Tag: ಸುಂಕದಕಟ್ಟೆ

  • ನಟಿ ನಿರೂಷಾ ಅವರ ನಾಯಿಯನ್ನು ವಾಪಸ್ಸು ಬಿಟ್ಟು ಹೋದ ಕಳ್ಳರು

    ನಟಿ ನಿರೂಷಾ ಅವರ ನಾಯಿಯನ್ನು ವಾಪಸ್ಸು ಬಿಟ್ಟು ಹೋದ ಕಳ್ಳರು

    ನ್ನಡದ ನಟಿ ನಿರೂಷಾ ಅವರ ಮುದ್ದಿನ ನಾಯಿಯನ್ನು ಎರಡು ದಿನಗಳ ಹಿಂದೆ ಕಳ್ಳರು ಕದ್ದೊಯ್ದಿದ್ದರು. ತಮ್ಮ ನಾಯಿ ಕಳ್ಳತನವಾಗಿದೆ ಎಂದು ತಿಳಿಯುತ್ತಿದ್ದಂತೆಯೇ ನಿರೂಷಾ ಅಕ್ಷರಶಃ ಕಣ್ಣೀರು ಹಾಕಿದ್ದರು. ತಮ್ಮ ನಾಯಿ ಕಳ್ಳತನವಾಗಿದೆ, ಕಳ್ಳರನ್ನು ಹುಡುಕಿ ಕೊಡಿ ಎಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು.

    ನೆಚ್ಚಿನ ನಾಯಿಗಾಗಿ ನಿರೂಷಾ ಹಾಕಿದ ಕಣ್ಣೀರು, ಎಲ್ಲರ ಮನಸ್ಸು ಕಲುಕಿತ್ತು. ಯಾರಾದರೂ, ಅವರ ನಾಯಿಯನ್ನು ಕಂಡರೆ ಅವರಿಗೆ ಮಾಹಿತಿ ಕೊಡಿ ಎಂದು ಅದೆಷ್ಟೋ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಆ ವಿಡಿಯೋವನ್ನು ಹಂಚಿಕೊಂಡಿದ್ದರು. ಕೊನೆಗೂ ಅವರ ಕಣ್ಣೀರು ಫಲಕೊಟ್ಟಿದೆ. ಇದೀಗ ತಮ್ಮ ನಾಯಿ ಸಿಕ್ಕಿರುವುದಾಗಿ ನಿರೂಷಾ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದು ಹೇಗೆ ಸಿಕ್ಕಿತು ಎನ್ನುವ ಕುರಿತು ಅವರು ಹೇಳಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ

    ನಿರೂಷಾ ನಾಯಿ ಸುಂಕದಕಟ್ಟೆ ಟೆಲಿಕಾಂ ಲೇಔಟ್ ನಿಂದ ಕಳ್ಳತನವಾಗಿತ್ತು. ಕಳ್ಳರು ಅವರ ಮನೆಯ ಸಮೀಪದಲ್ಲೇ ಇರುವ ಗಣೇಶ್ ದೇವಸ್ಥಾನ ಬಳಿ ನಾಯಿಯನ್ನು ತಂದುಬಿಟ್ಟು, ಅವರ ತಾಯಿಗೆ ಕಾಲ್ ಮಾಡಿ ಹೇಳಿದ್ದಾರಂತೆ. ಆ ಅಪರಿಚಿತ ಕರೆಯಿಂದ ಬಂದ ಸಿಹಿ ಸುದ್ದಿಯು ನಿರೂಷಾಗೂ ತಲುಪಿ, ನೆಮ್ಮದಿಯ ನಿಟ್ಟುಸಿರು ಇಟ್ಟಿದ್ದಾರೆ. ತಮ್ಮ ನಾಯಿ ಕೊನೆಗೂ ಸಿಕ್ಕಿರುವ ಖುಷಿಯನ್ನು ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೇಗವಾಗಿ ಬಂದು ಆಟೋ, ಕಾರುಗಳಿಗೆ ಕ್ರೇನ್ ಡಿಕ್ಕಿ- ಪಾದಚಾರಿ ಸಾವು

    ವೇಗವಾಗಿ ಬಂದು ಆಟೋ, ಕಾರುಗಳಿಗೆ ಕ್ರೇನ್ ಡಿಕ್ಕಿ- ಪಾದಚಾರಿ ಸಾವು

    – ಭಯಾನಕ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

    ಬೆಂಗಳೂರು: ವೇಗವಾಗಿ ಬಂದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಆಟೋ, ಓಮಿನಿ ಹಾಗೂ ಕಾರಿಗೆ ಡಿಕ್ಕಿಯಾಗಿ ಓರ್ವ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಸುಂಕದಕಟ್ಟೆಯಲ್ಲಿ ನಡೆದಿದೆ.

    ಮುನಿಯಪ್ಪ ಸಾವನ್ನಪ್ಪಿದ್ದ ವ್ಯಕ್ತಿ. ಬ್ರೇಕ್ ಫೇಲ್ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಭಯಾನಕ ಅಪಘಾತದ ದೃಶ್ಯ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬ್ರೇಕ್ ಫೇಲ್  ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕ್ರೇನ್ ರಸ್ತೆ ಪಕ್ಕದಲ್ಲೇ ನಿಂತಿದ್ದ ಓಮಿನಿ, ಕಾರಿಗೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಭಾರೀ ವೇಗವಾಗಿದ್ದರಿಂದ ಮುಂದಿನ ಅಡ್ಡ ರಸ್ತೆಯಲ್ಲಿ ಬರುತ್ತಿದ್ದ ಆಟೋಗೂ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಎಲ್ಲ ಮೂರೂ ವಾಹನಗಳು ನಜ್ಜುಗುಜ್ಜಾಗಿವೆ.

    ಆಟೋ ಮತ್ತು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.