Tag: ಸೀಮಂತ ಕಾರ್ಯ

  • ಡಬಲ್ ಸಂಭ್ರಮದಲ್ಲಿ ರಿಷಬ್ ಶೆಟ್ಟಿ

    ಡಬಲ್ ಸಂಭ್ರಮದಲ್ಲಿ ರಿಷಬ್ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಲ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಂದೆಯಾಗುವ ಖುಷಿಯಲ್ಲಿದ್ದಾರೆ. ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ತುಂಬು ಗರ್ಭಿಣಿಯಾಗಿದ್ದು, ಅವರ ಸೀಮಂತ ಕಾರ್ಯ ಶುಕ್ರವಾರ ಅದ್ಧೂರಿಯಾಗಿ ನಡೆದಿದೆ.

    ಈ ಸೀಮಂತ ಕಾರ್ಯಕ್ಕೆ ಸ್ಯಾಂಡಲ್‍ವುಡ್ ತಾರೆಯರು ಆಗಮಿಸಿ ಹಾರೈಸಿದ್ದಾರೆ. ಬೆಲ್ ಬಾಟಂ ಸಿನಿಮಾದ ನಾಯಕಿ ಹರಿಪ್ರಿಯಾ ಅವರು ಕೂಡ ಸೀಮಂತ ಕಾರ್ಯದಲ್ಲಿ ಹಾಜರಿದ್ದರು. ಪ್ರಗತಿ, ರಿಷಬ್ ಶೆಟ್ಟಿ ಹಾಗೂ ಅವರ ಕುಟುಂಬದ ಜೊತೆಗಿರುವ ಫೋಟೋಗಳನ್ನು ಹರಿಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ರಿಷಬ್ ಅವರಿಗೆ ಒಂದು ಕಡೆ ಬೆಲ್ ಬಾಟಂ ಸಿನಿಮಾ ಗೆಲುವು, ಮತ್ತೊಂದು ಕಡೆ ತಂದೆಯಾಗುವ ಖುಷಿ. ಕುಂದಾಪುರ ಮೂಲದ ರಿಷಬ್ ಶೆಟ್ಟಿಯವರು 2017 ಫೆಬ್ರವರಿ 9ರಂದು ಪ್ರಗತಿ ಜೊತೆ ಸಪ್ತಪದಿ ತುಳಿದಿದ್ದರು. ಸ್ಯಾಂಡಲ್‍ವುಡ್ ಬಹುತೇಕ ಕಲಾವಿದರು ಮದುವೆಯಲ್ಲಿ ಭಾಗವಹಿಸಿ ವಧು-ವರರಿಗೆ ಶುಭಕೋರಿದ್ದರು.

    ಪ್ರಗತಿ ಅವರ ಸೀಮಂತ ಕಾರ್ಯಕ್ರಮದಲ್ಲಿ ರಿಷಬ್ ಆತ್ಮೀಯ ಸ್ನೇಹಿತ, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸೇರಿದಂತೆ ಬಹಳಷ್ಟು ಜನ ಆಪ್ತರು ಭಾಗಿಯಾಗಿದ್ದರು. ಜಯತೀರ್ಥ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ಬೆಲ್ ಬಾಟಂ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, 5ನೇ ವಾರಕ್ಕೆ ಕಾಲಿಟ್ಟಿದೆ.