‘ಸೀತಾ ರಾಮಂ’ (Seetha Ramam) ನಟಿ ಮೃಣಾಲ್ ಠಾಕೂರ್ (Mrunal Thakur) ಬ್ಯೂಟಿ ಮತ್ತು ಅಮೋಘ ನಟನೆಯಿಂದ ಅಪಾರ ಅಭಿಮಾನಿಗಳನ್ನು ಗೆದ್ದಿದ್ದಾರೆ. ಇದರ ನಡುವೆ ಬ್ರೇಕಪ್ ಕಥೆಯೊಂದನ್ನು ನಟಿ ರಿವೀಲ್ ಮಾಡಿದ್ದಾರೆ. ಬಾಯ್‌ಫ್ರೆಂಡ್ ನನಗೆ ಕೈ ಕೊಟ್ಟು ಹೋದ, 7 ತಿಂಗಳ ಹಿಂದಷ್ಟೇ ಬ್ರೇಕಪ್ (Breakup) ಮಾಡಿಕೊಂಡೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಮೃಣಾಲ್ ನೀಡಿದ ಸಂದರ್ಶನದಲ್ಲಿ ಲವ್ ಲೈಫ್ ಮತ್ತು ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ಎಲ್ಲರಂತೆ ನನಗೂ ಬ್ರೇಕಪ್ ಆಗಿದೆ. 7 ತಿಂಗಳ ಹಿಂದಷ್ಟೇ ಬ್ರೇಕಪ್ ಮಾಡಿಕೊಂಡೆ. ನಮಗೆ ಸರಿ ಹೊಂದುವ ವ್ಯಕ್ತಿ ನಮ್ಮ ಜೀವನದಲ್ಲಿ ಬರುವವರೆಗೂ ಬಂದು ಹೋಗುವವರು ಇರುತ್ತಾರೆ. ನಟಿ ಎಂಬ ಕಾರಣಕ್ಕೆ ಒಪ್ಪಲಿಲ್ಲ. ಅದ್ಯಾಕೆ ಹೀಗೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆದರೆ ಈ ಸಂಬಂಧ ಅಂತ್ಯವಾಗಿರೋದು ಖುಷಿಯಿದೆ ಎಂದಿದ್ದಾರೆ. ಇದನ್ನೂ ಓದಿ:ರೆಬೆಲ್ ಸ್ಟಾರ್ ಸೊಸೆ ಅವಿವಗೆ ಸೀಮಂತ ಸಂಭ್ರಮ

ನಟನೆಯ ವಿಚಾರದಲ್ಲಿ ನಮ್ಮದು ಶಿಸ್ತುಬದ್ಧ ಕುಟುಂಬ, ತುಂಬಾ ಕಟ್ಟುನಿಟ್ಟು ಇದೆಲ್ಲಾ ಸರಿ ಹೋಗಲ್ಲ ಎಂದು ಆತ ಹೇಳಿದ. ಇದೆಲ್ಲಾ ಕೇಳಿದ ಮೇಲೆ ಬಹಳ ನೋವಾಯ್ತು. ಇಬ್ಬರ ಪರಸ್ಪರ ಒಪ್ಪಿಗೆಯ ಮೇರೆಗೆ ಬ್ರೇಕಪ್ ಮಾಡಿಕೊಂಡೆವು. ಇದೆಲ್ಲಾ 7 ತಿಂಗಳ ಹಿಂದೆ ನಡೆದಿರೋದು ಎಂದಿದ್ದಾರೆ ಮೃಣಾಲ್. ಬ್ರೇಕಪ್ ಆದ ವೇಳೆ, ನಾನು ದುಃಖಿಸಲಿಲ್ಲ. ನಾನು ಬದುಕಿನಲ್ಲಿ ಕೆಲವು ಬ್ರೇಕಪ್‌ಗಳು ಆಗಿವೆ. ನನಗೆ ನೋಡಲು ಸಖತ್ ಲುಕ್ ಇರುವ ಹುಡುಗ ಬೇಕಿಲ್ಲ, ಆದರೆ ಒಳ್ಳೆಯ ಗುಣವಿದ್ದರೆ ಸಾಕು ಎಂದು ನಟಿ ಮಾತನಾಡಿದ್ದಾರೆ.
ಅಂದಹಾಗೆ, ಸೀತಾ ರಾಮಂ, ಹಾಯ್ ನಾನ್ನಾ, ಫ್ಯಾಮಿಲಿ ಸ್ಟಾರ್ ಚಿತ್ರಗಳ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡಿರುವ ಮೃಣಾಲ್ ಸದ್ಯ ಸೌತ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.









`ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ ಮೇಲೆ ದಿನದಿಂದ ದಿನಕ್ಕೆ ಕ್ರೇಜ್ ಜಾಸ್ತಿಯಾಗುತ್ತಲೇ ಇದೆ. ಸೂಪರ್‌ಸ್ಟಾರ್‌ಗಳ ಸಿನಿಮಾಗೆ ನಾಯಕಿಯಾಗಿ, ಅವಕಾಶ ಬಾಚಿಕೊಳ್ಳುತ್ತಲೇ ಇದ್ದಾರೆ. `ಪುಷ್ಪ’ ಚಿತ್ರದಿಂದ ಬಿಗ್ ಬ್ರೇಕ್ ಸಿಕ್ಕದ ಮೇಲೆ ಮಾಲಿವುಡ್‌ನತ್ತ ನಟಿ ಮುಖ ಮಾಡಿದ್ದರು. ಸೀತಾ ರಾಮಂ ಚಿತ್ರದಲ್ಲಿ ದುಲ್ಕರ್ ಸಲ್ಮಾನ್, ಮೃಣಾಲ್ ಜತೆ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಆದರೆ ಈ ಚಿತ್ರವನ್ನ ಹಲವು ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ:
ಹನು ರಾಘವಪುಡಿ ನಿರ್ದೇಶನದ `ಸೀತಾ ರಾಮಂ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಆಫ್ರೀನ್ ಎಂಬ ಮುಸ್ಲಿಂ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಆದರೆ ಅವರು ಬುರ್ಕಾ ಧರಿಸಿ ಕಾಣಿಸಿಕೊಂಡಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಅಂಶಗಳಿವೆ ಎಂದು ಆರೋಪಿಸಿ ಅರಬ್ ರಾಷ್ಟ್ರಗಳಲ್ಲಿ ಈ ಚಿತ್ರದ ರಿಲೀಸ್‌ಗೆ ನಿಷೇಧಿಸಿದೆ.
ಬಹ್ರೇನ್, ಓಮನ್, ಕುವೈತ್, ಖತಾರ್, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಲ್ಲಿ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರ ಅಭಿಪ್ರಾಯದ ಮೇರೆಗೆ ಈ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಚಿತ್ರತಂಡದವರು ಮತ್ತೊಮ್ಮೆ ಸೆನ್ಸಾರ್‌ಗೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಎರಡು ಕಾಲಘಟ್ಟದ ಕಥೆಯಿದ್ದು, ಚಿತ್ರದ ಲುಕ್ ಮತ್ತು ಟ್ರೈಲರ್ ಮೂಲಕ ಸೌಂಡ್ ಮಾಡುತ್ತಿದೆ. ಇದೇ ಆಗಸ್ಟ್ 5ಕ್ಕೆ ತೆರೆಗೆ ಬರಲಿದೆ. ಈ ಎಲ್ಲಾ ಅಡೆ ತಡೆ ದಾಟಿ ಕಲೆಕ್ಷನಲ್ಲಿಯೂ ಸಿನಿಮಾ ಸೌಂಡ್ ಮಾಡುತ್ತಾ ಅಂತಾ ಕಾದುನೋಡಬೇಕಿದೆ.



