Tag: ಸೀಗಡಿ ಪಲ್ಯ

  • ನಾನ್ ವೆಜ್ ಪ್ರಿಯರು ಮರೆಯಲಾಗದ ಹೊಸ ರುಚಿ ‘ಸಿಗಡಿ ಪಲ್ಯ’ – ಟ್ರೈ ಮಾಡಿ

    ನಾನ್ ವೆಜ್ ಪ್ರಿಯರು ಮರೆಯಲಾಗದ ಹೊಸ ರುಚಿ ‘ಸಿಗಡಿ ಪಲ್ಯ’ – ಟ್ರೈ ಮಾಡಿ

    ಚಿಕನ್, ಮಟನ್ ತಿಂದು ಬೇಜಾರಾಗಿರುವ ನಾನ್‍ವೆಜ್ ಪ್ರಿಯರಿಗೆ ಇಂದು ಕರಾವಳಿ ಸ್ಪೆಷಲ್ ‘ಸಿಗಡಿ ಪಲ್ಯ’ ರೆಸಿಪಿಯನ್ನು ಕೇಳಿಕೊಡುತ್ತಿದ್ದೇವೆ. ಕರಾವಳಿ ಪ್ರದೇಶದಲ್ಲಿ ಸೀಗಡಿ ಮೀನುಗಳ ರೆಸಿಪಿ ಹೆಚ್ಚು ಪ್ರಸಿದ್ಧಿ. ಅಲ್ಲದೇ ಒಂದೇ ಸ್ಟೈಲ್ ರೆಸಿಪಿ ತಿಂದು ಬೋರ್ ಆಗಿರುವ ನಿಮ್ಮ ನಾಲಿಗೆಗೆ ಇಂದು ಕರಾವಳಿಯ ‘ಸಿಗಡಿ ಪಲ್ಯ’ ರುಚಿ ತೋರಿಸಿ.

    ಬೇಕಾಗಿರುವ ಪದಾರ್ಥಗಳು:
    * ಎಣ್ಣೆ – 3 ಟೇಬಲ್ಸ್ಪೂನ್
    * ಸಿಗಡಿ ಮೀನು – 250 ಗ್ರಾಂ
    * ದಾಲ್ಚಿನ್ನಿ – ಸಣ್ಣ ತುಂಡುಗಳು
    * ಜೀರಿಗೆ – 1 ಟೀಸ್ಪೂನ್
    * ಏಲಕ್ಕಿ – 2
    * ಕಟ್ ಮಾಡಿದ ಈರುಳ್ಳಿ – 1 ಕಪ್

    * ಹಸಿರು ಮೆಣಸಿನಕಾಯಿ – 1
    * ಕರಿಬೇವಿನ ಎಲೆ – 1 ಚಿಗುರು
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ಧನಿಯಾ ಪುಡಿ- 1 ಟೀಸ್ಪೂನ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಗರಂ ಮಸಾಲಾ – ಅರ್ಧ ಟೀಸ್ಪೂನ್
    * ಮೆಣಸು ಪುಡಿ – ಅರ್ಧ ಟೀಸ್ಪೂನ್
    * ಕಟ್ ಮಾಡಿದ ಟೊಮೆಟೊ – 1 ಕಪ್
    * ನೀರು – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಕಾಳುಮೆಣಸಿನ ಪುಡಿ – 1 ಟೀಸ್ಪೂನ್

    ಮಾಡುವ ವಿಧಾನ:
    * ಒಂದು ಬಟ್ಟಲಿನಲ್ಲಿ ಸ್ವಚ್ಛಗೊಳಿಸಿದ ಸಿಗಡಿಯನ್ನು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ದಾನಿಯಾ, ಅರಿಶಿನ ಪುಡಿ, ಗರಂ ಮಸಾಲಾ, ಕಾಳುಮೆಣಸಿನ ಪುಡಿ ಮತ್ತು ರುಚಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷಗಳ ಕಾಲ ಬಿಡಿ.
    * ಈಗ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮಸಾಲೆ ಮಿಕ್ಸ್ ಮಾಡಿದ ಸೀಗಡಿ ಹಾಕಿ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಅದು ಬೆಂದು ಗುಲಾಬಿ ಬಣ್ಣಕ್ಕೆ 5 ರಿಂದ 7 ನಿಮಿಷ ಬೇಯಿಸಿ. ನಂತರ ಕಡಾಯಿಯಲ್ಲಿ ರಸವನ್ನು ಬಿಟ್ಟು ಒಂದು ಬಟ್ಟಲಿಗೆ ಸಿಗಡಿಗಳನ್ನು ಮಾತ್ರ ತೆಗೆದುಹಾಕಿ.
    * ಈಗ ರಸವನ್ನು ಒಂದೆರಡು ನಿಮಿಷಗಳ ಕುದಿಸಿ ಅದಕ್ಕೆ ದಾಲ್ಚಿನ್ನಿ, ಜೀರಿಗೆ ಹಾಕಿ ಫ್ರೈ ಮಾಡಿ. ನಂತರ ಅದಕ್ಕೆ ಈರುಳ್ಳಿ, ಟೊಮೆಟೊ, ಕರಿಬೇವಿನ ಎಲೆ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ 5 ನಿಮಿಷಗಳ ಕಾಲ ಹುರಿಯಿರಿ.
    * ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದು ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಪ್ಪು ಮತ್ತು ಎಲ್ಲ ಮಸಾಲೆ ಪುಡಿಗಳನ್ನು ಸೇರಿಸಿ ಒಂದು ನಿಮಿಷ ಚೆನ್ನಾಗಿ ಫ್ರೈ ಮಾಡಿ. ಸ್ವಲ್ಪ ನೀರು ಸೇರಿಸಿ ಒಂದು ನಿಮಿಷ ಬೇಯಿಸಿ.
    * ಕೊನೆಗೆ ಬೇಯಿಸಿದ ಸಿಗಡಿಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷಗಳ ಕಾಲ ಬೇಯಿಸಿ.

    – ಈಗ ‘ಸಿಗಡಿ ಪಲ್ಯ’ ಸವಿಯಲು ಸಿದ್ಧ. ಇದನ್ನು ಅನ್ನ ಅಥವಾ ರೊಟ್ಟಿಯೊಂದಿಗೆ ಬಡಿಸಿ ಸವಿಯಿರಿ.

    Live Tv