Tag: ಸಿ.ಟಿ ರವಿ

  • ಪ್ರಿಯಾಂಕ್ ಖರ್ಗೆ ತಪ್ಪು ಕಲ್ಪನೆ ದೂರ ಮಾಡಲು ನಾವು ಸಿದ್ಧ: ಸಿ.ಟಿ.ರವಿ

    ಪ್ರಿಯಾಂಕ್ ಖರ್ಗೆ ತಪ್ಪು ಕಲ್ಪನೆ ದೂರ ಮಾಡಲು ನಾವು ಸಿದ್ಧ: ಸಿ.ಟಿ.ರವಿ

    ಬೆಂಗಳೂರು: ಆರ್‌ಎಸ್‌ಎಸ್ ದೇಶಭಕ್ತಿಯ ಸಂಸ್ಕಾರವನ್ನು ಕೊಡುತ್ತದೆ. ಆರ್‌ಎಸ್‌ಎಸ್, ಹಿಂದೂಗಳನ್ನು ಸಂಘಟಿಸುವ ಕೆಲಸ ಮಾಡುತ್ತದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.

    ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕನೇ ಪ್ರಧಾನಮಂತ್ರಿ, ಸಂಘದ ಸೇವಕನೇ ಕೇಂದ್ರದ ಗೃಹ ಮಂತ್ರಿ, ಸಂಘದ ಸೇವಕನೇ ರಕ್ಷಣಾ ಸಚಿವ, ಸಂಘದ ಸೇವಕನೇ ಉಪರಾಷ್ಟ್ರಪತಿ ಇವೆಲ್ಲವೂ ಆಗಿರಬೇಕಾದರೆ ಪ್ರಿಯಾಂಕ್‌ ಖರ್ಗೆ ಅವರ ತಪ್ಪು ಕಲ್ಪನೆಯನ್ನು ದೂರ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ತಾಕತ್ತಿದ್ದರೆ RSS ನಿಷೇಧ ಮಾಡಿ ಚುನಾವಣೆಗೆ ಬನ್ನಿ: ಪ್ರಿಯಾಂಕ್‌ ಖರ್ಗೆಗೆ ಸುನಿಲ್‌ ಕುಮಾರ್‌ ಸವಾಲ್

    ಅವರ ಪೂರ್ವಾಗ್ರಹದ ದ್ವೇಷವಾದರೆ ಅದಕ್ಕೆ ಕಾಲ ತಕ್ಕ ಉತ್ತರ ಕೊಡುತ್ತದೆ. ಸಂಘದ ವಿರೋಧ ಅದು ರಾಷ್ಟ್ರದ ವಿರೋಧವೇ ಆಗುತ್ತದೆ. ಯಾಕೆಂದರೆ ಸಂಘ ರಾಷ್ಟ್ರೀಯ ಹಿತದಲ್ಲಿ ಕೆಲಸ ಮಾಡುತ್ತಿರುವ ಒಂದು ಸಂಘಟನೆ. ರಾಷ್ಟ್ರದ್ರೋಹಿಗಳು ಮತ್ತು ಸಂಘವನ್ನು ಅರ್ಥ ಮಾಡಿಕೊಳ್ಳದವರು ಮಾತ್ರ ಅದನ್ನು ವಿರೋಧಿಸುತ್ತಾರೆ ಎಂದು ಹೇಳಿದರು.

    ಹಿಂದೂ ಎಂಬುದಕ್ಕೂ ಸುಪ್ರೀಂ ಕೋರ್ಟ್ ಹೇಳಿರುವ ವ್ಯಾಖ್ಯಾನವನ್ನೇ ಆಧಾರವಾಗಿ ಸಂಘ ಬಳಕೆ ಮಾಡಿಕೊಳ್ಳುತ್ತದೆ. ಸ್ವದೇಶಿ ವಿಚಾರವನ್ನು ಮುಂದಿಟ್ಟಿದೆ. ಅಂದರೆ ಸ್ವಭಾಷೆ, ಸ್ವಭೂಷ, ಸ್ವಭೋಜನ ಮತ್ತು ಪರಿಸರ ಸಂರಕ್ಷಣೆ ಈ ವಿಚಾರವನ್ನು ದೇಶದ ಜನರ ಮುಂದೆ ಇಟ್ಟಿದೆ. ಇದರಲ್ಲಿ ಯಾವುದು ಇವರಿಗೆ ಅಪಥ್ಯವಾಗಿ ಕಾಣುತ್ತಿದೆ. ಅಂದರೆ ಮಾತೃ ಭಾಷೆಯಲ್ಲಿ ವ್ಯವಹರಿಸಿ ಎಂಬುದು ಅಪಥ್ಯವೇ? ಸ್ವದೇಶಿಗೆ ಒತ್ತು ನೀಡಬೇಕು ಎಂಬುದು ಅಪಥ್ಯವೇ ಎಂದು ಪ್ರಶ್ನಿಸಿದರು.

    ಪ್ರತೀ ಗ್ರಾಮದಲ್ಲೂ ದೇವಾಲಯ ಸರ್ವರಿಗೂ ಮುಕ್ತವಾಗಬೇಕು. ಹಿಂದೂ ಸಮಾಜಕ್ಕೆ ಒಂದೇ ಸ್ಮಶಾನ ಇರಬೇಕು ಎಂದು ಆರ್‌ಎಸ್‌ಎಸ್ ಹೇಳಿದೆ. ಮತೀಯ ಓಲೈಕೆ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥಿಗಳಿಗೆ ಸಂಘ ಅರ್ಥವಾಗುವುದಕ್ಕೆ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಪ್ಪನಿಂದಲೇ RSS ಬ್ಯಾನ್ ಮಾಡಲು ಆಗ್ಲಿಲ್ಲ, ಇವರಿಂದ ಆಗುತ್ತಾ?: ಯತ್ನಾಳ್ ಟಾಂಗ್

    ಸಭ್ಯತೆಯ ಪಾಠ ಮರೆತ ಡಿ.ಕೆ.ಶಿವಕುಮಾರ್ ಎಷ್ಟೇ ಸ್ನೇಹವಿದ್ದರೂ ಸಾರ್ವಜನಿಕವಾಗಿ ಸಭ್ಯವಾಗಿ ನೆಡೆದುಕೊಳ್ಳಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕವಾಗಿ ಶಾಸಕ ಮುನಿರತ್ನ ಅವರನ್ನು ಸಭ್ಯತೆಯಿಂದ ನಡೆಸಿಕೊಂಡಿಲ್ಲ. ಯಾಕೆಂದರೆ ಒಬ್ಬ ಶಾಸಕರಾದ ಮುನಿರತ್ನ ಅವರನ್ನು ಕರೆದಿರುವ ರೀತಿ ಸರಿಯಲ್ಲ. ಅವರು ಸಾರ್ವಜನಿಕ ಸಭ್ಯತೆಯ ಪಾಠವನ್ನು ಮರೆತಿದ್ದಾರೆ ಎಂದು ಟೀಕಿಸಿದರು.

    ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಪ್ರಾಯೋಜಿತ ಯಾವುದೇ ಕಾರ್ಯಕ್ರಮವಾಗಲಿ ಶಿಷ್ಟಾಚಾರ ಪಾಲಿಸಲೇಬೇಕು. ಅದು ಸಂವಿಧಾನ ಶಾಸಕರಿಗೆ ನೀಡಿರುವ ಅಧಿಕಾರ. ಪಕ್ಷದ ಕಾರ್ಯಕ್ರಮವಾದರೆ ನಮ್ಮ ಆಕ್ಷೇಪಣೆ ಇಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸುವುದಿಲ್ಲ. ಈಗ ಅವರು ಸ್ಪಷ್ಟಪಡಿಸಲಿ. ಅದು ಸರ್ಕಾರದ ಕಾರ್ಯಕ್ರಮವೇ? ಅಥವಾ ಪಕ್ಷದ ಕಾರ್ಯಕ್ರಮವೇ ಎಂದು ಕೇಳಿದರು.

    ಸರ್ಕಾರಿ ಕಾರ್ಯಕ್ರಮಕ್ಕೆ ಆದರೆ ಮುನಿರತ್ನ ಅವರ ಹಕ್ಕು ಹಾಗೂ ಶಾಸಕರ ಹಕ್ಕು. ಸರ್ಕಾರದ ಕಾರ್ಯಕ್ರಮದಲ್ಲಿ ಅವರನ್ನ ಆಮಂತ್ರಿಸಿಲ್ಲವೆಂದರೆ ಅದು ಅಪರಾಧ ಮತ್ತು ಹಕ್ಕುಚ್ಯುತಿ ಆಗುತ್ತದೆ. ಯಾರು ಪ್ರಜಾಪ್ರಭುತ್ವದ ಮೌಲ್ಯವನ್ನು ಅಳವಡಿಸಿಕೊಂಡಿದ್ದಾರೋ ಅವರಿಗೆ ಜನಪ್ರತಿನಿಧಿಯ ಭಾವನೆಗಳು ಅರ್ಥವಾಗುತ್ತದೆ ಎಂದು ತಿಳಿಸಿದರು.

    ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ತಾನು ಸರ್ವಾಧಿಕಾರಿ ಎಂದು ಭಾವಿಸಿದೆ. ಆ ಕಾರಣದಿಂದಾಗಿ ಉಪಮುಖ್ಯಮಂತ್ರಿಗಳು ಶಾಸಕರ ಹಕ್ಕಿಗೆ ಕತ್ತರಿ ಹಾಕುವ ಕುಮ್ಮಕ್ಕಿಗೆ ಅವಕಾಶ ಕೊಟ್ಟಿದ್ದು ತಪ್ಪು. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿರುವುದು ಸರ್ಕಾರಕ್ಕೆ ಕಪ್ಪುಚುಕ್ಕಿ. ಶಿಷ್ಟಾಚಾರ ಉಲ್ಲಂಘಿಸಿದವರ ಮೇಲೆ ಕ್ರಮವಾಗಬೇಕು ಎಂದು ಆಗ್ರಹಿಸಿದರು.

  • ಗುತ್ತಿಗೆದಾರರು ಮಾಡಿರೋ ಕಮಿಷನ್ ಆರೋಪದ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು: ಸಿ.ಟಿ ರವಿ ಆಗ್ರಹ

    ಗುತ್ತಿಗೆದಾರರು ಮಾಡಿರೋ ಕಮಿಷನ್ ಆರೋಪದ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು: ಸಿ.ಟಿ ರವಿ ಆಗ್ರಹ

    ಬೆಂಗಳೂರು: ಗುತ್ತಿಗೆದಾರರು ಬರೆದಿರೋ ಪ್ರೇಮ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಉತ್ತರ ಕೊಡಬೇಕು. ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡಿರೋದಕ್ಕೆ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಾಯಕ ಸಿ.ಟಿ ರವಿ (CT Ravi) ಆಗ್ರಹಿಸಿದ್ದಾರೆ.

    ಗುತ್ತಿಗೆದಾರರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಅವರೇ ಗುತ್ತಿಗೆದಾರರ ಪ್ರೇಮ ಪತ್ರಕ್ಕೆ ತಮ್ಮ ಪ್ರತಿಕ್ರಿಯೆ ಏನು? ನಿಮ್ಮ ಸರ್ಕಾರದ ಬಗ್ಗೆ ಗುತ್ತಿಗೆದಾರರು ಪ್ರೇಮ ಪತ್ರ ಬರೆದಿದ್ದಾರೆ. ನಿಮ್ಮ ಸರ್ಕಾರದಲ್ಲಿ ಗುತ್ತಿಗೆದಾರರನ್ನ ಯಾವ ರೀತಿ ಕಾಡ್ತಿದ್ದಾರೆ ಅನ್ನೋದನ್ನ ಅವರ ಪ್ರೇಮ ಪತ್ರದಲ್ಲಿ ನಿವೇದನೆ ಮಾಡಿದ್ದಾರೆ. ನಿಮ್ಮ ಎರಡು ವರ್ಷದ ಅವಧಿಯಲ್ಲಿ ಕಮಿಷನ್ ಡಬಲ್ ಆಗಿದೆ ಅಂತ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರೇ ಈಗ ಹೇಳಿ ಪೇ ಸಿಎಂ ಅಂತ ಪೋಸ್ಟರನ್ನ ಯಾರ ಮುಖಕ್ಕೆ ಅಂಟಿಸಬೇಕು? ಯಾರ ಮನೆ ಬಾಗಿಲಿಗೆ ಅಂಟಿಸಬೇಕು? ನಿಮ್ಮ ಮುಖಕ್ಕೆ ಈಗ ಪೇ ಸಿಎಂ ಅಂತ ಅಂಟಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಜನರ ಗಮನ ಬೇರೆ ಕಡೆ ಸೆಳೆಯೋಕೆ ಸಿದ್ದರಾಮಯ್ಯ ಸಮೀಕ್ಷೆ ತಂತ್ರ- ಸಿಸಿ ಪಾಟೀಲ್

    ಕಮಿಷನ್ ಆರೋಪ ನಿಮ್ಮ ಸರ್ಕಾರದ ಮೇಲೆ ಮಾಡಿದ್ದಾರೆ. ಕೇರಳ, ಆಂಧ್ರ, ತೆಲಂಗಾಣ ಸಿಎಂ ಮೇಲೆ ಗುತ್ತಿಗೆದಾರರು ಆರೋಪ ಮಾಡಿಲ್ಲ. ಕರ್ನಾಟಕ ಸರ್ಕಾರದ ಸಚಿವರ ಮೇಲೆ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ನಿಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಇದರ ನೈತಿಕ ಹೊಣೆ ಯಾರು ಹೊರಬೇಕು? ನೀವೇ ನೈತಿಕ ಹೊಣೆ ಹೊರಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

    ವಿಪಕ್ಷ ಇದ್ದಾಗ ಬೇರೆ ಅವರಿಗೆ ರಾಜೀನಾಮೆ ಕೊಡಬೇಕು ಅಂತ ನೀವು ಕೇಳಿದ್ರಿ. ಈಗ ನಿಮ್ಮ ರಾಜೀನಾಮೆ ಯಾವಾಗ ಕೊಡ್ತೀರಾ? ಇದರ ಹೊಣೆ ಸಿದ್ದರಾಮಯ್ಯ ಹೊರಬೇಕು. ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಂಡು ಒತ್ತಡ, ತಂತ್ರ ಹೇರಿ ಅವರಿಗೆ ಅನಿವಾರ್ಯತೆ ಸೃಷ್ಟಿ ಮಾಡಿ ನಿಮಗೆ ಕೇಳಿದಷ್ಟು ಕಮಿಷನ್ ಕೊಟ್ಟು ಅನಿವಾರ್ಯವಾಗಿ ಒತ್ತಡಕ್ಕೆ ಬಲಿಯಾಗೋ ಹಾಗೇ ಮಾಡಿದ್ರಿ. ಈ ಪಾಪದ ಪ್ರಾಯಶ್ಚಿತ ಯಾರಿಗೆ? ನಿಮಗೆ ಪ್ರಾಯಶ್ಚಿತ ಆಗಬೇಕು. ನಾನು ಆಗ್ರಹ ಮಾಡ್ತೀನಿ ಗುತ್ತಿಗೆದಾರರ ಪ್ರೇಮ ಪತ್ರಕ್ಕೆ ರಾಜೀನಾಮೆ ಮೂಲಕ ಉತ್ತರ ಕೊಡಿ, ಮಾತಿನ ಉತ್ತರ ಬೇಡ ಎಂದು ಆಗ್ರಹಿಸಿದ್ದಾರೆ.

    2 ವರ್ಷ ನಿಮ್ಮ ಮಾತಿನ ಉತ್ತರ ಕೇಳಿದ್ದೇವೆ. 2 ವರ್ಷದಲ್ಲಿ ಏನು ಸುಧಾರಣೆ ಮಾಡಿದ್ದೀರಿ ಅಂತಾನೂ ನೋಡಿದ್ದೇವೆ. ಕಮಿಷನ್ ಡಬಲ್ ಮಾಡೋದು ಸುಧಾರಣೆನಾ? ನಿಮ್ಮ ಪರಮಾಪ್ತರು ಅನ್ನೋರೇ ಇದರ ರೂವಾರಿಗಳಾಗಿದ್ದಾರೆ ಎಂದರೆ ನಿಮ್ಮ ಕೃಪಾಕಟಾಕ್ಷ ಇಲ್ಲದೇ ಅವರೆಲ್ಲ ಆ ಕೆಲಸ ಮಾಡೋಕೆ ಸಾಧ್ಯವಿಲ್ಲ. ಹೀಗಾಗಿ ಈ ಹೊಣೆ ನೀವೇ ಹೊತ್ತು, ರಾಜೀನಾಮೆ ಕೊಡಬೇಕು ಎಂದಿದ್ದಾರೆ.

  • ಸಿ.ಟಿ ರವಿ ಸಂಸ್ಕೃತಿ ಬಗ್ಗೆ ಜನರಿಗೆ ಗೊತ್ತಿದೆ – ಡಿಕೆಶಿ

    ಸಿ.ಟಿ ರವಿ ಸಂಸ್ಕೃತಿ ಬಗ್ಗೆ ಜನರಿಗೆ ಗೊತ್ತಿದೆ – ಡಿಕೆಶಿ

    ಬೆಂಗಳೂರು: ಸಿ.ಟಿ ರವಿ (CT Ravi) ಅವರ ಸಂಸ್ಕೃತಿ ಬಗ್ಗೆ ಜನರಿಗೆ ಗೊತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು.

    ಬಿಜೆಪಿ ನಾಯಕ ಸಿ.ಟಿ ರವಿ ಮೇಲೆ ದ್ವೇಷ ಭಾಷಣ ಮಾಡಿದ ಹಿನ್ನೆಲೆ ಕೇಸ್ ದಾಖಲಾಗಿರುವ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ತಿಳಿದುಕೊಳ್ತೀನಿ. ಆದರೆ ಅವರ ಸಂಸ್ಕೃತಿ ಏನು ಅಂತ ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: Forest Martyrs Day | ಹುತಾತ್ಮರಿಗೆ 50 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ

    ಇದೇ ವೇಳೆ ಜಿಬಿಎ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ನಡೆಸುವ ವಿಚಾರವಾಗಿ ಮಾತನಾಡಿ, ಜಿಬಿಎ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲೆಟ್ ಪೇಪರ್ ಮೂಲಕ ನಡೆಸೋದು ತಪ್ಪೇನು ಇಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಅವರೇ ಬ್ಯಾಲೆಟ್‌ನಲ್ಲಿ ಚುನಾವಣೆ ಮಾಡಬೇಕು ಎಂದು ಕಾನೂನು ಮಾಡಿದ್ದರು. ಎಲೆಕ್ಷನ್ ಕಮೀಷನ್‌ನಲ್ಲಿಯೂ ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಮಾಡೋಕೆ ಅವಕಾಶ ಇದೆ. ಅದು ಅವರಿಗೆ ಬಿಟ್ಟ ವಿಚಾರ. ಜಿಬಿಎ ಆಕ್ಟ್ ಮಾಡೋವಾಗ ನಾನು ವಾಪಸ್ ತಂದಿದ್ದೇನೆ ಎಂದರು.

    ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಮಾಡೋದು ತಪ್ಪೇನು ಅಲ್ಲ. ಕಾನೂನು ಸಚಿವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಚುನಾವಣೆ ಆಯೋಗ ಯಾವುದಕ್ಕೆ ಸಿದ್ಧವಾಗಿದೆಯೋ ಅದರಂತೆ ನಾವು ನಡೆಸುತ್ತೇವೆ ಎಂದು ತಿಳಿಸಿದರು.

    ಇದೇ ವೇಳೆ ಗೃಹ ಸಚಿವ ಪರಮೇಶ್ವರ್ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಅದರ ಬಗ್ಗೆ ಗೊತ್ತಿಲ್ಲ. ಈಗಷ್ಟೇ ಮಾಧ್ಯಮದವರು ಹೇಳಿದರು. ಆ ವಿಷಯ ಏನು ಅಂತ ಗೊತ್ತಿಲ್ಲ, ತಿಳಿದುಕೊಂಡು ಮಾತಾಡ್ತೀನಿ ಎಂದರು.ಇದನ್ನೂ ಓದಿ: `ಮುತ್ತರಸ’ನಾದ ಮಡೆನೂರು ಮನು

  • ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

    ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

    ಚಿಕ್ಕಮಗಳೂರು: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ ಅಂತ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ (CT Ravi) ಹೇಳಿದ್ದಾರೆ.

    ಮಂಡ್ಯದ (Mandya) ಮದ್ದೂರಿನ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಸಿ.ಟಿ ರವಿ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ. ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ರಕ್ತ ಪ್ಯೂರ್ ಹಿಂದುತ್ವ ಬೆರಕೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಮಿಸ್ಟರ್ ಮಂಜುನಾಥ್, ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ, ಸುಪ್ರೀಂ ಕೋರ್ಟ್ ಆದೇಶವಿದೆ. ನನ್ನ ಮೇಲೆ ಕೇಸ್ ಹಾಕಿ ನಿಯತ್ ತೋರ್ಸೋದಲ್ಲ. ನಾಳೆ ನೀನು ಮದ್ದೂರು ವ್ಯಾಪ್ತಿಯಲ್ಲಿ ಸುಮೋಟೋ ಕೇಸ್ ಹಾಕಬೇಕು. ಯಾರ‍್ಯಾರು ಬೆಳಗ್ಗೆ 5ಕ್ಕೆ ಕೂಗ್ತಾರೆ, ಅವರ ಮೇಲೆ ಕೇಸ್ ಹಾಕಿ ಖಾಕಿ ಬಟ್ಟೆಗೆ ನಿಯತ್ ಇದೆ ಅಂತ ತೋರ್ಸು ಅಂತ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ – ಸಿ.ಟಿ ರವಿ ವಿರುದ್ಧ ಕೇಸ್ ದಾಖಲು

    ಕೇಸ್ ನನಗೆ ಹೊಸದಲ್ಲ, ಕೇಸಿಗೆ ಹೆದರುವ ಜಾಯಮಾನದವನೂ ನಾನಲ್ಲ. ನೀವು ಕಲ್ಲು ಹೊಡೆದು, ತೊಡೆ ತಟ್ಟಿ, ಪೆಟ್ರೋಲ್ ಬಾಂಬ್ ಹಾಕಿದ್ರೆ, ಸಹಿಸುವ ಕಾಲ ಮುಗಿದಿದೆ ಎಂದಿದ್ದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಹೇಳಿದ್ದೆ, ಪ್ರೀತಿಗೆ ಪ್ರೀತಿ-ಕಲ್ಲಿಗೆ ಕಲ್ಲು ಎಂದಿದ್ದೆ. ನನ್ನ ಹೇಳಿಕೆಗೆ ಇಂದಿಗೂ ನಾನು ಬದ್ಧ. ಶಿವನ ನೆಲದಲ್ಲಿ ಅಲ್ಲಾ ಒಬ್ಬನೇ ಅಂತ ಅಂದ್ರೆ ಉಳಿದ ದೇವರ ಅಸ್ತಿತ್ವ ಏನು? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಸೆ.12ರ ನಂತರ ಮದ್ದೂರಿಗೆ ಹೆಚ್‌ಡಿಕೆ

    ಕೆಲವರು ನಾನು ಹಿಂದೂ ಅಂತಾರೆ, ನಾಮ ಹಾಕ್ಕೊಂಡ್, ನಾಮ ಅಳಿಸಿ ಟೋಪಿ ಹಾಕಿ ನಮಾಜ್ ಮಾಡೋದು. ಇಂತಹ ತಾರಾತಕಡಿ, ನಾಟಕದ ಜಾಯಮಾನದವನು ನಾನಲ್ಲ. ನನ್ನ ರಕ್ತ ಪ್ಯೂರ್ ಹಿಂದುತ್ವ, ಬೆರಕೆ ಅಲ್ಲ ಅಂತ ʻಕೈʼ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮದ್ದೂರಿನಲ್ಲಿ ʼಕೇಸರಿʼ ಘರ್ಜನೆ; ಬಿಜೆಪಿ-ಜೆಡಿಎಸ್ ಒಗ್ಗೂಡಿ ಗಣೇಶ ಮೆರವಣಿಗೆ – ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ

    ಸಿ.ಟಿ ರವಿ ವಿರುದ್ಧ ಪ್ರಕರಣ ದಾಖಲಾಗಿದ್ದೇಕೆ?
    ಮದ್ದೂರಿನಲ್ಲಿ (Maddur) ಗಣೇಶ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟದ ಬಳಿಕ ಬುಧವಾರ (ಸೆ.10) ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ಸಿ.ಟಿ.ರವಿ ಭಾಷಣ ಮಾಡಿದ್ದರು. ಭಾಷಣದ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮದ್ದೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಮಂಜುನಾಥ್ ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೂರು ದಿನಗಳ ಬಳಿಕ ಸಹಜ ಸ್ಥಿತಿಯತ್ತ ಮದ್ದೂರು

  • ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ – ಸಿ.ಟಿ ರವಿ ವಿರುದ್ಧ ಕೇಸ್ ದಾಖಲು

    ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ – ಸಿ.ಟಿ ರವಿ ವಿರುದ್ಧ ಕೇಸ್ ದಾಖಲು

    ಮಂಡ್ಯ: ಮದ್ದೂರಿನ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ ರವಿ (CT Ravi) ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ.

    ಮದ್ದೂರಿನಲ್ಲಿ (Maddur) ಗಣೇಶ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟದ ಬಳಿಕ ಬುಧವಾರ (ಸೆ.10) ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ಸಿ.ಟಿ.ರವಿ ಭಾಷಣ ಮಾಡಿದ್ದರು. ಭಾಷಣದ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮದ್ದೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಮಂಜುನಾಥ್ ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದ್ದೂರಿನಲ್ಲಿ ʼಕೇಸರಿʼ ಘರ್ಜನೆ; ಬಿಜೆಪಿ-ಜೆಡಿಎಸ್ ಒಗ್ಗೂಡಿ ಗಣೇಶ ಮೆರವಣಿಗೆ – ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ

    ಅನ್ಯ ಸಮುದಾಯಗಳ ಮಧ್ಯೆ ದ್ವೇಷ ಉಂಟುಮಾಡುವ ಮತ್ತು ಸೌಹಾರ್ದತಾ ಭಾವನೆಗಳಿಗೆ ಭಾದಕವಾಗುವಂತೆ, ವೈರತ್ವ, ದ್ವೇಷ ಉಂಟಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಅಡಿ ಪ್ರಕರಣ ದಾಖಲಾಗಿದೆ.

    ಸಿಟಿ ರವಿ ಹೇಳಿದ್ದೇನು?
    ಅವರು 5% ಇದ್ದಾಗಲೇ ಬಾಲ ಬಿಚ್ಚುತ್ತಿದ್ದಾರೆ. ಇನ್ನೂ 50% ಆದಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳು ಬದುಕುವುದಕ್ಕೆ ಆಗುತ್ತಾ? ಸಮಾಜ ಒಡೆಯುತ್ತಾರೆ. ಕೆಲವು ಕುತಂತ್ರಿಗಳು ವೋಟಿನ ಆಸೆಗಾಗಿ ಹಿಂದೂ ಸಮಾಜವನ್ನು ಒಡೆಯುತ್ತಾರೆ. ಮುಸಲ್ಮಾನರು ಪಾಕಿಸ್ತಾನ ಜಿಂದಾಬಾದ್, ಬಾಂಬ್ ಹಾಕಿದರೂ ಕೂಡ ಎಸ್‌ಎಸ್ ಅಂತಾರೆ. ಮುಸಲ್ಮಾನರು ರಾಮಮಂದಿರದಲ್ಲಿ ಪೆಟ್ರೋಲ್ ಬಾಂಬ್ ಹಾಕಿದ್ದಾಗಲೇ ಇವರಿಗೆ ಬುದ್ಧಿ ಕಲಿಸಬೇಕಾಗಿತ್ತು. ಈಗ ಈ ರೀತಿ ಆಗುತ್ತಿರಲಿಲ್ಲ.

    ನೀವು ಹೊರಗಡೆಯಿಂದ ಬಂದವರು, ನಾವು ಇಲ್ಲೇ ಇರುವವರು, ತೊಡೆ ತಟ್ಟೋಕೆಲಸ ಮಾಡಬೇಡಿ. ತೊಡೆ ಮುರಿತೀವಿ. ತಲೆನೂ ತೆಗಿತೀವಿ, ನಮಗೆ ತೊಡೆ ಮುರಿಯೋದು ಗೊತ್ತು. ಕಲ್ಲು ಹೊಡೆಯುವವರನ್ನು ಕಲ್ಲಿನ ಒಳಗಡೆ ಸಮಾಧಿ ಮಾಡೋ ತಾಕತ್ತು ಹಿಂದೂ ಸಮಾಜಕ್ಕಿದೆ ಎಂದು ಹೇಳಿದ್ದರು.ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಸೆ.12ರ ನಂತರ ಮದ್ದೂರಿಗೆ ಹೆಚ್‌ಡಿಕೆ

  • ವಿಜಯನಗರ ಸಾಧನಾ ಸಮಾವೇಶಕ್ಕೆ 10 ಕೋಟಿ – ಲಾಡ್ V/S ಸಿ.ಟಿ.ರವಿ ವಾಕ್ಸಮರ

    ವಿಜಯನಗರ ಸಾಧನಾ ಸಮಾವೇಶಕ್ಕೆ 10 ಕೋಟಿ – ಲಾಡ್ V/S ಸಿ.ಟಿ.ರವಿ ವಾಕ್ಸಮರ

    ಬೆಂಗಳೂರು: ಕಾಂಗ್ರೆಸ್ (Congreses) ಸರ್ಕಾರದ ಸಾಧನಾ ಸಮಾವೇಶಕ್ಕೆ 10 ಕೋಟಿ ರೂ. ಅನ್ನು ಪೂರಕ ಅಂದಾಜಿನಲ್ಲಿ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

    ರಾಹುಲ್, ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿಸಿದ್ದ ಸಾಧನಾ ಸಮಾವೇಶ ಕಾರ್ಯಕ್ರಮಕ್ಕೆ ಸರ್ಕಾರದ ಹಣ ಏಕೆ ಎಂದು ಬಿಜೆಪಿ ಕ್ಯಾತೆ ತೆಗೆದಿದೆ. ರಾಹುಲ್ ಭಾಗವಹಿಸಿದ ಕಾರ್ಯಕ್ರಮಕ್ಕೆ 10 ಕೋಟಿ ರೂ. ಏಕೆ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕಾಂಗ್ರೆಸ್ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲ, ಡಿಕೆ ಶಿವಕುಮಾರ್ ಅವರೇ ನಮಗೆ ಸಿಎಂ: ಆರ್.ಅಶೋಕ್

    ವಿಧಾನಸಭೆಯಲ್ಲಿಂದು ಸಿಎಂ ಸಿದ್ದರಾಮಯ್ಯ ಪರವಾಗಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು 3,352 ಕೋಟಿ ರೂ. ಹಣವನ್ನು ಪೂರಕ ಅಂದಾಜು ಮಂಡಿಸಿದ್ದಾರೆ. ಇದರಲ್ಲಿ ವಿಜಯನಗರದಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶಕ್ಕೆ 10 ಕೋಟಿ ರೂ. ನೀಡಿರುವುದು ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ. ಇದೇ ವೇಳೆ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಾಧನೆ ಸೊನ್ನೆ, ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾತ್ರೆ. ನಾವು ಖಜಾನೆಗೆ ಮಾಲೀಕರಲ್ಲ, ನಾವು ಖಜಾನೆಯ ಟ್ರಸ್ಟಿ. ಒಂದೊಂದು ರೂಪಾಯಿಯನ್ನೂ ಜನರ ಹಿತಕ್ಕೆ ಬಳಸಬೇಕು. ವಿಜಯನಗರ ಸಮಾವೇಶ ನಿಮ್ಮ ಪಕ್ಷದ ಸಮಾವೇಶ, ಪಕ್ಷದ ಹಣದಲ್ಲಿ ಮಾಡಿ, ಸರ್ಕಾರದ ಹಣ ಏಕೆ? ಜನರ ಹಣ ಏಕೆ? ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದಕ್ಕೆ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದು, 1 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ಕೊಟ್ಟಿದ್ದೇವೆ. ಬಿಜೆಪಿ ಅವರ ಟೀಕೆ ತಳ್ಳಿ ಹಾಕುತ್ತೇವೆ. ರಾಹುಲ್ ಗಾಂಧಿ, ಖರ್ಗೆ ಭಾಗವಹಿಸಿದ ಮಾತ್ರಕ್ಕೆ ಪ್ರಚಾರ ಅಂದ್ರೆ ಹೇಗೆ? ಬೇಟಿ ಬಚಾವ್, ಬೇಟಿ ಪಡಾವೋ ಕಾರ್ಯಕ್ರಮಕ್ಕೆ ಹಣ, ಪ್ರಚಾರಕ್ಕೆ ಖರ್ಚು ಮಾಡಿಲ್ಲವಾ ಟಕ್ಕರ್ ಕೊಟ್ಟರು.

    ಇನ್ನೂ ಪೂರಕ ಅಂದಾಜಿನಲ್ಲಿ ಕಪಿಲ್ ಸಿಬಲ್ ಮತ್ತು ಇತರೆ ವಕೀಲರ ಸಂಭಾವನೆಗೆ 2.30 ಕೋಟಿ ರೂ. ನೀಡಲಾಗಿದ್ದು, ಯಾವ ಕೇಸ್‌ಗೆ ಸಂಬಂಧಪಟ್ಟಿದ್ದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ ಮುಡಾ ಪ್ರಕರಣದಲ್ಲಿ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಆ ಕಾರಣಕ್ಕಾಗಿ ಪೂರಕ ಅಂದಾಜಿನಲ್ಲಿರುವ ಸಂಭಾವನೆ ವೆಚ್ಚದ ಉಲ್ಲೇಖ ಕುತೂಹಲ ಮೂಡಿಸಿದೆ.

    ಪೂರಕ ಅಂದಾಜಿನಲ್ಲಿ ಏನಿದೆ?
    -ವಿಜಯನಗರ ಸಾಧನಾ ಸಮಾವೇಶಕ್ಕೆ 10 ಕೋಟಿ ರೂ.
    -ನಂದಿಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಗೆ 3.69 ಕೋಟಿ ರೂ.
    -ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಐಟಿ ಉಪಕರಣಗಳ ಅಳವಡಿಕೆ, ನಿರ್ವಹಣೆಗೆ 50 ಕೋಟಿ ರೂ.
    -ಕಪಿಲ್ ಸಿಬಲ್ ಹಾಗೂ ಇತರೆ ವಿಶೇಷ ವಕೀಲರ ಸಂಭಾವನೆಗೆ 2.30 ಕೋಟಿ ರೂ.
    -ಕೆ.ಆರ್.ಪುರಂನಲ್ಲಿ ಕೆಎಸ್‌ಆರ್‌ಟಿಸಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಮೀನು ಖರೀದಿಗೆ 47 ಕೋಟಿ ರೂ.
    -ಮಂಡ್ಯ ಮೈಷುಗರ್ ಕಾರ್ಖಾನೆಗೆ ಕಬ್ಬು ಅರೆಯಲು 10 ಕೋಟಿ ರೂ.
    -ಪರಿಷತ್ ವಿರೋಧ ಪಕ್ಷದ ನಾಯಕ, ಮುಖ್ಯ ಸಚೇತಕರ ಹೊಸ ಕಾರು ಖರೀದಿಗೆ 61 ಲಕ್ಷ ರೂ.
    -ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಮೆಡಿಕಲ್ ಬಿಲ್ ಪಾವತಿಗೆ 21 ಲಕ್ಷ ರೂ.
    -ಬೆಳಗಾವಿ ಅಧಿವೇಶನದ ಬಾಕಿ ಬಿಲ್ ಪಾವತಿಗೆ 1.72 ಕೋಟಿ ರೂ.ಇದನ್ನೂ ಓದಿ: ಸಿದ್ದರಾಮಯ್ಯ ನಮಗೆ ಸಿಎಂ ಅಲ್ಲ, ನಮಗೆ ಡಿಕೆಶಿಯೇ ಸಿಎಂ: ಅಶೋಕ್‌

  • ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

    ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ

    – ಸರ್ಕಾರವೂ ಧರ್ಮಸ್ಥಳ ಪ್ರಕರಣದಲ್ಲಿ ಶಾಮೀಲಾಗಿದೆ ಅಂತ ಅನುಮಾನ ಪಡಬೇಕಾಗುತ್ತೆ; ಎಂಎಲ್‌ಸಿ

    ಬೆಂಗಳೂರು: 24 ಕೊಲೆಗಳ ಸಿಎಂ ಸಿದ್ದರಾಮಯ್ಯ (Siddaramaiah) ಮಾಡಿಸಿದ್ದಾರೆ ಅಂತ ಮಹೇಶ್‌ ತಿಮರೋಡಿ ಆರೋಪ ಮಾಡಿದ್ದಾರೆ. ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ. ಈ ಬಗ್ಗೆಯೂ ತನಿಖೆಯಾಗಲಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ (CT Ravi) ಒತ್ತಾಯಿಸಿದರು.

    ವಿಧಾನಸೌಧ ಆವರಣದಲ್ಲಿ ಪಬ್ಲಿಕ್‌ ಟಿವಿ ಜೊತೆಗೆ ಮಾತನಾಡಿದ ಅವರು, ಧರ್ಮಸ್ದಳದ (Dharmasthala) ಬಗ್ಗೆ ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸದಿದ್ದರೇ ಸರ್ಕಾರವೂ ಈ ಪ್ರಕರಣದಲ್ಲಿ ಶಾಮೀಲಾಗಿದೆ ಅಂತ ನಾವು ಅನುಮಾನ ಪಡಬೇಕಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

    ಧರ್ಮಸ್ಥಳದ ವಿರದ್ಧ ಅಪಪ್ರಚಾರ ನಡೆಯುತ್ತಿದ್ದು ಅಲ್ಲಿಗೆ ನಾವು ಹೋಗಿ ಹೋರಾಟ ಮಾಡದೇ ಕನ್ವರ್ಟ್‌ ಆದವರು, ಮತಾಂತರಕ್ಕೆ ಬೆಂಬಲ‌ ನೀಡುವವರು ಹೋಗಿ ಹೋರಾಟ ಮಾಡ್ತಾರಾ? ಅಂತ ಪ್ರಶ್ನಿಸಿದರು. ಇದನ್ನೂ ಓದಿ: Rain Alert | ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ – ಮಲೆನಾಡು ಭಾಗದಲ್ಲಿ ರೆಡ್‌ ಅಲರ್ಟ್‌

    ಧರ್ಮಸ್ಥಳಕ್ಕಿಂತ ಮಾಸ್ಕ್ ಮ್ಯಾನ್ ಮೇಲೆ‌ ಶ್ರದ್ದೆನಾ?
    ಅನಾಮಿಕ‌ ತೋರಿಸಿದ 16 ಜಾಗಗಳಲ್ಲಿ ಅಗೆದರೂ ಏನೂ ಸಿಕ್ಕಿಲ್ಲ. ಅವನ‌ ಜೊತೆ ಸೇರಿಕೊಂಡು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಯುಟ್ಯೂಬ್‌, ಸೋಶಿಯಲ್ ಮೀಡಿಯಾದವರೂ (Social Media) ಸೇರಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿಗಳೇ ಷಡ್ಯಂತ್ರ ಆಗಿದೆ ಅಂದಿದ್ದಾರೆ. ನಮಗೂ ಅದೆ ಅನುಮಾನ ಅನಾಮಿಕನನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸೋಷಿಯಲ್‌ ಮೀಡಿಯಾ ಯೂಟ್ಯೂಬ್‌ನಲ್ಲಿ ಮಾತನಾಡಿದವರ ವಿರುದ್ಧವೂ ಕ್ರಮ ತಗೆದುಕೊಳ್ಳಬೇಕು. ಧಾರ್ಮಿಕ ಶ್ರದ್ದಾ ಕೇಂದ್ರವಾದ ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಒಬ್ಬ ಮಾಸ್ಕ್ ಮ್ಯಾನ್ ಮೇಲೆ‌ ಇವರಿಗೆ ಶ್ರದ್ದೆನಾ? ಕೋಟ್ಯಂತರ ಜನರ ಭಕ್ತಿಯ ಧಾರ್ಮಿಕ ಕೇಂದ್ರದ ಮೇಲೆ ಇವರಿಗೆ ಶ್ರದ್ದೆನಾ? ಅಂತ ಪ್ರಶ್ನೆ ಮಾಡಿದರು.

    ಎಡ ಪಂಥೀಯರ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಮಾಡಿದ್ದೇವೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅಲ್ಲದೇ ಸಿಎಂ 24 ಕೊಲೆ‌ ಮಾಡಿದ್ದಾರೆ ಅಂತ ಮಹೇಶ್ ತಿಮ್ಮರೋಡಿ ಆರೋಪ ಮಾಡಿದ್ದಾರೆ. ಸಿಎಂ‌ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂತ ನಾನು ನಂಬಲ್ಲ. ಕಾನೂನು ಎಲ್ಲರಿಗೂ ಒಂದೇ ಹಾಗೇನಾದರು ಸಾಕ್ಷ್ಯಗಳಿದ್ದರೆ, ಹೋಗಿ ದೂರು ಕೊಡಲಿ. ಈ ವಿಚಾರದಲ್ಲಿ ಆಧಾರ ಇಲ್ಲದೇ ಆರೋಪ ಮಾಡಲ್ಲ. ಹಿಟ್ ಅಂಡ್ ರನ್ ಮಾಡಲ್ಲ. ಆರೋಪದ ಬಗ್ಗೆ ಸಹಾ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

    ಧರ್ಮಸ್ದಳದ ಬಗ್ಗೆ ಆರೋಪ ಮಾಡಿದವರ ವಿರುದ್ಧ ತನಿಖೆ ನಡೆಸದಿದ್ದರೇ ಸರ್ಕಾರವೂ ಶಾಮೀಲಾಗಿದೆ ಅಂತ ನಾವು ಅನುಮಾನ ಪಡಬೇಕಾಗಿತ್ತದೆ. ಮುಂದೆ ಭಕ್ತರು ಹಾಗೂ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:  ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

  • ತಾನು ಕಳ್ಳ ಪರರ ನಂಬ ಮಾನಸಿಕತೆಯಿರುವ ರಾಹುಲ್ ಗಾಂಧಿ ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲಿ: ಸಿ.ಟಿ ರವಿ

    ತಾನು ಕಳ್ಳ ಪರರ ನಂಬ ಮಾನಸಿಕತೆಯಿರುವ ರಾಹುಲ್ ಗಾಂಧಿ ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲಿ: ಸಿ.ಟಿ ರವಿ

    ಬೆಂಗಳೂರು: ಕಾಂಗ್ರೆಸ್‌ನವರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಸುಳ್ಳು ಆರೋಪ ಮಾಡಿರುವ ರಾಹುಲ್ ಗಾಂಧಿ (Rahul Gandhi) ಮೆಡಿಕಲ್ ಚೆಕಪ್ ಮಾಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (C T Ravi) ಆಕ್ರೋಶ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ (Bengaluru) ಮಾತಾಡಿದ ಅವರು, ಕರ್ನಾಟಕದಲ್ಲಿ ಮತದಾರರ ರದ್ದಿಗಿಂತ ಸೇರ್ಪಡೆ ಹೆಚ್ಚಾಗಿದೆ. ಜನನ ಪ್ರಮಾಣಕ್ಕಿಂತಲೂ ಹೆಚ್ಚು ಹೆಸರು ಸೇರ್ಪಡೆ ಆಗಿದೆ. ಮರಣ ಪ್ರಮಾಣಕ್ಕಿಂತಲೂ ಕಡಿಮೆ ಹೆಸರು ರದ್ದಾಗಿದೆ. ಬಹುತೇಕ ಸಂದರ್ಭಗಳಲ್ಲಿ ಕಾಂಗ್ರೆಸ್ (Congress) ಅಧಿಕಾರದಲ್ಲಿದ್ದಾಗಲೇ ಹೆಸರು ಸೇರ್ಪಡೆ ಮತ್ತು ರದ್ದಾಗಿದೆ. 2014ಕ್ಕೂ ಮುನ್ನ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. 2013ರಲ್ಲಿ ರಾಜ್ಯದಲ್ಲೂ ಕಾಂಗ್ರೆಸ್ ಇತ್ತು. 2014ರ ಲೋಕಸಭೆ (Lok Sabha) ವೇಳೆ ಕಾಂಗ್ರೆಸ್ ಕೇಂದ್ರದಲ್ಲಿತ್ತು. 2019ರ ಲೋಕಸಭೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಇತ್ತು. ಅಕ್ರಮ ಮಾಡಿದ್ರೆ ಕಾಂಗ್ರೆಸ್ ನವ್ರೇ ಮಾಡಿರಬೇಕು, ಯಾಕಂದ್ರೆ ಬಹುತೇಕ ಅವಧಿಯಲ್ಲಿ ಅವರೇ ಅಧಿಕಾರದಲ್ಲಿದ್ರು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ

    ಕಾಂಗ್ರೆಸ್ ನೇಮಿಸಿದ ಅಧಿಕಾರಿಗಳೇ ಚುನಾವಣಾ ಆಯೋಗದಲ್ಲಿದ್ರು. ಚುನಾವಣಾ (Election) ಅಕ್ರಮದ ಇತಿಹಾಸ ಕಾಂಗ್ರೆಸ್‌ನಲ್ಲೇ ಇದೆ. ಇನ್ನು ಅಲಹಾಬಾದ್ ಕೋರ್ಟ್ ರಾಯ್‌ಬರೇಲಿಯಲ್ಲಿ ಇಂದಿರಾ ಚುನಾವಣಾ ಅಕ್ರಮ ಬಗ್ಗೆ ತೀರ್ಪು ಕೊಟ್ಟಿತ್ತು. ರಾಹುಲ್ ತಾನು ಕಳ್ಳ ಆಗಿದ್ರೂ ಪರರ ನಂಬ ಎಂಬ ಗಾದೆ ಮಾತಿನಂತೆ ನಡ್ಕೊಳ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ ಹೋರಾಟಕ್ಕೆ ಟಕ್ಕರ್ – ಆ.5ರಂದು ಗಾಂಧಿ ಪ್ರತಿಮೆ ಬಳಿ ಬಿಜೆಪಿಯೂ ಪ್ರತಿಭಟನೆ: ಬಿವೈವಿ

    ಮಹಾದೇವಪುರದಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ ಲೋಕಸಭೆಗೂ ಕಳೆದ ವಿಧಾನಸಭೆಗೂ 60 ಸಾವಿರ ಮತದಾರರು ಹೆಚ್ಚಾಗಿದ್ದಾರೆ. ಇಲ್ಲಿ ಹೆಸರು ರದ್ದಾಗಿಲ್ಲ, ಸೇರ್ಪಡೆ ಆಗಿದೆ. ಇಲ್ಲಿ ಮತಗಳ್ಳತನ ಎಲ್ಲಾಗಿದೆ ಹೇಳಲಿ. ರಾಜಾಜಿನಗರದಲ್ಲೂ (Rajajinagara) 3 ಲಕ್ಷ ಮತದಾರರು ಕಳೆದ ಚುನಾವಣೆಗಳಲ್ಲಿ ಹೆಚ್ಚಾಗಿದ್ದಾರೆ. ಇಲ್ಲೂ ಮತಗಳ್ಳತನ ಆಗಿಲ್ಲ. ಕಾಂಗ್ರೆಸ್, ರಾಹುಲ್‌ಗೆ ಅಹಂ ಭಾವವಿದೆ. ತಾವು ಗೆದ್ರೆ ಮಾತ್ರ ಸಕ್ರಮ, ಬೇರೆಯವ್ರು ಗೆದ್ರೆ ಅದು ಅಕ್ರಮ ಎಂಬ ಮಾನಸಿಕ ರೋಗ ರಾಹುಲ್‌ಗಿದೆ ಎಂದು ಆರೋಪಿಸಿದರು.

    ರಾಹುಲ್‌ಗೆ ಮೆಡಿಕಲ್ ಚೆಕಪ್ ಆಗ್ಬೇಕು:
    ಇನ್ನು, ಚುನಾವಣಾ ಅಕ್ರಮದ ಇತಿಹಾಸ ಕಾಂಗ್ರೆಸ್‌ನಲ್ಲೇ ಇದೆ. ರಾಹುಲ್ ತಾನು ಕಳ್ಳ ಆಗಿದ್ರೂ ಪರರ ನಂಬ ಎಂಬ ಗಾದೆ ಮಾತಿನಂತೆ ನಡ್ಕೊಳ್ತಿದ್ದಾರೆ. ಕೆಲವರ ಭವಿಷ್ಯ ರಾಹುಲ್ ಗಾಂಧಿ ಮೇಲೆ ಇದೆ. ಹೀಗಾಗಿ ರಾಹುಲ್‌ಗೆ ಮೆಡಿಕಲ್ ಚೆಕಪ್ ಆಗಬೇಕು. ಕಾಂಗ್ರೆಸ್ ಡಿಎನ್‌ಎನಲ್ಲೇ ದೋಷ ಇದೆ. ಹಾಗಾಗಿ ಅದರ ಮಾನಸಿಕ ಸಮತೋಲನ ತಪ್ಪಿದೆ. ಅದರ ಡಿಎನ್‌ಎನಲ್ಲೇ ಸರ್ವಾಧಿಕಾರಿ ಧೋರಣೆ, ಪ್ರಜಾಪ್ರಭುತ್ವ ವಿರೋಧಿ ನಡೆ ಇದೆ ಎಂದು ಟೀಕಿಸಿದರು. ಇದನ್ನೂ ಓದಿ: ಚುನಾವಣಾ ಆಯೋಗ ಸಂಪೂರ್ಣ ಸತ್ತು ಹೋಗಿದ್ದು, ತನ್ನ ಸ್ವಾಯತ್ತತೆ ಕಳೆದುಕೊಂಡಿದೆ: ರಾಹುಲ್ ಗಾಂಧಿ

    ಇವಿಎಂ ಯಂತ್ರ ಹ್ಯಾಕ್ ಆಗಿದೆ ಅನ್ನೋ ಆರೋಪ ಕಾಂಗ್ರೆಸ್ ಸಾಬೀತು ಮಾಡಿಲ್ಲ. ಈಗ ಹೆಸರು ಸೇರ್ಪಡೆ, ರದ್ದಿನಲ್ಲಿ ಅಕ್ರಮ ಆಗಿದೆ ಅಂತಿದ್ದಾರೆ. ಕಾಂಗ್ರೆಸ್‌ನವ್ರ ಮಾನಸಿಕ ಆರೋಗ್ಯ ಹೆಚ್ಚು ಕಡಿಮೆ ಆಗಿರುವ ಸಾಧ್ಯತೆ ಇದೆ. ಕಾಂಗ್ರೆಸ್‌ನವರು ಮಾನಸಿಕ ತಜ್ಞರಲ್ಲಿ ತೋರಿಸಿಕೊಳ್ಳಿ ಎಂದು ಲೇವಡಿ ಮಾಡಿದರು.

    ಆರೋಪ ಸಾಬೀತಾಗದಿದ್ರೆ ಹುಚ್ಚಾಸ್ಪತ್ರೆಗೆ ಹೋಗಲಿ:
    ಮೂರ್ಖ ನಾಯಕ ಮರುಳ ಹಿಂಬಾಲಕರಂತೆ ಆಗಿದೆ ಕಾಂಗ್ರೆಸ್. ಸಿದ್ದರಾಮಯ್ಯರಿಗೆ ಏನಾಗಿದೆ? ಇರ‍್ಯಾಕೆ ಮರುಳ ಹಿಂಬಾಲಕ ಆಗ್ತಿದ್ದಾರೆ. ಇವರಿಗೆ ಸಂವಿಧಾನದ ಮೇಲೆ ವಿಶ್ವಾಸ ಇಲ್ಲ. ಚುನಾವಣಾ ಆಯೋಗ ಕಾಂಗ್ರೆಸ್ ಮನವಿ ಸ್ವೀಕರಿಸಿ ತನಿಖೆ ಮಾಡಲಿ. ಆರೋಪ ಸಾಬೀತಾಗದಿದ್ದರೆ ಕಾಂಗ್ರೆಸ್‌ನವ್ರು ಹುಚ್ಚಾಸ್ಪತ್ರೆಗೆ ಹೋಗಲಿ. ರಾಹುಲ್ ತಮ್ಮ ಬಳಿ ಆಟಂಬಾಬ್ ಇದೆ ಅಂದಿದ್ದಾರೆ. ಅವರ ಬಳಿ ಇರೋದು ಪ್ರಜಾಪ್ರಭುತ್ವದ ವಿರುದ್ಧದ ಆಟಂ ಬಾಂಬ್. ನಮ್ಮ ಸಂವಿಧಾನ ಇವರ ಆಟಂಬಾಂಬ್‌ಗಳಿಂದ ದೇಶಕ್ಕೆ ರಕ್ಷಾಕವಚ ಆಗಿದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಆ.5ರ ಪ್ರತಿಭಟನೆಗೆ ಮಂಡ್ಯದಿಂದ 5 ಸಾವಿರ ಜನ: ಚಲುವರಾಯಸ್ವಾಮಿ

    ಇದೇ ವೇಳೆ ಸಂಸದ ಪಿ.ಸಿ ಮೋಹನ್ ಮಾತಾಡಿ, ಬಿಹಾರ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಡ್ರಾಮಾ ಮಾಡ್ತಿದೆ. ಬಿಹಾರದಲ್ಲಿ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟಬುತ್ತಿ. ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಬಾಣಂತಿಯರ ಸಾವಾದಾಗ ರಾಹುಲ್ ಬರಲಿಲ್ಲ. ಈಗ ಬರ್ತಿರೋದು ರಾಜಕೀಯ ಕಾರಣಕ್ಕೆ ಮಾತ್ರ. ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಇದುವರೆಗೆ 90 ಚುನಾವಣೆ ಸೋತಿದೆ. ಇವರು ಸೋಲೋದು ಗೊತ್ತಾಗಿ ಈ ಡ್ರಾಮಾ ಮಾಡ್ತಿದ್ದಾರೆ ಎಂದಿದ್ದಾರೆ.

    ಕಾಂಗ್ರೆಸ್ ಬಳಿ ಯಾವುದೇ ದಾಖಲೆ ಇಲ್ಲ. ಎಲ್ಲ ಬರೀ ಡ್ರಾಮಾ. ಕಳೆದ 3 ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮೂರಂಕಿ ದಾಟಲಿಲ್ಲ. ಮಹಾದೇವಪುರ ಮತ್ತಿತರ ಕಡೆ ಮತದಾರರ ಹೆಸರು ಹೆಚ್ಚಳ ಸಹಜ, ಹೊರ ಭಾಗದಲ್ಲಿ ಹೆಚ್ಚು ಜನ ಉದ್ಯೋಗ, ಉದ್ಯಮಕ್ಕೆ ಬರುತ್ತಾರೆ. ಹೀಗಾಗಿ ಮತದಾರರ ಹೆಸರು ಹೆಚ್ಚಾಗಿದೆ. ಕ್ಷೇತ್ರದಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

  • GST ನೋಟಿಸ್‌ ಕೊಟ್ಟ ಕೋತಿ ಕೆಲಸ ರಾಜ್ಯ ಸರ್ಕಾರದ್ದು- ನೋಟಿಸ್ ವಾಪಸ್ ಪಡೆಯಬೇಕು: ಸಿ.ಟಿ.ರವಿ

    GST ನೋಟಿಸ್‌ ಕೊಟ್ಟ ಕೋತಿ ಕೆಲಸ ರಾಜ್ಯ ಸರ್ಕಾರದ್ದು- ನೋಟಿಸ್ ವಾಪಸ್ ಪಡೆಯಬೇಕು: ಸಿ.ಟಿ.ರವಿ

    -‌ ಜಿಎಸ್‌ಟಿ ನೋಟಿಸ್ ವಿರುದ್ಧ ಸಣ್ಣ ವರ್ತಕರ ಪ್ರತಿಭಟನೆಗೆ ಬಿಜೆಪಿ ಬೆಂಬಲ

    ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಡುವ ಮೂಲಕ ಡಿಜಿಟಲ್ ಇಂಡಿಯಾ ಅನ್ನು ಹಿಮ್ಮೆಟ್ಟಿಸುವುದಕ್ಕೆ ಷಡ್ಯಂತ್ರ ಮಾಡಿದೆ ಎಂಬ ಅನುಮಾನ ಉಂಟಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಆರೋಪಿಸಿದ್ದಾರೆ.

    ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನದ’ಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಐ ಪಾವತಿಯಲ್ಲಿ ಜಾಗತಿಕ ದಾಖಲೆ ಬರೆದಿದೆ. ಆದರೆ ಕಾಂಗ್ರೆಸ್ ಸರ್ಕಾರದವರು ಜನರಿಗೆ ಆತಂಕ ಮತ್ತು ಭಯದ ವಾತಾವರಣ ನಿರ್ಮಿಸಿದ್ದಾರೆ. ಅಂದರೆ ಕೇಂದ್ರದ ಸರ್ಕಾರದ ಡಿಜಿಟಲ್ ವಹಿವಾಟು ಯೋಜನೆಯ ಪ್ರಯತ್ನಕ್ಕೆ ಭಯ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ನೋಟಿಸ್ ಪರಿಣಾಮದಿಂದ ಸಣ್ಣ ವ್ಯಾಪಾರಿಗಳು ಭಯಗೊಂಡು ಯುಪಿಐ ಪಾವತಿ ಇಲ್ಲ. ನಗದು ಮಾತ್ರ ಎಂದು ಬೋರ್ಡ್ ಹಾಕಿದ್ದಾರೆ. ಭಯಪಡಿಸಿದ ಪರಿಣಾಮ ಮಧ್ಯವರ್ತಿಗಳು ಮತ್ತು ಕೆಲವು ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿರುವ ದೂರು ಕೂಡ ಬಂದಿದೆ. ಆದಕಾರಣ ರಾಜ್ಯ ತೆರಿಗೆ ಇಲಾಖೆ ನೀಡಿರುವ ನೋಟಿಸನ್ನು ಸರ್ಕಾರ ಹಿಂಪಡೆದು ಭಯದ ವಾತಾವರಣದಿಂದ ಸಣ್ಣ ವ್ಯಾಪಾರಿಗಳನ್ನು ಪಾರು ಮಾಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಬೆಂಗಳೂರಿನ ನಂದಿನಿ ಬೂತ್‌ಗೆ 1 ಕೋಟಿ 3 ಲಕ್ಷ ಟ್ಯಾಕ್ಸ್!

    ರಾಜ್ಯ ಸರ್ಕಾರದ್ದೇ ಕೋತಿಯ ಪಾತ್ರ
    ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಸಲುವಾಗಿ ಹಣಕಾಸು ಇಲಾಖೆಯ ಸಭೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ಕೊಟ್ಟಿದ್ದಾರೆ. ಸಿದ್ದರಾಮಯ್ಯ ನಿರ್ದೇಶನದ ಮೇಲೆಯೆ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಉಪ ಮುಖ್ಯಮಂತ್ರಿಗಳು ಹೇಳಿದ ರೀತಿಯಲ್ಲಿ ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದ ಹಾಗೆ ಇದೆ. ಆದರೆ, ಇಲ್ಲಿ ಕೋತಿ ಯಾರು ಎಂದು ಸಿಟಿ ರವಿ ಪ್ರಶ್ನಿಸಿದರು.

    ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದು, ಇದರಲ್ಲಿ ಕೇಂದ್ರವನ್ನು ಏಕೆ ದೂರುತ್ತಿದ್ದೀರಿ ಎಂದು ಕೇಳಿದರು. ಇಲ್ಲಿ ಕೋತಿ ಕೆಲಸವನ್ನು ಮಾಡಿರುವುದು ನೀವು ಕೇಂದ್ರದ ಮೇಲೆ ತಪ್ಪು ಬರುವ ರೀತಿಯಲ್ಲಿ ನಿಮ್ಮ ಹೇಳಿಕೆಗಳು ತಪ್ಪು ಸಂದೇಶ ಕೊಡುತ್ತಿವೆ. ಅಲ್ಲಿಗೆ ಕೋತಿ ಕೆಲಸ ಮಾಡಿರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ಬಹಳ ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್‌ ಮಾಡಿ ಕಿರುಕುಳ – ಡ್ಯಾಂಗೆ ಹಾರಿ ಯುವತಿ ಆತ್ಮಹತ್ಯೆ

    ಇಡೀ ದೇಶದಲ್ಲಿ ಸಣ್ಣ ವ್ಯಾಪಾರಸ್ಥರಿಗೆ ನೋಟಿಸ್ ಹೋಗಿಲ್ಲ. ಕರ್ನಾಟಕದಲ್ಲಿ ಮಾತ್ರ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಹೋಗಿದೆ. ಕೇರಳ, ಮಹಾರಾಷ್ಟ್ರ ಸೇರಿ ಎಲ್ಲಾ ಕಡೆ ನೋಟಿಸ್ ನೀಡಿದ್ದರೆ ಕೇಂದ್ರ ತೆಗೆದುಕೊಂಡಿರುವ ತೀರ್ಮಾನವೆಂದು ನೀವು ಆರೋಪ ಮಾಡಿದರೆ ಅದನ್ನು ಒಪ್ಪಬಹುದಾಗಿತ್ತು. ಮಹಾರಾಷ್ಟ್ರದಲ್ಲಿ ಸಣ್ಣ ವ್ಯಾಪಾರಿಗಳು, ಹೂವು, ತರಕಾರಿ, ಊಟದ ಗಾಡಿ, ಮಾಂಸವನ್ನು ಮಾರಾಟ ಮಾಡುವವರು ಇಂತಹವರಿಗೆ ನೋಟಿಸ್ ಹೋಗಿಲ್ಲ. ಕರ್ನಾಟಕದಲ್ಲಿ ಏಕೆ ನೋಟಿಸ್ ನೀಡಿದ್ದಾರೆ ಎಂದು ಪ್ರಶ್ನಿಸಿದರು.

    ಸೇವಾ ವಲಯಕ್ಕೆ ತೆರಿಗೆ ವಿನಾಯಿತಿ ಇರುವಂತದ್ದು ವಾರ್ಷಿಕ ವಹಿವಾಟು ಒಂದೂವರೆ ಕೋಟಿ ರೂ. ಮೀರಿದರೆ ಶೇ.1 ರಷ್ಟು ತೆರಿಗೆ. ಅದರಲ್ಲೂ ಶೇ.1 ರಲ್ಲಿ ಕೇಂದ್ರದ ಜಿಎಸ್‍ಟಿ ಶೇ.0.5 ರಷ್ಟು ಹೋದರೆ ರಾಜ್ಯದ ಎಸ್‍ಜಿಎಸ್‍ಟಿಗೆ ಶೇ.0.5 ರಷ್ಟು ಪಾವತಿಸುವ ಬಗ್ಗೆ ಪತ್ರಿಕೆಯಲ್ಲಿ ವಿವರವಾಗಿ ನಮೂದಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಕೇಂದ್ರದ ನೀತಿಯ ಪರಿಣಾಮವೆಂದು ಏಕೆ ಆರೋಪ ಹೊರಿಸುತ್ತೀರಿ ಎಂದು ಕೇಳಿದರು.

    ನಿಮ್ಮ ಸರ್ಕಾರದ ಎಡವಟ್ಟು ಎಂದು ಮೊದಲು ಒಪ್ಪಿಕೊಳ್ಳಿ. ನೀವು ಕೊಟ್ಟಿರುವ ನೋಟಿಸ್ ವಾಪಸ್ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು. ಸಣ್ಣ ವ್ಯಾಪಾರಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ, ಸದರಿ ಪ್ರತಿಭಟನೆಗೆ ನಮ್ಮ ನೈತಿಕ ಬೆಂಬಲವಿದೆ. ಬಿಜೆಪಿ ಮುಖಂಡರು ಕೂಡ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.

    ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಒಪ್ಪಿಕೊಳ್ಳಿ
    ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ರಾಜಮಾರ್ಗಗಳು ಇವೆ. ಅದನ್ನು ಬಿಟ್ಟು ಸಣ್ಣ ವ್ಯಾಪಾರಿಗಳಿಗೆ ಬರೆಹಾಕುವ ಕೆಲಸವನ್ನು ಮಾಡಬೇಡಿ. ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಒಪ್ಪಿಕೊಳ್ಳಿ ಎಂದು ಸಿ.ಟಿ. ರವಿ ಒತ್ತಾಯಿಸಿದರು. ಬೆಂಗಳೂರು ಐಟಿ ವಲಯದ ರಾಜಧಾನಿ. ಈ ಐಟಿ ವಲಯಕ್ಕೆ ಡಿಜಿಟಲ್ ಪಾವತಿ ಮಾದರಿಯಾಗಿತ್ತು. ತರಕಾರಿ ವ್ಯಾಪಾರ ಮಾಡುವವರು ಡಿಜಿಟಲ್‍ನಲ್ಲಿ ಪಾವತಿ ಮಾಡಿಕೊಳ್ಳುತ್ತಾರೆ ಎಂದು ಅಂತರಾಷ್ಟ್ರೀಯ ಸುದ್ದಿಯಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಸರ್ಕಾರ ಭಯಪಡಿಸುವ ನಿರ್ಧಾರದಿಂದ ವಾಪಸ್ ಸರಿಯಬೇಕು ಎಂದು ಆಗ್ರಹಿಸಿದರು.

  • ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ | ಸಿಎಂ ಶಾಲಲ್ಲಿ ಅಲ್ಲ ಡೈರೆಕ್ಟಾಗಿ ಹೊಡೆದಿದ್ದಾರೆ: ಸಿ.ಟಿ ರವಿ

    ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ | ಸಿಎಂ ಶಾಲಲ್ಲಿ ಅಲ್ಲ ಡೈರೆಕ್ಟಾಗಿ ಹೊಡೆದಿದ್ದಾರೆ: ಸಿ.ಟಿ ರವಿ

    – ಈ ಥರ ಅವಮಾನ ಮಾಡಿಸಿಕೊಂಡು ಶಿವಕುಮಾರ್ ಹೇಗೆ ಸುಮ್ನಿರ್ತಾರೆ?

    ಚಿಕ್ಕಮಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ಶಾಸಕರ ಬೆಂಬಲ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಈ ರೀತಿ ಅವಮಾನ ಮಾಡಿಸಿಕೊಂಡು ಡಿಕೆಶಿ ಹೇಗೆ ಸುಮ್ಮನೆ ಇರುತ್ತಾರೆ ಎಂದು ಎಮ್‍ಎಲ್‍ಸಿ ಸಿ.ಟಿ ರವಿ (C.T Ravi)  ಕುಟುಕಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಡಿಸಿಎಂ ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ ಎಂಬ ಸಿಎಂ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಅವರಿಗೆ ಶಾಸಕರ ಬೆಂಬಲವೇ ಇಲ್ಲ ಎಂದು ಹೇಳಿದ್ದಾರೆ. 136 ಶಾಸಕರು ಅವರ ಅಧ್ಯಕ್ಷತೆಯಲ್ಲೇ ಗೆದ್ದಿದ್ದು. ಇದು ಶಾಲಿನಲ್ಲಿ ಸುತ್ತಿ ಹೊಡೆಯೋದಲ್ಲ, ಹಾಗೇ ಹೊಡೆದಿರೋದು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಅತ್ತ ಡೆಲ್ಲಿಯಲ್ಲಿ ಸಿದ್ದರಾಮಯ್ಯ ಕ್ಲಿಯರ್ ಮೆಸೇಜ್ – ಬೆಂಗಳೂರಲ್ಲಿ ಆಪ್ತರು ದಿಲ್ ಖುಷ್

     

    ಶಾಲಿನಲ್ಲಿ ಸುತ್ತಿ ಹೊಡುದ್ರೆ ಶಾಲು ಅಂತ ಹೇಳ್ಬೋದು, ಇದು ಹಾಗಲ್ಲ, ಡೈರೆಕ್ಟ್. ಇದನ್ನು ಡಿ.ಕೆ ಶಿವಕುಮಾರ್ ಸಹಿಸಿಕೊಂಡರೆ ಅವರ ವ್ಯಕ್ತಿತ್ವಕ್ಕೆ ಅಪಚಾರ ಎಂದು ಹೇಳಿಕೊಂಡಿದ್ದಾರೆ.

    ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಮಾಧ್ಯಮಗಳ ಜೊತೆ ಮಾತಾಡುತ್ತ, ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಚರ್ಚೆ ಅನ್ನೋದು ಸುಳ್ಳು. ಡಿ.ಕೆ.ಶಿವಕುಮಾರ್​ಗೆ ಹೆಚ್ಚು ಶಾಸಕರ ಬೆಂಬಲ ಇಲ್ಲ. ಇರೋ ಬೆಂಬಲಿಗರ ಸಂಖ್ಯೆ ಕಡಿಮೆ ಇದೆ. ಅವರಿಗೆ ಕೆಲವರು ಬೆಂಬಲ ನೀಡಿದ್ದಾರೆ. ಸುರ್ಜೇವಾಲಾ ಯಾರಿಗೂ ಅಧಿಕಾರ ಬದಲಾವಣೆ ಪ್ರಶ್ನೆ ಕೇಳಿಲ್ಲ. ಕೆಲವು ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಹೇಳಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಏನ್ ದಬಾಕಿರೋದು? ಹೆಂಗಸರು ಬೀದಿ ಸುತ್ತೋ ಹಾಗೆ ಮಾಡಿದ್ದೇ ಸಿಎಂ – ಮಹಿಳಾ ಅಧಿಕಾರಿ ಮಾತಾಡಿದ ವಿಡಿಯೋ ವೈರಲ್