Tag: ಸಿ.ಸಿ.ಪಾಟೀಲ್

  • ಜಯಮೃತ್ಯುಂಜಯ ಸ್ವಾಮೀಜಿಗಳ ಜೊತೆ ಇಡೀ ಪಂಚಮಸಾಲಿ ಸಮಾಜ ಇದೆ: ಸಿ.ಸಿ.ಪಾಟೀಲ್

    ಜಯಮೃತ್ಯುಂಜಯ ಸ್ವಾಮೀಜಿಗಳ ಜೊತೆ ಇಡೀ ಪಂಚಮಸಾಲಿ ಸಮಾಜ ಇದೆ: ಸಿ.ಸಿ.ಪಾಟೀಲ್

    ಬೆಂಗಳೂರು: ಪಂಚಮಸಾಲಿ ಪೀಠದ ಶ್ರೀಗಳಾದ ಜಯಮೃತ್ಯುಂಜಯ ಸ್ವಾಮೀಜಿಗಳ (Jayamruthyunjaya Swamiji) ಜೊತೆ ಇಡೀ ಸಮುದಾಯ ಇದೆ. ಸ್ವಾಮೀಜಿಗಳು ಏನೇ ನಿರ್ಧಾರ ಮಾಡಿದ್ರು ನಮ್ಮ ಬೆಂಬಲ ಅವರಿಗೆ ಇದೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ್ (CC Patil) ತಿಳಿಸಿದ್ದಾರೆ.

    ಪಂಚಮಸಾಲಿ (Panchamasali) ಪೀಠದ ಶ್ರೀಗಳ ಉಚ್ಚಾಟನೆ ಮಾಡಿರೋ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜಯಮೃತ್ಯುಂಜಯ ಸ್ವಾಮೀಜಿಗಳ ಜೊತೆ ನಾವು ಇದ್ದೇವೆ. ಶನಿವಾರ ನಾನು, ಯತ್ನಾಳ್ ಸೇರಿ ಸಮಾಜದ ಪ್ರಮುಖರು ಸ್ವಾಮೀಜಿಗಳನ್ನ ಭೇಟಿ ಆಗ್ತೀವಿ. ಅವರು ಏನು ನಿರ್ಧಾರ ಮಾಡ್ತಾರೋ ಅವರ ಜೊತೆ ಚರ್ಚೆ ಮಾಡ್ತೀವಿ. ಸ್ವಾಮೀಜಿಗಳ ಜೊತೆ ನಾವು ಇರುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿರೋದು ಗುಂಡಿಗಳನ್ನ ನಡೆಸೋ ಸರ್ಕಾರ: ಸಿ.ಸಿ.ಪಾಟೀಲ್

    ಜಯಮೃತ್ಯುಂಜಯ ಸ್ವಾಮೀಜಿಗಳು ಪೀಠಾರೋಹಣ ಮಾಡಿದಾಗಿನಿಂದ ಸಮಾಜ ಕಟ್ಟೋ ಕೆಲಸ ಮಾಡಿದ್ದಾರೆ. ಹಗಲು ಇರುಳು ಸಮಾಜಕ್ಕೆ ದುಡಿದಿದ್ದಾರೆ. ಇದರಲ್ಲಿ ಎರಡು ಮಾತು ಇಲ್ಲ. ಹಣದ ಆಸೆಗೆ ಬಲಿ ಆಗಲಿಲ್ಲ. ಸಮಾಜದ ಏಳಿಗೆಗಾಗಿ, ಒಗ್ಗಟ್ಟಿಗಾಗಿ 750ಕಿ.ಮೀ ಪಾದಯಾತ್ರೆ ಮಾಡಿದ್ರು. 8 ರಿಂದ 10 ಲಕ್ಷ ಜನ ಸೇರಿಸಿ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಿದ್ರು. ಪಂಚಮಸಾಲಿ ಸಮಾಜದ ಶಕ್ತಿ ಪ್ರದರ್ಶನ ಮಾಡಿದ ಶ್ರೇಯಸ್ಸು ಸ್ವಾಮೀಜಿಗಳಿಗೆ ಸಲ್ಲಬೇಕು. ವಿಜಯಾನಂದ ಕಾಶಪ್ಪನವರ್ ಬಗ್ಗೆ ನಾನೇನು ಮಾತಾಡೋಕೆ ಹೋಗಲ್ಲ. ಅದರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

    ಸ್ವಾಮೀಜಿಗಳು ಯಾವುದಕ್ಕೂ ಆಸೆ ಪಟ್ಟವರು ಅಲ್ಲ. ಉಚ್ಚಾಟನೆ ಮಾಡಿರೋದು ನಿರೀಕ್ಷಿತನೇ. ನಮಗೂ ನಿರೀಕ್ಷೆ ಇತ್ತು. ಕಾಶಪ್ಪನವರಿಗೆ ನಾವೆಲ್ಲ ಕೂತು ಮಾತಾಡಿ ಸಮಸ್ಯೆ ಬಗೆಹರಿಸೋಣ ಅಂತ ಹೇಳಿದ್ದೆ. ಆದರೆ ಅವರು ಅದನ್ನ ಕೇಳಲಿಲ್ಲ. ಇಡೀ ಪಂಚಮಸಾಲಿ ಸಮಾಜ ಜಯಮೃತ್ಯುಂಜಯ ಸ್ವಾಮೀಜಿ ಜೊತೆ ಇದೆ. ಶನಿವಾರ ಸಭೆ ಮಾಡಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಸ್ವಾಮೀಜಿಗಳ ಜೊತೆ ನಾನು ಫೋನ್‌ನಲ್ಲಿ ಮಾತಾಡಿದ್ದೇನೆ. ಸಮಾಜ, ಸಂಘಟನೆ ಹೋರಾಟ ನಿಲ್ಲೋದಿಲ್ಲ ಅಂತ ಹೇಳಿದ್ದಾರೆ. ಅವರಿಗೆ ನಮ್ಮ ನೈತಿಕತೆ ಬೆಂಬಲ ಇದೆ ಎಂದರು. ಹೊಸ ಪೀಠ ರಚನೆ ಆದ್ರೆ ಬೆಂಬಲ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಒಬ್ಬನೇ ಹೇಳಬಾರದು. ನಾವೆಲ್ಲ ಕೂತು ಇದರ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

  • ಎಸ್‌ಸಿ, ಎಸ್‌ಟಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ದುರ್ಬಳಕೆ: ಸಿ.ಸಿ.ಪಾಟೀಲ್

    ಎಸ್‌ಸಿ, ಎಸ್‌ಟಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ದುರ್ಬಳಕೆ: ಸಿ.ಸಿ.ಪಾಟೀಲ್

    – ದಲಿತರ ಅನುದಾನದ ಮೇಲೆ ಸರ್ಕಾರದ ಕಣ್ಣು

    ಗದಗ: ಅಹಿಂದ ನಾಯಕ ಎಂದು ಹೇಳುವ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ನರಗುಂದ (Naragunda) ಬಿಜೆಪಿ ಶಾಸಕ ಸಿ.ಸಿ ಪಾಟೀಲ (C C Patil) ಆರೋಪಿಸಿದರು.

    ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಆಗಿದೆ. ಪ್ರಾರಂಭಿಕ 6 ಪಂಚ ವಾರ್ಷಿಕ ಯೋಜನೆಗಳಲ್ಲಿ ಎಸ್ಸಿಪಿ, ಟಿಎಸ್ಪಿ ಯೋಜನೆ ತರಲಿಲ್ಲ. ಕೆ.ಆರ್ ನಾರಾಯಣನ್ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ವೇಳೆ 7ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಜಾರಿಗೆ ಬಂದಿದೆ ಎಂಬುದು ಕಾಂಗ್ರೆಸ್‌ನವರಿಗೆ ಗೊತ್ತಿರಲಿ ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರೋದು ರಾಜಕೀಯ ದ್ವೇಷ: ನಿಖಿಲ್ ಕುಮಾರಸ್ವಾಮಿ

    2023-24ರಲ್ಲಿ ಎಸ್ಸಿಪಿ, ಟಿಎಸ್ಪಿನಿಂದ ವಾಪಸ್ ತೆಗೆದುಕೊಂಡಿದ್ದು ಒಟ್ಟು 11,144 ಕೋಟಿ ರೂ. ಹಣ. 2024-25ರಲ್ಲಿ 14,488 ಕೋಟಿ ರೂ. ಹಣ ವಾಪಾಸ್ ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೆ ಸುಮಾರು 25,000 ಕೋಟಿ ರೂ. ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ಮೂಖಪ್ರೇಕ್ಷಕರಾಗಿರುವ ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಎಸ್.ಸಿ ಮಹದೇವಪ್ಪ, ಮುನಿಯಪ್ಪ, ಪರಮೇಶ್ವರ್ ಅವರು ಪ್ರಶ್ನಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ‘ದೇಶೀಯ ಕಾರ್ಗೋ ಟರ್ಮಿನಲ್’ ಪ್ರಾರಂಭ

    ಇದೆಲ್ಲಾ ಇವರು ದಲಿತರ ಮೇಲೆ ತೋರಿಸುತ್ತಿರುವ ಪ್ರೀತಿ. ಮುಂಬರುವ ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ ವರ್ಗಕ್ಕೆ ಮೀಸಲಿಟ್ಟ 15,000 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ತೆಗೆದುಕೊಳ್ಳುವ ಸಿದ್ಧತೆ ನಡೆಸಿದ್ದಾರೆ. ಇದನ್ನು ಕೈಬಿಡದಿದ್ದರೆ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮುಂದಿನ ಕುಂಭಮೇಳ ಎಲ್ಲಿ ನಡೆಯುತ್ತೆ? – ಈಗಲೇ ತಯಾರಿ ಆರಂಭಿಸಿದ ಸರ್ಕಾರ

    ಪರಿಷತ್ ಸದಸ್ಯ ಎಸ್.ವಿ ಸಂಕನೂರ ಮಾತನಾಡಿ, ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರ ವರ್ಗಾವಣೆ ಮಾಡುತ್ತಿದೆ. ಕಾನೂನು ಉಲ್ಲಂಘಿಸಿದವರ ಮೇಲೆ ಕ್ರಮ ಏಕೆ ಕೈಗೊಳ್ಳುತ್ತಿಲ್ಲ. ರಾಜಕಾರಣಿ, ಹಿರಿಯ ಅಧಿಕಾರಿಗಳೇ ಈ ಅಕ್ರಮ ಎಸಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದೆಂತೆ ಆಗಿದೆ. ಈಗ ಯಾರ ಮೇಲೆ ಕ್ರಮ ಕೈಗೊಳ್ಳಲಬೇಕು ಎಂದು ಸರ್ಕಾರವನ್ನು ಪ್ರಶ್ನಿಸಿದರು.

    ಎಸ್‌ಸಿ, ಎಸ್‌ಟಿ ಸಮುದಾಯದ ಮೇಲೆ ಕಾಳಜಿ ಇದ್ದರೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನವನ್ನು ಸಂಪೂರ್ಣ ಬಿಡುಗಡೆ ಮಾಡಬೇಕಿತ್ತು. ಆರ್ಥಿಕ ವರ್ಷ ಕಳೆದರೂ ಇನ್ನೂ ಪೂರ್ಣ ಅನುದಾನ ಬಿಡುಗಡೆ ಮಾಡಿಲ್ಲ. ನಿಯಮ ಉಲ್ಲಂಘಿಸಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ ಆಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅನ್ಯ ಮಾರ್ಗ ಹಿಡಿದಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ಅಪಘಾತಕ್ಕೆ ಕೋಮಾ ಸ್ಥಿತಿಯಲ್ಲಿ ಭಾರತೀಯ ವಿದ್ಯಾರ್ಥಿನಿ

    ಎಸ್‌ಸಿ ಘಟಕದ ಅಧ್ಯಕ್ಷ ಮಂಜುನಾಥ ಹುಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಮಂಜುನಾಥ ಮುಳಗುಂದ, ಲಿಂಗರಾಜ ಪಾಟೀಲ, ಫಕ್ಕಿರೇಶ ರಟ್ಟಿಹಳ್ಳಿ, ರಾಮಣ್ಣ ಚವಾಣ್, ಸುರೇಶ್ ಛಲವಾದಿ, ಮಲ್ಲಪ್ಪ ಮಾದರ್, ಈಶ್ವರಪ್ಪ ರಂಗಪ್ಪನವರು, ಯಲ್ಲಪ್ಪ ಶಿರಿ ಸೇರಿ ಹಲವರು ಉಪಸ್ಥಿತರಿದ್ದರು.

  • ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಸಿನಿಮಾ ಮಾಡಿದ್ರೆ ಬಾಕ್ಸ್ಆಫೀಸ್ ಹಿಟ್ ಆಗುತ್ತೆ: ಸಿ.ಸಿ ಪಾಟೀಲ್

    ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಸಿನಿಮಾ ಮಾಡಿದ್ರೆ ಬಾಕ್ಸ್ಆಫೀಸ್ ಹಿಟ್ ಆಗುತ್ತೆ: ಸಿ.ಸಿ ಪಾಟೀಲ್

    ಗದಗ: ಕಾಂಗ್ರೆಸ್ (Congress) ಸರ್ಕಾರದ ಹಗರಣಗಳ ಬಗ್ಗೆ ಸಿನೆಮಾ ಮಾಡಿದ್ರೆ ಬಾಕ್ಸ್ಆಫೀಸ್ ಹಿಟ್ ಆಗುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ (BJP) ನರಗುಂದ ಶಾಸಕ ಸಿ.ಸಿ ಪಾಟೀಲ್ (C C Patil) ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನಗರದ ಕಚೇರಿಯಲ್ಲಿ ಮಾತನಾಡಿದ ಅವರು, ಹಗರಣಗಳ ಸುಳಿಯಲ್ಲಿ ಸರ್ಕಾರ ಸಿಲುಕಿದೆ. ತನ್ನ ಹಗರಣಗಳು ಬೆಳಕಿಗೆ ಬರಬಾರದೆಂದು ಒಂದಲ್ಲ ಒಂದು ಕಥೆ ಬಿಡುತ್ತಿದೆ. ಮೊದಲು ಹುಲಿ ಉಗುರಿನದು ಬಿಟ್ಟರು. ವಾಲ್ಮೀಕಿ ಹಗರಣ ಬಂದಾಗ ದರ್ಶನ್ ವಿಚಾರ ಬಂತು. ಈಗ ಮುಡಾ ಹಗರಣ ಬಂದಾಗ ವಕ್ಫ್ ಬೋರ್ಡ್ ಬಂದಿದೆ. ಹಗರಣಗಳನ್ನ ಮುಚ್ಚಿಹಾಕಲು ಒಂದಿಲ್ಲೊಂದು ದಂತಕಥೆಗಳನ್ನು ತೇಲಿಬಿಡುತ್ತಾರೆ. ಆಡಳಿತದ ವೈಫಲ್ಯತೆ ಕಡೆಗೆ ರಾಜ್ಯದ ಜನರ ಗಮನ ಹೋಗದ ಹಾಗೆ ನೋಡುತ್ತಿದ್ದಾರೆ. ಸಿಎಂ ಅವರು ಗಾಳಿ ಸುದ್ದಿ ಬಿಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಹೆಚ್‍ಡಿಕೆ

    ನಿಮ್ಮ ಆಡಳಿತ ನಿಮಗೆ ತೃಪ್ತಿ ತರುತ್ತಿದೆಯಾ ಎಂದು ಆತ್ಮಸಾಕ್ಷಿಯಾಗಿ ಸಿಎಂ ಹೇಳಿ. 2 ವರ್ಷದಲ್ಲಿ ರಾಜ್ಯ ಏನು ಅಭಿವೃದ್ಧಿ ಆಗಿದೆ. ಗ್ಯಾರಂಟಿ ಕೊಟ್ಟಿದ್ದೇನೆ ಅಂತೀರಾ ಅದಕ್ಕೆ ವಿರೋಧ ಇಲ್ಲ. ಅಭಿವೃದ್ಧಿ ಏನು ಮಾಡಿದ್ದೀರಿ? ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಕರೆದು ಶಾಸಕರ ಅಭಿಪ್ರಾಯ ಕೇಳಿ. ಆಗ ನಿಮ್ಮ ನೈಜ ಬಣ್ಣ ಗೊತ್ತಾಗುತ್ತೆ. ಸಿಎಂ ಡಿಸಿಎಂಗೆ ಹೇಳೋಕೆ ಇಚ್ಚೆ ಪಡುತ್ತೇನೆ. ಕನ್ನಡ ರಾಜ್ಯೋತ್ಸವದ ಬಗ್ಗೆ ಕೇವಲ ಡಿಸಿಎಂ ಜಾಹೀರಾತು ಬರುತ್ತದೆ. ಸಿಎಂದು ಹೆಚ್ಚು ಜಾಹಿರಾತು ಇಲ್ಲವೇ ಇಲ್ಲ. ಏನು ವಿಚಿತ್ರ ಸರ್ಕಾರ. ನಾನು 4ನೇ ಬಾರಿ ಶಾಸಕ, ನಾನಂತೂ ಇಂತಹ ಸರ್ಕಾರ ನೋಡಿದ್ದೇ ಇಲ್ಲ ಎಂದರು. ಇದನ್ನೂ ಓದಿ: ಬಿಜಿಎಸ್ ಆಸ್ಪತ್ರೆ ತಲುಪಿದ ದರ್ಶನ್‌ – ಸರ್ಜರಿ ಕೊನೇ ಆಯ್ಕೆಯಾಗಿ ಪರಿಗಣಿಸುವಂತೆ ಕುಟುಂಬಸ್ಥರ ಮನವಿ

    ಇನ್ನು ವಕ್ಫ್ ಆಸ್ತಿ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಮಾತನಾಡಿ, ಪಂಚಮಸಾಲಿ ಕೂಡಲಸಂಗಮ ಪೀಠ, ಹರಿಹರ ಪಂಚಮಸಾಲಿ ಪೀಠ ವಕ್ಫ್ ಬೋರ್ಡ್ ಅನ್ನುತ್ತಾರೋ ಏನೋ. ವಕ್ಫ್ ಬೋರ್ಡ್ ವಿಚಾರಕ್ಕೆ ಕಾಂಗ್ರೆಸ್‌ಗೆ ಮತ ಹಾಕಿದ ಹಿಂದೂಗಳು ವಿಚಾರ ಮಾಡಬೇಕು. ಇಂದು ಯಾರದೋ ಹೊಲಕ್ಕೆ ಬಂದಿದೆ, ನಾಳೆ ನನ್ನ ಮನೆಗೆ ಬರಲ್ಲ ಅನ್ನುವ ಗ್ಯಾರಂಟಿ ಏನು? ನಮ್ಮ ಮಠಕ್ಕೆ ಬರಲ್ಲ ಅನ್ನೋ ಗ್ಯಾರಂಟಿ ಏನಿದೆ? ಕೂಡಲಸಂಗಮ ಪಂಚಮಸಾಲಿ ಪೀಠಾನೂ ವಕ್ಫ್ ಬೋರ್ಡ್ ಅಂತಾರೋ ಏನೋ? ಕಾಂಗ್ರೆಸ್ ತುಷ್ಟೀಕರಣ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಸಾವಿರಾರು ಎಕರೆ ಜಮೀನು ಹಿಂದಿನ ದಿನ ರೈತರ ಹೆಸರಲ್ಲಿತ್ತು. ಮರುದಿನ ವಕ್ಫ್ ಬೋರ್ಡ್ ಹೆಸರಿನಲ್ಲಿ ಪಹಣಿ ಆಗಿದೆ. ಸಚಿವ ಜಮೀರ್ ಅಹ್ಮದ್ ವಿಜಯಪುರಕ್ಕೆ ಭೇಟಿ ಕೊಟ್ಟು ಬಂದ 24 ಗಂಟೆಯೊಳಗೆ ಸಾವಿರಾರು ಎಕರೆ ಜಮೀನನ್ನು ವಕ್ಫ್ ಬೋರ್ಡ್‌ಗೆ ವರ್ಗಾವಣೆ ಮಾಡಿದರು. ಇದಕ್ಕೆಲ್ಲಾ ಕಾರಣರಾದ ಅಲ್ಲಿನ ಜಿಲ್ಲಾಧಿಕಾರಿ ಬೂಬಾಲನ್ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ತೊಳಲಾಟವನ್ನು ಬಹಿರಂಗವಾಗಿ ಹೇಳಿದ ಡಿಕೆಶಿಗೆ ಅಭಿನಂದನೆ: ವಿ.ಸೋಮಣ್ಣ ವ್ಯಂಗ್ಯ

    ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಿನ್ನೆಲೆ ಪುನಃ ರೈತರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಈ ರಾಜ್ಯದಲ್ಲಿ ಏನು ನಡೆಯುತ್ತಿದೆ. ಹಲವಾರು ಮಂತ್ರಿಗಳು ಬಿಜೆಪಿಯವರ ಹುನ್ನಾರ ಅನ್ನುತ್ತಾರೆ. ಬಿಜೆಪಿಯವರು ಪಹಣಿ ತಿದ್ದಿಸಿದ್ರಾ? ಡಿಸಿ ಬಿಜೆಪಿಯವರ ಮಾತು ಕೇಳುತ್ತಾನಾ? ಕಾಂಗ್ರೆಸ್‌ನವರ ಮಾತು ಕೇಳುತ್ತಾನಾ?ಜಿಲ್ಲಾಧಿಕಾರಿಗೆ ತನ್ನ ಕರ್ತವ್ಯದ ಅರಿವಿರಬೇಕಿತ್ತು. ಸರ್ಕಾರ ಹೇಳಿದ್ದನ್ನು ಕೇಳಲು ಜಿಲ್ಲಾಧಿಕಾರಿ ಇರಲ್ಲ, ಅವರು ಐಎಎಸ್ ಕೇಡರ್ ಅಧಿಕಾರಿ. ಈ ದೇಶದ ಕಾನೂನಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಆ ಜಿಲ್ಲಾಧಿಕಾರಿ ಮೇಲೂ ಕ್ರಮ ಆಗಬೇಕೆಂದು ಹೇಳಿದರು. ಇದನ್ನೂ ಓದಿ: ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ

    ವಕ್ಫ್ ಬೋರ್ಡ್ (Waqf Board) ಆಸ್ತಿ ಸಲುವಾಗಿ ಬಸವಣ್ಣನ ಕಾಲದ ಸಿಂಧಗಿಯ ವಿರಕ್ತಮಠ, ಬೀರಲಿಂಗೇಶ್ವರ ಮಠ ಅದೂ ವಕ್ಫ್ ಎಂದು ಮಾಡಿದ್ದಾರೆ. ಬೀರಲಿಂಗೇಶ್ವರ ಮಠ ವಕ್ಫ್ ಎಂದು ಗೊತ್ತಾದ ಮೇಲೆ ಮುಖ್ಯಮಂತ್ರಿ ಕಣ್ಣು ತೆರೆದರು ಅನಿಸುತ್ತದೆ. ಇದೊಂದು ತುಘಲಕ್ ಸರ್ಕಾರ ಅಂದ್ರೆ ತಪ್ಪಲ್ಲ. ಮತಗಳಿಕೆಗಾಗಿ ಯೋಜನೆ ಕೊಡಲಿ, ಮಾಡಲಿ. ಆದರೆ ಒಂದು ಸಮಾಜ, ವರ್ಗವನ್ನ ತುಳಿದು ಇನ್ನೊಂದು ಸಮಾಜವನ್ನು ಓಲೈಕೆ ಮಾಡೋದು ಎಷ್ಟು ಸಮಂಜಸ? ಸಿಎಂ ಆಗೋವಾಗ ಈ ನಾಡಿನ ಕಾನೂನಿಗನುಗುಣವಾಗಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣ ವಚನ ತೆಗೆದುಕೊಳ್ಳುತ್ತೀರಿ. ಇದೇನಾ ನಿಮ್ಮ ಕಾನೂನು? ಇಂತಹ ಬೇಜವಾಬ್ದಾರಿ ಆಡಳಿತ ಕರ್ನಾಟಕದ ಜನತೆ ನೋಡಲಿಲ್ಲ. ಗೊಂದಲದಲ್ಲಿ ಇರೋದಕ್ಕಿಂತ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋದು ಸೂಕ್ತ. ಮರು ಜನಾದೇಶ ಪಡೆಯೋದು ಸೂಕ್ತ ಎಂದು ಹರಿಹಾಯ್ದರು.  ಇದನ್ನೂ ಓದಿ: ಮಹಿಳೆಯನ್ನ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ದುಷ್ಕರ್ಮಿಗಳು

  • ‘ವಿರಾಟಪುರ ವಿರಾಗಿ’ ಚಿತ್ರವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುವೆ : ಸಚಿವ ಸಿ.ಸಿ. ಪಾಟೀಲ್

    ‘ವಿರಾಟಪುರ ವಿರಾಗಿ’ ಚಿತ್ರವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುವೆ : ಸಚಿವ ಸಿ.ಸಿ. ಪಾಟೀಲ್

    ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ‘ವಿರಾಟಪುರ ವಿರಾಗಿ’ (Viratapur Viragi) ಸಿನಿಮಾ ವೀಕ್ಷಿಸಿ, ಯುವಕರು ತಮ್ಮ ವರ್ತನೆಗಳನ್ನು ತಿದ್ದುಕೊಳ್ಳಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಹಾಗಾಗಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಒಂದು ವಾರ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸುತ್ತೇನೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್ (C.C. Patil) ಹೇಳಿದ್ದಾರೆ. ವಿರಾಟಪುರ ವಿರಾಗಿ ಸಿನಿಮಾದ ಟ್ರೈಲರ್ (Trailer) ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ.

     

    ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು (BS Lingadevaru) ನಿರ್ದೇಶನದಲ್ಲಿ ಮೂಡಿ ಬಂದಿರುವ, ಹಾನಗಲ್ಲ ಕುಮಾರಸ್ವಾಮಿಗಳ (Hanagalla Kumaraswamy) ಜೀವನವನ್ನು ಆಧರಿಸಿದ ‘ವಿರಾಟಪುರ ವಿರಾಗಿ’ ಸಿನಿಮಾದ ಟ್ರೈಲರ್ ಗದಗನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಯಿತು. ಈ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಐದು ಸಾವಿರಕ್ಕೂ ಹೆಚ್ಚು ಜನರು, ನಾಡಿನ ಅನೇಕ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಸಾಕ್ಷಿಯಾಗಿದ್ದರು. ಕಾರ್ಯಕ್ರಮಕ್ಕೂ ಮುನ್ನ 6 ರಥಗಳು ರಾಜ್ಯದ ವಿವಿಧ ಭಾಗಗಳಿಂದ ಹೊರಟು 7000 ಕಿಮೀ ಪ್ರಯಾಣ ಮಾಡಿ, ಗದಗಿಗೆ ಆಗಮಿಸಿದ್ದವು. 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಬದಿಂದ ಅವುಗಳನ್ನು ಸ್ವಾಗತ ಮಾಡಲಾಯಿತು.

    ವಿರಾಟಪುರ ವಿರಾಗಿ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಜನಪ್ರಿಯ ಯುವ ನಾಯಕ ಬಿ.ವೈ ವಿಜಯೇಂದ್ರ ‘ಇಂಥದ್ದೊಂದು ಸಿನಿಮಾ ಆಗಿದೆ ಎನ್ನುವುದೇ ನಮಗೊಂದು ಹೆಮ್ಮೆ. ಈ ಸಿನಿಮಾವನ್ನು ನಾವೆಲ್ಲರೂ ಗೆಲ್ಲಿಸಬೇಕು. ಟ್ರೈಲರ್ ನೋಡಿದ ಮೇಲೆ ಸಿನಿಮಾ ನೋಡಬೇಕು ಎನ್ನುವ ಕುತೂಹಲ ಇನ್ನೂ ಹೆಚ್ಚಾಗಿದೆ. ಅಪರೂಪದ ಸಿನಿಮಾ ಮಾಡಿರುವ ಬಿ.ಎಸ್.ಲಿಂಗದೇವರು ಮತ್ತು ಮೌನತಪಸ್ವಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಗೆ ನಾವೆಲ್ಲರೂ ಋಣಿಯಾಗಿರಬೇಕು’ ಎಂದರು. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ನಿರ್ದೇಶಕ ಬಿ.ಎಸ್.ಲಿಂಗದೇವರು ಮಾತನಾಡುತ್ತಾ, ‘ಆಧುನಿಕ ಜಗತ್ತಿನಲ್ಲಿ ಧಾರ್ಮಿಕ, ಭಕ್ತಿಪ್ರಧಾನ ಸಿನಿಮಾಗಳನ್ನು ಜನರಿಗೆ ಮುಟ್ಟಿಸುವುದೇ ಸವಾಲಿನ ಕೆಲಸವಾಗಿದೆ. ಹಾಗಾಗಿ ಈ ಸಿನಿಮಾವನ್ನು ಜನರಿಗೆ ತಲುಪಿಸುವ ಕೆಲಸ ಎಲ್ಲರಿಂದಲೂ ನಡೆಯಬೇಕು. ಈ ಸಿನಿಮಾವಾಗಲು ಅನೇಕ ಗುರುಗಳ, ಪಂಡಿತರು ಮಾರ್ಗದರ್ಶನ ಮಾಡಿದ್ದಾರೆ. ಜನವರಿ 13ರಂದು ಸಿನಿಮಾ ತೆರೆಗೆ ಬರಲಿದೆ’ ಎಂದರು.

    ಈ ಸಿನಿಮಾಗೆ ಸರಕಾರವು ತೆರಿಗೆ ವಿನಾಯಿತಿ ಜೊತೆಗೆ ಸರ್ಕಾರದಿಂದ ಸಬ್ಸಿಡಿ ಕೊಡಿಸಲು ಸಚಿವರಾದ ಸಿ.ಸಿ. ಪಾಟೀಲ್ ಅವರಿಗೆ ಮನವಿ ಮಾಡಿಕೊಂಡರು ಮುಖಂಡ ಅಲ್ಲಂ ವೀರಭದ್ರಪ್ಪ. ಈ ಕಾರ್ಯಕ್ರಮದಲ್ಲಿ ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದೇಶ್ವರ ರಾಜಯೋಗೀಂದ್ರ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಸಮಾಜಸೇವಕಿ ಸಂಯುಕ್ತಾ ಕಳಕಪ್ಪ ಬಂಡಿ, ಶಾಸಕ ಎಚ್.ಕೆ.ಪಾಟೀಲ್, ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಮಾಜಿ ಶಾಸಕ ಜಿ.ಎಸ್.ಪಾಟೀಲ್, ಕಲಾವಿದ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸ್ವಂತ ನೀರು ತಂದು ಸ್ನಾನ ಮಾಡ್ಬೇಕು; ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಕೂರಬಾರದು – C.C ಪಾಟೀಲ್

    ಸ್ವಂತ ನೀರು ತಂದು ಸ್ನಾನ ಮಾಡ್ಬೇಕು; ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಕೂರಬಾರದು – C.C ಪಾಟೀಲ್

    ಗದಗ: ಸ್ವಂತ ನೀರು ತಂದು ಸ್ನಾನ (ಜಳಕ) ಮಾಡಬೇಕೇ ಹೊರತು ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಕೂತು ಮಾಡಬಾರದು ಎಂದು ಸಚಿವ ಸಿ.ಸಿ.ಪಾಟೀಲ್ (CC Patil ) ಕಾಂಗ್ರೆಸ್, ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಎಸ್ಸಿ-ಎಸ್ಟಿ ಮೀಸಲಾತಿ (SCST Reservation) ಸಮಾವೇಶ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ `ಮೋದಿ-ಮೋದಿ’, `AAP ನಾಯಕರು ಚೋರ್-ಚೋರ್’ ಘೋಷಣೆ

    ಎಸ್ಸಿ-ಎಸ್ಟಿ ಮೀಸಲಾತಿ ಮಾಡಿದ್ದು ಬಿಜೆಪಿ (BJP), ಮೀಸಲಾತಿ ಮಾಡಿದ್ದು ಬಿಎಸ್‌ವೈ (BS Yediyurappa), ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai). ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಶ್ರೀರಾಮುಲು ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರು. ಆದರೀಗ ಮೀಸಲಾತಿ ಕೀರ್ತಿಗಾಗಿ ಕಾಂಗ್ರೆಸ್ (Congress), ಜೆಡಿಎಸ್ (JDS) ಗುದ್ದಾಡುತ್ತಿವೆ. ಕೀರ್ತಿ ಬೇಕಾದ್ರೆ ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಆ ನಿರ್ಧಾರ ತೆಗೆದುಕೊಳ್ಳಲಿಲ್ಲ? ನಾವು ನಿರ್ಧಾರ ತೆಗೆದುಕೊಂಡಾಗ ಅದರ ಲಾಭ ಪಡಿಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಎಸ್ಸಿ-ಎಸ್ಟಿ ಸಮುದಾಯದ ಜನ ಮುಗ್ಧರೇ ಇರಬಹುದು. ಆದ್ರೆ ಹುಚ್ಚರು, ಬುದ್ಧಿಗೇಡಿಗಳಲ್ಲ ಎಂಬುದು ಜ್ಞಾಪಕವಿರಲಿ. ಹಿಂದುಳಿದ ಜನರನ್ನು ತಮ್ಮ ಮತ ಬ್ಯಾಂಕ್ ಮಾಡಿಕೊಂಡು ಆಸೆ ಆಮಿಷ ತೋರಿಸುತ್ತಾ ಚುನಾವಣೆಯಲ್ಲಿ ಮತ ಹಾಕಿಸಿಕೊಂಡರು. ಆ ಸಮುದಾಯಕ್ಕೆ ಯಾವೊಂದು ಕೆಲಸವನ್ನೂ ಮಾಡಿಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಇವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ: ಜಗ್ಗೇಶ್

    ಪೂರ್ವಭಾವಿ ಸಭೆಯಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಸೇರಿದಂತೆ ಬಿಜೆಪಿ ಮುಖಂಡ ರಾಜು ಕುರುಡಗಿ, ಎಮ್.ಎಸ್ ಕರಿಗೌಡ್ರ, ನಗರಸಭೆ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಾಹುಲ್ ಗಾಂಧಿ ತಲೆ ರೈಲ್ವೇ ಹಳಿ ಇದ್ದಂತೆ: ಸಿ.ಸಿ ಪಾಟೀಲ್ ವ್ಯಂಗ್ಯ

    ರಾಹುಲ್ ಗಾಂಧಿ ತಲೆ ರೈಲ್ವೇ ಹಳಿ ಇದ್ದಂತೆ: ಸಿ.ಸಿ ಪಾಟೀಲ್ ವ್ಯಂಗ್ಯ

    ಗದಗ: ರಾಹುಲ್ ಗಾಂಧಿ (Rahul Gandhi) ಅವರ ತಲೆ ರೈಲ್ವೇ ಹಳಿ ಇದ್ದಂತೆ. ಅವರ ಬುದ್ಧಿಗೂ, ಅವರಿಗೂ ಎಲ್ಲೂ ಭೇಟಿ ಆಗೋದಿಲ್ಲ. ಪ್ಯಾರಲಲ್ ಆಗಿ ಹೋಗುವ ಹಳಿ ಎಲ್ಲಿಯೂ ಕೂಡೋದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್ (CC Patil) ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ (Bharat Jodo Yatra) ಅಪಹಾಸ್ಯದ ಒಂದು ಪರಿಮಿತಿ. ಭಾರತ್ ಜೋಡೋ ಹೆಸರಿಟ್ಟವರಿಗೆ ಸತ್ಕಾರ ಮಾಡಬೇಕು. ಇವರು ಮಾಡುವ ಭಾರತ ಜೋಡೋಗೆ ಅರ್ಥ ಇದೆಯಾ? ಹರಿದಾಗ, ಮುರಿದಾಗ, ವಿಂಗಡನೆ, ವಿಭಜನೆ ಆದಾಗ ಜೋಡೋ ಬರುತ್ತದೆ. ಅಂತಹ ಪ್ರಸಂಗ ಏನಿದೆ ಇದರಲ್ಲಿ? ಯೇ ಭಾರತ್ ಜೋಡೋ? ಯಾ ತೋಡೋ? ಎಂದು ತಿರುಗೇಟು ನೀಡಿದರು.

    ರಾಹುಲ್ ತಾತ, ಮುತ್ತಾತ, ಅಜ್ಜಿಯರು ಭಾರತದಿಂದ ಜಮ್ಮು ಕಾಶ್ಮೀರವನ್ನು ಬೇರೆ ಮಾಡಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆರ್ಟಿಕಲ್ 370 ತೆಗೆದು ಭಾರತ ಜೋಡಿಸಿದರು. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಮಾಡಿದರು. ಇದು ನಿಜವಾದ ಭಾರತ್ ಜೋಡೋ. ಆದರೆ ಆಗ ಕಾಶ್ಮೀರಕ್ಕೆ ವಿಶೇಷ ರಾಷ್ಟ್ರ ಕೊಟ್ಟವರಾರು? ಅಖಂಡ ಭಾರತ ಇದ್ರೆ ಮೊಹಮ್ಮದ್ ಅಲಿ ಜಿನ್ನಾ ನನಗೆಲ್ಲಿ ಕುತ್ತು ತರ್ತಾನೆ ಅಂತ ನೆಹರೂ ಭಾರತ ವಿಭಜನೆ ಮಾಡಿದರು. ಯಾರು ಭಾರತ ವಿಭಜನೆ ಮಾಡಿದರೋ, ಅವರು ಇಂದು ಭಾರತ ಜೋಡೋಗೆ ಹೊರಟಿರುವುದು ವಿಪರ್ಯಾಸ ಎಂದರು. ಇದನ್ನೂ ಓದಿ: ಜಾನುವಾರುಗಳಿಗೆ ಡಿಕ್ಕಿ – ಕಳೆದ ವಾರ ಆರಂಭವಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂಭಾಗ ಜಖಂ

    ಹಿಂದುಸ್ಥಾನ ತುಕಡೆ ಕರೆಂಗೆ ಎನ್ನುವ ಕನ್ಹಯ್ಯಲಾಲ್ ನಂತವರು, ಭಾರತ ಭೂಮಿ ಅಪವಿತ್ರಳು, ಅದಕ್ಕೆ ಶೂ ಹಾಕಿಕೊಂಡು ಬರುತ್ತೇನೆ ಎಂದ ಪಾದ್ರಿಯಂತವರು ಈ ಯಾತ್ರೆಯಲ್ಲಿ ಪಾಲ್ಗೊಳ್ತಾರೆ. ಭಾರತವನ್ನು ವಿಭಜನೆ ಮಾಡುವಂತಹ ಇಂತಹ ಅನೇಕ ವಿಚಿತ್ರಕಾರಕರನ್ನು ಭೇಟಿಯಾಗಿ ಆ ಶಕ್ತಿಗಳನ್ನು ಒಗ್ಗೂಡಿಸುವ ಯಾತ್ರೆ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಅಂತಹ ಪುಣ್ಯಾತ್ಮನಿಗೆ ನಮ್ಮ ರಾಜ್ಯದ ಇಬ್ಬರು ದೊಡ್ಡ ನಾಯಕರು ಕುಣಿಯುತ್ತಾ ಸಾತ್ ಕೊಡ್ತಿದ್ದಾರೆ ಅಂತ ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆ

    ವ್ಯಾಪಕ ಪಿಎಫ್‌ಐ ಸಂಘಟನೆ ಉದ್ಭವ, ರೈಫಲ್‌ಗಳ ಕಳ್ಳತನ, ಜೀವಂತ ಗುಂಡುಗಳ ಕಳ್ಳತನ ಎಲ್ಲಿ ಆಯಿತೋ ಅಂತಹ ಕೇರಳದಿಂದ ಭಾರತ್ ಜೋಡೋ ಆರಂಭ ಮಾಡಿದ್ದಾರೆ. ಇದು ವಿಪರ್ಯಾಸವೆಂದರು.

    ಪಂಚಮಸಾಲಿ 2-ಎ ಮೀಸಲಾತಿ ಬಗ್ಗೆ ಮಾತನಾಡಿದ ಅವರು, ಜಯಬಸವ ಮೃತ್ಯುಂಜಯ ಸ್ವಾಮಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಸರ್ಕಾರ ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬೇಕು. ಮುಖ್ಯಮಂತ್ರಿಗಳು ಪೂರಕ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಇವತ್ತೇ ಬೇಕು, ನಾಳೆಯೇ ಬೇಕು ಎಂದರೆ ಅದು ಹೇಗೆ ಸಾಧ್ಯ ಎಂದು ಸಿ.ಸಿ ಪಾಟೀಲ್ ಪ್ರಶ್ನಿಸಿದರು.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಾಂಕ್ ಖರ್ಗೆಗೆ ವಯಸ್ಸು, ಸಂಪತ್ತು, ಅಧಿಕಾರದ ಮದವೇರಿದೆ: ಸಿ.ಸಿ ಪಾಟೀಲ್

    ಪ್ರಿಯಾಂಕ್ ಖರ್ಗೆಗೆ ವಯಸ್ಸು, ಸಂಪತ್ತು, ಅಧಿಕಾರದ ಮದವೇರಿದೆ: ಸಿ.ಸಿ ಪಾಟೀಲ್

    ಗದಗ: ವಯಸ್ಸು, ಸಂಪತ್ತು, ಅಧಿಕಾರವಿದ್ದರೆ ಮದ ಬರುತ್ತದೆ ಎಂದು ಸಚಿವ ಸಿ.ಸಿ ಪಾಟೀಲ್ ಪ್ರಿಯಾಂಕ್ ಖರ್ಗೆ ಅವರ ಲಂಚ, ಮಂಚ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದರು.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಸಿ ಪಾಟೀಲ್, ಮೊದಲು ಕಲ್ಯಾಣ ಕರ್ನಾಟಕ ಪರಿಸ್ಥಿತಿ ಹೇಗಿದೆ ಅಂತ ನೋಡಲಿ. ಇಷ್ಟು ವರ್ಷ ಮಲ್ಲಿಕಾರ್ಜುನ ಖರ್ಗೆ, ದಿವಂಗತ ಧರ್ಮಸಿಂಗ್ ಆಳ್ವಿಕೆ ಮಾಡಿದ್ರಲ್ಲಾ ಏನು ಮಾಡಿದ್ರು? ಎಷ್ಟು ಅಭಿವೃದ್ಧಿಯಾಗಿದೆ? ಎಷ್ಟು ಖರ್ಚಾಗಿದೆ? ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿ, ಮಹಿಳೆಯರು ಸರ್ಕಾರಿ ನೌಕರಿ ಸೇರುವ ಬಗ್ಗೆ ಹಗುರವಾಗು ಮಾತನಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಶಿವಕುಮಾರ್ ಪಿಎಫ್ಐ ಸೇರಿದ್ರೆ ಒಳ್ಳೆದು: ಸಿ.ಸಿ ಪಾಟೀಲ್

    ಕಾಂಗ್ರೆಸ್ ಮೂಲ: ಪಿತಾಮಹ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಸಿಗರೇಟು ಸೇದುವುದು, ತಬ್ಬಿಕೊಳ್ಳುವುದು ಅದರ ಕಡೆ ಖರ್ಗೆ ಸ್ವಲ್ಪ ತಿರುಗಿ ನೋಡಲಿ. ಕಾಂಗ್ರೆಸ್ ಇತಿಹಾಸ ಕೆದಕಿದರೆ ಬೆತ್ತಲಾಗುತ್ತದೆ. ಖರ್ಗೆ ಕ್ಷಮೆ ಕೇಳಲ್ಲ ಎಂದರೆ ನಾಚಿಕೆ ಇಲ್ಲದವ ಎಂದರ್ಥ ಅಂತ ವಾಗ್ದಾಳಿ ಮಾಡಿದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್‌ ಕೇರ್‌

    ಈ ವೇಳೆ ನಗರಸಭೆ ಅಧ್ಯಕ್ಷ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದು ಪಲ್ಲೆದ, ಎಮ್.ಎಸ್ ಕರಿಗೌಡ್ರ, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ರಾಜು ಕುರುಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬೊಮ್ಮಾಯಿಯವರ ಸಾಧನೆ ಕಾಂಗ್ರೆಸ್‌ಗೆ ಅಜೀರ್ಣ: ಸಿ.ಸಿ ಪಾಟೀಲ್

    ಬೊಮ್ಮಾಯಿಯವರ ಸಾಧನೆ ಕಾಂಗ್ರೆಸ್‌ಗೆ ಅಜೀರ್ಣ: ಸಿ.ಸಿ ಪಾಟೀಲ್

    ಬೆಂಗಳೂರು: ಕಾಂಗ್ರೆಸ್ ಪಕ್ಷವು ರಚನಾತ್ಮಕ ವಿರೋಧಪಕ್ಷವಾಗಿ ಕೆಲಸ ಮಾಡುವುದನ್ನು ಬಿಟ್ಟು ಪ್ರಸ್ತುತ ಮುಖ್ಯಮಂತ್ರಿಗಳು ಬದಲಾಗುತ್ತಾರೆ ಎಂದು ಕಪೋಲಕಲ್ಪಿತವಾಗಿ ವದಂತಿ ಹಬ್ಬಿಸುವಲ್ಲಿ ನಿರತವಾಗಿದೆ. ಇದು ಆ ಪಕ್ಷದ ಹತಾಶೆಯನ್ನು ತೋರಿಸುತ್ತದೆ ಎಂದು ಸಚಿವ ಸಿ.ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಸಿಎಂ ಬದಲಾವಣೆ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿಗಳನ್ನು ಪದೇ ಪದೇ ತಮಗಿಷ್ಟ ಬಂದಂತೆ ಬದಲಾಯಿಸುವ ಚಾಳಿ ಇರುವುದು ಕಾಂಗ್ರೆಸ್‌ನ ಹೈಕಮಾಂಡ್‌ನಲ್ಲಿ ಎಂಬುದನ್ನು ಕಾಂಗ್ರೆಸ್ಸಿಗರು ಮೊದಲು ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

    ಜನಪರ ಆಡಳಿತ ನೀಡುತ್ತಾ 1 ವರ್ಷದ ಆಡಳಿತವನ್ನು ಬೊಮ್ಮಾಯಿ ಅವರು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ, ಮುಂದೆಯೂ ಅವರು ಸುಭದ್ರ ಸರ್ಕಾರವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ಕಾಂಗ್ರೆಸ್ಸಿಗರಿಗೆ ಹಗಲುಗನಸು ಬೇಡ. ಸನ್ಮಾನ್ಯ ಬೊಮ್ಮಾಯಿಯವರು ರಾಜ್ಯವನ್ನು ಸಮರ್ಥವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವುದರಿಂದ ಈಗ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾಳೆ ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್‌ನೊಂದಿಗೆ ನಿತೀಶ್ ಹೊಸ ಸರ್ಕಾರ ಸ್ಥಾಪನೆ

    ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ 2023ರ ವಿಧಾನಸಭಾ ಚುನಾವಣೆಯನ್ನೂ ನಾವು ಎದುರಿಸಲಿದ್ದೇವೆ. ಯಾವುದೇ ಕಾರಣಕ್ಕೂ ನಾಯಕತ್ವದ ಬದಲಾವಣೆಯಿಲ್ಲ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಕಾಂಗ್ರೆಸ್ಸಿಗರ ಇಂತಹ ಗಾಳಿ ಮಾತನ್ನು ಮತ್ತು ವದಂತಿಗಳನ್ನು ಜನ ನಂಬುವುದಿಲ್ಲ. ಕಾಂಗ್ರೆಸ್ಸಿಗರು ಮೊದಲು ಆ ಪಕ್ಷದಲ್ಲಿರುವ ನಾಯಕತ್ವದ ಗುಂಪುಗಾರಿಕೆ ಮತ್ತು ಭಿನ್ನಮತವನ್ನು ಸರಿಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಉತ್ಸವ ಮಾಡೋಕೆ ಹೋಗಿಲ್ಲ- ಸಚಿವರು ಕಾಣೆಯಾಗಿದ್ದಾರೆ ಎಂದ ಕಾಂಗ್ರೆಸ್‌ಗೆ ಬಿ.ಸಿ ಪಾಟೀಲ್ ಟಾಂಗ್

    Live Tv
    [brid partner=56869869 player=32851 video=960834 autoplay=true]

  • ರಸ್ತೆಬದಿ ಕಟ್ಟಡ ಅಂಕುಶಕ್ಕೆ ನಿಯಮ: ಸಚಿವ ಸಿ.ಸಿ.ಪಾಟೀಲ್

    ರಸ್ತೆಬದಿ ಕಟ್ಟಡ ಅಂಕುಶಕ್ಕೆ ನಿಯಮ: ಸಚಿವ ಸಿ.ಸಿ.ಪಾಟೀಲ್

    ಬೆಂಗಳೂರು: ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಕ್ಕಪಕ್ಕ ಅನಧಿಕೃತ ಕಟ್ಟಡಗಳನ್ನು ನಿರ್ಮಿಸದಂತೆ ತಡೆಗಟ್ಟಲು ಲೋಕೋಪಯೋಗಿ ಇಲಾಖೆಯಿಂದ ಸ್ಪಷ್ಟ ನಿಯಮ ಜಾರಿಗೆ ತರಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಹೆದ್ದಾರಿಗಳ ಅಕ್ಕಪಕ್ಕ ಕಟ್ಟಡ ನಿರ್ಮಾಣದಲ್ಲಿ ಕನಿಷ್ಠ ಎಷ್ಟು ಪ್ರಮಾಣದ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ಅಳವಡಿಸಲಾಗಿದೆ ಎಂಬ ವಿವರಗಳನ್ನು ನೀಡಿದ್ದಾರೆ. ಈ ನಿಬಂಧನೆಗಳನ್ನು ಪಾಲಿಸುವುದರಿಂದ ರಸ್ತೆಗಳಲ್ಲಿ ಅತಿಕ್ರಮಣ ತಡೆಯಲು ಸಹಾಯಕವಾಗಿ, ವಾಹನ ಸಂಚಾರ ಸುಗಮವಾಗುತ್ತದೆ. ಅಲ್ಲದೇ ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಬೆಳ್ಳಿತೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್

    ಈ ನಿಯಮದನ್ವಯ ರಾಜ್ಯ ಹೆದ್ದಾರಿಗಳ ಮಧ್ಯಭಾಗದಿಂದ 40 ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ಅಥವಾ ಅಂಗಡಿಗಳನ್ನು ನಿರ್ಮಿಸುವಂತಿಲ್ಲ. ಜಿಲ್ಲಾ ಮುಖ್ಯರಸ್ತೆಗಳ ಮಧ್ಯಭಾಗದಿಂದ 25 ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ನಿರ್ಮಿಸುವುದಕ್ಕೆ ಅವಕಾಶವಿಲ್ಲ. ಅಲ್ಲದೇ ಸಿಟಿ ಕಾರ್ಪೊರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಸಿಪಲ್ ಕೌನ್ಸಿಲ್, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಪರಿಮಿತಿಗಳಲ್ಲಿ ಈ ಅಂತರವನ್ನು ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂಗಡಿಯ ಅಂಚಿನಿಂದ ಕನಿಷ್ಠ 6 ಮೀಟರ್ ಅನ್ನು ಕಾಯ್ದುಕೊಳ್ಳಬೇಕು. ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ 15 ಕಿ.ಮೀ. ದೂರದವರೆಗೆ 12 ಮೀಟರ್ ಅಂತರ ಪಾಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

    ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರುಗಳನ್ನು ಹೆದ್ದಾರಿ ಪ್ರಾಧಿಕಾರ ಎಂದು ಘೋಷಿಸಲಾಗಿದ್ದು, ರಸ್ತೆಯಿಂದ ಕಟ್ಟಡಗಳ ಅಂತರ ನಿಗದಿಪಡಿಸುವುದು. ರಸ್ತೆ ಗಡಿಯನ್ನು ನಿಗದಿಪಡಿಸುವುದು ಅವರ ಜವಾಬ್ದಾರಿಯಾಗಿರುತ್ತದೆ ಎಂದು ಸಿ.ಸಿ.ಪಾಟೀಲ್‌ ಅವರು ವಿವರಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಭೂತಿ ಹಚ್ಚಿ ಮುರುಘಾಶ್ರೀಗಳಿಂದ ಲಿಂಗಧಾರಣೆ

    Live Tv
    [brid partner=56869869 player=32851 video=960834 autoplay=true]

  • ಚಡ್ಡಿನಾದ್ರೂ ಸುಡ್ಲಿ, ಬೇಕಿದ್ರೆ ಪಂಚೆನಾದ್ರೂ ಸುಟ್ಟುಕೊಳ್ಳಲಿ ನಾವೇನು ಮಾಡೋದು: ಸಿ.ಸಿ ಪಾಟೀಲ್

    ಚಡ್ಡಿನಾದ್ರೂ ಸುಡ್ಲಿ, ಬೇಕಿದ್ರೆ ಪಂಚೆನಾದ್ರೂ ಸುಟ್ಟುಕೊಳ್ಳಲಿ ನಾವೇನು ಮಾಡೋದು: ಸಿ.ಸಿ ಪಾಟೀಲ್

    ಗದಗ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ತಿಕ್ಕಾಟದಿಂದ ಸಿದ್ದರಾಮಯ್ಯ ತಲೆ ಖಾಲಿ ಆಗಿದ್ದು, ಅವರ ತಲೆ ದೆವ್ವಗಳ ಮನೆ ಆಗಿದೆ ಅಂತ ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ ವ್ಯಂಗ್ಯವಾಡಿದರು.

    Siddaramaiah

    ನಗರದ ಶ್ರೀನಿವಾಸ ಕಲ್ಯಾಣ ಕೇಂದ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಸಿದ್ದರಾಮಯ್ಯನವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆರ್‍ಎಸ್‍ಎಸ್‍ನವರು ಕಾಂಗ್ರೆಸ್‍ನವರಿಗೆ ಏನು ಮಾಡಿದ್ದಾರೆ? ಆರ್‍ಎಸ್‍ಎಸ್‍ಗೆ ಬೈದರೆ 2023ಕ್ಕೆ ಅಧಿಕಾರ ಬರಬಹುದು ಎಂದು ತಿಳಿದುಕೊಂಡಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ

    ಆರ್‍ಎಸ್‍ಎಸ್‍ಗೆ ಬೈದರೆ ಅವರ ಪರ ಇರುವ ನಾಲ್ಕೈದು ಹಿಂದೂ ವೋಟು ಸಹ ಬಿಜೆಪಿಗೆ ಬರುತ್ತವೆ. ಹಾಗಂತ ಅವರದ್ದೇ ಪಕ್ಷದವರು ಹೇಳುತ್ತಿದ್ದಾರೆ ನಾವಲ್ಲ. ಸಿದ್ದರಾಮಯ್ಯ ಟಾರ್ಗೆಟ್ ಡಿಕೆಶಿ, ಡಿಕೆಶಿ ಟಾರ್ಗೆಟ್ ಸಿದ್ದರಾಮಯ್ಯ ಅಂತ ಸುರ್ಜೆವಾಲರೇ ಹೇಳಿದ್ದಾರೆ. ಒಣ ತಿಕ್ಕಾಟ ಬಿಡಿ ಅಂತ ಹೇಳಿದ್ದು ನಾವಲ್ಲ, ಸುರ್ಜೆವಾಲರು. ಕಾಂಗ್ರೆಸ್ ಒಡೆದ ಮನೆ ಆಗಿದೆ ಅದನ್ನು ಮುಚ್ಚಿಕೊಳ್ಳಲಿ ಎಂದರು. ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು? 

    ಚಡ್ಡಿ ಸುಡುವ ವಿಚಾರವಾಗಿ ಮಾತನಾಡಿ, ಎಷ್ಟು ಚಡ್ಡಿ ಸುಡುತ್ತಾರೋ ಅಷ್ಟು ಹೊಸ ಚಡ್ಡಿ ಸೃಷ್ಟಿ ಆಗುತ್ತವೆ. ರಾಮಾಯಣ, ಮಹಾಭಾರತದಲ್ಲಿ ಹನಿ ರಕ್ತ ಬಿದ್ದರೆ ಅದ್ಯಾರೋ ಹುಟ್ಟುತ್ತಿದ್ದರು. ಹಾಗೆಯೇ ನಮ್ಮಲ್ಲಿ ಒಂದು ಚಡ್ಡಿ ಸುಟ್ಟರೆ ಹತ್ತಾರು ಚಡ್ಡಿಗಳು ಹುಟ್ಟಿಕೊಳ್ಳುತ್ತವೆ. ಚಡ್ಡಿನಾದರೂ ಸುಡಲಿ, ಬೇಕಾದರೆ ಕಳೆದು ಅವರ ಪಂಚೆನಾದರೂ ಸುಟ್ಟುಕೊಳ್ಳಲಿ ನಾವೇನು ಮಾಡೋದು ಎಂದರು.

    ಸಿಎಂ ಇಬ್ರಾಹಿಂ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಬ್ರಾಹಿಂ ಅವರು ಮಾಸ್ಟರ್ ಹಿರಣ್ಣಯ್ಯ ನಾಟಕ ಇದ್ದಂತೆ. ಒಂದು ದಿನ ಹೇಳಿದ ಡೈಲಾಗ್ ಮಾರನೆಯ ದಿನ ಹೇಳುತ್ತಿರಲಿಲ್ಲ. ಹಾಗೇ ಕಾಂಗ್ರೆಸ್ ಇದ್ದಾಗೊಂದು ಮಾತು, ಬಿಜೆಪಿ, ಜೆಡಿಎಸ್‍ನಲ್ಲಿ ಇದ್ದಾಗ ಒಂದೊಂದು ತರಹದ ಮಾತುಗಳನ್ನು ಆಡುತ್ತಾರೆ ಎಂದರು.