Tag: ಸಿಹಿತಿಂಡಿ

  • ಮಕ್ಕಳಿಗೆ ಇಷ್ಟವಾದ ‘ತಂಬಿಟ್ಟಿನ ಉಂಡೆ’ ಮಾಡಿ ಸವಿಯಿರಿ

    ಮಕ್ಕಳಿಗೆ ಇಷ್ಟವಾದ ‘ತಂಬಿಟ್ಟಿನ ಉಂಡೆ’ ಮಾಡಿ ಸವಿಯಿರಿ

    ಮಕ್ಕಳಿಗೆ ಸಿಹಿ ತಿಂಡಿಗಳು ಎಂದರೆ ತುಂಬಾ ಇಷ್ಟ. ಆದರೆ ಪೋಷಕರು ಸಿಹಿ ತಿಂಡಿ ಕೊಟ್ರೆ ಎಲ್ಲಿ ಮಕ್ಕಳ ಹಲ್ಲಿಗೆ ತೊಂದರೆ ಆಗುತ್ತೆ ಎಂದು ಭಯಪಡುತ್ತಾರೆ. ಆದರೆ ಇಂದು ನಾವು ಹೇಳಿಕೊಡುತ್ತಿರುವ ಸಿಹಿ ತಿಂಡಿ ಆರೋಗ್ಯಕ್ಕೂ ಒಳ್ಳೆಯದು ಮತ್ತು ಮಕ್ಕಳು ಸಹ ಆಟಾಡಿಕೊಂಡು ಇಷ್ಟಪಟ್ಟು ತಿನ್ನುತ್ತಾರೆ. ಅದು ಯಾವ ತಿಂಡಿ ಎಂದು ಯೋಚನೆ ಮಾಡುತ್ತಿದ್ದೀರಾ ಅದೇ ‘ತಂಬಿಟ್ಟಿನ ಉಂಡೆ’. ಈ ಉಂಡೆಯನ್ನು ಧಾನ್ಯಗಳನ್ನು ಬಳಸಿ ಮಾಡುವುದರಿಂದ ಮಕ್ಕಳ ಆರೋಗ್ಯಕ್ಕೆ ಮತ್ತು ದೊಡ್ಡವರಿಗೆ ಶಕ್ತಿ ಹೆಚ್ಚಿಸಲು ಸಹಾಯವಾಗುತ್ತೆ.

    ಬೇಕಾಗುವ ಪದಾರ್ಥಗಳು:
    * ಕಡಲೆ ಕಾಳು – 1 ಕಪ್
    * ಹೆಸರು ಕಾಳು – 1 ಕಪ್
    * ಅಕ್ಕಿ – 1/3 ಕಪ್
    * ಉದ್ದಿನ ಬೇಳೆ – 1/8 ಕಪ್


    * ಬೆಲ್ಲ – ಒಂದುವರೆ ಕಪ್
    * ತೆಂಗಿನ ತುರಿ – 1 ಕಪ್
    * ಹುರಿದು ಸಿಪ್ಪೆ ತೆಗೆದ ಶೇಂಗಾ ಬೀಜ – 1/2 ಕಪ್
    * ಏಲಕ್ಕಿ ಪುಡಿ – 1/2 ಟೀಸ್ಪೋನ್

    ಮಾಡುವ ವಿಧಾನ:
    * ಮೊದಲು ಒಂದು ಬಾಣಲೆಗೆ ಕಡಲೆ ಕಾಳು ಹಾಕಿ 5 ರಿಂದ 6 ನಿಮಿಷ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ. ನಂತರ ಅದೇ ಬಾಣಲೆಗೆ ಹೆಸರು ಕಾಳು ಹಾಕಿ 5 ರಿಂದ 6 ನಿಮಿಷ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ. ಅದೇ ರೀತಿ ಕ್ರಮವಾಗಿ ಅಕ್ಕಿ, ಉದ್ದಿನ ಬೇಳೆ ಹಾಕಿ 5 ನಿಮಿಷ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ.
    * ಹುರಿದ ಶೇಂಗಾಬೀಜಗಳನ್ನೊಂದು ಹೊರತು ಪಡಿಸಿ ಉಳಿದೆಲ್ಲವುಗಳನ್ನು ಒಂದು ಪಾತ್ರೆಗೆ ಹಾಕಿ ಕಲಸಿ. ಒಂದು ಮಿಕ್ಸಿ ಜಾರಿಗೆ ಈ ಸಾಮಾಗ್ರಿಗಳನ್ನು ಹಾಕಿ ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಿ.
    * ಒಂದು ಬಾಣಲೆಯಲ್ಲಿ ಒಂದು ಮುಕ್ಕಾಲು ಕಪ್ ಬೆಲ್ಲ, ಅರ್ಧ ಕಪ್ ನೀರು ಹಾಕಿ ಕಲಕಿ. ಮಧ್ಯಮ ಉರಿಯಲ್ಲಿ 4 ರಿಂದ 5 ನಿಮಿಷ ಬೆಲ್ಲ ಕರಗುವ ತನಕ ಕುದಿಸಿ. ತೆಂಗಿನ ತುರಿ ಹಾಕಿ ಕಲಸಿ.
    * ಬೆಲ್ಲ ಸ್ವಲ್ಪ ಅಂಟಿಕೊಳ್ಳಲು ಪ್ರಾರಂಭಿಸಿದಾಗ ಇದಕ್ಕೆ 2 ಕಪ್ ರುಬ್ಬಿದ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಅರ್ಧ ಕಪ್ ಶೇಂಗಾ ಬೀಜ, ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ.
    * ಈಗ ಇದನ್ನು ಚಿಕ್ಕ, ಚಿಕ್ಕ ಉಂಡೆಗಳನ್ನು ಮಾಡಿ.

    – ಪೌಷ್ಟಿಕವಾದ ತಂಬಿಟ್ಟಿನ ಉಂಡೆ ತಿನ್ನಲು ಸಿದ್ಧ.

    Live Tv

  • ಮೋಸ್ಟ್ ಫೇವರೇಟ್ ಸಿಹಿ ತಿಂಡಿ ಕಜ್ಜಾಯ ಮಾಡಿ

    ಮೋಸ್ಟ್ ಫೇವರೇಟ್ ಸಿಹಿ ತಿಂಡಿ ಕಜ್ಜಾಯ ಮಾಡಿ

    ಕ್ಷಿಣ ಭಾರತದ ಜನಪ್ರಿಯ ಸಿಹಿ ತಿಂಡಿಗಳಲ್ಲಿ ಕಜ್ಜಾಯ. ಇದನ್ನು ಜನರು ತಿನ್ನಲು ಎಷ್ಟ ಇಷ್ಟಪಡುವತ್ತಾರೋ ಅಷ್ಟೇ ಮಾಡಲು ಕಷ್ಟ ಪಡುತ್ತಾರೆ. ಏಕೆಂದರೆ ಕಜ್ಜಾಯದ ಪಾಕವಿಧಾನ ಅಷ್ಟು ಸುಲಭವಾಗಿಲ್ಲ. ಆದರೆ ಅಡುಗೆ ಪ್ರಿಯರಿಗೆ ಕಜ್ಜಾಯ ಮಾಡುವುದು ಎಂದರೆ ಹಬ್ಬ. ನೀವು ಒಮ್ಮೆ ಟ್ರೈ ಮಾಡಿ. ಈ ಪಾಕವನ್ನು 2 ತಿಂಗಳ ಕಾಲ ಇಟ್ಟುಕೊಳ್ಳಬಹುದು.

    ಬೇಕಾಗಿರುವ ಪದಾರ್ಥಗಳು:
    * ಅಕ್ಕಿ – 1 ಕಪ್
    * ಬಿಳಿ ಎಳ್ಳು – 1 ಟೀಸ್ಪೂನ್
    * ಗಸಗಸೆ -1 ಟೀಸ್ಪೂನ್
    * ಬೆಲ್ಲ – 2 ಅಚ್ಚು
    * ನೀರು – ¼ ಕಪ್
    * ಏಲಕ್ಕಿ ಪುಡಿ – ¼ ಟೀಸ್ಪೂನ್
    * ಕರಿ ಮೆಣಸು ಪುಡಿ – ¼ ಟೀಸ್ಪೂನ್
    * ತುಪ್ಪ, ಆಳವಾಗಿ ಹುರಿಯಲು

    ಮಾಡುವ ವಿಧಾನ:
    * ಮೊದಲನೆಯದಾಗಿ, 1 ಕಪ್ ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿ. ನಂತರ ನೀರನ್ನು ಪೂರ್ತಿಯಾಗಿ ತೆಗೆದು, ಒಣ ಬಟ್ಟೆಯ ಮೇಲೆ ಹರಡಿ. 30 ನಿಮಿಷಗಳ ಕಾಲ ಒಣಗಿಸಲು ಬಿಡಿ.
    * ಅಕ್ಕಿ ಇನ್ನೂ ತೇವವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಸಂಪೂರ್ಣವಾಗಿ ಒಣಗಲು ಬಿಡಬೇಡಿ.
    * ಈಗ ಅಕ್ಕಿಯನ್ನು ಮಿಕ್ಸಿಗೆ ವರ್ಗಾಯಿಸಿ ಪುಡಿ ಮಾಡಿಕೊಳ್ಳಿ. ಅಕ್ಕಿ ಹಿಟ್ಟನ್ನು ಜರಡಿಯಾಡಿ.
    * ತವಾವನ್ನು ಬಿಸಿ ಮಾಡಿಕೊಂಡು ಅದಕ್ಕೆ ಎಳ್ಳು ಮತ್ತು 1 ಟೀಸ್ಪೂನ್ ಗಸಗಸೆ ರೋಸ್ಟ್ ಮಾಡಿ. ಪರಿಮಳ ಬರುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.

    * ನಂತರ, ದೊಡ್ಡ ಪಾತ್ರೆಗೆ ನೀರು ಬೆರೆಸಿ ಬೆಲ್ಲವನ್ನು ಹಾಕಿ. ಬೆಲ್ಲ ಕರಗುವ ತನಕ ಚೆನ್ನಾಗಿ ಬೇಯಿಸಿ. ಬೆಲ್ಲದ ಸಿರಪ್ ಅನ್ನು ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ.
    * ಬೆಲ್ಲದ ಸಿರಪ್‍ಗೆ ಅಕ್ಕಿ ಹಿಟ್ಟನ್ನು ಗಂಟಾಗದಂತೆ ಮಿಶ್ರಣ ಮಾಡಿ. ಹುರಿದ ಗಸಗಸೆ ಮತ್ತು ಎಳ್ಳು ಕೂಡ ಸೇರಿಸಿ.
    * ಇದಲ್ಲದೆ ¼ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ಳಿ ಟೀಸ್ಪೂನ್ ಕರಿ ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
    * ಮಿಶ್ರಣವನ್ನು ಗಾಜಿನ ಬಟ್ಟಲಿಗೆ ವರ್ಗಾಯಿಸಿ. ಈ ಮಿಶ್ರಣ ಒಣಗದಂತೆ ನೊಡಿಕೊಳ್ಳುವುದಕ್ಕೆ ಎಣ್ಣೆ ಅಥವಾ ತುಪ್ಪದೊಂದಿಗೆ ಮಿಕ್ಸ್ ಮಾಡಿ 12 ಗಂಟೆ ಕಾಲ ಮುಚ್ಚಿಡಿ.

    ಫ್ರೈ ಮಾಡುವುದು ಹೇಗೆ?
    * 12 ಗಂಟೆಗಳ ನಂತರ, ಮೃದುವಾದ ಹಿಟ್ಟಿಗೆ ಬಾಳೆಹಣ್ಣನ್ನು ಬೆರೆಸಿ ಒಂದು ಟೇಬಲ್‍ಸ್ಪೂನ್ ಅಕ್ಕಿ ಹಿಟ್ಟನ್ನು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ.
    * ಮಿಶ್ರಣವನ್ನು ಉದ್ದಿನ ವಡ್ಡೆಯಂತೆ ಒತ್ತಿ ಚಪ್ಪಟೆ ಮಾಡಿ
    * ರಸವನ್ನು ಬೇರ್ಪಡಿಸದೆ ನಿಧಾನವಾಗಿ ತೆಗೆಯಿರಿ.
    * ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಎರಡೂ ಬದಿಗಳಲ್ಲಿ ಡೀಪ್ ಫ್ರೈ ಮಾಡಿ.

    ಗಾಳಿಯಾಡದ ಡಬ್ಬದಲ್ಲಿ ಕಜ್ಜಾಯವನ್ನು ಸಂಗ್ರಹಿಸುವುದರಿಂದ ಈ ಮಿಶ್ರಣವನ್ನು 2 ವಾರಗಳ ಕಾಲ ಇಟ್ಟುಕೊಳ್ಳಬಹುದು.

  • ನಾಲಿಗೆ ಚಪ್ಪರಿಸಿ ತಿನ್ನಿ ಅನಾನಸ್ ಕೇಸರಿಬಾತ್

    ನಾಲಿಗೆ ಚಪ್ಪರಿಸಿ ತಿನ್ನಿ ಅನಾನಸ್ ಕೇಸರಿಬಾತ್

    ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರು ನಾಲಿಗೆ ಚಪ್ಪರಿಸಿ ಸಿಹಿ ತಿಂಡಿಯನ್ನು ತಿನ್ನುತ್ತಾರೆ. ಅದರಲ್ಲೂ ಮಕ್ಕಳಿಗೆ ಸಿಹಿ ತಿಂಡಿ ಎಂದರೆ ತುಂಬಾ ಇಷ್ಟ. ನಿಮ್ಮ ಮಕ್ಕಳಿಗಾಗಿ ನಿಮ್ಮ ಕೈಯಾರೆ ಇಂದು ಮನೆಯಲ್ಲಿ ಸ್ವೀಟ್ ತಯಾರಿಸಿಕೊಡಿ.

    ಹಬ್ಬದ ದಿನ ಸಿಹಿ ತಿಂಡಿ ಇದ್ದರೆ ಹಬ್ಬಕ್ಕೆ ಒಂದು ಕಳೆ ಇರುತ್ತದೆ. ಮನೆಯಲ್ಲಿ ಸ್ವೀಟ್ ಮಾಡಬೇಕು ಎಂದರೆ ಯಾವುದಾದರೂ ವಿಶೇಷ ಕಾರ್ಯಕ್ರಮ ಅಥವಾ ಹಬ್ಬ ಇರಬೇಕಿತ್ತು. ಆದರೆ ಇಂದು ಕಾಲ ಬದಲಾದಂತೆ ಆಹಾರ ಕ್ರಮವು ಬದಲಾಗಿದೆ. ಯಾವಾಗ ಬೇಕಾದರೂ ಯಾವ ಆಹಾರವನ್ನಾದರು ಸೇವಿಸುತ್ತೇವೆ. ಮನೆಯಲ್ಲಿ ಮಾಡಲಾಗಲಿಲ್ಲ ಎಂದರೆ ನಾವು ಹೋಟೇಲ್‍ಗಳಲ್ಲಿಯಾದ್ರೂ ಸಿಹಿ ತಿಂಡಿ ತಿನ್ನುತ್ತೇವೆ. ಇಂದು ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಅನಾನಸ್ ಕೇಸರಿಬಾತ್ ಮಾಡಿ ಸವಿಯಿರಿ.


    ಬೇಕಾಗುವ ಸಾಮಗ್ರಿಗಳು:
    *ಅನಾನಸ್- ಒಂದು ಕಪ್
    *ಬೆಣ್ಣೆ- ಒಂದು ಚಮಚ
    *ಸಕ್ಕರೆ- ಒಂದು ಚಮಚ
    *ಹಾಲು-1 ಕಪ್
    *ರವೆ-ಒಂದು ಕಪ್
    *ಸಕ್ಕರೆ- ಅರ್ಧ ಕಪ್
    *ಏಲಕ್ಕಿ ಹುಡಿ-ಳಿ ಚಮಚ
    *ಕೇಸರಿ-ಹಾಲಿನಲ್ಲಿ ಮುಳುಗಿಸಿಡಬೇಕು

    ಮಾಡುವ ವಿಧಾನ:
    * ಒಂದು ಪಾತ್ರೆಗೆ ಅನಾನಸ್, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು 3-4 ನಿಮಿಷ ಕಾಲ ಕುದಿಸಿ.
    * ಈಗ ಇನ್ನೊಂದು ತವಾ ತೆಗೆದುಕೊಂಡು ಅದರಲ್ಲಿ ರವೆಯನ್ನು ಬೆಣ್ಣೆಯೊಂದಿಗೆ ಬಿಸಿ ಮಾಡಿ. ರವೆ ಗುಲಾಬಿ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿದುಕೊಳ್ಳಿ

    * ಈಗ ರವೆಗೆ ಹಾಲನ್ನು ಹಾಕಿ. ತಕ್ಷಣ ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಸರಿಯಾಗಿ ಕಲಸಿ. ಇಲ್ಲವಾದರೆ ರವೆ ಗಟ್ಟಿಯಾಗುತ್ತದೆ. ಕೆಲವು ನಿಮಿಷ ತಿರುಗಿಸುತ್ತಾ ಇರಬೇಕಾಗುತ್ತದೆ. ಇದು ದಪ್ಪಗೆ ಆದಾಗ ಸಕ್ಕರೆ ಹಾಕಿ ಮಿಶ್ರಣವಾಗುವ ತನಕ ತಿರುಗಿಸಿ.
    * ಈಗ ಇದಕ್ಕೆ ಅನಾನಸ್, ಕೇಸರಿ ಹಾಕಿದ ಹಾಲು, ಏಲಕ್ಕಿ ಹುಡಿಯನ್ನು ಮಿಶ್ರಣಕ್ಕೆ ಹಾಕಿ. ಸರಿಯಾಗಿ ಮಿಶ್ರಣವಾದ ಬಳಿಕ 1-2 ನಿಮಿಷ ಬೇಯಿಸಿದರೆ ರುಚಿಯಾದ ಅನಾನಸ್ ಕೇಸರಿಬಾತ್ ಸವಿಯಲು ಸಿದ್ಧವಾಗುತ್ತದೆ.

  • ಸ್ಪೆಷಲ್ ಸ್ವೀಟ್ ಜೊತೆ ಆಚರಿಸಿ ದೀಪಾವಳಿ

    ಸ್ಪೆಷಲ್ ಸ್ವೀಟ್ ಜೊತೆ ಆಚರಿಸಿ ದೀಪಾವಳಿ

    ದಿಪಾವಳಿ ಹಬ್ಬದ ಸಡಗರ ಸಂಭ್ರಮದಲ್ಲಿ ಸ್ವೀಟ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಜಗತ್ತಿನಾದ್ಯಂತ ಕೊರೋನ ಇರುವ ಹಿನ್ನೆಲೆ ಹೊರಗಡೆಯಿಂದ ಸ್ವೀಟ್ ತರುವ ಬದಲಾಗಿ ಮನೆಯಲ್ಲಿಯೆ ಈ 2 ರುಚಿಯಾದ ಸ್ವೀಟ್ ತಯಾರಿಸಿ ಸವಿಯಿರಿ.

    ಮಹಾಲಕ್ಷ್ಮಿ ಭಕ್ಷ್ಯ

    ಬೇಕಾಗುವ ಸಾಮಾಗ್ರಿಗಳು:
    * ಗೋಧಿಹಿಟ್ಟು 1 ಕಪ್
    * ತುಪ್ಪ ಅರ್ಧ ಕಪ್
    * ಹಾಲು 3 ಕಪ್
    * ಎಲಕ್ಕಿ ಪುಡಿ ಮತ್ತು ಉಪ್ಪು ಚಿಟಿಕೆ
    * ಗೋಡಂಬಿ, ಒಣದ್ರಾಕ್ಷಿ

    ತಯಾರಿಸುವ ವಿಧಾನ:
    * ತುಪ್ಪ ಮತ್ತು ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ ದಪ್ಪತಳದ ಪಾತ್ರೆಯಲ್ಲಿ ಚಿನ್ನಾಗಿ ಹುರಿದುಕೊಳ್ಳಬೇಕು.
    * ಘಮ ಘಮ ಎಂದು ಸುವಾಸನೆ ಬಂದ ನಂತರ ಇದಕ್ಕೆ ಹಾಲು ಬಿಸಿ ಮಾಡಿ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಸೌಟಿನಿಂದ ಕೈಯಾಡಿಸುತ್ತಿರಬೇಕು.
    * ಬೆಂದ ನಂತರ ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಗೂ ಚಿಟಿಕೆ ಅಷ್ಟು ಉಪ್ಪು ಸೇರಿಸಬೇಕು.
    * ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಚೂರು ಮತ್ತು ಒಣ ದ್ರಾಕ್ಷಿ ಸೇರಿಸಿ ಸವಿದರೆ ದೀಪಾವಳಿ ಹಬ್ಬದ ಮಹಾಲಕ್ಷ್ಮಿನ ಭಕ್ಷ್ಯ ಸಿದ್ಧವಾಗಿರುತ್ತದೆ.

    ಡ್ರೈ ಫ್ರೂಟ್ಸ್ ಲಡ್ಡು

    ಬೇಕಾಗುವ ಸಾಮಗ್ರಿಗಳು:
    * ಗೋಡಂಬಿ-ಕಾಲು ಕಪ್
    * ಹಸಿ ಖರ್ಜೂರ-ಅರ್ಧ ಕೆ.ಜಿ
    * ಬಾದಾಮಿ-ಕಾಲು ಕಪ್
    * ಪಿಸ್ತಾ-ಕಾಲು ಕಪ್
    * ತುಪ್ಪ-2 ಟೇಬಲ್ ಸ್ಪೂನ್
    * ಗೋಂದು-1 ಟೇಬಲ್ ಸ್ಪೂನ್
    * ಗಸಗಸೆ-1 ಟೇಬಲ್ ಸ್ಪೂನ್
    * ಏಲಕ್ಕಿ ಪುಡಿ-1 ಟೀ ಸ್ಪೂನ್,
    * ಜಾಕಾಯಿ ಪುಡಿ-ಅರ್ಧ ಟೀ ಸ್ಪೂನ್

    ತಯಾರಿಸುವ ವಿಧಾನ :
    * ಖರ್ಜೂರವನ್ನು ಮಿಕ್ಸಿ ಜಾರ್‍ಗೆ ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ.
    * ನಂತರ ಗೋಡಂಬಿ, ಗಸಗಸೆ, ಬಾದಾಮಿ, ಪಿಸ್ತಾವನ್ನು ತರಿತರಿಯಾಗಿ ಪುಡಿ ಮಾಡಿ.
    * ಬಾಣಲೆಯಲ್ಲಿ ಒಂದು ಟೇಬಲ್ ಸ್ಪೂನ್ ತುಪ್ಪ ಬಿಸಿ ಮಾಡಿ ಹೊಂಬಣ್ಣ ಬರುವವರೆಗೆ ಹುರಿದು ತೆಗೆದಿಡಿ. * ಬಾಣಲೆಗೆ ಉಳಿದ ತುಪ್ಪ ಹಾಕಿ ಒಣ ಹಣ್ಣುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
    * ನಂತರ ಇದಕ್ಕೆ ಖರ್ಜೂರದ ತುಂಡುಗಳನ್ನು ಹಾಕಿ ಬಿಸಿ ಆಗುವವರೆಗೆ ತಿರುವಿ. ಇವೆಲ್ಲವನ್ನು ಒಂದು ತಟ್ಟೆಗೆ ಹಾಕಿ ಇಡಬೇಕು ನಂತರ ಇದಕ್ಕೆ ಏಲಕ್ಕಿ, ಜಾಯಿಕಾಯಿ ಪುಡಿ ಮತ್ತು ಪುಡಿ ಮಾಡಿದ ಗೋಂದು ಹಾಕಿ ಮಿಶ್ರ ಮಾಡಿ.
    * ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಸಣ್ಣ ಲಡ್ಡುಗಳನ್ನು ಮಾಡಿದರೆ ಡ್ರೈ ಫ್ರೂಟ್ಸ್ ಲಡ್ಡು ಸವಿಯಲು ಸಿದ್ಧವಾಗುತ್ತದೆ.