Tag: ಸಿ.ಪಿ.ಯೋಗೇಶ್ವರ್

  • ಹೆಚ್‌ಡಿಕೆ ಒಕ್ಕಲಿಗರನ್ನು ಓಲೈಸಲು ಬೇರೆ ಸಮುದಾಯಗಳನ್ನ ಒಡೆಯುತ್ತಿದ್ದಾರೆ : ಸಿಪಿವೈ

    ಹೆಚ್‌ಡಿಕೆ ಒಕ್ಕಲಿಗರನ್ನು ಓಲೈಸಲು ಬೇರೆ ಸಮುದಾಯಗಳನ್ನ ಒಡೆಯುತ್ತಿದ್ದಾರೆ : ಸಿಪಿವೈ

    ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರಿಗೆ ಅಭದ್ರತೆ ಕಾಡುತ್ತಿದೆ. ಹಾಗಾಗಿ ಒಕ್ಕಲಿಗರನ್ನು ಓಲೈಸಲು ಬೇರೆ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ವಾಗ್ದಾಳಿ ನಡೆಸಿದರು.

    ಚನ್ನಪಟ್ಟಣದಲ್ಲಿ ಸ್ವಾಭಿಮಾನಿ ಸಂಕಲ್ಪ ನಡಿಗೆ ಕಾರ್ಯಕ್ರಮದ ವೇಳೆ ಬ್ರಾಹ್ಮಣ ಸಮುದಾಯದ ಬಗ್ಗೆ ಹೆಚ್‌ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಒಕ್ಕಲಿಗರನ್ನು ಓಲೈಸಲು ಬೇರೆ ಬೇರೆ ಸಮುದಾಯಗಳನ್ನು ಕುಮಾರಸ್ವಾಮಿ ಒಡೆಯುತ್ತಿದ್ದಾರೆ. ಇದು ಬಹಳ ದಿನಗಳ ಕಾಲ ನಡೆಯಲ್ಲ. ಹಿಂದೆಯೂ ಹೀಗೆ ಮಾಡಿದ್ದರು. ಸಿದ್ದರಾಮಯ್ಯನ ವಿರುದ್ಧ ಹೇಳಿಕೆ ಕೊಟ್ಟು ಕೊಟ್ಟು ಒಕ್ಕಲಿಗರ ಪ್ರಚೋದನೆ ಮಾಡಿ ಒಂದಷ್ಟು ಸೀಟ್‌ಗಳನ್ನು ಗೆದ್ದಿದ್ದರು. ಆದರೆ ಈಗ ಜನ ಅರ್ಥ ಮಾಡಿಕೊಂಡಿದ್ದಾರೆ. ಈ ರೀತಿಯ ದ್ವೇಷದ ರಾಜಕಾರಣದಿಂದ ಏನೂ ಪ್ರಯೋಜನ ಆಗಲ್ಲ ಎಂದು ತಿರುಗೇಟು ನೀಡಿದರು‌.

    ಪ್ರಹ್ಲಾದ್ ಜೋಶಿಯವರನ್ನ (Pralhad Joshi) ಸಿಎಂ ಮಾಡ್ತಾರೆ ಎಂಬ ವಿಚಾರ‌ದ ಬಗ್ಗೆ ಮಾತನಾಡಿ, ಬಿಜೆಪಿಯಲ್ಲಿ (BJP) ಯಾರು ಬೇಕಾದ್ರೂ ಸಿಎಂ ಆಗ್ತಾರೆ. ನಮ್ಮದು ರಾಷ್ಟ್ರೀಯ ಪಕ್ಷ. ನಮಗೆ ಬಹುಮತ ಬಂದಾಗ ಯಾರು ಸಿಎಂ ಅಂತ ವರಿಷ್ಠರು ತೀರ್ಮಾನ ಮಾಡುತ್ತಾರೆ. ಪ್ರಹ್ಲಾದ್ ಜೋಶಿ ಯಾಕೆ ಸಿಎಂ ಆಗಬಾರದು. ಅವರು ಈಗಾಗಲೇ ಕೇಂದ್ರ ಸಚಿವರಾಗಿದ್ದಾರೆ. ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ಅವ್ರು ಸಿಎಂ ಆದ್ರೂ ತಪ್ಪೇನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂಪರ್ ಕೊಡುಗೆ ಸುಳಿವು ನೀಡಿದ ಸಚಿವ ಸುಧಾಕರ್

    ಹೆಚ್‌.ಡಿ ಕುಮಾರಸ್ವಾಮಿ ಅವರಿಗೆ ಭಯ ಶುರುವಾಗಿದೆ. ಅವರಿಗೆ ಯಾವುದೇ ಸಮುದಾಯದ ಪೂರ್ಣ ಬೆಂಬಲ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದೆ. ಹಾಗಾಗಿ ಅವರಿಗೆ ಅಭದ್ರತೆ ಕಾಡುತ್ತಿದೆ. ಅದಕ್ಕಾಗಿ ಏನೇನೋ ಹೇಳಿಕೆ ಕೊಡ್ತಿದ್ದಾರೆ ಎಂದು ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: BJP ಮುಖಂಡನಿಂದ ಭರ್ಜರಿ ಆಫರ್ – ಸೀರೆಗಾಗಿ ನಾರಿಯರ ನೂಕು ನುಗ್ಗಲು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ದರಾಮಯ್ಯ ಗೆದ್ರೆ ಮೋದಿ ಸೋಲುತ್ತಾರೆ: ಶಾಸಕ ಪುಟ್ಟರಂಗಶೆಟ್ಟಿ

    ಸಿದ್ದರಾಮಯ್ಯ ಗೆದ್ರೆ ಮೋದಿ ಸೋಲುತ್ತಾರೆ: ಶಾಸಕ ಪುಟ್ಟರಂಗಶೆಟ್ಟಿ

    ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೆದ್ದರೇ ಸಿಎಂ ಆಗೋದಷ್ಟೆ ಅಲ್ಲದೇ, ಪ್ರಧಾನಿ ಮೋದಿಯನ್ನು (Narendra Modi) ಸೋಲಿಸುತ್ತಾರೆ ಎಂದು ಶಾಸಕ ಪುಟ್ಟರಂಗಶೆಟ್ಟಿ (Puttaranga Shetty) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರನ್ನು ಕಂಡರೆ ಬಿಜೆಪಿಗೆ (BJP) ಭಯ. ಏಕೆಂದರೆ ಇಡೀ ದೇಶದಲ್ಲೇ ಮೋದಿ ಅವರನ್ನು ನೇರವಾಗಿ ವಾಗ್ದಾಳಿ ನಡೆಸುವುದು ಸಿದ್ದರಾಮಯ್ಯರೊಬ್ಬರೇ ಆಗಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಬಿಜೆಪಿ ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ (CP Yogeshwar) ಅವರ ವೈರಲ್‌ ಆದ ಆಡಿಯೋದಲ್ಲಿದ್ದ ಮೈಸೂರು ಭಾಗದ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಬಿಜೆಪಿಗೆ ಸೇರುವುದಲ್ಲ, ಬಿಜೆಪಿ ಅವರೇ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಹೇಳಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ, ಕಾಂಗ್ರೆಸ್‌ಗೆ ಬಿಜೆಪಿಯವರು ಬರುತ್ತಾರೆ. ಬಿಜೆಪಿಯವರು ಕಾಂಗ್ರೆಸ್‌ಗೆ ಬರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ನಮ್ಮ ನಾಯಕರೇ ಅವರನ್ನು ಸೇರಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಹುಡುಗಿ ಕೊಂದು ತಾನೂ ಆತ್ಮಹತ್ಯೆ

    ಹೆಚ್. ವಿಶ್ವನಾಥ್ ಬಿಜೆಪಿಗೆ ಹೋಗಿದ್ರು, ಆದರೆ ಇದೀಗ ಮತ್ತೆ ಕಾಂಗ್ರೆಸ್‌ಗೆ ಬರುತ್ತಿಲ್ವಾ? ಅದೇ ರೀತಿ ಎಂಟಿಬಿ ನಾಗರಾಜ್ ಸೀಟು ಕೊಟ್ರೆ ಕಾಂಗ್ರೆಸ್ ಸೇರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲಾ ಕಾದು ನೋಡಿ ಎಷ್ಟೆಷ್ಟು ಜನ ಬರ್ತಾರೆ ಎಂದು ಹೇಳಿದ ಅವರು, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಾರೆ ಎಂಬ ಸಚಿವರ ಹೇಳಿಕೆಯನ್ನು ಅಲ್ಲಗಳೆದರು. ಇದನ್ನೂ ಓದಿ: ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಮಡಿಕೇರಿಯ ಯುವಕ ಸಮುದ್ರಪಾಲು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಡಿಯೋ ವೈರಲ್ ಬೆನ್ನಲ್ಲೇ ಸಿಎಂ ಭೇಟಿ ಮಾಡಿದ ಸಿಪಿವೈ

    ಆಡಿಯೋ ವೈರಲ್ ಬೆನ್ನಲ್ಲೇ ಸಿಎಂ ಭೇಟಿ ಮಾಡಿದ ಸಿಪಿವೈ

    ಬೆಂಗಳೂರು: ಆಪರೇಷನ್ ಕಮಲ ಕುರಿತ ತಮ್ಮ ಆಡಿಯೋ ವೈರಲ್ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ (CP Yogeshwar) ಭೇಟಿ ಮಾಡಿದ್ದು, ಇದೀಗ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ. ಯೋಗೇಶ್ವರ್ ಅವರು, ಆಡಿಯೋ ನನ್ನದಲ್ಲ. ಅದು ಫೇಕ್ ಆಡಿಯೋ. ನಾವು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತೇವೆ. ನನ್ನ ವಿರೋಧಿಗಳ ಪ್ಲ್ಯಾನ್ ಇದಾಗಿದ್ದು, ದಿನ ಬೆಳಗಾದರೆ ಹೀಗೆಲ್ಲ ಮಾತಾಡುತ್ತಾರೆ. ಕುಮಾರಸ್ವಾಮಿ (HD Kumaraswamy) ವಿರುದ್ಧ ನಾನು ಗೆಲ್ಲುವ ವಿಶ್ವಾಸ ಇದೆ. ಕುಮಾರಸ್ವಾಮಿ ಕಳೆದ 5 ವರ್ಷ ಏನೂ ಮಾಡಿಲ್ಲ. ನೂರಕ್ಕೆ ನೂರು ನಾನೇ ಗೆಲ್ಲುತ್ತೇನೆ ಎಂದು ತಿಳಿಸಿದರು.

    ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವ ಸ್ಥಾನ ವಿಚಾರ ನನಗೆ ಗೊತ್ತಿಲ್ಲ. ನಾನು ಸಚಿವ ಆಗಬೇಕು ಅಂತ ಯಾವತ್ತೂ ವೈಯಕ್ತಿಕವಾಗಿ ಸಿಎಂ ಜತೆ ಮಾತಾಡಿಲ್ಲ. ಸಂಕ್ರಾಂತಿ ಬಳಿಕ ವಿಸ್ತರಣೆ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಮೇನಲ್ಲಿ ಚುನಾವಣೆ ಗೆದ್ದು ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ಮಂತ್ರಿ ಸ್ಥಾನ ಕೇಳುತ್ತೇನೆ ಎಂದು ಹೇಳಿದರು.

    ಸಿಪಿವೈ ಆಡಿಯೋದಲ್ಲಿ ಏನಿದೆ?:
    ಗುಬ್ಬಿ ಶ್ರೀನಿವಾಸ್, ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ, ಬೆಂಗಳೂರು ಗನ್ ಮಂಜು, ಡಾ. ಶ್ರೀನಿವಾಸ್ ಮೂರ್ತಿ ನೆಲಮಂಗಲ, ಅನ್ನದಾನಿ, ಡಿ.ಸಿ.ತಮ್ಮಣ್ಣ, ಮಂಡ್ಯ ಶ್ರೀನಿವಾಸ್, ಟಿ ನರಸೀಪುರ ಸಾರಾ ಮಹೇಶ್ ಯಾಕೆ ಸೋಲ್ತಾರೆ ಅಂತಾ ಆ ಮೇಲೆ ಹೇಳ್ತೀನಿ. ರಾಮನಗರ 3 ಅವರೆ ಒಂದು ಮೈನಸ್ ಕಟ್ ಮಾಡಿಕೊಳ್ತಿದ್ದೀನಿ. ಅದು ಯಾವುದಾದ್ರೂ ಆಗಬಹುದು.

    ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರೇ ಗೆಲ್ಲಬಹುದು ನಮ್ಮದೇನಿಲ್ಲ. ಎಷ್ಟಾಯ್ತು 12 ಆಯ್ತು. ಉತ್ತರ ಕರ್ನಾಟಕದಲ್ಲಿ 5 ಇದ್ರೂ ಅವರೇ ಶಾಸಕರು, ಅದ್ರಲ್ಲಿ ಈಗ ಮೂವರು ವಾಷ್‍ಔಟ್. ಉಳಿದರೋ ಇಬ್ಬರಲ್ಲಿ ಬಂಡಪ್ಪ ಕಾಶ್ಯಂಪೂರ್ ಹಾಗೂ ಇನ್ನೊಬ್ಬರು, ಇಬ್ರಲ್ಲಿ ಒಬ್ಬರಿಗೆ ಚಾನ್ಸ್ ಇದೆ. ಆದ್ರೂ ಎರಡು ಹಾಕ್ಕೊಂಡಿದ್ದೀನಿ. 15 ಆಯ್ತು. ಇನ್ನ ಮಧುಗಿರಿ ವೀರಭದ್ರಯ್ಯ, ಬೇಲೂರು ಲಿಂಗೇಶ್ ಈ ಸರಿ ಗೆಲ್ಲಲ್ಲ. ನಮ್ಮ ಜಿಲ್ಲಾಧ್ಯಕ್ಷ ಸುರೇಶ್ ಕಡಿಮೆ ಅಂತರದಲ್ಲಿ ಗೆಲ್ತಾನೆ. ಇದನ್ನೂ ಓದಿ: ಎಲ್ಲರ ಕಣ್ತಪ್ಪಿಸಿ ಸ್ಯಾಂಟ್ರೋ ರವಿ ಶಿಫ್ಟ್ – ವಿಐಪಿ ಗೇಟ್‍ನಲ್ಲಿ ಕರೆದೊಯ್ದ ಬಗ್ಗೆ ಹೆಚ್‍ಡಿಕೆ ಕಿಡಿ

    ಚಿಂತಾಮಣಿಯಲ್ಲಿ ಸಖತ್ ಫೈಟ್ ಇದೆ. ರೆಡ್ಡಿ ವಿರುದ್ಧ ಅವನು ಔಟ್, ಸಕಲೇಶಪುರದಲ್ಲಿ ಕುಮಾರಸ್ವಾಮಿ ನಮ್ಮಿಂದ ಲಾಸ್ಟ್ ಟೈಮ್ ಗೆದ್ದಿದ್ದ, ಈ ಬಾರಿ ಒಳ್ಳೆ ಕ್ಯಾಂಡೇಟ್ ಹಾಕಿದ್ದೀವಿ ಅವನು ಔಟ್. ಒಟ್ಟು 25 ಜನ ಸೋಲ್ತಾರೆ. ಸಾ.ರಾ.ಮಹೇಶ್ ಯಾಕೆ ಸೋಲ್ತಾನೆ ಅಂದ್ರೆ, ಅವನು ಗೆದ್ದಿರೋದು ಕಡಿಮೆ ಅಂತರದಲ್ಲಿ, ಇಬ್ಬರೂ ಒಕ್ಕಲಿಗರಾಗ್ತಾರೆ ಕಾಂಗ್ರೆಸ್‍ಗೆ ಚಾನ್ಸ್ ಇದೆ. ಕಳೆದ ಬಾರಿ ನಮ್ಮ ಬಿಜೆಪಿಯಿಂದ ಹಾಕಿರಲಿಲ್ಲ. ಹೊಂದಾಣಿಕೆ ಮಾಡಿಕೊಂಡಿದ್ವಿ ನಾವು ದೇವೇಗೌಡರು. ಅವರು ಬೇನಾಮಿ ಕುಮಾರಸ್ವಾಮಿ ತರ ಇದಾರೆ.

    ಜನಾಭಿಪ್ರಾಯದಿಂದ ಬಿಜೆಪಿ (BJP) ಸರ್ಕಾರ ಬರಲ್ಲ. ಆದ್ರೆ ನಾವು ಬಿಜೆಪಿ ಸರ್ಕಾರ ಮಾಡ್ತೀವಿ. ಮಾವಿನ ಹಣ್ಣು ಮರದಲ್ಲೇ ಹಣ್ಣಾಗೋದಕ್ಕೂ, ಕೆಮಿಕಲ್ ಹಾಕಿ ಹಣ್ಣು ಮಾಡೋದಕ್ಕೂ ವ್ಯತ್ಯಾಸಯಿದೆ. ಕಾಂಗ್ರೆಸ್ ಸ್ಟ್ರಾಂಗ್ ಇಲ್ಲ. ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯಗೆ ಪುನಃ ಪಟ್ಟ ಕಟ್ಟೋಕೆ ದೊಡ್ಡ ದೊಡ್ಡ ಲೀಡರ್‌ಗಳಿಗೆ ಯಾರಿಗೂ ಇಷ್ಟ ಇಲ್ಲ ಎಂದು ವೈರಲ್‌ ಆದ ಆಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಹೃದಯಾಘಾತ – ಸಂಸದ ಸಂತೋಖ್ ಸಿಂಗ್ ಚೌಧರಿ ನಿಧನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ

    ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ

    ರಾಮನಗರ: ಅಯೋಧ್ಯೆ (Ayodhya) ರಾಮಮಂದಿರ (RamMandir) ನಿರ್ಮಾಣಕ್ಕೆ ರಾಮನಗರದಿಂದ ಬೆಳ್ಳಿ ಇಟ್ಟಿಗೆ ಅರ್ಪಿಸಲಾಗುತ್ತಿದೆ.

    ಬೆಳ್ಳಿ ಇಟ್ಟಿಗೆಗೆ ರಾಮನ ಭಕ್ತರಿಂದ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ಸಮ್ಮುಖದಲ್ಲಿ ರಾಮನಗರ ಕೆಂಗಲ್ ಆಂಜನೇಯ ದೇವಾಲಯ, ರಾಮದೇವರ ಬೆಟ್ಟದಲ್ಲಿ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಪ್ರೀತಂಗೌಡ ನಮಗೆ ಅಣ್ಣನ ಸಮಾನ – ವೀಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ: ಸ್ಥಳೀಯರ ಆಕ್ರೋಶ

    ಬಿಜೆಪಿ (BJP) ಮುಖಂಡ ಗೌತಮ್ ಗೌಡ ನೇತೃತ್ವದಲ್ಲಿ 150 ಮಂದಿ ಶ್ರೀರಾಮನ ಭಕ್ತರು ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಸಮರ್ಪಿಸಲು ನಿರ್ಧರಿಸಲಾಯಿತು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ ಮಗಳು

    2024ಕ್ಕೆ ರಾಮಮಂದಿರ ಪೂರ್ಣ: ಇತ್ತೀಚೆಗೆ ರಾಮಜನ್ಮಭೂಮಿಯ ಟ್ರಸ್ಟ್ನ ಟ್ರಸ್ಟಿಗಳಾದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಪ್ರತಿಷ್ಠಾಪನಾ ಮಹೋತ್ಸವ 2024ರ ಮಕರ ಸಂಕ್ರಾಂತಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು.

    ಸಮಿತಿ ಸದಸ್ಯರೂ ಈ ಬಗ್ಗೆ ಮಾಹಿತಿ ನೀಡಿ, ಆಶಿಷ್ ಸೋಂಪುರ ಅವರು ಮಂದಿರದ ವಾಸ್ತುಶಿಲ್ಪಿಯಾಗಿದ್ದು, ನಿರ್ಮಾಣ ಸಮಿತಿಗೆ ನೃಪೇಂದ್ರ ಮಿಶ್ರಾ, ಪ್ರದೀಪ್ ಕುಮಾರ್ ಹಾಗೂ ಪ್ರೊ.ಗೋಪಾಲ ಕೃಷ್ಣನ್ ಇತರರು ಸದಸ್ಯರಿದ್ದಾರೆ. ಈಗಾಗಲೇ ಮಂದಿರದ ಇತರ ಭಾಗಗಳ ನಿರ್ಮಾಣ ಪ್ರಗತಿಯಲ್ಲಿದೆ. ರಾಜಸ್ಥಾನದ ಬನ್ಸಿ ಪಹಾಡ್‌ಪುರ ಜಿಲ್ಲೆಯಿಂದ ಮರಳುಗಲ್ಲುಗಳನ್ನು ತರಿಸಿಕೊಂಡು ಕೆತ್ತನೆ ಮಾಡಲಾಗುತ್ತಿದೆ. ಮಂದಿರದ ಮೇಲುಕಟ್ಟಡ ನಿರ್ಮಾಣಕ್ಕೆ 4.75 ಲಕ್ಷ ಕ್ಯೂಬಿಕ್ ಅಡಿ ಮರಳುಗಲ್ಲು ಬಳಸಲಾಗುತ್ತದೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಚನ್ನಪಟ್ಟಣದಲ್ಲಿ HDK V/s CPY- ಕ್ರೆಡಿಟ್ ವಾರ್‌ನಿಂದ ಕಾಮಗಾರಿ ಕುಂಠಿತ

    ಚನ್ನಪಟ್ಟಣದಲ್ಲಿ HDK V/s CPY- ಕ್ರೆಡಿಟ್ ವಾರ್‌ನಿಂದ ಕಾಮಗಾರಿ ಕುಂಠಿತ

    ರಾಮನಗರ: ವಿಧಾನಸಭಾ ಚುನಾವಣೆ (Vidhanasabha Election) ಸಮೀಪ ಹಿನ್ನೆಲೆ ಗೊಂಬೆನಾಡು ಚನ್ನಪಟ್ಟಣದಲ್ಲಿ ಇದೀಗ ರಾಜಕೀಯ ಜಟಾಪಟಿ ಉಂಟಾಗಿದೆ. ಹಾಲಿ ಮತ್ತು ಮಾಜಿ ಶಾಸಕರ ಕ್ರೆಡಿಟ್ ವಾರ್ ನಿಂದಾಗಿ ಕ್ಷೇತ್ರದ ಬಹುತೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ರಸ್ತೆ ಕಾಮಗಾರಿ ಆರಂಭವಾಗದೇ ಸಾರ್ವಜನಿಕರು ಹೈರಾಣಾಗಿದ್ದು ಜನಪ್ರತಿನಿಗಳ ವಿರುದ್ಧ ಹಿಡಿಶಾಪ ಹಾಕಿದ್ದಾರೆ.

    ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಇವೆ. ಬೊಂಬೆನಗರಿ ಚನ್ನಪಟ್ಟಣದಲ್ಲಿ ಚುನಾವಣಾ ಕಾವು ಜೋರಾಗುತ್ತಿದೆ. ರಸ್ತೆ ಕಾಮಗಾರಿ ವಿಚಾರದಲ್ಲೂ ರಾಜಕೀಯ ಜಟಾಪಟಿ ಏರ್ಪಟ್ಟಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ನಡುವಿನ ಈ ಜಟಾಪಟಿಯಲ್ಲಿ ಹಲವು ಕಾಮಗಾರಿಗಳು ಆರಂಭವಾಗದೇ ನೆನೆಗುದಿಗೆ ಬಿದ್ದಿವೆ. ರಸ್ತೆ ತುಂಬೆಲ್ಲಾ ಗುಂಡಿಗಳು ರಾರಾಜಿಸುತ್ತಿದ್ದು, ವಾಹನ ಚಲಾಯಿಸಲು ಸವಾರರು ಹರಸಾಹಸ ಪಡ್ತಿದ್ದಾರೆ. ಗುಂಡಿ ರಸ್ತೆಗಳಿಗೆ ಬಿದ್ದು ಜನ ಗಾಯಕ್ಕೊಳಗಾಗ್ತಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಕೆಂಗಲ್ ಗ್ರಾಮದಿಂದ ಕಣ್ವ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ತುಂಬೆಲ್ಲ ಸಾಲು ಸಾಲು ಗುಂಡಿಗಳು ಬಿದ್ದಿವೆ. ಸಾಕಷ್ಟು ಜನ ಗುಂಡಿ ತಪ್ಪಿಸಲು ಹೋಗಿ ಆಯಾತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ರಸ್ತೆ ಹದಗೆಟ್ಟು ಐದು ವರ್ಷಗಳೇ ಕಳೆದಿವೆ. ಇದನ್ನೂ ಓದಿ: ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ – ಸಿ.ಪಿ.ಯೋಗೇಶ್ವರ್

    ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರದಿಂದ ಅನುದಾನ ಸಹಾ ಬಿಡುಗಡೆಯಾಗಿದೆ. ಆದರೆ ಚನ್ನಪಟ್ಟಣ ತಾಲೂಕಿನಲ್ಲಿ ಪ್ರತಿಯೊಂದು ಕಾಮಗಾರಿ ವಿಚಾರವಾಗಿ ಮಾಜಿ ಸಿಎಂ ಎಚ್?.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟು ಕಾಮಗಾರಿಗಳು ನಡೆಯುತ್ತಿಲ್ಲ. ಇಬ್ಬರು ನಾಯಕರ ಜಟಾಪಟಿಯಿಂದಾಗಿ ಜನಸಾಮಾನ್ಯರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

    ಒಟ್ಟಾರೆ ರಾಜಕೀಯ ಮೇಲಾಟಕ್ಕೆ ಬೊಂಬೆನಾಡು ಚನ್ನಪಟ್ಟಣ ಬಡವಾಗ್ತಿದೆ. ನಾಯಕರ ಕ್ರೆಡಿಟ್ ವಾರ್ ಹಲವು ಕಾಮಗಾರಿಗೆ ವಿಘ್ನವನ್ನ ಉಂಟುಮಾಡಿದೆ. ಇದರಿಂದ ಜನಸಾಮಾನ್ಯರು ಮಾತ್ರ ನರಕಯಾತನೆ ಅನುಭಿಸುವಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ತಮ್ಮ ರಾಜಕೀಯ ಬದಿಗಿಟ್ಟು ಸಮಸ್ಯೆ ಸರಿಪಡಿಸುವತ್ತ ಗಮನಹರಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ – ಸಿ.ಪಿ.ಯೋಗೇಶ್ವರ್

    ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ – ಸಿ.ಪಿ.ಯೋಗೇಶ್ವರ್

    ರಾಮನಗರ: ಕೆಂಪೇಗೌಡರ ಪ್ರತಿಮೆ (Kempegowda Statue) ಬಗ್ಗೆ ರಾಜಕೀಯ ಚರ್ಚೆ ವಿಚಾರವಾಗಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್‌ (C.P.Yogeshwara) ಕಿಡಿಕಾರಿದ್ದಾರೆ.

    ಕೆಂಪೇಗೌಡರ ಪ್ರತಿಮೆ ಜಾತಿ, ಪಕ್ಷಕ್ಕೆ ಮೀರಿದ ವಿಚಾರ. ಚುನಾವಣಾ ವರ್ಷ ಆಗಿರುವುದರಿಂದ ಕಾಂಗ್ರೆಸ್-ಜೆಡಿಎಸ್ (Congress-JDS) ಈ ರೀತಿ ಚರ್ಚೆ ಮಾಡ್ತಿದ್ದಾರೆ. ನಾವು ಮಾಡದ ಕೆಲಸವನ್ನ ಬಿಜೆಪಿ ಮಾಡಿದೆ ಎಂಬ ಕೀಳರಿಮೆ ಅವರಿಗಿದೆ ಎಂದು ಯೋಗೇಶ್ವರ್‌ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಳೇ ಮೈಸೂರಿನ ಭದ್ರಕೋಟೆ ಗಟ್ಟಿ ಮಾಡಲು ಎಚ್‌ಡಿಕೆ ಪ್ಲಾನ್‌

    ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರನ್ನೂ ಆಹ್ವಾನಿಸಲಾಗಿದೆ. ಸ್ವತಃ ಅಶ್ವತ್ಥ ನಾರಾಯಣ ಅವರೇ ಹೋಗಿ ಆಹ್ವಾನ‌ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಕರೆ ಮಾಡಿ ಆಹ್ವಾನಿಸಿದ್ದಾರೆ. ಆದರೆ ಕುಮಾರಸ್ವಾಮಿಗೆ ರಾಜಕೀಯ ಆತಂಕ ಇದೆ. ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವ ಆತಂಕ ಹೆಚ್ಚಾಗಿದೆ. ಒಕ್ಕಲಿಗರ ಮತ ಬ್ಯಾಂಕ್‌ ಅನ್ನು ಯಾರೂ ಜೆಡಿಎಸ್‌ಗೆ ಗುತ್ತಿಗೆ ಕೊಟ್ಟಿಲ್ಲ. ಬಿಜೆಪಿ ಕೂಡ ಕೆಂಪೇಗೌಡರ ದೂರದೃಷ್ಟಿಯಂತೆ ಆಡಳಿತ ನೀಡುತ್ತಿದೆ ಎಂದಿದ್ದಾರೆ.‌

    ಹೆಚ್‌.ಡಿ.ಕುಮಾರಸ್ವಾಮಿ ಎರಡು ಬಾರಿ ವಿಫಲವಾಗಿರುವ ನಾಯಕ. ಕುಮಾರಸ್ವಾಮಿಯವರನ್ನು ಜನ ತಿರಸ್ಕಾರ ಮಾಡ್ತಿದ್ದಾರೆ. ಆ ಪ್ರಕ್ರಿಯೆ 2023ಕ್ಕೂ ಮುಂದುವರಿಯಲಿದೆ‌. ಅವರು ಅಧಿಕಾರ ಇದ್ದಾಗ ಕೆಲಸ ಮಾಡಲಿಲ್ಲ. ಕೇವಲ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡ್ತಿದ್ದಾರೆ. ಹಾಗಾಗಿ ಒಕ್ಕಲಿಗ ಸಮಾಜ ಕೂಡ ಬಿಜೆಪಿ ಪರ ಒಲವು ತೋರಿದೆ. ಜೆಡಿಎಸ್ ಒಕ್ಕಲಿಗ ಸಮುದಾಯದ ಮತಗಳ ಮೇಲೆ ಡಿಪೆಂಡ್ ಆಗಿದೆ. ಬೇರೆ ಸಮುದಾಯದ ಸಪೋರ್ಟ್ ಸಿಗ್ತಿಲ್ಲ. ಅವರು 2023ಕ್ಕೂ ಸಕ್ಸಸ್ ಆಗೋದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೆಲ್ಲುವ ವಿಶ್ವಾಸ ಇಲ್ಲದೆ ಸಿದ್ದರಾಮಯ್ಯ ಜಾಗ ಹುಡುಕಾಟ: ಯಡಿಯೂರಪ್ಪ ವ್ಯಂಗ್ಯ

    Live Tv
    [brid partner=56869869 player=32851 video=960834 autoplay=true]

  • ಆನೆ ಆಮೇಲೆ, ಮೊದಲು ಮರಿಯಾನೆಯನ್ನು ಅರಗಿಸಿಕೊಳ್ಳಲಿ: ಯೋಗೇಶ್ವರ್‌ಗೆ ನಿಖಿಲ್ ಟಾಂಗ್

    ಆನೆ ಆಮೇಲೆ, ಮೊದಲು ಮರಿಯಾನೆಯನ್ನು ಅರಗಿಸಿಕೊಳ್ಳಲಿ: ಯೋಗೇಶ್ವರ್‌ಗೆ ನಿಖಿಲ್ ಟಾಂಗ್

    ರಾಮನಗರ: ವಿಧಾನಸಭಾ ಚುನಾವಣೆ ಸಮೀಪದ ಹಿನ್ನೆಲೆ ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಜೆಡಿಎಸ್ (JDS) ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಹಾಗೂ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ನಡುವಿನ ವಾಕ್ಸಮರ ತಾರಕಕ್ಕೇರಿದೆ. ಅಂಬಾರಿಯನ್ನು ಆನೆ ಹೊರೋದು, ಮರಿಯಾನೆ ಹೊರಲ್ಲ ಎಂದಿದ್ದ ಸಿ.ಪಿ ಯೋಗೇಶ್ವರ್‌ಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಆನೆ ಆಮೇಲೆ, ಮೊದಲು ಮರಿಯಾನೆಯನ್ನು ಜೀರ್ಣಿಸಿಕೊಳ್ಳಲಿ. ಇನ್ನು 6 ತಿಂಗಳು ಕಾದರೆ ಸಿ.ಪಿ ಯೋಗೀಶ್ವರ್ ಮಾಜಿ ಶಾಸಕರಾಗಿಯೇ ಉಳಿಯಲಿದ್ದಾರೆ ಎಂದು ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಮನಗರ ಜಿಲ್ಲೆಯನ್ನಾಗಿ ಮಾಡಿದ್ದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ನಮ್ಮ ಜನರ ಸಂಕಷ್ಟ ಕೇಳುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ರಾಮನಗರ ಜಿಲ್ಲೆಯ ಜನರ ಜೊತೆಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಇಲ್ಲಿನ ಜನರ ಕಷ್ಟಸುಖದಲ್ಲಿ ನಾನು ಭಾಗಿಯಾಗುವೆ ಎಂದು ನಿಖಿಲ್ ಹೇಳಿದರು. ಇದನ್ನೂ ಓದಿ: ಸರ್ಕಾರಿ ನೌಕರರರಿಗೆ ಸಿಹಿ ಸುದ್ದಿ – 7ನೇ ವೇತನ ಆಯೋಗ ಜಾರಿ

    ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಬಹುದು. ಚನ್ನಪಟ್ಟಣ ನಮ್ಮ ತಂದೆ ಪ್ರತಿನಿಧಿಸುವ ಕ್ಷೇತ್ರ. ನನಗೆ ನನ್ನ ಇತಿಮಿತಿಯ ಅರಿವು ಇದೆ. ಜೆಡಿಎಸ್ ಯುವ ಘಟಕದ ಜವಾಬ್ದಾರಿ ನನ್ನ ಮೇಲಿದೆ. ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಕೊಟ್ಟಿದ್ದಾರೆ. ಜೊತೆಗೆ ಪಂಚರತ್ನ ಹೆಚ್.ಡಿ ಕುಮಾರಸ್ವಾಮಿ ಅವರ ಜನಪರ ಯೋಜನೆ. ರಾಜ್ಯದ ಎಲ್ಲಾ ಕಡೆ ಪಂಚರತ್ನ ಯಾತ್ರೆ ಸಂಚರಿಸಲಿದೆ. ಹೀಗಾಗಿ ಇಲ್ಲಿ ಕುಮಾರಸ್ವಾಮಿಯವರು ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನರ ಜೊತೆಗೆ ನಿಲ್ಲುವೆ ಎಂದಿದ್ದಾರೆ.

    ಯೋಗೇಶ್ವರ್ ತಿರುಗೇಟು:
    ನಿಖಿಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಪಿ ಯೋಗೇಶ್ವರ್, ನಾಲ್ಕುವರೆ ವರ್ಷಗಳಿಂದ ನಿಖಿಲ್ ಕುಮಾರಸ್ವಾಮಿ ಎಲ್ಲಿದ್ರು? ಚುನಾವಣೆಗೆ 6 ತಿಂಗಳಿರುವಾಗ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕಾರ್ಯಕರ್ತರ ಮನೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅವರಿಗೆ ಕ್ಷೇತ್ರದ ಮೇಲೆ ನಿಜವಾದ ಕಾಳಜಿ ಇಲ್ಲ. ಈಗ ಕ್ಷೇತ್ರಕ್ಕೆ ಬರುತ್ತಿರುವುದು ಪೊಲಿಟಿಕಲ್ ಗಿಮಿಕ್. ಚುನಾವಣೆ ದೃಷ್ಟಿಯಿಂದ ಕ್ಷೇತ್ರದಲ್ಲಿ ಓಡಾಟ ಮಾಡುತ್ತಿದ್ದಾರೆ. ಅವರ ಪಕ್ಷ ಸಂಘಟನೆಗೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಮುಂದೆ ನಾನು ಹಾಲಿ ಆಗಬೇಕಾ, ಮಾಜಿ ಆಗಬೇಕಾ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಅವರ ಹಾಗೆ ಕಲ್ಲು, ಮೊಟ್ಟೆ ಹೊಡೆಯುವ ಸಂಸ್ಕೃತಿ ನಮ್ಮದಲ್ಲ ಎಂದು ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

  • ಚನ್ನಪಟ್ಟಣದಲ್ಲಿ ನಿಲ್ಲದ ರಾಜಕೀಯ ದಂಗಲ್ – ಎಸ್‍ಸಿ, ಎಸ್‍ಟಿ ಅನುದಾನಕ್ಕೆ ಸಿಪಿವೈ ತಡೆ ಆರೋಪ

    ಚನ್ನಪಟ್ಟಣದಲ್ಲಿ ನಿಲ್ಲದ ರಾಜಕೀಯ ದಂಗಲ್ – ಎಸ್‍ಸಿ, ಎಸ್‍ಟಿ ಅನುದಾನಕ್ಕೆ ಸಿಪಿವೈ ತಡೆ ಆರೋಪ

    ರಾಮನಗರ: ಗೊಂಬೆನಾಡು ಚನ್ನಪಟ್ಟಣದಲ್ಲಿ (Channapattana) ರಾಜಕೀಯ ದಂಗಲ್ ಮುಂದುವರಿದಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy) ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P. Yogeshwar) ನಡುವಿನ ರಾಜಕೀಯ ಗುದ್ದಾಟಕ್ಕೆ ಅನುದಾನ ಖಡಿತ ಆರೋಪ ಕೇಳಿಬಂದಿದೆ.

    ಸಿ.ಪಿ.ಯೋಗೇಶ್ಚರ್ ರಾಜಕೀಯ ದುರುದ್ದೇಶದಿಂದ ಎಸ್‍ಸಿ-ಎಸ್‍ಟಿ ಅನುದಾನ ತಡೆಹಿಡಿದಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ. ಚನ್ನಪಟ್ಟಣ ತಾಲೂಕಿನಲ್ಲಿ ಅಂಬೇಡ್ಕರ್ ಭವನ, ಬಾಬುಜಗಜೀವನ್ ರಾಮ್ ಭವನ, ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ 5 ಕೋಟಿ ಅನುದಾನ ನೀಡಲಾಗಿತ್ತು. ಕ್ಷೇತ್ರದ ಶಾಸಕರಾದ ಹೆಚ್.ಡಿ. ಕುಮಾರಸ್ವಾಮಿಯವರು ಅನುದಾನ ಕೊಡಿಸಿದ್ದರು. ಆದರೆ ಈ ಅನುದಾನವನ್ನ ರದ್ದು ಪಡಿಸುವಂತೆ ಸಿಎಂಗೆ ಯೋಗೇಶ್ವರ್ ಪತ್ರ ಬರೆದಿದ್ದಾರೆ. ಯೋಗೇಶ್ವರ್ ಪತ್ರಕ್ಕೆ ಸಿಎಂ ಬೊಮ್ಮಾಯಿ ಕೂಡಾ ಸಹಿ ಹಾಕಿರುವುದು ಖಂಡನೀಯ ಎಂದು ದಲಿತ ಮುಖಂಡರು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ- ಬಸ್ ಮೈಮೇಲೆ ಹರಿದು ಮಹಿಳೆ ಗಂಭೀರ

    ರಾಜಕೀಯ ದುರುದ್ದೇಶದಿಂದ ಸಿ.ಪಿ.ಯೋಗೇಶ್ಚರ್ ದಲಿತರಿಗೆ ಬಂದಿರುವ ಅನುದಾನಕ್ಕೆ ತಡೆ ಮಾಡುತ್ತಿದ್ದಾರೆ. ಕೂಡಲೇ ನಮ್ಮ ಅನುದಾನ ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ಸಿಪಿವೈ ಹಾಗೂ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Rx ಬದಲಿಗೆ ಪ್ರಿಸ್ಕ್ರಿಪ್ಷನ್‍ನಲ್ಲಿ ‘ಶ್ರೀ ಹರಿ’ ಅಂತ ಹಿಂದಿಯಲ್ಲಿ ಬರೆದ ವೈದ್ಯ

    Live Tv
    [brid partner=56869869 player=32851 video=960834 autoplay=true]

  • ಕಲಾವಿದರ ಕೋಟಾದಲ್ಲಿ ಎಂಎಲ್ಸಿ ಆಗಿರೋ ಯೋಗೇಶ್ವರ್‌ಗೆ 50 ಕೋಟಿ ಅನುದಾನ ಹೇಗೆ ಕೊಡ್ತಾರೆ: ನಿಖಿಲ್‌ ಪ್ರಶ್ನೆ

    ಕಲಾವಿದರ ಕೋಟಾದಲ್ಲಿ ಎಂಎಲ್ಸಿ ಆಗಿರೋ ಯೋಗೇಶ್ವರ್‌ಗೆ 50 ಕೋಟಿ ಅನುದಾನ ಹೇಗೆ ಕೊಡ್ತಾರೆ: ನಿಖಿಲ್‌ ಪ್ರಶ್ನೆ

    ರಾಮನಗರ: ಕಲಾವಿದರ ಕೋಟಾದಲ್ಲಿ ಎಂಎಲ್ಸಿ ಆಗಿರುವ ಸಿ.ಪಿ.ಯೋಗೇಶ್ವರ್‌ (CP Yogeshwar) ಅವರಿಗೆ 50 ಕೋಟಿ ಅನುದಾನ ಹೇಗೆ ಕೊಡುತ್ತಾರೆ ಎಂದು ಜೆಡಿಎಸ್‌ ಯುವಮೋರ್ಚಾ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಪ್ರಶ್ನಿಸಿದ್ದಾರೆ.

    ಚನ್ನಪಟ್ಟಣ (Channapatna) ಘಟನೆ ಕುರಿತು ಪ್ರತಿಕ್ರಿಯಿಸಿರುವ ನಿಖಿಲ್‌, ನಮ್ಮ ಕಾರ್ಯಕರ್ತರ ವಿರುದ್ಧ FIR ಹಾಕಿದ್ದಾರೆ, ಇದು ಸರಿಯಲ್ಲ. ಯೋಗೇಶ್ವರ್ ಅವರ ಕಾರ್ಯಕರ್ತರ ವಿರುದ್ಧವೂ FIR ಹಾಕಲಿ. ನಮ್ಮ ಕಾರ್ಯಕರ್ತರು ಕಲ್ಲು ಹೊಡೆದಿದ್ದಾರೆ ಎನ್ನುವುದಕ್ಕೆ ಯಾವ ಸಾಕ್ಷಿ ಇದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿಪಿವೈ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣ- 14 ಜನರ ಮೇಲೆ FIR ದಾಖಲು

    ಘಟನೆಗೆ ಮುಖ್ಯವಾಗಿ ರಾಮನಗರ ಎಸ್ಪಿ ಕಾರಣ. ನಿನ್ನೆಯ ಕಾರ್ಯಕ್ರಮಕ್ಕೆ ಜಿಲ್ಲಾ ಮಂತ್ರಿ ಅಶ್ವಥ್ ನಾರಾಯಣ ಅವರು ಬಂದಿಲ್ಲ. ಹಾಗಾಗಿ ಅವರು ಗೌರವ ಉಳಿಸಿಕೊಂಡಿದ್ದಾರೆ. ಸ್ಥಳೀಯ ಶಾಸಕರನ್ನ ಕಡೆಗಣಿಸಿ ಗುದ್ದಲಿಪೂಜೆ ಮಾಡೋದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.

    ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿ 14 ಜನರ ಮೇಲೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ನಾನು ಬ್ಲ್ಯಾಕ್‌ ಇದ್ದೇನೆ, ಆದ್ರೆ ಬ್ಲ್ಯಾಕ್‌ ಮೇಲರ್ ಅಲ್ಲ: ಹೆಚ್‌ಡಿಕೆ ಪಂಚ್

    ಘಟನೆಯೇನು?: ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಸಿಎಂ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಭಯ ನಾಯಕರು ವಿಶೇಷ ಅನುದಾನಕ್ಕಾಗಿ ಸಿಎಂಗೆ ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿ ಇಂದು ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮ ನಡೆದಿದೆ. ಆದರೆ ಆಹ್ವಾನ ಪತ್ರಿಕೆಯಲ್ಲಿ ಸಿ.ಪಿ. ಯೋಗೇಶ್ವರ್ ಕೋರಿಕೆ ಮೇರೆಗೆ ಬಿಡುಗಡೆಯಾಗಿರುವ ವಿಶೇಷ ಅನುದಾನ ಎಂದು ಮುದ್ರಣವಾಗಿತ್ತು.

    ಈ ಹಿನ್ನೆಲೆಯಲ್ಲಿ ಸಿಪಿ.ಯೋಗೇಶ್ವರ್ ನಡೆಗೆ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ (JDS) ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದರು. ಅಷ್ಟೇ ಅಲ್ಲದೇ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕಾರಿಗೆ ಜೆಡಿಎಸ್ (JDS) ಕಾರ್ಯಕರ್ತರಿಂದು ಮೊಟ್ಟೆ, ಕಲ್ಲು ಎಸೆದು ಆಕ್ರೋಶ ಹೊರಹಾಕಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಿಪಿವೈ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣ- 14 ಜನರ ಮೇಲೆ FIR ದಾಖಲು

    ಸಿಪಿವೈ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣ- 14 ಜನರ ಮೇಲೆ FIR ದಾಖಲು

    ರಾಮನಗರ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ಕಾರಿನ ಮೇಲೆ ಕಲ್ಲು, ಮೊಟ್ಟೆ (Egg) ಎಸೆತ ಪ್ರಕರಣಕ್ಕೆ ಸಂಬಂಧಿಸಿ 14 ಜನರ ಮೇಲೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

    ಶನಿವಾರ ರಾಮನಗರದ (Ramanagar) ಚನ್ನಪಟ್ಟಣ ತಾಲೂಕಿನ ಭೈರಾಪಟ್ಟಣ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಿ.ಪಿ. ಯೋಗೇಶ್ವರ್ ಅವರ ಕಾರು ಚಾಲಕ ವೆಂಕಟೇಶ್ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದ. ಈ ದೂರಿನ ಮೇರೆಗೆ ಪೊಲೀಸರು 14 ಜನರ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ರಾಜ್ಯ ಜೆಡಿಎಸ್ ವಕ್ತಾರ ವಿ‌. ನರಸಿಂಹ ಮೂರ್ತಿ, ನವೀನ್, ಪ್ರದೀಪ್, ನಂದೀಶ್, ಬೋರೆಗೌಡ, ಮನು, ಬಿ.ಎನ್ ಮಹೇಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಗುರುಕುಮಾರ್, ಶಿವು, ಅರಸೇಗೌಡ, ಚನ್ನಪಟ್ಟಣ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಶೀಶ್, ಡಿ.ಕುಮಾರ್, ಲೋಕೇಶ್, ಪ್ರದೀಪ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

    ಘಟನೆಯೇನು?: ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಸಿಎಂ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಭಯ ನಾಯಕರು ವಿಶೇಷ ಅನುದಾನಕ್ಕಾಗಿ ಸಿಎಂಗೆ ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿ ಇಂದು ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮ ನಡೆದಿದೆ. ಆದರೆ ಆಹ್ವಾನ ಪತ್ರಿಕೆಯಲ್ಲಿ ಸಿ.ಪಿ. ಯೋಗೇಶ್ವರ್ ಕೋರಿಕೆ ಮೇರೆಗೆ ಬಿಡುಗಡೆಯಾಗಿರುವ ವಿಶೇಷ ಅನುದಾನ ಎಂದು ಮುದ್ರಣವಾಗಿತ್ತು. ಇದನ್ನೂ ಓದಿ: ಅಭಿವೃದ್ಧಿ ಆಗಬಾರದೆಂದು ನಾನು ಭಾವಿಸಿದ್ದರೆ ನೀವು ಮಲ್ಲೇಶ್ವರಂನಲ್ಲಿ ಶಾಸಕರೇ ಆಗುತ್ತಿರಲಿಲ್ಲ: ಹೆಚ್‍ಡಿಕೆ

    ಈ ಹಿನ್ನೆಲೆಯಲ್ಲಿ ಸಿಪಿ.ಯೋಗೇಶ್ವರ್ ನಡೆಗೆ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದರು. ಅಷ್ಟೇ ಅಲ್ಲದೇ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕಾರಿಗೆ ಜೆಡಿಎಸ್ (JDS) ಕಾರ್ಯಕರ್ತರಿಂದು ಮೊಟ್ಟೆ, ಕಲ್ಲು ಎಸೆದು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಮತ್ತೆ ಸಿಪಿವೈ Vs ಎಚ್‌ಡಿಕೆ – ಕಲ್ಲು, ಮೊಟ್ಟೆ ಎಸೆತ, ಲಾಠಿ ಚಾರ್ಜ್‌, ಜೆಡಿಎಸ್‌ ಕಾರ್ಯಕರ್ತರು ವಶಕ್ಕೆ

    Live Tv
    [brid partner=56869869 player=32851 video=960834 autoplay=true]