Tag: ಸೀಮಾ

  • ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ದಂಪತಿ

    ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ದಂಪತಿ

    ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ದಂಪತಿಯ ವಿಚ್ಛೇಧನ ವಿಚಾರ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ದಂಪತಿ ಇಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 24 ವರ್ಷಗಳ ವೈವಾಹಿಕ ಬದುಕಿಗೆ ಕಡಿವಾಣ ಹಾಕಿದ್ದಾರೆ.

    ಸಲ್ಮಾನ್ ಖಾನ್ ಕುಟುಂಬದ ವಿಚಾರ ಅದರಲ್ಲೂ ಮದುವೆ ವಿಚಾರ ಆಗಾಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುತ್ತದೆ. ಕೆಲ ವರ್ಷಗಳ ಹಿಂದೆ ಅರ್ಬಾಜ್ ಖಾನ್ ಮತ್ತು ಮಲೈಕಾ ದಂಪತಿಯ ಡಿವೋರ್ಸ್ ವಿಚಾರ ಬಾಲಿವುಡ್‌ನಲ್ಲಿ ಸುದ್ದಿ ಮಾಡಿತ್ತು. ಈಗ ಸಲ್ಮಾನ್ ಖಾನ್ ಮತ್ತೊಬ್ಬ ಸಹೋದರ ಕೂಡ ವಿಚ್ಛೇದನ ಕೊಡಲು ಮುಂದಾಗಿದ್ದಾರೆ. ಸೋಹೈಲ್ ಮತ್ತು ಸೀಮಾ ಇಂದು ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಇಬ್ಬರು ಬೇರೆ ಬೇರೇ ಹೊರಟಿದ್ದಾರೆ. ಇದು ವಿಚ್ಚೇದನ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

    ಸೋಹೈಲ್ ಖಾನ್ ಮತ್ತು ಸೀಮಾ 1998ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ನಿರ್ವಾನ್ ಮತ್ತು ಯೋಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷಗಳಿಂದ ಇವರಿಬ್ಬರ ವಿಚ್ಚೇದನ ವಿಚಾರ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿತ್ತು. ಈಗ ಸೋಹೈಲ್ ದಂಪತಿ ಡಿವೋರ್ಸ್ ವಿಚಾರವಾಗಿ ಅರ್ಜಿ ಸಲ್ಲಿಸಿರುವುದರ ಕುರಿತು ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಕನ್ನಡದ ‘ಮ್ಯಾನ್ ಆಫ್ ದ ಮ್ಯಾಚ್’ ಚಿತ್ರ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ

    ಸಮಂತಾ ಮತ್ತು ನಾಗಚೈತನ್ಯ, ಅಮೀರಾ ಖಾನ್ ದಂಪತಿಯ ಡಿವೋರ್ಸ್ ವಿಷ್ಯ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಸೋಹೈಲ್ ದಂಪತಿಯ ವಿಚ್ಛೇದನ ವಿಚಾರ ಭಾರೀ ಸುದ್ದಿ ಮಾಡುತ್ತಿದೆ.

  • ಮೈಸೂರು ಶ್ವಾನ ದಳದ ಹಿರಿಯ ನಾಯಿ ಸೀಮಾ ನಿಧನ

    ಮೈಸೂರು ಶ್ವಾನ ದಳದ ಹಿರಿಯ ನಾಯಿ ಸೀಮಾ ನಿಧನ

    ಮೈಸೂರು: ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಶ್ವಾನ ಸೀಮಾ ನಿಧನವಾಗಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರವನ್ನು ಇಂದು ನೆರವೇರಿಸಲಾಯಿತು.

    2009ರ ನವೆಂಬರ್‌ 14 ರಂದು ಸೂಕ್ತ ತರಬೇತಿಯೊಂದಿಗೆ ಸೀಮಾ ಮೈಸೂರು ನಗರ ಪೊಲೀಸ್‌ ಘಟಕದ ಶ್ವಾನದಳವನ್ನು ಸೇರಿತ್ತು. ಡಾಗ್ ಶೋ, ಮಾಕ್ ಡ್ರಿಲ್( ಅಣುಕು ಕಾರ್ಯಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶೀಮಾ ಶ್ವಾನ, ಗಣ್ಯ ವ್ಯಕ್ತಿಗಳ ಭದ್ರತೆ ಮತ್ತು ನಾಡಹಬ್ಬ ಭದ್ರತೆ ಬಂದೋಬಸ್ತ್‌ ಕರ್ತವ್ಯದ ಸಂದರ್ಭದಲ್ಲಿ ಎಎಸ್‍ಸಿ ತಂಡದೊಂದಿಗೆ ಉತ್ತಮ ಕರ್ತವ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿತ್ತು.

     

    2016ನೇ ಸಾಲಿನಲ್ಲಿ ಮೈಸೂರು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ಶ್ವಾನವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಪ್ರಶಂಸೆಗಳಿಸಿತ್ತು. ಇಲಾಖೆಯಲ್ಲಿ ಸುಮಾರು 11 ವರ್ಷ 2 ತಿಂಗಳು ಯಶಸ್ವಿಯಾಗಿ ಸೇವೆ ಸಲ್ಲಿಸಿ ವಯೋ ಸಹಜ ಖಾಯಿಲೆಯಿಂದ ಮರಣ ಹೊಂದಿದೆ.

    ಡಿಸಿಪಿ ಸಿಎಆರ್ ಕೇಂದ್ರ ಸ್ಥಾನದ ಶಿವರಾಜು ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಎಸಿಪಿ ಸುದರ್ಶನ್, ಶ್ವಾನದಳದ ಉಸ್ತುವಾರಿ ಅಧಿಕಾರಿ ಮೂರ್ತಿ ಕೆ.ಎಂ, ಆರಕ್ಷಕ ನಿರೀಕ್ಷಕರು, ಸುರೇಶ್ ಉಪ ನಿರೀಕ್ಷಕರು, ಹಾಗೂ ಶ್ವಾನ ದಳದ ಇತರೆ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.