ರಾಮನಗರ: ಚನ್ನಪಟ್ಟಣ ಹೈವೋಲ್ಟೇಜ್ ಅಖಾಡ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಅಭ್ಯರ್ಥಿ ವಿಚಾರದಲ್ಲಿ ದೋಸ್ತಿಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡುತ್ತಿದೆ.
ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರದ್ದು ಒಂದು ಮಾತಾದ್ರೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರದ್ದು ಇನ್ನೊಂದು ಮಾತು. ಇಬ್ಬರ ಮಾತಿಗೂ ಸಾಮತ್ಯೆ ಇಲ್ಲ ಒಂದಕ್ಕೊಂದು ತಾಳಮೇಳ, ಹೊಂದಾಣಿಕೆಯೂ ಇಲ್ಲ. ಮೈತ್ರಿಕೂಟದಿಂದ ಚನ್ನಪಟ್ಟಣ ಅಭ್ಯರ್ಥಿ ಆಗಲು ಸಿ.ಪಿ.ಯೋಗೇಶ್ವರ್ ಕಸರತ್ತು ನಡೆಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಹೆಗಲ ಮೇಲೆ ಕೋವಿ ಇಟ್ಟು ಸಿ.ಪಿ ಯೋಗೇಶ್ವರ್ (CP Yogeshwar) ದಾಳ ಉರುಳಿಸಿದ್ದಾರೆ. ತಮ್ಮನ್ನೇ ಅಭ್ಯರ್ಥಿ ಆಗುವಂತೆ ಕುಮಾರಸ್ವಾಮಿ ಹೇಳಿದ್ದಾರೆ ಅಂತ ಸಿ.ಪಿ ಯೋಗೇಶ್ವರ್ ದಾಳ ಉರುಳಿಸಿದ್ರು. ಆದರೆ ಸಿಪಿವೈ ಹೇಳಿಕೆಗೆ ಹೆಚ್‍ಡಿಕೆ ಅಚ್ಚರಿ ಅಭ್ಯರ್ಥಿ ಹಾಕುವ ಪ್ರತಿ ದಾಳ ಪ್ರಯೋಗಿಸಿದರು. ಈ ಮೂಲಕ ಚನ್ನಪಟ್ಟಣ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಗೆ ಅಲ್ಲ ಅನ್ನೋ ಪರೋಕ್ಷ ಸಂದೇಶ ರವಾನೆ ಮಾಡಿದ್ರು. ಇದನ್ನೂ ಓದಿ; ಭಾರೀ ಮಳೆಗೆ ಉಡುಪಿ ತತ್ತರ – ಉಕ್ಕಿ ಹರಿದ ಇಂದ್ರಾಣಿ ತೀರ್ಥ, 150ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಕಾರ್ಯಕರ್ತರು ಹಾಗೂ ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ ಅಭ್ಯರ್ಥಿ ನಿರ್ಣಯ ಮಾಡ್ತೀವಿ ಕುಮಾರಸ್ವಾಮಿ (HD Kumarasway) ಎಂದು ಹೇಳಿದ್ದಾರೆ. ಅಭ್ಯರ್ಥಿ ಯಾರೆಂಬ ಬಗ್ಗೆ ಸುಳಿವನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಈ ಮೂಲಕ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಆಯ್ಕೆ ಜಟಿಲ ಸ್ವರೂಪ ಪಡ್ಕೊಳ್ತಿದೆ. ಇದರಿಂದ ಚನ್ನಟ್ಟಣದಲ್ಲಿ ಮೈತ್ರಿ ಧರ್ಮ ಪಾಲನೆ ಆಗುತ್ತಾ..? ಅನ್ನುವ ಅನುಮಾನ ಸೃಷ್ಟಿಯಾಗಿದೆ. ಹೆಚ್‍ಡಿಕೆ ಕ್ಷೇತ್ರ ಉಳಿಸಿಕೊಳ್ಳುವ ಕಸರತ್ತು ನಡೆಸ್ತಿದ್ದಾರೆ ಅನ್ನೋ ಅನುಮಾನ ಬಿಜೆಪಿಗೆ ಮೂಡಿದೆ. ಹೀಗಾಗಿ ಚನ್ನಪಟ್ಟಣ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕಾಗಿ ಕಾಯ್ತಿದೆ.
ರಾಮನಗರ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನವಾಗಿರುವ ನಟ ದರ್ಶನ್ (Actor Darshan), ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಬಯಸಿದ್ರಾ ಅನ್ನೋ ಬಗ್ಗೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸುಳಿವು ಕೊಟ್ಟಿದ್ದಾರೆ. ದರ್ಶನ್ ಅವರನ್ನ ಕಾಂಗ್ರೆಸ್‌ನಿಂದ ನಿಲ್ಲಿಸಲು ಡಿಕೆ ಬ್ರದರ್ಸ್ ಸಿದ್ಧತೆ ನಡೆಸಿದ್ದರು ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwara) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿ ಹಾಕ್ತೇವೆ ಎಂದಿದ್ದ ಡಿ.ಕೆ ಸುರೇಶ್ (DK Syu ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನವರ ಅಚ್ಚರಿ ಅಭ್ಯರ್ಥಿ ಇದೀಗ ಜೈಲುಪಾಲಾಗಿದ್ದಾರೆ. ಚಿತ್ರನಟರೊಬ್ಬರು ಕಾಂಗ್ರೆಸ್ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ದರು. ಅವರನ್ನ ಕಾಂಗ್ರೆಸ್‌ಗೆ ಸೇರಿಸಿಕೊಂಡು ಚುನಾವಣೆಗೆ ನಿಲ್ಲಿಸಲು ಡಿ.ಕೆ ಬ್ರದರ್ಸ್ ಪ್ಲ್ಯಾನ್ ಮಾಡಿದ್ದರು. ಆ ವ್ಯಕ್ತಿ ಯಾರು ಅಂತ ನೀವೆ ಊಹೆ ಮಾಡಿಕೊಳ್ಳಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ದರ್ಶನ್ ಸ್ಪರ್ಧೆಗೆ ಬಯಸಿದ್ದರು ಅನ್ನೋ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ಚರಂಡಿಗೆ ಬೇಡ, ಸ್ವಾಮಿ ಮನೆಯವರಿಗಾದ್ರೂ ಶವ ಸಿಕ್ಕಲಿ ಎಂದಿದ್ದ ಆರೋಪಿ ಕಾರ್ತಿಕ್!
ದರ್ಶನ್ ಮೇಲೆ ಕೊಲೆ ಆರೋಪ ಕುರಿತು ಮಾತನಾಡಿ, ಈ ವಿಚಾರವನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದೊಂದು ವಿಚಿತ್ರ ಕೇಸ್ ಅನ್ನಿಸ್ತಿದೆ. ಪಾಪ ಅವರಿಗೆ ರಾಜಕೀಯಕ್ಕೆ ಬರಬೇಕು ಅಂತ ಆಸೆ ಇತ್ತೇನೋ. ಆದರೆ ಈ ರೀತಿ ಅನಾಹುತ ಆಗೋಗಿದೆ. ಮುಂದೆ ಏನಾಗುತ್ತೋ ನೋಡೊಣ ಎಂದು ಸಿಪಿವೈ ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರಾಗಿ ಬಂದ ಕುಮಾರಸ್ವಾಮಿಗೆ ಏರ್ಪೋರ್ಟ್ ಬಳಿ ಅದ್ದೂರಿ ಸ್ವಾಗತ
ಇದೇ ವೇಳೆ ಪೋಕ್ಸೋ ಕೇಸ್‌ನಲ್ಲಿ ಮಾಜಿ ಸಿಎಂ ಬಿಎಸ್‌ವೈ ವಿರುದ್ಧ ಜಾಮೀನು ರಹಿತ ವಾರೆಂಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್ ನವರ ದ್ವೇಷದ ರಾಜಕಾರಣ. ಯಡಿಯೂರಪ್ಪರನ್ನು ಅನವಶ್ಯಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಏನಾಗುತ್ತೋ ನೋಡೋಣ, ಅವರು ಸಹ ಕಾನೂನು ಹೋರಾಟ ಮಾಡ್ತಿದ್ದಾರೆ. ಅವರಿಗೆ ಏನು ತೊಂದರೆ ಆಗೋದಿಲ್ಲ ಅಂದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ
– ಸಿಪಿವೈ ಪುತ್ರಿ ನಿಶಾ ಭೇಟಿ ವಿಚಾರಕ್ಕೆ ಡಿಸಿಎಂ ಪ್ರತಿಕ್ರಿಯೆ
ಬೆಂಗಳೂರು: ಸಿ.ಪಿ ಯೋಗೇಶ್ವರ್ (C.P Yogeshwar) ಪುತ್ರಿ ನಿಶಾ (Nisha Yogeshwar) ನನ್ನ ಹಾಗೂ ನನ್ನ ತಮ್ಮನನ್ನು ಭೇಟಿ ಮಾಡಿದ್ದರು. ಅಪ್ಪ ಮಗಳನ್ನು ದೂರ ಮಾಡಿದ ಅಪಕೀರ್ತಿ ನನಗೆ ಬೇಡ ಎಂದು ಸುಮ್ಮನಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ ಮಗಳ ವಿಚಾರ ಸರಿ ಹೋಗಬಹುದು. ಅವಳು ಇನ್ನೂ ಮದುವೆಯಾಗಬೇಕು, ತಂದೆ ಹಾಲು ಎರೆಯಬೇಕು, ಅಕ್ಷತೆ ಕಾಳು ಹಾಕಬೇಕು. ನನಗೆ ಅವಳ ಬಗ್ಗೆ ಹಾಗೂ ಆರ್ಥಿಕ ಪರಿಸ್ಥಿತಿ ಬಗ್ಗೆ ಎಲ್ಲಾ ಗೊತ್ತು ಅವರ ಅಮ್ಮನೂ ನನಗೆ ಪರಿಚಯವಿದ್ದಾರೆ. ಯೋಗೇಶ್ವರ್ ಅವರ ಈಗಿನ ಸಂಸಾರದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಸೇರಲು ಚಿಂತನೆ: ನಿಶಾ ಯೋಗೇಶ್ವರ್
ಆ ಹೆಣ್ಣು ಮಗಳು ಬಹಳ ಗಟ್ಟಿಯಾಗಿ ನಿಂತಿದ್ದಾರೆ. ಕಾಂಗ್ರೆಸ್ ಸೇರುತ್ತೇನೆ ಎಂದರೆ ನಮ್ಮ ಪಕ್ಷದ ಸ್ಥಳಿಯ ನಾಯಕರ ಜೊತೆ ಮಾತನಾಡುತ್ತೇನೆ. ನಿಶಾ ಯೋಗೇಶ್ವರ್ ಧೈರ್ಯವಂತ ಹೆಣ್ಣು ಮಗಳು, ಏನೋ ಧೈರ್ಯ ಮಾಡಿದ್ದಾಳೆ. ನಾಳೆ ಜನ ಅಪ್ಪ ಮಗಳನ್ನು ಯಾಕೆ ದೂರ ಮಾಡಿದೆ ಎಂದು ನನ್ನನ್ನು ಪ್ರಶ್ನೆ ಮಾಡ್ತಾರೆ. ಅದಕ್ಕಾಗಿ ನಾನು ಸುಮ್ಮನಿದ್ದೇನೆ. ಮದುವೆಯಾಗಿ ಅವರದೇ ಕುಟುಂಬ ಇದ್ದಿದ್ದರೆ ವಿಚಾರ ಬೇರೆಯಾಗುತ್ತಿತ್ತು ಎಂದಿದ್ದಾರೆ.
ರಾಜರಾಜೇಶ್ವರಿಗೆ ಹೋಗಿ ಒಂದು ಕೈ ಮುಗಿಯಬೇಕು. ಅಲ್ಲಿ ನಮ್ಮ ಅಭ್ಯರ್ಥಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಡಿ.ಕೆ ಸುರೇಶ್ ಮಾಡಿದ ಕೆಲಸ ಜನರಿಗೆ ಈಗ ಅರ್ಥವಾಗಿದೆ. ಮಾನವೀಯತೆ, ನಮ್ಮ ತಮ್ಮ ಎನ್ನುವುದನ್ನು ಪಕ್ಕಕ್ಕೆ ಇಡಿ. ಕೋವಿಡ್ ಸಂದರ್ಭದಲ್ಲಿ ಯಾರು ಆಚೆಗೆ ಬರಲಿಲ್ಲ. ಕುಮಾರಸ್ವಾಮಿ ಮನೆಯಿಂದ ಹೊರಗೆ ಬರಲಿಲ್ಲ. ಡಿ.ಕೆ ಸುರೇಶ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ತರಕಾರಿಗೆ ಬೆಲೆ ಸಿಗಬೇಕು ಎಂದು ಹೋರಾಡಿದ್ದರು. ಮನೆ ಮನೆಗೆ ಹೋಗಿ ಸುರೇಶ್ ಕೆಲಸ ಮಾಡಿದ್ದರು. ಈಗ ಬಿಜೆಪಿ ಗೊಂದಲದ ಗೂಡಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು, ಆಗ ಏನು ಕೆಲಸ ಮಾಡಿದ್ರು? ಕೆಲಸ ಮಾಡದವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಏಕಾಏಕಿ ಡ್ರಾಪ್ ಮಾಡಿ ವೀಕ್ ಸ್ಟ್ಯಾಟರ್ಜಿಯನ್ನು ಬಿಜೆಪಿ ಮಾಡಿದೆ. ನಾವು ಯುವಕರಿಗೆ ಮಣೆ ಹಾಕಿದ್ದೇವೆ. ಬಿಜೆಪಿ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಲು ಮುಂದಾಗಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಒಂದು ಮಾಡಲು ರೋಡ್ ಶೋ ಮಾಡುತ್ತಿದ್ದಾರೆ. ದಿನಪ್ರತಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಕಿತ್ತಾಡುತ್ತಿದ್ದಾರೆ. ಕಾರ್ಯಕರ್ತರ ಒಂದಾಗಿ ಯಾಕೆ ಸಭೆ ಮಾಡಲಿಲ್ಲ. ಇವರಿಬ್ಬರ ಮೈತ್ರಿ ನೋಡಿ ನಾಚಿಕೆಯಾಗುತ್ತಿದೆ. ಆ ದಿನ ಸುಮಲತಾ ಮನೆಗೆ ಹೋಗಬೇಡ ಎಂದವರು ಇವತ್ತು ಸುಮಲತಾ ಮನೆಗೆ ಹೋಗುತ್ತಿದ್ದಾರೆ. ಮೈತ್ರಿ ಸರ್ಕಾರ ತೆಗೆದವರ ಜೊತೆಗೆ ತಬ್ಬಾಡುತ್ತಿದ್ದಾರೆ. ನಾನು ಯಾವ ಅನ್ಯಾಯ ಮಾಡಿದ್ದೆ ಕುಮಾರಸ್ವಾಮಿಗೆ? ನಾನು ವಿಷ ಹಾಕಿದ್ದೆ ಎನ್ನುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದೆ ಎನ್ನುತ್ತಿದ್ದಾರೆ. ಸರ್ಕಾರ ಉಳಿಸಲು ನಾನು ಮಳೆ-ಬಿಸಿಲಲ್ಲಿ ನಿಂತು ಹೋರಾಡಿದ್ದೆ ಎಂದಿದ್ದಾರೆ.
ನವದೆಹಲಿ: ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರಕ್ಕೆ ಅಭ್ಯರ್ಥಿಗಳ ಕೊರತೆ ಇಲ್ಲ. ಪಕ್ಷದಲ್ಲಿ ಸಾಕಷ್ಟು ಪ್ರಬಲ ನಾಯಕರಿದ್ದಾರೆ ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಸ್ಪರ್ಧೆ ಮಾಡಬಹುದು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ (CP Yogeshwara) ಹೇಳಿದ್ದಾರೆ.
ಕ್ಷೇತ್ರದಲ್ಲಿ ನಡೆದ ಮೈತ್ರಿ ಮಾತುಕತೆ ಸಂಬಂಧ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಡಾ.ಮಂಜುನಾಥ್ (Dr. CN Manjunath) ಅವರ ಹೆಸರು ಪ್ರಸ್ತಾಪಿಸಿದ್ದೇನೆ, ಅವರನ್ನು ಒಪ್ಪಿಸುವ ಜವಬ್ದಾರಿ ನನ್ನದು ಎಂದು ಹೇಳಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಸ್ಕರಣೆ ಮಾಡಿದ ನೀರು ಮರುಬಳಕೆಗೆ ಶೀಘ್ರವೇ ಆದೇಶ: ಈಶ್ವರ್ ಖಂಡ್ರೆ
ಈ ಚುನಾವಣೆಯನ್ನು (Elections) ಸವಾಲಾಗಿ ಸ್ವೀಕರಿಸಿದ್ದೇವೆ, ನಾನು ರಾಜ್ಯ ರಾಜಕಾರಣದಲ್ಲಿ ಇರಬೇಕು ಅಂತ ಅಂದುಕೊಂಡಿದ್ದೇನೆ. ಹೀಗಾಗೀ ನಾನು ಸ್ಪರ್ಧಿಸುವ ಆಸಕ್ತಿ ಇಲ್ಲ. ನಾನು ಮಂಜುನಾಥ್ ಹೆಸರು ಪ್ರಸ್ತಾಪಿಸಿದ್ದೇನೆ, ಕೆಲವು ನಾಯಕರು ನಾನು ಸ್ಪರ್ಧಿಸಿದರೆ ಕಠಿಣ ಪೈಪೊಟಿ ಇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ದೇಶದ್ರೋಹಿಗಳಿಗೂ, ಕೈ ನಾಯಕರಿಗೂ ಅಪ್ಪುಗೆಯ ನಂಟಿನ ಕಾರಣ FSL ವರದಿ ವಿಳಂಬ: ಸಿ.ಟಿ.ರವಿ
ಮಂಜುನಾಥ್ ಅವರನ್ನು ಹೊರತುಪಿಡಿಸದರೂ ಅಶ್ವಥ್ ನಾರಾಯಣ್ ಡಿಸಿಎಂ ಆಗಿದ್ದವರು, ಉಸ್ತುವಾರಿ ಸಚಿವರಾಗಿದರು, ಆರ್.ಅಶೋಕ್ ವಿರೋಧ ಪಕ್ಷದ ನಾಯಕರು ಸ್ಪರ್ಧಿಸಲು ಸಮರ್ಥರಿದ್ದಾರೆ. ಅಂತಿಮವಾಗಿ ಪಕ್ಷದ ವರಿಷ್ಠರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಭ್ರೂಣಹತ್ಯೆ ಮತ್ತೆ ಬೆಳಕಿಗೆ- ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ 74 ಗರ್ಭಪಾತ
ರಾಮನಗರ: ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ (C.P Yogeshwar) ಅವರ ಬಾವ ಮಹದೇವಯ್ಯ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು ಆಪಹರಣದ ಶಂಕೆ ವ್ಯಕ್ತವಾಗಿದೆ.
ಯೋಗೇಶ್ವರ್ ಅವರ ಸಹೋದರಿ ಪುಷ್ಪ ಅವರ ಪತಿ ಮಹದೇವಯ್ಯ (58) ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ಕುಟುಂಬದ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಚನ್ನಪಟ್ಟಣದ (Channapatna) ವಡ್ಡರದೊಡ್ಡಿ ಹೊರವಲಯದಲ್ಲಿದ್ದ ಅವರ ತೋಟದ ಮನೆಗೆ ಶುಕ್ರವಾರ ಬಂದು ಅಲ್ಲಿಯೇ ತಂಗಿದ್ದರು. ಈಗ ಬೆಳಗ್ಗೆಯಿಂದ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ನಾಪತ್ತೆಯಾಗಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಡಾಕ್ಟರ್ ಆಗಬೇಕೆಂದು ಕನಸು ಕಂಡಿದ್ದ ಹುಡುಗಿ ರಕ್ತದ ಕ್ಯಾನ್ಸರ್‌ಗೆ ಬಲಿ – ಮಗಳ ಆಸೆಯಂತೆ ದೇಹದಾನ ಮಾಡಿದ ಪೋಷಕರು
ಮಹದೇವಯ್ಯ ಅವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ತೋಟದ ಮನೆಯಿಂದಲೇ ಅಪಹರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ತೋಟದ ಮನೆಯಲ್ಲಿನ ಬಾಗಿಲು ಒಡೆದಿದ್ದು, ರೂಂನಲ್ಲಿದ್ದ ಬೀರು, ಬಟ್ಟೆಗಳು ಹಾಗೂ ಮನೆಯಲ್ಲಿರುವ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಜೊತೆಗೆ ಅವರ ಕಾರು ಸಹ ಕಾಣೆಯಾಗಿದೆ.
ರಾಮನಗರ: ಎಸ್.ಟಿ ಸೋಮಶೇಖರ್ ಅವರು ಬಿಜೆಪಿಯಿಂದ (BJP) ಹೊರಹೋಗುವ ತೀರ್ಮಾನ ಮಾಡಿದ್ದರೇ ನಮ್ಮ ವಿರೋಧವಿಲ್ಲ, ಸ್ವಾಗತಿಸುತ್ತೇವೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಸ್.ಟಿ ಸೋಮಶೇಖರ್ ಬಿಜೆಪಿಯಲ್ಲಿ ದೊಡ್ಡ ಫಲಾನುಭವಿ. ಬಿಜೆಪಿಗೆ ಬಂದಮೇಲೆ ಮಂತ್ರಿಯಾಗಿ ಪ್ರಬಲ ಖಾತೆ ಪಡೆದರು, ಅಧಿಕಾರ ಅನುಭವಿಸಿದರು. ಇವತ್ತು ಅಧಿಕಾರವಿಲ್ಲವೆಂದು ಹೀಗೆ ಮಾತನಾಡುತ್ತಾರೆ. ಡಿಕೆಶಿ (DK Shivakumar) ಜೊತೆಗಿನ ಸಂಬಂಧ ಇಟ್ಕೊಂಡು ನಮ್ಮ ಪಕ್ಷವನ್ನು ಟೀಕಿಸುತ್ತಿದ್ದಾರೆ. ಮೈತ್ರಿ ವಿಚಾರ ಚರ್ಚೆಗೂ ಮೊದಲೂ ಟೀಕೆ ಮಾಡುತ್ತಿದ್ದರು, ಈಗಲೂ ಟೀಕೆ ಮಾಡ್ತಿದ್ದಾರೆ. ಬಹುಶಃ ಅವರು ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮಾಜಿ ಶಾಸಕ ಆಗಬಹುದು ಇನ್ನೇನು ಆಗಲು ಸಾಧ್ಯವಿಲ್ಲ. ಒಂದು ವೇಳೆ ಹೊರಹೋಗುವ ತೀರ್ಮಾನ ಮಾಡಿದ್ದರೆ ನಮ್ಮ ವಿರೋಧವಿಲ್ಲ, ಸ್ವಾಗತಿಸುತ್ತೇವೆ. ಅಧಿಕಾರವಿದ್ದಾಗ ಅನುಭವಿಸಿ ಈಗ ಪಕ್ಷದ ವಿರುದ್ಧ ಮಾತನಾಡುವುದು ಶೋಭೆಯಲ್ಲ ಎಂದ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Bigg Boss Kannada 10: ದೊಡ್ಮನೆಗೆ ಕಾಲಿಡುವ ಸ್ಪರ್ಧಿಗಳು ಇವರೇ ನೋಡಿ
ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಬಹಳ ವಿರೋಧವಿದ್ದ ಕ್ಷೇತ್ರ ಚನ್ನಪಟ್ಟಣ. ನಾವು, ಕುಮಾರಸ್ವಾಮಿ ವಿರುದ್ಧ ರಾಜಕೀಯ ಮಾಡಿಕೊಂಡು ಬಂದೆವು. ಆದ್ರೆ ಹೊಂದಾಣಿಕೆ ಅನ್ನೋದು ತಾಳ್ಮೆಯಿಂದ ಪರಸ್ಪರ ಒಂದಾಗಿ ಎಲ್ಲರ ಮನಸ್ಸನ್ನು ಒಗ್ಗೂಡಿಸುವುದು. ಹಾಗಾಗಿ ಮೈತ್ರಿಯ ಅನಿವಾರ್ಯತೆ ಏನೆಂಬುದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಬೂತ್ ಮಟ್ಟದಲ್ಲಿ ಎರಡೂ ಪಕ್ಷದವರನ್ನು ಒಗ್ಗೂಡಿಸಿ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರಣ್ಯ ಇಲಾಖೆ ಕಚೇರಿಯಲ್ಲಿದ್ದ 8 ಲಕ್ಷ ರೂ.ಮೌಲ್ಯದ ಶ್ರೀಗಂಧ ಕಟ್ಟಿಗೆ ಕಳ್ಳತನ!
ಇನ್ನೂ ಮೈತ್ರಿಗೆ ಕಾರ್ಯಕರ್ತರು ಒಪ್ಪುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, 100% ಮೈತ್ರಿಗೆ ನಮ್ಮ ಕಾರ್ಯಕರ್ತರು ಒಪ್ಪಿದ್ದಾರೆ. ನಮ್ಮ ಹಾಗೂ ಜೆಡಿಎಸ್‌ನ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಕಳೆದ ಎಂಎಲ್ಎ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಲಾಭವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಆ ತಪ್ಪು ಆಗಬಾರದು. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕಾಗಿದೆ. ಹಾಗಾಗಿ ಹೊಂದಾಣಿಕೆ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಕಾಂಗ್ರೆಸ್ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಸಿಪಿವೈ ತಿಳಿಸಿದ್ದಾರೆ.
ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕೆಲವು ಕ್ಷೇತ್ರಗಳಲ್ಲಿ ನಮ್ಮ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ. ಇದರ ಅನುಭವ ನನಗೂ ಆಗಿದೆ. ಇದನ್ನು ಈಗ ಮಾತನಾಡಿದರೆ ನಾವು ಬೆಂಕಿ ಹಚ್ಚಿದಂತೆ ಆಗುತ್ತದೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ, ಸಂಸದ ಪ್ರತಾಪ್ ಸಿಂಹ ಬಳಿಕ ಹೊಂದಾಣಿಕೆ ರಾಜಕೀಯ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸರ್ಕಾರದ ಆಡಳಿತ ವ್ಯವಸ್ಥೆ ಸರಿಯಾಗಿರಲಿಲ್ಲ. ಮಂತ್ರಿಮಂಡಲ ವಿಸ್ತರಣೆ ಮಾಡಲಿಲ್ಲ, ಸಚಿವ ಸ್ಥಾನಗಳನ್ನು ಖಾಲಿ ಬಿಡಲಾಯಿತು ಆಂತರಿಕ ಬೇಗುದಿ ಇದರಿಂದ ಸೃಷ್ಟಿಯಾಯಿತು. ಅಭ್ಯರ್ಥಿಗಳ ಆಯ್ಕೆಯಲ್ಲೂ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆಯಾಗಿದೆ. ಇದರ ಜೊತೆಗೆ ಕಾಂಗ್ರೆಸ್‍ನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯಲಿಲ್ಲ. ಇದು ಬಿಜೆಪಿ ಸೋಲಿಗೆ ಕಾರಣವಾಗಿದೆ. ಈ ಚರ್ಚೆ ಈಗ ಅನಗತ್ಯ, ಮುಂದಿನ ಚುನಾವಣೆ ಬಗ್ಗೆ ಯೋಚನೆ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಯೋಗ ಮದ್ದು: ದಿನೇಶ್ ಗುಂಡೂರಾವ್
ಬೆಂಗಳೂರು (Bengaluru) ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವ ಬಗ್ಗೆ ಮಾತನಾಡಿದ ಅವರು, ಲೋಕಸಭೆಗೆ ಸ್ಪರ್ಧೆ ಮಾಡಬೇಕು ಎನ್ನುವ ಯೋಚನೆ ಇದೆ. ಆದರೆ ಇನ್ನೂ ಅಂತಿಮವಾಗಿಲ್ಲ. ಅಂತಿಮವಾಗಿ ಪಕ್ಷ ತಿರ್ಮಾನ ಮಾಡಲಿದೆ. ನಾನು ದೆಹಲಿಯಲ್ಲಿ ಕೆಲವು ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದೇನೆ ಈ ಬಗ್ಗೆಯೂ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ.
ಡಿ.ಕೆ ಸುರೇಶ್ ಚುನಾವಣಾ ರಾಜಕೀಯದ ಬಗ್ಗೆ ಯಾಕೆ ವೈರಾಗ್ಯದ ಮಾತುಗಳನ್ನು ಆಡಿದ್ದಾರೆ ಎಂಬುದು ಗೊತ್ತಿಲ್ಲ. ಅಷ್ಟು ಸುಲಭವಾಗಿ ರಾಜಕೀಯ ಬಿಡುವ ವ್ಯಕ್ತಿಯಲ್ಲ. ಅವರ ಹೇಳಿಕೆ ಹಿಂದೆ ಗೂಢಾರ್ಥ ಇದೆ. ಅವರ ಅಣ್ಣನನ್ನು ಸಿಎಂ ಮಾಡಲು ಪ್ರಯತ್ನಿಸಿರಬೇಕು ದೆಹಲಿಗಿಂತ ಕರ್ನಾಟಕದಲ್ಲಿ ಸಕ್ರಿಯಾಗಲು ನಿರ್ಧರಿಸಬೇಕು ಎನಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಪತ್ನಿಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು
– ಹೆಚ್ಡಿಕೆ ಹಾಗೂ ಸಿಪಿವೈ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಲಿರೋ ಚನ್ನಪಟ್ಟಣ
ರಾಮನಗರ: ಬೊಂಬೆಗಳ ತಯಾರಿಕೆಯಲ್ಲಿ ವಿಶ್ವಖ್ಯಾತಿ ಪಡೆದಂತೆ, ಹೋರಾಟದಲ್ಲೂ ತನ್ನದೇ ಆದ ಹೆಸರು ಗಳಿಸಿರೋ ಚನ್ನಪಟ್ಟಣ (Channapatna) ವಿಧಾನಸಭಾ ಕ್ಷೇತ್ರ, ರಾಜಕೀಯವಾಗಿಯೂ ವಿಶಿಷ್ಟಗಳಿಂದ ಕೂಡಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P.Yogeshwara) ಸ್ಪರ್ಧೆ ಮಾಡುವ ಹೈವೋಲ್ಟೇಜ್ ಕ್ಷೇತ್ರ ಚನ್ನಪಟ್ಟಣ. ಜೆಡಿಎಸ್‌ನಿಂದ (JDS) ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ (BJP) ಸಿ.ಪಿ.ಯೋಗೇಶ್ವರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಈ ಬಾರಿ ಬೊಂಬೆ ಆಡಿಸುವವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.
ದೊಡ್ಡಗೌಡ್ರ ನಾಮಬಲ, ವೈಯಕ್ತಿಕ ವರ್ಚಸ್ಸಲ್ಲಿ ಹೆಚ್‌ಡಿಕೆ ಫೈಟ್
ಒಕ್ಕಲಿಗ ಪ್ರಾಬಲ್ಯವಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸಾಂಪ್ರದಾಯಿಕ ಮತಗಳನ್ನ ಹೊಂದಿದೆ. ಮಾಜಿ ಸಿಎಂ ಕುಮಾರಸ್ವಾಮಿ ಈ ಕ್ಷೇತ್ರದಿಂದ ಇದು ನನ್ನ ಕಡೇ ಚುನಾವಣೆ. ಮುಂದಿನ ಭಾರಿ ಇಲ್ಲಿ ಸ್ಥಳೀಯ ಕಾರ್ಯಕರ್ತರನ್ನು ನಿಲ್ಲಿಸುತ್ತೇನೆ ಎನ್ನುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ್ದಾರೆ. ಪಂಚರತ್ನ, ಬಮೂಲ್ ಉತ್ಸವಗಳ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಎಬ್ಬಿಸಿದ್ದಾರೆ. ಹೆಚ್ಡಿಕೆಗೆ ಸಿಎಂ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆಯು ಮತದಾರರಿಗಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆಲ್ಲುವುದು ಸಹ ಅನಿವಾರ್ಯ. ಅಲ್ಲದೇ ಎರಡು ಬಾರಿ ಸಿಎಂ ಆಗಿರುವ ಹೆಚ್ಡಿಕೆಗೆ ಮಾಜಿ ಪ್ರಧಾನಿ ದೇವೇಗೌಡರ ನಾಮಬಲವು ಇದೆ. ಅಲ್ಲದೇ ತನ್ನದೇ ಆದ ವೈಯಕ್ತಿಕ ವರ್ಚಸ್ಸನ್ನು ಕುಮಾರಸ್ವಾಮಿ ಹೊಂದಿದ್ದು ಕ್ಷೇತ್ರದಲ್ಲಿ ಗೆಲುವಿಗೆ ಕಸರತ್ತು ನಡೆಸಿದ್ದಾರೆ. ಇದನ್ನೂ ಓದಿ: ಸೋಲಿಲ್ಲದ ಸರದಾರ ಡಿಕೆಶಿಗೆ ಸಾಮ್ರಾಟ್ ಸವಾಲ್..!
ಸಿಪಿವೈ ಭಾವನಾತ್ಮಕ ಅಸ್ತ್ರ ಪ್ರಯೋಗ
ಇನ್ನೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೂಡಾ ಸ್ವಾಭಿಮಾನಿ ಸಂಕಲ್ಪ ನಡಿಗೆ ಮೂಲಕ ಕ್ಷೇತ್ರದ ಮನೆಮನೆಗೆ ತೆರಳುತ್ತಿದ್ದಾರೆ. ನಾನು ಈ ಮಣ್ಣಿನ ಮಗ, ಇದೇ ತಾಲೂಕಿನಲ್ಲಿ ಹುಟ್ಟಿ ಬೆಳೆದಿದ್ದೇನೆ ಎಂಬ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಭಗೀರಥ ಎಂಬ ಖ್ಯಾತಿ ಸಿಪಿವೈಗಿದೆ. ಅಲ್ಲದೇ ಜೆಡಿಎಸ್ ವೈಫಲ್ಯಗಳ ಬಗ್ಗೆಯೂ ಧ್ವನಿ ಎತ್ತಿರುವ ಸಿಪಿವೈ ಕಳೆದ ಬಾರಿ ಸೋತಿರುವ ಅನುಕಂಪವನ್ನೂ ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ಗೆಲ್ಲಲು ಸರ್ಕಸ್ ಮಾಡ್ತಿದ್ದಾರೆ. ಸದ್ಯ ಕಾಂಗ್ರೆಸ್ ನಿಂದ ಕೊನೆಯ ಕ್ಷಣದಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ್ ಗೆ ಚನ್ನಪಟ್ಟಣ ಟಿಕೆಟ್ ನೀಡಲಾಗಿದೆ. ಹಿಂದೆ ಸಂಭಾವ್ಯ ಅಭ್ಯರ್ಥಿ ಕಾಂಗ್ರೆಸ್ ಗೆ ಕೈಕೊಟ್ಟು ಜೆಡಿಎಸ್ ಸೇರ್ಪಡೆ ಆಗಿದ್ದು ಸೂಕ್ತ ಅಭ್ಯರ್ಥಿಗೆ ಹುಡುಕಾಟ ನಡೆಸಿದ್ದ ಕಾಂಗ್ರೆಸ್ ಕೊನೆಗೆ ಜಿಲ್ಲಾಧ್ಯಕ್ಷನಿಗೆ ಟಿಕೆಟ್ ನೀಡಿ ಘಟಾನುಘಟಿಗಳ ಮಧ್ಯೆ ಕಣಕ್ಕಿಳಿಸಿದೆ.
ಮಹಿಳಾ ಮತದಾರರ ಕೈಯಲ್ಲಿ ಪ್ರಬಲರ ಭವಿಷ್ಯ
ಮತದಾರರ ವಿಷಯದಲ್ಲೂ ವಿಶೇಷತೆ ಹೊಂದಿರೋ ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ, ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ. ಯಾವುದೇ ಅಭ್ಯರ್ಥಿ ಗೆಲುವಿನಲ್ಲಿ ನೀರೆಯರೇ ನಿರ್ಣಾಯಕವಾಗಿದ್ದಾರೆ. ಹೋರಾಟದ ಹಿನ್ನೆಲೆಯುಳ್ಳ ನೆಲದಲ್ಲಿ ಈಗಾಗಲೇ ಈ ಬಾರಿಯ ಚುನಾವಣಾ ಕಾವು ರಂಗೇರಿದೆ. ಇದನ್ನೂ ಓದಿ: ವರುಣಾದಲ್ಲಿ ಬಿಗ್ ಫೈಟ್: ಸಿದ್ದು v/s ಸೋಮಣ್ಣ – ಯಾರ ಕೈ ಹಿಡೀತಾರೆ ವರುಣಾ ಮತದಾರ?
ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಆರ್ಭಟ!
ಸಿನೆಮಾ ಸ್ಟಾರ್ ಆಗಿ ವರ್ಚಸ್ಸು ಗಳಿಸಿದ್ದ ಸಿ.ಪಿ. ಯೋಗೇಶ್ವರ್ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ನಂತರ 2004, 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್‌ನ ಎಂ.ಸಿ.ಅಶ್ವಥ್ ಅವರನ್ನು ಎರಡು ಬಾರಿ ಮಣಿಸಿದ್ದರು. ಇನ್ನು 2009ರಲ್ಲಿ ಆಪರೇಷನ್ ಕಮಲದ ಸಂದರ್ಭದಲ್ಲಿ ಸಿ.ಪಿ. ಯೋಗೇಶ್ವರ್ ಬಿಜೆಪಿ ಸೇರಿದ ಪರಿಣಾಮ ಉಪ ಚುನಾವಣೆ ಎದುರಾಯ್ತು. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಸಿ. ಅಶ್ವಥ್ ಅವರು ಗೆಲುವು ಸಾಧಿಸಿದರಾದ್ರೂ, ಮುಂದಿನ ದಿನಗಳಲ್ಲಿ ಅವರೂ ಕೂಡಾ ಬಿಜೆಪಿ ಸೇರಿದರು. ಹೀಗಾಗಿ, 2011ರಲ್ಲಿ ಚನ್ನಪಟ್ಟಣ ಕ್ಷೇತ್ರ ಮತ್ತೊಂದು ಉಪ ಚುನಾವಣೆಯನ್ನು ಎದುರಿಸಬೇಕಾಯ್ತು. ಈ ವೇಳೆ, ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಸ್.ಎಲ್. ನಾಗರಾಜ್ ಅವರನ್ನು ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮಣಿಸಿದರು. ನಂತರ 2013ರ ಚುನಾವಣೆ ವೇಳೆಗೆ ಎಸ್‌ಪಿಗೆ ಹಾರಿದ್ದ ಸಿ.ಪಿ. ಯೋಗೇಶ್ವರ್ ಆ ಚುನಾವಣೆಯಲ್ಲೂ ಗೆಲುವು ಸಾಧಿಸಿದರು. ನಂತರ 2018ರ ಚುನಾವಣೆ ವೇಳೆಗೆ ಮತ್ತೆ ಬಿಜೆಪಿಗೆ ಬಂದ ಸಿ.ಪಿ. ಯೋಗೇಶ್ವರ್‌ಗೆ ಠಕ್ಕರ್ ಕೊಟ್ಟಿದ್ದು ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ. ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿಯಾಗಿ ಖುದ್ದು ಕುಮಾರಸ್ವಾಮಿ ಅವರೇ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ಗೆ ಸೋಲಿನ ರುಚಿ ತೋರಿಸಿದರು. ಅಂದಿನಿಂದಲೂ ಚನ್ನಪಟ್ಟಣದಲ್ಲಿ ಉಭಯ ನಾಯಕರ ಮಧ್ಯೆ ಮಲ್ಲಯುದ್ಧ ನಡೆಯುತ್ತಿದೆ.
ಇನ್ನೂ 2023ರ ವಿಧಾನಸಭಾ ಚುನಾವಣೆಯಲ್ಲೂ ಯೋಗೇಶ್ವರ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಮಧ್ಯೆಯೇ ನೇರ ಸ್ಪರ್ಧೆ ಏರ್ಪಟ್ಟಿದೆ. ಹಾಗೆ ನೋಡಿದ್ರೆ ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣದಲ್ಲಿ ಈವರೆಗೆ ಕಂಡ ಎಲ್ಲ ಗೆಲುವುಗಳೂ ವೈಯಕ್ತಿಕ ವರ್ಚಸ್ಸಿನಿಂದಲೇ. ಏಕೆಂದರೆ, ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಗೆದ್ದಿದ್ದು ಒಂದೇ ಬಾರಿ. ಇನ್ನು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮಂಕಾಗಿಸಿದ ಶ್ರೇಯಸ್ಸು ಕೂಡಾ ಸಿ.ಪಿ. ಯೋಗೇಶ್ವರ್ ಅವರಿಗೇ ಸಲ್ಲುತ್ತೆ. ಯಾವಾಗ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಪಕ್ಷ ತೊರೆದರೋ, ಅಂದಿನಿಂದಲೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಇದನ್ನೂ ಓದಿ: ಡಿಕೆಶಿ ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ – ಅಶ್ವಥ್ ನಾರಾಯಣ್
ಚನ್ನಪಟ್ಟಣದ ಜಾತಿ ಲೆಕ್ಕಾಚಾರ ಏನು?
ಚನ್ನಪಟ್ಟಣದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಹೀಗಾಗಿ, ಒಕ್ಕಲಿಗರಾದ ಸಿ.ಪಿ. ಯೋಗೇಶ್ವರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಇಬ್ಬರೂ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಬಾರಿ ಒಕ್ಕಲಿಗರು ಯಾರ ಪರ ವಾಲುತ್ತಾರೋ, ಅವರದ್ದೇ ಗೆಲುವು. ಇನ್ನುಳಿದಂತೆ ಮುಸ್ಲಿಂ ಮತದಾರರು ಎರಡನೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ದಲಿತರಿದ್ದಾರೆ. ಹೀಗಾಗಿ, ಮುಸ್ಲಿಂ ಹಾಗೂ ದಲಿತ ಮತಗಳೂ ಯಾವುದೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಿರ್ಣಾಯಕ ಆಗಲಿವೆ. ಕ್ಷೇತ್ರದಲ್ಲಿ ಒಟ್ಟು 2,24,886 ಮತದಾರರಿದ್ದಾರೆ. ಅದರಲ್ಲಿ 1,09,133 ಪುರುಷ ಮತದಾರರು ಹಾಗೂ 1,15,753 ಮಹಿಳೆಯರು, 1054 ಇತರೆ ಮತದಾರರಿದ್ದಾರೆ. ಇನ್ನೂ ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ -1,20,000, ದಲಿತ- 41,000, ಮುಸ್ಲಿಂ-30,000, ಲಿಂಗಾಯತ-11,000, ತಿಗುಳರು -9,000, ಬೆಸ್ತರು -10,500 ಹಾಗೂ ಇತರೆ 10,500 ಮತದಾರರಿದ್ದಾರೆ.
ರಾಮನಗರ: ಕೆಲವು ಪಕ್ಷದ ನಾಯಕರು ಕ್ಷೇತ್ರಗಳಲ್ಲಿ ವಿರೋಧ ಇಲ್ಲದಂತೆ ಮಾಡಿಕೊಂಡಿದ್ದರು. ಅಂತಹ ಕ್ಷೇತ್ರಗಳಲ್ಲಿ ಅವರ ವಿರುದ್ಧ ಬಲಿಷ್ಠ ನಾಯಕರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಈಗ ಅಂತಹ ನಾಯಕರು ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತುವುದಕ್ಕೆ ಆಗುವುದಿಲ್ಲ. ಕ್ಷೇತ್ರದಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P.Yogeshwara) ಚಾಟಿ ಬೀಸಿದ್ದಾರೆ.
ಡಿ.ಕೆ ಶಿವಕುಮಾರ್ ಕ್ಷೇತ್ರಕ್ಕೆ ಪ್ರಬಲ ಒಕ್ಕಲಿಗ ನಾಯಕನನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ (BJP) ಹೊಸ ಪ್ರಯೋಗಕ್ಕೆ ಮುಂದಾಗಿದೆ. ಕನಕಪುರದಲ್ಲಿ (Kanakapur) ಸಚಿವ ಆರ್.ಅಶೋಕ್ (R.Ashoka) ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಈ ಮೂಲಕ ಆಶೋಕ್‍ಗೆ ಬಿಗ್ ಟಾಸ್ಕ್ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್‍ಗೆ ಬೀದರ್ ಉತ್ತರ, ಭಾಲ್ಕಿ ಟಿಕೆಟ್ ಆಯ್ಕೆಯ ಭಾರಿ ಟೆನ್ಶನ್
ಕನಕಪುರದ ಜೆಡಿಎಸ್ (JDS) ಅಭ್ಯರ್ಥಿಯೇ ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಕಾಂಗ್ರೆಸ್‍ಗೆ ವಿರೋಧಿಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಬಿಜೆಪಿಯಿಂದ ಪ್ರಬಲ ನಾಯಕನನ್ನು ಆಯ್ಕೆ ಮಾಡಿರುವುದು ಗೆಲ್ಲುವ ಅವಕಾಶ ಇದೆ. ಜೊತೆಗೆ ರಾಮನಗರದಲ್ಲೂ ಅವಕಾಶ ಇತ್ತು. ಆದರೂ ಒಂದಷ್ಟು ಹೊಸ ಪ್ರಯೋಗ ಒಳ್ಳೆಯದು ಎಂದು ಹೇಳಿದ್ದಾರೆ.
ಮಂಡ್ಯದಲ್ಲೂ ನಾನೇ ಕರೆತಂದ ಇಬ್ಬರಿಗೆ ಟಿಕೆಟ್ ಸಿಕ್ಕಿದೆ. ಇಂಡವಾಳು ಸಚ್ಚಿದಾನಂದ ಹಾಗೂ ಅಶೋಕ್ ಜಯರಾಂಗೆ ಟಿಕೆಟ್ ಹಂಚಿಕೆಯಾಗಿದೆ. ರಾಮನಗರದಲ್ಲೂ (Ramanagara) ಇಬ್ಬರು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ರಾಮನಗರದಲ್ಲಿ ಕನಿಷ್ಠ ಎರಡು ಸೀಟ್ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.
ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪಿದ ವಿಚಾರದ ಬಗ್ಗೆ ಮಾತನಾಡಿ, ನಮ್ಮ ಪಕ್ಷ ಬೇರೆ ಬೇರೆ ರಾಜ್ಯಗಳಲ್ಲಿ ಹಲವು ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಹೊಸಬರಿಗೆ ಅವಕಾಶ ನೀಡುವ ಕೆಲಸ ಮಾಡಿದ್ದಾರೆ. ಕೆಲವರಿಗೆ ವಯಸ್ಸಿನ ಕಾರಣ ಹಾಗೂ ಇನ್ನಿತರ ಕಾರಣಗಳಿಂದ ಟಿಕೆಟ್ ನೀಡಿಲ್ಲ. ಆದರೆ ಹಿರಿಯ ನಾಯಕರಿಗೆ ಪರ್ಯಾಯ ಅವಕಾಶಗಳಿವೆ ಅವರನ್ನೂ ಗೌರವದಿಂದ ನಡೆಸಿಕೊಳ್ಳುವ ಕೆಲಸ ಆಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಲಕ್ಷ್ಮಣ ಸವದಿ ಗುಡ್‍ಬೈ – ಶೀಘ್ರವೇ ಕಾಂಗ್ರೆಸ್ ಸೇರ್ಪಡೆ?
ರಾಮನಗರ: ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್‍ನಲ್ಲಿ (Congress) ಪ್ರಾಮಾಣಿಕರಿಗೆ ಮಾತ್ರ ಅವಕಾಶ. ಆತುರ ಇದ್ದರೆ ಏನೂ ಮಾಡಲಾಗುವುದಿಲ್ಲ. ಪ್ರಸನ್ನ ಗೌಡ ಜೆಡಿಎಸ್ (JDS) ಸೇರ್ಪಡೆ ಆಗಿರೋದು ಆಶ್ಚರ್ಯ ಏನಿಲ್ಲ. ಇದು ನಿರೀಕ್ಷಿತ ಬೆಳವಣಿಗೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ (D.K.Suresh) ರಾಮನಗರದಲ್ಲಿ (Ramnagar) ಪ್ರಸನ್ನ ಗೌಡ ವಿರುದ್ಧ ಚಾಟಿ ಬೀಸಿದ್ದಾರೆ.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P. Yogeshwar) ಕಾಂಗ್ರೆಸ್ ಸೇರ್ಪಡೆ ಕುರಿತಾದ ವರದಿಗಾರರ ಪ್ರಶ್ನೆಗೆ, ಈ ಬಗ್ಗೆ ನನಗೆ ಗೊತ್ತಿಲ್ಲ. ವರಿಷ್ಠರ ಬಳಿ ಕೇಳಬೇಕು. ಇಲ್ಲವೇ ಯೋಗೇಶ್ವರ್ ಅವರನ್ನೇ ಕೇಳಬೇಕು. ನಾವು ಎಲ್ಲರನ್ನೂ ಮುಕ್ತವಾಗಿ ಆಹ್ವಾನ ಮಾಡಿದ್ದೇವೆ. ನಮ್ಮ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಸಿ.ಪಿ ಯೋಗೇಶ್ವರ್ ಅವರ ಜೊತೆ ಮಾತಾನಾಡಲು ಅವರಷ್ಟು ದೊಡ್ಡವನಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸಾರಸ್ ಕೊಕ್ಕರೆಯನ್ನು ಸಾಕಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್
ಚನ್ನಪಟ್ಟಣದಲ್ಲಿ (Channapatna) ಅಭ್ಯರ್ಥಿಗಳ ಕೊರತೆ ಇಲ್ಲ. 6 ರಿಂದ 7 ಜನ ಆಕಾಂಕ್ಷಿಗಳು ನಮ್ಮಲ್ಲಿದ್ದಾರೆ. ಈ ಬಗ್ಗೆ ಕಾರ್ಯಕರ್ತರು, ಮುಖಂಡರ ಜೊತೆ ಸಭೆ ನಡೆಸಿ ಬಳಿಕ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದಿದ್ದಾರೆ.
ರಾಮನಗರದಲ್ಲಿ ಸೋಮವಾರ ನಡೆಯಲಿರುವ ರಾಜೀವ್ ಗಾಂಧಿ (Rajeevgandi) ಆರೋಗ್ಯ ವಿವಿಯ ಶಂಕುಸ್ಥಾಪನೆ ಕಾರ್ಯಕ್ರಮದ ಆಹ್ವಾನದ ಬಗ್ಗೆ ಪ್ರತಿಕ್ರಿಯಿಸಿ, ಬೆಳಗ್ಗೆ ಯಾರೋ ಆಹ್ವಾನ ಪತ್ರ ನೀಡಿದ್ದಾರೆ. ರಾಜೀವ್ ಗಾಂಧಿ ವಿವಿಗೆ ಈಗಾಗಲೇ ಹಲವು ಬಾರಿ ಶಂಕುಸ್ಥಾಪನೆ ಆಗಿದೆ. ಈಗ ಬಿಜೆಪಿಯವರು ಮಾಡುತ್ತಿದ್ದಾರೆ. ಮುಂದೆ ಹೊಸ ಸರ್ಕಾರ ಬಂದ ಮೇಲೆ ಯಾರು ಪೂರ್ಣಗೊಳಿಸುತ್ತಾರೆ ಎಂಬುದನ್ನು ನೋಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ಸಾಧ್ಯ – ಮನ್ ಕಿ ಬಾತ್‌ನಲ್ಲಿ ಮೋದಿ ಕರೆ