ್ನೆಗೆ ತಂದೆ ನನಗೆ ಉದ್ಯೋಗ ಬೇಕೆಂದು ಗೂಗಲ್‍ಗೆ ಒಂದು ಪತ್ರ ಬರೆ ಎಂದು ಸೂಚಿಸಿದ್ದಾರೆ. ಅದರಂತೆ ಆಕೆ ಕಂಪ್ಯೂಟರ್, ರೊಬೊಟ್, ಟ್ಯಾಬ್ಲೆಟ್ ಅಂದರೆ ನನಗೆ ಇಷ್ಟ. ಹೀಗಾಗಿ ನಿಮ್ಮ ಕಂಪೆನಿಯಲ್ಲಿ ಉದ್ಯೋಗ ಬೇಕೆಂದು ಪಿಚೈಗೆ ಪತ್ರ ಬರೆದಿದ್ದಾಳೆ.

    ಈ ಪತ್ರಕ್ಕೆ ಸುಂದರ್ ಪಿಚೈ,”ಪತ್ರ ಬರೆದಿದ್ದಕ್ಕೆ ಧನ್ಯವಾದಗಳು, ರೊಬೊಟ್ ಮತ್ತು ಕಂಪ್ಯೂಟರ್ ಅಂದರೆ ಇಷ್ಟ ಎಂದು ನೀನು ತಿಳಿಸಿರುವುದನ್ನು ಓದಿ ಸಂತೋಷವಾಯಿತು. ಮುಂದೆ ಚೆನ್ನಾಗಿ ಓದಿ ಕನಸನ್ನು ನನಸು ಮಾಡು. ಶಾಲಾ ಶಿಕ್ಷಣ ಮುಗಿದ ಬಳಿಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸು. ನಿನಗೆ ಮತ್ತು ನಿನ್ನ ಕುಟುಂಬಕ್ಕೆ ಒಳ್ಳೆದಾಗಲಿ” ಎಂದು ಮರು ಪತ್ರ ಬರೆದಿದ್ದಾರೆ.