Tag: ಸಿ.ಎಂ.ಉದಾಸಿ

  • BSY ಕಣ್ಣೀರು ಹಾಕಿದ್ದು, ಸಿಎಂ ಸ್ಥಾನಕ್ಕಲ್ಲ: ಬಿ.ವೈ.ರಾಘವೇಂದ್ರ

    BSY ಕಣ್ಣೀರು ಹಾಕಿದ್ದು, ಸಿಎಂ ಸ್ಥಾನಕ್ಕಲ್ಲ: ಬಿ.ವೈ.ರಾಘವೇಂದ್ರ

    ಹಾವೇರಿ: ಸಹಜವಾಗಿ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದಾಗ ಶಿಕಾರಿಪುರದ ಜನರನ್ನು ನೆನಪಿಸಿಕೊಂಡು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ, ಹೊರತು ಸಿಎಂ ಸ್ಥಾನಕ್ಕೆ ಕಣ್ಣೀರು ಹಾಕಿಲ್ಲ. ವಿರೋಧ ಪಕ್ಷದವರು ಯಡಿಯೂರಪ್ಪ ಅವರ ಬಗ್ಗೆ ಬಹಳ ಪ್ರೀತಿ ತೋರಿಸುತ್ತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಲಗುಡ್ಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ರಾಜೀನಾಮೆ ಕೊಟ್ಟಾಗ ಯಡಿಯೂರಪ್ಪ ಕಣ್ಣೀರು ಹಾಕಿದ್ದು ಭಾವನಾತ್ಮಕವಾಗಿ, ಅದನ್ನು ಯಡಿಯೂರಪ್ಪ ಅವರೇ ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ವಿರೋಧ ಪಕ್ಷದವರು ಬರಿ ಸುಳ್ಳು ಹೇಳುತ್ತಿದ್ದಾರೆ. ನನ್ನನ್ನು ಮೂರು ಬಾರಿ ಸಂಸದನನ್ನಾಗಿ ಮಾಡಿದ್ದಾರೆ. ವಿಜಯೇಂದ್ರ ಉಪಾಧ್ಯಕ್ಷ ಆಗಿದ್ದಾರೆ. ನಮ್ಮನ್ನೆಲ್ಲಾ ಬೆಳೆಸುವ ಕೆಲಸವನ್ನು ಪಕ್ಷ ಮಾಡಿದೆ. ಪಕ್ಷ ನಮ್ಮನ್ನ ಚಿವುಟ ಕೆಲಸ ಮಾಡಿಲ್ಲ ಎಂದರು. ಇದನ್ನೂ ಓದಿ: ದೇವಭೂಮಿ ಉತ್ತರಾಖಂಡ್‍ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ 

    ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಅಷ್ಟೆ ಸತ್ಯ. ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹಾನಗಲ್ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಗೆಲುವು ಪಡೆಯುತ್ತಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮಗಳು. ಪ್ರಧಾನಿ ಮೋದಿಯವರು ಕೊಟ್ಟ ಕಾರ್ಯಕ್ರಮಗಳು ಜನರ ಮನೆ ಮನೆಗೆ ಮುಟ್ಟಿವೆ. ಉದಾಸಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ಅನುಕೂಲವಾಗಿದೆ ಎಂದರು. ಇದನ್ನೂ ಓದಿ: ಅನ್ಯಧರ್ಮದ ಯುವಕನ ಜೊತೆ ಕಾಣಿಸಿಕೊಂಡಿದ್ದಕ್ಕೆ ಯುವತಿಗೆ ಥಳಿತ

    ಇದೇ ವೇಳೆ, ದಿವಂಗತ ಉದಾಸಿಯವರು ಸಚಿವ ಸ್ಥಾನ ಸಿಗದೇ ಕೊರಗಿ, ಕೊರಗಿ ಸತ್ತರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ.ಎಂ.ಉದಾಸಿ ಅವರ ಆರೋಗ್ಯ ಸರಿ ಇರಲಿಲ್ಲ. ಅವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕೆಲಸ ಕೊಡಬಾರದು. ಅವರು ಆರೋಗ್ಯವಾಗಿರಲಿ ಅಂತ ಮಂತ್ರಿ ಸ್ಥಾನ ನೀಡಿರಲಿಲ್ಲ. ಪಕ್ಷ ಮತ್ತು ಯಡಿಯೂರಪ್ಪನವರು ಆ ತೀರ್ಮಾನ ಕೈಗೊಂಡಿದ್ದರು. ಯಡಿಯೂರಪ್ಪ ಕಷ್ಟಕಾಲದಲ್ಲಿದ್ದಾಗ ಉದಾಸಿ ಅವರು ಜೊತೆಗಿದ್ದರು. ದಿವಂಗತ ಉದಾಸಿ ಮತ್ತು ಯಡಿಯೂರಪ್ಪ ನಡುವೆ ಉತ್ತಮ ಸಂಬಂಧ ಇತ್ತು. ವಿರೋಧ ಪಕ್ಷದವರಿಗೆ ಹೇಳಿಕೊಳ್ಳೋಕೆ ಏನೂ ಇಲ್ಲ. ಅವರೇನೂ ಕೆಲಸ ಮಾಡಿಲ್ಲ. ಇಂತಹವುಗಳನ್ನು ಹೇಳಿ ಮತ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆ ಮುಗಿಯುವವರೆಗೆ ಕ್ಷೇತ್ರದಲ್ಲಿದ್ದು ಪ್ರಚಾರ ನಡೆಸುವೆ. ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಿಕಟಪೂರ್ವ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

  • ಹಾನಗಲ್‍ನಲ್ಲಿ ಉದಾಸಿ ಅಂತ್ಯಕ್ರಿಯೆ- ಬೊಮ್ಮಾಯಿ ಅಂತಿಮ ನಮನ

    ಹಾನಗಲ್‍ನಲ್ಲಿ ಉದಾಸಿ ಅಂತ್ಯಕ್ರಿಯೆ- ಬೊಮ್ಮಾಯಿ ಅಂತಿಮ ನಮನ

    ಹಾವೇರಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು.

    ಹಾನಗಲ್ ನಲ್ಲಿ ಬುಧವಾರ ಸಂಜೆ ಸಿ.ಎಂ.ಉದಾಸಿ ಅವರ ಅಂತ್ಯಕ್ರಿಯೆ ಸಾಂಪ್ರದಾಯಿಕ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಉದಾಸಿ ಅವರನ್ನು ಸ್ಮರಿಸಿ ಬಸವರಾಜ ಬೊಮ್ಮಾಯಿ ಭಾವುಕರಾದರು. ಇದನ್ನೂ ಓದಿ: ಬುಧವಾರ ಮಾಜಿ ಸಚಿವ ಸಿ.ಎಂ.ಉದಾಸಿ ಅಂತ್ಯ ಸಂಸ್ಕಾರ – ಪತ್ನಿ ನೀಲಮ್ಮ ಕಣ್ಣೀರು

    ಉದಾಸಿ ಹಿರಿಯ ಮುತ್ಸದ್ದಿ ರಾಜಕಾರಣಿ, ನಮ್ಮ ತಂದೆಯ ನಂತರ ಅವರು ನನಗೆ ರಾಜಕೀಯ ಮಾರ್ಗದರ್ಶಕರಾಗಿದ್ದರು. ರಾಜಕೀಯವಾಗಿ ಅವರೇ ನನಗೆ ಗಾಡ್ ಫಾದರ್ ಆಗಿದ್ದರು. ಒಂದು ರೀತಿ ತಂದೆಯನ್ನು ಕಳೆದುಕೊಂಡ ಭಾವ ನನಗೆ ಕಾಡುತ್ತಿದೆ. ಅವರು ಸಾಕಷ್ಟು ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಆ ಆದರ್ಶಗಳನ್ನು ಪಾಲಿಸಿಕೊಂಡು ಹೋಗಬೇಕಾಗಿದೆ ಅಷ್ಟೇ ಎಂದು ಭಾವುಕರಾದರು.

  • ಸರಳ ಸಜ್ಜನ ರಾಜಕಾರಣಿ ಸಿ.ಎಂ ಉದಾಸಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

    ಸರಳ ಸಜ್ಜನ ರಾಜಕಾರಣಿ ಸಿ.ಎಂ ಉದಾಸಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

    ಹಾವೇರಿ: ಹಾಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿ.ಎಂ.ಉದಾಸಿ ಮಂಗಳವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ವಿರಕ್ತಮಠದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಸಕಲ ಸಿದ್ಧತೆ ಮಾಡಲಾಗಿದೆ.

    ಇಂದು ಮಧ್ಯಾಹ್ನ 12 ಗಂಟೆಗೆ ಉದಾಸಿ ಪಾರ್ಥೀವ ಶರೀರ ಹಾನಗಲ್ ಪಟ್ಟಣ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ಗೌಳಿ ಗಲ್ಲಿಯ ನಿವಾಸದಲ್ಲಿ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. 1 ಗಂಟೆಯ ನಂತರ ವಿರಕ್ತಮಠದ ಆವರಣದಲ್ಲಿ ಪಾರ್ಥಿವ ಶರೀರ ಅಂತೀಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ:  ಬುಧವಾರ ಮಾಜಿ ಸಚಿವ ಸಿ.ಎಂ.ಉದಾಸಿ ಅಂತ್ಯ ಸಂಸ್ಕಾರ – ಪತ್ನಿ ನೀಲಮ್ಮ ಕಣ್ಣೀರು

    ಕೋವಿಡ್ ಕಾರಣದಿಂದ ಅಂತರ ಕಾಯ್ದುಕೊಂಡು ದರ್ಶನ ಪಡೆಯಲು ಬ್ಯಾರಿಕೇಡ್‍ಗಳನ್ನ ಹಾಕಿ ಪೊಲೀಸ್ ಸಿಬ್ಬಂದಿ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕ ದರ್ಶನದ ನಂತರ ಸಂಜೆ 4 ಗಂಟೆಗೆ ವಿರಕ್ತಮಠದ ರುದ್ರಭೂಮಿಯಲ್ಲಿ ಲಿಂಗಾಯತ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಗುರು ಇಲ್ಲದೇ ಬೆಳೆದ ರಾಜಕೀಯ ನಾಯಕ, ಹಾನಗಲ್ ತಾಲೂಕಿನ ಅಭಿವೃದ್ಧಿಯ ಹರಿಕಾರ

    ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಸಿ.ಎಂ.ಉದಾಸಿಯವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನ 2.45ರ ಸುಮಾರಿಗೆ ನಿಧನರಾಗಿದ್ದಾರೆ. ಪತಿ ನಿಧನದ ಸುದ್ದಿ ತಿಳಿದು ಹಾನಗಲ್ ಪಟ್ಟಣದ ಗೌಳಿ ಗಲ್ಲಿಯ ಮನೆಯಲ್ಲಿರುವ ಪತ್ನಿ ನೀಲಮ್ಮ ಕಣ್ಣೀರು ಸುರಿಸಿದ್ದಾರೆ.

    ಸದ್ಯ ಉದಾಸಿ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ಉದಾಸಿ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು, ಸಂಬಂಧಿಕರು ಹಾಗೂ ಅಭಿಮಾನಿಗಳು ಆಗಮಿಸಿ ಪತ್ನಿ ನೀಲಮ್ಮ ಅವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

  • ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಜೊತೆ ಸತೀಶ್ ಜಾರಕಿಹೊಳಿ ಪ್ರತ್ಯೇಕ ಚರ್ಚೆ!

    ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಜೊತೆ ಸತೀಶ್ ಜಾರಕಿಹೊಳಿ ಪ್ರತ್ಯೇಕ ಚರ್ಚೆ!

    ಬೆಂಗಳೂರು: ವಿಧಾನಸಭೆಯ ವಿಪಕ್ಷ ನಾಯಕರ ಮೊಗಸಾಲೆಯಲ್ಲಿ ಬಿಜೆಪಿ ಶಾಸಕರಾದ ಬಸವರಾಜ ಬೊಮ್ಮಾಯಿ ಹಾಗೂ ಸಿ.ಎಂ.ಉದಾಸಿ ಅವರ ಜತೆ ಕಾಂಗ್ರೆಸ್ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತುಕತೆ ನಡೆಸುತ್ತಿದ್ದಿದ್ದು ಇಂದು ಕಂಡುಬಂತು.

    ಶಾಸಕರು ಮಾತನಾಡುತ್ತಿರುವುದನ್ನು ನೋಡಿದ ಬಿಎಸ್ ಯಡಿಯೂರಪ್ಪ ಅವರು ನಗುತ್ತಲೇ, “ಏನ್ರಪ್ಪಾ, ಇಬ್ಬರು ಸೇರಿ ಅವರನ್ನ ಕೂರಿಸಿಕೊಂಡು ಮಾತನಾಡುತ್ತಿದ್ದಿರಾ. ಏನು ವಿಷಯ” ಎಂದು ಕೇಳಿದರು.

    ಬಿ.ಎಸ್.ಯಡಿಯೂರಪ್ಪ ಅವರ ಮಧ್ಯ ಪ್ರವೇಶದಿಂದ ಕಸಿವಿಸಿಗೊಂಡ ಶಾಸಕರು ಅಲ್ಲಿಂದ ತೆರಳಿದರು.