Tag: ಸೀಕ್ರೆಟ್

  • ಮದ್ವೆಯಾಗಿ 9 ತಿಂಗ್ಳ ಬಳಿಕ ಪ್ರಿಯಾಂಕಾರಿಂದ ಬೆಡ್‍ರೂಂ ಸೀಕ್ರೆಟ್ ರಿವೀಲ್

    ಮದ್ವೆಯಾಗಿ 9 ತಿಂಗ್ಳ ಬಳಿಕ ಪ್ರಿಯಾಂಕಾರಿಂದ ಬೆಡ್‍ರೂಂ ಸೀಕ್ರೆಟ್ ರಿವೀಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾದ 9 ತಿಂಗಳ ಬಳಿಕ ತಮ್ಮ ಬೆಡ್‍ರೂಂ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕಾ ಅವರು ವೆಬ್‍ಸೈಟ್‍ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು, “ನಾನು ಮಲಗಿಕೊಂಡು ಎದ್ದಾಗ ನಿಕ್ ನನ್ನ ಮುಖ ನೋಡಲು ಇಷ್ಟಪಡುತ್ತಾರೆ. ಒಂದು ನಿಮಿಷ ಇರಿ ನಾನು ಸ್ವಲ್ಪ ಮಸ್ಕರಾ ಹಾಗೂ ಮಾಯಿಶ್ಚರೈಸರ್ ಹಾಕಿಕೊಳ್ಳುತ್ತೇನೆ ಎಂದು ನಾನು ಹೇಳುತ್ತೇನೆ. ಮಲಗಿಕೊಂಡು ಎದ್ದಾಗ ನನ್ನ ಕಣ್ಣುಗಳು ಭಾರವಾಗಿರುತ್ತದೆ. ಆದರೆ ನಿಕ್‍ಗೆ ಅದೇ ಇಷ್ಟವಾಗುತ್ತದೆ. ನನಗೆ ಇದು ವಿಚಿತ್ರ ಎನಿಸಿದ್ದರೂ ನಾನು ಅವರಿಗೆ ನನ್ನನ್ನು ನೋಡಲು ಅವಕಾಶ ನೀಡುತ್ತೇನೆ” ಎಂದು ಹೇಳಿದ್ದಾರೆ.

    ಕಳೆದ ವರ್ಷ ಡಿಸೆಂಬರ್ 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಪ್ರಿಯಾಂಕಾ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕಾದಲ್ಲಿ ಮಾಡಿಕೊಂಡಿದ್ದರು.

    ಮದುವೆಯಾದ ನಂತರ ಪ್ರಿಯಾಂಕಾ ತಮ್ಮ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಕಳೆದ ತಿಂಗಳು ಪ್ರಿಯಾಂಕಾ ಫ್ಲೋರಿಡಾದ ಮಿಯಾಮಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ತಮ್ಮ-ತಮ್ಮ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸದ ನಡುವೆಯೂ ಇಬ್ಬರು ಒಟ್ಟಿಗೆ ಕಾಲ ಕಳೆಯುತ್ತಾರೆ.

  • ದೀಪಿಕಾ ಜೊತೆ ನಟಿಸದ್ದಕ್ಕೆ ಉತ್ತರ ಕೊಟ್ಟ ಸಲ್ಮಾನ್ ಖಾನ್

    ದೀಪಿಕಾ ಜೊತೆ ನಟಿಸದ್ದಕ್ಕೆ ಉತ್ತರ ಕೊಟ್ಟ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

    ಇತ್ತೀಚೆಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ಅವರನ್ನು ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂದು ಪ್ರಶ್ನಿಸಲಾಗಿತ್ತು. ಆಗ ಸಲ್ಮಾನ್, ಹೌದು. ನನಗೂ ಕೂಡ ಆಶ್ಚರ್ಯವಾಗುತ್ತಿದೆ. ನಾನು ದೀಪಿಕಾ ಜೊತೆ ಯಾವಾಗ ಸಿನಿಮಾ ಮಾಡುತ್ತೇನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.

    ಅಲ್ಲದೆ ದೀಪಿಕಾ ಜೊತೆ ನಟಿಸಲು ಇದುವರೆಗೂ ನನಗೆ ಯಾರೂ ಕೇಳಿಲ್ಲ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಬಳಿಕ ದೀಪಿಕಾ ಬಹುದೊಡ್ಡ ನಟಿ. ಹಾಗಾಗಿ ನನ್ನ ಜೊತೆ ಸಿನಿಮಾ ಮಾಡುವ ಅರ್ಹತೆ ಅವರಿಗಿದೆ. ಆದರೆ ಸದ್ಯಕ್ಕೆ ಅಂತಹ ಸುದ್ದಿ ಇಲ್ಲ ಎಂದು ಹೇಳಿದ್ದಾರೆ.

    ಸಲ್ಮಾನ್ ಖಾನ್ ಬಾಲಿವುಡ್ ಟಾಪ್ ನಟಿಯರ ಜೊತೆ ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ ಹೊಸ ಹೊಸ ಪ್ರತಿಭೆಗಳನ್ನು ತಮ್ಮ ಸಿನಿಮಾಗಳಿಗೆ ನಾಯಕಿ ಪಾತ್ರ ಮಾಡುವ ಅವಕಾಶಗಳು ನೀಡಿದ್ದಾರೆ. ಹೀಗಿರುವಾಗ ಅವರು ಬಾಲಿವುಡ್ ಟಾಪ್ ನಟಿ ದೀಪಿಕಾ ಜೊತೆ ಇದುವರೆಗೂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

    ಸಲ್ಮಾನ್ ಖಾನ್ ‘ಭಾರತ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್‍ಗೆ ನಾಯಕಿಯಾಗಿ ಕತ್ರಿನಾ ಕೈಫ್ ನಟಿಸಿದ್ದಾರೆ. ಈ ಚಿತ್ರದಲ್ಲಿ ತಬು, ದಿಶಾ ಪಠಾಣಿ, ಶಶಾಂಕ್ ಅರೋರಾ, ಜಾಕಿ ಶ್ರಾಫ್, ಸುನೀಲ್ ಗ್ರೋವರ್, ಆಸೀಫ್ ಶೇಖ್, ನೋರಾ ಫತೇಹಿ ಸೇರಿದಂತೆ ಹಲವರು ನಟಿಸಿದ್ದಾರೆ. ಜೂನ್ 5ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

  • ಯಶ್, ಪ್ರಭಾಸ್ ಭೇಟಿಯ ಸೀಕ್ರೆಟ್ ರಿವೀಲ್- ಅತೀ ದೊಡ್ಡ ಶೋನಲ್ಲಿ ನಟರು ಭಾಗಿ

    ಯಶ್, ಪ್ರಭಾಸ್ ಭೇಟಿಯ ಸೀಕ್ರೆಟ್ ರಿವೀಲ್- ಅತೀ ದೊಡ್ಡ ಶೋನಲ್ಲಿ ನಟರು ಭಾಗಿ

    ಮುಂಬೈ: ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಕೆಜಿಎಫ್ ರಾಕಿ ಭಾಯ್ ಯಶ್ ಮುಂಬೈನಲ್ಲಿ ಭೇಟಿಯಾಗಿರುವ ಸೀಕ್ರೆಟ್ ಈಗ ರಿವೀಲ್ ಆಗಿದ್ದು, ರಾಜಾಹುಲಿ ಹಾಗೂ ಬಾಹುಬಲಿ ಅತೀ ದೊಡ್ಡ ಶೋವೊಂದರಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ನಿರ್ದೇಶಕ ಕರಣ್ ಜೋಹರ್ ಇಂದು ಬೆಳಗ್ಗೆ ಟ್ವಿಟ್ಟರಿನಲ್ಲಿ, “ನಾನು ‘ಕಾಫಿ ವಿತ್ ಕರಣ್’ ಕಾರ್ಯಕ್ರಮ ನಡೆಸಿಕೊಡಲು ಹೋಗುತ್ತಿದ್ದೇನೆ. ಈ ಕಾರ್ಯಕ್ರಮ ನಡೆಸಿಕೊಡಲು ತುಂಬಾ ಹೆಮ್ಮೆಯಾಗುತ್ತಿದೆ. ಇಂದು ಹೆಮ್ಮೆಯ ಒಂದು ಕಾಫಿ ಯಾರೂ ಎಂದು ಗೆಸ್ ಮಾಡುತ್ತೀರಾ?” ಎಂದು ಟ್ವೀಟ್ ಮಾಡಿದರು.

    ಕರಣ್ ಜೋಹರ್ ಟ್ವೀಟಿಗೆ ಎಲ್ಲರೂ ಪ್ರಭಾಸ್, ರಾಜಾಮೌಳಿ ಹಾಗೂ ರಾಣಾ ಬರುತ್ತಾರೆ ಎಂದು ರೀ-ಟ್ವೀಟ್ ಮಾಡಿದರು. ಮತ್ತೆ ಕೆಲವರು ಪ್ರಭಾಸ್ ಹಾಗೂ ಯಶ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಗೆಸ್ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಾಹುಬಲಿ-ಕೆಜಿಎಫ್ ‘ರಾಕಿ ಭಾಯ್’ ಮುಂಬೈನಲ್ಲಿ ಭೇಟಿಯಾಗಿದ್ದೇಕೆ?

    https://twitter.com/karanjohar/status/1071233254055911424?ref_src=twsrc%5Etfw%7Ctwcamp%5Etweetembed%7Ctwterm%5E1071233254055911424&ref_url=http%3A%2F%2Fenglish.sakshi.com%2Fentertainment%2F2018%2F12%2F08%2Fbaahubali-prabhas-on-koffee-with-karan-opens-about-anushka-and-martial-status

    ಪ್ರಭಾಸ್ ಹಾಗೂ ಯಶ್ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಇಬ್ಬರು ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾದರೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲ ಸೌತ್ ನಟರು ಯಶ್ ಹಾಗೂ ಪ್ರಭಾಸ್ ಆಗುತ್ತಾರೆ.

    ಮುಂಬೈನ ಪಾಲಿಭವನ್ ನಿಂದ ಹೊರಡುವಾಗ ಇಬ್ಬರು ನಟರೂ ಪರಸ್ಪರ ತಬ್ಬಿಕೊಂಡು ಬಾಯ್ ಹೇಳಿದ್ದಾರೆ. ಆ್ಯಕ್ಷನ್ ಸಿನಿಮಾದಿಂದ ಖ್ಯಾತಿಗೊಂಡ ಇಬ್ಬರನ್ನು ನೋಡಿ ಎಲ್ಲರಿಗೂ ಖುಷಿಯಾಗಿದೆ. ಇದೇ ವೇಳೆ ಇಬ್ಬರು ಸ್ಟಾರ್ ನಟರೂ ಯಾವುದೇ ಹಮ್ಮಿಲ್ಲದೆ ಫೋಟೋಗೆ ಪೋಸ್ ಕೊಟ್ಟು ಅಭಿಮಾನಿಗಳಿಗೆ ಖುಷಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾದಕ ಬೆಡಗಿ ಸನ್ನಿ ಲಿಯೋನ್ ಬ್ಯೂಟಿ ಸೀಕ್ರೆಟ್ ರಿವೀಲ್- ನೀವು ಅನುಸರಿಸಬಹುದು

    ಮಾದಕ ಬೆಡಗಿ ಸನ್ನಿ ಲಿಯೋನ್ ಬ್ಯೂಟಿ ಸೀಕ್ರೆಟ್ ರಿವೀಲ್- ನೀವು ಅನುಸರಿಸಬಹುದು

    ಮುಂಬೈ: ಬಾಲಿವುಡ್ ಮಾದಕ ಬೆಡಗಿ ಸನ್ನಿ ಲಿಯೋನ್ ಕೇವಲ ಹಾಟ್ ಫಿಗರ್ ಅಲ್ಲದೇ ತನ್ನ ಹೊಳೆಯುವ ತ್ವಚೆ ಮೂಲಕವು ಎಲ್ಲರಿಗೂ ಇಷ್ಟವಾಗುತ್ತಾರೆ. ಹೀಗಾಗಿ ಬಹಳಷ್ಟು ಮಂದಿ ಸನ್ನಿಯಲ್ಲಿ ನಿಮ್ಮ ಸೌಂದರ್ಯ ಮತ್ತು ಆರೋಗ್ಯದ ಗುಟ್ಟು ಏನು ಎಂದು ಕೇಳುತ್ತಿದ್ದರು. ಈ ಪ್ರಶ್ನೆಗೆ ಉತ್ತರ ಎಂಬಂತೆ ಸನ್ನಿ ತನ್ನ ಬ್ಯೂಟಿ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

    ಸ್ಕೀನ್ ಹೈಡ್ರೇಟ್ ಮತ್ತು ಮಾಯಿಶ್ಚರೈಸ್(moisturizers):
    ತಮ್ಮ ಸ್ಕೀನ್ ಹೈಡ್ರೇಟ್ ಮಾಡಲು ಸನ್ನಿ ದಿನಕ್ಕೆ ಕಡಿಮೆ ಎಂದರೆ 8 ಗ್ಲಾಸ್ ನೀರು ಕುಡಿಯುತ್ತಾರೆ. ನಾವು ಏನೇ ತಿಂದರೂ ಅದು ನಮ್ಮ ತ್ವಚೆ ಮೇಲೆ ಪರಿಣಾಮ ಬೀರಿ ಅದು ನಮ್ಮ ಸ್ಕೀನ್ ಮೇಲೆ ಕಾಣುವ ರೀತಿ ಮಾಡುತ್ತದೆ. ಈ ಕಾರಣಕ್ಕಾಗಿ ನಾನು ನೀರು ಹೆಚ್ಚು ಕುಡಿಯುತ್ತೇನೆ ಎಂದು ಸನ್ನಿ ಹೇಳಿದ್ದಾರೆ. ನೀರನ್ನು ಹೊರತು ಪಡಿಸಿ ಹಣ್ಣು ಹಾಗೂ ಸಲಾಡ್ ಸೇವಿಸುತ್ತಾರೆ.

    ಪ್ರತಿನಿತ್ಯ ಯೋಗ:
    ಸುಂದರವಾಗಿ ಕಾಣಲು ಪ್ರತಿನಿತ್ಯ ಯೋಗ ಮಾಡುತ್ತಾರೆ. ಎಲ್ಲಿಯೇ ಶೂಟಿಂಗ್ ಇತ್ಯಾದಿ ಕೆಲಸಕ್ಕೆ ಹೊರಗಡೆ ಹೋದರೂ ಯೋಗ ಮಾಡೋದನ್ನು ಮಾತ್ರ ತಪ್ಪಿಸಲ್ಲ. ಗ್ಲೋಯಿಂಗ್ ಸ್ಕೀನ್ ಗಾಗಿ ಯೋಗ ಅವಶ್ಯಕ ಎಂದು ಸನ್ನಿ ಲಿಯೋನ್ ನಂಬುತ್ತಾರೆ.

    ಉತ್ತಮ ಕ್ವಾಲಿಟಿಯ ಪ್ರಾಡಕ್ಟ್:
    ತ್ವಚೆಯನ್ನು ಕಾಪಾಡಿಕೊಳ್ಳಲು ಸನ್ನಿ ಉತ್ತಮ ಕ್ವಾಲಿಟಿಯ ಪ್ರಾಡಕ್ಟ್ ಉಪಯೋಗಿಸುತ್ತಾರೆ. ಸ್ಕೀನ್‍ಗಾಗಿ ಒಳ್ಳೆಯ ಬ್ರಾಂಡ್ ಇರುವ ಸ್ಕೀನ್ ಪ್ರಾಡಕ್ಟ್ ಆಯ್ಕೆ ಮಾಡಿಕೊಳ್ಳುತ್ತಾರೆ. ಮೇಕಪ್ ನಿಂದಾಗಿ ತ್ವಚೆ ಮೇಲೆ ಯಾವುದೇ ಪರಿಣಾಮ ಬೀರದೇ ಇರಲು ಗುಣಮಟ್ಟದ ಉತ್ಪನ್ನವನ್ನು ಬಳಸುತ್ತಾರೆ.

    ಮಲಗುವಾಗ ಮೇಕಪ್ ಇರಲ್ಲ:
    ಸನ್ನಿ ಮೇಕಪ್ ತೆಗೆದೇ ಮಲಗುತ್ತಾರೆ. ಮೇಕಪ್ ತೆಗೆಯುವುದಕ್ಕಾಗಿ ಸನ್ನಿ ಪೋರ್ ಕ್ಲೇನ್ಸರ್ ಉಪಯೋಗಿಸುತ್ತಾರೆ. ಮೇಕಪ್ ತಮ್ಮ ನಯವಾದ ತ್ವಚೆಯಲ್ಲಿ ಇರಬಾರದು ಎಂದು ಕ್ಲೇನ್ಸರ್ ಉಪಯೋಗಿಸುತ್ತಾರೆ. ಅಲ್ಲದೇ ಏಜಿಂಗ್ ಎಫೆಕ್ಟ್ ಕಾಣದಿರಲು ಗುಣಮಟ್ಟದ ಬ್ಯೂಟಿ ಪ್ರಾಡಕ್ಟ್ ಉಪಯೋಗಿಸುತ್ತಾರೆ.

    ಈ ಎಲ್ಲಾ ಟಿಪ್ಸ್ ಅನುಸರಿಸಿದರೆ ನೀವು ಕೂಡ ಸನ್ನಿ ಲಿಯೋನ್ ನಂತಹ ಸುಂದರ ಹಾಗೂ ಹೊಳೆಯುವ ತ್ವಚೆ ಪಡೆಯಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ಯಜಮಾನ’ ಸೆಟ್‍ಗೆ ವಿಜಯಲಕ್ಷ್ಮಿ ಭೇಟಿ ನೀಡಿದ ಸೀಕ್ರೆಟ್ ರಿವೀಲ್

    ‘ಯಜಮಾನ’ ಸೆಟ್‍ಗೆ ವಿಜಯಲಕ್ಷ್ಮಿ ಭೇಟಿ ನೀಡಿದ ಸೀಕ್ರೆಟ್ ರಿವೀಲ್

    ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹು ನಿರೀಕ್ಷಿತ `ಯಜಮಾನ’ ಚಿತ್ರದ ಶೂಟಿಂಗ್ ಸೆಟ್‍ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಆದರೆ ಈಗ ಆ ಭೇಟಿ ಹಿಂದಿನ ರಹಸ್ಯ ಬಹಿರಂಗವಾಗಿದೆ.

    ನಗರದ ಪ್ಯಾಲೇಸ್ ಗ್ರೌಂಡ್‍ನಲ್ಲಿ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಸದ್ಯ ಈ ಚಿತ್ರದಿಂದ ಈಗ ಹೊಸದಂದು ಸಿಕ್ರೇಟ್ ರಿವೀಲ್ ಆಗಿದ್ದು, ಈ ಚಿತ್ರದಲ್ಲಿ ದರ್ಶನ್ ಅವರ ಪುತ್ರ ವಿನೀಶ್ ಕೂಡ ನಟಿಸುತ್ತಿದ್ದಾನೆ.

    ಯಜಮಾನ ಚಿತ್ರದಲ್ಲಿ ಜೂನಿಯರ್ ದರ್ಶನ್, ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸುತ್ತಿದ್ದಾರೆ. ಈ ಹಾಡಿನಲ್ಲಿ ಅಪ್ಪ ಮಗ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ. ‘ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಯಜಮಾನ ಶೂಟಿಂಗ್ ಸೆಟ್ಟಿನಲ್ಲಿ ಕಾಣಿಸಿಕೊಂಡ್ರು ಯಜಮಾನಿ – ಫೋಟೋ ವೈರಲ್

    ವಿಜಯಲಕ್ಷ್ಮಿ ಹಲವು ಬಾರಿ ತನ್ನ ಪತಿ ದರ್ಶನ್ ಅವರ ನಟನೆಯನ್ನು ನೋಡಲು ಶೂಟಿಂಗ್ ಸೆಟ್‍ಗೆ ಹೋಗುತ್ತಿದ್ದರು. ಆದರೆ ಈಗ ತಮ್ಮ ಮಗ ವಿನೀಶ್ ನಟನೆಯನ್ನು ನೋಡಲು ವಿಜಯಲಕ್ಷ್ಮಿ ಶನಿವಾರ ಯಜಮಾನ ಚಿತ್ರದ ಸೆಟ್‍ಗೆ ಭೇಟಿ ನೀಡಿದ್ದರು.

    ಸತತ ಎರಡ್ಮೂರು ತಿಂಗಳಿನಿಂದ ಯಜಮಾನ ಸಿನಿಮಾ ಚಿತ್ರೀಕರಣದಲ್ಲಿ ಭಾಗಹಿಸುತ್ತಿರುವ ದರ್ಶನ್ ನಿರಂತರ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ವಿಶೇಷವಾದ ಸೆಟ್ಟಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದ್ದು, ಅಂತಿಮ ಹಂತ ತಲುಪಿದೆ. ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ದರ್ಶನ್ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದಲ್ಲಿ ದರ್ಶನ್ ಅವರ ಲುಕ್ ಹೇಗಿದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಇದೆ. ದರ್ಶನ್ ರೊಂದಿಗೆ ರಶ್ಮಿಕಾ ಮಂದಣ್ಣ ಜೋಡಿಯನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv