Tag: ಸೀಟಲ್

  • ಬಿಲ್ ಗೇಟ್ಸ್ ನಂ.1 – ವಿಶ್ವದ ಶ್ರೀಮಂತ ಪಟ್ಟದಿಂದ ಕೆಳಗಿಳಿದ ಜೆಫ್ ಬೆಜೋಸ್

    ಬಿಲ್ ಗೇಟ್ಸ್ ನಂ.1 – ವಿಶ್ವದ ಶ್ರೀಮಂತ ಪಟ್ಟದಿಂದ ಕೆಳಗಿಳಿದ ಜೆಫ್ ಬೆಜೋಸ್

    ಸೀಟೆಲ್: ವಿಶ್ವದ ಆಗರ್ಭ ಶ್ರೀಮಂತ ಪಟ್ಟದಿಂದ ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಕೆಳಗಿಳಿದಿದ್ದಾರೆ. ಹೀಗಾಗಿ ಮತ್ತೆ ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ಪಟ್ಟವನ್ನು ಅಲಂಕರಿಸಿದ್ದಾರೆ.

    ಪ್ರಸಕ್ತ ಹಣಕಾಸು ವರ್ಷದ ಕಳೆದ ತ್ರೈಮಾಸಿಕದಲ್ಲಿ ಬೆಜೋಸ್ ಅವರು ಸುಮಾರು 7 ಶತಕೋಟಿ ಡಾಲರ್(ಅಂದಾಜು 49 ಸಾವಿರ ಕೋಟಿ ರೂ.) ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದ್ದಾರೆ. ಗುರುವಾರ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಅಮೆಜಾನ್ ಷೇರುಗಳ ಬೆಲೆ ಶೇಕಡಾ 7ರಷ್ಟು ಕುಸಿದಿದ್ದು, ಬೆಜೋಸ್ ಅವರ ಕಂಪೆನಿಗೆ 103.9 ಶತಕೋಟಿ ಡಾಲರ್(ಅಂದಾಜು 729 ಲಕ್ಷ ಕೋಟಿ ರೂ.) ನಷ್ಟು ಕಡಿಮೆಯಾಗಿದೆ.

    ಇತ್ತ ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಸಂಪತ್ತಿನ ಮೌಲ್ಯ ಈಗ 105.7 ಶತಕೋಟಿ ಡಾಲರ್ ಆಗಿದೆ. ಹೀಗಾಗಿ ಈ ಬಾರಿ ಮತ್ತೆ ಬಿಲ್ ಗೇಟ್ಸ್ ಅವರೇ ನಂ. 1 ಸ್ಥಾನಕ್ಕೇರಿದ್ದಾರೆ. ಸತತ 24 ವರ್ಷಗಳಿಂದ 2018ರವರೆಗೂ ಬಿಲ್ ಗೇಟ್ಸ್ ಅವರೇ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ 2018ರಲ್ಲಿ ಬಿಜೋಸ್ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದರು. ಆಗ ಬಿಜೋಸ್ ಅವರ ಸಂಪೂರ್ಣ ಸಂಪತ್ತಿನ ಮೌಲ್ಯ 160 ಶತಕೋಟಿ ಡಾಲರ್ ಇತ್ತು.

    2017ರ ನಂತರ ತ್ರೈಮಾಸಿಕ ಅವಧಿಯಲ್ಲಿ ಅಮೆಜಾನ್ ಆದಾಯ ಶೇಕಡಾ 26ರಷ್ಟು ಇಳಿಮುಖ ಕಂಡಿದೆ. 1987ರಲ್ಲಿ ವಿಶ್ವದ ಅತಿ ಶ್ರೀಮಂತರ ಫೋಬ್ರ್ಸ್ ಮ್ಯಾಗಜಿನ್ ಪಟ್ಟಿಯಲ್ಲಿ 1.25 ಶತಕೋಟಿ ಡಾಲರ್ ಸಂಪತ್ತಿನ ಮೌಲ್ಯದೊಂದಿಗೆ ಬಿಲ್ ಗೇಟ್ಸ್ ಸ್ಥಾನ ಪಡೆದುಕೊಂಡಿದ್ದರು. 1998ರಲ್ಲಿ ಫೋಬ್ರ್ಸ್ ನ 400 ಅಮೆರಿಕದ ಶ್ರೀಮಂತರ ಪಟ್ಟಿಗೆ ಬೆಜೋಸ್ ಸೇರ್ಪಡೆಯಾಗಿದ್ದರು. ಆ ನಂತರ ಅಮೆಜಾನ್ ಕಂಪನಿ ಸಾರ್ವಜನಿಕ ಕ್ಷೇತ್ರದಲ್ಲಿ ವಹಿವಾಟು ಆರಂಭಿಸಿತು. ಆಗ ಕಂಪೆನಿಯ ಒಟ್ಟಾರೆ ಆದಾಯ 1.6 ಶತಕೋಟಿ ಡಾಲರ್ ಆಗಿತ್ತು.

    ಏಪ್ರೀಲ್‍ನಲ್ಲಿ ಬೆಜೊಸ್ ದಂಪತಿ ವಿಚ್ಛೇದನ ಪಡೆದಿಕೊಂಡಿದ್ದರು. ಇದು ಇತಿಹಾಸದಲ್ಲೇ ದುಬಾರಿ ವಿಚ್ಛೇದನ ಪ್ರಕರಣವಾಗಿದ್ದು, ಸುಮಾರು 36 ಶತಕೋಟಿ ಡಾಲರ್ ಮೌಲ್ಯದ ಜೆಫ್ ಬೆಜೋಸ್ ಅವರ ಷೇರುಗಳಿಗೆ ಮ್ಯಾಕೆಂಜಿ ಬೆಜೋಸ್ ಅವರಿಗೆ ನೀಡಲಾಗಿದೆ.