Tag: ಸಿ ವೋಟರ್

  • ಬಿಜೆಪಿ 300, ಎನ್‍ಡಿಎಗೆ 350 ಸ್ಥಾನ -ಟುಡೇಸ್ ಚಾಣಕ್ಯ

    ಬಿಜೆಪಿ 300, ಎನ್‍ಡಿಎಗೆ 350 ಸ್ಥಾನ -ಟುಡೇಸ್ ಚಾಣಕ್ಯ

    ನವದೆಹಲಿ: ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಎನ್‍ಡಿಎ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದರೆ ಎರಡು ಸಮೀಕ್ಷೆಗಳು ಎನ್‍ಡಿಎ ಒಕ್ಕೂಟ  340ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಹೇಳಿವೆ.

    ಇಂಡಿಯಾ ಟುಡೇ ಪ್ರಕಾರ ಎನ್‍ಡಿಎ 339-365 ಸ್ಥಾನಗಳಿಸಿದರೆ, ಯುಪಿಎ 77-108, ಇತರೇ 69- 95 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ.

    ಕಳೆದ ಬಾರಿ ಎನ್‍ಡಿಎ ಸ್ಥಾನದ ಬಗ್ಗೆ ಬಹುತೇಕ ನಿಖರ ಭವಿಷ್ಯ ಹೇಳಿದ್ದ ಟುಡೇಸ್ ಚಾಣಕ್ಯ ಈ ಬಾರಿ ಬಿಜೆಪಿ 300 ± 14, ಕಾಂಗ್ರೆಸ್ 55 ± 9, ಇತರೇ 97 ± 11, ಎನ್‍ಡಿಎ 350 ± 14, ಯುಪಿಎ 95 ± 9 ಸ್ಥಾನಗಳಿಸಲಿದೆ ಎಂದು ಹೇಳಿದೆ.

    2014ರ ಚುನಾವಣೆಯಲ್ಲಿ ಟುಡೇಸ್ ಚಾಣಕ್ಯ ಬಿಜೆಪಿ 291 ± 14, ಕಾಂಗ್ರೆಸ್ 57 ± 9, ಎನ್‍ಡಿಎ 340 ±14, ಯುಪಿಎ 70 ±9, ಒಟ್ಟು ಇತರೇ 133 ±11 ಸ್ಥಾನ ಗಳಿಸಲಿದೆ ಎಂದು ಹೇಳಿತ್ತು.

    2014ರ ಚುನಾವಣೆಯಲ್ಲಿ ಎನ್‍ಡಿಎ 334, ಯುಪಿಎ 59, ಇತರೆ 150 ಸ್ಥಾನಗಳನ್ನು ಗೆದ್ದುಕೊಂಡಿತ್ತು.

     

  • ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ – ಸಿ ವೋಟರ್

    ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ – ಸಿ ವೋಟರ್

    ನವದೆಹಲಿ: ಕೇಂದ್ರದಲ್ಲಿ ಮತ್ತೊಮ್ಮೆ ಎನ್‍ಡಿಎ ಸರ್ಕಾರ ಬರಲಿದೆ ಎಂದು ಸಿ ವೋಟರ್ ಸಮೀಕ್ಷೆ ಹೇಳಿದೆ.

    ಇಂದು 7 ಹಂತದ ಲೋಕಸಭಾ ಚುನಾವಣೆಗಳು ಮುಗಿದಿದ್ದು ಸಂಜೆ 6:30 ರ ನಂತರ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಳ್ಳುತ್ತದೆ. ಸಿ ವೋಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ ನೇತೃತ್ವದ ಎನ್‍ಡಿಎ 287, ಕಾಂಗ್ರೆಸ್ ನೇತೃತ್ವದ ಯುಪಿಎ 128, ಇತರರು 127 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ.

    ಕರ್ನಾಟಕದಲ್ಲಿ ಬಿಜೆಪಿ 18, ಕಾಂಗ್ರೆಸ್ 7, ಜೆಡಿಎಸ್ 2 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

    2014ರ ಚುನಾವಣೆಯಲ್ಲಿ ಎನ್‍ಡಿಎ 334, ಯುಪಿಎ 59, ಇತರರು 150 ಸ್ಥಾನಗಳನ್ನು ಗೆದ್ದಿದರು. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.