Tag: ಸಿ.ಪಿ.ಯೋಗೇಶ್ವರ್

  • ಮತ್ತೆ ಸಿಪಿವೈ Vs ಎಚ್‌ಡಿಕೆ –  ಕಲ್ಲು, ಮೊಟ್ಟೆ ಎಸೆತ, ಲಾಠಿ ಚಾರ್ಜ್‌, ಜೆಡಿಎಸ್‌ ಕಾರ್ಯಕರ್ತರು ವಶಕ್ಕೆ

    ಮತ್ತೆ ಸಿಪಿವೈ Vs ಎಚ್‌ಡಿಕೆ – ಕಲ್ಲು, ಮೊಟ್ಟೆ ಎಸೆತ, ಲಾಠಿ ಚಾರ್ಜ್‌, ಜೆಡಿಎಸ್‌ ಕಾರ್ಯಕರ್ತರು ವಶಕ್ಕೆ

    ರಾಮನಗರ: ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ಕಾರಿಗೆ (Car) ಜೆಡಿಎಸ್ (JDS) ಕಾರ್ಯಕರ್ತರು ಮೊಟ್ಟೆ (Egg) ಎಸೆದು ಆಕ್ರೋಶವನ್ನು ಹೊರಹಾಕಿದ್ದಾರೆ.

    ಸಿ.ಪಿ.ಯೋಗೇಶ್ವರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ನಡುವೆ ನಡೆದ ಜಟಾಪಟಿಯಿಂದಾಗಿ ಚನ್ನಪಟ್ಟಣದ ಭೈರಾಪಟ್ಟಣ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಯೋಗೇಶ್ವರ್ ಕಾರಿನ ಮೇಲೆ ಕಲ್ಲು ತೂರಾಟ ಮಾಡಿ ಮೊಟ್ಟೆ ಎಸೆದು ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಅಡ್ಡಿ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರತಿಭಟನಾಕಾರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಜೆಡಿಎಸ್‌ಗೆ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಕೊನೆಗೂ ಪೋಲಿಸ್ ಭದ್ರತೆಯಲ್ಲಿ ಯೋಗೇಶ್ವರ್ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

    ಘಟನೆಯೇನು?: ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಸಿಎಂ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಉಭಯ ನಾಯಕರು ವಿಶೇಷ ಅನುದಾನಕ್ಕಾಗಿ ಸಿಎಂಗೆ ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿ ಇಂದು ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮ ನಡೆದಿದೆ. ಆದರೆ ಆಹ್ವಾನ ಪತ್ರಿಕೆಯಲ್ಲಿ ಸಿ.ಪಿ. ಯೋಗೇಶ್ವರ್ ಕೋರಿಕೆ ಮೇರೆಗೆ ಬಿಡುಗಡೆಯಾಗಿರುವ ವಿಶೇಷ ಅನುದಾನ ಎಂದು ಮುದ್ರಣವಾಗಿತ್ತು. ಇದನ್ನೂ ಓದಿ: ಹೈಕೋರ್ಟ್ ವಕೀಲ ಆತ್ಮಹತ್ಯೆ- ಕೋರ್ಟ್ ಕೊಠಡಿ ಧ್ವಂಸ

    ಈ ಹಿನ್ನೆಲೆಯಲ್ಲಿ ಸಿಪಿ.ಯೋಗೇಶ್ವರ್ ನಡೆಗೆ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಶಾಸಕರನ್ನು ಕಡೆಗಣಿಸಿದ್ದಾರೆಂದು ಕಿಡಿಕಾರಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದರು. ಇದನ್ನೂ ಓದಿ: ದೇಶದಲ್ಲಿ 5G ಸೇವೆಗೆ ಚಾಲನೆ – ಯಾವ ನಗರಗಳಲ್ಲಿ ಆರಂಭದಲ್ಲಿ ಸಿಗುತ್ತೆ? ಎಷ್ಟು ಸ್ಪೀಡ್ ಇರುತ್ತೆ?

    Live Tv
    [brid partner=56869869 player=32851 video=960834 autoplay=true]

  • ನಮ್ಮ ಸರ್ಕಾರ ಸಮರ್ಥವಾಗಿದೆ, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುತ್ತೇವೆ: ಸಿ.ಪಿ.ಯೋಗೇಶ್ವರ್

    ನಮ್ಮ ಸರ್ಕಾರ ಸಮರ್ಥವಾಗಿದೆ, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುತ್ತೇವೆ: ಸಿ.ಪಿ.ಯೋಗೇಶ್ವರ್

    ರಾಮನಗರ: ನಮ್ಮ ಸರ್ಕಾರ ಸಮರ್ಥವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಭರವಸೆ ಕೊಟ್ಟರು.

    ಮಂಗಳೂರು ಹತ್ಯೆ ಪ್ರಕರಣ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರಿಗೆ ಬೇಸರವಾಗಿದೆ ಅದಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದೆ ಅವರನ್ನು ಸಮಾಧಾನ ಮಾಡ್ತೇವೆ. ನಮ್ಮ ಸರ್ಕಾರ ಸಮರ್ಥವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಾವನಾತ್ಮಕ ವಿಷಯ ಕೆದಕಿ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹೊರಟಿವೆ: ಹೆಚ್‍ಡಿಕೆ ಕಿಡಿ

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಕೊಡಿ ಎಂಬ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದು, ಅವರು ಕಾಂಗ್ರೆಸ್‍ನವರು, ಪಕ್ಷದ ಪರವಾಗಿ ಕೇಳಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತ. ಮತ್ತೆ ನಮ್ಮ ಸರ್ಕಾರ ಬರಲಿ ಎಂದು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕೇಳ್ತೇನೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಸುಮಲತಾರನ್ನ ಬಿಜೆಪಿ ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ: ಸಿ.ಪಿ ಯೋಗೇಶ್ವರ್

    ಸುಮಲತಾರನ್ನ ಬಿಜೆಪಿ ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ: ಸಿ.ಪಿ ಯೋಗೇಶ್ವರ್

    ರಾಮನಗರ: ಮಂಡ್ಯ ಸಂಸದೆ ಸುಮಲತಾರನ್ನ ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

     

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಪಕ್ಷ ಅವರಿಗೆ ಬೆಂಬಲ ನೀಡಿತ್ತು. ಈ ಹಿನ್ನೆಲೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ಮಾಡಿದ್ದೇವೆ. ಮದುವೆ ಸಮಾರಂಭದಲ್ಲಿ ಅವರನ್ನ ಭೇಟಿ ಮಾಡಿದ್ದೆವು, ಸಿಎಂ ಸಹ ಇದ್ದರು. ಅವರು ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಮುಂದೆ ನೋಡೋಣ ಎಂದರು. ಇದನ್ನೂ ಓದಿ: ನಾನು ಬಿಜೆಪಿ ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ: ಸುಮಲತಾ ಅಂಬರೀಶ್‌

    ಮದ್ದೂರು ಕ್ಷೇತ್ರದಿಂದ ಅಭಿಷೇಕ್ ಅಂಬರೀಶ್ ಬಿಜೆಪಿಯಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುಮಲತಾ ಇನ್ನೂ ಪಕ್ಷಕ್ಕೆ ಬಂದಿಲ್ಲ. ಹೀಗಾಗಿ ಕೂಸು ಹುಟ್ಟುವ ಮೊದಲೇ ಕುಲಾವಿ ಬೇಡ. ಮಂಡ್ಯದ ಮಾಜಿ ಐಆರ್‍ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಅವರನ್ನು ಸಹ ಆಹ್ವಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಾಗಿ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದರು.

    ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಮುಂದಿನ ತಿಂಗಳಿನಿಂದ ಈ ಕಾರ್ಯಕ್ರಮ ಪ್ರಾರಂಭ ಆಗಲಿದೆ. ನಾನು ಆಪರೇಷನ್ ಎಕ್ಸ್‍ಪರ್ಟ್ ಅಲ್ಲ, ಆದರೆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಈ ಭಾಗದ ಮುಖಂಡನಾಗಿದ್ದೇನೆ, ಹಾಗಾಗಿ ನನಗೆ ಜವಾಬ್ದಾರಿ ಇದೆ. ಸಚಿವ ಸ್ಥಾನದ ಬಗ್ಗೆ ಗೊತ್ತಿಲ್ಲ, ಸಿಎಂಗೆ ಕೇಳಿ ಎಂದು ಸಿ.ಪಿ.ಯೋಗೇಶ್ವರ್ ಹೇಳಿದರು. ಇದನ್ನೂ ಓದಿ: ಟ್ವಿಟ್ಟರ್‌ ಆಯ್ತು ಈಗ ಕೋಕಾ ಕೋಲಾ ಖರೀದಿಸುತ್ತೇನೆಂದ ಎಲಾನ್‌ ಮಸ್ಕ್

  • ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ನಾನು ರಾಸಲೀಲೆ ಮಾಡಲು ಹೋಗ್ತಿರಲಿಲ್ಲ: ಹೆಚ್‍ಡಿಕೆ ಕಿಡಿ

    ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ನಾನು ರಾಸಲೀಲೆ ಮಾಡಲು ಹೋಗ್ತಿರಲಿಲ್ಲ: ಹೆಚ್‍ಡಿಕೆ ಕಿಡಿ

    ಬೆಂಗಳೂರು: ತಾಜ್ ವೆಸ್ಟೆಂಡ್‍ನಲ್ಲಿ ನಾನು ರಾಸಲೀಲೆ ಮಾಡಲು ಹೋಗುತ್ತಿರಲಿಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

    ಕುಮಾರಸ್ವಾಮಿಯವರು 14 ತಿಂಗಳು ತಾಜ್ ವೆಸ್ಟೆಂಡ್ ಹೊಟೆಲ್‍ನಲ್ಲಿದ್ದರು ಎಂಬ ಯೋಗೇಶ್ವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಸರ್ಕಾರಿ ಬಂಗಲೆ ಇರಲಿಲ್ಲ ಎನ್ನುವ ಕಾರಣಕ್ಕೆ ವಿಶ್ರಾಂತಿ ಪಡೆಯಲು ಆ ಹೊಟೆಲ್‍ಗೆ ಹೋಗುತ್ತಿದ್ದೆ. ಈಗಲೂ ನಾನು ತಾಜ್ ವೆಸ್ಟ್ ಹೊಟೆಲ್‍ಗೆ ಹೋಗುತ್ತಿರುತ್ತೇನೆ. ನನ್ನದು ತೆರೆದ ಪುಸ್ತಕ ಎಂದು ತಿರುಗೇಟು ನೀಡಿದರು.

    ನನ್ನ ಪಿಎ ಈಗಲೂ ಆ ಹೊಟೆಲ್‍ನಲ್ಲಿಯೇ ಇರುತ್ತಾರೆ. ನಾನು ಒಬ್ಬನೆ ಅಲ್ಲ ನನ್ನ ಜೊತೆ ಸಾ.ರಾ ಮಹೇಶ್ ಅವರು ಕೂಡಾ ಇರುತ್ತಿದ್ದರು. ಇದನ್ನೇಲ್ಲಾ ಇವನ ಹತ್ತಿರ ನೋಡಿ ಕಲಿಯಬೇಕಿತ್ತಾ? ನಾವೆಲ್ಲಾ ಹೋಟೆಲ್‍ನಲ್ಲಿದ್ದರೆ ಇವನೇನು ಗುಡಿಸಲಲ್ಲಿ ಇರುತ್ತಿದ್ದನಾ? ಇವನ ಬಗ್ಗೆ ನನಗೆ ಗೊತ್ತಿಲ್ಲವಾ ಇಲ್ಲೆ ಯು.ಬಿ ಸಿಟಿ ಪಕ್ಕದಲ್ಲಿ ಇವನು ಇದ್ದನು. ನನ್ನದು ಕದ್ದು ಮುಚ್ಚಿ ಯಾವುದೂ ಇಲ್ಲ ಎಂದರು.

    ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಚನ್ನಪಟ್ಟಣಕ್ಕೆ ಆಕಸ್ಮಿಕ ಅತಿಥಿಯಾಗಿ ಬರುತ್ತಿದ್ದರು ಎನ್ನುವ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಚನ್ನಪಟ್ಟಣದಲ್ಲಿ ನನ್ನದು ಮುಗಿದ ಅಧ್ಯಾಯ. ಅವನು ಖಾಸಗಿ ಬಸ್ ನಿಲ್ದಾಣಕ್ಕೆ 30ಕೋಟಿ ಪ್ರಾಜೆಕ್ಟ್ ಮಾಡಿ ಎಸ್ಟಿಮೇಟ್ ಮಾಡಿದ್ದನು. ಅವನ್ಯಾರೋ ಕಂಟ್ರಾಕ್ಟರ್ ಕೈಯಲ್ಲಿ ಗುಂಡಿ ಹೊಡೆಸಿದ್ದನು. ಅದಕ್ಕೆ ನಾನು ಹಣ ಕೊಡಿಸಬೇಕಾ. ಅಲ್ಲಿ ಹೋಗಿ ನೋಡಿ ಇನ್ನೂ ಅದಕ್ಕೆ ತಗಡು ಹೊಡೆಸಿ ಇಟ್ಟಿದ್ದಾನೆ ಎಂದು ಗುಡುಗಿದರು. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

    ಅಂಬೇಡ್ಕರ್ ಭವನದಲ್ಲಿ ಗುಂಡಿ ಆಗಿ, ನೀರು ನಿಂತಿದೆ. ಅದನ್ನು ನಾನು ಹೋಗಿ ಕ್ಲೀನ್ ಮಾಡಿಸಬೇಕಾ? ನಾನು ಕಣ್ಣೀರು ಹಾಕಿಕೊಂಡು ಹೋಗಿಲ್ಲ. ನಾನು ಸಿಎಂ ಆಗಿದ್ದು ಚನ್ನಪಟ್ಟಣಕ್ಕೆ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ. ಕರ್ನಾಟಕ ರಾಜ್ಯದ ಸಮಸ್ಯೆ ಬಗೆಹರಿಸಲು. ಚನ್ನಪಟ್ಟಣಕ್ಕೆ ಶಾಸಕನಾಗಿ ಏನು ಕೆಲಸ ಮಾಡಿಸಬೇಕೋ ಎಲ್ಲಾ ಮಾಡಿದ್ದೇನೆ. ಇವನು ಸರ್ಟಿಫಿಕೇಟ್ ಕೊಡೋದಲ್ಲ. ನನ್ನನು ಆರಿಸಿ ತಂದ ಜನರು ಇದರ ಬಗ್ಗೆ ಮಾತಾಡಲಿ. ಮೆಗಾಸಿಟಿ ಅಂತ ಪ್ರಾಜೆಕ್ಟ್ ಮಾಡಲು ಹೋಗಿ ಸಾವಿರಾರು ಜನರನ್ನ ಬೀದಿ ಪಾಲು ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ: ಎಚ್‍ಡಿಕೆ ವಿರುದ್ಧ ಏಕವಚನದಲ್ಲೇ ಸಿಪಿವೈ ಕಿಡಿ

    ಈ ಹಿಂದೆ ಸಿನಿಮಾ ತೆಗೆದು ಎಲ್ಲರನ್ನೂ ಹಾಳು ಮಾಡಿದ. ಕಂಡೋರ ದುಡ್ಡು ತೆಗೆದುಕೊಂಡು ಹಾಳು ಮಾಡಿದ. ಇವನು ನನ್ನ ವಿರುದ್ಧ ಆರೋಪ ಮಾಡ್ತಾನಾ? ಯಾವುದೇ ಚರ್ಚೆಗೆ ನಾನು ಸಿದ್ಧ. ಬರಲಿ ಚನ್ನಪಟ್ಟಣದಲ್ಲಿಯೇ ಚರ್ಚೆ ಮಾಡೋಣ. ನಾನು ದಲಿತರ ಜಮೀನು ಹೊಡೆದಿದ್ದೇನಂತೆ. ಇವನೇನು ಸಾಚಾ ಅಲ್ಲ ಮೆಗಾಸಿಟಿ ಮಾಡಿ ಲೂಟಿ ಹೊಡೆದು ಜನರು ಬೀದಿ ಪಾಲಾಗಿದ್ದಾರೆ. ಸೈನಿಕ ಅಂತ ಸಿನಿಮಾ ಮಾಡಲು ಹೋಗಿದ್ದ. ಇಂದಿಗೂ ಆ ಚಿತ್ರಕ್ಕೆ ಹಣ ಹಾಕಿದವರು ಬೀದಿಪಾಲಾಗಿದ್ದಾರೆ. ಚನ್ನಪಟ್ಟಣದ ನಮ್ಮ ಸಂಬಂಧ ಇವನು ಚಡ್ಡಿ ಹಾಕಿದ್ದನೋ ಇಲ್ಲವೋ, ಆಗಲೇ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣದ ಸಂಬಂಧ ಇತ್ತು. ಮುಖಾಮುಖಿ ಚರ್ಚೆಗೆ ನಾನು ಸಿದ್ದ. ಬರಲಿ ಯಾವ ವಿಚಾರ ಚರ್ಚೆ ಮಾಡ್ತಾನೆ ನೋಡುತ್ತೇನೆ ಎಂದು ಸಿಡಿದರು.

  • ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ: ಎಚ್‍ಡಿಕೆ ವಿರುದ್ಧ ಏಕವಚನದಲ್ಲೇ ಸಿಪಿವೈ ಕಿಡಿ

    ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ: ಎಚ್‍ಡಿಕೆ ವಿರುದ್ಧ ಏಕವಚನದಲ್ಲೇ ಸಿಪಿವೈ ಕಿಡಿ

    ರಾಮನಗರ: ಕುಮಾರಸ್ವಾಮಿ ವಿಚಾರ ಇಡೀ ಕರ್ನಾಟಕದ ಜನರಿಗೆ ಗೊತ್ತಿದೆ. ಈ ವಿಚಾರವನ್ನು ನನ್ನ ಬಾಯಿಯಿಂದ ಕೇಳಬೇಡಿ. ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ ಎಂದು ವೈಯಕ್ತಿಕವಾಗಿ ಏಕವಚನದಲ್ಲಿಯೇ  ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

    ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಆಕಸ್ಮಿಕವಾಗಿ ಅತಿಥಿಯಾಗಿ ಬಂದರು. ಚುನಾವಣೆಯಲ್ಲಿ ಗೆದ್ದರು ನಂತರ ಹೋದರು. ನಾನು ತಾಲೂಕಿನಲ್ಲಿ ಯಾರ ಜಮೀನನ್ನು ಹೊಡೆದಿಲ್ಲ, ಆ ರೀತಿಯ ಆಪಾದನೆ ನನ್ನ ಮೇಲಿಲ್ಲ. ಆದರೆ ಕುಮಾರಸ್ವಾಮಿ ಮೇಲೆ ಬಿಡದಿಯಲ್ಲಿ ದಲಿತರ ಜಮೀನು ಹೊಡೆದುಕೊಂಡರು ಎಂಬ ಅಪಾದನೆ ಇದೆ. ಬಿಡದಿಯಲ್ಲಿ ಬಂಗಲೆ ಕಟ್ಟಿದ್ದಾನಲ್ಲ ಅದು ದಲಿತರ ಜಮೀನು ಎಂಬ ಆಪಾದನೆ ಇದೆ. ನಾಲಿಗೆ ಬಿಗಿಹಿಡಿದು ಮಾತಾಡಪ್ಪ, ಇಲ್ಲ ಬಹಿರಂಗವಾಗಿ ಚರ್ಚೆಗೆ ಬಾ ಎಂದಿದ್ದೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ಡಿ.ಕೆ.ಬ್ರದರ್ಸ್ ಬಗ್ಗೆ ಏನಾದರೂ ಮಾತನಾಡಿಕೊಳ್ಳಲಿ, ಅದು ಅವರ ವಿಚಾರ. ನನ್ನ ಬಗ್ಗೆ ಮಾತನಾಡಿದರೆ ಅದು ಕುಮಾರಸ್ವಾಮಿಗೆ ಗೌರವ ಅಲ್ಲ. ನಾನು ನೀನು 2023ಕ್ಕೆ ಮತ್ತೆ ಚುನಾವಣೆಯಲ್ಲಿ ಮುಖಾಮುಖಿ ಆಗುತ್ತಿದ್ದೇನೆ. ನಿನ್ನ ಹೆಂಡತಿ ಮೇಲೆ ಗೆದ್ದಿದ್ದೇನೆ. ನಿನ್ನ ಮೇಲೆ ಸೋತಿದ್ದೇನೆ. ಆದರೆ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಭಾವನಾತ್ಮಕವಾಗಿ ಜನರನ್ನು ಯಾಮಾರಿಸುತ್ತಿದ್ದ ಕಾಲ ಹೋಯಿತು. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ನಿನಗೆ ಗೌರವ ಅಲ್ಲ. ಮತ್ತೆ ಎಚ್ಚರಿಕೆ ಕೊಡುತ್ತಿದ್ದೇನೆ. ಬಹಿರಂಗವಾಗಿ ನಿನ್ನನ್ನ ಹಿಡಿದು ಅಡ್ಡಹಾಕಿ ಕೇಳುತ್ತೇನೆ ಎಂದು ಹರಿಹಾಯ್ದಿದ್ದಾರೆ.

    ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ. ನನ್ನ ಬಗ್ಗೆ ಹತಾಷೆಯಿಂದ ಮಾತನಾಡುತ್ತಿದ್ದಾನೆ. ಕುಮಾರಸ್ವಾಮಿಗೆ ನಮ್ಮ ಪಕ್ಷದವರೇ ರಾಜಕೀಯವಾಗಿ ಸಪೋರ್ಟ್ ಕೊಡುತ್ತಿದ್ದಾರೆ. ಅವನನ್ನು ಸಿಕ್ಕಾಪಟ್ಟೆ ಹೊಗಳುವ ಅವಶ್ಯಕತೆ ಇಲ್ಲ. ಅವನು ಜನಾಭಿಪ್ರಾಯ ಕಳೆದುಕೊಂಡಿರುವ ವ್ಯಕ್ತಿ. ನಮ್ಮ ಪಕ್ಷದ ನಾಯಕರಿಗೆ ಬುದ್ಧಿ ಇಲ್ಲ, ಅವನನ್ನ ಓಲೈಸುತ್ತಾರೆ, ಇದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. ಇದನ್ನೂ ಓದಿ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಬಿಜೆಪಿ ಧನ್ಯವಾದ

    ಜೆಡಿಎಸ್ ಜೊತೆಗೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ನಮಗೆ ಅಂತಹ ಅನಿವಾರ್ಯತೆ ಇಲ್ಲ. ಈ ಬಗ್ಗೆ ಅರುಣ್ ಸಿಂಗ್‍ರವರೇ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಇವತ್ತು ನೆಲಕಚ್ಚಿದೆ. ಜನಾಭಿಪ್ರಾಯ ಕಳೆದುಕೊಂಡಿದೆ. ಅವರಿಗೆ ರಾಜಕೀಯ ಅಸ್ತಿತ್ವ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕು. ಹಾಗಾಗಿ ಸ್ವತಂತ್ರವಾಗಿ ಇರಬೇಕು, ಜೆಡಿಎಸ್ ಜೊತೆಗೆ ಕೈಜೋಡಿಸಬಾರದು. ಕುಮಾರಸ್ವಾಮಿಗೆ ಶಕ್ತಿ ಕೊಟ್ಟರೆ ಮತ್ತೆ ಘಟಬಂಧನ್ ಮಾಡುತ್ತಾರೆ.

    ಸಿಎಂ ಆಗಿದ್ದಾಗ 14 ತಿಂಗಳು ನಮ್ಮ ತಾಲೂಕಿಗೆ ಬರಲಿಲ್ಲ. ಮತ್ತೆ ಇನ್ನೇನು ಕೆಲಸ ಮಾಡುತ್ತಾನೆ. ಕೇವಲ ಒಂದು ಗಂಟೆ ಸಮಯ ಕೊಟ್ಟಿದ್ದರೆ ತಾಲೂಕಿನ, ಜಿಲ್ಲೆಯ ಸಮಸ್ಯೆ ಬಗೆಹರಿಯುತ್ತಿತ್ತು. ಆಗ ರಾಸಲೀಲೆ ಮಾಡಿಕೊಂಡು ಈಗ ಜನರ ಮುಂದೆ ಕಣ್ಣಿರು ಸುರಿಸುವುದು ಶೋಭೆ ಅಲ್ಲ. 14 ತಿಂಗಳು ಫೈವ್ ಸ್ಟಾರ್ ಹೋಟೆಲ್‍ನಲ್ಲಿದ್ರಲ್ಲ ರೀ.. ಅವಯ್ಯನಿಗೆ ಬಹುವಚನದಿಂದ ಗೌರವ ಕೊಡುವುದು ಸೂಕ್ತ ಅಲ್ಲ. ಇನ್ನು ಮುಂದೆ ಏಕವಚನದಲ್ಲಿಯೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

    ನಾವೇನು ಅವನಿಗೆ ಹಿಟ್ ಅಂಡ್ ರನ್ ಕೇಸ್ ಇಲ್ಲ, ನೇರವಾಗಿಯೇ ಹೇಳುತ್ತೇನೆ. 2023ಕ್ಕೆ ಮುಖಾಮುಖಿ ಆದಾಗ ವೈಯಕ್ತಿಕ ವಿಚಾರ ನೋಡೋಣ. ಕುಮಾರಸ್ವಾಮಿ ವಿಚಾರ ಇಡೀ ಕರ್ನಾಟಕದ ಜನರಿಗೆ ಗೊತ್ತಿದೆ. ಈ ವಿಚಾರವನ್ನು ನನ್ನ ಬಾಯಿಯಿಂದ ಕೇಳಬೇಡಿ, ನಿಮಗೂ ಗೊತ್ತಿದೆ. ನನ್ನಿಂದ ಯಾಕಪ್ಪ ಆ ಅಣಿಮುತ್ತುಗಳನ್ನು ಕೇಳಿಸುತ್ತೀರಿ. ಕುಮಾರಸ್ವಾಮಿ ಅವರನ್ನು ನನ್ನನ್ನು ಒಟ್ಟಿಗೆ ಕೂರಿಸಿ ವೈಯಕ್ತಿಕ ವಿಚಾರ, ಸಾರ್ವಜನಿಕ ವಿಚಾರದ ಬಗ್ಗೆ ನೇರವಾಗಿ ಚರ್ಚೆ ಮಾಡುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

  • ಡಿಕೆ ಬ್ರದರ್ಸ್, ಕುಮಾರಸ್ವಾಮಿ ನನಗೆ ಸಮಾನ ಶತ್ರುಗಳು: ಸಿಪಿ ಯೋಗೇಶ್ವರ್

    ಡಿಕೆ ಬ್ರದರ್ಸ್, ಕುಮಾರಸ್ವಾಮಿ ನನಗೆ ಸಮಾನ ಶತ್ರುಗಳು: ಸಿಪಿ ಯೋಗೇಶ್ವರ್

    ರಾಮನಗರ: ನನಗೆ ಎಚ್‍ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಬ್ರದರ್ಸ್ ಇಬ್ಬರು 25 ವರ್ಷಗಳಿಂದ ವಿರೋಧವೆ. ನನಗೆ ಇಬ್ಬರು ನಾಯಕರು ಕೂಡ ಸಮಾನ ಶತ್ರುಗಳು ಎಂದು ಬಿಜೆಪಿ ಎಂಎಲ್‍ಸಿ ಸಿಪಿ ಯೋಗೇಶ್ವರ್ ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಕ್ಷೇತ್ರದ ಮೇಲಿನ ಉದಾಸೀನತೆ ಅವರ ಆಡಳಿತ ವೈಫಲ್ಯದಿಂದ ಬೇಸತ್ತು ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಕ್ಷೇತ್ರದ ಜನಕ್ಕೆ ಕುಮಾರಸ್ವಾಮಿ ಮೇಲೆ ಹತಾಶ ಮನೋಭಾವ ಬೆಳೆದಿದೆ. ಅವರ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಿಂದ ಜನರು ಬೇಸತ್ತು ಹೋಗಿದ್ದಾರೆ. 3-4 ಮಂದಿ ಕಂಟ್ರಾಕ್ಟರ್ ಮೂಲಕ ತಾಲೂಕು ಆಡಳಿತ ನಡೆಸುವ ಕೆಲಸ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ನಾನು ಚನ್ನಪಟ್ಟಣದಲ್ಲಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲಾ. ಇದು ಚುನಾವಣಾ ಸಂದರ್ಭ ಅಲ್ಲಾ ಹಾಗಾಗಿ ಹಣ ಕೊಟ್ಟು ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುತ್ತಿಲ್ಲಾ. ಅವರ ಪಕ್ಷದಿಂದ ಬೇಸತ್ತು ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಬರುತ್ತಿದ್ದಾರೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಇಡಿಯಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅರೆಸ್ಟ್

    ಇದೀಗ ಕುಮಾರಸ್ವಾಮಿ ಮುಂಜಾನೆ ಎದ್ದು ತಾಲೂಕಿಗೆ ಬರುತ್ತಿದ್ದಾರೆ. ತಿಥಿ, ಮದುವೆಗಳಿಗೆ ಬರುತ್ತಿದ್ದಾರೆ ಕಳೆದ 4 ವರ್ಷಗಳಿಂದ ಕುಮಾರಸ್ವಾಮಿ ಎಲ್ಲಿ ಹೋಗಿದ್ರು?. ನಾನು ಕ್ಷೇತ್ರ ಪ್ರವಾಸ ಕೈಗೊಂಡ ಮೇಲೆ ಎಚ್‍ಡಿಕೆ ಆಕ್ಟಿವ್ ಆಗಿದ್ದಾರೆ. ನನ್ನ ಹಾಗೂ ಕುಮಾರಸ್ವಾಮಿ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲಾ ಮುಂದೆಯೂ ನಡೆಯುವುದಿಲ್ಲಾ. ನನಗೆ ಯಾವ ಸಚಿವ ಸ್ಥಾನವು ಬೇಡ ಕೇವಲ ಪಕ್ಷ ಸಂಘಟನೆ ಮಾತ್ರ ಸಾಕು. ನನ್ನ ಇತಿಮಿತಿಯಲ್ಲಿ ಎಲ್ಲೆಲ್ಲಾ ಪಕ್ಷ ಸಂಘಟನೆ ಮಾಡಬಹುದು ಅಂತಹ ಕಡೆ ಸಂಘಟನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು

    ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಮಾಜದಲ್ಲಿ ಬೆಳಕು ಕಾಣಬೇಕಿದ್ದ ಒಬ್ಬ ಯುವಕನನ್ನು ಕೊಲೆ ಮಾಡಲಾಗಿದೆ. ಸರ್ಕಾರ ಕೂಡ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ. ನಾನು ವೈಯಕ್ತಿಕವಾಗಿ ಹರ್ಷ ಅವರ ಕುಟುಂಬಕ್ಕೆ ಒಂದು ಲಕ್ಷ ನೀಡುತ್ತೇನೆ. ಅಮಾಯಕ ಯುವಕರಲ್ಲಿ ಭಯ ಹುಟ್ಟಿಸುವಂತದ್ದು ನಾಚಿಕೆ ಗೇಡಿನ ಸಂಗತಿ. ಹಿಂದೂ ಧರ್ಮದ ಪರವಾಗಿ ಕೆಲಸ ಮಾಡುತ್ತಿದ್ದ ಯುವಕ ಅವನು. ಅವನ ಹೋರಾಟವನ್ನು ಹತ್ತಿಕ್ಕಲು ಕೊಲೆ ಮಾಡಲಾಗಿದೆ. ಸರ್ಕಾರ ಈ ವಿಚಾರದಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನ ತಗೆದುಕೊಳ್ಳಬೇಕು. ಹಿಜಬ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಗೆ ಹಿನ್ನಡೆಯಾಗಿದೆ ಹಾಗಾಗಿ ಸಚಿವ ಈಶ್ವರಪ್ಪ ಮೇಲೆ ಇಲ್ಲ, ಸಲ್ಲದ ಆರೋಪ ಮಾಡಿ ಇಡೀ ಸದನದ ಕಲಾಪವನ್ನೆ ಮೊಟಕು ಗೊಳಿಸುವ ರೀತಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಪುಂಡನ ಜೊತೆ ಸಿದ್ದು ಹಜ್ಜೆ, ಮೇಕೆದಾಟು ಪಾದಯಾತ್ರೆ ಅಲ್ಲ ಇದು ದಂಡಯಾತ್ರೆ: ಯೋಗೇಶ್ವರ್

    ಪುಂಡನ ಜೊತೆ ಸಿದ್ದು ಹಜ್ಜೆ, ಮೇಕೆದಾಟು ಪಾದಯಾತ್ರೆ ಅಲ್ಲ ಇದು ದಂಡಯಾತ್ರೆ: ಯೋಗೇಶ್ವರ್

    ರಾಮನಗರ: ಹಣ ನೀಡಿ ಬೇರೆ ಬೇರೆ ಜಿಲ್ಲೆಯಿಂದ ಜನರನ್ನು ಕರೆತಂದು ಅವರಿಗೆ ಕೊರೊನಾ ಅಂಟಿಸಿ ಕಳುಹಿಸುವ ಕೆಲಸವನ್ನು ಡಿಕೆಶಿ ಬ್ರದರ್ಸ್ ಮಾಡುತ್ತಿದ್ದಾರೆ. ಇದರಿಂದಾಗಿ ಶಿವಕುಮಾರ್ ಹಾಗೂ ಅವರ ತಂಡವನ್ನು ಅರೆಸ್ಟ್ ಮಾಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡುತ್ತೇನೆ ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯಂತ ಭ್ರಷ್ಟನನ್ನು, ಲೂಟಿಕೋರನನ್ನು ಒಂದು ವರ್ಷ ಸಿದ್ದರಾಮಯ್ಯ ಕ್ಯಾಬಿನೆಟ್‍ಗೆ ತಗೆದುಕೊಂಡಿರಲಿಲ್ಲ. ಆದರೆ ಆನಂತರ ಹೈಕಮಾಂಡ್ ಒತ್ತಡಕ್ಕೆ ತಗೆದುಕೊಂಡರು. ಸಿದ್ದರಾಮಯ್ಯ ಈಗ ವೀಕ್ ಆಗಿದ್ದಾರೆ ಎನ್ನಿಸುತ್ತದೆ. ಈ ಪುಂಡರ ಜೊತೆ ಅವರು ನಡೆಯುತ್ತಿದ್ದಾರೆ. ಆಗಾಗ ಬರ್ತಾರೆ ವಾಪಾಸ್ ಹೋಗ್ತಾರೆ ಎಂದು ವ್ಯಂಗ್ಯವಾಡಿದರು.

    ಕೊರೊನಾ ದಿನೇ ದಿನೇ ಹೆಚ್ಚಳವಾಗುತ್ತಿದೆ. ಆದರೂ ಕಳೆದ 4 ದಿನದಿಂದ ಮೇಕೆದಾಟು ಹೆಸರಿನಲ್ಲಿ ಶಿವಕುಮಾರ್ ಹಾಗೂ ಅವರ ಪಟಾಲಂ ದಂಡಯಾತ್ರೆ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಹೈ ಕೋರ್ಟ್ ಸೂಚನೆ ನೀಡಿದೆ. ಆದರೂ ಇದರ ತೀವ್ರ ಉದ್ದೇಶವನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

    ಸರ್ಕಾರ ಕೊರೊನಾ ಸರಿಯಾಗಿ ನಿರ್ವಹಿಸಲಿಲ್ಲ ಎಂದು ಇದೇ ಡಿ.ಕೆ.ಶಿವಕುಮಾರ್ ಮತ್ತು ಪಟಾಲಂ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಬಹಳಷ್ಟು ದಾಂಧಲೆಯನ್ನು ಮಾಡಿತ್ತು. ಆದರೂ ಕೊರೊನಾ ಹೆಚ್ಚಳವನ್ನು ಅರ್ಥ ಮಾಡಿಕೊಳ್ಳದೇ ಮೇಕೆದಾಟುವನ್ನು ಮಾಡುತ್ತಿದ್ದಾರೆ ಎಂದ ಅವರು, ಕಾವೇರಿ ನಮ್ಮ ನರನಾಡಿಯಲ್ಲಿದೆ. ನಾವೆಲ್ಲಾ ಅದನ್ನೆ ಕುಡಿದು ಬೆಳೆದೆವು. ಹಳೆ ಮೈಸೂರು ಭಾಗದ ಜೀವನಾಡಿ ಆಗಿದೆ ಎಂದರು. ಇದನ್ನೂ ಓದಿ: ಸರ್ಕಾರ ಯಾವುದೇ ಆದೇಶ ನೀಡಲಿ ಪಾದಯಾತ್ರೆ ನಿಲ್ಲಲ್ಲ: ಡಿ.ಕೆ ಸುರೇಶ್

    ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೇ ಅವರ ಕಾವೇರಿ ನೀರಿನ ಕುರಿತಾಗಿ ಕೋರ್ಟ್ ಆದೇಶ ಬಂದಿತ್ತು. ಆದರೂ ಸಿದ್ದರಾಮಯ್ಯ ಡಿಕೆಶಿ ಅಧಿಕಾರದಲ್ಲಿದ್ದಾಗ ಸುಧೀರ್ಘ ಅಧಿಕಾರದಲ್ಲಿದ್ದಾಗಲೂ ಏನನ್ನು ಮಾತನಾಡಲಿಲ್ಲ. ಡಿಕೆಶಿ ಪ್ರತಿ ಮಾತಿಗೂ ಸಾಕ್ಷಿ ಗುಡ್ಡೆ ಎನ್ನುತ್ತಾರೆ. ಅವರು ಏನು ಸಾಕ್ಷಿಯನ್ನು ಇಟ್ಟಿದ್ದಾರೆ ಎಂದ ಅವರು, ಇದು ಡೋಂಗಿ ಪಾದಯಾತ್ರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಡೊಂಬರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

  • ಮತ್ತೆ ಕಾಂಗ್ರೆಸ್ ಸೇರಿದ್ರೆ ಆತ್ಮಹತ್ಯೆ ಮಾಡಿಕೊಂಡಂತೆ: ಸಿಪಿವೈ

    ಮತ್ತೆ ಕಾಂಗ್ರೆಸ್ ಸೇರಿದ್ರೆ ಆತ್ಮಹತ್ಯೆ ಮಾಡಿಕೊಂಡಂತೆ: ಸಿಪಿವೈ

    ರಾಮನಗರ: ನಾನು ಮತ್ತೆ ಡಿಕೆಶಿಯವರ ಜೊತೆ ಕಾಂಗ್ರೆಸ್ ಸೇರಿದರೆ ಆತ್ಮಹತ್ಯೆ ಮಾಡಿಕೊಂಡಂತೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

    ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಕಾಂಗ್ರೆಸ್ ಸೇರುವ ಸುದ್ದಿ ಕಪೋಲಕಲ್ಪಿತವಾದದ್ದು, ನನಗೆ ಶಿವಕುಮಾರ್ ರಿಂದ ಕಾಂಗ್ರೆಸ್‍ನಲ್ಲಿ ಕಿರುಕುಳವಾಗಿದೆ. ಎರಡು ಬಾರಿ ನನಗೆ ಕಾಂಗ್ರೆಸ್‍ನಲ್ಲಿ ಟಿಕೆಟ್ ತಪ್ಪಿಸಿದ್ದರು ಎಂದು ದೂರಿದರು. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

    ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದರ ನಡುವೆ ನಡೆದ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಸುರೇಶ್ ಕಾರ್ಯಕರ್ತರು ಕಾರ್ಯಕ್ರಮವನ್ನ ಹಾಳು ಮಾಡಿದ್ದಾರೆ. ಅವರಿಗೆ ಕಾರ್ಯಕ್ರಮ ನಡೆಯುವುದು ಇಷ್ಟವಿರಲಿಲ್ಲ. ಅವರ ನಡವಳಿಕೆ ಅವರ ಹಿನ್ನೆಲೆ ತೋರಿಸುತ್ತದೆ. ಅವರ ಈ ಗುಂಡಾಗಿರಿ ವರ್ತನೆ ನಿಲ್ಲಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಸಹ ಅವರಿಗೆ ಸಹಕಾರ ಕೊಡುತ್ತಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

    ಹಿಂದೆ ನಾನು ಅರಣ್ಯ ಸಚಿವನಾಗಿದ್ದಾಗ, ಅವರ ಅಕ್ರಮ ಕಲ್ಲಿನ ಕ್ವಾರಿಗಳನ್ನ ಬಂದ್ ಮಾಡಿಸಿದ್ದೆ. ನಂತರ ಯುಪಿಎನಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ನನ್ನ ವಿರುದ್ಧ 25 ಕೇಸ್ ಹಾಕಿಸಿದ್ದರು. ವೀರಪ್ಪ ಮೋಯ್ಲಿ ರವರ ಬಳಿ ಹೋಗಿ ಕೇಸ್ ಹಾಕಿಸಿದ್ದರು. ಆಗ ನಾನು ಮೋಯ್ಲಿಯವರನ್ನ ಭೇಟಿ ಮಾಡಿದ್ದು, ಅವರು ಶಿವಕುಮಾರ್ ಈ ರೀತಿ ಹೇಳಿದ್ದಾರೆ ಅಂದಿದ್ದರು. ಡಿಕೆಶಿಯವರು 7 ಬಾರಿ ಶಾಸಕರಾಗಿದ್ದಾರೆ. ಅವರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಸಿಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ

    ಸಿಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ

    ಮಂಡ್ಯ: ಮಾಜಿ ಸಚಿವ, ಬಿಜೆಪಿ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಗೆ ಕಾನೂನು ಕಂಟಕ ಪ್ರಾರಂಭವಾಗಿದೆ.

    ನಿಶಾ ಯೋಗೇಶ್ವರ್ ಸರಿಯಾಗಿ ಬಾಡಿಗೆ, ಕಂದಾಯ ಪಾವತಿ ಮಾಡದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಕಾನೂನು ಹೋರಾಟಕ್ಕೆ ನಿರ್ಧಾರಿಸಲಾಗಿದೆ. ನಿಶಾ ಅವರು ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಮಾಲೀಕರಾಗಿದ್ದು, ಈ ಕಂಪನಿ 2017ರಲ್ಲಿ ಗೋದಾಮು ಬಾಡಿಗೆಗೆ ಪಡೆದುಕೊಂಡಿತ್ತು. ಗೋದಾಮು ಮಂಡ್ಯ ಜಿಲ್ಲೆಯ ಮದ್ದೂರಿನ ಟಿಎಪಿಸಿಎಂಎಸ್ ಗೆ ಸೇರಿದೆ. ಇದನ್ನೂ ಓದಿ: ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್

    ಈ ಕಂಪನಿ ಒಪ್ಪಂದದಂತೆ ಬಾಡಿಗೆ, ಕಂದಾಯವನ್ನು ಪಾವತಿ ಮಾಡುತ್ತಿಲ್ಲ. ಏ.2018ರಿಂದಲೂ ಬಾಡಿಗೆ, ಕಂದಾಯ ಪಾವತಿಸಿಲ್ಲ ಎಂದು ಆರೋಪ ಮಾಡಲಾಗಿದೆ. ಗೋದಾಮು ಬಾಡಿಗೆ ಇನ್ನೂ 42.47 ಲಕ್ಷ ಬಾಕಿ ಇದೆ. ಖಾಲಿ ಜಾಗದ ನೆಲ ಬಾಡಿಗೆ 1.09ಲಕ್ಷ ಬಾಕಿ ಇದೆ. ಪುರಸಭೆಯ ಕಂದಾಯ 4.78 ಲಕ್ಷ ರೂ. ಬಾಕಿ ಇದೆ. ಈ ಪರಿಣಾಮ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಕಾನೂನು ಕ್ರಮಕ್ಕೆ ನಿರ್ಧರಿಸಿದೆ.

  • ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳ ಸಂಗಮ

    ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳ ಸಂಗಮ

    ರಾಮನಗರ: ರಾಜಕೀಯ ಬದ್ಧ ವಿರೋಧಿಗಳಾದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ಡಿ.ಕೆ.ಸುರೇಶ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

    ರಾಮನಗರದ ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ದಿ.ಕವಿ ಸಿದ್ದಲಿಂಗಯ್ಯ ನವರ ನುಡಿನಮನ ಕಾರ್ಯಕ್ರಮದಲ್ಲಿ ಮೂರು ಪಕ್ಷದ ನಾಯಕರು ವೇದಿಕೆ ಹಂಚಿಕೊಂಡರು. ವೇದಿಕೆ ಮೇಲಿದ್ದ ಕುಳಿತಿದ್ದ ಸಿ.ಪಿ.ಯೋಗೇಶ್ವರ್ ಮತ್ತು ಡಿ.ಕೆ.ಸುರೇಶ್ ನಗುತ್ತಲೇ ಮಾತಾಡೋದು ಕಂಡು ಬಂತು. ಇತ್ತ ಕುಮಾರಸ್ವಾಮಿ ಅವರನ್ನ ನೋಡಿದ ಯೋಗೇಶ್ವರ್ ಕಣ್ಸನ್ನೆ ಮಾಡಿ ಕಿರುನಗೆ ಬೀರಿದರು. ಯೋಗೇಶ್ವರ್ ರಿಯಾಕ್ಷನ್ ಕಂಡು ಡಿ.ಕೆ.ಸುರೇಶ್ ಸಹ ಮುಗಳ್ನಕ್ಕರು.

    ಯೋಗೇಶ್ವರ್ ಮೇಲಿನ ಸಿಟ್ಟನ್ನು ಕಾರ್ಯಕ್ರಮದ ಆಯೋಜಕರ ಮೇಲೆ ತೋರಿದ ಹೆಚ್.ಡಿ.ಕುಮಾರಸ್ವಾಮಿ, ಬೇಗ ಬೇಗ ಕಾರ್ಯಕ್ರಮ ನಡೆಸಿ, ಕೆಲಸವಿಲ್ಲದೇ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಒಟ್ಟಿನಲ್ಲಿ ಮೂವರು ನಾಯಕರನ್ನು ಒಂದೇ ವೇದಿಕೆಯಲ್ಲಿ ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದರು.