Tag: ಸಿಹಿ ತುಳಸಿ

  • ಅಮೆಜಾನ್‍ನಲ್ಲಿ ಸಿಹಿ ತುಳಸಿ ನೆಪದಲ್ಲಿ ಗಾಂಜಾ ಮಾರಾಟ

    ಅಮೆಜಾನ್‍ನಲ್ಲಿ ಸಿಹಿ ತುಳಸಿ ನೆಪದಲ್ಲಿ ಗಾಂಜಾ ಮಾರಾಟ

    ಭೋಪಾಲ್: ಮಧುಮೇಹಿಗಳಿಗೆ ಅನುಕೂಲವಾಗುವ ಸಿಹಿ ತುಳಸಿ ನೆಪದಲ್ಲಿ ಗಾಂಜಾವನ್ನು ಅಮೆಜಾನ್‍ನಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಮಧ್ಯಪ್ರದೇಶ ಪೊಲೀಸರು ಅಮೆಜಾನ್‍ಗೆ ನೋಟಿಸ್ ರವಾನಿಸಿದ್ದು, ಇಂದು ವಿಚಾರಣೆ ನಡೆಯಲಿದೆ. ಈವರೆಗೆ ಕೆಲವು ಪಾರ್ಸಲ್ ಕಂಪನಿಗಳನ್ನು ಬಳಸಿಕೊಂಡು ಡ್ರಗ್ಸ್ ಪೂರೈಸುತ್ತಿದ್ದ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಈಗ ಅಮೆಜಾನ್ ನಂಥ ಕಂಪನಿ ಮೇಲೆ ಇಂಥ ಆರೋಪ ಕೇಳಿಬಂದಿರುವುದು ಸಂಚಲ ಮೂಡಿಸಿದೆ. ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ

    ವಿಶಾಖಪಟ್ಟಣದ ಕಂಪನಿಯೊಂದು ಸಿಹಿ ತುಳಸಿ (ಸ್ವೀವಿಯಾ) ಎಲೆಗಳ ಉತ್ಪನ್ನ ಮಾರಾಟ ಕಂಪನಿ ಎಂದು ಹೇಳಿಕೊಂಡಿತ್ತು. ಅಮೆಜಾನ್‍ನಲ್ಲಿ ತನ್ನನ್ನು ತಾನೂ ನೋಂದಾಯಿಸಿಕೊಂಡಿತ್ತು. ಆದರೆ ಈ ಸಿಹಿ ತುಳಸಿ ನೆಪದಲ್ಲಿ ಪಾರ್ಸಲ್‍ನಲ್ಲಿ ಡ್ರಗ್ಸ್ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

    ಈ ವಿಚಾರವಾಗಿ ಭಾನುವಾರ 20ಕೆಜಿ ಗಾಂಜಾ ಹೊಂದಿದ್ದ ಇಬ್ಬರನ್ನು ಪೊಲೀಸರು ಪಧ್ಯಪ್ರದೇಶದಲ್ಲಿ ಬಂಧಿಸಿದ್ದರು. ಅವರು ಅಮೆಜಾನ್ ಇಂಡಿಯಾ ವೆಬ್‍ಸೈಟ್ ಬಳಸಿ ಮಾದಕ ವಸ್ತು ಆರ್ಡರ್ ಮಡುತ್ತಿದ್ದರು ಮತ್ತು ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಅಮೆಜಾನ್ ಮೂಲಕ 1000ಕೆಜಿ ನಿಷೇಧಿತ ಗಾಂಜಾವನ್ನು 1.10 ಕೋಟಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ:  ಜಗತ್ತಿನಲ್ಲಿ ಮೊಟ್ಟ ಮೊದಲು ವಿಮಾನ ಹಾರಿಸಿದವನು ರಾವಣನೇ?- ಲಂಕಾ ಅಧ್ಯಯನ