Tag: ಸಿಹಿ ಅಡುಗೆ

  • ಉತ್ತರ ಕರ್ನಾಟಕ ದಸರಾದ ಸಿಹಿ ‘ತರಗ’ ಮಾಡುವ ವಿಧಾನ

    ಉತ್ತರ ಕರ್ನಾಟಕ ದಸರಾದ ಸಿಹಿ ‘ತರಗ’ ಮಾಡುವ ವಿಧಾನ

    ಹಬ್ಬ ಬಂತೆಂದರೆ ಸಾಕು ಮೊದಲು ನೆನಪಾಗುವುದೇ ಸಿಹಿ, ರುಚಿಕರವಾದ ಅಡುಗೆ ಹಾಗೂ ಇನ್ನಿತರ ಖಾದ್ಯಗಳು.

    ಯಾವುದೇ ಹಬ್ಬ ಇರಲಿ, ಸಿಹಿಯಾದ ಅಡುಗೆ ಮಾಡುವುದು ಒಂದು ರೀತಿಯ ಸಂಪ್ರದಾಯವೇ ಹೌದು. ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವ ಹಾಗೆ ಹೋಳಿಗೆ, ಪಾಯಸ ಹೀಗೆ ವಿಭಿನ್ನವಾದ ಸಿಹಿ ಪದಾರ್ಥಗಳನ್ನು ಹಬ್ಬದ ಸಂದರ್ಭದಲ್ಲಿ ಮಾಡಲಾಗುತ್ತದೆ.

    ದಸರಾ ಹಬ್ಬವನ್ನು ರಾಜ್ಯದಲ್ಲಿ ಬೇರೆ ಬೇರೆ ಕಡೆ ವಿಭಿನ್ನವಾಗಿ ಆಚರಿಸಲಾಗುತ್ತದೆ. ದೇವಿಯ ಪೂಜೆ, 9 ದಿನ ಉಪವಾಸ, ಜಂಬೂಸವಾರಿ, ಹೀಗೆ ವಿಭಿನ್ನ ವಿಚಾರಗಳನ್ನು ಒಳಗೊಂಡು ದಸರಾ ಆಚರಿಸಲಾಗುತ್ತದೆ.

    ಕರ್ನಾಟಕದಲ್ಲಿ ಮೈಸೂರು ದಸರಾ, ಮಡಿಕೇರಿ ದಸರಾ, ಮಂಗಳೂರು ದಸರಾ ಹೀಗೆ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಹಾಗೆ ಉತ್ತರ ಕರ್ನಾಟಕದಲ್ಲಿ ದಸರಾ ಆಚರಿಸುವ ರೀತಿ ವಿಭಿನ್ನವಾಗಿದೆ. ನವರಾತ್ರಿಯ ಮೊದಲನೇ ದಿನ ದೇವರ ಮನೆಯಲ್ಲಿ ಘಟಸ್ಥಾಪನೆ ಮಾಡಲಾಗುತ್ತದೆ. ಈ ದಿನವನ್ನು ಘಟಸ್ಥಾಪನೆಯೆಂದೇ ಕರೆಯಲಾಗುತ್ತದೆ. ಈ ಘಟಸ್ಥಾಪನೆ ವೇಳೆ 9 ರೀತಿಯ ದ್ವಿದಳ ಧಾನ್ಯಗಳನ್ನ ಮಣ್ಣಿನಲ್ಲಿ ಹಾಕಿ, ಒಂಬತ್ತು ದಿನಗಳ ಕಾಲ ದೇವರ ಮನೆಯಲ್ಲಿ ಇಡಲಾಗುತ್ತದೆ. ನವರಾತ್ರಿಯ ಕೊನೆಯ ದಿನ ಬನ್ನಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ತರಗ (ಸಿಹಿ ಪೂರಿ) ಎಂಬ ಸಿಹಿ ಪದಾರ್ಥವನ್ನು ಮಾಡಲಾಗುತ್ತದೆ. ಈ ತರಗವನ್ನು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    ಮೈದಾ ಹಿಟ್ಟು
    ಸಕ್ಕರೆ ಅಥವಾ ಬೆಲ್ಲ
    ಅರಿಶಿಣ ಪುಡಿ

    ಮಾಡುವ ವಿಧಾನ:
    ಮೈದಾ ಹಿಟ್ಟಿನಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ, ಅದಕ್ಕೆ ಅರಿಶಿನವನ್ನು ಹಾಕಿ ಪೂರಿ ಮಾಡುವ ಹಿಟ್ಟಿನ ಹದಕ್ಕೆ ತರಲಾಗುತ್ತದೆ. ಬಳಿಕ ಇದನ್ನು ದಿನನಿತ್ಯ ಪೂರಿ ತಯಾರಿಸಿದಂತೆ ಮಾಡಲಾಗುತ್ತದೆ.

    ಕೊನೆಯ ದಿನ ತರಗವನ್ನು ತಯಾರಿಸಿ, ದೇವರ ಮನೆಯಲ್ಲಿ ಕಟ್ಟಿಗೆಯ ʻಪೂಲಾರಿಗೆʼ ಎಂಬುವುದಕ್ಕೆ ತರಗವನ್ನು ಕಟ್ಟಲಾಗುತ್ತದೆ. ಪೂಲಾರಿಗೆ ಎಂದರೆ 3*3 ಎಂಬಂತೆ 9 ಚೌಕಗಳು ಸಿದ್ಧವಾಗುವಂತೆ  ಕಟ್ಟಿಗೆಯಿಂದ ತಯಾರಿಸಲಾಗುತ್ತದೆ. ಅದನ್ನು ದೇವರ ಮನೆಯಲ್ಲಿ ಮೇಲೆ ಕಟ್ಟಲಾಗುತ್ತದೆ. ಅದಕ್ಕೆ ತಯಾರಿಸಿರುವ ತರಗವನ್ನು ದಾರದ ಸಹಾಯದಿಂದ ಕಟ್ಟಲಾಗುತ್ತದೆ. ಅದರ ಜೊತೆಗೆ ತೋರಣವನ್ನು ಕಟ್ಟಲಾಗುತ್ತದೆ. ಈ ತರಗವನ್ನು ಬನ್ನಿ ಕೊಟ್ಟು ಬಳಿಕ ದೇವರ ಮನೆಯಲ್ಲಿ ಕಟ್ಟಲಾದ ಪೂಲಾರಿಗೆಯಿಂದ ಕಿತ್ತು ತೆಗೆದುಕೊಳ್ಳಲಾಗುತ್ತದೆ. ದೇವರಿಗೆ ಬನ್ನಿ ಅರ್ಪಿಸಿ ಇದನ್ನೂ ತಿನ್ನುವ ಸಂಪ್ರದಾಯವಿದೆ.

  • ಕೃಷ್ಣ ಜನ್ಮಾಷ್ಟಮಿಗೆ ಮಾಡಿ‌ ಸವಿಯಿರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಲಡ್ಡು

    ಕೃಷ್ಣ ಜನ್ಮಾಷ್ಟಮಿಗೆ ಮಾಡಿ‌ ಸವಿಯಿರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಲಡ್ಡು

    ಕೃಷ್ಣಾ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಸಿಹಿ ಮಾಡಿ ಸವಿಯುತ್ತಾರೆ. ಅದರಂತೆ  ಇಂದು ಆಚರಿಸುವ ಕೃಷ್ಣ ಜನ್ಮಾಷ್ಟಮಿಗೆ ರುಚಿ ರುಚಿಯಾದ ಹಾಗೂ ಆರೋಗ್ಯಕರವಾದ ಲಡ್ಡು ಮಾಡಿ ಸವಿದು ಹಬ್ಬವನ್ನು ಎಂಜಾಯ್‌ ಮಾಡಿ.

    ಹಬ್ಬಕ್ಕಾಗಿ ನಾನಾ ತರಹದ ಸಿಹಿ ತಿಂಡಿಗಳನ್ನು ಮಾಡಬೇಕಾಗುತ್ತದೆ. ಆಗ ನೀವು ಮಾಡುವ ಸಿಹಿ ಅಡುಗೆಯಲ್ಲಿ ಡ್ರೈ ಫ್ರೂಟ್ಸ್ ಲಡ್ಡನ್ನು ಸೇರಿಸಿಕೊಳ್ಳಬಹುದಾಗಿದೆ. ಈ ಸಿಹಿ ತಿಂಡಿಯನ್ನು ಒಣಗಿದ ಹಣ್ಣುಗಳಿಂದ ಮಾಡುವುದರಿಂದ ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಈ ಸ್ವೀಟ್‍ನ್ನು 15 ರಿಂದ 20 ದಿನಗಳಕಾಲ ನೀವು ಇಟ್ಟು ತಿನ್ನಬಹುದಾಗಿದೆ.  

    ಬೇಕಾಗುವ ಸಾಮಗ್ರಿಗಳು:
    * ದ್ರಾಕ್ಷಿ- ಅರ್ಧ ಕಪ್
    * ಬಾದಾಮಿ- ಅರ್ಧ ಕಪ್
    * ಗೋಡಂಬಿ- ಅರ್ಧ ಕಪ್
    * ಖರ್ಜೂರ- ಅರ್ಧ ಕಪ್
    * ಪಿಸ್ತಾ- ಅರ್ಧ ಕಪ್
    * ತುಪ್ಪ-2 ಟೇಬಲ್ ಸ್ಪೂನ್
    * ಗಸಗಸೆ-1 ಟೇಬಲ್ ಸ್ಪೂನ್
    * ಏಲಕ್ಕಿ ಪುಡಿ-1 ಟೀ ಸ್ಪೂನ್
    * ಬೆಲ್ಲ- ಅರ್ಧ ಕಪ್
    * ಎಳ್ಳು- ಅರ್ಧ ಕಪ್
    * ಬಾದಾಮಿ- ಅರ್ಧ ಕಪ್
    * ಒಣ ಕೊಬ್ಬರಿ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಬಾಣಲೆಗೆ ಎಳ್ಳು, ಗಸಗಸೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
    * ಬಾಣಲೆಯಲ್ಲಿ ಒಂದು ಟೇಬಲ್ ಸ್ಪೂನ್ ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾವನ್ನು ಹಾಕಿ ಚೆನ್ನಾಗಿ ಹುರಿಯ ಬೇಕು.

    * ನಂತರ ಮಿಕ್ಸಿ ಜಾರ್ ಗೆ ಒಣಗಿದ ಕೊಬ್ಬರಿ ಹಾಗೂ ಹುರಿದ ಡ್ರೈ ಫ್ರೂಟ್ಸ್, ಖರ್ಜೂರ, ಬೆಲ್ಲವನ್ನು ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ.

    * ನಂತರ ಈ ಡ್ರೈ ಫ್ರೂಟ್ಸ್ ಮಿಶ್ರಣಕ್ಕೆ ಈ ಮೊದಲು ಹುರಿದು ತೆಗೆದಿಟ್ಟ ಎಳ್ಳು, ಗಸಗಸೆ ಹಾಕಿ ಮಿಶ್ರಣವನ್ನು ಮಾಡಿ ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ರುಚಿಯಾ ದ ಡ್ರೈ ಫ್ರೂಟ್ಸ್ ಲಾಡು ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಬಾಯಲ್ಲಿ ನಿರೂರಿಸುವಂತಹ ಬಾದಾಮ್ ಪುರಿಯನ್ನು ನೀವೂ ಟ್ರೈ ಮಾಡಿ

    ಬಾಯಲ್ಲಿ ನಿರೂರಿಸುವಂತಹ ಬಾದಾಮ್ ಪುರಿಯನ್ನು ನೀವೂ ಟ್ರೈ ಮಾಡಿ

    ಮ್ಮೆ ತಿಂದರೆ ಮತ್ತೆ ತಿನ್ನ ಬೇಕು ಎಂದು ನಾಲಿಗೆ ರಚಿಯಾದ ಆಹಾರಾವನ್ನು ಸವಿಯಲು ಬಯಸುತ್ತದೆ. ಇಂತಹದ್ದೆ ಒಂದು ಸಿಹಿ ಅಡುಗೆ ಬಾದಾಮ್ ಪುರಿಯಾಗಿದೆ. ಆರೋಗ್ಯಕರವಾದ ಮತ್ತು ರುಚಿಯಾದ ಆಹಾರವನ್ನು ಸವಿಯಲು ಪ್ರತಿಯೊಬ್ಬರು ಇಷ್ಟ ಪಡುತ್ತಾರೆ. ಯಾವುದೇ ಹಬ್ಬವಿರಲಿ ಸಂತಸ ಕೂಟವಿರಲಿ ಅತಿಥಿಗಳು ಬಂದಾಗ ಅವರನ್ನು ಸತ್ಕರಿಸಲು ಬಾದಾಮ್ ಪುರಿಯನ್ನು ಸುಲಭವಾಗಿ ಮಾಡಬಹುದಾಗಿದೆ.

    ಬಾದಾಮ್ ಪುರಿಯನ್ನು ಅತಿ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾಗಿದ್ದು, ಹೆಚ್ಚಿನ ಸಾಮಾಗ್ರಿಗಳ ಅಗತ್ಯ ಕೂಡ ಇದಕ್ಕಿಲ್ಲ. ರುಚಿಕರವಾದ ಮತ್ತು ಸಾಂಪ್ರದಾಯಿಕ ಸಿಹಿ ತಿನಿಸು ಇದಾಗಿದ್ದು, ಗರಿ ಗರಿಯಾದ ಪುರಿಯನ್ನು ಸಕ್ಕರೆ ಪಾಕದಲ್ಲಿ ಅದ್ದಿ ಈ ಸಿಹಿಯನ್ನು ಮಾಡಲಾಗುತ್ತದೆ. ಇದನ್ನೂ ಓದಿ:  ಫಟಾಫಟ್ ಆಗಿ ಮಾಡಿ ಗರಿಗರಿಯಾದ ಕಡಲೆ ಹಿಟ್ಟಿನ ದೋಸೆ

    ಬೇಕಾಗುವ ಸಾಮಗ್ರಿಗಳು:
    * ಮೈದಾಹಿಟ್ಟು- 1 ಕಪ್
    * ಅಡುಗೆ ಸೋಡಾ- ಚಿಟಿಕೆಯಷ್ಟು
    * ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
    * ಸಕ್ಕರೆ- ಒಂದೂವರೆ ಕಪ್

    ಮಾಡುವ ವಿಧಾನ:
    * ಮೊದಲಿಗೆ ಮೈದಾಹಿಟ್ಟಿಗೆ ಸ್ವಲ್ಪ ಸೋಡಾ ಹಾಕಿ ಮಿಶ್ರಣ ಮಾಡಬೇಕು. ನಂತರ 5-6 ಚಮಚ ಎಣ್ಣೆಯನ್ನು ಬಿಸಿ ಮಾಡಿ ಹಾಕಿ ಮಿಶ್ರಣ ಮಾಡಿ, ನಂತರ ಸ್ವಲ್ಪ ನೀರು ಹಾಕಿ ಹಿಟ್ಟನ್ನು ತಯಾರು ಮಾಡಿಕೊಂಡು 15-20 ನಿಮಿಷ ನೆನೆಯಲು ಬಿಡಬೇಕು.

    * ನಂತರ ಪಾತ್ರೆಯೊಂದಕ್ಕೆ ಸಕ್ಕರೆ ಹಾಗೂ 1 ಬಟ್ಟಲು ನೀರು ಹಾಕಿ ಪಾಕ ತಯಾರು ಮಾಡಿಕೊಳ್ಳಿ.
    * ನಂತರ ಹಿಟ್ಟನ್ನು ಬಾದಾಮ್ ಪುರಿ ಆಕಾರಕ್ಕೆ ಒತ್ತಿಕೊಳ್ಳಿ. ಬಳಿಕೆ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಪುರಿಗಳನ್ನು ಹಾಕಿ ಸಣ್ಣ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿದುಕೊಳ್ಳಿ.

    * ಪಾಕ ಬೆಚ್ಚಗಿರುವಾಗಲೇ ಅದರೊಳಗೆ ಕರಿದುಕೊಂಡ ಪುರಿಗಳನ್ನು ಹಾಕಿ. 2-4 ನಿಮಿಷ ನೆಂದ ಬಳಿಕ ತೆಗೆದು ಡ್ರೈಫ್ರೂಟ್ಸ್ ನೊಂದಿಗೆ ಅಲಂಕರಿಸಿದರೆ ರುಚಿಕರವಾದ ಬಾದಾಮ್ ಪುರಿ ಸವಿಯಲು ಸಿದ್ಧವಾಗುತ್ತದೆ.