Tag: ಸಿಸೇರಿಯನ್

  • ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತ ಸುಮಯಾ ಕುಟುಂಬಕ್ಕೆ 5 ಲಕ್ಷ ಚೆಕ್‌ ವಿತರಣೆ

    ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತ ಸುಮಯಾ ಕುಟುಂಬಕ್ಕೆ 5 ಲಕ್ಷ ಚೆಕ್‌ ವಿತರಣೆ

    ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ (District Hospital) ಸಿಸೇರಿಯನ್‌ (Cesarean) ಬಳಿಕ ಸಾವನ್ನಪ್ಪಿದ ಬಾಣಂತಿ ಸುಮಯಾ ಅವರ ಕುಟುಂಬಸ್ಥರಿಗೆ ಶಾಸಕ ಡಾ. ಶ್ರೀನಿವಾಸ್‌ (Dr Srinivas) ಅವರು ಸರ್ಕಾರದ 5 ಲಕ್ಷ ರೂ. ಪರಿಹಾರದ ಚೆಕ್‌ ವಿತರಿಸಿದ್ದಾರೆ.

    ಸಿಸೇರಿಯನ್ ಬಳಿಕ ಐವರು ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಬಾಣಂತಿಯರ ಕುಟುಂಬಕ್ಕೆ ಸರ್ಕಾರ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಇದೇ ವೇಳೆ ಜಿಲ್ಲಾಸ್ಪತ್ರೆಯಲ್ಲಿ ನ.10ರಂದು ಹೆರಿಗೆ ಮಾಡಿಸಿಕೊಂಡಿದ್ದ ಕೂಡ್ಲಿಗಿಯ ಸುಮಯಾ, ಹೆರಿಗೆ ಬಳಿಕ ಅಂಗಾಂಗ ವೈಫಲ್ಯದಿಂದ ಬಳಲಿ ಡಿ. 5 ರಂದು ಮೃತಪಟ್ಟಿದ್ದರು. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ

    ಭಾನುವಾರ ಮೃತ ಬಾಣಂತಿ ಸುಮಯಾ ಕುಟುಂಬಸ್ಥರಿಗೆ ಕುಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್‌ ಅವರು 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು.

    ಚೆಕ್ ನೀಡಿ, ಮಗುವಿನ ಆರೋಗ್ಯ ವಿಚಾರಿಸಿದ ಶಾಸಕ ಡಾ. ಎನ್ ಟಿ ಶ್ರೀನಿವಾಸ್, ಮಗುವಿನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವಂತೆ ಕುಟುಂಬಸ್ಥರಿಗೆ ಹೇಳಿದರು.

     

  • ಬಾಣಂತಿಯರ ಸಾವು ಕೇಸ್ – ಪ್ರಕರಣದಲ್ಲಿ ನನ್ನ ತಪ್ಪಿದ್ರೆ ರಾಜೀನಾಮೆ ಕೊಡಲು ಸಿದ್ಧ: ದಿನೇಶ್ ಗುಂಡೂರಾವ್

    ಬಾಣಂತಿಯರ ಸಾವು ಕೇಸ್ – ಪ್ರಕರಣದಲ್ಲಿ ನನ್ನ ತಪ್ಪಿದ್ರೆ ರಾಜೀನಾಮೆ ಕೊಡಲು ಸಿದ್ಧ: ದಿನೇಶ್ ಗುಂಡೂರಾವ್

    ಬೆಂಗಳೂರು: ಬಳ್ಳಾರಿಯಲ್ಲಿ ಬಾಣಂತಿಯರ ಸಾವು (Ballary Death Case) ಪ್ರಕರಣದಲ್ಲಿ ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದರು.ಇದನ್ನೂ ಓದಿ: ಉಡುಪಿ| ಹೋಟೆಲ್ ಬಾಣಸಿಗ ಭೀಕರ ಹತ್ಯೆ – ಬಿಯರ್ ಬಾಟಲಿ ಗಾಜಿನಿಂದ ಕತ್ತು ಸೀಳಿ ಕೊಲೆ

    ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು (BJP) ಲೋಕಾಯುಕ್ತಕ್ಕೆ ಖಂಡಿತ ದೂರು ಕೊಡಲಿ. ಇದರಲ್ಲಿ ವಿಪಕ್ಷದವರ ಸಹಕಾರವೂ ಬೇಕು. ಈ ಪ್ರಕರಣದಲ್ಲಿ ನನ್ನ ತಪ್ಪಿದ್ರೆ ನಾನು ರಾಜೀನಾಮೆ ಕೊಡಲೂ ಸಿದ್ಧನಾಗಿದ್ದೇನೆ. ಇದರಲ್ಲಿ ನನ್ನ ಪ್ರತಿಷ್ಠೆ ಏನಿಲ್ಲ. ಇದು ಜೀವದ ವಿಚಾರ. ನನ್ನ ರಾಜೀನಾಮೆಯಿಂದ ಸರಿಯಾಗುತ್ತೆ ಅಂದರೆ ರಾಜೀನಾಮೆಗೂ ಸಿದ್ಧ. ಆದರೆ ಈ ಪ್ರಕರಣದಲ್ಲಿ ಸರ್ಕಾರ ಗಂಭೀರವಾಗಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಕ್ರಮ ತೆಗೆದುಕೊಳ್ಳಲೇಬೇಕು. ಇಲ್ಲಿಯವರೆಗೆ ಈ ವರ್ಷ ರಾಜ್ಯದಲ್ಲಿ 327 ಮೆಟರ್ನಲ್ ಸಾವಾಗಿದೆ. ಎಲ್ಲವನ್ನೂ ಪರಿಶೀಲಿಸಿ ಅಂತ ಹೇಳಿದ್ದೇವೆ. ಇಂತಹ ಪ್ರಕರಣಗಳಲ್ಲಿ ಸಹನೆ ಇರಬಾರದು, ಕಠಿಣ ಕಾನೂನು ಕ್ರಮ ಆಗಬೇಕು ಎಂದು ತಿಳಿಸಿದರು.

    ಮೊನ್ನೆ ಬಳ್ಳಾರಿಯಲ್ಲಿ 9 ಜನರಿಗೆ ಸಮಸ್ಯೆ ಆಗಿತ್ತು, ನಾಲ್ವರು ಸಾವನ್ನಪ್ಪಿದ್ದರು. ಐದನೇಯವರು ಚಿಕಿತ್ಸೆ ಪಡಿಯುತ್ತಿದ್ದರು. ಈಗ ಅವರೂ ತೀರಿಕೊಂಡಿದ್ದಾರೆ. ಅವರಿಗೆ ಅದೇ ಬ್ಯಾಚ್‌ನ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು. ಈಗಾಗಲೇ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಆದರೆ ಇವರಿಗೆ ಬೇರೆ ಆರೋಗ್ಯ ಸಮಸ್ಯೆಯೂ ಇತ್ತು. ಅವರು ಗುಣಮುಖರಾಗುತ್ತಾರೆ ಎಂದು ವೈದ್ಯರು ಹೇಳಿದ್ದರು. ಆದರೆ ನಿನ್ನೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂದು ತಿಳಿಸಿದ್ದಾರೆ ಎಂದರು.ಇದನ್ನೂ ಓದಿ:ಕಲುಷಿತ ನೀರು ಸೇವಿಸಿ ಮೂವರು ಸಾವು, 20ಕ್ಕೂ ಅಧಿಕ ಜನ ಅಸ್ವಸ್ಥ

  • ಬಳ್ಳಾರಿ ಸಿಸೇರಿಯನ್‌ ದುರಂತ: ಮೃತ ಮಹಿಳೆಯರ ಸಂಖ್ಯೆ ನಾಲ್ಕಕ್ಕೆ ಏರಿಕೆ

    ಬಳ್ಳಾರಿ ಸಿಸೇರಿಯನ್‌ ದುರಂತ: ಮೃತ ಮಹಿಳೆಯರ ಸಂಖ್ಯೆ ನಾಲ್ಕಕ್ಕೆ ಏರಿಕೆ

    ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್‌ (Caesarean) ಮಾಡಿಸಿಕೊಂಡ ಬಳಿಕ ಮೂವರು ಬಾಣಂತಿಯರ (Pregnant) ಸಾವು ಪ್ರಕರಣ ಮಾಸುವ ಮುನ್ನ ಇದೀಗ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ.

    ಹೊಸಪೇಟೆ ಮೂಲದ ಮುಸ್ಕಾನ್ (22) ಸಾವನ್ನಪ್ಪಿದ್ದಾರೆ. ಈ ಮೂಲಕ 15 ದಿನಗಳ ಅಂತರದಲ್ಲಿ ಬಳ್ಳಾರಿಯಲ್ಲಿ (Ballari) ಬಾಣಂತಿಯರ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮುಸ್ಕಾನ್ ಮೃತಪಟ್ಟಿದ್ದಾರೆ.

     

    ನ.10 ರಂದು ಮುಸ್ಕಾನ್ ಜಿಲ್ಲಾಸ್ಪತ್ರೆಯಲ್ಲಿ ಸಿಸೀರಿಯನ್‌ ಮಾಡಿಸಿಕೊಂಡಿದ್ದರು. ಸಿಸೇರಿಯನ್‌ ಬಳಿಕ ಮುಸ್ಕಾನ್‌ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿತ್ತು. ಬಳಿಕ 11 ರಂದು ಬಿಮ್ಸ್ (BIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಇದನ್ನೂ ಓದಿ: ಬಳ್ಳಾರಿ ಸಿಸೇರಿಯನ್‌ ದುರಂತ – ಮೂವರ ಸಾವಿಗೆ IV Fluid ಔಷಧಿಯೇ ಕಾರಣ? ಇನ್ನೂ ಬಳ್ಳಾರಿಗೆ ಭೇಟಿ ನೀಡಿಲ್ಲ ಜಮೀರ್‌ ಅಹ್ಮದ್‌

    ಬಿಮ್ಸ್ ನಲ್ಲಿ ಒಂದು ದಿನ ಇದ್ದು ಚಿಕಿತ್ಸೆ ಪಡೆದಿದ್ದ ಮುಸ್ಕಾನ್, ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ಡಯಾಲಿಸಿಸ್ ಮಾಡಿಸಲು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸತತ 15 ದಿನ ಚಿಕಿತ್ಸೆ ಪಡೆದರೂ ಮುಸ್ಕಾನ್ ಬದುಕಲಿಲ್ಲ.

    ಈ ಮೊದಲು ಲಲಿತಮ್ಮ, ನಂದಿನಿ, ರೋಜಾ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಬಾಣಂತಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

     

  • ಸಿಸೇರಿಯನ್‌ ವೇಳೆ ಮಗುವಿನ ಮರ್ಮಾಂಗವನ್ನೇ ಕೊಯ್ದ ವೈದ್ಯ!

    ಸಿಸೇರಿಯನ್‌ ವೇಳೆ ಮಗುವಿನ ಮರ್ಮಾಂಗವನ್ನೇ ಕೊಯ್ದ ವೈದ್ಯ!

    ದಾವಣಗೆರೆ: ಇಲ್ಲಿನ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯನೊಬ್ಬ ಭಾರೀ ಎಡವಟ್ಟು ಮಾಡಿದ್ದಾನೆ. ಸಿಸೇರಿಯನ್‌ ಮಾಡುವ ವೇಳೆ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗವನ್ನೇ ವೈದ್ಯ ಕೊಯ್ದ ಘಟನೆ ನಡೆದಿದೆ.

    ವೈದ್ಯನನ್ನು ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ. ಇದೀಗ ಈತನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ಘಟನೆ ವಿವರ: ದಾವಣಗೆರೆ ಕೊಂಡಜ್ಜಿ ರಸ್ತೆಯಲ್ಲಿರೋ ಅರ್ಜುನ್ ಪತ್ನಿ ತುಂಬು ಗರ್ಭಿಣಿ ಅಮೃತಾ ಹೆರಿಗೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅಂತೆಯೇ ಅವರಿಗೆ ಜೂನ್ 27 ರಂದು ಅಮೃತಾಗೆ ಸಿಸೇರಿಯನ್ ಮಾಡಿ ಮಗು ತೆಗೆಯಲಾಗಿತ್ತು. ಈ ವೇಳೆ ವೈದ್ಯ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದಾನೆ.

    ಘಟನೆಯಿಂದ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಇದನ್ನೂ ಓದಿ: ಇಷ್ಟಪಟ್ಟವನನ್ನು ಮದುವೆಯಾಗಿದ್ದಕ್ಕೆ ಕುಟುಂಬಸ್ಥರಿಂದ್ಲೇ ಯುವತಿಯ ಬರ್ಬರ ಹತ್ಯೆ

    ವೈದ್ಯನ ಬೇಜಾವ್ದಾರಿತನಕ್ಕೆ ರೊಚ್ಚಿಗೆದ್ದ ಮಗುವಿನ ಕುಟುಂಬಸ್ಥರು ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನ ಕೂಡಲೇ ಅಮಾನತು ಮಾಡಿ, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

  • ಸಿಸೇರಿಯನ್ ವೇಳೆ ಮಹಿಳೆಯ ಗರ್ಭದಲ್ಲಿ ಟವೆಲ್ ಬಿಟ್ಟ ವೈದ್ಯರು

    ಸಿಸೇರಿಯನ್ ವೇಳೆ ಮಹಿಳೆಯ ಗರ್ಭದಲ್ಲಿ ಟವೆಲ್ ಬಿಟ್ಟ ವೈದ್ಯರು

    – ಹೊಟ್ಟೆ ನೋವು, ಮೂತ್ರವಿಸರ್ಜನೆ ಆಗದೆ ಮಹಿಳೆ ಕಂಗಾಲು
    – ಟವೆಲ್ ಹೊರಗೆ ತೆಗೆದ ಖಾಸಗಿ ಆಸ್ಪತ್ರೆ ವೈದ್ಯರು
    – ಮಹಿಳೆಯ ಪತಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

    ಚಂಡೀಗಡ: ಮಹಿಳೆಗೆ ಸಿಸೇರಿಯನ್ ಡೆಲಿವರಿ ಮಾಡಿಸಿದ ಬಳಿಕ ಗರ್ಭಕೋಶದಲ್ಲಿ ವೈದ್ಯರು ಟವೆಲ್ ಬಿಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಪಂಜಾಬ್‍ನ ಲುಧಿಯಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯ ಪತಿ ರವೀಂದ್ರ ಸಿಂಗ್, ಕುಟುಂಬಸ್ಥರು ಹಾಗೂ ಕೆಲ ಸಾಮಾಜಿಕ ಕಾರ್ಯಕರ್ತರು ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಪ್ರತಿಭಟನೆ ನಡೆಸಲು ಆರಂಭಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ನಿರ್ಲಕ್ಷ್ಯ ವಹಿಸಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

    ಶಿಮ್ಲಾಪುರಿ ನಿವಾಸಿ ರವೀಂದ್ರ ಅವರು ಡಿಸೆಂಬರ್ 7ರಂದು ತಮ್ಮ ಗರ್ಭಿಣಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ಬಳಿಕ ವೈದ್ಯರು ಸಿಸೇರಿಯನ್ ಡೆಲಿವರಿ ಮಾಡುವುದಾಗಿ ತಿಳಿಸಿದ್ದಾರೆ.

    ಮಾರನೇ ದಿನ ಸರ್ಜರಿ ಮಾಡಲಾಗಿದೆ. ನವಜಾತ ಶಿಶು ಸಂಪೂರ್ಣವಾಗಿ ಆರಾಮವಾಗಿದೆ. ಆದರೆ ಹೆರಿಗೆ ಬಳಿಕ ತಾಯಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮೂತ್ರವಿಸರ್ಜನೆ ಮಾಡಲು ಸಹ ಸಾಧ್ಯವಾಗಿಲ್ಲ. ಈ ಕುರಿತು ವೈದ್ಯರಿಗೆ ತಿಳಿಸಿದರೆ, ಮಹಿಳೆಗೆ ನಿದ್ರಾಜನಕ ನೀಡಿ ಮಲಗಿಸಿದ್ದಾರೆ.

    ಎರಡು ದಿನಗಳಾದರೂ ಮಹಿಳೆಗೆ ಹೊಟ್ಟೆ ನೋವು ಕಡಿಮೆಯಾಗದ್ದರಿಂದ ನಾನು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಲು ವೈದ್ಯರಿಗೆ ತಿಳಿಸಿದೆ. ಆದರೆ ಅವರು ಪಟಿಯಾಲದ ರಾಜಿಂದ್ರ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. ಅಂತಿಮವಾಗಿ ಡಿಸೆಂಬರ್ 11ರಂದು ನಾನು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಕರೆದೊಯ್ದೆ. ಬಳಿಕ ವೈದ್ಯರು ನನ್ನ ಪತ್ನಿಗೆ ಚಿಕಿತ್ಸೆ ನೀಡಿದರು. ಅಲ್ಲದೆ ಗರ್ಭಕೋಶದಲ್ಲಿ ಟವೆಲ್ ಇರುವುದನ್ನು ಪತ್ತೆಹಚ್ಚಿದರು. ವೈದ್ಯರ ನಿರ್ಲಕ್ಷ್ಯದಿಂದಾಗಿ ನನ್ನ ಪತ್ನಿಯ ಜೀವವೇ ಹೋಗುತ್ತಿತ್ತು ಎಂದು ಮಹಿಳೆ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಸಿಂಗ್ ಅವರು ತಮ್ಮ ಪತ್ನಿಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ ಖಾಸಗಿ ಆಸ್ಪತ್ರೆ ವೈದ್ಯರು ಮಹಿಳೆಯ ಗರ್ಭಕೋಶದಲ್ಲಿದ್ದ ಟವೆಲ್ ಹೊರಗೆ ತೆಗೆದಿದ್ದಾರೆ.

  • ಸೋಂಕಿತೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ ವೈದ್ಯರು – ಗಂಡು ಮಗು ಜನನ

    ಸೋಂಕಿತೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ ವೈದ್ಯರು – ಗಂಡು ಮಗು ಜನನ

    ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹಾವೇರಿಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿಯನ್ ಮೂಲಕ ಯಶಸ್ವಿ ಹೆರಿಗೆಯನ್ನು ಜಿಲ್ಲಾಸ್ಪತ್ರೆ ವೈದ್ಯರು ಮಾಡಿಸಿದ್ದಾರೆ.

    ಜಿಲ್ಲೆಯ ಹಾನಗಲ್ ತಾಲೂಕಿನ ಜಾನಗುಂಡಿಕೊಪ್ಪ ಗ್ರಾಮದ ಮೂವತ್ತು ವರ್ಷದ ಮಹಿಳೆಗೆ ವೈದ್ಯರು ಜೀವದ ಹಂಗು ತೊರೆದು ಹೆರಿಗೆ ಮಾಡಿಸಿದ್ದಾರೆ. ಜುಲೈ 3ರಂದು ಜಿಲ್ಲಾಸ್ಪತ್ರೆಗೆ ತಪಾಸಣೆಗೆ ಬಂದಿದ್ದ ಗರ್ಭಿಣಿ ಗಂಟಲು ದ್ರವದ ಮಾದರಿಯನ್ನು ಸಹ ನೀಡಿ ಹೋಗಿದ್ದರು. ಈ ವೇಳೆ ಜುಲೈ 10ರಂದು ಹೆರಿಗೆಯ ವೈದ್ಯರು ದಿನಾಂಕ ನೀಡಿದ್ದರು. ಆದರೆ ಸೋಮವಾರ ಬಂದ ವರದಿಯಲ್ಲಿ ಮಹಿಳೆಯಲ್ಲಿ ಕೊರೊನಾ ಸೋಂಕು ಇರುವ ದೃಢಪಟ್ಟಿದೆ.

    ಸೋಂಕು ದೃಢಪಟ್ಟ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಇವತ್ತು ಬೆಳಗಿನ ಜಾವ ಸೋಂಕಿತ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸಿಸೇರಿಯನ್ ಮೂಲಕ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

  • ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಯಾಕೆ ಮಾಡ್ತಾರೆ? ಕಾರಣಗಳೇನು?

    ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಯಾಕೆ ಮಾಡ್ತಾರೆ? ಕಾರಣಗಳೇನು?

    ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರು ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಾಧಿಕಾ ಅವರಿಗೆ ಸಿಸೇರಿಯನ್ ಮಾಡುವ ಮೂಲಕ ಮಗುವನ್ನು ಹೊರತೆಗೆಯಲಾಗಿದೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ.

    ಸಿಸೇರಿಯನ್ ಯಾಕೆ?:
    ತನ್ನ ಜೀವದೊಂದಿಗೆ ಇನ್ನೊಂದು ಜೀವವನ್ನು ಜೋಪಾನ ಮಾಡಿಟ್ಟುಕೊಂಡು ಜಗತ್ತಿಗೆ ಪರಿಚಯಿಸುವ ಶಕ್ತಿ ಹೆಣ್ಣಿಗೆ ವರದಾನವಾಗಿದೆ. ಒಂಬತ್ತು ತಿಂಗಳು ತಾಯಿಯ ಜೀವದಲ್ಲಿ ಬೆರೆತು ಸೂಕ್ತ ಸಮಯದ ನಂತರ ಹೊರಬರುವ ನೈಸರ್ಗಿಕ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿರುತ್ತದೆ. ಕೆಲವೊಮ್ಮೆ ಪ್ರಸವದ ಸಂದರ್ಭದಲ್ಲಿ ಉಂಟಾಗುವ ವ್ಯತ್ಯಾಸ ಅಥವಾ ಅವಘಡದಿಂದಾಗಿ ತಾಯಿ ಮತ್ತು ಮಗು ಇಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಕೆಲ ಗಂಟೆ ತಾಯಿ ಅನುಭವಿಸುವ ಪ್ರಸವದ ನೋವು ಜೀವನದ ಒಂದು ಅವಿಸ್ಮರಣೀಯ ಅನುಭವವಾಗುತ್ತದೆ. ಅಲ್ಲದೇ ಸಾರ್ಥಕತೆಯ ಭಾವನೆ ಮೂಡುತ್ತದೆ. ಆದರೆ ಇತ್ತೀಚೆಗೆ ಪ್ರಸವ ನೋವು ಅನುಭವಿಸಲು ಮಹಿಳೆಯರು ಹಿಂಜರಿಯುತ್ತಿದ್ದು, ಪರಿಣಾಮ ಸಿಸೇರಿಯನ್ ಕಡೆ ಮುಖಮಾಡುತ್ತಾರೆ.


    ಹೆರಿಗೆ ನೋವು ಇರಲ್ಲ:
    ಹೆರಿಗೆ ಎನ್ನುವುದು ಮಹಿಳೆಯ ಜೀವನದ ಪ್ರಧಾನ ಘಟ್ಟವಾಗಿರುತ್ತದೆ. ತನ್ನ ಜೀವದೊಂದಿಗೆ ಮತ್ತೊಂದು ಜೀವವನ್ನು ಹೊರಜಗತ್ತಿಗೆ ಪರಿಚಯಿಸುವ ಶುಭಸಂದರ್ಭದಲ್ಲಿ ನಾರ್ಮಲ್ ಇರಲಿ, ಸಿಸೇರಿಯನ್ ಇರಲಿ ನೋವು ಇದ್ದೇ ಇರುತ್ತದೆ. ಸಿಸೇರಿಯನ್(ಶಸ್ತ್ರಚಿಕಿತ್ಸೆ) ಮಾಡುವ ಸಂದರ್ಭದಲ್ಲಿ ನೋವು ಅನುಭವಕ್ಕೆ ಬಾರದಿದ್ದರೂ ಅನಸ್ತೇಷಿಯಾದ ಪವರ್ ಕಡಿಮೆಯಾದ ಮೇಲೆ ನೋವು ಅನುಭವಕ್ಕೆ ಬರುತ್ತದೆ.

    ಸಿಸೇರಿಯನ್‍ಗೆ ಕಾರಣಗಳೇನು?
    ಮಗು ದಪ್ಪ ಅಥವಾ ತೂಕ ಇದ್ದರೆ ಸಾಮಾನ್ಯ ಹೆರಿಗೆ ಕಷ್ಟವಾಗುತ್ತದೆ. ಅಲ್ಲದೇ ಗರ್ಭದಲ್ಲಿ ಮಗು ತಲೆ ಕೆಳಗಾಗಿದ್ದರೆ ಅಥವಾ ಇನ್ನಿತರ ಸ್ಥಿತಿಗಳಲ್ಲಿದ್ದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಈ ಸಂದರ್ಭದಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಮಗುವನ್ನು ಹೊರ ತೆಗೆಯುವಂತೆ ಸೂಚನೆ ನೀಡುತ್ತಾರೆ.

    ಇಷ್ಟು ಮಾತ್ರವಲ್ಲದೇ ಗರ್ಭಿಣಿ ತೂಕದಲ್ಲಿ ಕಡಿಮೆಯಾದಾಗಲು ನಾರ್ಮಲ್ ಹೆರಿಗೆ ಕಷ್ಟವಾಗುತ್ತದೆ. 7-8 ತಿಂಗಳಲ್ಲಿ ಗರ್ಭದಲ್ಲಿ ಸಮಸ್ಯೆಯಾದಲ್ಲಿ ಮಗು ಹೊರ ತೆಗೆಯುವುದು ಅನಿವಾರ್ಯವಾಗುತ್ತದೆ. ಈ ವೇಳೆಯೂ ಶಸ್ತ್ರಚಿಕಿತ್ಸೆ ಆಯ್ದುಕೊಳ್ಳುತ್ತಾರೆ. ಪ್ರಸ್ತುತ ದಂಪತಿ ಒಂದು ಮಗು ಪಡೆದರೆ ಹೆಚ್ಚು ಅನ್ನೋ ಸಂದರ್ಭ ಬಂದಾಗ ಗರ್ಭಿಣಿಯರಲ್ಲಿ ನೋವು ತಡೆದುಕೊಳ್ಳುವ ಶಕ್ತಿ ಕೊಂಚ ಕಡಿಮೆ ಇರುತ್ತದೆ. ಹೀಗಾಗಿ ಕುಟುಂಬದವರೇ ಶಸ್ತ್ರಚಿಕಿತ್ಸೆ ಮಾಡುವಂತೆ ತಿಳಿಸುತ್ತಾರೆ.

    ಕನಿಷ್ಠ 3 ತಿಂಗ್ಳು ವಿಶ್ರಾಂತಿ:
    ಸಿಸೇರಿಯನ್ ಬಳಿಕ ಕಡಿಮೆಯೆಂದ್ರೂ 3 ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ಆಹಾರದ ಬಗ್ಗೆ ಎಚ್ಚರವಹಿಸಬೇಕು. ದೇಹದ ಮೂಳೆಗಳನ್ನು ಗಟ್ಟಿಗೊಳೀಸುವಂತಹ ಆಹಾರಗಳನ್ನು ಸೇವಿಸಿಬೇಕು. ಜೊತೆಗೆ ಹೆಚ್ಚು ಕೆಲಸ ಮಾಡಬಾರದು. ತುಂಬಾ ಭಾರ ಎತ್ತಬಾರದು. ಯಾಕಂದ್ರೆ ಆಪರೇಷನ್ ಬಳಿಕ ಸರಿಯಾಗಿ ಆರೈಕೆ ಮಾಡದಿದ್ದರೆ ದೇಹಕ್ಕೆ ತೊಂದರೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಆಪರೇಷನ್ ಬಳಿಕ ಸಿ ಸೆಕ್ಷನ್ ಅನ್ನೋ ಬೆಲ್ಟ್ ಧರಿಸುವುದು ಉತ್ತಮ. ಇದರಿಂದ ಸೊಂಟ ನೋವು ತಡೆಗಟ್ಟಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv