ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ನಟಿಯ ಫ್ಯಾನ್ಸ್‌ಗೆ ಕಹಿ ಸುದ್ದಿ ಸಿಕ್ಕಿದೆ. ಸೀತಾ ಪಾತ್ರ ಅಂತ್ಯವಾಗಿರೋದರ ಬಗ್ಗೆ ನಟಿ ಭಾವುಕವಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ದಾಂಪತ್ಯದ ಪಾಠ ಹೇಳಿದ ರಾಧಿಕಾ ಪಂಡಿತ್
ಒಂದು ಅಂತ್ಯವು ಹೊಸ ಆರಂಭಕ್ಕೆ ಮುನ್ನುಡಿ. ನನ್ನ ವೃತ್ತಿ ಜೀವನದಲ್ಲಿ ‘ಸೀತಾ ರಾಮ’ (Seetha Rama) ಎಂದಿಗೂ ನೆನಪಲ್ಲಿಟ್ಟುಕೊಳ್ಳುವಂತಹ ಪ್ರಾಜೆಕ್ಟ್. ಈ ಸೀರಿಯಲ್ ಮಾಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಗೆ ಥ್ಯಾಂಕ್ಯೂ. ಶೀಘ್ರದಲ್ಲಿ ಅದ್ಭುತವಾದ ಪ್ರಾಜೆಕ್ಟ್ ಜೊತೆ ನಿಮ್ಮ ಮುಂದೆ ಬರುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ವೈಷ್ಣವಿ ಗೌಡ ಭಾವುಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲಿ ಮಾತನಾಡಿದ ಪವನ್ ಕಲ್ಯಾಣ್
View this post on Instagram
ಪ್ರಸ್ತುತ ‘ಸೀತಾ ರಾಮ’ ಸೀರಿಯಲ್ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ಸದ್ಯದಲ್ಲೇ ಅಂತ್ಯ ಕಾಣಲಿದೆಯಾ ಎಂಬುದನ್ನು ವಾಹಿನಿ ಆಗಲಿ ಕಲಾವಿದರಾಗಲಿ ತಿಳಿಸಿಲ್ಲ. ಈ ಸೀರಿಯಲ್ ಅಂತ್ಯವಾಗಿದೆ ಎನ್ನಲಾದ ಕೆಲ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಅದಕ್ಕೆ ಪೂರಕವೆಂಬಂತೆ ವೈಷ್ಣವಿ ‘ಸೀತಾ’ ಪಾತ್ರಕ್ಕೆ ಗುಡ್ ಬೈ ಹೇಳಿರುವ ಪೋಸ್ಟ್ ನೋಡಿ ಫ್ಯಾನ್ಸ್ ಬೇಸರಗೊಂಡಿದ್ದಾರೆ.

ಈ ಸೀರಿಯಲ್‌ನಲ್ಲಿ ಸೀತಾ ಆಗಿ ವೈಷ್ಣವಿ, ರಾಮ ಪಾತ್ರದಲ್ಲಿ ಗಗನ್ ಗೌಡ, ಮಗಳ ಪಾತ್ರದಲ್ಲಿ ಸಿಹಿ ಅಲಿಯಾಸ್ ರೀತು ಸಿಂಗ್ ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನಟಿಸಿದ್ದಾರೆ.



ಸದ್ಯ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ವೈಷ್ಣವಿ ಅವರು, ಅವನದ್ದು ಆಕಾಶ ಸೇವೆ, ನನ್ನದು ಸ್ಕ್ರೀಪ್ಟ್ ಹಾಗೂ ವೇದಿಕೆ. ವಿಧಿ ಒಂದು ಸುಂದರ ಲವ್‌ಸ್ಟೋರಿ ಹೆಣೆದಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:
