Tag: ಸಿಸಿ ಪಾಟೀಲ್

  • ಜನರ ಗಮನ ಬೇರೆ ಕಡೆ ಸೆಳೆಯೋಕೆ ಸಿದ್ದರಾಮಯ್ಯ ಸಮೀಕ್ಷೆ ತಂತ್ರ- ಸಿಸಿ ಪಾಟೀಲ್

    ಜನರ ಗಮನ ಬೇರೆ ಕಡೆ ಸೆಳೆಯೋಕೆ ಸಿದ್ದರಾಮಯ್ಯ ಸಮೀಕ್ಷೆ ತಂತ್ರ- ಸಿಸಿ ಪಾಟೀಲ್

    – ಪಂಚಮಸಾಲಿ ಹೊಸ ಪೀಠ ಮಾಡೋ ಬಗ್ಗೆ ಶೀಘ್ರವೇ ಸಮುದಾಯದ ಸಭೆ

    ಬೆಂಗಳೂರು: ಜನರ ಗಮನ ಬೇರೆ ಕಡೆ ಸೆಳೆಯೋಕೆ ಸಿದ್ದರಾಮಯ್ಯರಿಂದ (CM Siddaramaiah) ಸಮೀಕ್ಷೆ ತಂತ್ರ ಅಷ್ಟೇ ಎಂದು ಮಾಜಿ ಸಚಿವ ಸಿಸಿ ಪಾಟೀಲ್ (CC Patil) ಆರೋಪಿಸಿದ್ದಾರೆ.

    ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಗೊಂದಲ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಸರ್ಕಾರ ಜಾತಿಗಣತಿ ಮಾತ್ರವಲ್ಲ, ಈ ಸರ್ಕಾರ ಪ್ರಾರಂಭದಿಂದಲೇ ಗೊಂದಲದಲ್ಲಿದೆ. ಈ ಸರ್ಕಾರಕ್ಕೆ ಯಾವ ಶಬ್ದ ಹೇಳಬೇಕು ಅಂತ ಗೊತ್ತಿಲ್ಲ. ಗುಂಡಿಯಿಂದ ತಪ್ಪಿಸಿಕೊಳ್ಳೋಕೆ ಹೋಗಿ ಯುವತಿ ಸತ್ತಿದ್ದಾಳೆ. 2.5 ವರ್ಷ ಆದರೂ ಇವರಿಂದ ಗುಂಡಿ ಮುಚ್ಚೋಕೆ ಆಗಿಲ್ಲ. ಹೀಗಾದರೆ ಏನು ಅಭಿವೃದ್ಧಿ ಮಾಡ್ತಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಹಾಸನ | ಸಿಡಿಮದ್ದು ಸ್ಫೋಟಗೊಂಡು ಮನೆ ಛಿದ್ರ ಛಿದ್ರ – ಮಗು ಸೇರಿ ಮೂವರಿಗೆ ಗಾಯ, ದಂಪತಿ ಸ್ಥಿತಿ ಗಂಭೀರ

    ರಾಜ್ಯದ ಸಮೀಕ್ಷೆ ವಿರೋಧ ಮಾಡೋ ಬಿಜೆಪಿ (BJP) ನಾಯಕರು ಕೇಂದ್ರದ ಜಾತಿಗಣತಿಯಲ್ಲಿ ಭಾಗಿಯಾಗಲ್ಲವಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜಾತಿಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ (State Govt) ಇಲ್ಲ. ಆಡಳಿತ ವೈಫಲ್ಯ ಎದುರಾದಾಗ ಇಂತಹ ಹೊಸ ಪ್ರಾಜೆಕ್ಟ್ ಸಿಎಂ ತರುತ್ತಾರೆ. ನಮ್ಮ ಸಮುದಾಯದ ವತಿಯಿಂದ ಭಾಗವಹಿಸಬೇಕಾ? ಬೇಡವಾ? ಅನ್ನೋದು ಜನರಿಗೆ ಬಿಟ್ಟಿದ್ದು. ಆದರೆ ಸಮೀಕ್ಷೆಗೆ ಸರ್ಕಾರ ಯಾವುದೇ ಸಿದ್ಧತೆ ಮಾಡಿಲ್ಲ. ಆಡಳಿತ ವೈಫಲ್ಯವನ್ನು ಬೇರೆಡೆ ಸೆಳೆಯೋಕೆ ಈ ಗಣತಿ ಮಾಡ್ತಿದ್ದಾರೆ. ಜನರ ಗಮನ ಬೆರೆ ಕಡೆ ಸೆಳೆಯೋಕೆ ಸಮೀಕ್ಷೆ ತಂತ್ರ ಅಷ್ಟೇ. ಎರಡು ದಿನ ಆಪ್ ಸರಿಯಾಗಿ ವರ್ಕ್ ಆಗಿಲ್ಲ. 15ರ ಒಳಗೆ ಗಣತಿ ಮುಗಿಸಬೇಕು ಅಂತಾರೆ. ಮನೆಯಲ್ಲಿ ಕೂತು ಸಮೀಕ್ಷೆ ಬರೆಯೋದು ಅಷ್ಟೇ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು.

    ಇನ್ನೂ ಇದೇ ವೇಳೆ ಜಯ ಮೃತ್ಯುಂಜಯ ಸ್ವಾಮೀಜಿಗಳನ್ನ ಉಚ್ಚಾಟನೆ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸೋಮವಾರ (ಸೆ.29) ನಾನು ಹಾಗೂ ಹಲವು ಶಾಸಕರು ಸ್ವಾಮೀಜಿಗಳನ್ನ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ. ಅವರಿಗೆ ನೈತಿಕ ಬೆಂಬಲ ಕೊಡುವ ಕೆಲಸ ಮಾಡಿದ್ದೇವೆ. ಶ್ರೀಗಳ ಹೋರಾಟ ಶ್ಲಾಘನೀಯ. ಇಡೀ ಸಮಾಜ, ಸಮುದಾಯ ಅವರ ಜೊತೆಗೆ ಇದೆ. ಶ್ರೀಪೀಠ ಮತ್ತು ಆ ಮಠಕ್ಕೂ ಯಾವುದೇ ಸಂಬಂಧವಿಲ್ಲ. ಹೊಸ ಮಠ ಸ್ಥಾಪನೆ ಮಾಡೋ ಬಗ್ಗೆ ನಾನೇ ನಿರ್ಧಾರ ಮಾಡೋ ಹಾಗೇ ಇಲ್ಲ. ಶೀಘ್ರವೇ ಸಮಾಜದವರು ಸಭೆ ಮಾಡಿ ತೀರ್ಮಾನ ಮಾಡ್ತೀವಿ ಎಂದು ತಿಳಿಸಿದರು.ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದ್ರು ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ – ಸಿಸಿ ಪಾಟೀಲ್

  • ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದ್ರು ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ – ಸಿಸಿ ಪಾಟೀಲ್

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದ್ರು ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ – ಸಿಸಿ ಪಾಟೀಲ್

    ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ (Kalyana Karnataka) ಕಂಡು ಕೇಳರಿಯದ ರೀತಿ ಮಳೆ ಬೀಳುತ್ತಿದ್ದರೂ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವ ಸಿಸಿ ಪಾಟೀಲ್ (CC Patil) ಕಿಡಿಕಾರಿದ್ದಾರೆ.

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಲ್ಯಾಣ ಕರ್ನಾಟಕ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲೂ ಮಳೆ ಜಾಸ್ತಿ ಬಂದಿತ್ತು. ಮಳೆಗೆ ಹೆಸರು ಬೆಳೆ, ಮೆಕ್ಕೆಜೋಳ ನಾಶವಾಗಿದೆ. ತಹಶೀಲ್ದಾರರಿಗೆ ಲಿಮಿಟ್ ಏರಿಯಾ ಸರ್ವೇ ಮಾಡಿ ಅಂತ ಸರ್ಕಾರದಿಂದ ಸೂಚನೆ ಬಂದಿದೆ ಅಂತ ಹೇಳಲಾಗ್ತಿದೆ. ಸರ್ಕಾರ ಹೀಗೆ ಮಾಡಬಾರದು. ಎಲ್ಲಿ ಮಳೆ ಹಾನಿಯಾಗಿದೆ ಅಲ್ಲಿ ಸರ್ವೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ವಿಜಯ್‌ ರ‍್ಯಾಲಿಯಲ್ಲಿ ಕಾಲ್ತುಳಿತಕ್ಕೆ 41 ಸಾವು ಕೇಸ್‌ – ಟಿವಿಕೆ ನಾಯಕ ಅರೆಸ್ಟ್‌

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಂಡು ಕೇಳರಿಯದ ಭೀಕರ ಪ್ರವಾಹ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ಇವತ್ತು ಹೋಗ್ತಾ ಇದ್ದಾರೆ. ಈ ಸರ್ಕಾರದಿಂದ ರೈತರಿಗೆ ನ್ಯಾಯ ಸಿಗೋ ವಿಶ್ವಾಸ ಇಲ್ಲ. ಮಳೆ ಹಾನಿಗೆ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ. ಕಳೆದ ಬಾರಿ ಅರ್ಧ ಜನರಿಗೆ ಪರಿಹಾರ ಬಿಡುಗಡೆ ಆಗಿಲ್ಲ. ಇನ್ನು ಹಾನಿಯ ಸರ್ವೆಯೇ ಮಾಡಿಲ್ಲ. ಹಾನಿಯಾದ ಎಲ್ಲಾ ಭಾಗದ ಸರ್ವೆಯನ್ನ ಸರ್ಕಾರ ಮಾಡಲು ಸೂಚನೆ ಕೊಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

  • ಸರ್ಕಾರ ಮಾಡ್ತಿರೋ ಜಾತಿ ಗಣತಿ ನಾವು ಒಪ್ಪಲ್ಲ: ಸಿ.ಸಿ. ಪಾಟೀಲ್

    ಸರ್ಕಾರ ಮಾಡ್ತಿರೋ ಜಾತಿ ಗಣತಿ ನಾವು ಒಪ್ಪಲ್ಲ: ಸಿ.ಸಿ. ಪಾಟೀಲ್

    ಬೆಂಗಳೂರು: ಸರ್ಕಾರ ಮಾಡುತ್ತಿರುವ ಜಾತಿ ಗಣತಿ (Caste Census) ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸಿಸಿ ಪಾಟೀಲ್ (CC Patil) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸರ್ಕಾರ ಮಾಡುತ್ತಿರುವ ಜಾತಿ ಗಣತಿ ಸರ್ವೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಮಾಡುತ್ತಿರುವ ಈ ಜಾತಿ ಗಣತಿ ನಾವು ಒಪ್ಪಲ್ಲ. ಗಣತಿ ಪ್ರಾರಂಭ ಆಗಿದೆ. ಇವತ್ತು ಹೈಕೋರ್ಟ್ನಲ್ಲಿ ಕೇಸ್ ಇದೆ. ಏನಾಗುತ್ತೋ ನೋಡೋಣ. ಹೈಕೋರ್ಟ್‌ನಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಜಯಮೃತ್ಯುಂಜಯ ಸ್ವಾಮೀಜಿಗಳ ಜೊತೆ ಇಡೀ ಪಂಚಮಸಾಲಿ ಸಮಾಜ ಇದೆ: ಸಿ.ಸಿ.ಪಾಟೀಲ್

    ಇದು ಯಾವ ರೀತಿ ಸರ್ಕಾರ ಅಂತ ಅರ್ಥ ಆಗುತ್ತಿಲ್ಲ. ಒಂದು ಸಾರಿ ಜಾತಿ ಗಣತಿ ಅಂತಾರೆ. ಇನ್ನೊಂದು ಸಾರಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎನ್ನುತ್ತಾರೆ. ಹಾಗಾದ್ರೆ ಇದುವರೆಗೂ ಇವರ ಬಳಿ ಅಂಕಿಅಂಶಗಳು ಇಲ್ಲವಾ? ಈ ರೀತಿ ಸರ್ಕಾರ ನಡೆಸಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ರಾಜ್ಯದಲ್ಲಿರೋದು ಗುಂಡಿಗಳನ್ನ ನಡೆಸೋ ಸರ್ಕಾರ: ಸಿ.ಸಿ.ಪಾಟೀಲ್

    ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಈ ಗಣತಿ ಮಾಡಿಸುತ್ತಿದ್ದಾರೆ ಅನ್ನಿಸುತ್ತೆ. ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ವಿರೋಧಿ ಅಲೆ ಪಕ್ಷದಲ್ಲಿ ಮತ್ತು ಪಕ್ಷದ ಹೊರಗೆ ಇದೆ. ಅದನ್ನ ಮರೆ ಮಾಚೋದಕ್ಕೆ ಈ ಗಣತಿ ಮಾಡಿಸುತ್ತಿದ್ದಾರೆ ಎನಿಸುತ್ತಿದೆ. ಸಿದ್ದರಾಮಯ್ಯ ಇಂತಹ ವಿಷಯಗಳಲ್ಲಿ ಕ್ಲೆವರ್ ಇದ್ದಾರೆ. ಜಾತಿಗಣತಿ ಅನ್ನೋ ಕಾರ್ಡ್ ಅನ್ನ ಸಿದ್ದರಾಮಯ್ಯ ಪ್ಲೇ ಮಾಡುತ್ತಿದ್ದಾರೆ ಅನ್ನಿಸುತ್ತೆ. ಸಿಎಂ-ಡಿಸಿಎಂ ನಡುವೆ ಕುರ್ಚಿ ಕಿತ್ತಾಟ ಇದೆ. ಅದನ್ನ ಮರೆಮಾಚೋಕೆ ಇದನ್ನ ಮಾಡುತ್ತಿರಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಉಪನ್ಯಾಸಕರಿಲ್ಲದೇ ಪಾಠ ನಡೆಯುತ್ತಿಲ್ಲ- ಖಾಲಿ ಇರೋ ಹುದ್ದೆ ಶೀಘ್ರ ಭರ್ತಿ ಮಾಡಿ: ಎಬಿವಿಪಿ

    ಇವರು ಒಂದೇ ದಿನದಲ್ಲಿ ಬೇಕಾದರೆ ಸರ್ವೆ ಮುಗಿಸುತ್ತಾರೆ. ಅವರಿಗೆ ಬೇಕಾದ ಹಾಗೇ ಸಮೀಕ್ಷೆ ಮುಗಿಸುತ್ತಾರೆ. ಅವರ ಮನೆಯಲ್ಲಿ ಕೂತೇ ಬರೆಯುತ್ತಾರೆ. ರಾತ್ರಿ ಮನೆ ಮುಂದೆ ಬಂದು ಸ್ಟಿಕರ್ ಅಂಟಿಸಿದ್ರೆ ಮುಗೀತು. ಮಿಕ್ಕಿದ್ದು ಅವರೇ ಬರೆದುಕೊಳ್ಳುತ್ತಾರೆ. ಈ ಗಣತಿ ಬಿಜೆಪಿ ಒಪ್ಪಲ್ಲ.ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಅವರೇ ಈ ಸಮೀಕ್ಷೆ ಒಪ್ಪಲು ರೆಡಿ ಇಲ್ಲ. ಗಣತಿ ಬಗ್ಗೆ ಮುಂದೆ ಹೋರಾಟ ಮಾಡೋಣ ಎಂದರು. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ – 33 ತುಂಡುಗಳು ವಶ, ಆರೋಪಿ ಅರೆಸ್ಟ್

    ಧರ್ಮದಲ್ಲಿ ರಾಜಕೀಯ ಮಾಡಬೇಡಿ, ಚುನಾವಣೆ ಅಖಾಡದಲ್ಲಿ ರಾಜಕೀಯ ಮಾಡಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರೇ ಹಾಗಾದರೆ ವಿಧಾನಸಭೆಯನ್ನ ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ. ನಾವು ಚುನಾವಣೆ ಎದುರಿಸೋಕೆ ರೆಡಿ ಇದ್ದೇವೆ. ಇವತ್ತೇ ಚುನಾವಣೆ ಆದರೂ ನಾವು ರೆಡಿ. ಸಿದ್ದರಾಮಯ್ಯ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಬರಲಿ ಎಂದು ಸಿಎಂಗೆ ಸವಾಲ್ ಹಾಕಿದರು. ಇದನ್ನೂ ಓದಿ: ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

  • ರಾಜ್ಯದಲ್ಲಿರೋದು ಗುಂಡಿಗಳನ್ನ ನಡೆಸೋ ಸರ್ಕಾರ: ಸಿ.ಸಿ.ಪಾಟೀಲ್

    ರಾಜ್ಯದಲ್ಲಿರೋದು ಗುಂಡಿಗಳನ್ನ ನಡೆಸೋ ಸರ್ಕಾರ: ಸಿ.ಸಿ.ಪಾಟೀಲ್

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರೋದು ಗುಂಡಿಗಳನ್ನ ನಡೆಸೋ ಸರ್ಕಾರ. ಇಂತಹ ಸರ್ಕಾರ ನಾನು ನೋಡೇ ಇಲ್ಲ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್ (CC Patil) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರು ಗುಂಡಿಗಳ (Bengaluru Pothole) ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಗುಂಡಿಗಳನ್ನ ನಡೆಸೋ ಸರ್ಕಾರ ನಾನು ನೋಡೇ ಇರಲಿಲ್ಲ. 6 ಸಾವಿರ, 3 ಸಾವಿರ ಗುಂಡಿಗಳು ಎನ್ನುತ್ತಿದ್ದಾರೆ. ಅಧಿಕಾರಿಗಳನ್ನ ಗುಂಡಿ ಮುಚ್ಚೋಕೆ ನೇಮಿಸಿರುವ ಏಕೈಕ ಸರ್ಕಾರ ಅಂದರೆ ಸ್ವಾತಂತ್ರ‍್ಯ ಭಾರತದ ಇತಿಹಾಸದಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಸರ್ಕಾರ ಎಂದು ಕಿಡಿಕಾರಿದರು. ಇದನ್ನೂ ಓದಿ: ಟೆಕ್ಸಾಸ್‌ನಲ್ಲಿ ಹಿಂದೂ ದೇವರ ಪ್ರತಿಮೆ ಯಾಕೆ? ನಮ್ಮದು ಕ್ರಿಶ್ಚಿಯನ್‌ ರಾಷ್ಟ್ರ – ಟ್ರಂಪ್‌ ಬೆಂಬಲಿಗನ ಪೋಸ್ಟ್‌

    ಸೋಮವಾರ ರಾತ್ರಿ ನಾನು ವಿಮಾನದಲ್ಲಿ ಬೆಂಗಳೂರಿಗೆ ಬಂದೆ. ಬಿಡಿಎ ಮುಂದೆ ಫ್ಲೈಓವರ್ ಮೇಲೆ ಮಳೆ ಬರುತ್ತಿದ್ದರೂ ಗುಂಡಿ ಮುಚ್ಚುತ್ತಿದ್ದಾರೆ. ಮಳೆ ಬರೋವಾಗ ಗುಂಡಿ ಮುಚ್ಚಿದ್ರೆ ಇರುತ್ತದೆಯಾ? ಜಿಬಿಎ (GBA) ಅಧಿಕಾರಿಗಳಿಗೆ ಅಷ್ಟು ಪರಿಜ್ಞಾನ ಇಲ್ಲವಾ? ಮಳೆ ಬರೋವಾಗ ಗುಂಡಿ ಮುಚ್ಚಿದ್ರೆ ಆಗುತ್ತಾ? ಏನು ಮಾಡ್ತಿದೆ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೆಹಲಿಯಲ್ಲಿರುವ ಪ್ರಧಾನಿ ಮೋದಿ ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ: ಡಿಕೆಶಿ ಕೌಂಟರ್

    ಪ್ರಧಾನಿ ಮನೆ ಮುಂದೆ ಗುಂಡಿ ಇದೆ ಎಂಬ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ಮನೆ ಮುಂದೆ ಗುಂಡಿ ಇದ್ದರೆ ಡಿಕೆಶಿ ಮನೆ ಮುಂದೆ ಹೊಂಡಾ ಮಾಡಿಕೊಳ್ಳೋಕೆ ಹೇಳಿ. ಇವರ ಮನೆ ಮುಂದೆ ಒಂದು ಲೇಕ್ ಮಾಡಿಕೊಳ್ಳಲಿ. ಏನು ಕೇಳಿದ್ರು ಮೋದಿ ಮಾಡಿಲ್ಲ, ನೀವು ಇದ್ದಾಗ ಮಾಡಿಲ್ಲ ಎನ್ನುತ್ತಾರೆ. ನಾವು ಇದ್ದಾಗ ಮಾಡಿಲ್ಲ ಅನ್ನೋದಕ್ಕೆ ನೀವು ಅಧಿಕಾರಕ್ಕೆ ಬಂದಿದ್ದೀರಾ. ಮತ್ತೆ ನೀವು ಹೋಗೋಕೆ ತಯಾರಾಗಿ, ನಾವು ಬರುತ್ತೇವೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮಾಜಿ ಸಚಿವ, ಬಿಜೆಪಿ ಶಾಸಕ ಸುರೇಶ್ ಕುಮಾರ್​​​ಗೆ ಮಾತೃವಿಯೋಗ

  • ಉತ್ತರ ಭಾರತದಲ್ಲಿ ಕರ್ನಾಟಕ ಶಾಸಕರ ಅಧ್ಯಯನ ಪ್ರವಾಸ

    ಉತ್ತರ ಭಾರತದಲ್ಲಿ ಕರ್ನಾಟಕ ಶಾಸಕರ ಅಧ್ಯಯನ ಪ್ರವಾಸ

    ಬೆಂಗಳೂರು: ಕರ್ನಾಟಕ ಸಾರ್ವಜನಿಕ ‌ಲೆಕ್ಕಪತ್ರ ಸಮಿತಿ ಸದಸ್ಯರು ಉತ್ತರ ಭಾರತದಲ್ಲಿ (North India) ಅಧ್ಯಯನ ಪ್ರವಾಸ (Study Tour) ನಡೆಸುತ್ತಿದ್ದಾರೆ.

    ಶಾಸಕ ಸಿಸಿ ಪಾಟೀಲ್ (CC Patil) ನೇತೃತ್ವದ ಸಾರ್ವಜನಿಕ ಖಾತೆಗಳ ಸಮಿತಿ ಅಧ್ಯಯನ ಪ್ರವಾಸ ನಡೆಸುತ್ತಿದ್ದು ಸದ್ಯ ಲಡಾಖ್‌ನಲ್ಲಿ (Ladakh) ಶಾಸಕರಿದ್ದಾರೆ. ಇದನ್ನೂ ಓದಿ: WWEಗೆ ನಿವೃತ್ತಿ ಹೇಳಿದ ಜಾನ್‌ ಸೀನಾ

    ಕಳೆದ ಗುರುವಾರದಿಂದ ಸಮಿತಿ ಸದಸ್ಯರು ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಲೇಹ್, ದೆಹಲಿ, ಇಂದೋರ್ ಮತ್ತು ಅಮೃತಸರದಲ್ಲಿ ಅಧ್ಯಯನ ಪ್ರವಾಸ ನಡೆಯುತ್ತಿದೆ. ಇದನ್ನೂ ಓದಿ: 24 ಗಂಟೆಯಲ್ಲಿ ಟಿಬಿ ಡ್ಯಾಂಗೆ ಬಂತು 4 ಟಿಎಂಸಿ ನೀರು

  • ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ: ಎಂಬಿ ಪಾಟೀಲ್

    ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ: ಎಂಬಿ ಪಾಟೀಲ್

    – ಸಿಸಿ ಪಾಟೀಲ್‌ರ ಮಠ ಇದ್ದರೂ ಹೇಳಲಿ ಎಂದು ಟಾಂಗ್ ಕೊಟ್ಟ ಸಚಿವ

    ವಿಜಯಪುರ: ನಮಗೆ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಈ ವರ್ಷ ನಾವು ಗ್ಯಾರಂಟಿಗಳಲ್ಲಿ ಘೋಷಣೆ ಮಾಡಿದ್ದೇವೆ. ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ ಕೊಡುತ್ತೇವೆ. ಸಿಸಿ ಪಾಟೀಲ್ (CC Patil) ಅವರ ಮಠ ಇದ್ದರೂ ಹೇಳಲಿ ಎಂದು ಟಾಂಗ್ ಕೊಡುವ ಮೂಲಕ ಸಚಿವ ಎಂಬಿ ಪಾಟೀಲ್ (MB Patil) ಮಠಗಳಿಗೆ ಅನುದಾನ ಕೊಡುವ ಭರವಸೆ ನೀಡಿದ್ದಾರೆ.

    ಮಠ ಮಾನ್ಯಗಳ ಅನುದಾನ ಕಡಿತ ಮಾಡಲಾಗುತ್ತಿರುವ ಬಗ್ಗೆ ಮಾಜಿ ಸಚಿವ ಸಿಸಿ ಪಾಟೀಲ್ ಆರೋಪ ಮಾಡಿರುವ ವಿಚಾರವಾಗಿ ಮಾತನಾಡಿದ ಎಂಬಿ ಪಾಟೀಲ್, ನಾವು ಭೇದ-ಭಾವ ಮಾಡಲ್ಲ. ಎಲ್ಲರಿಗೂ ಅನುದಾನ ಕೊಡುತ್ತೇವೆ. ಹಿಂದೂ ಮಠಗಳು, ಕ್ರಿಶ್ಚಿಯನ್ ಚರ್ಚ್ಗಳು, ಮುಸ್ಲಿಂ ಮಸೀದಿ, ಜೈನರ ಬಸದಿ, ಬೌದ್ಧ ವಿಹಾರಗಳನ್ನು ಸಮಾನವಾಗಿ ಕಾಣುತ್ತೇವೆ. ಎಲ್ಲರಿಗೂ ಹಣಕಾಸಿನ ಅನುದಾನ ಕೊಡುತ್ತೇವೆ. 1 ವರ್ಷ ಸಿಸಿ ಪಾಟೀಲ್ ತಾಳ್ಮೆಯಿಂದಿರಲಿ ಎಂದರು.

    ಬಿಜೆಪಿ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ ಎಂಬಿ ಪಾಟೀಲ್, ಸಿಸಿ ಪಾಟೀಲ್ ತಮ್ಮ ಬಜೆಟ್‌ಗಿಂತ 4-5 ಸಾವಿರ ಕೋಟಿ ರೂ. ಜಾಸ್ತಿ ಖರ್ಚು ಮಾಡಿದ್ದಾರೆ. ಸಿಸಿ ಪಾಟೀಲ್ ಯಾಕೆ ಹೆಚ್ಚು ಖರ್ಚು ಮಾಡಿದ್ರು? ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ರೂ. ಹೆಚ್ಚು ಖರ್ಚು ಮಾಡಿದ್ದಾರೆ. ಬಜೆಟ್‌ಗಿಂತ ಹೆಚ್ಚು ಯಾಕೆ ಖರ್ಚು ಮಾಡಿದ್ದೀರಿ? ಜನರನ್ನು ಯಾಕೆ ಮರಳು ಮಾಡಿದ್ದೀರಿ? ಇದರ ಹಿಂದಿನ ಉದ್ದೇಶ ಏನು ಹಾಗಿದ್ರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚಿಕ್ಕೋಡಿಯ ಜೈನಮುನಿ ಹತ್ಯೆ ಖಂಡನೀಯ – ಸಮಗ್ರ ತನಿಖೆ ಆಗಲಿ: ಕಟೀಲ್ ಒತ್ತಾಯ

    ಬಿಬಿಎಂಪಿಯಲ್ಲೂ ಭ್ರಷ್ಟಾಚಾರ. ಲೂಟಿ ಹೊಡೆಯಲು ಬಜೆಟ್‌ಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಿದ್ದೀರಿ. ಬಜೆಟ್‌ಗಿಂತ ಹೆಚ್ಚು ಖರ್ಚು ಮಾಡುವಾಗ ನಿಮ್ಮ ಶಿಸ್ತು ಎಲ್ಲಿತ್ತು? ನೀವು ಮಾಡಿದ ಅಕ್ರಮಗಳನ್ನು ಅಶಿಸ್ತನ್ನು ಎಳೆ-ಎಳೆಯಾಗಿ ನಮ್ಮ ಸಿಎಂ ಬಜೆಟ್ ಪುಸ್ತಕದಲ್ಲಿಯೇ ಹೇಳಿ ಬಿಟ್ಟಿದ್ದಾರೆ. ಇವರ ಮುಖ ಏನು ಉಳಿದಿಲ್ಲ, ಇವರನ್ನು ಸಿಎಂ ಎಕ್ಸ್ಪೋಸ್ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅನಾರೋಗ್ಯದಿಂದ ಬಿಜೆಪಿ ಮಾಜಿ ಶಾಸಕ ಸಿಎಂ ನಿಂಬಣ್ಣವರ್ ನಿಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಸಿ ಪಾಟೀಲ್ ಮನೆಯಲ್ಲಿ ದಿನಾಲೂ ಬೊಮ್ಮಾಯಿ ಏನು ಮಾಡುತ್ತಾರೆ ಚೆಕ್ ಮಾಡಿ: ವಿಜಯಾನಂದ ಕಾಶಪ್ಪನವರ್

    ಸಿಸಿ ಪಾಟೀಲ್ ಮನೆಯಲ್ಲಿ ದಿನಾಲೂ ಬೊಮ್ಮಾಯಿ ಏನು ಮಾಡುತ್ತಾರೆ ಚೆಕ್ ಮಾಡಿ: ವಿಜಯಾನಂದ ಕಾಶಪ್ಪನವರ್

    ಬೆಳಗಾವಿ: ಸಿಸಿ ಪಾಟೀಲ್‌ರ (CC Patil) ಮನೆಯಲ್ಲಿ ದಿನಾಲೂ ಬೊಮ್ಮಾಯಿ (Basavaraj Bommai) ಏನು ಮಾಡುತ್ತಾರೆ ಚೆಕ್ ಮಾಡಬೇಕು. ಅಪಹಾಸ್ಯವಾಗಿ ಮಾತನಾಡುವುದು ಯಾವುದೇ ನಾಯಕರಿಗೆ ಗೌರವ ತರುವಂತದಲ್ಲ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ (Vijayananda Kashappanavar) ವಾಗ್ದಾಳಿ ನಡೆಸಿದ್ದಾರೆ.

    ಪಂಚಮಸಾಲಿ (Panchamasali) ಸಮಾಜದಿಂದ 2ಡಿ ಮೀಸಲಾತಿ (2D Reservation) ವಿರೋಧ ವ್ಯಕ್ತವಾಗಿದ್ದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ನಗರದ ಗಾಂಧಿಭವನದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಕಾರ್ಯಕಾರಣಿ ಸಭೆ ತೀವ್ರ ವಿರೋಧ ವ್ಯಕ್ತವಾಗಿದೆ.

    ಸಭೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ ಶಾಸಕ ಎಬಿ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದ್ದು ಸಭೆಯಲ್ಲಿ ಮಾರ್ಚ್ 27 ರಂದು ಸರ್ಕಾರದ ಸುತ್ತೋಲೆ ಬಗ್ಗೆ ಚರ್ಚೆ ಮಾಡಿದರು. ಬಳಿಕ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಯಾವುದೇ ಕಾರಣಕ್ಕೂ ಸರ್ಕಾರದ ಆದೇಶವನ್ನು ನಾವು ಒಪ್ಪೋದಿಲ್ಲ. ಬಿಜೆಪಿ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದನ್ನು ನಾವೆಲ್ಲರೂ ಖಂಡಿಸಬೇಕು ಮುಂದೆ ಸರ್ಕಾರ ಬದಲಾಗುತ್ತೆ ನಮಗೆ ನ್ಯಾಯ ಸಿಗುತ್ತದೆ ಎಂದರು. ಇದನ್ನೂ ಓದಿ: ಅತ್ಯಾಚಾರಿಗಳಿಗೆ ಲಡ್ಡು ತಿನ್ನಿಸುತ್ತೀರಿ: ಗೂಂಡಾಗಳನ್ನ ತಲೆಕೆಳಗೆ ನೇತಾಕ್ತೀವಿ ಎಂದಿದ್ದ ಶಾಗೆ ಮಹುವಾ ತಿರುಗೇಟು

    ಕಳೆದ ಎರಡೂವರೆ ವರ್ಷಗಳಿಂದ ಹೋರಾಟ ಮಾಡಿದ್ರೂ ನಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. 2023ರ ಮಾರ್ಚ್ 27 ರಂದು 2 ಸುತ್ತೋಲೆ ಹೊರಡಿಸಿದ್ದಾರೆ, ಇದು ಖಂಡನೀಯ. 2ಡಿ ಮೀಸಲಾತಿಯಲ್ಲಿ 52 ಜಾತಿಗಳಿವೆ. ಎಲ್ಲರಿಗೂ ಸೇರಿಸಿ ಘೋಷಣೆ ಮಾಡಿದ್ದಾರೆ. ಪಂಚಮಸಾಲಿ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ ಕೇಳಿದ್ದೇವೆ. ಕೇವಲ 2 ಪರ್ಸೆಂಟ್ ಮೀಸಲಾತಿ ಹೆಚ್ಚಳ ಮಾಡುವ ನಾಟಕ ಮಾಡಿದ್ದಾರೆ. ಮತ್ತೊಬ್ಬರ ಮೀಸಲಾತಿ ಕಸಿದುಕೊಳ್ಳುವಂತಹ ಕೆಟ್ಟವರು ಲಿಂಗಾಯತರಲ್ಲ. ಕೆಲವು ರಾಜಕೀಯ ಕುತಂತ್ರಿಗಳು ನಾಟಕ ಮಾಡಿದ್ದಾರೆ. ವಿಜಯೋತ್ಸವ ಆಚರಣೆ ಮಾಡುತ್ತೇವೆ ಎನ್ನುತ್ತಾರೆ. ನಾವಿದನ್ನು ಒಪ್ಪೋದಿಲ್ಲ. ವಿಜಯೋತ್ಸವ ಮಾಡುವುದಿಲ್ಲ. ಸ್ವಾಮೀಜಿ ದುಃಖದಿಂದ ಕಣ್ಣೀರು ಹಾಕಿದ್ದಾರೆ. ಅವರಿಗೆ ಸಂತೋಷ ಆಗಿಲ್ಲ. ಸ್ವಾಮೀಜಿ ನಮ್ಮ ಜೊತೆ ಇದ್ದಾರೆ. ಮುಂದೆ ನಾವು ಹೋರಾಟ ಮಾಡುತ್ತೇವೆ ಎಂದರು.

    ಕುಲಕರ್ಣಿ, ಕಾಶಪ್ಪನವರ್ ಕುಡಿದು ಸ್ವಾಮೀಜಿ ಬಗ್ಗೆ ಮಾತನಾಡಿದ್ದಾರೆ ಎಂಬ ಸಿಸಿ ಪಾಟೀಲ್ ಹೇಳಿಕೆ ವಿಚಾರಕ್ಕೆ ವಾಗ್ದಾಳಿ ನಡೆಸಿದ ವಿಜಯಾನಂದ ಕಾಶಪ್ಪನವರ್, ಸಿಸಿ ಪಾಟೀಲ್‌ರ ಮನೆಯಲ್ಲಿ ದಿನಾಲೂ ಬೊಮ್ಮಾಯಿ ಏನು ಮಾಡುತ್ತಾರೆ ಚೆಕ್ ಮಾಡಬೇಕು. ಅಪಹಾಸ್ಯವಾಗಿ ಮಾತನಾಡುವುದು ಯಾವುದೇ ನಾಯಕರಿಗೆ ಗೌರವ ತರುವಂತದಲ್ಲ. ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಚೆಲ್ಲಾಟ ಆಡುತ್ತಿದೆ. ಈ ಮೀಸಲಾತಿ ಚುನಾವಣೆ ಸಲುವಾಗಿ ಮಾಡಿರುವ ಕುತಂತ್ರವಾಗಿದೆ. ನಾವು ವಿಜಯೋತ್ಸವ ಆಚರಣೆ ಮಾಡುವುದಿಲ್ಲ ಇದನ್ನು ತಿರಸ್ಕರಿಸುತ್ತೇವೆ ಎಂದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು: ಎಚ್‌ಡಿಡಿ ಬಗ್ಗೆ ಎಚ್‌ಡಿಕೆ ಭಾವುಕ

  • ಕೈ ನಾಯಕರು ಕುಡಿದು ಪಂಚಮಸಾಲಿ ಶ್ರೀಗಳಿಗೆ ಕರೆ ಮಾಡಿ ಕಿರುಕುಳ- ಸಿ.ಸಿ. ಪಾಟೀಲ್ ಗಂಭೀರ ಆರೋಪ

    ಕೈ ನಾಯಕರು ಕುಡಿದು ಪಂಚಮಸಾಲಿ ಶ್ರೀಗಳಿಗೆ ಕರೆ ಮಾಡಿ ಕಿರುಕುಳ- ಸಿ.ಸಿ. ಪಾಟೀಲ್ ಗಂಭೀರ ಆರೋಪ

    ಬೆಂಗಳೂರು: ಕುಡಿದು ಪಂಚಮಸಾಲಿ ಶ್ರೀ (Panchamsali Shree) ಗಳಿಗೆ ಕರೆ ಮಾಡಿ ಕಾಂಗ್ರೆಸ್ ನಾಯಕರು ಕಿರುಕುಳ ನೀಡುತ್ತಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ್ (CC Patil) ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ (BJP) ಯಿಂದ ಸಿಎಂ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಕೊಟ್ಟಿದ್ದಕ್ಕೆ ಸಿಎಂ ಹಾಗೂ ಕೆಂದ್ರಕ್ಕೆ ಅಭಿನಂದನೆ ಸಲ್ಲಿಸ್ತೀವಿ. ಮೃತ್ಯುಂಜಯ ಸ್ವಾಮೀಜಿ (Jaya Mrityunjaya swamiji) 750 ಕಿ.ಮೀ ಪಾದಯಾತ್ರೆ ಮಾಡಿದ್ರು. ಹರಿಹರದಿಂದ ವಚನಾನಂದ ಸ್ವಾಮಿಗಳು ಬೆಂಬಲ ವ್ಯಕ್ತಪಡಿಸಿದರು. ಯಾವುದೇ ರಾಜಕಾರಣಕ್ಕೆ ಮೀಸಲಿರಿಸದೇ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸೋದಕ್ಕೆ ಹೋರಾಟ ಮಾಡಿದರು. ಸಮಾಜವನ್ನ ಒಗ್ಗೂಡಿಸಿದ ಕೀರ್ತಿ ಮೃತ್ಯುಂಜಯಸ್ವಾಮೀಜಿಗೆ ಸಲ್ಲುತ್ತದೆ ಎಂದರು.

    ಎರಡು ವರ್ಷ ಮೂರು ತಿಂಗಳು ಹಗಲು ರಾತ್ರಿ ಹೋರಾಟ ಮಾಡಿದ್ದಾರೆ. ನಮ್ಮಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಕಾನೂನು ತಜ್ಞರು ಹಿಂದುಳಿದ ವರ್ಗದ ಸಮಿತಿಯಿಂದ ವರದಿ ಪಡೆದು ಒಕ್ಕಲಿಗ ಸಮುದಾಯಕ್ಕೆ 2 ಸಿ ಪಂಚಮಸಾಲಿಗೆ 2 ಡಿ ಕೊಟ್ಟಿದ್ದಾರೆ. ಈ ಹೋರಾಟವನ್ನ ಮಾಡಿ ಜಯಮೃತ್ಯುಂಜಯ ಸ್ವಾಮೀಜಿಗಳನ್ನ ಅಭಿನಂದಿಸುತ್ತೇನೆ. ಕಾಂಗ್ರೆಸ್ ನ ವಿನಯ್ ಕುಲಕರ್ಣಿ, ವಿನಯ್ ಕಾಶಪ್ಪನವರ್ ಸೇರಿದಂತೆ ಹಲವಾರು ನಾಯಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದರು ಎಂದರು.

    ನಮಗೆ ರಾಜಕಾರಣ ಬೇಡ, ನಮ್ಮ ಮಕ್ಕಳಿಗೆ ಮೀಸಲಾತಿ ಸಿಕ್ಕಿದ್ರೆ ಸಾಕು ಅಂತ ಕಾಂಗ್ರೆಸ್ ನಾಯಕರು ಹೇಳಿದರು. ಆ ನಂತರ ವಿಜಯಾನಂದ ಕಾಶಪ್ಪ ನವರ್ ಸೇರಿದಂತೆ ಹಲವರ ಭಾವನೆ ಬೇರೆ ಆಗಿತ್ತು. ಮೀಸಲಾತಿ ಕೊಡೋದಕ್ಕೆ ಸಾಧ್ಯವಾಗೋದಿಲ್ಲಾ ಎಂಬ ಭಾವನೆ ಇತ್ತು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗದಿದ್ರೆ ಇದನ್ನೇ ಇಟ್ಟುಕೊಂಡು ಹೋರಾಟ ಮಾಡಬೇಕಂತ ಪ್ಲಾನ್ ಇತ್ತು. ಸುರ್ಜೆವಾಲ, ಡಿಕೆಶಿ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ಸೇರಿದಂತೆ ಯಾವ ಕಾಂಗ್ರೆಸ್ ನಾಯಕರು ಜಯಮೃತ್ಯುಂಜಯ ಸ್ವಾಮೀಜಿಗಳನ್ನ ಭೇಟಿ ಮಾಡಿ ಮಾತಾಡಿಸಲಿಲ್ಲ. ಇದು ಕಾಂಗ್ರೆಸ್ ನಾಯಕರ ಧೋರಣೆ ಎಂದು ವಾಗ್ದಾಳಿ ನಡೆಸಿದರು.

    ಕಾಶಪ್ಪನವರು ಹಾಗೂ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ ಹಲವಾರು ಸರ್ಕಾರದ ಗೆಜೆಟ್ ಸುಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದನ್ನ ನಾವು ತೀವ್ರವಾಗಿ ವಿರೋಧ ಮಾಡ್ತೀವಿ. ಕಾಂಗ್ರೆಸ್ ನ ಕೆಲವು ನಾಯಕರು ಮದ್ಯಪಾನ ಮಾಡಿ ಶ್ರೀಗಳಿಗೆ ಕಾಲ್ ಮಾಡ್ತಿದ್ದಾರೆ. ಮಾನಸಿಕ ಹಿಂಸೆ ಕೊಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿ.ಸಿ.ಪಾಟೀಲ್ ಆರೋಪ ಮಾಡಿದರು.

  • ತಮ್ಮ ನಾಯಕರು ಬ್ಲೂಫಿಲಂ ನೋಡ್ತಿದ್ದಾಗ ಬಿಜೆಪಿ ಮಹಿಳೆಯರು ಎಲ್ಲಿದ್ರು – ಮಹಿಳಾ ಕಾಂಗ್ರೆಸ್ ತಿರುಗೇಟು

    ತಮ್ಮ ನಾಯಕರು ಬ್ಲೂಫಿಲಂ ನೋಡ್ತಿದ್ದಾಗ ಬಿಜೆಪಿ ಮಹಿಳೆಯರು ಎಲ್ಲಿದ್ರು – ಮಹಿಳಾ ಕಾಂಗ್ರೆಸ್ ತಿರುಗೇಟು

    ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆ ಅವರ `ಲಂಚ-ಮಂಚ’ದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಹರತಾಳು ಹಾಲಪ್ಪ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಬ್ಲೂಫಿಲಂ ನೋಡಿದ್ದಾಗ ಬಿಜೆಪಿ ಮಹಿಳೆಯರು ಎಲ್ಲಿದ್ದರು ಎಂದು ಪ್ರಶ್ನಿಸಿದೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲತಾ ರಾಠೋಡ, ಶಾಸಕ ಪ್ರಿಯಾಂಕ್ ಖರ್ಗೆ ಈಗಾಗಲೇ ರಾಜ್ಯದ ಮಹಿಳೆಯರಿಗೆ ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸಲು ತಯಾರಿದ್ದೇನೆ ಎಂದಿದ್ದಾರೆ. ಆದರೆ ಬಿಜೆಪಿಯವರು ಲಂಚ ಮತ್ತು ಮಂಚ ಪದಗಳನ್ನು ತಮಗೆ ಬೇಕಾದಂತೆ ತಿರುಚಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಖಂಡಿಸಿದ್ದಾರೆ. ಇದನ್ನೂ ಓದಿ: ಲಂಚ-ಮಂಚ ಹೇಳಿಕೆಗೆ ಕೌಂಟರ್ ಕೊಟ್ಟ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸುದೀರ್ಘ ಉತ್ತರ

    ಬಿಜೆಪಿಯವರು ಒಂದು ವೇಳೆ ಚಿತ್ತಾಪುರ ಚಲೋ ಹೋರಾಟ ಕೈಬಿಡದಿದ್ದರೆ ಎರಡು ಪಟ್ಟು ಮಹಿಳೆಯರನ್ನು ಸಂಘಟಿಸಿ ಕಳಂಕಿತ ಸಚಿವರು, ಶಾಸಕರ ವಿರುದ್ಧ ಹೋರಾಟಕ್ಕಿಳಿಯಲು ತಯಾರಿದ್ದೇವೆ ಎಂದು ಎಚ್ಚರಿಸಿದ್ದಾರೆ.

    ಶಾಸಕ ಪ್ರಿಯಾಂಕ್ ಖರ್ಗೆ ಅವರ ಪದ ಬಳಕೆಯಲ್ಲಿ ವ್ಯತ್ಯಾಸ ಆಗಿದೆ. ಆದರೆ ಬಿಜೆಪಿ ನಾಯಕರ ಕರ್ಮಕಾಂಡ ಇಡೀ ರಾಜ್ಯದ ಜನತೆಗೆ ಗೊತ್ತಿಲ್ವಾ? ಈ ಹಿಂದೆ ಹರತಾಳು ಹಾಲಪ್ಪ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಬ್ಲೂಫಿಲಂ ನೋಡಿದ್ದಾಗ ಬಿಜೆಪಿ ಮಹಿಳೆಯರು ಎಲ್ಲಿ ಇದ್ದರು. ಎಲ್ಲಿ ಹೋಗಿದ್ದರು. ಇನ್ನು ಹಿರಿಯ ರಾಜಕಾರಣಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಡಿರುವ ತಪ್ಪುಗಳನ್ನು ಮರೆಮಾಚುವುದು ಸರಿನಾ? ಮಹಿಳೆಯರು ಎಂದರೆ ಕಸದ ಬುಟ್ಟಿ ತರಹ ಬಳಸಿ ಬಿಸಾಕುವುದೇನಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಈ ಬಾರಿ ಗುಜರಾತಿಗೆ ಐಪಿಎಲ್‌ ಕಪ್‌, ಮೋಟಾಬಾಯಿ ಖಚಿತಪಡಿಸಬೇಕು: ಪ್ರಿಯಾಂಕ್‌ ಖರ್ಗೆ ವ್ಯಂಗ್ಯ

    ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ತುಂಬಾ ಗೌರವ, ಘನತೆ ಹಾಗೂ ಮರ್ಯಾದೆಯಿಂದ ಕಾಣುತ್ತಾರೆ. ಬಿಜೆಪಿ ಮಹಿಳಾ ಮೋರ್ಚಾ ನಿಜವಾಗಿಯೂ ನಾಡಿನ ಹೆಣ್ಣುಮಕ್ಕಳ ಪರ ಕೆಲಸ ಮಾಡಬೇಕಿದೆ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಕಿರುಕುಳ, ಅನ್ಯಾಯ, ಯಾತನೆ ಬಗ್ಗೆ ಸ್ಪಂದಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಚಂದ್ರಿಕಾ ಪರಮೇಶ್ವರ, ವಾಣಿಶ್ರೀ ಸಗರಕರ್, ಶೀಲಾ ಕಾಶಿ, ಪ್ರಭಾವತಿ ಪಾಟೀಲ್, ರೇಣುಕಾ ಸಿಂಗೆ, ಪ್ರಿಯಾದರ್ಶಿನಿ, ಗೀತಾ ಮುದಗಲ್, ಮಂಜುಳಾ ಪಾಟೀಲ್ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • 2ಎ ಮೀಸಲಾತಿ ನೀಡಲು ಕಾನೂನಿನ ಅಡೆತಡೆ ಇದೆ: ಸಿ.ಸಿ. ಪಾಟೀಲ್

    2ಎ ಮೀಸಲಾತಿ ನೀಡಲು ಕಾನೂನಿನ ಅಡೆತಡೆ ಇದೆ: ಸಿ.ಸಿ. ಪಾಟೀಲ್

    ಹಾವೇರಿ: ಪಂಚಮಸಾಲಿಗಳಿಗೆ ಮಿಸಲಾತಿ ಕೊಡಲು ಜಾಗ ಖಾಲಿ ಇಲ್ಲ. ಮೀಸಲಾತಿ ಕೊಡಲು ಕಾನೂನಿನ ಅಡೆತಡೆ ಇದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು.

    ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಖಾಸಗಿ ಹೊಟೆಲ್‍ನಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಸಂಧಾನ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜಕ್ಕೆ ಮೀಸಲಾತಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಲು ಬರುವುದಿಲ್ಲ. ದೇಶದ ಎರಡು ರಾಜ್ಯಗಳಲ್ಲಿ ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಿದ್ದರ ಪರಿಸ್ಥಿತಿ ಏನಾಗಿದೆ ನಿಮಗೆಲ್ಲ ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ಖದೀಮರು – ವೃದ್ಧೆ ಹಣೆಗೆ ಗನ್ ಇಟ್ಟ ದುಷ್ಕರ್ಮಿ

    ಸಿಎಂ ಬೊಮ್ಮಾಯಿ ಅವರು ಸಮಾಜದ ಪರವಾಗಿದ್ದಾರೆ. ಸಿಎಂ ಮೇಲೆ ಸಂವಿಧಾನಾತ್ಮಕವಾಗಿ ಜವಾಬ್ದಾರಿ ಇದೆ. ಮೀಸಲಾತಿ ಕೊಡುತ್ತಾರೆ. ಹೋರಾಟ ಮಾಡೋದು ಬೇಡ ಅಂತಾ ಸ್ವಾಮೀಜಿಯವರ ಜೊತೆ ಚರ್ಚೆ ಮಾಡಿದ್ದೇನೆ. ಹೋರಾಟ ಕೈ ಬಿಡುವಂತೆ ಸ್ವಾಮೀಜಿಯವರಿಗೆ ಮನವಿ ಮಾಡಿದ್ದೇನೆ. ಸ್ವಾಮೀಜಿಯವರು ಇಂದಿನ ಹೋರಾಟ ಮುಂದೂಡುವುದಾಗಿ ಹೇಳಿದ್ದಾರೆ. ಸಾಂಕೇತಿಕವಾಗಿ ಕಿತ್ತೂರು ಚೆನ್ನಮ್ಮಗೆ ಮಾಲೆ ಹಾಕಿದ್ದಾರೆ ಎಂದರು. ಇದನ್ನೂ ಓದಿ: ಆಗಸ್ಟ್‌ 26ಕ್ಕೆ ಮಡಿಕೇರಿ ಚಲೋ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]