Tag: ಸಿ. ಎಸ್ ದ್ವಾರಕನಾಥ್

  • ಸರ್ಕಾರದ ಒಳ ಮೀಸಲಾತಿ ವಿರುದ್ಧ ಹೋರಾಟ: ಸಿ.ಎಸ್‌.ದ್ವಾರಕನಾಥ್‌

    ಸರ್ಕಾರದ ಒಳ ಮೀಸಲಾತಿ ವಿರುದ್ಧ ಹೋರಾಟ: ಸಿ.ಎಸ್‌.ದ್ವಾರಕನಾಥ್‌

    ಬೆಂಗಳೂರು: ಒಳ ಮೀಸಲಾತಿ (Internal Reservation) ವರ್ಗೀಕರಣದಲ್ಲಿ 89 ಸಮುದಾಯಗಳಿಗೆ ಅನ್ಯಾಯವಾಗಿದೆ. ಕೂಡಲೇ ಇದನ್ನ ಹಿಂಪಡೆಯಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ (C.S.Dwarakanath) ತಿಳಿಸಿದ್ದಾರೆ.

    ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಮಂಗಳವಾರ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ದ್ವಾರಕನಾಥ್‌, ಬಿಜೆಪಿ ಸರ್ಕಾರ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಿದೆ. ಗ್ರೂಪ್ 1 ರಲ್ಲಿ 6 ಪರ್ಸೆಂಟ್ ಮೀಸಲಾತಿಯನ್ನು ಮಾದಿಗ ಸಮುದಾಯ ಸೇರಿ ಇನ್ನಿತರ ಸಮುದಾಯಕ್ಕೆ ನೀಡಲಾಗಿದೆ. ಗ್ರೂಪ್ 2 ರಲ್ಲಿ, 5.5 ಪರ್ಸೆಂಟ್ ಮೀಸಲಾತಿಯನ್ನು ಹೊಲೆಯ ಸಂಬಂಧಿಸಿದ ಜಾತಿಗಳಿಗೆ ನೀಡಲಾಗಿದೆ. ಸ್ಪಶ್ಯ ಜಾತಿಗಳಿಗೆ 4.5 ಪರ್ಸೆಂಟ್ ಮೀಸಲಾತಿ ಕಲ್ಪಿಸಲಾಗಿದೆ. ಇದನ್ನು ಹೊರತುಪಡಿಸಿ 89 ಜಾತಿಗಳಿಗೆ ಕೇವಲ 1 ಪರ್ಸೆಂಟ್ ಮೀಸಲಾತಿ ನೀಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜ್ಯ ನಾಯಕರು ತಂದ ಪಟ್ಟಿ ನೋಡಿ ಮೋದಿ ಕೆಂಡ : ಬಿಜೆಪಿ ಸಭೆಯಲ್ಲಿ ಏನಾಯ್ತು?

    89 ಜಾತಿಯಲ್ಲಿ ಹೊಲೆಯ, ಮಾದಿಗ ಸಂಬಂಧಿತ ಜಾತಿಗಳಿವೆ. ಈ 89 ಸಮುದಾಯಗಳು ಬಹಳ ವಿಚಿತ್ರವಾಗಿರೋ ಸಮುದಾಯ. ಆದಿ ಅಂಧ್ರ, ಬೈರ, ಬಾಕೋಡ, ಬತ್ತಡ, ಬಂಡಿ ಈ ರೀತಿಯಾಗಿ ಹಲವಾರು ಸಮುದಾಯಗಳಿವೆ. ಈ ಹಿಂದೆ ಹೊಲಯ ಹಾಗೂ‌ ಮಾದಿಗ ಸಮುದಾಯದ ಜೊತೆ ಮೀಸಲಾತಿ ಹಂಚಿಕೆ ಆಗಿತ್ತು. ಈಗ ಅವುಗಳನ್ನ ಬೇರ್ಪಡಿಸಿ ಅನ್ಯಾಯ ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಯಾವುದೇ ವರದಿ, ಸಂಶೋಧನೆಯ ಬಗ್ಗೆ ಸರ್ಕಾರ ಗಮನಹರಿಸಿಲ್ಲ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಿದ್ರೆ, ಸರ್ಕಾರ ಅದರ ಸಂಪೂರ್ಣ ಡೇಟಾ ನೀಡಲಿ. ಯಾವುದೇ ಚರ್ಚೆ ಇಲ್ಲದೆ ಕೆಲ ಸಚಿವರೇ ಇದರ ಜವಬ್ದಾರಿ ಹೊತ್ತು ಘೋಷಣೆ ಮಾಡಿದ್ದಾರೆ. ಗೋವಿಂದ ಕಾರಜೋಳ, ಸುಧಾಕರ್, ಪ್ರಭು ಚೌಹಾಣ್, ಮಾಧುಸ್ವಾಮಿ ಇವರೇ ಅಂತಾರಾಷ್ಟ್ರೀಯ ತಜ್ಞರಾಗಿದ್ದಾರೆ. 89 ಸಮುದಾಯವನ್ನು ಒಂದೇ ಕಡೆ ಹಾಕಲಾಗಿದೆ. ಅವರ ಶಿಕ್ಷಣ, ಸಾಮಾಜಿಕ, ಆರ್ಥಿಕ, ಸ್ಥಿತಿಗತಿ ಬಗ್ಗೆ ಅರಿವಿಲ್ಲದೇ ಈ ರೀತಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ: HDK

    ಭಂಗಿ‌ ಸಮುದಾಯ, ಬುಡಗ ಜಂಗಮ‌ ಸಮುದಾಯ ಕೂಡ 89 ಸಮುದಾಯದ ಪಟ್ಟಿಗೆ ಸೇರಿದೆ. 89 ಸಮುದಾಯಗಳಿಗೆ 1 ಪರ್ಸೆಂಟ್ ಮೀಸಲಾತಿ ನೀಡಿದ್ದಾರೆ. ಸರ್ಕಾರಕ್ಕೆ ಮಾನವೀಯತೆ ಅನ್ನೋದು ಇದೆಯಾ? ಕೂಡಲೇ ಇದನ್ನ ಹಿಂಪಡೆಯಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

  • ಯೋಧನ ಪತ್ನಿಗೆ ಬಾಗಿನ ನೀಡಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ದ್ವಾರಕನಾಥ್

    ಯೋಧನ ಪತ್ನಿಗೆ ಬಾಗಿನ ನೀಡಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ದ್ವಾರಕನಾಥ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿ ಸಿ. ಎಸ್ ದ್ವಾರಕನಾಥ್ ಅವರು ಯೋಧನ ಪತ್ನಿಗೆ ಬಾಗಿನ ನೀಡಿ ಬಳಿಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

    ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಇಂದು ಚಿಕ್ಕಬಳ್ಳಾಪುರ ನಗರದ KSRTC ಡಿಪೋ ಗ್ಯಾರೇಜ್ ಬಳಿಯ ಇರುವ ಯೋಧ ನಾಗಾರ್ಜುನ ಮನೆಗೆ ಸಿಎಸ್ ದ್ವಾರಕನಾಥ್ ಭೇಟಿ ನೀಡಿದ್ದಾರೆ. ಬಳಿಕ ಯೋಧ ನಾಗಾರ್ಜುನ ಪತ್ನಿ ಮೀನಾಕ್ಷಿ ಜೊತೆ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ಸಂದರ್ಭದಲ್ಲಿ ಮೀನಾಕ್ಷಿಗೆ ದ್ವಾರಕನಾಥ್ ದಂಪತಿ ಬಾಗಿನ ಕೊಟ್ಟಿದ್ದಾರೆ. ಹರಿಶಿನ ಕುಂಕುಮ ಸೀರೆ ಹಣ್ಣು ಕಾಯಿ ಕೊಟ್ಟು ಬಳಿಕ ನಾಮಪತ್ರ ಸಲ್ಲಿಕೆಗೆ ತೆರಳಿದ್ದಾರೆ. ಯೋಧ ನಾಗಾರ್ಜುನ್ ಅವರು ಅಂಡಮಾನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಬಾಗಿನ ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ದೇಶಕ್ಕೋಸ್ಕರ ಚಳಿ, ಗಾಳಿ, ಮಳೆ, ಬಿಸಿಲು ಹಾಗೂ ಹಿಮದಲ್ಲಿ ಕೆಲಸ ಮಾಡುವಂತಹ ಯೋಧರ ಕುಟುಂಬಗಳನ್ನು ಇಲ್ಲಿನ ರಾಜಕರಾಣ ನಿರ್ಲಕ್ಷ್ಯಿಸುತ್ತಿದೆ. ಆ ಕಾರಣಕ್ಕಾಗಿ ಇಡೀ ಯೋಧರ ಕುಟುಂಬಗಳ ಸಮಸ್ಯೆಗಳನ್ನು ಕುರಿತು ಸದನದಲ್ಲಿ ಪ್ರಾತಿನಿಧ್ಯ ವಹಿಸಬೇಕು ಎಂದು ಬಯಸುತ್ತಾ ಇದ್ದೀನಿ ಅಂದ್ರು.

    ನನ್ನ ಮುಂದೆ 2 ಆಯ್ಕೆಗಳು ಇವೆ. ಅದರಲ್ಲಿ ಒಂದು ದೇಶದ ಆಯ್ಕೆ, ಎರಡನೆಯದ್ದು, ನನ್ನ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಆದ್ಯತೆ ನೀಡುವುದಾಗಿದೆ. ದೇಶದ ಆಯ್ಕೆ ಏನೆಂದರೆ, ಸಾಮಾನ್ಯ ಯೋಧರ ಕುಟುಂಬ, ಆರೋಗ್ಯದ ಬಗ್ಗೆ ಯಾರು ಸದನದಲ್ಲಿ ಮಾತನಾಡಲ್ಲ. ಹೀಗಾಗಿ ನಾನು ಅವರ ಪರ ಧ್ವನಿಯೆತ್ತ ಬೇಕು ಅಂದುಕೊಂಡಿದ್ದೇನೆ ಎಂದರು.

    ಇತ್ತ ಭೋಗನಂಧೀಶ್ವರ ದೇವಾಲಯದಲ್ಲಿ ಸಂಸದ ವೀರಪ್ಪ ಮೋಯ್ಲಿ ಅವರು ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿರುವ ದೇವಾಲಯದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಚಿವ ಎಂಟಿಬಿ ನಾಗರಾಜ್, ಶಿವಶಂಕರರೆಡ್ಡಿ, ಶಾಸಕ ಸುಧಾಕರ್ ಸೇರಿದಂತೆ ಹಲವು ಮುಖಂಡರು ಮೊಯ್ಲಿಗೆ ಸಾಥ್ ನೀಡಿದ್ದಾರೆ. ದೇವಸ್ಥಾನ ನಂತರ ಅದರ ಹಿಂಭಾಗದಲ್ಲೇ ಇರುವ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದಲ್ಲಿರುವ ದರ್ಗಾಗೆ ಮೊಯ್ಲಿ ಭೇಟಿ ನೀಡಿದ್ದಾರೆ.