Tag: ಸಿಹಿ ಸುದ್ದಿ

  • ನಟ ಜಗ್ಗೇಶ್‍ಗೆ ಸಿಹಿ ಸುದ್ದಿ ನೀಡಿದ ಡಿಸಿಪಿ ರವಿ ಚನ್ನಣ್ಣನವರ್

    ನಟ ಜಗ್ಗೇಶ್‍ಗೆ ಸಿಹಿ ಸುದ್ದಿ ನೀಡಿದ ಡಿಸಿಪಿ ರವಿ ಚನ್ನಣ್ಣನವರ್

    ಬೆಂಗಳೂರು: ಡಿಸಿಪಿ ರವಿ ಚನ್ನಣ್ಣನವರ್ ಅವರು ನವರಸನಾಯಕ ಜಗ್ಗೇಶ್ ಅವರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಅವರು ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ಬೆಂಗಳೂರಿನಲ್ಲಿ ಅಂಧ ದಂಪತಿಯ ಮಗುವನ್ನು ಅಪಹರಣ ಮಾಡಲಾಗಿತ್ತು. ಈಗ ಆ ಮಗು ಪತ್ತೆಯಾಗಿದ್ದು, ಈ ಬಗ್ಗೆ ನಟ ಜಗ್ಗೇಶ್ ತಮ್ಮ ಟ್ವೀಟ್ ಮಾಡಿದ್ದಾರೆ. ಜಗ್ಗೇಶ್ ಅವರು, “ರಾಯರಿಗೆ ಅಂಗಲಾಚಿ ಅಮಾಯಕ ದಂಪತಿ ಕಳೆದುಕೊಂಡ ಮಗುವಿನ ಪತ್ತೆಗಾಗಿ ಹುಚ್ಚನಂತೆ ಪ್ರಾರ್ಥಿಸಿದ್ದೆ. ನಲ್ಮೆಯ ಅಧಿಕಾರಿ ಡಿಸಿಪಿ ರವಿಚನ್ನಣ್ಣನವರ್ ಮಗು ಸಿಕ್ಕಿದ ಸಿಹಿ ಸುದ್ದಿ ನೀಡಿದರು ಧನ್ಯವಾದಗಳು. ಅಲ್ಲದೆ ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಹಾಯ ಮಾಡೋ ನೆಪದಲ್ಲಿ ಅಂಧ ದಂಪತಿಯ ಮಗುವನ್ನು ಕಿಡ್ನಾಪ್‍ಗೈದ ಮಹಿಳೆ

    ಈ ಮೊದಲು ಜಗ್ಗೇಶ್ ಅವರು, ಮಾನ್ಯ ಅಧಿಕಾರಿ ಬಂಧುಗಳೆ ಈ ವಿದ್ರಾವಕ ಘಟನೆ ನನಗೆ ಕಣ್ಣೀರು ತರಿಸಿತು. ತಮ್ಮಲ್ಲಿ ನನ್ನ ಕಳಕಳಿ ಮನವಿ ಆ ಮಗು ಪತ್ತೆ ಮಾಡಿ ಅಂದ ದಂಪತಿಗೆ ಕಂದಮ್ಮ ಸಿಗುವಂತೆ ಮಾಡಿ. ಮಕ್ಕಳ ಕಳ್ಳರಿಗೆ ತಕ್ಕ ಪಾಠ ಕಲಿಸಿ. ಕಣ್ಣಿಲ್ಲದ ಅಮಾಯಕರ ಮಕ್ಕಳು ಕದಿಯುವಂತ ರಾಕ್ಷಸರ ಕಾನೂನಿನ ಕ್ರಮಕ್ಕೆ ನನ್ನ ಪ್ರಾರ್ಥನೆ ಎಂದು ಟ್ವೀಟ್ ಮಾಡಿದ್ದರು.

    ಏನಿದು ಘಟನೆ?
    ಮಗುವಿಗೆ ನೀರು ಕುಡಿಸಲು ಸಹಾಯ ಮಾಡುವಂತೆ ಅಂಧ ದಂಪತಿಯ ಸಹಾಯಕ್ಕೆ ಬಂದ ಮಹಿಳೆ ಮಗುವಿನೊಂದಿಗೆ ಪರಾರಿಯಾಗಿರುವ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿತ್ತು. ರಾಯಚೂರು ಮೂಲದ ಅಂಧ ದಂಪತಿಯಾದ ಚಿನ್ನು ಮತ್ತು ಬಸವರಾಜು ಅವರ ಮಗುವನ್ನು ಶನಿವಾರ ಬೆಳಗ್ಗೆ ಅಪಹರಣವಾಗಿತ್ತು. ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ದಂಪತಿ ತಮ್ಮ 8 ತಿಂಗಳ ಮಗುವಿಗೆ ನೀರು ಕುಡಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅನಾಮಿಕ ಮಹಿಳೆ ಸಹಾಯ ನೆಪದಲ್ಲಿ ಧಾವಿಸಿದ್ದು, ಮಗುವಿನೊಂದಿಗೆ ಎಸ್ಕೇಪ್ ಆಗಿದ್ದಳು.

    ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದ್ದು, ಈಗ ಮಗು ಪತ್ತೆಯಾಗಿದೆ.

  • ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಿಯಾಮಣಿ!

    ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪ್ರಿಯಾಮಣಿ!

    ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಿಯಾಮಣಿ ಇತ್ತೀಚಿಗೆ ಒಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ಅಭಿಮಾನಿಗಳು ಪ್ರಿಯಾಮಣಿ ತಾಯಿ ಆಗುತ್ತಿದ್ದಾರೆ ಎಂದು ಅವರಿಗೆ ಶುಭ ಕೋರುತ್ತಿದ್ದಾರೆ.

    “ನಾನು ಮತ್ತು ನನ್ನ ಪತಿ ಮುಸ್ತಾಫ್ ರಾಜ್ ಕಡೆಯಿಂದ ಸಮ್‍ಥಿಂಗ್ ಇಂಟ್ರೆಸ್ಟಿಂಗ್ ಹಾಗೂ ಫನ್ ಸಂಗತಿಯೊಂದು ನಿಮ್ಮ ಮುಂದೆ ಬರಲಿದೆ. ವೇಟ್ ಆಂಡ್ ವಾಚ್” ಎಂದು ಪ್ರಿಯಾಮಣಿ ತಮ್ಮ ಪತಿ ಜೊತೆಯಿರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಪ್ರಿಯಾಮಣಿ ಅವರ ಟ್ವೀಟ್ ನೋಡಿ ಅವರು ತಾಯಿ ಆಗುತ್ತಿದ್ದಾರಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಕೂಡ ಅವರ ಟ್ವೀಟ್ ನೋಡಿ ಪ್ರಿಯಾಮಣಿ ಅಮ್ಮ ಆಗುತ್ತಿದ್ದಾರೆ ಎಂದು ತಿಳಿದು ಅವರಿಗೆ ಶುಭ ಕೋರುತ್ತಿದ್ದಾರೆ.

    https://twitter.com/priyamani6/status/1023587440018243590

    ಪ್ರಿಯಾಮಣಿ 2017 ಅಗಸ್ಟ್ 23ರಂದು ಮುಸ್ತಾಫ್ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಈ ಟ್ವೀಟ್ ನೋಡಿ ಅಭಿಮಾನಿಗಳು ಪ್ರಿಯಾಮಣಿಗೆ ರೀ-ಟ್ವೀಟ್ ಮಾಡುವ ಮೂಲಕ ಜೂನಿಯರ್ ಪ್ರಿಯಾಮಣಿ ಬರುತ್ತಿರಬಹುದು ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಚೋಟಾ ಪ್ರಿಯಾಮಣಿ ಎಂದು ಟ್ವೀಟ್ ಮಾಡಿದ್ದಾರೆ.

    ಇತ್ತ ಪ್ರಿಯಾಮಣಿ ಟ್ವೀಟ್‍ಗೆ ನಟಿ ಪರೂಲ್ ಯಾದವ್ ಸಹ ಮಗು ಐಸ್ ಕ್ರೀಂ ತಿನ್ನುವ ಜಿಫ್ ಹಾಕುವ ಮೂಲಕ ಶುಭಾಶಯ ಕೋರಿದ್ದಾರೆ. ಪರೂಲ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಪ್ರಿಯಾಮಣಿ ಲವ್ ಸೂಚಕದ ಎಮೋಜಿ ಹಾಕಿ ಉತ್ತರಿಸಿದ್ದಾರೆ. ಸದ್ಯ ಪ್ರಿಯಾಮಣಿ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಆ ಟ್ವೀಟ್ ನೋಡಿದ ಅಭಿಮಾನಿಗಳು ಪ್ರಿಯಾಮಣಿ ತಾಯಿ ಆಗುತ್ತಿದ್ದಾರೆ ಎಂದು ತಿಳಿದು ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ಸದ್ಯ ಪ್ರಿಯಾಮಣಿ ಅವರ ಸ್ಪೆಷಲ್ ಸುದ್ದಿ ಏನು ಎಂಬುದು ಕಾದು ನೋಡಬೇಕಿದೆ.