Tag: ಸೀನಿಯರ್

  • Tamil Nadu | ಕಳ್ಳತನದ ಆರೋಪ – ಸೀನಿಯರ್ ಮೇಲೆ ಜೂನಿಯರ್ಸ್ ಹಲ್ಲೆ, 13 ವಿದ್ಯಾರ್ಥಿಗಳು ಸಸ್ಪೆಂಡ್

    Tamil Nadu | ಕಳ್ಳತನದ ಆರೋಪ – ಸೀನಿಯರ್ ಮೇಲೆ ಜೂನಿಯರ್ಸ್ ಹಲ್ಲೆ, 13 ವಿದ್ಯಾರ್ಥಿಗಳು ಸಸ್ಪೆಂಡ್

    ಚೆನ್ನೈ: ಹಿರಿಯ ವಿದ್ಯಾರ್ಥಿಯ (Senior) ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 13 ಪದವಿಪೂರ್ವ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಘಟನೆ ತಮಿಳುನಾಡಿನ (Tamil Nadu) ಕೊಯಮತ್ತೂರಿನ (Coimbatore) ಕಾಲೇಜೊಂದರಲ್ಲಿ ನಡೆದಿದೆ.

    ಮಾರ್ಚ್ 20 ರಂದು ಕ್ಯಾಂಪಸ್‌ನಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಜೂನಿಯರ್‌ಗಳು ಸೀನಿಯರ್ ಮೇಲೆ ಹಲ್ಲೆ ನಡೆಸಿದ್ದಾರೆ. ಸಂಸ್ಥೆಯ ಉಪಮುಖ್ಯ ವಾರ್ಡನ್ ಡಾ. ಮಹೇಶ್ವರನ್ ಘಟನೆಯನ್ನು ದೃಢಪಡಿಸಿದ್ದು, ಕಾಲೇಜು ಆಡಳಿತ ಮಂಡಳಿ ಈ ಕುರಿತು ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲೂ ಕರ್ನಾಟಕ ಮಾದರಿ ಪಿಎಸ್‌ಐ ಹಗರಣ – ತಪ್ಪು ರಜಾ ಚೀಟಿ ಬರೆದು ಸಿಕ್ಕಿಬಿದ್ದ ಟಾಪರ್!

    ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮಹೇಶ್ವರನ್, ಈ ವಿಷಯದ ಬಗ್ಗೆ ತನಿಖೆ ನಡೆಸಲು ಪ್ರಾಂಶುಪಾಲರು ಮತ್ತು ಮುಖ್ಯ ವಾರ್ಡನ್ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ 13 ವಿದ್ಯಾರ್ಥಿಗಳನ್ನು ಗುರುತಿಸಿ ಸಸ್ಪೆಂಡ್ ಮಾಡಲಾಗಿದೆ. ಪೊಲೀಸರಿಗೆ ಸಹ ಈ ಕುರಿತು ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹೇಮಾವತಿ ಕೆನಾಲ್ ಕದನ | ಮಂತ್ರಿ ಮಗನಿಗೆ ಬೆದರಿಕೆ ಹಾಕೋಕಾಗುತ್ತಾ? – ರಾಜಣ್ಣ ಪುತ್ರನಿಗೆ ಕುಣಿಗಲ್‌ ರಂಗನಾಥ್‌ ತಿರುಗೇಟು

    ಇನ್ನು ಅಮಾನತುಗೊಂಡ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಮಾರ್ಚ್ 24ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಲಾಗಿದೆ. ಕೊಯಮತ್ತೂರು ಜಿಲ್ಲಾ ಪೊಲೀಸರು ಕ್ರಿಮಿನಲ್ ಕ್ರಮವನ್ನು ಸಹ ಪ್ರಾರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಬಾಣಂತಿ, ನವಜಾತ ಶಿಶು ಸಾವು – ಕುಟುಂಬಸ್ಥರಿಂದ ಆಸ್ಪತ್ರೆ ಗಾಜು ಪುಡಿ ಪುಡಿ, ಪೀಠೋಪಕರಣ ಧ್ವಂಸ

  • ವಿದ್ಯಾರ್ಥಿಗಳ ರ‍್ಯಾಗಿಂಗ್- ಆರು ಮಂದಿ ಬಂಧನ

    ವಿದ್ಯಾರ್ಥಿಗಳ ರ‍್ಯಾಗಿಂಗ್- ಆರು ಮಂದಿ ಬಂಧನ

    ಮಂಗಳೂರು: ನರ್ಸಿಂಗ್ ಕಾಲೇಜಿನಲ್ಲಿ ರ‍್ಯಾಗಿಂಗ್ ಮಾಡಿರುವ ಕೇರಳ ಮೂಲದ ಆರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಶ್ರೀಲಾಲ್, ಶಾಹಿದ್,ಅಮ್ಜದ್, ಜುರೈಜ್, ಹುಸೈನ್, ಲಿಮ್ಸ್ ಬಂಧಿತ ವಿದ್ಯಾರ್ಥಿಗಳಾಗಿದ್ದಾರೆ. ಇವರೆಲ್ಲ ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ಜೂನಿಯರ್ಸ್ ವಾಸವಿದ್ದ ಅಪಾರ್ಟ್ಮೆಂಟ್ಗೆ ನುಗ್ಗಿ ರ‍್ಯಾಗಿಂಗ್ ಮಾಡಿದ್ದಾರೆ. ನಗರದ ಇಂದಿರಾ ನರ್ಸಿಂಗ್ ಕಾಲೇಜಿನ ಆರು ಜನ ಕೇರಳ ಮೂಲದ ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

    ಕಡಲನಗರಿ ಮಂಗಳೂರು ಶಿಕ್ಷಣಕಾಶಿ ಅಂತಾನು ಕರೆಸಿಕೊಂಡಿದೆ. ಇಲ್ಲಿ ಉನ್ನತ ಶಿಕ್ಷಣಕ್ಕಾಗಿ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊರ ಜಿಲ್ಲೆ, ರಾಜ್ಯ, ವಿದೇಶದಿಂದ ಬಂದವರಿದ್ದಾರೆ. ಕೇವಲ ಆರು ತಿಂಗಳಲ್ಲೇ ಮೂರು ರ‍್ಯಾಗಿಂಗ್ ಪ್ರಕರಣ ದಾಖಲಾಗಿದ್ದು, ಇದೀಗ ಮತ್ತೊಂದು ರ‍್ಯಾಗಿಂಗ್ ಕೇಸ್ ದಾಖಲಾಗಿದ್ದು, ಆರು ಜನ ವಿದ್ಯಾರ್ಥಿಗಳು ಅಂದರ್ ಆಗಿದ್ದಾರೆ.

    ಕೇರಳ ಮೂಲದ ದ್ವಿತೀಯ ವರ್ಷದ ವಿದಾರ್ಥಿ ಮ್ಯಾನುಯಲ್ ಬಾಬು ಹಾಗೂ ಆತನ ಸಹಪಾಠಿ ವಿದ್ಯಾರ್ಥಿಗಳಿಗೆ ಈ ಆರೋಪಿಗಳು ರ‍್ಯಾಗಿಂಗ್ ಮಾಡಿದ್ದಾರೆ. ನಾವು ಸೀನಿಯರ್ಸ್ ನಾವು ಬರೋವಾಗ ಎದ್ದು ನಿಂತು ರೆಸ್ಪೆಕ್ಟ್ ಕೊಡ್ಬೇಕು ಎಂದು ಹೋಟೆಲ್ ಒಂದರಲ್ಲಿ ರ್ಯಾಗಿಂಗ್ ನಡೆಸಿದ್ದರು. ಇಷ್ಟು ಮಾತ್ರವಲ್ಲದೇ ವಿದ್ಯಾರ್ಥಿಗಳು ವಾಸವಿದ್ದ ಅಪಾಟ್ಮೆರ್ಂಟ್‍ನ ರೂಮ್‍ಗೆ ಎಂಟ್ರಿ ಕೊಟ್ಟು ಒಳ ಚಡ್ಡಿಯಲ್ಲಿ ನಿಲ್ಲಿಸಿ ಹಲ್ಲೆ ಮಾಡಿದ್ದಾರೆ. ನಾವು ಬರೋವಾಗ ನೀವು ತಲೆ ತಗ್ಗಿಸಿ ಕುಳಿತುಕೊಳ್ಳಬೇಕು, ನಾವು ಹೇಳಿದಂತೆ ಕೇಳಬೇಕು, ಕಾಲೇಜಿಗೆ ಬರುವಾಗಲು ನಮ್ಮ ಎದುರು ಅಡಿಗೆ ತಲೆ ಹಾಕಿಕೊಂಡು ಹೋಗಬೇಕು ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಒಡ್ಡಿದ್ದರು. ಹೀಗಾಗಿ ಮ್ಯಾನುಯಲ್ ಬಾಬು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ರ‍್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

    ರ‍್ಯಾಗಿಂಗ್ ತಡೆಯುವುದಕ್ಕಾಗಿ ಪೊಲೀಸ್ ಸೂಚನೆಯಂತೆ ಕಾಲೇಜುಗಳಲ್ಲಿ ಆ್ಯಂಟಿ ರ‍್ಯಾಗಿಂಗ್ ಕಮಿಟಿ ಮಾಡಲಾಗಿದೆ. ಈಗಾಗಲೇ ಈ ಹಿಂದಿನ ಮೂರು ಪ್ರಕರಣದಲ್ಲಿ 18ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ರ‍್ಯಾಗಿಂಗ್ ಪ್ರಕರಣದ ವಿದ್ಯಾರ್ಥಿಗಳಿಗೆ ಯಾವುದೇ ಎಕ್ಸ್‍ಕ್ಯೂಝ್ ನೀಡಲ್ಲ ಎಂದು ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.

  • ಪ್ರೀತಿ ತಂದಿಟ್ಟ ಆಪತ್ತು- ಒಂದು ಹುಡುಗಿಗಾಗಿ ಇಬ್ಬರ ಕಿತ್ತಾಟ..!

    ಪ್ರೀತಿ ತಂದಿಟ್ಟ ಆಪತ್ತು- ಒಂದು ಹುಡುಗಿಗಾಗಿ ಇಬ್ಬರ ಕಿತ್ತಾಟ..!

    ಮಡಿಕೇರಿ: ಲವ್ ವಿಚಾರದಲ್ಲಿ ಸೀನಿಯರ್-ಜೂನಿಯರ್ ನಡುವೆ ನಡೆಯುತ್ತಿದ್ದ ಜಗಳ ಈಗ ಒಬ್ಬನ ಜೀವಕ್ಕೆ ಕುತ್ತು ತಂದಿಟ್ಟಿದೆ. ಒಂದು ಹುಡುಗಿಗಾಗಿ ಇಬ್ಬರು ಕಿತ್ತಾಡಿ, ಈಗ ಓರ್ವ ಆಸ್ಪತ್ರೆ ಸೇರಿ ಸಾವು ನೋವಿನ ಮಧ್ಯೆ ಹೋರಾಡುತ್ತಿದ್ದಾನೆ.

    ಮೈಸೂರಿನ ಎಸ್‍ಬಿಐ ಬ್ಯಾಂಕ್‍ನಲ್ಲಿ ಯೂನಿಟ್ ಮ್ಯಾನೇಜರ್ ಆಗಿರೋ ರಾಕೇಶ್ (26) ಹಲ್ಲೆಗೊಳಗಾದ ಯುವಕ. ಸೋಮವಾರಪೇಟೆ ತಾಲೂಕಿನ ಊರುಬೆಟ್ಟ ಗ್ರಾಮದ 17 ವರ್ಷದ ಅಪ್ರಾಪ್ತ, ರಾಕೇಶ್ ಮೇಲೆ ದೊಣ್ಣೆಯಿಂದ ಭಯಾನಕವಾಗಿ ಹಲ್ಲೆ ಮಾಡಿದ್ದಾನೆ. ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರ ಹುಡುಗಿ ಹಾಗೂ ರಾಕೇಶ್ ಪ್ರೀತಿಸುತ್ತಿದ್ದರು.

    ಆದ್ರೆ ಇವರಿಬ್ಬರ ಪ್ರೀತಿಗೆ ಅಪ್ರಾಪ್ತ ಎಂಟ್ರಿ ಕೊಟ್ಟಿದ್ದ. ಇದರಿಂದ ರಾಕೇಶ್ ಹಾಗೂ ಅಪ್ರಾಪ್ತ ಮಧ್ಯೆ ಕಳೆದ ಒಂದು ವರ್ಷದಿಂದಲೂ ಶೀತಲ ಸಮರ ನಡೆಯುತ್ತಲೇ ಇತ್ತು. ಮೊದಲೆಲ್ಲಾ ಫೋನ್‍ನಲ್ಲಿ ರಾಕೇಶ್ ಆ ಬಾಲಕನಿಗೆ ಬುದ್ದಿ ಹೇಳಿದ್ದ. ಆದ್ರೆ ಯಾವುದಕ್ಕೂ ಬಾಲಕ ಹೆದರದೇ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿದ್ದನು.

    ಈ ಬಾಲಕನಿಗೆ ನೇರವಾಗಿ ಬುದ್ಧಿ ಹೇಳೋಣಾ ಎಂದು ಮಕ್ಕಳಗುಡಿ ಬೆಟ್ಟಕ್ಕೆ ರಾಕೇಶ್ ತೆರಳಿದ್ದನು. ಅಲ್ಲಿ ಬಾಲಕ ದೊಣ್ಣೆಯಿಂದ ರಾಕೇಶ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಹಲ್ಲೆಯಿಂದ ರಾಕೇಶ್‍ಗೆ ಗಂಭೀರ ಗಾಯಗಳಾಗಿದ್ದು ಆತ ಸಾವು ಬದುಕಿನ ಮಧ್ಯೆ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv