Tag: ಸೀತಾ

  • ‘ರಾಮಾಯಣ’ದಲ್ಲಿ ಸಾಯಿ ಪಲ್ಲವಿ: ಸಿನಿಮಾ ನೋಡಲ್ಲ ಎಂದ ನೆಟ್ಟಿಗರು

    ‘ರಾಮಾಯಣ’ದಲ್ಲಿ ಸಾಯಿ ಪಲ್ಲವಿ: ಸಿನಿಮಾ ನೋಡಲ್ಲ ಎಂದ ನೆಟ್ಟಿಗರು

    ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ (Sai Pallavi) ಅವರು ಸೀತಾ ಪಾತ್ರ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಸಾಕಷ್ಟು ನೆಟ್ಟಿಗರು ವಿರೋಧ ವ್ಯಕ್ತ ಪಡಿಸಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಂದಾಗ ಹಿಂದೂ ವಿರೋಧಿ ಹೇಳಿಕೆಯನ್ನು ಸಾಯಿ ಪಲ್ಲವಿ ನೀಡಿದ್ದರು. ಈ ಕಾರಣದಿಂದಾಗಿ ಭಾರೀ ವಿರೋಧವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗುತ್ತಿದೆ.

    ರಾಮಾಯಣ ಸಿನಿಮಾದ ಬಜೆಟ್, ಸಂಭಾವನೆಯದ್ದೇ ಸುದ್ದಿ. ಮೂರು ಪಾರ್ಟ್ ನಲ್ಲಿ ಈ ರಾಮಾಯಣ ಸಿನಿಮಾ ಮೂಡಿ ಬರಲಿದ್ದು, ಒಟ್ಟು ಬಜೆಟ್ ಎಷ್ಟು, ಯಾರಿಗೆ ಎಷ್ಟು ಸಂಭಾವನೆ (Remuneration) ನೀಡಲಾಗಿದೆ, ಅತೀ ಹೆಚ್ಚು ಸಂಭಾವನೆ ಪಡೆದ ನಟ ಯಾರು ಹೀಗೆ ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಹೇಳಿಕೊಳ್ಳದೇ ಇದ್ದರೂ, ನಟ, ನಟಿಯರು ಭರ್ಜರಿ ಸಂಭಾವನೆಯನ್ನೇ ಪಡೆದಿದ್ದಾರೆ.

    ರಾಮನ ಪಾತ್ರದಲ್ಲಿ ಮಿಂಚಲಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಬರೋಬ್ಬರಿ 75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮೂರು ಪಾರ್ಟ್ ಸೇರಿ ಇವರಿಗೆ 225 ಕೋಟಿ ರೂಪಾಯಿ ಸಂದಾಯವಾಗಲಿದೆಯಂತೆ. ರಾವಣನ ಪಾತ್ರಧಾರಿ ಯಶ್ (Yash) ಮೂರೂ ಪಾರ್ಟ್ ಸೇರಿ 150 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ. ನಟಿ ಸಾಯಿ ಪಲ್ಲವಿ 18 ಕೋಟಿ ರೂಪಾಯಿ ನೀಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಾವುದೂ ಖಚಿತ ಮಾಹಿತಿ ಅಲ್ಲ ಎನ್ನುವುದು ನೆನಪಿನಲ್ಲಿಡಬೇಕಾದ ಸಂಗತಿ.

     

    ಈ ನಡುವೆ ಸಿನಿಮಾಗಾಗಿ ರಣ್‌ಬೀರ್ (Ranbir Kapoor) ಹಳ್ಳಿಯಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ರಾಮನ ಅವತಾರದಲ್ಲಿ ಬರಲು ‘ಅನಿಮಲ್‌’ ಹೀರೋ ಭಾರೀ ತಯಾರಿ ಮಾಡಿಕೊಳ್ತಿದ್ದಾರೆ. ‘ದಂಗಲ್’ ಸಿನಿಮಾ ನಂತರ ರಾಮಾಯಣ (Ramayana) ಚಿತ್ರಕ್ಕಾಗಿ ಡೈರೆಕ್ಟರ್ ಹ್ಯಾಟ್ ತೊಟ್ಟಿದ್ದಾರೆ ನಿತೇಶ್ ತಿವಾರಿ. ಚಿತ್ರತಂಡ ಕೂಡ ಪಾತ್ರಕ್ಕಾಗಿ ಏನೆಲ್ಲಾ ತಯಾರಿ ಮಾಡಲು ತಿಳಿಸಿದ್ದಾರೋ ಅದನ್ನು ಪ್ರಾಮಾಣಿಕವಾಗಿ ರಣ್‌ಬೀರ್ ಕಪೂರ್ ಮಾಡುತ್ತಿದ್ದಾರೆ. ‘ಆದಿಪುರುಷ್’ (Adipurush Film) ಸಿನಿಮಾದಂತೆ ತಮ್ಮ ಸಿನಿಮಾ ಆಗಬಾರದು ಎಂದು ಎಚ್ಚರಿಕೆಯಿಂದ ರಣ್‌ಬೀರ್ ಹೆಜ್ಜೆ ಇಡುತ್ತಿದ್ದಾರೆ.

  • ಸಿಂಹಗಳಿಗೆ ಅಕ್ಬರ್-ಸೀತಾ ನಾಮಕರಣ ಮಾಡಿದ್ದ ಅಧಿಕಾರಿ ಅಮಾನತು

    ಸಿಂಹಗಳಿಗೆ ಅಕ್ಬರ್-ಸೀತಾ ನಾಮಕರಣ ಮಾಡಿದ್ದ ಅಧಿಕಾರಿ ಅಮಾನತು

    ಅಗರ್ತಲಾ: ತ್ರಿಪುರಾದ ಮೃಗಾಲಯದಲ್ಲಿ ಸಿಂಹ ಮತ್ತು ಸಿಂಹಿಣಿಗೆ ಅಕ್ಬರ್-ಸೀತಾ ಎಂದು ನಾಮಕರಣ ಮಾಡಿದ ಅಧಿಕಾರಿಯನ್ನು ಸರ್ಕಾರ ಇದೀಗ ಅಮಾನತುಗೊಳಿಸಿದೆ.

    ನಾಮಕರಣದ ವಿವಾದದ ನಡುವೆ, ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಬಿನ್ ಲಾಲ್ ಅಗರ್ವಾಲ್ ರನ್ನು ಸರ್ಕಾರ ಅಮಾನತುಗೊಳಿಸಿದೆ. ಈ ಹೆಸರುಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಲ್ಕತ್ತಾ ಹೈಕೋರ್ಟ್‌ನಲ್ಲಿ ದೂರಿನ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.

    ಫೆಬ್ರವರಿ 12 ರಂದು ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ಗೆ ಎರಡು ಸಿಂಹಗಳನ್ನು ತರಲಾಯಿತು. ಉತ್ತರ ಬಂಗಾಳದ ಸಿಲಿಗುರಿಯ ಬೆಂಗಾಲ್ ಸಫಾರಿಯಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಈ ಹುಲಿಗಳನ್ನು ತರಲಾಯಿತು. ಆ ಬಳಿಕ ಈ ಎರಡೂ ಸಿಂಹಗಳನ್ನು ಒಂದೇ ಆವರಣದಲ್ಲಿ ಹಾಕಲಾಗಿದೆ ಎನ್ನುವುದರ ಜೊತೆ ಅವುಗಳ ಹೆಸರು ಭಾರೀ ಚರ್ಚೆಗೆ ಗ್ರಾಸವಾಯಿತು.

    ಇತ್ತ ಹೆಸರು ಬದಲಾವಣೆಗೆ ಒತ್ತಾಯಿಸಿ ವಿಎಚ್‌ಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರಿಂದ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಎರಡೂ ಪ್ರಾಣಿಗಳಿಗೆ ಆಯ್ಕೆ ಮಾಡಿರುವ ಹೆಸರುಗಳ ಬಗ್ಗೆ ನ್ಯಾಯಮೂರ್ತಿ ಭಟ್ಟಾಚಾರ್ಯ ಅಸಮ್ಮತಿ ವ್ಯಕ್ತಪಡಿಸಿ ಹೆಸರು ಬದಲಾವಣೆ ಮಾಡುವಂತೆ ಸೂಚಿಸಿದ್ದರು.

  • ಅಕ್ಬರ್‌, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್‌ ಸೂಚನೆ

    ಅಕ್ಬರ್‌, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್‌ ಸೂಚನೆ

    ಕೋಲ್ಕತ್ತಾ: ಸಿಲಿಗುರಿಯ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ (Bengal Safari Park in Siliguri) ಎರಡೂ ಸಿಂಹಗಳನ್ನು ಒಂದೇ ಆವರಣದಲ್ಲಿ ಇರಿಸಿದ ನಂತರ ವಿವಾದಕ್ಕೆ ಕಾರಣವಾದ ಅಕ್ಬರ್ ಮತ್ತು ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೋಲ್ಕತ್ತಾ ಹೈಕೋರ್ಟ್ (Calcutta High Court) ಸೂಚಿಸಿದೆ.

    ತ್ರಿಪುರಾದಿಂದ ಪಶ್ಚಿಮ ಬಂಗಾಳಕ್ಕೆ ಇತ್ತೀಚೆಗೆ ವರ್ಗಾವಣೆಗೊಂಡ ಸಿಂಹಗಳ ಹೆಸರನ್ನು ಬದಲಾಯಿಸುವಂತೆ ವಿಶ್ವ ಹಿಂದೂ ಪರಿಷತ್ (Vishwa Hindu Parishad) ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಇಂದು ಕೈಗೆತ್ತಿಕೊಂಡಿತು. ಬಳಿಕ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರ ಏಕಸದಸ್ಯ ಪೀಠವು ವಿವಾದದಿಂದ ದೂರವಿರಲು ಮತ್ತು ಪ್ರಾಣಿಗಳ ಮರುನಾಮಕರಣವನ್ನು ಪರಿಗಣಿಸುವಂತೆ ಮೌಖಿಕ ನಿರ್ದೇಶನ ನೀಡಿತು. ಇದನ್ನೂ ಓದಿ: ಹುಲಿ ಬೇಟೆಯಾಡಿ ಹಲ್ಲಿನ ಪೆಂಡೆಂಟ್‌ ಧರಿಸಿದ್ದೇನೆ- ವಿವಾದಕ್ಕೀಡಾದ ಶಾಸಕ

    ನೀವು ಸಿಂಹಕ್ಕೆ ಹಿಂದೂ ದೇವತೆ, ಮುಸ್ಲಿಂ ಪ್ರವಾದಿ, ಕ್ರಿಶ್ಚಿಯನ್ ದೇವರು, ಸ್ವಾತಂತ್ರ್ಯ ಹೋರಾಟಗಾರ ಅಥವಾ ನೊಬೆಲ್ ಪ್ರಶಸ್ತಿ ವಿಜೇತರ ಹೆಸರನ್ನು ಇಡುತ್ತೀರಾ? ರಾಜ್ಯ ಸರ್ಕಾರ ಇದನ್ನು ಯಾಕೆ ಪ್ರಶ್ನಿಸಿಲ್ಲ. ಇದು ಜಾತ್ಯಾತೀತ ರಾಜ್ಯವಾಗಿದ್ದು, ಸೀತಾ ಮತ್ತು ಅಕ್ಬರ್ ಹೆಸರನ್ನು ಸಿಂಹಕ್ಕೆ ಹೆಸರಿಸಿ ವಿವಾದವನ್ನು ಏಕೆ ಮೈಮೇಲೆ ಎಳೆದುಕೊಳ್ಳಬೇಕು? ಈ ವಿವಾದವನ್ನು ತಪ್ಪಿಸಬೇಕಾಗಿತ್ತು. ಸೀತೆ (Sita) ಮಾತ್ರವಲ್ಲ, ಅಕ್ಬರ್ (Akbar) ಹೆಸರನ್ನೂ ನಾನು ಬೆಂಬಲಿಸುವುದಿಲ್ಲ ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ಛಾಟಿ ಬೀಸಿದರು.

    ಈ ವೇಳೆ ಪಶ್ಚಿಮ ಬಂಗಾಳ (West Bengal) ಸರ್ಕಾರದ ಪರ ವಕೀಲರು, ಈಗಾಗಲೇ ಸಿಂಹಗಳಿಗೆ ಮರುನಾಮಕರಣ ಮಾಡಲು ಯೋಚಿಸುತ್ತಿರುವುದಾಗಿ ತಿಳಿಸಿದರು. ಬಳಿಕ ಕೋರ್ಟ್‌, ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ಪಿಐಎಲ್ ಎಂದು ಮರು ವರ್ಗೀಕರಿಸಲು ನಿರ್ದೇಶಿಸಿದೆ. ಜೊತೆಗೆ ಪಿಐಎಲ್‌ಗಳನ್ನು ಆಲಿಸುವ ಸಾಮಾನ್ಯ ಪೀಠಕ್ಕೆ ಮರುನಿರ್ದೇಶನ ನೀಡಿದೆ.

  • ಸಿಂಹಗಳಿಗೆ ಸೀತಾ, ಅಕ್ಬರ್ ನಾಮಕರಣ ವಿವಾದ- ಅರಣ್ಯ ಇಲಾಖೆ ಹೇಳಿದ್ದೇನು?

    ಸಿಂಹಗಳಿಗೆ ಸೀತಾ, ಅಕ್ಬರ್ ನಾಮಕರಣ ವಿವಾದ- ಅರಣ್ಯ ಇಲಾಖೆ ಹೇಳಿದ್ದೇನು?

    ಕೋಲ್ಕತಾ: ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್‌ ನಲ್ಲಿ ಸಿಂಹಗಳಿಗೆ ನಾಮಕರಣ ಮಾಡಿರುವುದು ಇದೀಗ ಭಾರೀ ವಿವಾದಕ್ಕೀಡಾಗಿದೆ. ಈ ಬೆನ್ನಲ್ಲೇ ಅರಣ್ಯ ಇಲಾಖೆ ಸ್ಪಷ್ಟನೆ ಕೂಡ ನೀಡಿದೆ.

    ಹೌದು. ಇತ್ತೀಚೆಗೆ ಸಫಾರಿ ಪಾರ್ಕ್‌ಗೆ ಒಡಿಶಾದಿಂದ ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಸಿಂಹಗಳನ್ನು ತರಲಾಗಿತ್ತು. ಅವುಗಳಲ್ಲಿ ಹೆಣ್ಣು ಸಿಂಹಕ್ಕೆ ʼಸೀತಾʼ (Sita) ಮತ್ತು ʼಅಕ್ಬರ್‌ʼ (Akbar) ಎಂದು ನಾಮಕರಣ ಮಾಡಿರುವುದು ಬಯಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷದ್‌ (VHP) ಮುಖಂಡರು ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೇ ಚಾಕು ಇರಿದ!

    ಹೈಕೋರ್ಟ್‌ ಮೆಟ್ಟಿಲೇರಿದ ವಿಹೆಚ್‌ಪಿ: ಅರಣ್ಯಾಧಿಕಾರಿಗಳು ಹೆಣ್ಣು ಸಿಂಹಕ್ಕೆ ‘ಸೀತಾ’ ಹಾಗೂ ಗಂಡು ಸಿಂಹಕ್ಕೆ ‘ಅಕ್ಟ‌ರ್’ ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ ಅದನ್ನು ಸಫಾರಿ ವಲಯದಲ್ಲಿ ಒಂದೇ ಪ್ರದೇಶದೊಳಗೆ ಇರಿಸಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಕೂಡಲೇ ಪ್ರಾಣಿಗಳ ಹೆಸರು ಬದಲಿಸಬೇಕು. ಸಿಂಹಗಳನ್ನು ಬೇರೆ ಬೇರೆ ಕಡೆ ಇಡಬೇಕು ಎಂದು ಆಗ್ರಹಿಸಿ ವಿಹೆಚ್‌ಪಿ ನಾಯಕರು ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ಫೆ.20ರಂದು ವಿಚಾರಣೆಗೆ ಬರಲಿದೆ.

    ಅರಣ್ಯ ಇಲಾಖೆ ಸ್ಪಷ್ಟನೆ: ಸಿಂಹಗಳನ್ನು ಇತ್ತೀಚೆಗೆ ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ನಿಂದ (Sepahijala Zoological Park in Tripura) ಸ್ಥಳಾಂತರಿಸಲಾಗಿದೆ ಮತ್ತು ಫೆಬ್ರವರಿ 13 ರಂದು ಸಫಾರಿ ಪಾರ್ಕ್‌ಗೆ ಬಂದ ನಂತರ ಮರುನಾಮಕರಣ ಮಾಡಲಾಗಿಲ್ಲ ಎಂದು ವಿವಾದದ ಕುರಿತು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.

  • ಸೀತೆ ಭಾರತದ ಮಗಳಲ್ಲ: ‘ಆದಿಪುರುಷ’ ಸಿನಿಮಾ ಡೈಲಾಗ್ ವಿರುದ್ಧ ಕಠ್ಮಂಡು ಮೇಯರ್ ಗರಂ

    ಸೀತೆ ಭಾರತದ ಮಗಳಲ್ಲ: ‘ಆದಿಪುರುಷ’ ಸಿನಿಮಾ ಡೈಲಾಗ್ ವಿರುದ್ಧ ಕಠ್ಮಂಡು ಮೇಯರ್ ಗರಂ

    ಪ್ರಭಾಸ್ ನಟನೆಯ ಆದಿಪುರುಷ (Adipurusha) ಸಿನಿಮಾ ಎಲ್ಲ ಕಡೆ ತುಂಬಿದ ಪ್ರದರ್ಶನ ಕಾಣುತ್ತಿದೆ. ಜಗತ್ತಿನಾದ್ಯಂತ ರಿಲೀಸ್ ಆಗಿರುವ ಚಿತ್ರದ ಒಂದು ಡೈಲಾಗ್ ಬಗ್ಗೆ ಕಠ್ಮಂಡು (Kathmandu)  ಮೇಯರ್ ಗರಂ ಆಗಿದ್ದಾರೆ. ವಿವಾದಿತ  ಆ ಡೈಲಾಗ್ ತಗೆಯದಿದ್ದರೆ ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಮೂರು ದಿನ ಗಡುವು ಕೂಡ ನೀಡಿದ್ದಾರೆ.

    ಆದಿಪುರುಷ ಸಿನಿಮಾ ಮೊದಲಿನಿಂದಲೂ ವಿವಾದಕ್ಕೀಡು ಆಗುತ್ತಲೇ ಇದೆ. ಸಿನಿಮಾದ ಗ್ರಾಫಿಕ್ಸ್, ರಾವಣನ ಪಾತ್ರ, ತಿರುಪತಿಯಲ್ಲಿ ನಟಿಗೆ ಮುತ್ತಿಟ್ಟ ನಿರ್ದೇಶಕ ಹೀಗೆ ನಾನಾ ಕಾರಣಗಳಿಂದ ಸಿನಿಮಾ ಸುದ್ದಿಯಾಗುತ್ತಿದೆ. ಈ ಬಾರಿ ಡೈಲಾಗ್ ವೊಂದು ಹಲವು ಜನರ ಭಾವನೆಗೆ ಸಂಚಕಾರ ತಂದಿದೆಯಂತೆ. ಇದನ್ನೂ ಓದಿ: ಮಂಡ್ಯದಲ್ಲಿ ಟೀ ಕುಡಿದ ಅಭಿಷೇಕ್: ಥೇಟ್ ಅಪ್ಪನಂತೆ ಮಗ ಎಂದ ಫ್ಯಾನ್ಸ್

    ಈ ಸಿನಿಮಾದಲ್ಲಿ ‘ಸೀತಾ ಭಾರತದ ಮಗಳು..’ ಎಂದು ಡೈಲಾಗ್ ಹೇಳಿಸಲಾಗಿದೆ. ಈ ಮಾತಿಗೆ ಕಠ್ಮುಂಡು ಮೇಯರ್ (Mayor) ಆಕ್ಷೇಪನೆಯನ್ನು ಎತ್ತಿದ್ದಾರೆ. ರಾಮಾಯಣದ ಪ್ರಕಾರ ಸೀತೆಯು ನೇಪಾಳದ ಜಾನಕ್ ಪುರದಲ್ಲಿ ಜನಿಸಿದ್ದಾರೆ. ಇಲ್ಲಿಗೆ ಶ್ರೀರಾಮ ಬಂದು ಸೀತೆಯನ್ನು ಮದುವೆ ಆಗಿರುವ ಉಲ್ಲೇಖ ಕೂಡ ಇದೆ. ಆದರೆ, ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಮತ್ತು ಸುಳ್ಳು ಹೇಳಲಾಗಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

    ಈಗಾಗಲೇ ನೇಪಾಳದಲ್ಲಿ ಈ ಸಿನಿಮಾದ ಸೆನ್ಸಾರ್ ಅನ್ನು ತಡೆಹಿಡಿಯಲಾಗಿದೆ. ಆದರೆ, ಉಳಿದ ಕಡೆ ಸಿನಿಮಾ ಪ್ರದರ್ಶನವಾಗುತ್ತಿದೆ. ಎಲ್ಲೆಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆಯೋ ಅಲ್ಲಲ್ಲಿ, ಈ ಡೈಲಾಗ್ ತಗೆಯಲೇಬೇಕು ಎಂದು ಮೇಯರ್ ಒತ್ತಾಯಿಸಿದ್ದಾರೆ. ಸಿನಿಮಾವನ್ನು ನೇಪಾಳದಲ್ಲಿ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.