Tag: ಸೀರಿಯಲ್ ನಟಿ

  • ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

    ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

    – ಮಿಲಿಟರಿ ಹುಡುಗ ಬೇಕು ಅಂತಾ ನಮ್ಮ ತಂದೆ ಆಸೆ: ಭಾನು ರವಿಕುಮಾರ್
    – ಮಗಳ ಬಗ್ಗೆ ಸುಮ್ನೆ ಟ್ರೋಲ್ ಮಾಡ್ಬೇಡಿ ವೈಷ್ಣವಿ ತಂದೆ ಮನವಿ

    ಬೆಂಗಳೂರು: ನನ್ನ ಮಗಳ ಜೀವನ ಸರಿ ಆಗಲಿ ಎಂದು ಇಬ್ರು ಹುಡುಗಿಯರು ಮುಂದೆ ಬಂದು ನಿಜ ಸ್ಥಿತಿ ಅರಿವು ಮಾಡಿಕೊಟ್ಟರು. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ವೈಷ್ಣವಿ ಗೌಡ (Vaishnavi Gowda) ಅವರ ತಾಯಿ ಭಾನು ರವಿಕುಮಾರ್ ಹೇಳಿದರು.

    ಈ ಹಿಂದೆ ಮಗಳ ನಿಶ್ಚಯವಾಗಿ ಮುರಿದು ಬಿದ್ದ ಕುರಿತು ಮಾತನಾಡಿದ ಅವರು, ವೈಷ್ಣವಿ ತನ್ನದಲ್ಲದ ತಪ್ಪಿಗೆ ಏನೇನೋ ಅನುಭವಿಸಬೇಕಾಯ್ತು. ಆ ಹುಡುಗನ ಬಗ್ಗೆ ಆ ಸಮಯದಲ್ಲಿ ಮಾತನಾಡಿ, ನಮಗೆ ಉಪಕಾರ ಮಾಡಿರುವ ಇಬ್ಬರು ಹುಡುಗಿಯರಿಗೆ ಧನ್ಯವಾದ ಹೇಳುತ್ತೇನೆ. ಏನೂ ಅನ್ನೋದನ್ನ ಗೊತ್ತು ಮಾಡಿದ್ದೀರಿ. ಆ ಹುಡುಗಿಯರು ಯಾರೂ ಅಂತ ಗೊತ್ತಿಲ್ಲ. ವೈಷ್ಣವಿ ಕಷ್ಟದ ಸಮಯದಲ್ಲಿ ನೀವೆಲ್ಲಾ ಅವಳ ಜೊತೆ ಇದ್ರಿ. ನಿಮಗೂ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ

    ಈಗ ನಿಶ್ಚಯವಾಗಿರುವ ಮಗಳ ಮದುವೆ ಬಗ್ಗೆ ಪ್ರತಿಕ್ರಿಯಿಸಿ, ಉತ್ತರದಿಂದ ದಕ್ಷಿಣದ ಸಂಬಂಧ ಇದು. ದೇವರು ಎಲ್ಲಾ ನಿಶ್ಚಯ ಮಾಡಿರುತ್ತಾನೆ. ವೈಷ್ಣವಿಗೆ ಈ ಗಂಡು ನಾವು ನೋಡಿರೋದು. ಮ್ಯಾಟ್ರಿಮೋನಿಯಲ್ಲಿ (Matrimony) ನೋಡಿ ನಿಶ್ಚಯ ಮಾಡಿರುವುದು. ಅವರಿಬ್ಬರಿಗೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕೊಟ್ಟದ್ದೆವು ಎಂದು ತಿಳಿಸಿದರು.

    ಮಿಲಿಟರಿ ಹುಡುಗ ಬೇಕು:
    ಮಿಲಿಟರಿಯಲ್ಲಿ ಕೆಲಸ ಮಾಡೋ ಹುಡುಗ ಬೇಕು ಎಂದು ನಮ್ಮ ತಂದೆಗೆ ಆಸೆ ಇತ್ತು. ನಮ್ಮ ಫ್ಯಾಮಿಲಿಯಲ್ಲಿ ಹಿಂದೆ ಯಾರೂ ಇರಲಿಲ್ಲ. ಈಗ ದೇಶಸೇವೆ ಮಾಡೋವ್ರು ಬಂದ್ರು ಅನ್ನೋದು ಖುಷಿ ಇದೆ. ಕೆಲವರು ಮಗಳ ಬಗ್ಗೆ ಏನೇನೋ ಮಾತಾಡ್ತಾರೆ. ಟ್ರೋಲ್ ಮಾಡುತ್ತಾರೆ. ನಿಜಾಂಶ ಏನೂ ಎಂದು ಸರಿಯಾಗಿ ತಿಳಿದುಕೊಂಡಿರಬೇಕಾಗುತ್ತದೆ ಎಂದರು. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

    ನಾವು 2017ರಲ್ಲಿ ಎಲ್‌ಎಲ್‌ಬಿ ಓದಿ ವಕೀಲೆ ಆಗಿದ್ದೀನಿ. ಜೊತೆಗೆ ಸೈಕಾಲಜಿಯಲ್ಲಿ ಎಂಎಸ್‌ಸಿ ಓದಿದ್ದೇನೆ. ನನ್ನಂತೆ ನನ್ನ ಮಗಳಿಗೂ ಮದುವೆ ಬಳಿಕ ಪ್ರೋತ್ಸಾಹ ಕೊಡುವ ಗಂಡ ಸಿಕ್ಕಿದ್ದಾರೆ ಎಂದು ಖುಷಿ ಇದೆ. ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋದಕ್ಕೆ ಇದುವೇ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

    ಮಗಳು ಬಯಸಿದಂತೆ ಸಂಬಂಧ ಸಿಕ್ಕಿದೆ
    ವೈಷ್ಣವಿ ತಂದೆ ರವಿಕುಮಾರ್ ಅವರು ಮಗಳ ಮದುವೆ (Marriage) ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಒಳ್ಳೆಯ ಅಳಿಯ ಸಿಕ್ಕಿದ್ದಾರೆ. ವೈಷ್ಣವಿ ನಿಮ್ಮೆಲ್ಲರ ಮನೆ ಮಗಳು ಎಲ್ಲರಿಗೂ ತಿಳಿಸಿಯೇ ಮದುವೆ ಮಾಡುತ್ತೇವೆ. ಅವಳು ಬಯಸಿದಂತೆ ಸಂಬMಧ ಸಿಕ್ಕಿದೆ. ದೇಶ ಸೇವೆ ಮಾಡುವ ಅಳಿಯ ಸಿಕ್ಕಿದ್ದಾರೆ ಎಂದರು.

    ಮಗಳ ಬಗ್ಗೆ ಸುಮ್ನೆ ಟ್ರೋಲ್ ಮಾಡ್ಬೇಡಿ
    ಇಬ್ಬರಿಗೂ ಇಕ್ವೇಲ್ ಆಗಿಯೇ, ಗಂಡು ಹೆಣ್ಣಿಗೆ ಏನು ವಯಸ್ಸಿರಬೇಕೋ ಅದು ಇದೆ. ಮಿಲಿಟರಿ ಅಂದ್ಮೇಲೆ, ಹೈಟ್, ವೆಯಿಟ್, ಕಲರ್ ಎಲ್ಲಾ ಸರಿ ಇದೆ. ಮ್ಯಾಚ್ ಆಗಿದೆ. ಅದೇ ಥರ ಜೋಡಿ ಸರಿಯಾಗಿದೆ. ಸುಮ್ನೆ ಏನೇನೋ ಟ್ರೋಲ್ ಮಾಡಬೇಡಿ ಎಂದು ಟ್ರೋರ‍್ಸ್ಗಳಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

    ಮೊದಲು ನನ್ನ ಮಗಳು ದೇವಿ ಸೀರಿಯಲ್‌ಗೆ ಸೆಲೆಕ್ಟ್ ಆಗಿ, ಇಲ್ಲಿವರೆಗೂ ಅಭಿನಯಿಸಿಕೊಂಡು ಬಂದಿದ್ದಾಳೆ. ನನ್ನ ಮಗಳು ನಾನ್ ವೆಜ್ (Non-Veg) ತಿನ್ನಲ್ಲ. ಅವರೂ ವೆಜಿಟೇರಿಯನ್ ಕುಟುಂಬ. ಅಲ್ಲಿಗೆ ಸರಿ ಹೋಯ್ತು ನೋಡಿ. ದೇವರೇ ಒಬ್ಬರಿಗೊಬ್ಬರನ್ನ ಜೋಡಿ ಮಾಡಿರುತ್ತಾನೆ. ವೈಷ್ಣವಿ ನಿಮ್ಮ ಮನೆ ಮಗಳು ಎಲ್ಲರನ್ನೂ ಕರೆದು ಮುಚ್ಚುಮರೆ ಏನೂ ಇಲ್ಲದೇ, ಮದುವೆ ಮಾಡುತ್ತೇವೆ ಎಂದರು.

  • ನಟಿ ವಿ.ಜೆ ಚಿತ್ರಾ ಸಾವು ಪ್ರಕರಣ- ಸತತ 6 ದಿನಗಳ ತನಿಖೆಯ ಬಳಿಕ ಪತಿ ಅರೆಸ್ಟ್

    ನಟಿ ವಿ.ಜೆ ಚಿತ್ರಾ ಸಾವು ಪ್ರಕರಣ- ಸತತ 6 ದಿನಗಳ ತನಿಖೆಯ ಬಳಿಕ ಪತಿ ಅರೆಸ್ಟ್

    ಚೆನ್ನೈ: ಖ್ಯಾತ ಧಾರಾವಾಹಿ ನಟಿ ವಿ.ಜೆ ಚಿತ್ರಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಕೆಯ ಪತಿ ಹೇಮನಾಥ್ ನನ್ನು ಚೆನ್ನೈನ ನಜರತ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

    ಕಳೆದ ವಾರ ಚೆನ್ನೈನ ಹೋಟೆಲೊಂದರಲ್ಲಿ ವಿ.ಜೆ ಚಿತ್ರಾ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಕೈಗೆತ್ತಿಕೊಂಡು ಪೊಲೀಸರು, ಚಿತ್ರಾ ಸಾವಿಗೆ ಮಾನಸಿಕ ಒತ್ತಡವೇ ಕಾರಣವಾಯಿತೇ…? ತನ್ನ ತಾಯಿ ಹಾಗೂ ಮದುವೆಯಾಗಬೇಕಿದ್ದ ಹುಡುಗನಿಂದಾಗಿಯೇ ಚಿತ್ರಾ ಸಾವನ್ನಪ್ಪಿದರಾ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ತನಿಖೆ ಆರಂಭಿಸಿದ್ದರು. ಈ ವೇಳೆ ಮಹತ್ವದ ಅಂಶಗಳು ಬಯಲಾಗಿದೆ ಎನ್ನಲಾಗಿತ್ತು.

    ಈ ಹಿನ್ನೆಲೆಯಲ್ಲಿ ಚಿತ್ರಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹೇಮನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದು ಸುಮಾರು 6 ದಿನಗಳ ಕಾಲ ತನಿಖೆ ನಡೆಸಿದ ಬಳಿಕ ಪೊಲೀಸರು ಇಂದು ಹೇಮನಾಥ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ. ಅಲ್ಲದೆ ಹೇಮನಾಥ್ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ತಾಯಿ ವಿಜಯ ಹಾಗೂ ಪ್ರಿಯಕರ ಹೇಮನಾಥ್ ಅವರಿಂದ ಚಿತ್ರಾ ಅವರ ಮೇಲೆ ತೀವ್ರ ಒತ್ತಡವಿತ್ತು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇವರಿಬ್ಬರ ಒತ್ತಡದಿಂದಾಗಿ ಚಿತ್ರಾ ಮಾನಸಿಕವಾಗಿ ತುಂಬಾ ನೊಂದಿದ್ದರು. ಅಲ್ಲದೇ ಸೀರಿಯಲ್ ಶೂಟಿಂಗ್ ಲೊಕೇಷನ್‍ಗೆ ಹೇಮನಾಥ್ ಮದ್ಯಸೇವಿಸಿ ಬಂದು ಚಿತ್ರಾ ಜೊತೆ ಗಲಾಟೆ ಮಾಡಿದ್ದ ಎಂಬ ಅಂಶವೂ ತನಿಖೆ ವೇಳೆ ಬಯಲಿಗೆ ಬಂದಿತ್ತು.

    ಈ ವಿಚಾರ ಗೊತ್ತಾದ ಮೇಲೆ ತಾಯಿ ವಿಜಯಾ ಅವರು ಹೇಮನಾಥ್‍ನನ್ನು ಮದುವೆಯಾಗಬೇಡ, ಬದಲಿಗೆ ಬೇರೆ ಯಾರನ್ನು ಬೇಕಾದರೂ ಮದುವೆಯಾಗು ಎಂದು ಹಠ ಹಿಡಿದಿದ್ದರು. ಆದರೆ ವಿವಾಹ ನಿಶ್ಚಿತಾರ್ಥ ನಡೆದ ಬಳಿಕ ಫೆಬ್ರವರಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿದ್ದರೂ ಮನೆಯವರಿಗೆ ಹೇಳದೇ ಇಬ್ಬರೂ ರಿಜಿಸ್ಟರ್ ಮದುವೆ ಆಗಿದ್ದರು. ಒಂದು ಕಡೆ ಅಮ್ಮನ ಒತ್ತಡ, ಇನ್ನೊಂದು ಕಡೆ ಭಾವಿ ಪತಿಯ ಗಲಾಟೆಯಿಂದಾಗಿ ಚಿತ್ರಾ ತುಂಬಾ ನೊಂದಿದ್ದರು ಎಂದು ಪೊಲೀಸರು ಹೇಳಿದ್ದರು.

  • ಫ್ರೆಶ್ ಆಗಿ ಬರ್ತೀನಿ ಅಂತ ಹೋದವ್ಳು ಮತ್ತೆ ಬರಲೇ ಇಲ್ಲ – ನಟಿ ಭಾವಿ ಪತಿ

    ಫ್ರೆಶ್ ಆಗಿ ಬರ್ತೀನಿ ಅಂತ ಹೋದವ್ಳು ಮತ್ತೆ ಬರಲೇ ಇಲ್ಲ – ನಟಿ ಭಾವಿ ಪತಿ

    – ನಸುಕಿನ ಜಾವವೇ ಆತ್ಮಹತ್ಯೆ ಮಾಡ್ಕೊಂಡ್ರಾ ಚಿತು?

    ಚೆನ್ನೈ: ತಮಿಳು ಧಾರಾವಾಹಿ ನಟಿ ವಿಜೆ ಚಿತ್ರಾ ಅವರ ಮೃತದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೀತಿಯಲ್ಲಿ  ಪತ್ತೆಯಾಗಿದ್ದು, ಇದೀಗ ಅವರ ಭಾವಿ ಪತಿ ಘಟನೆ ಬಗ್ಗೆ ವಿವರಿಸಿದ್ದಾರೆ.

    ಹೌದು. ಕೆಲವು ತಿಂಗಳ ಹಿಂದೆ ನಟಿ ಉದ್ಯಮಿ ಹೇಮಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಬಗ್ಗೆ ನಟಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಕೂಡ ಫೋಟೋ ಹಾಕಿಕೊಂಡಿದ್ದರು. ನಿಶ್ಚಿತಾರ್ಥ ಬಳಿಕದಿಂದ ಜೋಡಿ ಚೆನ್ನೈನಲ್ಲಿರುವ ಖಾಸಗಿ ಪಂಚತಾರಾ ಹೋಟೆಲೊಂದರಲ್ಲಿ ಉಳಿದುಕೊಂಡಿತ್ತು. ಇಂದು ನಸುಕಿನ ಜಾವ 2.30 ಸುಮಾರಿಗೆ ಶೂಟಿಂಗ್ ಮುಗಿಸಿಕೊಂಡು ಚಿತ್ರಾ ರೂಮಿಗೆ ಬಂದಿದ್ದಾರೆ.

    ರೂಮಿಗೆ ಬಂದ ಚಿತ್ರಾ ತನ್ನ ಭಾವಿ ಪತಿ ಬಳಿ, ಫ್ರೆಶ್ ಆಗಿ ಬರುವುದಾಗಿ ಹೇಳಿ ಪತಿ ಬಳಿಯಿಂದ ತೆರಳಿದ್ದಾರೆ. ಆದರೆ ಸುಮಾರು ಕೆಲ ಹೊತ್ತಾದರೂ ನಟಿ ಬರದೇ ಇದ್ದಾಗ ಹೇಮಂತ್ ರೂಮ್ ಬಾಗಿಲು ಬಡಿದಿದ್ದಾರೆ. ಈ ವೇಳೆ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದರಿಂದ ಗಾಬರಿಗೊಂಡ ಅವರು ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

    ತಕ್ಷಣವೇ ಸ್ಥಳಕ್ಕೆ ಬಂದ ಸಿಬ್ಬಂದಿ ನಕಲಿ ಕೀ ಮೂಲಕ ರೂಮ್ ಬಾಗಿಲು ತೆರೆದಿದ್ದಾರೆ. ಈ ವೇಳೆ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಚಿತು ಅಂತಾನೇ ಚಿರಪರಿಚಿತರಾಗಿದ್ದ ಚಿತ್ರಾ ಅವರು ಜನಪ್ರಿಯ ತಮಿಳು ಕಾರ್ಯಕ್ರಮ ಪಾಂಡಿಯನ್ ಸ್ಟೋರ್ಸ್ ನಲ್ಲಿ ಮುಲ್ಲೈ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದರು. ಚಿತ್ರಾ ಅವರು ಕಾರ್ಯಕ್ರಮ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ತನ್ನ ಮುಲ್ಲೈ ಪಾತ್ರದ ಮೂಲಕ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿದ್ದ ಚಿತ್ರಾ, ಆಗಾಗ ತನ್ನ ಫೋಟೋ ಹಾಗೂ ಕೆಲವೊಂದು ಪೋಸ್ಟ್ ಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಅಲ್ಲದೆ ಕೆಲವೊಂದು ಕಾಮಿಡಿ ಪೋಸ್ಟ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

    ಒಟ್ಟಿನಲ್ಲಿ ಚಿತ್ರಾ ಆತ್ಮಹತ್ಯೆ ವಿಚಾರ ಇಡೀ ಚಿತ್ರರಂಗಕ್ಕೆ ಹಾಗೂ ಅಭಿಮಾನಿ ಬಳಗಕ್ಕೆ ನೋವುಂಟು ಮಾಡಿದ್ದು, ಖಿನ್ನತೆಯೇ ಆಕೆಯ ಸೂಸೈಡ್ ಗೆ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಚಿತ್ರಾ ಆತ್ಮಹತ್ಯೆಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.

  • ಪ್ರಸಿದ್ಧ ಧಾರಾವಾಹಿ ನಟಿ ಮೇಲೆ ಪೆಟ್ರೋಲ್ ಬಂಕ್ ಸಿಬ್ಬಂದಿ ದೌರ್ಜನ್ಯ

    ಪ್ರಸಿದ್ಧ ಧಾರಾವಾಹಿ ನಟಿ ಮೇಲೆ ಪೆಟ್ರೋಲ್ ಬಂಕ್ ಸಿಬ್ಬಂದಿ ದೌರ್ಜನ್ಯ

    ಕೋಲ್ಕತ್ತಾ: ಮಾಡೆಲ್, ಬೆಂಗಾಲಿ ಸೀರಿಯಲ್ ನಟಿಯ ಮೇಲೆ ಪೆಟ್ರೋಲ್ ಬಂಕ್ ಸಿಬ್ಬಂದಿ ದೌರ್ಜನ್ಯ ಎಸಗಿರುವ ಘಟನೆ ಭಾನುವಾರ ಬೆಳಗ್ಗೆ ದಕ್ಷಿಣ ಕೋಲ್ಕತ್ತಾದಲ್ಲಿ ನಡೆದಿದೆ.

    ತಾನು ಹೇಳಿದ್ದಕ್ಕಿಂತ ಜಾಸ್ತಿ ಪೆಟ್ರೋಲ್ ಹಾಕಿದ್ದನ್ನು ಪ್ರಶ್ನಿಸಿದಾಗ ಸಿಬ್ಬಂದಿ ನಟಿ ಜೂಹಿ ಸೆನ್ ಗುಪ್ತಾ ಮೇಲೆ ದೌರ್ಜನ್ಯವೆಸಗಿದ್ದಾರೆ. ಮತ್ತು ಆಕೆಯ ತಂದೆಯ ಮೇಲೆಯೂ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ನಡೆದಿದ್ದೇನು?
    ಭಾನುವಾರ ಬೆಳಗ್ಗೆ ನಟಿ, ಪೋಷಕರೊಂದಿಗೆ ಕಸ್ಬಾ ಪ್ರದೇಶದಲ್ಲಿರುವ ಬಂಕ್ ಬಳಿ ತನ್ನ ಕಾರಿಗೆ ಪೆಟ್ರೋಲ್ ತುಂಬಿಸಲೆಂದು ತೆರಳಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ನಟಿ ಹೇಳಿದ್ದಕ್ಕಿಂತ ಹೆಚ್ಚು ಅಂದರೆ, 1,500 ರೂ. ಪೆಟ್ರೋಲ್ ಹಾಕುವ ಮೂಲಕ ಟ್ಯಾಂಕ್ ನಿಂದ ಪೆಟ್ರೋಲ್ ಸೋರುವಂತೆ ಮಾಡಿದ್ದಾರೆ.

    ಈ ವಿಚಾರ ನಟಿ ಗಮನಕ್ಕೆ ಬಂದಿದ್ದು, ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅವರು ತನ್ನ ತಪ್ಪನ್ನು ಒಪ್ಪಿಕೊಂಡು ಹೆಚ್ಚುವರಿ ಪೆಟ್ರೋಲಿನ ಹಣವನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ. ಆದರೆ ಈ ವಿಚಾರವನ್ನು ನಟಿ ತಂದೆ ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ನಟಿ, ತಂದೆಯ ಮಧ್ಯೆ ವಾಗ್ವಾದ ನಡೆದಿದೆ. ಜಗಳ ತಾರಕ್ಕೇರಿ ನಟಿ ತಂದೆಯ ಮೇಲೆ ಸಿಬ್ಬಂದಿ ಹಲ್ಲೆ ಮಾಡಲು ಯತ್ನಿಸಿದ್ದಾರೆ.

    ಇಷ್ಟು ಮಾತ್ರವಲ್ಲದೆ ಕಾರಿನ ಕೀಯನ್ನು ಕೂಡ ತೆಗೆದುಕೊಂಡಿದ್ದಾರೆ. ಪರಿಣಾಮ ಜಗಳ ತಾರಕ್ಕೇರಿದೆ. ಪರಿಸ್ಥಿತಿಯನ್ನು ಅರಿತು ಕೂಡಲೇ ಪೊಲೀಸರಿಗೆ ಕರೆ ಮಾಡಿರುವುದುದಾಗಿ ನಟಿ ಹೇಳಿದ್ದಾರೆ. ನಟಿ ಆರೋಪವನ್ನು ಸಿಬ್ಬಂದಿ ತಳ್ಳಿಹಾಕಿದ್ದಾರೆ.

    ಈ ಎಲ್ಲಾ ಘಟನೆಯನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಇದುವರೆಗೂ ಯಾರನ್ನು ಬಂಧಿಸಿಲ್ಲ. ಪೆಟ್ರೋಲ್ ಬಂಕ್ ನಲ್ಲಿರುವ ಸಿಸಿಟಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.