Tag: ಸಿಹಿ ತಿಂಡಿ

  • ತುಪ್ಪದಲ್ಲಿ ಮಾಡಿ ಸವಿಯಿರಿ ರವೆ ಉಂಡೆ

    ತುಪ್ಪದಲ್ಲಿ ಮಾಡಿ ಸವಿಯಿರಿ ರವೆ ಉಂಡೆ

    ವೆ ಉಂಡೆ ಮಾಡುವುದು ತುಂಬಾ ಸುಲಭ. ಮನೆಗೆ ಅತಿಥಿ ಬಂದಾಗ ಏನಾದರೂ ದಿಢೀರ್ ಎಂದು ಸಿಹಿ ಮಾಡಬೇಕು ಎಂದರೆ ಈ ತಿಂಡಿಯನ್ನು ಟ್ರೈ ಮಾಡಿ. ಏಕೆಂದರೆ ಈ ರೆಸಿಪಿ ಮಾಡಲು ಸುಲಭ. ಅಚ್ಟೇ ಅಲ್ಲದೇ ಇದನ್ನು ತಿನ್ನಲು ತುಂಬಾ ರುಚಿಯಾಗಿ ಇರುತ್ತೆ.

    ಬೇಕಾಗಿರುವ ಪದಾರ್ಥಗಳು:
    * ರವೆ – 1 ಕಪ್
    * ತುಪ್ಪ – ¼ ಕಪ್
    * ಕತ್ತರಿಸಿದ ಗೋಡಂಬಿ – 6
    * ಒಣದ್ರಾಕ್ಷಿ – 2 ಟೇಬಲ್ ಸ್ಪೂನ್
    * ತೆಂಗಿನಕಾಯಿ ತುರಿ – ¼ ಕಪ್

    * ಸಕ್ಕರೆ – 1 ಕಪ್
    * ನೀರು – ¼ ಕಪ್
    * ಏಲಕ್ಕಿ ಪುಡಿ – ¼ ಟೀಸ್ಪೂನ್
    * ಹಾಲು – 2 ಟೇಬಲ್ ಸ್ಪೂನ್

    ಮಾಡುವ ವಿಧಾನ:
    * ಮೊದಲನೆಯದಾಗಿ, ದೊಡ್ಡ ಪ್ಯಾನ್‍ನಲ್ಲಿ ಕತ್ತರಿಸಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದೊಂದಿಗೆ ಫ್ರೈ ಮಾಡಿ. ಒಣದ್ರಾಕ್ಷಿ ಮತ್ತು ಗೋಡಂಬಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಅವುಗಳನ್ನು ತಟ್ಟೆಗೆ ವರ್ಗಾಯಿಸಿ ಮತ್ತು ಪಕ್ಕಕ್ಕೆ ಇರಿಸಿ.
    * ಬಾಣಲೆಯಲ್ಲಿ ರವಾ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ತಿಳಿ ಕಂದು ಬಣ್ಣಕ್ಕೆ ಬದಲಾಯಿಸುವವರೆಗೆ ಮತ್ತು ಪರಿಮಳ ಬರುವವರೆಗೆ ಹುರಿಯಿರಿ.
    * ನೀರ ಮತ್ತು ಸಕ್ಕರೆ ಸೇರಿಸಿ ಪಾಕವನ್ನು ತಯಾರಿಸಿ. ಸಕ್ಕರೆ ಕರಗುವವರೆಗೂ ಬೇರೆಸಿ 5 ನಿಮಿಷಗಳ ಕಾಲ ಕುದಿಸಿ.


    * ತೆಂಗಿನಕಾಯಿ ತುರಿಯನ್ನು ಹುರಿದುಕೊಳ್ಳಿ. ಅದಕ್ಕೆ ರವಾ, ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಮತ್ತು ಸಕ್ಕರೆ ಪಾಕ ಮತ್ತು ಹಾಲನ್ನು ಸೇರಿಸಿ ಹುರಿಯಿರಿ.
    * ನಂತರ ಆ ಮಿಶ್ರಣವನ್ನು ತೆಗೆದು ಕೈಗೆ ತುಪ್ಪ ಹಚ್ಚಿಕೊಂಡು ಉಂಡೆಗಳ ಮಾಡಿಕೊಳ್ಳಿ

  • ಸಿಹಿ ಪ್ರಿಯರು ಸುಲಭವಾಗಿ ಮಾಡಿ ‘ಹಾಲು ಬರ್ಫಿ’

    ಸಿಹಿ ಪ್ರಿಯರು ಸುಲಭವಾಗಿ ಮಾಡಿ ‘ಹಾಲು ಬರ್ಫಿ’

    ರ್ಫಿ’ ಮಾಡುವ ವಿಧಾನ ತುಂಬಾ ಸುಲಭ. ಬರ್ಫಿ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ತುಂಬಾ ಇಷ್ಟ. ಅದಕ್ಕೆ ಸಿಹಿ ಪ್ರಿಯರಿಗಾಗಿ ಇಂದು ‘ಹಾಲು ಬರ್ಫಿ’ ಮಾಡುವ ಸುಲಭ ವಿಧಾನವನ್ನು ಹೇಳಿಕೊಡುತ್ತಿದ್ದೇವೆ.

    ಬೇಕಾಗಿರುವ ಪದಾರ್ಥಗಳು:
    * ತುಪ್ಪ – ¼ ಕಪ್
    * ಹಾಲು – 1ವರೆ ಲೀಟರ್
    * ಹಾಲಿನ ಪುಡಿ – 2 ಕಪ್
    * ಸಕ್ಕರೆ – 4 ಕಪ್
    * ಏಲಕ್ಕಿ ಪುಡಿ – 4 ಟೀಸ್ಪೂನ್

    * ಕಟ್ ಮಾಡಿದ ಬಾದಾಮಿ – 2 ಚಮಚ
    * ಕಟ್ ಮಾಡಿದ ಪಿಸ್ತಾ – 2 ಚಮಚ
    * ಬೇಕಿಂಗ್ ಪೇಪರ್

    ಮಾಡುವ ವಿಧಾನ:
    * ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ ¼ ಕಪ್ ತುಪ್ಪ ಮತ್ತು ಹಾಲು ಸೇರಿಸಿ.
    * ಬಾಣಲಿಯನ್ನು ಬಿಸಿ ಮಾಡಿ ಹಾಲಿನ ಮಿಶ್ರಣಕ್ಕೆ ನಿಧಾನವಾಗಿ ಹಾಲಿನ ಪುಡಿ ಮತ್ತು ಅಗತ್ಯವಿರುವಷ್ಟು ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲ ಮಿಶ್ರಣವು ಸರಿಯಾಗಿ ಮಿಕ್ಸ್ ಆಗಿದೆಯ ಎಂದು ಖಚಿತಪಡಿಸಿಕೊಳ್ಳಿ.

    Milk Powder Barfi | Milk Burfi Recipe - Sandhya's Kitchen* ಹಾಲು 10 ನಿಮಿಷಗಳ ಕಾಲ ಬೆರೆಸಿದ ಹಾಲಿನ ಮಿಶ್ರಣವನ್ನು ಹಿಟ್ಟಿನಂತೆ ಕಳಿಸಿಕೊಳ್ಳಿ. ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಮತ್ತು ಚೆನ್ನಾಗಿ ಸಂಯೋಜಿಸಿ.
    * ತಯಾರಾದ ಹಿಟ್ಟನ್ನು ಬೇಕಿಂಗ್ ಪೇಪರ್‌ನಿಂದ ಲೇಪಿತ ಬರ್ಫಿ ಆಕಾರದಲ್ಲಿ ಕಟ್ ಮಾಡಿಕೊಳ್ಳಿ, ಅದರ ಮೇಲೆ ಸ್ವಲ್ಪ ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾಗಳೊಂದಿಗೆ ಮೇಲ್ಭಾಗಕ್ಕೆ ಹಾಕಿ.
    * 2 ಗಂಟೆಗಳ ಕಾಲ ಅದನ್ನು ಮುಚ್ಚಿಡಿ. ಸ್ವಲ್ಪ ಸಮಯದ ನಂತರ ಬರ್ಫಿಗಳನ್ನು ತೆಗೆದು ಸವಿಯಿರಿ.

  • ಬಾಸುಂದಿ ಮಾಡುವ ಸರಳ ವಿಧಾನ ನಿಮಗಾಗಿ

    ಬಾಸುಂದಿ ಮಾಡುವ ಸರಳ ವಿಧಾನ ನಿಮಗಾಗಿ

    ನಿಮಗೆ ಯಾವುದಾದರೂ ಸಿಹಿ ತಿನ್ನಬೇಕು ಎಂದು ಆಸೆಯಾದಾಗ, ಮನೆಯಲ್ಲಿ ಸಮಾರಂಭ ಇದ್ದಾಗ ಅಥವಾ ವಿಶೇಷ ಹಬ್ಬಕ್ಕೆ ಮನೆಯಲ್ಲೇ ಸಿಹಿ ತಿನಿಸು ತಯಾರಿಸಬೇಕು ಎಂದಿದ್ದರೆ ಬಾಸುಂದಿ ಮಾಡಿ ಸಖತ್ ಟೇಸ್ಟ್ ಆಗಿರುತ್ತದೆ

    ಬೇಕಾಗುವ ಸಾಮಗ್ರಿಗಳು:
    * ಹಾಲು- 2 ಲೀಟರ್
    * ಕೇಸರಿದಳ – ಸ್ವಲ್ಪ
    * ಬಾದಾಮಿ, ಗೋಡಂಬಿ, ಪಿಸ್ತಾ- ಅರ್ಧ ಕಪ್
    * ಸಕ್ಕರೆ- 1 ಕಪ್
    * ಏಲಕ್ಕಿಪುಡಿ- ಸ್ವಲ್ಪ

    Basundi
    ಮಾಡುವ ವಿಧಾನ:
    * ಒಂದು ಪಾತ್ರೆಗೆ ಹಾಲು ಹಾಗೂ ಕೇಸರಿದಳ ಹಾಕಿ ಕುದಿಸಿ. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
    * ಮಧ್ಯಮ ಉರಿಯಲ್ಲಿ ಹಾಲು ಕುದಿ ಬಂದಾಗ ಕಟ್ಟಿದ ಕೆನೆಯನ್ನು ತೆಗೆದು ಹಾಲಿನ ಮಧ್ಯದಲ್ಲಿ ಹಾಕುತ್ತಾ ಬನ್ನಿ. ಹೀಗೆ ಪ್ರತಿ ಬಾರಿಯೂ ಮಾಡುತ್ತಾ ಬನ್ನಿ. ಹಾಲು ಕೆನೆಯೊಂದಿಗೆ ಗಟ್ಟಿಯಾಗುತ್ತಾ ಬಂದಾಗ ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾವನ್ನು ಹಾಕಿ ಮಿಶ್ರಣ ಮಾಡಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ಹಾಲು ಗಟ್ಟಿಯಾಗಲು ಅರ್ಧ ಗಂಟೆ ಬೇಕಾಗುತ್ತದೆ. ನಂತರ ಸಕ್ಕರೆಯನ್ನು ಸೇರಿಸಿ. 5 ನಿಮಿಷ ಕುದಿಸಿ. ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಹಾಲು ದಪ್ಪವಾದ ಬಳಿಕ ಒಲೆಯಿಂದ ಇಳಿಸಿ. ಪೂರ್ತಿ ಆರಲು ಬಿಡಿ. ಈಗ ಬಾಸುಂದಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್

  • ಎಲ್ಲರಿಗೂ ಇಷ್ಟವಾಗುವಂತ ರುಚಿ ರುಚಿಯಾದ ಕ್ಯಾರೆಟ್ ಪಾಯಸ ಮಾಡಿ

    ಎಲ್ಲರಿಗೂ ಇಷ್ಟವಾಗುವಂತ ರುಚಿ ರುಚಿಯಾದ ಕ್ಯಾರೆಟ್ ಪಾಯಸ ಮಾಡಿ

    ಕ್ಯಾರೆಟ್ ನಿಂದ ತಯಾರಿಸಲಾಗುವ ಈ ಪಾಯಸವು ಅತ್ಯಂತ ರುಚಿಕರವಾಗಿರುತ್ತದೆ. ಇದನ್ನು ನೀವು ಒಮ್ಮೆ ಸವಿದರೆ ಮನಸ್ಸು ಮತ್ತು ನಾಲಿಗೆ ಮತ್ತೆ ಮತ್ತೆ ತಿನ್ನಲು ಬಯಸುತ್ತದೆ. ಕ್ಯಾರೆಟ್ ಪಾಯಸವು ಅತ್ಯಂತ ಪೌಷ್ಠಿಕಾಂಶಗಳಿಂದ ಕೂಡಿರುತ್ತದೆ. ಈ ಪಾಯಸವನ್ನು ಭಾರತಾದ್ಯಂತ ತಯಾರಿಸುತ್ತಾರೆ. ಇದನ್ನು ಕಡಿಮೆ ಸಮಯದಲ್ಲಿ ತಯಾರಸಿಬಹುದಾಗಿದ್ದು, ಇದರಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿರುತ್ತದೆ.

    ಬೇಕಾಗುವ ಸಾಮಾಗ್ರಿಗಳು:
    * ಹಾಲು- 2ಕಪ್
    * ಕ್ಯಾರೆಟ್- 1ಕಪ್
    * ಗೋಡಂಬಿ, ಬಾದಾಮಿ 6-7(ಹಾಲಿನಲ್ಲಿ ನೆನೆ ಹಾಕಿರಿ)
    * ಏಲಕ್ಕಿ ಪುಡಿ – 1 ಚಮಚ
    * ತುಪ್ಪ ಸ್ವಲ್ಪ – 4 ಚಮಚ
    * ಕೇಸರಿ – ಸ್ವಲ್ಪ

    ಮಾಡುವ ವಿಧಾನ:
    * ಹಾಲನ್ನು ಗಟ್ಟಿಯಾಗುವವರೆಗೆ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದನ್ನೂ ಓದಿ: ಸರಳ, ರುಚಿಯಾದ ಬೆಳ್ಳುಳ್ಳಿ ಚಟ್ನಿ ಮಾಡಲು ಟ್ರೈ ಮಾಡಿ
    * ನಂತರ ಬೇರೆ ಪಾತ್ರೆಗೆ ತುಪ್ಪ ಗೋಡಂಬಿ, ಬಾದಾಮಿಯನ್ನು ಹಾಕಿ 4-5 ನಿಮಿಷ ಫ್ರೈ ಮಾಡಿ ಒಂದು ಬದಿಯಲ್ಲಿ ತೆಗೆದಿಡಿ.

    * ನಂತರ ಅದೇ ಪಾತ್ರೆಗೆ ತುರಿದ ಕ್ಯಾರೆಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ, ನಂತರ ಈ ಮೊದಲೇ ಹುರಿದ ಬಾದಾಮಿ, ಗೋಡಂಬಿ ಹಾಗೂ ಸ್ವಲ್ಪ ಹಾಲನ್ನು ಕ್ಯಾರೆಟ್ ಜೊತೆ ಹಾಕಿ ಫ್ರೈ ಮಾಡಬೇಕು.

    * ಈಗ ಕ್ಯಾರೆಟ್ ಮತ್ತು ಬಾದಾಮಿ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿಕೊಳ್ಳಬೇಕು. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
    * ಈಗ ಪುನಃ ಹಾಲನ್ನು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆ, ರುಬ್ಬಿದ ಕ್ಯಾರೆಟ್ ಹಾಕಿ ಸೌಟ್ ನಿಂದ ಮಿಕ್ಸ್ ಮಾಡುತ್ತಾ 5 ನಿಮಿಷ ಕುದಿಸಬೇಕು. ಸಕ್ಕರೆ ಅಥವಾ ಹಾಲು ಬೇಕಿದ್ದರೆ ಸ್ವಲ್ಪ ಸೇರಿಸಬಹುದು. ಇದೀಗ ರುಚಿಯಾದ ಕ್ಯಾರೆಟ್ ಪಾಯಸ ಸವಿಯಲು ಸಿದ್ಧವಾಗುತ್ತದೆ.

  • ಒಮ್ಮೆ ತಿಂದರೆ ಮತ್ತೆ ಬೇಕು ಎನ್ನಿಸುವ ರುಚಿಯಾದ ಅವಲಕ್ಕಿ ಲಾಡು

    ಒಮ್ಮೆ ತಿಂದರೆ ಮತ್ತೆ ಬೇಕು ಎನ್ನಿಸುವ ರುಚಿಯಾದ ಅವಲಕ್ಕಿ ಲಾಡು

    ಡುಗೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಇರುವ ಪದಾರ್ಥವೆಂದರೆ ಅವಲಕ್ಕಿಯಾಗಿದೆ. ಗಡಿಬಿಡಿಯ ಸಮಯದಲ್ಲಿ ಸಹಾಯಕ್ಕೆ ಬರುವುದು. ಸ್ವಲ್ಪ ಹೊತ್ತು ನೆನೆ ಹಾಕಿ ಅವಲಕ್ಕಿ ಒಗ್ಗರಣೆಯಿಂದ ಹಿಡಿದು, ಕೇಸರಿಭಾತ್, ಉಪ್ಪಿಟ್ಟು, ಬಿಸಿ ಬೇಳೆ ಬಾತ್, ದೋಸೆ ಮೊದಲಾದ ತಿಂಡಿಗಳನ್ನು ಸಿದ್ಧಪಡಿಸಬಹುದಾಗಿದೆ. ಹೀಗಿರುವಾಗ ನೀವು ಒಮ್ಮೆಯಾದರೂ ಅವಲಕ್ಕಿ ಲಾಡು ತಿಂದಿಲ್ಲವೆಂದರೆ ಒಮ್ಮೆ ಮಾಡಿ ನೋಡಲು ಇಲ್ಲಿದೆ ವಿಧಾನ.

    ಬೇಕಾಗುವ ಸಾಮಗ್ರಿಗಳು:
    * ಅವಲಕ್ಕಿ – 1 ಕಪ್
    * ತೆಂಗಿನ ಹುಡಿ – ಅರ್ಧ ಕಪ್
    * ಸಕ್ಕರೆ – 2 ಕಪ್
    * ಏಲಕ್ಕಿ ಪುಡಿ – ಅರ್ಧ ಚಮಚ
    * ಗೋಡಂಬಿ – 3-4
    * ಬಾದಾಮಿ – 3-4
    * ಪಿಸ್ತಾ – 3-4
    * ದ್ರಾಕ್ಷಿ – 8 9.
    * ತುಪ್ಪ – 4-5 ಚಮಚ
    * ಹಾಲು- 1 ಕಪ್


    ಮಾಡುವ ವಿಧಾನ:
    * ಅವಲಕ್ಕಿಯನ್ನು ಬಿಸಿಯಾದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
    * ತೆಂಗಿನ ತುರಿ ಪೌಡರ್ ಅನ್ನು ಸೇರಿಸಿಕೊಂಡು ಹುರಿದ ಅವಲಕ್ಕಿಯೊಂದಿಗೆ ಮಿಶ್ರ ಮಾಡಿ. ಇದನ್ನೂ ಓದಿ:  ಸುಲಭವಾಗಿ ಮಾಡಿ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ

    * ಈಗ ಸಕ್ಕರೆ, ಅವಲಕ್ಕಿ, ತೆಂಗಿನ ತುರಿ ಪೌಡರ್ ಗ್ರೈಂಡರ್‍ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
    * ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಪಿಸ್ತಾವನ್ನು ಮಂದ ಉರಿಯಲ್ಲಿ ಹುರಿದುಕೊಳ್ಳಿ.

    * ಅವಲಕ್ಕಿ ಮಿಶ್ರಣಕ್ಕೆ ಈಗ ಎಲ್ಲಾ ಡ್ರೈ ಪ್ರುಟ್ಸ್ ಅನ್ನು ಸೇರಿಸಿಕೊಳ್ಳಿ. ಹಾಲನ್ನು ತುಸು ಬೆಚ್ಚಗೆ ಮಾಡಿಕೊಂಡು ಅದಕ್ಕೆ ಸೇರಿಸಿ.
    * ಇನ್ನು ಲಾಡು ಕಟ್ಟುವುದಕ್ಕಾಗಿ ತುಪ್ಪವನ್ನು ಸೇರಿಸಿಕೊಂಡು ಉಂಡೆಯನ್ನು ಸಿದ್ಧಪಡಿಸಿಕೊಳ್ಳಿ. ಈಗ ರುಚಿಯಾದ ಅವಲಕ್ಕಿ ಲಾಡು ಸವಿಯಲು ಸಿದ್ಧವಾಗುತ್ತದೆ.

  • ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

    ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

    ಬ್ಬಗಳು ಒಂದೊಂದಾಗಿಯೆ ಬರುತ್ತಿವೆ. ರಕ್ಷಾ ಬಂಧನಕ್ಕೆ ಸಿಹಿ ತಿಂಡಿ ಇದ್ದರೆ ಹಬ್ಬದ ಮೆರಗು ಹೆಚ್ಚಾಗುತ್ತದೆ. ಹಬ್ಬದ ದಿನ ಬಗೆಬಗೆಯಾದ ಸಿಹಿ ತಿಂಡಿಗಳನ್ನು ದೇವರಿಗೆ ನೈವೇದ್ಯ ಅರ್ಪಿಸಿಬೇಕು. ಸಿಹಿ ತಿಂಡಿಗಳು ರುಚಿಯ ಜೊತೆಗೆ ಆರೋಗ್ಯದ ಕಾಳಜಿಯಿಂದಲೂ ತಯಾರಿಸಬೇಕು ಎಂಬುದು ಮುಖ್ಯವಾಗುತ್ತದೆ. ಹೀಗಾಗಿ ನೀವು ಮನೆಯಲ್ಲಿಯೆ ಸರಳವಾಗಿ ಗೋಧಿ ಹಿಟ್ಟಿನ ಲಡ್ಡು ಮಾಡಿ.

    ಬೇಕಾಗುವ ಸಾಮಗ್ರಿಗಳು:

    * ಗೋಧಿ ಹಿಟ್ಟು- 1 ಕಪ್
    * ತುಪ್ಪ – ಅರ್ಧ ಕಪ್
    * ನೀರು – 3 ಚಮಚ
    * ತೆಂಗಿನ ತುರಿ- ಅರ್ಧ ಕಪ್
    * ಬಾದಾಮಿ – 5 ರಿಂದ 6
    * ಗೋಡಂಬಿ – 5 ರಿಂದ 6
    * ಒಣದ್ರಾಕ್ಷಿ – 8-10
    * ಪಿಸ್ತಾ – ¼ ಚಮಚ
    * ಏಲಕ್ಕಿ ಪುಡಿ – ಅರ್ಧ ಚಮಚ
    * ಸಕ್ಕರೆ ಪುಡಿ – ಅರ್ಧ ಕಪ್


    ಮಾಡುವ ವಿಧಾನ:
    * ಮಿಕ್ಸಿಂಗ್ ಬೌಲ್‍ನಲ್ಲಿ ಗೋಧಿ ಹಿಟ್ಟು ತುಪ್ಪ ಸೇರಿಸಿ.
    * ಮಿಶ್ರಣಕ್ಕೆ ಬೆಚ್ಚಗಿನ ನೀರನ್ನು ಸೇರಿಸಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ.
    * ಅಂಗೈಯಲ್ಲಿ ಹಿಡಿದಾಗ ಮಿಶ್ರಣ ಒಟ್ಟಿಗೆ ಅಂಟಿಕೊಳ್ಳಬೇಕು.
    * ಬಿಸಿ ಮಾಡಿದ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಸೇರಿಸಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದನ್ನೂ ಓದಿ:  ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್

    * ನಂತರ ತೆಂಗಿನ ಪುಡಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಟವ್ ಆಫ್ ಮಾಡಿ.
    * ಕತ್ತರಿಸಿದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಏಲಕ್ಕಿ ಪುಡಿಯನ್ನು ಸೇರಿಸಿ 10 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಪುಡಿ ಮಾಡಿದ ಸಕ್ಕರೆಯನ್ನು ಸೇರಿಸಿ ಕೈಬಳಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣ ಲಡ್ಡುಗಳಾಗಿ ಮಾಡಿದರೆ ಗೋಧಿ ಲಡ್ಡು ಸವಿಯಲು ಸಿದ್ಧವಾಗುತ್ತದೆ.

  • ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ

    ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ

    ಯುಗಾದಿ ಹಬ್ಬ ಹತ್ತಿರ ಬರುತ್ತಿದೆ. ಮನೆಯಲ್ಲಿ ಸಿಹಿಯಾದ ತಿಂಡಿಗಳನ್ನು ಮಾಡಬೇಕು. ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದೆ ಹೋಳಿಗೆ. ಬೇಳೆ ಹೋಳಿಗೆ ತಿಂದು ಬೇಸರವಾಗಿದ್ರೆ ಈ ಬಾರಿ ಮನೆಯೆಲ್ಲಿ ಕಾಯಿ ಹೋಳಿಗೆ ಮಾಡಿ ಸವಿಯಿರಿ. ಇಲ್ಲಿದೆ ಮಾಡುವ ವಿಧಾನ…

    ಬೇಕಾಗುವ ಸಾಮಗ್ರಿಗಳು:
    * ಕಾಯಿ- 3 ಕಪ್
    * ಬೆಲ್ಲ- 2 ಕಪ್
    * ಹುರಗಡಲೆ- 1 ಟೇಬಲ್ ಸ್ಪೂನ್
    * ಗಸಗಸೆ- 2 ಟೀ ಸ್ಪೂನ್
    * ಏಲಕ್ಕಿ ಪುಡಿ – 1 ಟೀ ಸ್ಪೂನ್
    * ಹೋಳಿಗೆ ರವೆ- ಕಾಲು ಕೆಜಿ
    * ಮೈದಾಹಿಟ್ಟು- 100 ಗ್ರಾಂ
    * ಅರಿಶಿನ- 1 ಟೀ ಸ್ಪೂನ್
    * ಅಡುಗೆ ಎಣ್ಣೆ- 1 ಕಪ್
    * ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಒಂದು ಅಗಲವಾದ ಪಾತ್ರೆಗೆ ಹೋಳಿಗೆ ರವೆ, ಮೈದಾಹಿಟ್ಟು, ಅರಿಶಿನ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸುತ್ತಾ ಬನ್ನಿ. ಹಿಟ್ಟು ಮೃದುವಾಗಿರಬೇಕು, ಹೆಚ್ಚು ಗಟ್ಟಿಗಿದ್ರೆ ಹೋಳಿಗೆ ಲಟ್ಟಿಸುವುದು ಕಷ್ಟವಾಗುತ್ತದೆ.
    * ಈ ಮಿಶ್ರಣಕ್ಕೆ ಸ್ವಲ್ಪ ಎಣ್ಣೆ ಸೇರಿಸಿ ಮೃದುವಾಗಿರುವಂತೆ ಕಲಸಿ ಒಂದು ಪಾತ್ರೆಗೆ ಹಾಕಿ 1 ಗಂಟೆ ಸಮಯ ಮುಚ್ಚಿ ಇಟ್ಟಿರಬೇಕು.

    * ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಹುರಿಗಡೆಲೆ ಹಾಕಿ 2 ಸ್ಪೂನ್ ನೀರು ಹಾಕಿ ಸಣ್ಣದಾಗಿ ರುಬ್ಬಿಕೊಳ್ಳಬೇಕು.
    * ಒಲೆ ಮೇಲೆ ಒಂದು ಪಾತ್ರೆಗೆ ಬೆಲ್ಲ, ನೀರು ಹಾಕಿ ಕುದಿಸಿ. ಬೆಲ್ಲ ಕರಗಿ ನೀರು ಕುದಿಯುವಾಗ ಅದಕ್ಕೆ ರುಬ್ಬಿರುವ ಕಾಯಿ ಮಿಶ್ರಣವನ್ನು ಹಾಕಬೇಕು.
    * ಏಲಕ್ಕಿ ಪುಡಿ ಹಾಕಿ ಕಲಸಿ. ಈ ಮಿಶ್ರಣ ಬಣ್ಣ ಬದಲಾಗಿ ಗಟ್ಟಿಯಾಗಿ ಬರುವವರೆಗೆ ಸಣ್ಣ ಉರಿ ಬೆಂಕಿಯಲ್ಲಿ ಬೇಯಿಸಬೇಕು. ಇದಕ್ಕೆ ಗಸಗಸೆ, ಏಲಕ್ಕಿ ಹಾಕಿ ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಬೇಕು.

    * ಊರ್ಣಕ್ಕೆ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳಿ.
    * ಕೈಗೆ ಎಣ್ಣೆ ಸವರಿಕೊಂಡು ತೆಗೆದುಕೊಂಡು ಹಿಟ್ಟನ್ನು ಕೈಯಲ್ಲಿ ಸ್ವಲ್ಪ ಅಗಲ ಮಾಡಿ ಊರ್ಣವನ್ನು ಅದರೊಳಗೆ ಇಟ್ಟು ಹೋಳಿಗೆ ಪೇಪರ್ ಮೇಲೆ ಇಟ್ಟು ಲಟ್ಟಿಸಿ.
    * ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆ ಬೇಯಿಸಿದ್ರೆ ಕಾಯಿ ಹೋಳಿಗೆ ಸವಿಯಲು ಸಿದ್ಧವಾಗುತ್ತದೆ. ಬಿಸಿಯಾದ ತುಪ್ಪದೊಂದಿಗೆ ಹೋಳಿಗೆಯನ್ನು ಸವಿಯ ಬಹುದಾಗಿದೆ.

  • ದೀಪಾವಳಿ ಹಬ್ಬಕ್ಕೆ ಮಾಡಿ ಗರಿಗರಿಯಾದ ಶಂಕರಪೊಳೆ

    ದೀಪಾವಳಿ ಹಬ್ಬಕ್ಕೆ ಮಾಡಿ ಗರಿಗರಿಯಾದ ಶಂಕರಪೊಳೆ

    ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಈ ಸಡಗರ, ಸಂಭ್ರಮದ ನಡುವೆ ಸಿಹಿ ತಿಂಡಿ ಸವಿಯೋದೆ ಖುಷಿ. ಅದರಲ್ಲೂ ಗರಿಗರಿಯಾದ ಸಿಹಿ ತಿಂಡಿ ಇದ್ದರಂತೂ ಇನ್ನೂ ಚೆಂದ. ಅದಕ್ಕೆ ದೀಪಾವಳಿ ಶುಭಸಮಯದಲ್ಲಿ ತಿನ್ನಲು ಬಿಸ್ಕೆಟ್ ನಂತೆಯೇ ಇರುವ, ಮಾಡಲೂ ಬಹಳ ಸುಲಭವಾಗಿರುವ ಗರಿಗರಿಯಾದ ಶಂಕರಪೊಳೆ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    * ತುಪ್ಪ- 1 ಲೋಟ
    * ಸಕ್ಕರೆ- 1 ಲೋಟ
    * ಹಾಲು- 2 ಲೋಟ
    * ಮೈದಾ ಹಿಟ್ಟು- 5 ಲೋಟ
    * ಉಪ್ಪು- 2 ಚಿಟಕಿ
    * ಎಣ್ಣೆ- ಕರಿಯಲು

    ಮಾಡುವ ವಿಧಾನ:
    ಮೊದಲು ಸ್ಟವ್ ಆನ್ ಮಾಡಿ ಪ್ಯಾನ್ ಇಟ್ಟು ಅದಕ್ಕೆ ತುಪ್ಪ, ಸಕ್ಕರೆ ಹಾಕಿ. ಸಕ್ಕರೆ ಕರಗಿದ ಬಳಿಕ ಅದಕ್ಕೆ ಹಾಲು ಬೆರಿಸಿ ಕುದಿಯಲು ಬಿಡಿ

    ಹಾಲು ಕುದಿದ ನಂತರ ಅದಕ್ಕೆ ಮೈದಾ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸೌಟಿನಿಂದ ಚೆನ್ನಾಗಿ ಕಲಸಿ. ಸ್ವಲ್ಪ ಹೊತ್ತಿನ ನಂತರ ಮಿಶ್ರಣ ತಣಿದ ಮೇಲೆ ಕೈಯಿಂದ ಅದನ್ನು ಮತ್ತೊಮ್ಮೆ ಚೆನ್ನಾಗಿ ಕಲಸಿರಿ. ಇದನ್ನೂ ಓದಿ:ಹಬ್ಬಕ್ಕೆ ಬಿಸಿಬಿಸಿ ಸಿಹಿ ಕಜ್ಜಾಯ ಮಾಡೋ ವಿಧಾನ

    ಆ ನಂತರ ಕಲಸಿದ ಹಿಟ್ಟಿನಿಂದ ಸಣ್ಣ ಕಿತ್ತಳೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಂಡು. ಆ ಉಂಡೆಗಳನ್ನು ಎರಡೂ ಬದಿಯಲ್ಲಿ ಮೈದಾ ಹಿಟ್ಟಿನಿಂದ ಸವರಿ, ಸಣ್ಣ ಚಪಾತಿಯ ಆಕಾರಕ್ಕೆ ಲಟ್ಟಿಸಿಕೊಳ್ಳಿ. ಬಳಿಕ ಚಾಕು ಅಥವಾ ಚಮಚದಿಂದ ಅದನ್ನು ತ್ರಿಕೋನಾಕಾರದಲ್ಲಿ ಕತ್ತರಿಸಿರಿ.

    ತ್ರಿಕೋನಾಕಾರದಲ್ಲಿ ಕತ್ತರಿಸಿದ ನಂತರ ಇನ್ನೊಮ್ಮೆ ಎರಡು ಬದಿಯಲ್ಲೂ ಮೈದಾ ಹಿಟ್ಟನ್ನು ಸವರಿ, ಚಪಾತಿಯಷ್ಟು ದಪ್ಪ ಗಾತ್ರಕ್ಕೆ ಲಟ್ಟಿಸಿಕೊಳ್ಳಿ. ಆ ನಂತರ ಶಂಕರಪೊಳೆಯ ಚಮಚವನ್ನು ಉಪಯೋಗಿಸಿ ಅದನ್ನು ಸಣ್ಣ ಸಣ್ಣ ಚೌಕಾಕಾರಕ್ಕೆ ಕತ್ತರಿಸಿಕೊಳ್ಳಿ. ಇದನ್ನೂ ಓದಿ:ದೀಪಾವಳಿಯಂದು ಎಣ್ಣೆ ಸ್ನಾನ ಮಾಡೋದು ಯಾಕೆ? ನರಕಕ್ಕೆ ಹೋಗಲ್ಲ ಯಾಕೆ?

    ಇತ್ತ ಒಂದು ಪ್ಯಾನ್‍ನಲ್ಲಿ ಅಡುಗೆ ಎಣ್ಣೆ ಹಾಕಿ ಸ್ಟವ್ ಮೇಲೆ ಕಾಯಲು ಇಡಿ. ಅದು ಕಾದ ನಂತರ ಕತ್ತರಿಸಿದ ಶಂಕರಪೊಳೆ ಹಿಟ್ಟಿನ ಭಾಗಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಕರಿಯಿರಿ.

    ಒಂದೆರಡು ನಿಮಿಷದ ನಂತರ ಶಂಕರಪೊಳೆಗೆ ಹೊಂಬಣ್ಣ ಬಂದಾಗ ಅವುಗಳನ್ನು ಪ್ಯಾನ್‍ನಿಂದ ತೆಗೆದು ಪ್ಲೇಟ್‍ಗೆ ಹಾಕಿ. ಹೀಗೆ ಕತ್ತರಿಸಿಟ್ಟಿದ್ದ ಎಲ್ಲಾ ಶಂಕರಪೊಳೆ ಹಿಟ್ಟನ್ನು ಕರಿಯಿರಿ. ಬಳಿಕ 5ರಿಂದ 10 ನಿಮಿಷ ತಣಿಯಲು ಬಿಟ್ಟರೆ ಶಂಕರಪೊಳೆ ಗರಿಗರಿಯಾಗುತ್ತದೆ. ಇದನ್ನೂ ಓದಿ: ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

    ಇದನ್ನು 10-15 ದಿನಗಳವರೆಗೂ ಇಟ್ಟು ತಿನ್ನಬಹುದು. ಹೀಗೆ ರುಚಿಯಾದ, ಸುಲಭವಾದ ಗರಿಗರಿಯಾದ ಸಿಹಿ ಶಂಕರಪೊಳೆ ಮಾಡಿ ಸವಿದು ಹಬ್ಬವನ್ನು ಸಂಭ್ರಮಿಸಿ.