ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಆರೋಪಿಗಳ ಜಾಮೀನು ಭವಿಷ್ಯ ಇಂದು ಪ್ರಕಟ ಆಗಲಿದೆ. ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಜನ ಆರೋಪಿಗಳ ಜಾಮೀನು ಭವಿಷ್ಯ ಇಂದು (ಡಿ.13) ತೀರ್ಮಾನ ಆಗಲಿದೆ.
– ಕೋರ್ಟ್ಗೆ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಹೇಳಿದ್ದೇನು?
ಬೆಂಗಳೂರು: ಕೊಲೆ ಆರೋಪಿ ದರ್ಶನ್‌ಗೆ ಹೈಕೋರ್ಟ್ (Karnataka Highcourt) ನೀಡಿದ್ದ 6 ವಾರಗಳ ಮಧ್ಯಂತರ ಜಾಮೀನು ಅವಧಿ ಇದೇ ಡಿ.11ಕ್ಕೆ ಮುಕ್ತಾಯವಾಗಲಿದೆ. ಆದ್ರೆ ಅದೇ ದಿನ ದರ್ಶನ್ ಶಸ್ತ್ರ ಚಿಕಿತ್ಸೆಗೆ ವೈದ್ಯರು ತಯಾರಿ ಮಾಡಿಕೊಂಡಿದ್ದಾರೆ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಡಿಸೆಂಬರ್ 11ರಂದು ದರ್ಶನ್ ಶಸ್ತ್ರಚಿಕಿತ್ಸೆಗೆ (Surgery For Darshan) ವೈದ್ಯರು ದಿನಾಂಕ ನಿಗಡಿಪಡಿಸಿದ್ದಾರೆ ಎಂದು ಹಿರಿಯ ವಕೀಲ ಸಿ.ವಿ ನಾಗೇಶ್ (CV Nagesh) ಅವರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ರೆಗ್ಯೂಲರ್ ಬೇಲ್ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. ಅಲ್ಲದೇ ಮುಂದಿನ ಆದೇಶದವರೆಗೆ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಿದೆ. ಇದರಿಂದ ಆರೋಪಿ ದರ್ಶನ್‌ಗೆ ರಿಲೀಫ್ ಸಿಕ್ಕಂತಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರದ ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಿತು. ಎಸ್‌ಪಿಪಿ ಪ್ರಸನ್ನಕುಮಾರ್ (SPP Prasannakumar) ಅವರು ಮಧ್ಯಂತರ ಜಾಮೀನು ರದ್ದುಗೊಳಿಸುವಂತೆ ಆಕ್ಷೇಪಣಾ ವಾದ ಮಂಡಿಸಿದರು. ಬಳಿಕ ಇದಕ್ಕೆ ಪ್ರತಿವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್, ಹಲವು ವಿಚಾರಗಳನ್ನು ಕೋರ್ಟ್ ಗಮನಕ್ಕೆ ತಂದರು. ಇದೇ ವೇಳೆ ದರ್ಶನ್‌ಗೆ ನೀಡಲಾಗಿರುವ ಮಧ್ಯಂತರ ಜಾಮೀನು ಅವಧಿಯನ್ನ ವಿಸ್ತರಣೆ ಮಾಡುವಂತೆ ಮನವಿ ಮಾಡಿದರು.
ಬಳ್ಳಾರಿಯ ವೈದ್ಯರ (Ballari Doctors) ವರದಿಯ ಮೇಲೆ ಜಾಮೀನು ಸಿಕ್ಕಿತ್ತು. ಬಿಜಿಎಸ್ ಆಸ್ಪತ್ರೆಯಲ್ಲಿ ಬಳ್ಳಾರಿ ವೈದ್ಯರ ವರದಿ ಒಪ್ಪಿಕೊಂಡರು, ಆಪರೇಷನ್ ಅವಶ್ಯಕತೆ ಇದೆ ಅಂತ ಹೇಳಿದ್ರು. ಡಾಕ್ಟರ್ ಹೇಳಿದ ಹಾಗೇ ನಾವು ಆಪರೇಷನ್ ಮಾಡಿಸಬೇಕು, ನಾವು ಹೇಳಿದಾಗ ಅಪರೇಷನ್ ಮಾಡಿಸೋದಕ್ಕೆ ಆಗೋದಿಲ್ಲ. ಮೂರು ವಾರ ಆಯ್ತು, ನಾಲ್ಕು ಅಯ್ತು ಅಂತ ಅಪರೇಷನ್ ಮಾಡಿಸಿ ಅನ್ನೋದಕ್ಕೆ ಆಗೋಲ್ಲ ಅಂತ ವಾದಿಸಿದರು. ಈ ವೇಳೆ ನೀವು ದಿನಾಂಕ ನಿಗದಿ ಆಗಿದೆ ಅಂದಿದ್ದೀರಿ ಅಲ್ವಾ? ಅಂತ ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಿ.ವಿ ನಾಗೇಶ್, ಹೌದು ಮುಂದೆ ಹೇಳ್ತೀನಿ ಯಾವಾಗ ಅಂತ ಎಂದರು.
ದರ್ಶನ್ ಹೋಗಿ 4 ವಾರ ಆಯ್ತು ಆಪರೇಷನ್ ಮಾಡಿ ಅಂತ ಪಟ್ಟು ಹಿಡಿಯೋದಕ್ಕೆ ಆಗೋಲ್ಲ. ಟೈಂ ಮುಗಿಯುತ್ತಾ ಇದೆ ಅಂತ ಒತ್ತಡ ಮಾಡೋಕೆ ಆಗೋಲ್ಲ, ನ.11-21ನೇ ತಾರೀಖು ನೀಡಿದ ವರದಿಯಲ್ಲಿ ಬಿಪಿ ವ್ಯತ್ಯಾಸ ಇದೆ ಅಂತ, ಡಿಸೆಂಬರ್ 5 ರಂದು ಮತ್ತೊಂದು ವರದಿ ನೀಡಲಾಗಿದೆ. ದರ್ಶನ್‌ಗೆ ಸ್ಟಿರಾಯ್ಡ್ ಇಂಜೆಕ್ಷನ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜನರಲ್ ಅನಸ್ತೇಷಿಯಾ ನೀಡಲು ತಯಾರಿ ಮಾಡಿಕೊಳ್ಳಲು ದೇಹ ಸಮತೋಲನಕ್ಕೆ ತೆಗೆದುಕೊಳ್ಳುಲಾಗುತ್ತೆ. ಪಿಸಿಯೋಥೆರಪಿ ಮತ್ತು ವ್ಯಾಯಾಮ ಮಾಡಲಾಗುತ್ತಿದೆ, ಡಿ.11 ರಂದು ಶಸ್ತ್ರಚಿಕಿತ್ಸೆ ಮಾಡಿಸಲು ತಯಾರಿ ಮಾಡಲಾಗಿದೆ, ಹೀಗಾಗಿ ದರ್ಶನ್ ಯಾವುದೇ ಮಧ್ಯಂತರ ಆದೇಶ ಉಲ್ಲಂಘನೆ ಮಾಡಿಲ್ಲ, ದಯಮಾಡಿ ಇದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದರು.
ಇದೇ ವೇಳೆ ರೆಗ್ಯೂಲರ್ ಬೇಲ್‌ಗೂ ಎಸ್‌ಪಿಪಿ ಆಕ್ಷೇಪ ವಾದಕ್ಕೆ ಪ್ರತಿವಾದ ಮಂಡಿಸಿದ ಸಿ.ವಿ ನಾಗೇಶ್, ರೇಣುಕಾಸ್ವಾಮಿ ದೇಹದ ಮೇಲೆ 39 ರಕ್ತದ ಕಲೆಗಳು ಇವೆ ಎಂದು ಹೇಳ್ತಾ ಇದ್ದಾರೆ. ಆದ್ರೆ ಬ್ಲೋಡಿಂಗ್ ಇಂಜುರಿ ಇದ್ದದ್ದು ಒಂದೇ ಒಂದು.. ರೇಣುಕಾಸ್ವಾಮಿ ಮೃತದೇಹದಲ್ಲಿ 2.5 ಸೆಂಟಿ ಮೀಟರ್ ಗಾಯ ಮಾತ್ರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷಾ ವರದಿಯನ್ನು ಪ್ರಾಸಿಕ್ಯೂಷನ್ ಜೊತೆ ಸೇರಿ ವೈದ್ಯರು ತಿರುಚಿದ್ದಾರೆ. ಪ್ರತಿ ಹಂತದಲ್ಲಿ ಕೂಡ ಪ್ರಾಸಿಕ್ಯೂಷನ್ ಸುಳ್ಳು ಹೇಳುತ್ತಾ ಬರುತ್ತಾ ಇದೆ? ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲು ಮಾಡೋದ್ರಿಂದ ಹಿಡಿದು ಮಹಜರು ಮಾಡುವ ತನಕ ಸುಳ್ಳು ಹೇಳಿದೆ ಎಂದು ಪ್ರಬಲ ವಾದ ಮಂಡಿಸಿದರು.
ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ದರ್ಶನ್ ಸೇರಿ 7 ಜನರ ಜಾಮೀನು ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. ಅಲ್ಲದೇ ರೆಗ್ಯೂಲರ್ ಬೇಲ್ ಸಿಗುವವರೆಗೆ ಮಧ್ಯಂತರ ಜಾಮೀಜು ಅವಧಿಯನ್ನ ವಿಸ್ತರಣೆ ಮಾಡಿದೆ.
ಬೆಂಗಳೂರು: ಬೆನ್ನುನೋವಿನಗೆ ಸರ್ಜರಿ ವಿಚಾರದಲ್ಲಿ ದರ್ಶನ್ (Darshan) ಮನಸು ಬದಲಾಯಿಸಿದ್ದಾರಂತೆ. ಚಿಕಿತ್ಸೆಯೇ ಬೇಡ ಅಂತಿದ್ದವರು, ಆನಂತರ ಫಿಜಿಯೋ ಥೆರಪಿಗೆ ಒಪ್ಪಿಕೊಂಡರು. ಬೆಂಗಳೂರಿಗೆ ಬಂದ ನಂತರ ಸರ್ಜರಿಗೆ ನಿರಾಕರಿಸಿದವರು, ಈಗ ಶಸ್ತ್ರಚಿಕಿತ್ಸೆಗೆ (surgery) ಒಪ್ಪಿಕೊಂಡಿದ್ದಾರಂತೆ. ಏಕಾಏಕಿ ಸರ್ಜರಿಗೆ ಒಪ್ಪಿಕೊಂಡಿದ್ದಕ್ಕೆ ಕಾರಣ ಜಡ್ಜ್ ಕೇಳಿದ್ದ ಆ ಖಡಕ್ ಪ್ರಶ್ನೆಯಾ? ದರ್ಶನ್ ಜೈಲಿಗೆ ವಾಪಸ್ಸು ಹೋಗೋಕೆ ಉಳಿದಿರೋದೇ 11 ದಿನ. ಆ ಒಂದೂವರೆ ವಾರದಲ್ಲಿ ಸರ್ಜರಿ ಮುಗಿದು ಹೋಗುತ್ತಾ? ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ತುರ್ತು ಚಿಕಿತ್ಸೆಗಾಗಿಯೇ ಹೈಕೋರ್ಟ್ ನಟ ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಚಿಕಿತ್ಸೆಗಾಗಿಯೇ ದರ್ಶನ್ ಬೆಂಗಳೂರಿಗೆ ಬಂದು ಮೂವತ್ತು ದಿನಗಳು ಮುಗಿದು ಹೋಗಿವೆ. ಒಂದೂವರೆ ವಾರ ಕಳೆದರೆ ಮತ್ತೆ ದರ್ಶನ್ ಜೈಲಿಗೆ ವಾಪಸ್ಸಾಗಬೇಕು. ಯಾವ ಉದ್ದೇಶಕ್ಕಾಗಿ ದರ್ಶನ್ ಜಾಮೀನು ಪಡೆದುಕೊಂಡು ಬೆಂಗಳೂರಿಗೆ ಬಂದರೋ, ಆ ಉದ್ದೇಶ ಇನ್ನೂ ಈಡೇರಿಲ್ಲ. ಹಾಗಂತ ನಾವ್ ಹೇಳ್ತಿಲ್ಲ. ಸ್ವತಃ ದರ್ಶನ್ ಪರ ವಕೀಲರೇ ಹೈಕೋರ್ಟಿಗೆ ತಿಳಿಸಿದ್ದಾರೆ. ದರ್ಶನ್‌ಗೆ ಇನ್ನೂ ಸರ್ಜರಿ ಆಗಿಲ್ಲ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ವಿಶೇಷ ಚೇತನರ ಅನುದಾನಕ್ಕೂ ಸರ್ಕಾರ ಕೊಕ್ಕೆ – 80% ರಷ್ಟು ಅನುದಾನ ಕಡಿತ ಆರೋಪ!
ಹೌದು. ದರ್ಶನ್‌ಗೆ ಇನ್ನೂ ಶಸ್ತ್ರಚಿಕಿತ್ಸೆ ಆಗಿಲ್ಲ. ಕಾರಣ, ಅವರು ರಕ್ತದೊತ್ತಡದಿಂದ ಬಳಲ್ತಾ ಇದ್ದಾರಂತೆ. ಬಿಪಿ ಕಂಟ್ರೋಲ್‌ಗೆ ಬಾರದೇ ಇರೋ ಕಾರಣದಿಂದಾಗಿ ಇನ್ನೂ ಸರ್ಜರಿ ಮಾಡಲಾಗಿಲ್ಲವಂತೆ. ಹಾಗಂತ ಸರ್ಜರಿ ಆಗೋದೇ ಇಲ್ಲವಾ? ಈವರೆಗೂ ಅದು ಕಷ್ಟ ಕಷ್ಟ ಅಂತ ನಂಬಲಾಗಿತ್ತು. ಸರ್ಜರಿಗೆ ದರ್ಶನ್ ಮನಸು ಮಾಡದೇ ಇರೋ ಕಾರಣದಿಂದಾಗಿ, ಈ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈಗ ದರ್ಶನ್ ಸರ್ಜರಿಗೆ ಒಪ್ಪಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಾ ಇದೆ. ಸರ್ಜರಿ ಆಗದೇ ಇದ್ದರೆ, ಡಬಲ್ ಸಂಕಷ್ಟ ಎದುರಾಗೋ ಕಾರಣದಿಂದಾಗಿ ಸರ್ಜರಿ ಮಾಡಿಸಿಕೊಳ್ಳೋಕೆ ಒಪ್ಪಿದ್ದಾರೆ ಎಂದು ಹೇಳಲಾಗ್ತಿದೆ. ಇದನ್ನೂ ಓದಿ: ಮೋದಿ ಮನೆ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಎಂಎಲ್‌ಸಿ
ದರ್ಶನ್‌ಗೆ ಇನ್ನೂ ಸರ್ಜರಿ ಆಗದೇ ಇರೋ ಕಾರಣದಿಂದಾಗಿ ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದರು. ತುರ್ತು ಅಂದವರು ಯಾಕೆ ತಡ ಅಂತ ಕೇಳಿದ್ದರು. ಯಾವಾಗ ಈ ಪ್ರಶ್ನೆಯನ್ನು ಜಡ್ಜ್ ಕೇಳಿದ್ರೋ, ಆಗ ಪರಿಸ್ಥಿತಿಯ ಅರಿವು ದರ್ಶನ್‌ಗೆ ಆಗಿರಬೇಕು. ಜೊತೆಗೆ ಫಿಜಿಯೋಥೆರಪಿಯಿಂದ ಇದು ಸರಿ ಆಗುವಂಥದ್ದಲ್ಲ ಅಂತ ದರ್ಶನ್ ಗಮನಕ್ಕೆ ಬಂದಿರಬೇಕು. ಹಾಗಾಗಿ ಕೆಲವೇ ದಿನಗಳಲ್ಲೇ ದರ್ಶನ್ ಸರ್ಜರಿಗೆ ಒಪ್ಪುವ ಸಾಧ್ಯತೆ ಇದೆಯಂತೆ. ಈಗಾಗಲೇ ನುರಿತ ವೈದ್ಯರನ್ನೂ ದರ್ಶನ್ ಕುಟುಂಬ ಸಂಪರ್ಕ ಮಾಡಿದ್ದಾರಂತೆ. ಜಾಮೀನು ಅವಧಿ ಉಳಿದಿರೋದು ಕೇವಲ 11 ದಿನಗಳು ಮಾತ್ರ. ಅಷ್ಟರಲ್ಲಿ ಸರ್ಜರಿ ಕುರಿತು ಮಾನ್ಯ ನ್ಯಾಯಾಲಯಕ್ಕೆ ಮತ್ತೊಂದು ಮನವಿ ಸಲ್ಲಿಸಲಾಗತ್ತೆ ಅನ್ನೋದು ಸದ್ಯಕ್ಕಿರೋ ಮಾಹಿತಿ. ಇದನ್ನೂ ಓದಿ: ನಕ್ಸಲೈಟನ್ನು ಬೇರು ಸಮೇತ ಕಿತ್ತುಹಾಕಬೇಕು: ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder case) ಬೇಲ್ ಕೋರಿ ಹೈಕೋರ್ಟ್‌ಗೆ ದರ್ಶನ್ (Darshan) ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಮಂಗಳವಾರಕ್ಕೆ (ಅ.29) ಮುಂದೂಡಿಕೆಯಾಗಿದೆ.
ದರ್ಶನ್ ಬೆನ್ನು ನೋವಿನ ವೈದ್ಯಕೀಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಬಳ್ಳಾರಿ ಜೈಲಾಧಿಕಾರಿಗಳು ಸಲ್ಲಿಸಿದರು. ಆರೋಗ್ಯ ಕಾರಣವೊಡ್ಡಿ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ (CV Nagesh) ವಾದ ಮಂಡಿಸಿದರು. ಸಿಟಿ ಸ್ಕ್ಯಾನ್, ಎಂಆರ್‌ಐ ರಿಪೋರ್ಟ್‌ಗಳನ್ನು ಮಾಡಿಸಲಾಗಿದೆ. ವರದಿಯಲ್ಲಿ ದರ್ಶನ್‌ಗೆ ಈ ಕೂಡಲೇ ಸರ್ಜರಿ ಮಾಡಬೇಕು ಅಂತಿದೆ. ಹಾಗಾಗಿ ಮಧ್ಯಂತರ ಜಾಮೀನು ನೀಡಬೇಕು ಅಂತ ನಾಗೇಶ್ ವಾದ ಮಂಡಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ 160-170 ಸೀಟ್ ಖಚಿತ, ಬಹುಮತ ನಿಶ್ಚಿತ – ರಮೇಶ್ ಜಾರಕಿಹೊಳಿ
ಇದಕ್ಕೆ ಜಡ್ಜ್ ಪ್ರತಿಕ್ರಿಯಿಸಿ, ಈಗಷ್ಟೇ ಮೆಡಿಕಲ್ ರಿಪೋರ್ಟ್ (Medical Report) ಸಿಕ್ಕಿದೆ. ಹಾಗಾಗಿ 2 ಕಡೆ ವಾದಕ್ಕೆ ಅವಕಾಶ ನೀಡಬೇಕಿದೆ. ಆದರೆ, ಬಳ್ಳಾರಿಯಲ್ಲಿ ಅಪರೇಷನ್ ಮಾಡಿಸಬೇಕಾ? ಬೆಂಗಳೂರಿನಲ್ಲಿ ಮಾಡಿಸಬೇಕಾ? ಅಂತ ಜಡ್ಜ್ ವಿಶ್ವಜೀತ್ ಶೆಟ್ಟಿ ಪ್ರಶ್ನಿಸಿದ್ರು. ವೈದ್ಯಕೀಯ ವರದಿ ಓದಿ.. ಬಳ್ಳಾರಿ ಮತ್ತು ಬೆಂಗಳೂರು ಎರಡು ಕಡೆಗಳಲ್ಲೂ ಚಿಕಿತ್ಸೆ ಕೊಡಿಸಬಹುದು ಅಂತಿದೆ ಅಂದ್ರು. ಆದರೆ, ಬಳ್ಳಾರಿ ಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಹಾಗಾಗಿ ಬೆಂಗಳೂರಿನ ಖಾಸಗಿ ಚಿಕಿತ್ಸೆಗೆ ಅವಕಾಶ ಕೊಡಿ ಅಂತ ಸಿ.ವಿ ನಾಗೇಶ್ ಮನವಿ ಮಾಡಿದ್ರು. ಈ ವೇಳೆ ವಾದ-ಪ್ರತಿವಾದಕ್ಕೆ ಅವಕಾಶ ಕೊಡೋಣ ಅಂದ ಜಡ್ಜ್ ಮಂಗಳವಾರ ಬೆಳಗ್ಗೆಗೆ ವಿಚಾರಣೆ ಮುಂದೂಡಿದರು.
ಈ ಮಧ್ಯೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಪ್ರಕರಣದಲ್ಲಿ ಪ್ರಕರಣದ ತನಿಖಾಧಿಕಾ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಬಳ್ಳಾರಿ ಜೈಲಿನಲ್ಲಿ ದರ್ಶನ್ ವಿಚಾರಣೆ ನಡೆಸಿದ್ರು. ಸಿಗರೇಟ್, ಕಾಫಿ ಕೊಟ್ಟಿದ್ಯಾರು..? ಮೊಬೈಲ್ ಯಾರದ್ದು..? ಫೋಟೋ ಯಾರು ತೆಗೆದ್ರು..? ಅನ್ನೋ ಪ್ರಶ್ನೆಗೆ ನನಗೆ ಯಾವುದೂ ಗೊತ್ತಿಲ್ಲ ಅಂತ ದರ್ಶನ್ ಉತ್ತರ ಕೊಟ್ಟಿದ್ದಾರೆ ಅಂತ ತಿಳಿದು ಬಂದಿದೆ. ಇದನ್ನೂ ಓದಿ: `ಕರಿಮಣಿ ಮಾಲೀಕ ನೀನಲ್ಲ’ ಅಂತ ಆಸ್ತಿಗಾಗಿ ಗಂಡನ ಕೊಲೆ – ಇಬ್ಬರು ಪ್ರಿಯಕರರು ಸೇರಿ ಪತ್ನಿಯೂ ಅಂದರ್
– ವ್ಯಾವಹಾರಕ್ಕಿಟ್ಟಿದ್ದ 37 ಲಕ್ಷ ಹಣವನ್ನ ಕೊಲೆಗೆ ಇಟ್ಟಿದ್ದ ಹಣ ಅಂದಿದ್ದಾರೆ ಪೊಲೀಸರು; ವಕೀಲರು
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಆರೋಪದಲ್ಲಿ ನಟ ದರ್ಶನ್‌ಗೆ ಜೈಲುವಾಸ ಮುಂದುವರಿದಿದೆ. ಬೆಂಗಳೂರಿನ ಸೆಷನ್ಸ್ ಕೋರ್ಟ್ ವಿಚಾರಣೆಯನ್ನು ಅ.8ರ ಮಂಗಳವಾರ ಮಧ್ಯಾಹ್ನ 12:30ಕ್ಕೆ ಮುಂದೂಡಿದೆ.
ದರ್ಶನ್ ವ್ಯಾವಹಾರಿಕ ಇಟ್ಟಿದ್ದ್ 37 ಲಕ್ಷ ಹಣವನ್ನು ಸೀಜ್ ಮಾಡಿ, ಕೊಲೆಗೆ ಇಟ್ಟಿದ್ದ ಹಣ ಅಂತ ಪೊಲೀಸರು ಹೇಳಿದ್ದಾರೆ. ಚಿಕ್ಕಣ್ಣ, ಚೇತನ್, ನವೀನ್ ಹೇಳಿಕೆ ದಾಖಲಿಸಿದ್ದಾರೆ. ಆದರೆ, ಚಿಕ್ಕಣ್ಣರನ್ನ ಸ್ಟೋನಿಬ್ರೂಕ್‌ಗೆ ಊಟಕ್ಕೆ ಕರೆದಿದ್ರು. ಪ್ರಕರಣದಲ್ಲಿ 6 ಮಂದಿ ಐ ವಿಟ್ನೆಸ್‌ಗಳಿದ್ದಾರೆ. 6 ಜನರ ಹೇಳಿಕೆಯಲ್ಲೂ ವ್ಯತ್ಯಾಸ ಕಂಡುಬಂದಿದೆ. ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮತ್ತೊಂದು ಗುಡ್‌ನ್ಯೂಸ್ – ಹೊಸ ವರ್ಷದಿಂದ್ಲೇ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು!
ಕೇಸ್ ಪ್ರಗತಿಯನ್ನ ಡೈರಿಯಲ್ಲಿ ಉಲ್ಲೇಖ ಮಾಡೋದು ಕಡ್ಡಾಯ. ಆದರೆ, ಪೊಲೀಸರು ಕೋರ್ಟ್ಗೆ ಸಲ್ಲಿಸಿಲ್ಲ ಅಂತ ವಾದಿಸಿದ್ದಾರೆ. ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದಾರೆ. ಅಲ್ಲದೆ, ಪ್ರತಿವಾದಕ್ಕೆ ಮನವಿ ಮಾಡಿದ್ದಾರೆ. ಹಾಗಾಗಿ, ಮಂಗಳವಾರಕ್ಕೆ ವಿಚಾರಣೆಯನ್ನು ಜಡ್ಜ್ ಮುಂದೂಡಿದ್ದಾರೆ. ಅತ್ತ, ಜೈಲಿನಲ್ಲಿ ದರ್ಶನ್ ಬೇಲ್ ಟೆನ್ಷನ್‌ನಲ್ಲಿದ್ದಾರೆ. ಪವಿತ್ರಗೌಡಗೌಡ ಬೇಲ್ ಅರ್ಜಿಯೂ ಮಂಗಳವಾರವೇ ವಿಚಾರಣೆಗೆ ಬರಲಿದೆ. ಇದನ್ನೂ ಓದಿ: Bengaluru Rains | ಎಲೆಕ್ಟ್ರಾನಿಕ್ ಸಿಟಿ ಮತ್ತೆ ಜಲಾವೃತ – ಸಣ್ಣ ಮಳೆಗೆ ತತ್ತರಿಸಿದ ಐಟಿಬಿಟಿ ಮಂದಿ
– ಇಡೀ ಪ್ರಕರಣ ಕಪೋಲಕಲ್ಪಿತ ಸ್ಟೋರಿ; ನೀರಿನ ಬಾಟಲಿಯನ್ನೇ ಸಾಕ್ಷಿ ಅಂದಿದ್ದಾರೆ
– ಕೋರ್ಟ್‌ನಲ್ಲಿ ಹಿರಿಯ ವಕೀಲ ಸಿ.ವಿ ನಾಗೇಶ್ ಅಬ್ಬರ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ (Darshan) ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಲಾಗಿದೆ. ಇವತ್ತು ಸಿಸಿಹೆಚ್ 57ನೇ ನ್ಯಾಯಾಲಯದಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ ಪರ ಹಿರಿಯ ವಕೀಲ ಸಿ.ವಿ ನಾಗೇಶ್ (Advocate CV Nagesh) ವಾದ ಮಂಡಿಸಿದ್ರು.
ಈ ವೇಳೆ ಈ ಪ್ರಕರಣದ ತನಿಖೆ (Investigation) ತುಂಬಾ ಕೆಟ್ಟದ್ದಾಗಿ ನಡೆದಿದೆ. ಸುಪ್ರೀಂ ಕೋರ್ಟ್‌ನ 2 ತೀರ್ಪು ಉಲ್ಲೇಖಿಸಿ, ಇಡೀ ಪ್ರಕರಣ ಕಪೋಲಕಲ್ಪಿತ ಕಥೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿಸಿದ್ದಾರೆ ಎಂದು ಪ್ರಬಲ ವಾದ ಮಂಡಿಸಿದರು. ಇದನ್ನೂ ಓದಿ: ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಬೇಲ್ – ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ
ವಾದ ಆರಂಭಿಸುತ್ತಿದ್ದಂತೆ ಮೊದಲು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ವಿಚಾರಣೆ ಸಂದರ್ಭದಲ್ಲಿ ಮಾಧ್ಯಮಗಳು ಟ್ರಯಲ್ ಮಾಡಿದ್ದಾವೆ. ಸ್ವಇಚ್ಚಾ ಹೇಳಿಕೆ, ಫೋಸ್ಟ್ ಮಾರ್ಟ್ಂ ರಿಪೋರ್ಟ್, ಐ ವಿಟ್ನೆಸ್ ಅನ್ನು ಬಿತ್ತರ ಮಾಡಿವೆ. ತನಿಖೆಯ ಪ್ರತೀ ಹಂತದಲ್ಲೂ ಕೂಡ ಟ್ರಯಲ್ ಮಾಡಿದ್ದಾವೆ. ಜೀವಾವಧಿ ಅಥವಾ ಸಮನಾಂತರ ಶಿಕ್ಷೆ ಹೊಂದಿರೋ ಪ್ರಕರಣ ಇದು ಇದನ್ನು ವಿಧಿಸೋದು ಬಾಕಿ ಇದೆ. ಇನ್ನೂ ಕೋರ್ಟ್ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದರು.
ಎಸ್‌ಪಿಪಿ (SPP) ಅತ್ಯುತ್ತಮ ತನಿಖೆ ಅಂತ ಕೋರ್ಟ್‌ಗೆ ಹೇಳಿದ್ದಾರೆ. ಆದರೆ ಇದು ನನ್ನ ಪ್ರಕಾರ ತುಂಬಾ ಕೆಟ್ಟದಾದ ತನಿಖೆ ಎನ್ನುತ್ತಾ ಸುಪ್ರೀಂ ಕೋರ್ಟ್ನ ಎರಡು ತೀರ್ಪುಗಳ ಉಲ್ಲೇಖಿಸಿ ವಾದ ಮಂಡಿಸಿದರು. ಈ ವೇಳೆ ತೀರ್ಪಿನ ಪ್ರತಿಯನ್ನು ಎಸ್‌ಪಿಪಿ ಕೇಳಿದರು. ಅದಕ್ಕೆ ಗರಂ ಆದ ಸಿ.ವಿ ನಾಗೇಶ್, ನಾನು ಕೆಲಸ ಮಾಡಿ ತಂದಿರೋ ತೀರ್ಪು ಇದು. ನಾನು ನಿಮಗೆ ಪ್ರತಿ ಕೊಡೋಲ್ಲ, ಪ್ರಸನ್ನ ನೀವೇ ಹುಡುಕಿ ಎಂದರು. ಇದನ್ನೂ ಓದಿ: ದಸರಾ ಉದ್ಘಾಟನೆ ವೇದಿಕೆ ರಾಜಕೀಯವಾಗಿ ಬಳಸಿದ ಸಿಎಂ; ಜಿಟಿಡಿ ಹೇಳಿಕೆ ಸಿಎಂ ಓಲೈಕೆಗಾಗಿ – ಛಲವಾದಿ ನಾರಾಯಣಸ್ವಾಮಿ
ರೇಣುಕಾ ಮುಖ ನಾಯಿ ಕಚ್ಚಿ ತಿಂದಿದೆ.
ಮೀಡಿಯಾದಲ್ಲಿ ದಿನಾ ಟ್ರಯಲ್ ಮಾಡಿ ಪ್ರಚಾರ ನೀಡುತ್ತಾ ಇದ್ದಾರೆ. ಮೀಡಿಯಾದಲ್ಲಿ ಆರೋಪಿಗಳ ಸ್ವ ಇಚ್ಛಾ ಹೇಳಿಕೆ ಬಂದಿದೆ. ಅಲ್ಲದೇ ಮೃತ ದೇಹದ ಫೋಟೋ ತೋರಿಸಿದ್ದಾರೆ. ಆತನ ಮುಖವನ್ನು ನಾಯಿ ತಿಂದಿದೆ, ಅಂತ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಆದರೆ ಮಾಧ್ಯಮದಲ್ಲಿ ಇದನ್ನೇ ಕ್ರೌರ್ಯ ಅಂತ ಹೇಳಿದ್ರು. ಹಲ್ಲೆ ಎಂದು ಬಿಂಬಿಸಿ ಸುದ್ದಿ ಸಹ ಮಾಡಿವೆ. ನಾಯಿ ಕಚ್ಚಿ ಅವನ ಮುಖ ತಿಂದಿದೆ. ಇದೆನ್ನೆಲ್ಲಾ ಪರಿಗಣಿಸಿ ಕೋರ್ಟ್ ತನಿಖಾಧಿಕಾರಿಗೆ ತರಾಟೆ ತೆಗೆದುಕೊಳ್ಳಬೇಕು ಎಂದು ವಾದಿಸಿದರು.
ನೀರಿನ ಬಾಟಲ್ ಅನ್ನು ಸಾಕ್ಷಿ ಅಂದಿದ್ದಾರೆ:
ಪ್ರಕರಣದಲ್ಲಿ ಎಲ್ಲಾ ರಿಕವರಿ ಸುಳ್ಳು ರಿಕವರಿ ಆಗಿದೆ. ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿ ಮಾಡಿದ್ದಾರೆ. ಮರದ ಕೊಂಬೆಗಳು, ಹಗ್ಗದ ತುಂಡುಗಳನ್ನು ರಿಕವರಿ ಎಂದು ತೋರಿಸಿದ್ದಾರೆ. ನೀರಿನ ಬಾಟಲ್ ಅನ್ನು ಸಾಕ್ಷಿ ಅಂದಿದ್ದಾರೆ. 12-6 ರಲ್ಲಿ ಇದೆಲ್ಲವನ್ನೂ ತಮ್ಮ ವಶಕ್ಕೆ ಪಡೆದಿದ್ದಾರೆ. ಆದರೆ 9 ಜೂನ್ ಅಲ್ಲಿಯೇ ಪೊಲೀಸರ ವಶದಲ್ಲಿ ಇತ್ತು. ಈ ವಸ್ತುಗಳನ್ನು ವಶಕ್ಕೆ ಪಡೆದಿರೋದಾಗಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ. ಇಲ್ಲಿ ದಿನಾಂಕಗಳ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದರು.
ಸ್ವಇಚ್ಚಾ ಹೇಳಿಕೆಯಲ್ಲಿ ಚಪ್ಪಲಿ, ಪೊಲೀಸರಿಗೆ ಸಿಕ್ಕಿದ್ದು ಶೂ:
ಅಲ್ಲದೇ ದರ್ಶನ್ ಸ್ವಇಚ್ಚಾ ಹೇಳಿಕೆಯಲ್ಲಿ ಚಪ್ಪಲಿ ಅಂತ ಇದೆ. ಅದರೆ ಪೊಲೀಸರು ವಶಕ್ಕೆ ಪಡೆದಿರೋದು ಶೂ. ಸ್ವ-ಇಚ್ಛಾ ಹೇಳಿಕೆಯನ್ನ ಬದಲಾಯಿಸಲಾಗಿದೆ. ದರ್ಶನ್ ಘಟನೆ ವೇಳೆ ಧರಿಸಿದ್ದ ಬಟ್ಟೆ, ಚಪ್ಪಲಿಗಳನ್ನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಮನೆಗೆ ಬಂದರೆ ತೋರಿಸುವುದಾಗಿ ಹೇಳಿದ್ದಾರೆ. ಆದ್ರೆ, ಮನೆಯಲ್ಲಿ ಶೂಗಳು ಹೇಗಾದವು? ಇಷ್ಟೇಲ್ಲಾ ಆದ್ಮೇಲೆ ಹೇಳಿಕೆ ಬದಲಿಸಿದ್ದಾರೆ. ಮೊದಲು ಹೇಳಿಕೆ ಕೊಟ್ಟಾಗ ಚಪ್ಪಲಿ ಚಪ್ಪಲಿ ಅಂದಿದ್ದಾರೆ. ಕೊನೆಗೆ ಅದನ್ನೇ ಶೂ ಎಂದು ಹೇಳಿಕೆ ಬದಲಿಸಿದ್ದಾರೆ ಎಂದು ವಾದ ಮಂಡನೆ ಮಾಡಿದರು.
ರಕ್ತದ ಕಲೆ ಬಿಟ್ಟು ಉಳಿದೆಲ್ಲ ಕಡೆ ತೊಳೆದಿದ್ದರಂತೆ:
ಪೊಲೀಸರು ಮೊದಲ ಬಾರಿಗೆ ಹೋದಾಗ ರಕ್ತದ ಕಲೆ ಇತ್ತು ಎನ್ನಲಾದ ಬಟ್ಟೆ ಸಿಕ್ಕಿಲ್ಲ. ಆಮೇಲೆ ಅದೇ ಬಟ್ಟೆಯನ್ನು ಶರ್ಫ್ ಹಾಕಿ ತೊಳೆದಿದ್ದಾರೆ ಎಂದು ಹೇಳಿಕೆ ದಾಖಲಿಸಲಾಗಿದೆ. ರಕ್ತದ ಕಲೆ ಇರೋ ಜಾಗ ಬಿಟ್ಟು, ಇನ್ನೆಲ್ಲಾ ಕಡೆ ಬಟ್ಟೆ ತೊಳೆದಿದ್ದರು ಅನ್ಸುತ್ತೆ. ಅದಕ್ಕೆ ರಕ್ತದ ಕಲೆ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು. ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಶರ್ಫ್ ಹಾಕಿ ತೊಳೆದು ಒಣಗಿಸಲಾಗಿತ್ತು. ಶನಿವಾರ ಕೊಲೆ ಆಗಿದೆ – ಭಾನುವಾರ ಬಟ್ಟೆ ಇಟ್ಟಿದ್ದಾರೆ. ಸೋಮವಾರ ಸುಶೀಲಮ್ಮ ತೊಳೆದು ಒಣಗಿ ಹಾಕಿದ್ದಾರೆ. ಇಷ್ಟೇಲ್ಲಾ ಉತ್ತಮವಾಗಿ ತೊಳೆದ್ರೂ ಕೂಡ ರಕ್ತದ ಕಲೆ ಸಿಕ್ಕಿದೆ ಅಂತೆ ಎಂದು ಹಾಸ್ಯಮಾಡಿದರು. ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾ | ಜಂಬೂಸವಾರಿ ವೇಳೆ ಬೆದರಿ ಓಡಿದ ಹಿರಣ್ಯ ಆನೆ – ತಪ್ಪಿದ ಭಾರೀ ಅನಾಹುತ
ದರ್ಶನ್ ಪರ ವಾದದ ಮುಖ್ಯಾಂಶಗಳು
* ರೇಣುಕಾಗೆ ದರ್ಶನ್ ಹೊಡೆದಿರೋದ್ದಲ್ಲ.. ನಾಯಿ ಮುಖವನ್ನು ತಿಂದಿದೆ
* ಜೂ.8ಕ್ಕೆ ಕೊಲೆ ಆಗಿದೆ; 9ಕ್ಕೆ ಸ್ಪಾಟ್‌ಗೆ ಹೋಗಿದ್ದಾರೆ
* ಜೂನ್ 12ಕ್ಕೆ ಸೀಜ್ ಮಾಡಿಕೊಂಡಿಕೊಂಡಿದ್ದಾರೆ
* ಜೂ 9ಕ್ಕೆ ಗೊತ್ತಾದ್ರೂ ಏನ್ ಮಾಡುತ್ತಿದ್ದರು..?
* ತಡವಾಗಿ ಪೊಲೀಸರಿಂದ ಪಂಚನಾಮೆ.. ಪಿಎಸ್‌ಐ ಏಕೆ ಸುಮ್ಮನಿದ್ರು….?
* ಟಾರ್ಚ್ ಹಿಡಿದುಕೊಂಡು ಹೋಗಿ ಸೀಜ್
* 164 ಅಡಿ ಸೆಕ್ಯೂರಿಟಿ ಹೇಳಿಕೆ ದಾಖಲಿಸಿದ್ದಾರೆ.. ಸೆಕ್ಯೂರಿಟಿ ಗಾರ್ಡ್‌ಗೆ ಕನ್ನಡ ಬರಲ್ಲ
* ರೇಣುಕಾ ಶೂನಲ್ಲಿ ರಕ್ತದ ಕಲೆಗಳು ಇಲ್ಲ
* ಜೂ.14ಕ್ಕೆ ದರ್ಶನ್ ಶೂಗಳು ವಶಪಡಿಸಿಕೊಂಡಿದ್ದಾರೆ
* ಸಾಕ್ಷಿಗಳನ್ನು ಹುಡುಕಲು ಮ್ಯಾಜಿಕ್ ಶೋ ಮಾಡಿದ್ದಾರೆ
* ದರ್ಶನ್ ಸ್ವಇಚ್ಛಾ ಹೇಳಿಕೆಯಲ್ಲಿ ಚಪ್ಪಲಿ ಅಂದಿದ್ದಾರೆ.. ಮನೆಗೆ ಬಂದಾಗ ಶೂ ಆಗಿದ್ದೇಗೆ…?
* ರಕ್ತದ ಕಲೆಯ ಬಟ್ಟೆ ವಶ ಅಂತ ಹೇಳಲಾಗಿದೆ
* ಶನಿವಾರ ಕೊಲೆ ಆಗಿದೆ, ಭಾನುವಾರ ಇಟ್ಟಿದ್ದಾರೆ.. ಸೋಮವಾರ ಒಗೆದು ಹಾಕಿದ್ದಾರೆ…!
* ಬಟ್ಟೆ ಒಗೆದವರ ಸ್ವ ಇಚ್ಛಾ ಹೇಳಿಕೆಯೇ ಇದೆ
* ಇಷ್ಟೆಲ್ಲಾ ಆದ್ರೂ ರಕ್ತದ ಕಲೆ ಸಿಕ್ಕಿದ್ದೇಗೆ…?