ವಾಷಿಂಗ್ಟನ್/ಒಟ್ಟಾವ: ಕೆನಾಡದ ಆಮದುಗಳ ಮೇಲೆ 10% ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಣೆ ಮಾಡಿದ್ದಾರೆ.
MLB ವಿಶ್ವ ಸರಣಿಯ ಮೊದಲ ಪಂದ್ಯದಲ್ಲಿ ಒಂಟಾರಿಯೋ (Ontario) ಸರ್ಕಾರ 75 ದಶಲಕ್ಷ ಡಾಲರ್ (USD) ವ್ಯಯಿಸಿ ಟಿವಿ ಜಾಹೀರಾತು ಪ್ರಕಟಿಸಿತ್ತು. ಟ್ರಂಪ್ ಅವರು ಒಮ್ಮೆ ದೃಢನಿಶ್ಚಯ ಮಾಡಿದ್ರೆ ಅದನ್ನು ಮಾಡೇ ಮಾಡುತ್ತಾರೆ, ತನ್ನ ಮಾತನ್ನ ತಾನೇ ಕೇಳಲ್ಲ ಅಂತ ಜಾಹೀರಾತು ಪ್ರಸಾರ ಮಾಡಿತ್ತು. ಇದರಿಂದ ಸಿಟ್ಟಿಗೆದ್ದ ಟ್ರಂಪ್ ಕೆನಡಾ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಕೆನಾಡದ ಮೇಲಿನ ಒಟ್ಟು ಸುಂಕ 45% ಗೆ ಏರಿಕೆಯಾಗಿದೆ. ಕೆನಡಾ (Canada) ಮೇಲಿನ ಸುಂಕ ಏರಿಕೆಯು ವ್ಯಾಪಾರ ಉದ್ವಿಗ್ನತೆಗೆ ಕಾರಣವಾಗಲಿದೆ. ಏಕೆಂದರೆ ಕೆನಡಾ ಅಮೆರಿಕದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ.
ಕೆನಡಾ ಸರ್ಕಾರ ನೀಡಿದ ಜಾಹೀರಾತಿನಲ್ಲಿ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಐಕಾನ್ ರೊನಾಲ್ಡ್ ರೇಗನ್ ಅವರ ವೀಡಿಯೊ ಕ್ಲಿಪ್ ಇತ್ತು. ಅದರಲ್ಲಿ ಸುಂಕದ ಕ್ರಮವು ವ್ಯಾಪಾರ ಯುದ್ಧ ಮತ್ತು ಆರ್ಥಿಕ ಬಿಕ್ಕಟ್ಟುಗಳಿಗೆ ಕಾರಣವಾಗುತ್ತವೆ ಎಂದು ಹೇಳಿದ್ದರು. ಈ ಜಾಹೀರಾತನ್ನು ಟ್ರಂಪ್ ಟೀಕಿಸಿದ್ದರು. ಇದು ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತು ಎಂದು ಅಸಮಾಧಾನ ಹೊರಹಾಕಿದ್ದರು. ಈ ಬೆನ್ನಲ್ಲೇ ಸುಂಕ ಹೆಚ್ಚಿಸುವ ಕ್ರಮ ಕೈಗೊಂಡಿದ್ದಾರೆ ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಔಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನೂ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಶುಕ್ರವಾರ ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸಲು ಸಿದ್ಧ ಎಂದು ಹೇಳಿದ್ದರು. ಆದ್ರೆ ಶ್ವೇತಭವನ, ಯುಎಸ್ ವಾಣಿಜ್ಯ ಇಲಾಖೆ ಅಥವಾ ಕಾರ್ನಿ ಕಚೇರಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಕೆನಡಾಕ್ಕೆ ಸುಂಕದ ಬರೆ
ಕೆನಡಾ ಸರಕುಗಳ ಮೇಲೆ ಅಮೆರಿಕ ಕಳೆದ ಮಾರ್ಚ್‌ನಲ್ಲಿ 25% ಇದ್ದ ಸುಂಕದ ಪ್ರಮಾಣವನ್ನ 30%ಗೆ ಏರಿಕೆ ಮಾಡಿತ್ತು. ಇದೀಗ 10% ಹೆಚ್ಚಿಗೆ ಮಾಡಿದ್ದು, 45%ಗೆ ತಲುಪಿದೆ.
ವಾಷಿಂಗ್ಟನ್: ನಾನು ಯುದ್ಧ ನಿಲ್ಲಿಸೋದ್ರಲ್ಲಿ ನಾನು ನಿಪುಣ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ (India Pakistan Clashes) ಸೇರಿದಂತೆ ವಿಶ್ವದ ಹಲವು ಸಂಘರ್ಷಗಳನ್ನು ಪರಿಹರಿಸುವಲ್ಲಿ ತಾನು ಪ್ರಮುಖ ಪಾತ್ರ ವಹಿಸಿದ್ದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೊಮ್ಮೆ ತಮಗೆ ತಾವೇ ಬೆನ್ನುತಟ್ಟಿಕೊಂಡಿದ್ದಾರೆ. ಜೊತೆಗೆ ಇದನ್ನೆಲ್ಲ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.
#WATCH | “…I settled a few of the wars just based on tariffs. For example, between India and Pakistan, I said, if you guys want to fight a war and you have nuclear weapons. I am going to put big tariffs on you both, like 100 per cent, 150 per cent, and 200 per cent…I said I… https://t.co/UejAFkcB0Hpic.twitter.com/B5Zb7AjYTU
ಭಾನುವಾರ ರಾತ್ರಿ ಗಾಜಾಕ್ಕೆ (Gaza Strip) ಮಧ್ಯಪ್ರಾಚ್ಯಕ್ಕೆ ತೆರಳುವ ಮುನ್ನ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಭಾರತ-ಪಾಕ್ ಸಂಘರ್ಷ ಸೇರಿದಂತೆ ಅನೇಕ ಯುದ್ಧಗಳನ್ನು ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಇಸ್ರೇಲ್-ಗಾಜಾ ಕದನ ವಿರಾಮ ನಾನು ಪರಿಹರಿಸಿದ 8 ಯುದ್ಧ. ಈಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಸಂಘರ್ಷ ನಡೆಯುತ್ತಿದೆ. ನಾನು ಹಿಂದಿರುಗುವಾಗ ಅದನ್ನೂ ಪರಿಹರಿಸುತ್ತೇನೆ. ನಾನು ಯುದ್ಧಗಳನ್ನು ಪರಿಹರಿಸುವಲ್ಲಿ ನಿಪುಣ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ-ಅಫ್ಘಾನಿಸ್ತಾನ ಜಂಟಿ ಹೇಳಿಕೆ ಸರಿಯಲ್ಲ; ಅಫ್ಘಾನ್ ರಾಯಭಾರಿಗೆ ಪಾಕಿಸ್ತಾನ ಸಮನ್ಸ್
🇦🇫🇵🇰 TRUMP: 8 WARS FIXED. NEXT UP? PAKISTAN-AFGHANISTAN.
“This will be my 8th war that I have solved.
And I hear there is a war now going on between Pakistan and Afghanistan.
ಇನ್ನೂ ಭಾರತ-ಪಾಕ್ ಸಂಘರ್ಷ ಉಲ್ಲೇಖಿಸಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಕೆಲ ಯುದ್ಧಗಳು 31, 32, 37 ವರ್ಷಗಳ ಕಾಲ ನಡೆದವು. ಲಕ್ಷಾಂತರ ಜನರು ಸಾವನ್ನಪ್ಪಿದ್ರು. ಆದ್ರೆ ನಾನು ಒಂದು ದಿನದ ಬಳಗಾಗಿ ಯುದ್ಧ ಪರಿಹರಿಸಿದೆ. ವ್ಯಾಪಾರ ಮತ್ತು ಸುಂಕದಂತಹ ಆರ್ಥಿಕ ಕ್ರಮಗಳ ಮೂಲಕ ಸಂಘರ್ಷ ಬಗೆಹರಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಆತ್ಮಾಹುತಿ ದಾಳಿ – 7 ಪೊಲೀಸರು, 6 ಉಗ್ರರು ಸಾವು
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತಡೆಯಲು, ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ ಅಂತ ನಾನು ಅವರಿಗೆ ಹೇಳಿದ್ದೆ. ನೀವಿಬ್ಬರೂ ಯುದ್ಧಕ್ಕೆ ಹೋದ್ರೆ ನಿಮ್ಮ ಮೇಲೆ 100%, 150% ಮತ್ತು 200% ಸುಂಕ ವಿಧಿಸುತ್ತೇನೆ ಅಂತ ಎಚ್ಚರಿಕೆ ಕೊಟ್ಟಿದ್ದೆ. ಸುಂಕದ ಎಚ್ಚರಿಕೆ ನೀಡಿದ 24 ಗಂಟೆಗಳಲ್ಲಿ ಯುದ್ಧ ನಿಲ್ಲಿಸಿದೆ. ಇಲ್ಲದಿದ್ದರೆ ಈ ಯುದ್ಧ ನಿಲ್ಲುತ್ತಿರಲಿಲ್ಲ ಎಂದು ಬೀಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ 58 ಸೈನಿಕರ ಹತ್ಯೆ, 30 ಮಂದಿಗೆ ಗಾಯ: ಅಫ್ಘಾನಿಸ್ತಾನ
ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲುವುದು ತನ್ನ ಗುರಿಯಲ್ಲ. ಆದ್ರೆ ಯುದ್ಧಗಳನ್ನು ನಿಲ್ಲಿಸುವುದು ನನಗೆ ಗೌರವ. 2025 ರಲ್ಲಿ ಇನ್ನೂ ಪ್ರಮುಖ ಕೆಲಸಗಳನ್ನು ಮಾಡಲಾಗುತ್ತದೆ. ಜೀವಗಳನ್ನು ಉಳಿಸುವ ಉದ್ದೇಶದಿಂದ ನಾನು ಈ ಕೆಲಸಗಳನ್ನು ಮಾಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
– ಅಡುಗೆಮನೆ, ಸ್ನಾನಗೃಹ ಪೀಠೋಪಕರಣ, ಹೆವಿ ಟ್ರಕ್‌ಗಳ ಮೇಲೂ ಸುಂಕ
ವಾಷಿಂಗ್ಟನ್: 2ನೇ ಬಾರಿಗೆ ಅಮೆರಿಕ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಸುಂಕ ಸುಂಕ ಅಂತಲೇ ಕನವರಿಸುತ್ತಿರುವ ಡೊನಾಲ್ಡ್ ಟ್ರಂಪ್ (Donald Trump) ಈಗ ಮತ್ತೊಂದು ವರಸೆ ತೆಗೆದಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಔಷಧಗಳ (Pharmaceutical Product) ಆಮದಿನ ಮೇಲೆ ಶೇ.100ರಷ್ಟು ಸುಂಕ ಘೋಷಿಸಿದ್ದಾರೆ. ಇದು ಅಕ್ಟೋಬರ್ 1ರಿಂದ ಜಾರಿಯಾಗಲಿದೆ.
ಅಲ್ಲದೇ ಅಡುಗೆ ಮನೆಗೆ ಬಳಸುವ ಪಿಠೋಪಕರಣಗಳ ಮೇಲೆ 50% ಹಾಗೂ ಸ್ನಾನಗೃಹ ಪಿಠೋಪಕರಣ ಆಮದುಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್‌ಗಳ (ಹೆವಿ ಟ್ರಕ್ – heavy trucks) ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇದು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಜೊತೆಗೆ ಹಣದುಬ್ಬರಕ್ಕೂ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್?
“Starting October 1st, 2025, we will be imposing a 100% Tariff on any branded or patented Pharmaceutical Product, unless a Company IS BUILDING their Pharmaceutical Manufacturing Plant in America…” – President Donald J. Trump pic.twitter.com/z5EXQhw1xK
ಸುಂಕ ನಿಯಮ ಏನು?
ಹೌದು. ಅಕ್ಟೋಬರ್ 1ರಿಂದ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಶೇ. 100ರಷ್ಟು ಸುಂಕ ವಿಧಿಸುತ್ತೇವೆ. ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿದ್ರೆ ಮಾತ್ರ ಈ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ನಿರ್ಮಾಣ ಹಂತದಲ್ಲಿರುವ ಕಂಪನಿಗಳಿಗೂ ಇದರಿಂದ ವಿನಾಯ್ತಿ ಸಿಗಲಿದೆ ಎಂದು ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾನು ಭಾರತದ ದೊಡ್ಡ ಅಭಿಮಾನಿ – ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಮತ್ತೆ ಅಮೆರಿಕ ಒತ್ತಾಯ
ಟ್ರಂಪ್ ಪೋಸ್ಟ್‌ನಲ್ಲಿ ಏನಿದೆ?
ಔಷಧಗಳ ಆಮದಿನ ಮೇಲೆ 100%, ಅಡುಗೆಮನೆ ಪಿಠೋಪಕರಣಗಳ ಮೇಲೆ 50%, ಸ್ನಾನಗೃಹ ಪಿಠೋಪಕರಣಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್‌ಗಳ (ಹೆವಿ ಟ್ರಕ್) ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ವಿದೇಶಿ ಉತ್ಪನ್ನಗಳು ಅಮೆರಿಕಕ್ಕೆ ಪ್ರವಾಹ ರೀತಿಯಲ್ಲಿ ಹರಿದುಬರುತ್ತಿದೆ, ಇದು ತುಂಬಾ ಅನ್ಯಾಯ. ಅಲ್ಲದೇ ರಾಷ್ಟ್ರೀಯ ಭದ್ರತೆಯ ಕಾರಣದಿಂದಲೂ ಸುಂಕ ವಿಧಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಪೀಟರ್‌ಬಿಲ್ಟ್, ಕೆನ್‌ವರ್ತ್, ಫ್ರೈಟ್‌ಲೈನರ್, ಮ್ಯಾಕ್ ಸೇರಿದಂತೆ ನಮ್ಮ ಇತರ ಟ್ರಕ್ ತಯಾರಕರನ್ನು ರಕ್ಷಿಸಲು ಹಾಗೂ ಅವರನ್ನು ಆರ್ಥಿಕ ಬಲಶಾಲಿಗಳನ್ನಾಗಿಸಲು ಹೆವಿ ಟ್ರಕ್ ಮೇಲೆ 25% ಸುಂಕ ವಿಧಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಹಾಂಗ್‌ಕಾಂಗ್‌ಗೆ ಅಪ್ಪಳಿಸಿದ ರಗಾಸಾ ಚಂಡಮಾರುತ – 20ಕ್ಕೂ ಹೆಚ್ಚು ಜನರ ಸಾವು
– ಚಿಪ್ ಆಗಲೀ ಶಿಪ್ ಆಗಲಿ ಭಾರತದಲ್ಲೇ ನಿರ್ಮಾಣವಾಗಲಿದೆ
– ಭಾರತ ವಿಶ್ವಬಂಧು ಭಾವನೆಯಲ್ಲಿ ಮುಂದೆ ಸಾಗುತ್ತಿದೆ ಎಂದ ಪ್ರಧಾನಿ
ಗಾಂಧಿನಗರ: ಭಾರತ ವಿಶ್ವಬಂಧು ಭಾವನೆಯಲ್ಲಿ ಮುಂದೆ ಸಾಗುತ್ತಿದೆ. ನಮಗೆ ವಿಶ್ವದಲ್ಲಿ ಯಾರೂ ಶತ್ರುಗಳಿಲ್ಲ (No Enemy). ಆದ್ರೆ ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಎಚ್ಚರಿಸಿದರು.
#WATCH | Gujarat | Addressing a public rally in Bhavnagar, PM Modi says, “Duniya mein koi hamara bada dushman nahi hai. Agar hamara koi dushman hai toh woh hai dusre deshon par hamari nirbharta…”
“Today, India is moving forward with the spirit of ‘Vishwabandhu’. We have no… pic.twitter.com/f6zNRbN9Rc
ಗುಜರಾತ್‌ನ (Gujarat) ಭಾವನನಗರದಲ್ಲಿ ನಡೆದ ‘ಸಮುದ್ರ ಸೆ ಸಮೃದ್ಧಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು 34,200 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು. ಬಳಿಕ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಟ್ರಂಪ್ 50% ಸುಂಕ ನೀತಿಗೆ ಗುದ್ದು ನೀಡಿದರು. ಆತ್ಮನಿರ್ಭರ ಭಾರತದ ಮಹತ್ವವನ್ನು ಪ್ರತಿಪಾದಿಸುತ್ತಾ, ಭಾರತದಲ್ಲೇ ತಯಾರಾದ ಉತ್ಪನ್ನ (Made In India) ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ದೇಶದ ಜನತೆಗೆ ಕರೆ ನೀಡಿದರು.
ಇಂದು ಭಾರತ ವಿಶ್ವಬಂಧು ಭಾವನೆಯಿಂದ ಮುಂದುವರಿಯುತ್ತಿದೆ. ಹಾಗಾಗಿ ಜಗತ್ತಿನಲ್ಲಿ ನಮಗೆ ಯಾವುದೇ ದೊಡ್ಡ ಶತ್ರು ಇಲ್ಲ. ಆದ್ರೆ ಇತರರ ಮೇಲಿನ ಅವಲಂಬನೆಯೇ ನಮಗೆ ದೊಡ್ಡ ಶತ್ರು. ಆದ್ದರಿಂದ ನಾವು ಒಟ್ಟಾಗಿ ಈ ಅವಲಂಬನೆಯ ಶತ್ರುವನ್ನು ಸೋಲಿಸಬೇಕು ಎಂದು ಕರೆ ನೀಡಿದರು.
ಮುಂದುವರಿದು, ವಿದೇಶಿ ಅವಲಂಬನೆ ಹೆಚ್ಚಾದಷ್ಟು ದೇಶದ ವೈಫಲ್ಯ ಹೆಚ್ಚಾಗುತ್ತದೆ. ಹಾಗಾಗಿ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ನಾವು ದೇಶದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಆತ್ಮನಿರ್ಭರವಾಗಬೇಕು. ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಭಾರತದ ಅಭಿವೃದ್ಧಿಯನ್ನು ಇತರ ದೇಶಗಳ ಮೇಲೆ ಬಿಡಬಾರದು. ಭವಿಷ್ಯದ ಪೀಳಿಗೆಯನ್ನು ಪಣಕ್ಕಿಡಬಾರದು. 140 ಕೋಟಿ ದೇಶವಾಸಿಗಳ ಭವಿಷ್ಯವನ್ನ ನಾವು ಇತರರಿಗೆ ಬಿಡಲು ಸಾಧ್ಯವಿಲ್ಲವೆಂದೂ ಪ್ರಧಾನಿ ಹೇಳಿದರು.
ಒಂದು ರಾಷ್ಟ್ರ – ಒಂದು ದಾಖಲೆ
ಇದೇ ವೇಳೆ ಭಾರತೀಯ ಪೋರ್ಟ್ (ಬಂದರು)ಗಳ ದಾಖಲಾತಿಗೆ ಸಂಬಂಧಿಸಿದ ಸುಧಾರಣೆಗಳನ್ನು ಪರಿಚಯಿಸುವುದಾಗಿ ಹೇಳಿದ ಅವರು, ಶೀಘ್ರದಲ್ಲೇ ಭಾರತೀಯ ಬಂಧರುಗಳಿಗೆ ʻಒಂದು ರಾಷ್ಟ್ರ – ಒಂದು ದಾಖಲಾತಿʼ ಎಂಬ ಹೊಸ ಸುಧಾರಣೆ ತರಲಿದ್ದೇವೆ. ಇದು ವ್ಯಾಪಾರವನ್ನು ಸುಲಭಗೊಳಿಸುತ್ತದೆ ಎಂದು ತಿಳಿಸಿದರು.
ಚಿಪ್ ಆಗಲೀ ಶಿಪ್ ಆಗಲಿ ಭಾರತದಲ್ಲೇ ನಿರ್ಮಾಣ
ಅಲ್ಲದೇ ಭಾರತದಲ್ಲಿ ತಯಾರಿಸಬೇಕಾದ ವೈವಿಧ್ಯಮಯ ಉತ್ಪನ್ನಗಳ ಕುರಿತು ಮಾತನಾಡಿ, ಚಿಪ್ ಆಗಲಿ ಶಿಪ್ ಆಗಲಿ ನಾವು ಎಲ್ಲವನ್ನೂ ಭಾರತದಲ್ಲೇ ತಯಾರಿಸಬೇಕು. ಅದಕ್ಕಾಗಿ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಾವು ದೇಶದ ಸಂಪತನ್ನು ಕಾಪಾಡಿಕೊಳ್ಳಲು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಭಾರತದಲ್ಲಿ ಉಕ್ಕಿನಿಂದ ತಯಾರಿಸಿದ ಐಎನ್‌ಎಸ್ ವಿಕ್ರಾಂತ್ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾವಲಂಬನೆಯ ಅಗಾಧ ಸಾಮರ್ಥ್ಯಕ್ಕೆ ಉದಾಹರಣೆ ನೀಡಿದರು. ಭಾರತ 40ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪರಿಚಯಿಯಿಸಿದೆ ಎಂದು ವಿವರಿಸಿದರು.
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ಭಾರತದ (India) ಮೇಲೆ ವಿಧಿಸಲಾದ 50% ಸುಂಕವು ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡಿಸಿದೆ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಪ್ಪೊಪ್ಪಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಟ್ರಂಪ್, ರಷ್ಯಾದಿಂದ ತೈಲ (Russian Oil) ಖರೀದಿಸುತ್ತಿರುವುದರಿಂದ ಭಾರತದ ಮೇಲೆ ವಿಧಿಸಲಾದ 50% ಸುಂಕವು ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡಿಸಿದೆ. ಭಾರತ ರಷ್ಯಾದ ಅತಿದೊಡ್ಡ ಗ್ರಾಹಕ, ಹಾಗಾಗಿ ಸುಂಕ ವಿಧಿಸಲಾಯ್ತು. ಆದ್ರೆ ಭಾರತದ ಮೇಲೆ 50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು. ಈ ಕ್ರಮದಿಂದ ಯುರೋಪಿಯನ್ ರಾಷ್ಟ್ರಗಳ ಮೇಲೂ ಸಮಸ್ಯೆ ಆಗಿದೆ ಎಂದೂ ಅವರು ಹೇಳಿದರು.
ಮುಂದುವರಿದು.. ಇದು ಒಂದು ದೊಡ್ಡ ಹೆಜ್ಜೆಯಾದರೂ ಭಾರತದೊಂದಿಗಿನ ಸಂಬಂಧಗಳನ್ನ ಹಾಳು ಮಾಡಿದೆ. ವ್ಯಾಪಾರ ಯುದ್ಧವು, ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟುಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚಾರ್ಲಿ ಕಿರ್ಕ್ ಹತ್ಯೆಯ ಶಂಕಿತ ಆರೋಪಿ ಬಂಧನ: ಡೊನಾಲ್ಡ್ ಟ್ರಂಪ್
ಅಮೆರಿಕಕ್ಕೇ ತಿರುಗುಬಾಣ
ಭಾರತದ ಮೇಲೆ 50% ಸುಂಕ ವಿಧಿಸಿದ ಬಳಿಕ ಅಮೆರಿಕ ವಿರುದ್ಧ ಅಸಮಾಧಾನ ಹೆಚ್ಚಾಗಿದೆ. ಉಕ್ರೇನ್ ಮೇಲಿನ ಯುದ್ಧಕ್ಕಾಗಿ ಪಾಶ್ಚಿಮಾತ್ಯ ದೇಶಗಳು ಈಗಾಗಲೇ ರಷ್ಯಾದ ಮೇಲೆ ನಿರ್ಬಂಧಗಳನ್ನ ಹೇರಿವೆ. ಈ ಪರಿಸ್ಥಿತಿಯಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ 50% ಆಮದು ಸುಂಕ ವಿಧಿಸಿರೋದು, ಅಮೆರಿಕಕ್ಕೇ ತಿರುಗುಬಾಣ ಬಿಟ್ಟಂತಾಗಿದೆ. ಇದನ್ನೂ ಓದಿ: ಸಮುದ್ರದ ತಳದಲ್ಲಿ ಇದೆಯಂತೆ ಸಿಹಿನೀರು – ಭೂಮಿ ಮೇಲಿನ ಜನರಿಗೆ ಕುಡಿಯೋಕೆ ಸಿಗುತ್ತಾ?
ಪಾಕ್‌ಗಿಂತಲೂ ಭಾರತಕ್ಕೆ ಸುಂಕ ಅಧಿಕ
ಈ ಹಿಂದೆ 25% ಆಮದು ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಬಳಿಕ ಆಗಸ್ಟ್ 27ರಿಂದ ಅನ್ವಯವಾಗುವಂತೆ 50% ಸುಂಕ ವಿಧಿಸಿದರು. ಆದ್ರೆ ಪಾಕಿಸ್ತಾನದ ಆಮದಿನ ಮೇಲೆ ಟ್ರಂಪ್ 19% ಸುಂಕ ಮಾತ್ರ ವಿಧಿಸಿದ್ದಾರೆ. ಆದಾಗ್ಯೂ ಟ್ರಂಪ್ ವ್ಯಾಪಾರ ಸಂಬಂಧಕ್ಕೆ ಉಂಟಾಗಿರುವ ಅಡೆತಡೆಗಳನ್ನು ತೆಗೆದುಹಾಲು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ಯುರೋಪ್ ಒಗ್ಗೂಡುವಂತೆ ಮನವಿ
ಟ್ರಂಪ್ ಅವರ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಮಾತನಾಡಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಟ್ರಂಪ್ ಅವರ ತಾಳ್ಮೆ ಈಗ ಕೊನೆಯಾಗ್ತಿದೆ. ಬ್ಯಾಂಕುಗಳು ಮತ್ತು ತೈಲದ ಮೇಲೆ ಹೊಸ ನಿರ್ಬಂಧ ವಿಧಿಸಬಹುದು. ಅದಕ್ಕಾಗಿ ಯುರೋಪಿಯನ್ ರಾಷ್ಟ್ರಗಳು ಒಗ್ಗೂಡಬೇಕಾಗುತ್ತದೆ ಎಂದು ಇತ್ತೀಚೆಗೆ ಕರೆ ನೀಡಿದ್ದರು. ಇದನ್ನೂ ಓದಿ: ರಷ್ಯಾದ ಕರಾವಳಿಯಲ್ಲಿ ಮತ್ತೆ ಪ್ರಬಲ ಭೂಕಂಪ – ಸುನಾಮಿ ಆತಂಕ
– ವರ್ಷಗಳ ಹಿಂದೆಯೇ ಭಾರತ ಈ ಹೆಜ್ಜೆಯನ್ನಿಡಬೇಕಿತ್ತು
– ಭಾರತದೊಂದಿಗೆ ನೇರ ಯುದ್ಧಕ್ಕಿಳಿದ್ರಾ ಟ್ರಂಪ್?
ವಾಷಿಂಗ್ಟನ್: ಭಾರತದ ಆಮದು ಸರಕುಗಳ ಮೇಲೆ 50% ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ʻಏಕಪಕ್ಷೀಯ ವಿಪತ್ತುʼ ಒನ್ ಡೈಡ್ ಡಿಸಾಸ್ಟರ್ (one-sided disaster) ಎಂದು ಕರೆದಿದ್ದಾರೆ.
ಭಾರತದೊಂದಿಗಿನ ವ್ಯಾಪಾರ ಸಂಬಂಧಗಳ ಕುರಿತು ಸೋಮವಾರ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಭಾರತವು ಅಮೆರಿಕಕ್ಕೆ ಹೆಚ್ಚಿನ ಸರಕುಗಳನ್ನು (Good) ರಫ್ತು ಮಾಡುತ್ತದೆ. ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ. ಇದು ಬಹಳ ಕಡಿಮೆ ಜನರಿಗೆ ತಿಳಿದಿದೆ. ಅವರು ನಮಗೆ ಬೃಹತ್ ಪ್ರಮಾಣದ ಸರಕುಗಳನ್ನು ರಫ್ತು ಮಾಡುವುದರಿಂದ ಭಾರತದ ಅತಿದೊಡ್ಡ ಕ್ಲೈಂಟ್ ನಾವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಪುಟಿನ್ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ
US President Donald Trump posts on Truth Social, says, “What few people understand is that we do very little business with India, but they do a tremendous amount of business with us. In other words, they sell us massive amounts of goods, their biggest “client,” but we sell them… pic.twitter.com/CmD7j4jSdM
ಭಾರತದ ಸುಂಕವು ವಿಶ್ವದಲ್ಲೇ ಅತ್ಯಧಿಕವಾಗಿದೆ
ಅಲ್ಲದೇ ಇಲ್ಲಿಯವರೆಗೆ ಭಾರತವು (India) ವಿಶ್ವದಲ್ಲೇ ಅತ್ಯಧಿಕ ಆಮದು ಸುಂಕವನ್ನು (Tariffs) ವಿಶಿಸುತ್ತಿದೆ. ಆದ ಕಾರಣ ಅಮೆರಿಕದ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡಲು ಕಷ್ಟಕರವೆನಿಸಿದೆ. ಅಲ್ಲದೇ ಭಾರತವು ರಷ್ಯಾದಿಂದ ಬೃಹತ್ ಪ್ರಮಾಣದಲ್ಲಿ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತದೆ. ಆದ್ರೆ ಅಮೆರಿಕದಿಂದ ಕಡಿಮೆ ಖರೀದಿ ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಮುಂದುವರಿದು.. ಭಾರತವು ಈಗ ಅಮೆರಿಕದ ಆಮದುಗಳ ಮೇಲಿನ ಸುಂಕ ಕಡಿಮೆ ಮಾಡಲು ಮುಂದಾಗಿದೆ. ಆದ್ರೆ ಇದು ತುಂಬಾ ತಡವಾಗಿದೆ. ಭಾರತ ಈ ಹೆಜ್ಜೆಯನ್ನು ವರ್ಷಗಳ ಹಿಂದೆಯೇ ತೆಗೆದುಕೊಳ್ಳಬೇಕಿತ್ತು ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಪುಟಿನ್, ಮೋದಿ, ಜಿನ್‌ಪಿಂಗ್ ಮಾತುಕತೆ – Video Of The Day ಎಂದ ರಷ್ಯಾ
ಪಾಕ್‌ಗಿಂತಲೂ ಭಾರತಕ್ಕೆ ಸುಂಕ ಅಧಿಕ
ಈ ಹಿಂದೆ 25% ಆಮದು ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಬಳಿಕ ಆಗಸ್ಟ್ 27ರಿಂದ ಅನ್ವಯವಾಗುವಂತೆ 50% ಸುಂಕ ವಿಧಿಸಿದ್ದಾರೆ. ಆದ್ರೆ ಪಾಕಿಸ್ತಾನದ ಆಮದಿನ ಮೇಲೆ ಟ್ರಂಪ್ 19% ಸುಂಕ ಮಾತ್ರ ವಿಧಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ ಸೋಮವಾರ ಷೇರುಪಟೆ ಚೇತರಿಕೆ ಕಂಡಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ ಆಪ್ತನಿಂದ ಜಾತಿ ಅಸ್ತ್ರ
– ಭಾರತ ಸೇರಿ ಹಲವು ದೇಶಗಳ ಮೇಲೆ ಮಿತಿ ಮೀರಿದ ಟ್ಯಾರಿಫ್ ಹೇರಿರುವ ಟ್ರಂಪ್
ವಾಷಿಂಗ್ಟನ್: ಆಮದು ಸುಂಕ (Tariff) ಕಾನೂನು ಬಾಹಿರ ಎಂದು ಯುಎಸ್ ಕೋರ್ಟ್ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಿರ್ಧಾರಕ್ಕೆ ಕೋರ್ಟ್ ಛೀಮಾರಿ ಹಾಕಿದೆ.
ಟ್ರಂಪ್ ನಿರ್ಧಾರಕ್ಕೆ ವಾಷಿಂಗ್ಟನ್‌ನ ಫೆಡರಲ್ ಮೇಲ್ಮನವಿ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕೆಳ ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯವು ಅನುಮೋದಿಸಿದ್ದು, ಟ್ರಂಪ್ ವಿಧಿಸಿರುವ ಹೆಚ್ಚಿನ ಆಮದು ಸುಂಕಗಳು ಕಾನೂನುಬಾಹಿರ ಎಂದು ಹೇಳಿದೆ. ಈ ಸಂದರ್ಭದಲ್ಲಿ ಈ ಅಧಿಕಾರವನ್ನು ಬಳಸಲು ಅಧ್ಯಕ್ಷರ ಅಧಿಕಾರವನ್ನು ನ್ಯಾಯಾಲಯವು ಪ್ರಶ್ನಿಸಿದೆ.
ಫೆಡರಲ್ ಮೇಲ್ಮನವಿ ನ್ಯಾಯಾಲಯವು ಅಮೆರಿಕ ಅಧ್ಯಕ್ಷರು ತುರ್ತು ಅಧಿಕಾರಗಳ ದುರುಪಯೋಗದ ಬಗ್ಗೆ ಮಾತನಾಡಿದೆ. 11 ನ್ಯಾಯಾಧೀಶರ ಪೀಠದಲ್ಲಿ, 7 ನ್ಯಾಯಾಧೀಶರು ಟ್ರಂಪ್ ಅವರ ಸುಂಕ ವಿಧಿಸುವ ನಿರ್ಧಾರವನ್ನು ಕಾನೂನುಬಾಹಿರವೆಂದು ಘೋಷಿಸಿದರೆ, 4 ನ್ಯಾಯಾಧೀಶರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆದೇಶ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಶ್ವೇತ ಭವನ ನಿರ್ಧರಿಸಿದೆ.
ಇತರೆ ದೇಶಗಳ ಮೇಲೆ ವಿಧಿಸಿರುವ ಎಲ್ಲಾ ಸುಂಕಗಳು ಜಾರಿಯಲ್ಲಿರುತ್ತವೆ. ಒಂದು ವೇಳೆ ಟ್ಯಾರಿಫ್ ತೆಗೆದುಹಾಕಿದರೆ, ದೇಶಕ್ಕೆ ಹಾನಿಕಾರಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಟ್ರಂಪ್ ಅವರ ಹಲವು ಸುಂಕಗಳು ಕಾನೂನುಬಾಹಿರ ಎಂದು ಯುಎಸ್ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಎಲ್ಲಾ ಸುಂಕಗಳು ಇನ್ನೂ ಜಾರಿಯಲ್ಲಿವೆ. ಇಂದು ಅತ್ಯಂತ ಪಕ್ಷಪಾತದ ಮೇಲ್ಮನವಿಗೆ ನ್ಯಾಯಾಲಯವು ನಮ್ಮ ಸುಂಕಗಳನ್ನು ತೆಗೆದುಹಾಕಬೇಕು ಎಂದು ತಪ್ಪಾಗಿ ಹೇಳಿದೆ. ಆದರೆ, ಕೊನೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಗೆಲ್ಲುತ್ತದೆ ಎಂದು ಅವರಿಗೆ ತಿಳಿದಿದೆ. ಈ ಸುಂಕಗಳು ಎಂದಾದರೂ ರದ್ದಾದರೆ, ಅದು ದೇಶಕ್ಕೆ ವಿಪತ್ತು. ಅದು ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ. ನಾವು ಬಲಿಪಶು ಆಗಬೇಕಾಗುತ್ತದೆ ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ನಮ್ಮ ತಯಾರಕರು, ರೈತರು ಮತ್ತು ಎಲ್ಲರನ್ನೂ ದುರ್ಬಲಗೊಳಿಸುವ ಅನ್ಯಾಯದ ಸುಂಕಗಳನ್ನು ನಾವು ಒಪ್ಪಲ್ಲ. ಇತರ ದೇಶಗಳು, ಅವರು ಮಿತ್ರರಾಗಿರಲಿ ಅಥವಾ ವೈರಿಯಾಗಿರಲಿ ವಿಧಿಸುವ ಸುಂಕೇತರ ವ್ಯಾಪಾರ ಅಡೆತಡೆಗಳನ್ನು ಅಮೆರಿಕ ಇನ್ಮುಂದೆ ಸಹಿಸುವುದಿಲ್ಲ. ಒಂದು ವೇಳೆ ಈ ನಿರ್ಧಾರವನ್ನು (ಟ್ಯಾರಿಫ್) ತಡೆಯಲು ಮುಂದಾದರೆ, ಅಕ್ಷರಶಃ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ನಾಶಪಡಿಸಿದಂತೆ ಎಂದು ಟ್ರಂಪ್ ಹೇಳಿದ್ದಾರೆ.
ಸುಂಕಗಳು ಕಾರ್ಮಿಕರಿಗೆ ಸಹಾಯ ಮಾಡಲು ಮತ್ತು ‘ಮೇಡ್ ಇನ್ ಅಮೆರಿಕ’ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳನ್ನು ಬೆಂಬಲಿಸಲು ಅತ್ಯುತ್ತಮ ಸಾಧನವಾಗಿದೆ ಎಂದು ಟ್ರಂಪ್ ನಿಲುವು.
ಹಲವು ವರ್ಷಗಳಿಂದ ಕಾಳಜಿಯಿಲ್ಲದ ಮತ್ತು ಅವಿವೇಕದ ರಾಜಕಾರಣಿಗಳು ಸುಂಕಗಳನ್ನು ನಮ್ಮ ವಿರುದ್ಧವೇ ಬಳಸಲು ಅನುಮತಿಸಿದ್ದರು. ಈಗ ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ಸಹಾಯದಿಂದ, ಅವುಗಳನ್ನು ನಮ್ಮ ರಾಷ್ಟ್ರದ ಪ್ರಯೋಜನಕ್ಕಾಗಿ ಬಳಸುತ್ತೇವೆ. ಅಮೆರಿಕವನ್ನು ಮತ್ತೆ ಶ್ರೀಮಂತ, ಬಲಿಷ್ಠ ಮತ್ತು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.
– ಭಾರತ ತನ್ನ ರೈತರನ್ನು ರಕ್ಷಿಸುವ ಗುರಿ ಹೊಂದಿದೆ; ವರದಿಯಲ್ಲಿ ಉಲ್ಲೇಖ
ವಾಷಿಂಗ್ಟನ್: ಭಾರತ ಮತ್ತು ಪಾಕ್ ಸಂಘರ್ಷದಲ್ಲಿ (India Pakistan Conflict) ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಸಾಧ್ಯವಾಗದೇ ಇದ್ದ ಕಾರಣ, ಭಾರತದ ಮೇಲೆ 50% ಸುಂಕ ವಿಧಿಸಿದ್ದಾರೆ ಎಂದು ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸಂಸ್ಥೆ ಜೆಫರೀಸ್ ವರದಿ (Jefferies Bank Report) ಹೇಳಿದೆ.
ದಕ್ಷಿಣ ಏಷ್ಯಾದ ಎರಡು ಪರಮಾಣು ಶಕ್ತಿ ರಾಷ್ಟ್ರಗಳ ನಡುವೆ ಮಧ್ಯಪ್ರವೇಶಿಸಲು ಟ್ರಂಪ್ (Donald Trump) ಆಶಿಸಿದ್ದರು. ಆದ್ರೆ ಭಾರತ ಮತ್ತು ಪಾಕಿಸ್ತಾನ ನಡುವಿನ ದೀರ್ಘಕಾಲ ದ್ವೇಷವನ್ನು ಕೊನೆಗೊಳಿಸುವಲ್ಲಿ ಪಾತ್ರ ವಹಿಸಲು ಅವಕಾಶ ಸಿಗಲಿಲ್ಲ. ಇದು ಅಮೆರಿಕ ಅಧ್ಯಕ್ಷರ ವೈಯಕ್ತಿಕ ದ್ವೇಷಕ್ಕೆ ಕಾರಣವಾಗಿದ್ದು, ಹೆಚ್ಚುವರಿ ಸುಂಕವನ್ನು ಭಾರತದ ಮೇಲೆ ವಿಧಿಸಿದ್ದಾರೆ ಎಂದು ವರದಿ ಹೇಳಿದೆ.
ನೊಬೆಲ್ ಶಾಂತಿ ಪ್ರಶಸ್ತಿಗೆ ಶ್ವೇತಭವನ ಒತ್ತಾಯ
ಕೆಲ ದಿನಗಳ ಹಿಂದಷ್ಟೇ ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಹೇಳಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ ವಿಶ್ವದಾದ್ಯಂತ ಹಲವಾರು ಯುದ್ಧಗಳನ್ನು ಕೊನೆಗೊಳಿಸಿದ್ದಾರೆ ಅವರಿಗೆ ಪ್ರಶಸ್ತಿ ನೀಡುವಂತೆ ಕೇಳಿಕೊಂಡಿತ್ತು. ಆದ್ರೆ ಭಾರತ ಮಾತ್ರ ಟ್ರಂಪ್ ಹಸ್ತಕ್ಷೇಪವನ್ನು ತಳ್ಳಿಹಾಕುತ್ತಲೇ ಬಂದಿದೆ.
ಈ ವರದಿಯ ಮತ್ತೊಂದು ಅಂಶವೆಂದರೆ, ಭಾರತ ತನ್ನ ರೈತರನ್ನು ರಕ್ಷಣೆಗಾಗಿ ನಿಂತಿರುವ ಉದ್ದೇಶವನ್ನು ಒತ್ತಿ ಹೇಳಿದೆ. ಹೌದು. ಸುಮಾರು 250 ಮಿಲಿಯನ್ ರೈತರು ಮತ್ತು ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಭಾರತದಲ್ಲಿ ಶೇಕಡಾ 40 ರಷ್ಟು ಉದ್ಯೋಗಿಗಳು ಕೃಷಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತ ತನ್ನ ರೈತರನ್ನು ರಕ್ಷಿಸುವ ಸಲುವಾಗಿ ಕೃಷಿ ವಲಯವನ್ನು ಆಮದುಗಳಿಗೆ ಮುಕ್ತಗೊಳಿಸಲು ಒಪ್ಪಿಕೊಂಡಿಲ್ಲ ಎಂಬುದನ್ನು ತೋರಿಸಿದೆ.
ಈ ನಿರ್ಧಾರವು ಜು.30 ರಂದು US ಆಡಳಿತವು ಹೊರಡಿಸಿದ ಕಾರ್ಯನಿರ್ವಾಹಕ ಆದೇಶ ಸಂಖ್ಯೆ 14324 ಅನ್ನು ಅನುಸರಿಸುತ್ತದೆ. ಇದು 800 ಡಾಲರ್ ವರೆಗಿನ ಸರಕುಗಳಿಗೆ ಸುಂಕ-ಮುಕ್ತ ಡಿ ಮಿನಿಮಿಸ್ ವಿನಾಯಿತಿಯನ್ನು ಹಿಂತೆಗೆದುಕೊಳ್ಳುತ್ತದೆ.
ವ್ಯಾಪಾರ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತದ ಮೇಲೆ ಶೇ. 25 ರಷ್ಟು ಸುಂಕವನ್ನು ವಿಧಿಸಿದ್ದರು. ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ಹೇರಿದರು. ಒಟ್ಟು ಸುಂಕದ ಹೊರೆ ಶೇ.50 ಕ್ಕೆ ಹೆಚ್ಚಳವಾಯಿತು. ಇದನ್ನೂ ಓದಿ: ಚೀನಾವನ್ನ ಎದುರಿಸಬೇಕಾದ್ರೆ ಭಾರತ-ಅಮೆರಿಕ ಸಂಬಂಧವನ್ನ ಹಳಿಗೆ ತನ್ನಿ – ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಮತ್ತೆ ಎಚ್ಚರಿಕೆ
ಆ.29 ರಿಂದ ಜಾರಿಗೆ ಬರುವಂತೆ, ಯುಎಸ್ಎಗೆ ಉದ್ದೇಶಿಸಲಾದ ಎಲ್ಲಾ ಅಂತರರಾಷ್ಟ್ರೀಯ ಅಂಚೆ ವಸ್ತುಗಳು, ಅವುಗಳ ಮೌಲ್ಯವನ್ನು ಲೆಕ್ಕಿಸದೆ, ದೇಶ-ನಿರ್ದಿಷ್ಟ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಶಕ್ತಿ ಕಾಯ್ದೆ (ಐಇಇಪಿಎ) ಸುಂಕ ಚೌಕಟ್ಟಿನ ಪ್ರಕಾರ ಕಸ್ಟಮ್ಸ್ ಸುಂಕಗಳಿಗೆ ಒಳಪಟ್ಟಿರುತ್ತವೆ ಎಂದು ಅಂಚೆ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
– ರಷ್ಯಾ ತೈಲ ಖರೀದಿಯಲ್ಲಿ ಅತಿದೊಡ್ಡ ಪಾಲುದಾರ ಚೀನಾ ಟಾರ್ಗೆಟ್ ಯಾಕಿಲ್ಲ?
ಅಲಸ್ಕಾ ಶೃಂಗಸಭೆಯಿಂದ ಸಕಾರಾತ್ಮಕ ಫಲಿತಾಂಶ ದೊರೆಯುವ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆಯಾಗಿದೆ. ಡೊನಾಲ್ಡ್ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ಅವರು ಭಾರತದ ರಫ್ತುಗಳ ಮೇಲೆ ಹೆಚ್ಚುವರಿ 25% ಸುಂಕವನ್ನು ವಿಧಿಸುವುದನ್ನು ತಪ್ಪಿಸಲು ಅಸಮರ್ಥರಾಗಿರುವುದು ನಿರಾಶೆಯನ್ನುಂಟು ಮಾಡಿದೆ. ಅಲಸ್ಕಾದಲ್ಲಿ ಅಮೆರಿಕ-ರಷ್ಯಾ ಮಾತುಕತೆಗಳು ಅಪೂರ್ಣಗೊಂಡಿವೆ. ಇದರಿಂದ ಭಾರತದ ವ್ಯಾಪಾರ ಮಾತುಕತೆಗಳ ಬಗ್ಗೆ ಅನಿಶ್ಚಿತತೆಯ ಮೋಡ ಆವರಿಸಿದೆ. ಇದುವರೆಗೂ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಭಾರತದ ಮುಂದಿನ ನಡೆಯೂ ಕುತೂಹಲ ಮೂಡಿಸಿದೆ.
ರಷ್ಯಾದಿಂದ ತೈಲ ಆಮದಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಭಾರತವೇ ಪಡೆಯುತ್ತಿದೆ. ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕಗೆ ಅಸಮಾಧಾನ ಇದೆ. ಹೀಗಾಗಿ, ರಷ್ಯಾದಿಂದ ತೈಲ ಖರೀದಿಸದಂತೆ ಭಾರತಕ್ಕೆ ಅಮೆರಿಕ ಎಚ್ಚರಿಸುತ್ತಲೇ ಬಂದಿದೆ. ಆದರೆ, ಭಾರತ ಅದಕ್ಕೆ ಕ್ಯಾರೆ ಎಂದಿಲ್ಲ. ಇದರಿಂದ ಕೆರಳಿರುವ ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿದ್ದಾರೆ. ಅಮೆರಿಕದ ಸಂಭಾವ್ಯ ದಂಡಗಳಿಂದಾಗಿ ರಷ್ಯಾದ ಆಮದುಗಳನ್ನು ಕಡಿತಗೊಳಿಸಬೇಕಾದ ಪರಿಸ್ಥಿತಿ ಬಂದರೆ ಭಾರತದ ಮುಂದಿನ ಕಥೆ ಏನು ಎಂಬ ಪ್ರಶ್ನೆ ಮೂಡಿದೆ. ಸುಂಕಕ್ಕೆ ಬಗ್ಗದೇ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಾ? ಯುಎಸ್‌ನ ಸುಂಕದಿಂದ ಪಾರಾಗಲು ನಿರ್ಧಾರ ಕೈಗೊಳ್ಳುತ್ತಾ? ಒಂದು ವೇಳೆ ರಷ್ಯಾದ ತೈಲ ಖರೀದಿಯನ್ನು ಕೈಬಿಟ್ಟರೆ ಭಾರತಕ್ಕೆ ಇರುವ ಆಯ್ಕೆಗಳೇನು ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ಭಾರತ, ರಷ್ಯಾದ ತೈಲವನ್ನೇ ಆಮದು ಮಾಡಿಕೊಳ್ಳೋದ್ಯಾಕೆ?
2022 ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿ ತನ್ನ ಪೂರೈಕೆಯನ್ನು ನಿಲ್ಲಿಸಿದವು. ನಂತರ ಭಾರತವು ರಿಯಾಯಿತಿ ದರದಲ್ಲಿ ಮಾರಾಟವಾಗುವ ರಷ್ಯಾದ ತೈಲವನ್ನು ಖರೀದಿಸಲು ಮುಂದಾಯಿತು. ಉಕ್ರೇನ್ ಯುದ್ಧದ ಮೊದಲು ರಷ್ಯಾ 2% ಕ್ಕಿಂತ ಕಡಿಮೆಯಿದ್ದದ್ದು, ಭಾರತದ ಒಟ್ಟಾರೆ ಪೂರೈಕೆಯಲ್ಲಿ ಸುಮಾರು 35% ರಷ್ಟನ್ನು ಹೊಂದಿದೆ. ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಪಾಶ್ಚಿಮಾತ್ಯ ದೇಶಗಳ ನಿರ್ಬಂಧದ ನಂತರ ಪೂರೈಕೆ ಕೊರತೆಯ ಭೀತಿಯಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 11,963 ರೂ.ಗೆ ಏರಿತು. ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವು ಭಾರತೀಯ ಸಂಸ್ಕರಣಾಗಾರಗಳ ವೆಚ್ಚವನ್ನು ಕಡಿಮೆ ಮಾಡಿದೆ. ಭಾರತವು ತನ್ನ ತೈಲ ಅಗತ್ಯಗಳಲ್ಲಿ 85% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ.
ಭಾರತ ಎಷ್ಟು ರಷ್ಯಾದ ತೈಲವನ್ನು ಖರೀದಿಸುತ್ತೆ?
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ರಾಷ್ಟ್ರವಾದ ಭಾರತವು ಈ ವರ್ಷದ ಮೊದಲಾರ್ಧದಲ್ಲಿ ದಿನಕ್ಕೆ ಸುಮಾರು 1.75 ಮಿಲಿಯನ್ ಬ್ಯಾರೆಲ್‌ಗಳಷ್ಟು ರಷ್ಯಾದ ತೈಲವನ್ನು ಖರೀದಿಸಿದೆ. ಇದು ಒಂದು ವರ್ಷದ ಹಿಂದಿನದಕ್ಕಿಂತ 1% ಹೆಚ್ಚಾಗಿದೆ ಎಂದು ವ್ಯಾಪಾರ ದತ್ತಾಂಶಗಳು ತೋರಿಸಿವೆ. ಭಾರತದ ರಾಜ್ಯ ಸಂಸ್ಕರಣಾಗಾರರು ರಷ್ಯಾದ ತೈಲವನ್ನು ವ್ಯಾಪಾರಿಗಳಿಂದ ಖರೀದಿಸುತ್ತಿದ್ದರೆ, ಖಾಸಗಿ ಸಂಸ್ಕರಣಾಗಾರರಾದ ನಯಾರಾ ಎನರ್ಜಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RELI.NS) ಹೊಸ ಟ್ಯಾಬ್ ಅನ್ನು ತೆರೆಯುತ್ತದೆ. ವಿಶ್ವದ ಅತಿದೊಡ್ಡ ಸಂಸ್ಕರಣಾ ಸಂಕೀರ್ಣದ ನಿರ್ವಾಹಕರು, ರೋಸ್ನೆಫ್ಟ್ (ROSN.MM) ನೊಂದಿಗೆ ದೀರ್ಘಾವಧಿಯ ಪೂರೈಕೆ ಒಪ್ಪಂದಗಳನ್ನು ಹೊಂದಿದ್ದಾರೆ.
ರಷ್ಯಾ ತೈಲವನ್ನು ಭಾರತ ಖರೀದಿಸಬಾರದು ಅಂತ ಟ್ರಂಪ್ ಹೇಳೋದ್ಯಾಕೆ?
ರಷ್ಯಾದ ತೈಲ ಖರೀದಿಯನ್ನು ಮುಂದುವರೆಸುತ್ತಿರುವುದರಿಂದ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು 50%ಗೆ ಗಣನೀಯವಾಗಿ ಹೆಚ್ಚಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಉಕ್ರೇನ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ವಿಫಲವಾದರೆ ರಷ್ಯಾದ ರಫ್ತುಗಳನ್ನು ಖರೀದಿಸುವ ದೇಶಗಳು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಭಾರತವು ರಷ್ಯಾದೊಂದಿಗಿನ ತನ್ನ ದೀರ್ಘಕಾಲದ ಸಂಬಂಧಗಳು ಮತ್ತು ಅದರ ಆರ್ಥಿಕ ಅಗತ್ಯಗಳನ್ನು ಉಲ್ಲೇಖಿಸಿ ಟ್ರಂಪ್ ನಿಲುವನ್ನು ವಿರೋಧಿಸಿದೆ. ಆದಾಗ್ಯೂ, ದೇಶದ ರಾಜ್ಯ ಸಂಸ್ಕರಣಾಗಾರರು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿದ್ದಾರೆ.
ರಷ್ಯಾದ ತೈಲ ಖರೀದಿಸಲು ಆಗದಿದ್ರೆ ಭಾರತಕ್ಕಿರುವ ಆಯ್ಕೆಗಳೇನು?
ರಷ್ಯಾದ ಹೊರತಾಗಿ, ಭಾರತವು ಉಕ್ರೇನ್ ಯುದ್ಧದ ಮೊದಲು ತನ್ನ ಪ್ರಮುಖ ಪೂರೈಕೆದಾರ ಇರಾಕ್‌ನಿಂದ ತೈಲವನ್ನು ಖರೀದಿಸುತ್ತಿತ್ತು. ನಂತರ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಖರೀದಿಸಿದೆ. ಭಾರತೀಯ ಸಂಸ್ಕರಣಾಗಾರರು ವಾರ್ಷಿಕ ಒಪ್ಪಂದಗಳಡಿ ಹೆಚ್ಚಾಗಿ ಮಧ್ಯಪ್ರಾಚ್ಯ ಉತ್ಪಾದಕರಿಂದ ತೈಲವನ್ನು ಖರೀದಿಸುತ್ತಾರೆ. ಟ್ರಂಪ್ ಅವರ ನಿರ್ಬಂಧಗಳ ಎಚ್ಚರಿಕೆಯ ನಂತರ, ಸಂಸ್ಕರಣಾಗಾರರು ಯುನೈಟೆಡ್ ಸ್ಟೇಟ್ಸ್, ಮಧ್ಯಪ್ರಾಚ್ಯ, ಪಶ್ಚಿಮ ಆಫ್ರಿಕಾ ಮತ್ತು ಅಜೆರ್ಬೈಜಾನ್‌ನಿಂದ ಕಚ್ಚಾ ತೈಲವನ್ನು ಖರೀದಿಸಿದ್ದಾರೆ.
ಅಮೆರಿಕಗೆ ಭಾರತವೇ ಯಾಕೆ ಟಾರ್ಗೆಟ್?
ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಲ್ಲಿ ಭಾರತದಂತೆಯೇ ಚೀನಾ ಕೂಡ ಇದೆ. ಆದರೆ, ಭಾರತವನ್ನು ಮಾತ್ರ ಅಮೆರಿಕ ಟಾರ್ಗೆಟ್ ಮಾಡುತ್ತಿದೆ. ಹಾಗಾದರೆ, ಟ್ರಂಪ್ ಆಡಳಿತವು ಚೀನಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರಿದ್ದು ಏಕೆ ಎಂಬುದು ಪ್ರಶ್ನೆಯಾಗಿದೆ. ರಷ್ಯಾದ ತೈಲದ ಅತಿದೊಡ್ಡ ಖರೀದಿದಾರನಾಗಿ ಚೀನಾ ಕಳೆದ ವರ್ಷ ದಾಖಲೆಯ 109 ಮಿಲಿಯನ್ ಟನ್‌ಗಳಷ್ಟು ಆಮದು ಮಾಡಿಕೊಂಡಿದೆ. ಇದು ಅದರ ಒಟ್ಟು ಇಂಧನ ಆಮದಿನ ಸುಮಾರು 20% ಪ್ರತಿನಿಧಿಸುತ್ತದೆ ಎಂದು ಚೀನಾದ ಕಸ್ಟಮ್ಸ್ ಡೇಟಾ ತಿಳಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತವು 2024 ರಲ್ಲಿ 88 ಮಿಲಿಯನ್ ಟನ್ ರಷ್ಯಾದ ತೈಲವನ್ನು ಆಮದು ಮಾಡಿಕೊಂಡಿತು. ಹೀಗಾಗಿ, ಚೀನಾ ರಷ್ಯಾದ ಪ್ರಮುಖ ಆರ್ಥಿಕ ಜೀವನಾಡಿಯಾಗಿದ್ದು, ಈಗ ನಾಲ್ಕನೇ ವರ್ಷದಲ್ಲಿರುವ ಉಕ್ರೇನ್ ಮೇಲಿನ ಯುದ್ಧದಲ್ಲಿ ರಷ್ಯಾಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದೆ ಎಂಬ ಆರೋಪಕ್ಕೆ ಕಾರಣವಾಗಿದೆ. ವಸ್ತುಸ್ಥಿತಿ ಹೀಗಿದ್ದರೂ, ಚೀನಾವನ್ನು ಬಿಟ್ಟು ಭಾರತವನ್ನು ಅಮೆರಿಕ ಟಾರ್ಗೆಟ್ ಮಾಡಿ ಹೆಚ್ಚಿನ ಸುಂಕ ವಿಧಿಸಿದೆ.
ಚೀನ ಮೇಲೆ ಟ್ರಂಪ್ ಹೊಸ ಸುಂಕ ವಿಧಿಸಿಲ್ಲ ಯಾಕೆ?
ಕಳೆದ ವಾರ ಅಲಾಸ್ಕಾದಲ್ಲಿ ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಪ್ಪಂದಕ್ಕೆ ಬರಲು ವಿಫಲವಾದರು. ಇದಾದ ಬಳಿಕ, ಚೀನಾ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುತ್ತೀರಾ ಎಂದು ಕೇಳಿದಾಗ, ಟ್ರಂಪ್, ನಾನು ಅದರ ಬಗ್ಗೆ ಯೋಚಿಸಬೇಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಹಲವಾರು ಯುಎಸ್ ಕೈಗಾರಿಕೆಗಳು ಚೀನಾದ ಖನಿಜಗಳ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ನಡೆಯುತ್ತಿರುವ ವ್ಯಾಪಾರ ಮಾತುಕತೆಗಳಲ್ಲಿ ಅವು ಕೇಂದ್ರ ಸಮಸ್ಯೆಯಾಗಿ ಉಳಿದಿವೆ. ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಚೀನಾ ವಿರುದ್ಧ ದ್ವಿತೀಯ ನಿರ್ಬಂಧಗಳನ್ನು ವಿಧಿಸದಿರುವ ಅಮೆರಿಕದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಉಕ್ರೇನ್ ಯುದ್ಧದ ಮೊದಲು ರಷ್ಯಾದ ತೈಲದ 13% ಅನ್ನು ಚೀನಾ ಖರೀದಿಸಿತು. ಅದು ಈಗ 16% ಹೆಚ್ಚಾಗಿದೆ. ಹೀಗಾಗಿ, ಚೀನಾ ತನ್ನ ತೈಲದ ವೈವಿಧ್ಯಮಯ ಇನ್ಪುಟ್ ಅನ್ನು ಹೊಂದಿದೆ. ಆದರೆ, ಉಕ್ರೇನ್ ಯುದ್ಧದ ಮೊದಲು, ಭಾರತದ ರಷ್ಯಾದ ತೈಲ ಆಮದು ಶೇ.1 ಕ್ಕಿಂತ ಕಡಿಮೆಯಿತ್ತು. ಈಗ ಅದು 42% ರ ವರೆಗೆ ಇದೆ ಎಂದು ತಿಳಿಸಿದ್ದಾರೆ.
ತೈಲ ಖರೀದಿಗೆ ಭಾರತಕ್ಕೆ 5% ರಿಯಾಯಿತಿ ಕೊಟ್ಟ ರಷ್ಯಾ
ಭಾರತ ಖರೀದಿಸುವ ತೈಲಗೆ 5% ರಿಯಾಯಿತಿ ನೀಡಲಾಗುವುದು ಎಂದು ರಷ್ಯಾ ತಿಳಿಸಿದೆ. ಭಾರತಕ್ಕೆ ರಷ್ಯಾದ ಉಪ ವ್ಯಾಪಾರ ಪ್ರತಿನಿಧಿ ಎವ್ಗೆನಿ ಗ್ರಿವಾ, ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಭಾರತವು ಸರಿಸುಮಾರು ಅದೇ ಮಟ್ಟದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ರಿಯಾಯಿತಿಗಳಿಗೆ ಸಂಬಂಧಿಸಿದಂತೆ, ಇದು ವಾಣಿಜ್ಯ ರಹಸ್ಯವಾಗಿದೆ ಎಂದು ತಿಳಿಸಿದ್ದಾರೆ. ಭಾರತಕ್ಕೆ ಇದು ಸವಾಲಿನ ಪರಿಸ್ಥಿತಿಯಾಗಿದ್ದರೂ, ನಮಗೆ ನಮ್ಮ ಸಂಬಂಧಗಳಲ್ಲಿ ನಂಬಿಕೆ ಇದೆ. ಬಾಹ್ಯ ಒತ್ತಡದ ಹೊರತಾಗಿಯೂ ಭಾರತ-ರಷ್ಯಾ ಇಂಧನ ಸಹಕಾರ ಮುಂದುವರಿಯುತ್ತದೆ’ ಎಂದು ರಷ್ಯಾದ ಉಪ ಮುಖ್ಯಸ್ಥ ಮಿಷನ್ ರೋಮನ್ ಬಾಬುಷ್ಕಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೆಲೆ ಕಳೆದುಕೊಳ್ತಿದ್ದಾರಾ ಸಣ್ಣ ಪೂರೈಕೆದಾರರು?
ಭಾರತಕ್ಕೆ ತೈಲ ಪೂರೈಕೆಯಲ್ಲಿ ರಷ್ಯಾದ ಪ್ರಾಬಲ್ಯ ಹೆಚ್ಚಾಗಿದೆ. ಇದು ವ್ಯಾಪಾರದ ಚಲನಶೀಲತೆಯನ್ನು ಬದಲಾಯಿಸಿದೆ. ಆದರೆ, ಮಧ್ಯಪ್ರಾಚ್ಯದ ಪ್ರಮುಖ ಪೂರೈಕೆದಾರರ ಸ್ಥಾನವನ್ನು ಹೆಚ್ಚಾಗಿ ರಷ್ಯಾವೇ ಉಳಿಸಿಕೊಂಡಿದೆ. ಇರಾಕ್, ಸೌದಿ ಅರೇಬಿಯಾ ಮತ್ತು ಯುಎಇ ಪ್ರಾಥಮಿಕ ಪೂರೈಕೆದಾರರಾಗಿ ಉಳಿದಿವೆ. ಆದರೆ, ಸಣ್ಣ ರಫ್ತುದಾರರ ಮಾರುಕಟ್ಟೆ ಉಪಸ್ಥಿತಿ ಕುಗ್ಗಿದೆ. ಉಕ್ರೇನ್ ಸಂಘರ್ಷದ ಮೊದಲು, 2021 ರಿಂದ ಇರಾಕ್ ಮತ್ತು ಸೌದಿ ಅರೇಬಿಯಾದಿಂದ ವಿತರಣೆಗಳು ಸರಿಸುಮಾರು 5% ರಷ್ಟು ಕಡಿಮೆಯಾಗಿದೆ. ಆದರೆ ಯುಎಇ ಸಾಗಣೆಗಳು 3% ರಷ್ಟು ಹೆಚ್ಚಾಗಿದೆ ಎಂದು ಇಂಧನ ಸರಕು ಟ್ರ‍್ಯಾಕರ್ ವೋರ್ಟೆಕ್ಸಾ ವರದಿ ಮಾಡಿದೆ. ಆದಾಗ್ಯೂ, ಭಾರತದ ಸ್ಥಾಪಿತ ಮಧ್ಯಪ್ರಾಚ್ಯ ಪೂರೈಕೆದಾರರು ಸಹ ತಮ್ಮ ಉಪಸ್ಥಿತಿಯನ್ನು ಉಳಿಸಿಕೊಂಡಿದ್ದಾರೆ.
2025 ರಲ್ಲಿ, ಇರಾಕ್ ಸರಬರಾಜುಗಳು ದಿನಕ್ಕೆ ಸರಾಸರಿ 898,000 ಬ್ಯಾರೆಲ್, ಸೌದಿ ಅರೇಬಿಯನ್ ವಿತರಣೆಗಳು 640,000 ಬ್ಯಾರೆಲ್, ಯುಎಇ ಕೊಡುಗೆಗಳು 448,000 ಬ್ಯಾರೆಲ್. 2021 ಕ್ಕೆ ಹೋಲಿಸಿದರೆ, ಇರಾಕಿ ಮತ್ತು ಸೌದಿ ಪ್ರಮಾಣಗಳು ಸರಿಸುಮಾರು 5% ರಷ್ಟು ಕಡಿಮೆಯಾಗಿದೆ. ಆದರೆ ಯುಎಇ 3% ರಷ್ಟು ಹೆಚ್ಚಾಗಿದೆ. ಸಣ್ಣ ಅಥವಾ ದೂರದ ಪೂರೈಕೆದಾರರಿಗೆ ಇದರ ಪರಿಣಾಮ ಹೆಚ್ಚು ಮಹತ್ವದ್ದಾಗಿದೆ. ಅಮೆರಿಕನ್ ರಫ್ತುಗಳು 33% ರಷ್ಟು ಕಡಿಮೆಯಾಗಿದೆ. ನೈಜೀರಿಯನ್ ಮತ್ತು ಕುವೈತ್ ಸಾಗಣೆಗಳು ಅರ್ಧದಷ್ಟು ಕಡಿಮೆಯಾಗಿದೆ. ಆದರೆ ಒಮಾನಿ ಮತ್ತು ಮೆಕ್ಸಿಕನ್ ಸರಬರಾಜುಗಳು 80% ಕ್ಕಿಂತ ಹೆಚ್ಚು ಕಡಿಮೆಯಾಗಿದೆ. 2025 ರಲ್ಲಿ, ಯುಎಸ್ ವಿತರಣೆಗಳು ದಿನಕ್ಕೆ ಸರಾಸರಿ 271,000 ಬ್ಯಾರೆಲ್, ನೈಜೀರಿಯನ್ 151,000 ಬ್ಯಾರೆಲ್, ಕುವೈತ್ 131,000 ಬ್ಯಾರೆಲ್, ಒಮಾನಿ 20,000 ಬ್ಯಾರೆಲ್ ಮತ್ತು ಮೆಕ್ಸಿಕನ್ 24,000 ಬ್ಯಾರೆಲ್ ಇದೆ.