Tag: ಸೀಟು

  • ಸೀಟಿಗಾಗಿ ರೈಲಿನಲ್ಲಿ ಜುಟ್ಟು ಹಿಡಿದು ಮಹಿಳೆಯರ ಫೈಟ್ – ಜಗಳ ಬಿಡಿಸಲು ಬಂದ ಪೇದೆಗೆ ಕಪಾಳಮೋಕ್ಷ

    ಸೀಟಿಗಾಗಿ ರೈಲಿನಲ್ಲಿ ಜುಟ್ಟು ಹಿಡಿದು ಮಹಿಳೆಯರ ಫೈಟ್ – ಜಗಳ ಬಿಡಿಸಲು ಬಂದ ಪೇದೆಗೆ ಕಪಾಳಮೋಕ್ಷ

    ಮುಂಬೈ: ಕೇಂದ್ರ ರೈಲ್ವೆ (Central Railway) ವ್ಯಾಪ್ತಿಯ ಥಾಣೆ (Thane) ಮತ್ತು ಪನ್ವೇಲ್ (Panvel) ನಡುವಿನ ಲೋಕಲ್ ಟ್ರೈನ್‍ನಲ್ಲಿ ಕೆಲ ಮಹಿಳೆಯರ ನಡುವೆ ಮಾರಾಮಾರಿ ನಡೆದಿದೆ.

    ಮುಂಬೈ ಲೋಕಲ್ ಟ್ರೈನ್‍ಗಳಲ್ಲಿ (Local train) ಸಂಜೆ ಹೊತ್ತು ಒಂದು ಕೆಡೆಯಿಂದ ಮತ್ತೊಂದು ಕಡೆಗೆ ಹೋಗಲು ರೈಲಿನಲ್ಲಿ ವಿಪರೀತ ನೂಕುನುಗ್ಗಲು ಇರುತ್ತದೆ. ಈ ವೇಳೆ ಸೀಟ್ ಹಿಡಿದುಕೊಳ್ಳಲು ಜನ ಸಾಕಷ್ಟು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಈ ವಿಚಾರವಾಗಿ ಅನೇಕ ಜನ ಜಗಳ ಆಡಿರುವುದು ಕೂಡ ಇದೆ. ಸದ್ಯ ಗುರುವಾರ ಸಂಜೆ 7:45ಕ್ಕೆ ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಇದನ್ನೂ ಓದಿ: ಎಸ್‌.ಎಂ ಕೃಷ್ಣ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದ ಜಬ್ಬಾರ್ ಖಾನ್ ಹೊನ್ನಳ್ಳಿ ನಿಧನ

    ಹೌದು, ಸೆಂಟ್ರಲ್ ರೈಲ್ವೇ ವ್ಯಾಪ್ತಿಯ ಥಾಣೆ ಮತ್ತು ಪನ್ವೇಲ್ ನಡುವಿನ ಲೋಕಲ್ ರೈಲಿನಲ್ಲಿ ಕೆಲ ಮಹಿಳೆಯರ ನಡುವೆ ತೀವ್ರ ಜಗಳ ನಡೆದಿದೆ. ಮಹಿಳಾ ಕಂಪಾರ್ಟ್‍ಮೆಂಟ್‍ನಲ್ಲಿ ಸೀಟ್ ವಿಚಾರವಾಗಿ ಮೂವರು ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಮಹಿಳೆಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿದ್ದಾರೆ. ವಿಷಯ ದೊಡ್ಡದಾಗುತ್ತಿದ್ದಂತೆ ಉಳಿದ ಇತರ ಕೆಲವು ಮಹಿಳೆಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗಂಡನನ್ನು ಕೊಲೆ ಮಾಡುವುದಾಗಿ ಹೆದರಿಸಿ ವೃದ್ಧೆ ಮೇಲೆ 1 ವರ್ಷ ನಿರಂತರ ಅತ್ಯಾಚಾರ

    ನಂತರ ನೆರೂಲ್‍ನಿಂದ ಜಗಳ ಬಿಡಿಸಲು ಬಂದ ಮಹಿಳಾ ಪೊಲೀಸ್ ಪೇದೆಯೊಬ್ಬರ ಮೇಲೆ ಆರೋಪಿ ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಮಹಿಳಾ ಪೊಲೀಸ್ ಪೇದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಸಂಬಂಧ ವಾಶಿಯ ಗ್ರಾ.ಪಂ ಪೊಲೀಸರು ಇಬ್ಬರು ಮಹಿಳೆಯರ ವಿರುದ್ಧ ಐಪಿಸಿ 353, 332, 504 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೀಟಿಗಾಗಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ಕಿತ್ತಾಟ – ವೀಡಿಯೋ ವೈರಲ್

    ಸೀಟಿಗಾಗಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ಕಿತ್ತಾಟ – ವೀಡಿಯೋ ವೈರಲ್

    ನವದೆಹಲಿ: ಆಫೀಸ್‍ಗೆ ಹೋಗುವ ಸಮಯಗಳಲ್ಲಿ ಮೆಟ್ರೋದಲ್ಲಿ ಸೀಟ್ ಹಿಡಿದುಕೊಳ್ಳುವುದು ದೊಡ್ಡ ಕೆಲಸವಾಗಿ ಹೋಗಿದೆ. ಯಾವಾಗಲೂ ಕಡಿಮೆ ಜನ ಇರುವ ಹಾಗೂ ಕುಳಿತುಕೊಳ್ಳಲು ಸೀಟ್ ಖಾಲಿ ಇರುವ ಸ್ಥಳಗಳನ್ನೇ ಜನರು ಹೆಚ್ಚಾಗಿ ಹುಡುಕುತ್ತಾರೆ. ಒಂದು ಸೀಟು ಸಿಕ್ಕರೆ ಅದನ್ನು ಮತ್ತೊಬ್ಬರಿಗೆ ಬಿಟ್ಟುಕೊಡಲು ಕಷ್ಟಪಡುತ್ತಾರೆ.

    ಸದ್ಯ ಇತ್ತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಬ್ಬರು ಪ್ರಯಾಣಿಸುವ ವೇಳೆ ಸೀಟಿಗಾಗಿ ಕಿತ್ತಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಪ್ರಯಾಣಿಕರೊಬ್ಬರು ತಮ್ಮ ಫೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.  ಇದನ್ನೂ ಓದಿ: ಈ ಬಾರಿ ಗಣಪನ ಜೊತೆ ಸಾವರ್ಕರ್ ಫೋಟೋ- ಹಿಂದೂ ಸಂಘಟನೆಗಳಿಂದ ಹೊಸ ಪ್ಲ್ಯಾನ್

    ಪ್ರತಿಭಾ ಶರ್ಮಾ ಎಂಬವರು ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ಸೀರೆಯುಟ್ಟ ಮಹಿಳೆಯೊಬ್ಬರು ಮೆಟ್ರೋದಲ್ಲಿ ಖಾಲಿ ಸೀಟಿನಲ್ಲಿ ಇಟ್ಟಿದ ತಮ್ಮ ಬ್ಯಾಗ್ ಅನ್ನು ಪಕ್ಕಕ್ಕೆ ಸರಿಸಲು ನಿರಾಕರಿಸಿರುವುದನ್ನು ಕಾಣಬಹುದಾಗಿದೆ. ಸೀಟಿಗಾಗಿ ಸೀರೆಯುಟ್ಟ ಮಹಿಳೆಗೆ, ಮತ್ತೋರ್ವ ಮಹಿಳೆ ತಾನು ಕುಳಿತುಕೊಳ್ಳಲು ಜಾಗ ನೀಡಬಹುದಲ್ಲವೇ ಎಂದು ಕೇಳುತ್ತಾರೆ. ಇನ್ನೋರ್ವ ಮಹಿಳೆ ಕೂಡ ಸೀರೆಯುಟ್ಟ ಮಹಿಳೆಗೆ ತಮ್ಮ ಬ್ಯಾಗ್ ಅನ್ನು ಪಕ್ಕಕ್ಕೆ ಸರಿಸುವಂತೆ ಒತ್ತಾಯಿಸುತ್ತಿರುತ್ತಾರೆ. ಆದರೂ ಬ್ಯಾಗ್ ಎತ್ತಿಕೊಳ್ಳಲು ಮಹಿಳೆ ನಿರಾಕರಿದ್ದು, ಕೊನೆಗೆ ರೊಚ್ಚಿಗೆದ್ದ ಮತ್ತೋರ್ವ ಮಹಿಳೆ ಜಗ್ಗದೇ ಸಿಕ್ಕ ಜಾಗದಲ್ಲಿಯೇ ತುರುಕಿಕೊಂಡು ಕುಳಿತುಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

     

    View this post on Instagram

     

    A post shared by Pratibha Sharma (@pratibha.sharma_09)

     

    ವೀಡಿಯೋ ಜೊತೆಗೆ ಈ ಮಹಿಳೆಗೆ ಮೆಟ್ರೋದಲ್ಲಿ ಬ್ಯಾಗ್ ಇರಿಸಿಕೊಳ್ಳಲು ಸಹ ಸೀಟ್ ಬೇಕಂತೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ವೀಡಿಯೋಗೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪತಿಯ ಗುಪ್ತಾಂಗಕ್ಕೆ ಬಿಸಿ ನೀರು ಎರಚಿದ್ಲು

    Live Tv
    [brid partner=56869869 player=32851 video=960834 autoplay=true]

  • ರೈಲಿನಲ್ಲಿ ಸೀಟ್ ಸಿಕ್ಕಿಲ್ಲವೆಂದು ಕೂಡಿಟ್ಟಿದ್ದ 1.5 ಲಕ್ಷ ಹಣದಲ್ಲಿ ಪೇಂಟರ್ ಕಾರ್ ಖರೀದಿ

    ರೈಲಿನಲ್ಲಿ ಸೀಟ್ ಸಿಕ್ಕಿಲ್ಲವೆಂದು ಕೂಡಿಟ್ಟಿದ್ದ 1.5 ಲಕ್ಷ ಹಣದಲ್ಲಿ ಪೇಂಟರ್ ಕಾರ್ ಖರೀದಿ

    – ಮೂರು ದಿನ ಕಾದ್ರೂ ಶ್ರಮಿಕ ರೈಲಿನಲ್ಲಿ ಸೀಟ್ ಸಿಕ್ಕಿಲ್ಲ

    ಲಕ್ನೋ: ಶ್ರಮಿಕ ವಿಶೇಷ ರೈಲಿನಲ್ಲಿ ತನಗೆ ಮತ್ತು ತನ್ನ ಕುಟುಂಬಕ್ಕೆ ಸೀಟು ಸಿಗದ ಕಾರಣ ವ್ಯಕ್ತಿಯೊಬ್ಬ ತಾನು ಕೂಡಿಟ್ಟಿದ್ದ ಹಣದಲ್ಲಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್‍ಪುರನಲ್ಲಿ ನಡೆದಿದೆ.

    ಗೋರಖ್‍ಪುರದ ಪಿಪಿ ಗಂಜ್‍ನಲ್ಲಿರುವ ಕೈಥೋಲಿಯಾ ಗ್ರಾಮದ ನಿವಾಸಿ ಲಾಲನ್ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ತನ್ನ ಗ್ರಾಮಕ್ಕೆ ಮರಳಿದ್ದಾರೆ. ಲಲನ್ ಗಾಜಿಯಾಬಾದ್‍ನಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ತನ್ನ ಗ್ರಾಮಕ್ಕೆ ಹೋಗಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಶ್ರಮಿಕ ರೈಲನ್ನು ಸರ್ಕಾರ ಪ್ರಾರಂಭ ಮಾಡಿದೆ. ಈ ರೈಲಿನಲ್ಲಿ ತನ್ನ ಗ್ರಾಮ ತಲುಪಲು ಮೂರು ದಿನಗಳ ಕಾಲ ತನಗಾಗಿ ಮತ್ತು ತನ್ನ ಕುಟುಂಬಕ್ಕೆ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಶ್ರಮಿಕ ರೈಲಿನಲ್ಲಿ ಸೀಟು ಸಿಗಲಿಲ್ಲ.

    ಕೊನೆಗೆ ಲಾಲನ್ ನಾಲ್ಕನೇ ದಿನ ನೇರವಾಗಿ ಬ್ಯಾಂಕಿಗೆ ಹೋಗಿ ತಾನು ಉಳಿತಾಯ ಮಾಡಿದ್ದ 1.9 ಲಕ್ಷ ರೂ.ಗಳನ್ನು ಡ್ರಾ ಮಾಡಿಕೊಂಡು ಕಾರ್ ಶೋ ರೂಮ್‍ಗೆ ಹೋಗಿದ್ದಾರೆ. ಅಲ್ಲಿ 1.5 ಲಕ್ಷ ರೂಪಾಯಿಗೆ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಿದ್ದಾರೆ. ನಂತರ ಆ ಕಾರಿನಲ್ಲಿ ತನ್ನ ಕುಟುಂಬದವರ ಜೊತೆ ಗೋರಖ್‍ಪುರದ ತಮ್ಮ ಗ್ರಾಮಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ.

    ಲಾಕ್‍ಡೌನ್ ವಿಸ್ತರಣೆಯಾದಾಗ ನಮ್ಮ ಗ್ರಾಮಕ್ಕೆ ಹೋಗುವುದು ಸುರಕ್ಷಿತ ಎನಿಸಿತ್ತು. ಹೀಗಾಗಿ ರೈಲಿನಲ್ಲಿ ಸೀಟ್ ಬುಕ್ ಮಾಡಲು ಪ್ರಯತ್ನ ಮಾಡಿದೆ. ಆದರೆ ಪ್ರಯಾಣಿಕರು ಅಧಿಕವಾಗಿದ್ದರಿಂದ ಸೀಟ್ ಸಿಗಲಿಲ್ಲ. ಇನ್ನೂ ಸರ್ಕಾರ ಬಸ್ಸಗಳನ್ನು ಬಿಟ್ಟಿದ್ದರೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟವಾಗಿತ್ತು. ಒಂದು ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಪ್ರಯಾಣಿಸಿದರೆ ನನ್ನ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಬಹುದು ಎಂಬ ಆತಂಕವಾಯಿತು ಎಂದು ಲಾಲನ್ ಹೇಳಿದರು.

    ಅಂತಿಮವಾಗಿ ನಾನು ಶ್ರಮಿಕ್ ರೈಲುಗಳಲ್ಲಿ ಸೀಟ್ ಪಡೆಯಲು ವಿಫಲವಾದಾಗ ಕಾರು ಖರೀದಿಸಲು ನಿರ್ಧಾರ ಮಾಡಿದೆ. ಅದರಂತೆಯೇ ನನ್ನ ಉಳಿತಾಯವನ್ನು ನಾನು ಖರ್ಚು ಮಾಡಿ ಕಾರು ಖರೀದಿ ಮಾಡಿದೆ. ಆದರೆ ನನ್ನ ಕುಟುಂಬವನ್ನು ಸುರಕ್ಷಿತವಾಗಿ ಗ್ರಾಮಕ್ಕೆ ಕರೆದುಕೊಂಡು ಬಂದ ತೃಪ್ತಿ ಇದೆ ಎಂದು ತಿಳಿಸಿದರು.

    ಲಾಲನ್ ಮತ್ತು ಅವರ ಕುಟುಂಬ ಮೇ29 ರಂದು ಗಾಜಿಯಾಬಾದ್‍ನಿಂದ ಹೊರಟು, 14 ಗಂಟೆಗಳ ಪ್ರಯಾಣದ ನಂತರ ಗೋರಖ್‍ಪುರದ ತಮ್ಮ ಗ್ರಾಮಕ್ಕೆ ತಲುಪಿದರು. ಈಗ ಕುಟುಂಬದವರು ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ. ಲಾಲನ್ ಗೋರಖ್‍ಪುರದಲ್ಲೇ ಕೆಲಸ ಮಾಡಲು ನಿರ್ಧರಿಸಿದ್ದಾರೆ. ನಾನು ಇಲ್ಲಿಯೇ ಕೆಲಸ ಮಾಡಲು ಇಷ್ಟ ಪಡುತ್ತೇನೆ. ನಾನು ಗಾಜಿಯಾಬಾದ್‍ಗೆ ಹಿಂತಿರುಗುವುದಿಲ್ಲ. ನನಗೆ ಗೋರಖ್‍ಪುರದಲ್ಲಿ ಕೆಲಸ ಸಿಗುವ ಭರವಸೆ ಇದೆ ಎಂದು ಲಾಲನ್ ಹೇಳಿದರು.

  • ಮೋದಿ ಬಂದ್ರು ಸೀಟ್ ಸಿಗಲ್ಲ: ಸೀಟಿನಲ್ಲಿ ಕುಳಿತ ವಿದ್ಯಾರ್ಥಿನಿಗೆ KSRTC ಕಂಡಕ್ಟರ್, ಟಿಸಿ ಅವಾಜ್- ವಿಡಿಯೋ ನೋಡಿ

    ಮೋದಿ ಬಂದ್ರು ಸೀಟ್ ಸಿಗಲ್ಲ: ಸೀಟಿನಲ್ಲಿ ಕುಳಿತ ವಿದ್ಯಾರ್ಥಿನಿಗೆ KSRTC ಕಂಡಕ್ಟರ್, ಟಿಸಿ ಅವಾಜ್- ವಿಡಿಯೋ ನೋಡಿ

    ಮಂಡ್ಯ: ಕೆಎಸ್‍ಆರ್‍ಟಿಸಿ ಬಸ್ಸಿನ ಸೀಟಿನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ವಿದ್ಯಾರ್ಥಿನಿಗೆ ಬಸ್ಸಿನ ನಿರ್ವಾಹಕಿ ಮತ್ತು ಟಿಸಿ ಅವಾಜ್ ಹಾಕಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ವಾಗ್ವಾದ ಮಾಡಿರುವ ವಿಡಿಯೋವನ್ನು ಬಸ್ಸಿನಲ್ಲಿದ್ದ ಯುವಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಕಾಲೇಜು ವಿದ್ಯಾರ್ಥಿನಿ ತರಗತಿ ಮುಗಿಸಿಕೊಂಡು ಮನೆಗೆ ಹೋಗಲು ಮೇಲುಕೋಟೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ಕೆಲಹೊತ್ತಿನಲ್ಲಿ ಮೇಲುಕೋಟೆಯಿಂದ ಮಂಡ್ಯಕ್ಕೆ ಹೋಗುವ ಬಸ್ ಬಂದಿದ್ದು, ಅದರಲ್ಲಿ ಖಾಲಿ ಇದ್ದ ಸೀಟಿನಲ್ಲಿ ವಿದ್ಯಾರ್ಥಿನಿ ಕುಳಿತುಕೊಂಡಿದ್ದಾಳೆ.

    ಈ ವೇಳೆ ಬಂದ ನಿರ್ವಾಹಕಿ ಟಿಕೆಟ್ ಪಡೆದವರಿಗೆ ಸೀಟು ಬಿಡಲು ಸೂಚಿಸಿದ್ದಾರೆ. ಆದರೆ ಇದಕ್ಕೆ ವಿದ್ಯಾರ್ಥಿನಿ ವಿರೋಧಿಸಿದ್ದಾರೆ. ನಾವು ಹಣ ಕೊಟ್ಟು ಪಾಸ್ ಮಾಡಿಸಿಕೊಂಡಿದ್ದೇವೆ. ನಮಗೂ ಸೀಟಿನಲ್ಲಿ ಕುಳಿತುಕೊಳ್ಳುವ ಹಕ್ಕಿದೆ ಅಂತಾ ವಾದ ಮಾಡಿದ್ದಾಳೆ.

    ಗಲಾಟೆ ಕೇಳಿ ಬಸ್ಸಿನ ಬಳಿ ಬಂದ ನಿಲ್ದಾಣದ ಟಿಸಿ ಸರ್ಪಸೇನಾ ಕೂಡ ವಿದ್ಯಾರ್ಥಿನಿಗೆ ಅವಾಜ್ ಹಾಕಿದ್ದಾರೆ. ಯಾರಿಗೆ ಬೇಕಾದ್ರೂ ಹೇಳು, ಮೋದಿ ಬಂದ್ರು ಅಷ್ಟೇ ಅಂತಾ ಉಡಾಫೆ ಮಾತುಗಳನ್ನ ಮಾತನಾಡಿದ್ದಾರೆ. ಜೊತೆಗೆ ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಕೆಳಗಿಳಿಸಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಈ ಎಲ್ಲ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://youtu.be/1hGt5_Ns1ZQ