Tag: ಸೀಬೆ ಹಣ್ಣಿನ ಬರ್ಫಿ

  • ಸೀಬೆ ಹಣ್ಣಿನಿಂದ ಬರ್ಫಿ ಮಾಡಿ ನೋಡಿ

    ಸೀಬೆ ಹಣ್ಣಿನಿಂದ ಬರ್ಫಿ ಮಾಡಿ ನೋಡಿ

    ಸೀಸನ್‌ನಲ್ಲಿ ಸೀಬೆ ಹಣ್ಣು ಹೇರಳವಾಗಿ ಬೆಳೆಯುತ್ತದೆ. ಬಾಯಲ್ಲಿ ನೀರು ತರುವ ಸೀಬೆ ಹಣ್ಣಿನ ಜ್ಯೂಸ್ ಅಥವಾ ಸಲಾಡ್ ಅನ್ನು ನಾವು ಸವಿದಿರುತ್ತೇವೆ. ಇದು ಜೀರ್ಣಕ್ರಿಯೆಗೂ ಉತ್ತಮವಾಗಿದೆ. ಇಂದು ನಾವು ಈ ರುಚಿಕರವಾದ ಸೀಬೆ ಹಣ್ಣಿನಿಂದ ಬರ್ಫಿ (Guava Barfi) ಮಾಡೋಣ. ಸೀಬೆ ಹಣ್ಣಿನಿಂದ ಬರ್ಫಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ತಾಜಾ ಹಾಲು – ಅರ್ಧ ಕಪ್
    ಸೀಬೆ ಹಣ್ಣಿನ ತಿರುಳು – 1 ಕಪ್
    ಫ್ರೆಶ್ ಕ್ರೀಂ – 2 ಟೀಸ್ಪೂನ್
    ಸಕ್ಕರೆ – 1 ಕಪ್
    ತುರಿದ ತೆಂಗಿನಕಾಯಿ – 3 ಕಪ್
    ತುಪ್ಪ – 2 ಟೀಸ್ಪೂನ್
    ನಿಂಬೆ ಸರ – 1 ಟೀಸ್ಪೂನ್
    ಒಣ ಹಣ್ಣುಗಳು – ಅಲಂಕಾರಕ್ಕೆ

    ಮಾಡುವ ವಿಧಾನ:
    * ಮೊದಲಿಗೆ ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ, ಅದು ಅರ್ಧದಷ್ಟಾಗುವವರೆಗೆ ಕುದಿಸಿ.
    * ಅದಕ್ಕೆ ಸಕ್ಕರೆ ಹಾಗೂ ತೆಂಗಿನ ತುರಿ ಸೇರಿಸಿ ದಪ್ಪ ಮಿಶ್ರಣ ಮಾಡಿ.
    * ಇನ್ನೊಂದು ಪಾತ್ರೆಯಲ್ಲಿ ಸೀಬೆ ಹಣ್ಣಿನ ತಿರುಳನ್ನು ತುಪ್ಪದೊಂದಿಗೆ ಬೇಯಿಸಿ.
    * ಹಣ್ಣಿನ ತಿರುಳು ತುಪ್ಪವನ್ನು ಬಿಡಲಾರಂಭಿಸಿದಾಗ ಅದಕ್ಕೆ ಫ್ರೆಶ್ ಕ್ರೀಂ ಸೇರಿಸಿ.
    * ನಂತರ ನಿಂಬೆ ರಸವನ್ನು ಸೇರಿಸಿ, ಹಾಲಿನ ಮಿಶ್ರಣವನ್ನೂ ಅದಕ್ಕೆ ಹಾಕಿ ಮಿಕ್ಸ್ ಮಾಡಿ.
    * ಈ ಮಿಶ್ರಣವನ್ನು ಇನ್ನೂ 10 ನಿಮಿಷ ಬೇಯಿಸಿ, ದಪ್ಪವಾಗಲು ಬಿಡಿ.
    * ಕೊನೆಯದಾಗಿ ಏಲಕ್ಕಿ ಪುಡಿ ಸೇರಿಸಿ, ತುಪ್ಪ ಸವರಿದ ಬಟ್ಟಲಿನಲ್ಲಿ ಹಾಕಿ ಆಕಾರ ನೀಡಿ.
    * ಈಗ ಒಣ ಹಣ್ಣುಗಳಿಂದ ಅಲಂಕರಿಸಿ, ತಣ್ಣಗಾದ ಬಳಿಕ ಸೀಬೆ ಹಣ್ಣಿನ ಬರ್ಫಿಯನ್ನು ಸವಿಯಿರಿ.

    Live Tv
    [brid partner=56869869 player=32851 video=960834 autoplay=true]