ಬೊಮ್ಮನಹಳ್ಳಿ ಮತ್ತು ಸಿಲ್ಕ್ ಬೋರ್ಡ್ ರಸ್ತೆ (Bommanahalli – Silk Board) ಜಲಾವೃತಗೊಂಡಿದ್ದು ಮುಖ್ಯ ರಸ್ತೆಯಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತಿದೆ. ಬೊಮ್ಮನಹಳ್ಳಿಯಿಂದ ಸಿಲ್ಕ್ ಬೋರ್ಡ್ ಕಡೆ ಹೋಗುವ ರಸ್ತೆಯಲ್ಲಿ ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.
ಸಿಸಿಬಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಂತೋಷ್, ವಾಟ್ಸಪ್ ಮೂಲಕ ಸಿಸಿಬಿ ಅವರು ನನಗೆ ನೋಟಿಸ್ ಕಳುಹಿಸಿದ್ದಾರೆ. ನನಗೂ ಈ ಡ್ರಗ್ಸ್ ವಿಚಾರದಲ್ಲಿ ಏನೂ ಸಂಬಂಧ ಎಂದು ಹುಡುಕುತ್ತಿದ್ದಾಗ ನಾಲ್ಕು ವರ್ಷದ ಹಿಂದೆ ಒಂದು ವಿಲ್ಲಾದಲ್ಲಿ ಉಳಿದುಕೊಂಡಿದ್ದೆ. ಆಗ ಆರೋಪಿ ಆಗಿರುವ ವೈಭವ್ ಜೈನ್ ಪರಿಚಯವಾಗಿತ್ತು. ವೈಭವ್ ವಯಕಾಲಿಕನಲ್ಲಿ ಒಂದು ಜ್ಯುವೆಲರಿ ಶಾಪ್ ಇಟ್ಟುಕೊಂಡಿದ್ದನು. ಆತನಿಗೆ ಎರಡು ಮಕ್ಕಳಿವೆ, ಕುಟುಂಬಸ್ಥರ ಜೊತೆ ಶಬರಿಮಲೆ, ತಿರುಪತಿಗೆ ಬರುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್
ನನಗೆ ದೂರವಾಗುತ್ತದೆ ಎಂದು ವಿಲ್ಲಾಯಿಂದ ಸಿಟಿಗೆ ಶಿಫ್ಟ್ ಆದೆ. ಕೆಲವು ಕಡೆ ಪಾರ್ಟಿ ಮಾಡಲು ವಿಲ್ಲಾ ಕೊಡುತ್ತಾರೆ. ಅದೇ ರೀತಿ ನನ್ನ ಮನೆಯನ್ನು ಮಾರ್ಕೆಟಿಂಗ್ ಮಾಡಲು ವೈಭವ್‍ಗೆ ವಿಲ್ಲಾ ಕೊಟ್ಟಿದ್ದೆ. ಆದರೆ 10ಕ್ಕಿಂತ ಹೆಚ್ಚು ಜನರನ್ನು ಸೇರಿಸಬಾರದೆಂದು ತಿಳಿಸಿದ್ದೆ. ಆದರೂ ಹೆಚ್ಚಿನ ಜನರನ್ನು ಕರೆಸುತ್ತಿದ್ದನು. ಇದೇ ವಿಚಾರಕ್ಕೆ ನನಗೂ ವೈಭವ್ ಜೈನ್‍ಗೂ ವ್ಯವಹಾರದ ವಿಚಾರದಲ್ಲಿ ಎರಡು ಬಾರಿ ಜಗಳವಾಗಿತ್ತು. ಯಾಕೆ ಜಗಳ ಆಗಿತ್ತು? ಆ ಎಲ್ಲಾ ಬಗೆಗಿನ ಡಾಕ್ಯುಮೆಂಟ್‍ಗಳನ್ನ ತೆಗೆದುಕೊಂಡು ಹೋಗುತ್ತಿದ್ದೇನೆ. ಸಿಸಿಬಿ ವಿಚಾರಣೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದರು.
ನಾಲ್ಕು ಬಾರಿ ಜಗಳ ಮಾಡಿದ ನಂತರ ಅವನ ಹತ್ತಿರ ನನ್ನ ವ್ಯವಹಾರವನ್ನು ಕ್ಯಾನ್ಸಲ್ ಮಾಡಿದೆ. ಆದರೆ ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೆ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ. ಆದರೆ ಈಗ ಸಿಸಿಬಿ, ಮಾಧ್ಯಮಗಳಿಂದ ಅವನ ಬಗ್ಗೆ ಗೊತ್ತಾಗುತ್ತಿದೆ ಎಂದು ಸಂತೋಷ್ ಹೇಳಿದರು.
ಸಂಜನಾ, ಐಂದ್ರಿತಾ ಎಲ್ಲರೂ ನನ್ನ ಗೆಳೆಯರು. ಐದು ವರ್ಷದ ಹಿಂದೆ ಸಂಜನಾ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದೆ. ಈ ವೇಳೆ ರಾಹುಲ್ ಸಿಕ್ಕಿದ್ದ. ಆತ ಸೆಲೆಬ್ರಿಟಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್‍ಬುಕ್‍ಗೆ ಹಾಕುತ್ತಿದ್ದನು. ಮತ್ತೆ ಯುಬಿ ಸಿಟಿಯಲ್ಲಿ ರಾಹುಲ್ ಬರ್ತ್ ಡೇ ಪಾರ್ಟಿಗೆ ಹೋಗಿದ್ದೆ. ಎರಡು ಪಾರ್ಟಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದೆ. ಈಗ ಅದೇ ಫೋಟೋ ಸಿಕ್ಕಿರುವುದು ಎಂದರು.
ಇನ್ನೂ ವಿಚಾರಣೆಗೆ ಬಂದು ಅಕುಲ್, ಸಿಸಿಬಿ ವಿಚಾರಣೆಗೆ ಕರೆದಿದ್ದಾರೆ. ಹೀಗಾಗಿ ಹೇಳಿದ್ದ ಸಮಯಕ್ಕೆ ಬಂದಿದ್ದೇನೆ. ನನ್ನ ಕಡೆಯಿಂದ ಸಹಕಾರ ಇರುತ್ತೆ. ನಾನು ವೈಭವ್ ಜೈನ್ ಹಾಯ್ ಬಾಯ್ ಫ್ರೆಂಡ್ಸ್ ಅಷ್ಟೇ. ದೊಡ್ಡಬಳ್ಳಾಪುರದಲ್ಲಿ ರೆಸಾರ್ಟ್ ಕೊಟ್ಟಿರುವ ಬಗ್ಗೆ ನಾನು ದಾಖಲೆಗಳೊಂದಿಗೆ ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯ, ಸಿಸಿಬಿಗೆ ನನ್ನ ಸಾಥ್ ಇದೆ. ವಿಚಾರಣೆಗೆ ನಾನು ಸ್ಪಂದಿಸಲಿದ್ದೇನೆ ಎಂದರು. ಪ್ರತೀಕ್ ಶೆಟ್ಟಿ ಪರಿಚಯವೇ ಎಂಬ ಪ್ರಶ್ನೆಗೆ ಸ್ಪಷ್ಟನೆ, ಆತ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಅಕುಲ್ ಸ್ಪಷ್ಟಪಡಿಸಿದರು.
ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿದಂತೆ ವಿಚಾರಣೆಗೆ ಹಾಜರಾಗುವಂತೆ ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ಇಂದು ಇಬ್ಬರೂ ಸಿಸಿಬಿ ಕಚೇರಿಗೆ ಹಾಜರಾಗಿದ್ದು, ಸಿಸಿಬಿ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
ಅನಿರುದ್ಧ್ ಎಂಬಾತ ಸಿಸಿಬಿ ಕಚೇರಿಗೆ ಏಕಾಏಕಿ ಬಂದು ಸಿಸಿಬಿ ಮುಂದೆ ಹೈಡ್ರಾಮಾ ಮಾಡಿದ್ದಾನೆ. ಡ್ರಗ್ ಡೀಲ್ ಪ್ರಕರಣದಲ್ಲಿ ನಾನೇ 13 ನೇ ಆರೋಪಿ. ಅಲ್ಲದೇ ರಾಗಿಣಿ ಜೊತೆ ನಾನೇ ಇದ್ದದ್ದು ಎಂದು ಸಿಸಿಬಿ ಕಚೇರಿಗೆ ಓಡೋಡಿ ಬಂದು ಅನಿರುದ್ಧ ಸರೆಂಡರ್ ಆಗಿದ್ದಾನೆ.
ಅನಿರುದ್ಧ್ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ತಕ್ಷಣ ಅವನನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಡ್ರಗ್ಸ್ ಪ್ರಕರಣದಲ್ಲಿ 12 ಜನರ ವಿರುದ್ಧ ಮಾತ್ರ ಎಫ್‍ಐಆರ್ ದಾಖಲಾಗಿದೆ. ಆದರೆ ನಾನೇ 13ನೇ ಆರೋಪಿ ಎಂದು ಅನಿರುದ್ಧ್ ಬಂದಿದ್ದಾನೆ. ಅನಿರುದ್ಧ ಕೆಎ 02 ಕೆಫ್ 0641 ನಂಬರಿನ ಮೊಪೆಡ್‍ನಲ್ಲಿ ಬಂದಿದ್ದಾನೆ. ಜೊತೆಯಲ್ಲಿ ಟೀ ಮಾರುವ ಫ್ಲಾಸ್ಕ್ ಕೂಡ ತಂದಿದ್ದಾನೆ. ಹೀಗಾಗಿ ವ್ಯಕ್ತಿಯ ನಡೆಯಿಂದ ಅನುಮಾನ ಮೂಡಿದೆ.
ಸಿಸಿಬಿ ಕಚೇರಿಗೆ ಓಡೋಡಿ ಬಂದ ಅನಿರುದ್ಧ್ ಜಯನಗರ ಆರ್‌ಟಿಒ ಕಚೇರಿಯ ಎಸ್‍ಡಿಎ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ರಾಗಿಣಿ ಆಪ್ತ ರವಿಶಂಕರ್ ಗೆಳೆಯನೇ ಅನಿರುದ್ಧ ಆಗಿದ್ದು, ಇದೇ ಆರ್‌ಟಿಒ ಕಚೇರಿಯಲ್ಲಿ ರವಿಶಂಕರ್ ಎಸ್‍ಡಿಎ ಆಗಿದ್ದನು. ಪೊಲೀಸ್ ಕಚೇರಿಗೆ ಬಂದಿದ್ದ ಅನಿರುದ್ಧ್ ಡ್ರಗ್ಸ್ ನಶೆಯಲ್ಲಿದ್ದ ಎನ್ನಲಾಗಿದೆ.
ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಸಿಸಿಬಿ ಅಧಿಕಾರಿಗಳು ಮುಂದೆ ಹಾಜರಾಗಿದ್ದಾರೆ.
ಸಿಸಿಬಿ ಕಚೇರಿಯ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಸಿಸಿಬಿ ಅಧಿಕಾರಿಗಳು ಜೊತೆ ಮೊದಲು ಮಾತನಾಡುತ್ತೇನೆ. ನನಗೆ ಯಾರದು ಒತ್ತಡ ಇಲ್ಲ. ಯಾರಿಗೂ ಹೆದರಲ್ಲ. ನಾನು ಮಾಧ್ಯಮದವರನ್ನು ಗೌರವಿಸುವೆ. ವಿಚಾರಣೆ ಮುಗಿಸಿ ಸವಿಸ್ತರವಾಗಿ ಮಾತನಾಡುವೆ ಎಂದು ಹೇಳಿ ಸಿಸಿಬಿ ಕಚೇರಿಯ ಒಳಗೆ ಹೋಗಿದ್ದಾರೆ.
ಇಂದ್ರಜಿತ್ ಸಿಸಿಬಿ ಕಚೇರಿಗೆ ಬರುವವರೆಗೆ ನಿರಂತರವಾಗಿ ಫೋನ್‍ಲ್ಲಿ ಬ್ಯುಸಿಯಾಗಿದ್ದರು. ಜೊತೆಗೆ ಕೈಯಲ್ಲಿ ಒಂದು ಫೈಲ್ ಹಿಡಿದುಕೊಂಡು ಸಿಸಿಬಿ ಕಚೇರಿಗೆ ಹೋಗಿದ್ದಾರೆ.
ಪೊಲೀಸರು ಸೂಕ್ತ ಭದ್ರತೆ ನೀಡಿದಲ್ಲಿ ಎಲ್ಲ ಮಾಹಿತಿ ನೀಡುವುದಾಗಿ ಇಂದ್ರಜಿತ್ ಹೇಳಿದ್ದಾರೆ. ಇಂದ್ರಜಿತ್ ಲಂಕೇಶ್ ಹೇಳಿಕೆ ಬಳಿಕ ಸಿಸಿಬಿಯಿಂದ ನೋಟಿಸ್ ನೀಡಿದ್ದರು. ಇಂದು ಸಿಸಿಬಿ ಕಚೇರಿಗೆ ಹಾಜರಾಗಿ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ಕೊಡುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಇಂದ್ರಜಿತ್ ಲಂಕೇಶ್‍ಗೆ ಗೊತ್ತಿರುವಷ್ಟು ಮಾಹಿತಿ ಸಿಸಿಬಿ ಮುಂದೆ ಹಂಚಿಕೊಳ್ಳಲಿ. ಯಾರ‍್ಯಾರು ದಂಧೆಯಲ್ಲಿ ಭಾಗಿಯಾಗಿದ್ದಾರೋ ಅವರ ಹೆಸರು ಹೇಳಲಿ. ಅವರಿಗೆ ಭಯವಿದ್ದರೆ ರಕ್ಷಣೆ ಕೊಡುವ ಕೆಲಸ ಮಾಡುತ್ತೀವಿ. ಇಂದ್ರಜಿತ್ ಲಂಕೇಶ್‍ಗೆ ಸಂಪೂರ್ಣ ಭದ್ರತೆ ಒದಗಿಸುತ್ತೀವಿ. ಯಾವುದೇ ಭಯ, ಅಂಜಿಕೆಯಿಲ್ಲದೆ ಸಿಸಿಬಿ ಮುಂದೆ ಮಾಹಿತಿ ಹಂಚಿಕೊಳ್ಳಲಿ. ಅವರು ಕೊಡುವ ಮಾಹಿತಿಯ ಆಧಾರದ ಮೇಲೆ ಮುಂದಿನ ಕಾನೂನು ತೀರ್ಮಾನ ಮಾಡುತ್ತೀವಿ ಎಂದು ಹಿರಿಯ ಸಿಸಿಬಿ ಅಧಿಕಾರಿಗಳು ಹೇಳಿದ್ದರು.
ಬೆಂಗಳೂರು: ನಗರದ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಭೇಟಿ ನೀಡಿದ ಖಡಕ್ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಸಿಬ್ಬಂದಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಚೇರಿಗೆ ಇಂದು ದಿಢೀರ್ ಭೇಟಿ ನೀಡಿದ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಲಾಗ್ ಬುಕ್ ಪರಿಶೀಲನೆ ಮಾಡಿದರು. ಅದರಲ್ಲಿ ಕಚೇರಿಗೆ ಬಂದ ವ್ಯಕ್ತಿಗಳ ಹೆಸರು, ಭೇಟಿಯ ಉದ್ದೇಶ ನಮೂದಿಸಿರಲಿಲ್ಲ. ಜೊತೆಗೆ ಸರಿಯಾಗಿ ಮಾಹಿತಿ ಕೂಡ ಇರಲಿಲ್ಲ. ಇದರಿಂದ ಕೋಪಗೊಂಡ ಅವರು ಕಚೇರಿಗೆ ಯಾರು ಬಂದಿದ್ದರು? ಯಾರನ್ನು ಭೇಟಿ ಮಾಡಲು ಹಾಗೂ ಯಾವ ಉದ್ದೇಶಕ್ಕಾಗಿ ಬಂದಿದ್ದರು ಅಂತಾ ಲಾಗ್‍ಬುಕ್‍ನಲ್ಲಿ ದಾಖಲಾಗಬೇಕು ಎನ್ನುವ ನಿಯಮ ಇದ್ದರೂ ಯಾಕೆ ನಮೂದು ಮಾಡಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಹೊಸ ವ್ಯವಸ್ಥೆಗೆ ಬದಲಾಗಿ ಎಂದು ನಾನು ಅಂದೇ ಹೇಳಿದ್ದೆ. ಆದರೆ ನೀವು ಇನ್ನೂ ಹಳೆ ವ್ಯವಸ್ಥೆಯಲ್ಲೇ ಇದ್ದೀರಿ. ಕಚೇರಿಗೆ ಬಂದ ಎಲ್ಲರೂ ಅಫೀಶಿಯಲ್ ಅಂತಾ ಬರೆದಿದ್ದಾರೆ. ಲಾಗ್ ಬುಕ್‍ನಲ್ಲಿ ಇರುವವರು ಯಾರು ಎಂದು ಪ್ರಶ್ನಿಸಿ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಕೂಡಲೇ ಸಿಸ್ಟಮ್ ಬದಲಾಗಬೇಕು ಎಂದು ಸಿಸಿಬಿ ಕಚೇರಿ ಉಸ್ತುವಾರಿ ಎಸಿಪಿ ಅವರಿಗೆ ಖಡಕ್ ಎಚ್ಚರಿಕೆ ಕೊಟ್ಟರು.
ಬೆಂಗಳೂರು: ತನ್ನ ಸಹೋದ್ಯೋಗಿಯ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆಯವರನ್ನು ಬಂಧಿಸಲಾಗಿದ್ದು, ಎರಡನೆಯ ದಿನವನ್ನೂ ಕೂಡ ಅವರು ಸಿಸಿಬಿ ಕಚೇರಿಯಲ್ಲೇ ಕಳೆದಿದ್ದಾರೆ.
ಶನಿವಾರ ರಾತ್ರಿ 8:30ರ ಸುಮಾರಿಗೆ ರವಿ ಬೆಳೆಗೆರೆ ವಿಚಾರಣೆ ಮುಕ್ತಾಯವಾಗಿದೆ. ನಂತರ ಮನೆಯಿಂದ ತಂದ ಊಟ ಮಾಡಿ, ಕಚೇರಿಯಲ್ಲಿದ್ದ ಬೆಡ್‍ನಲ್ಲಿ ಮಲಗಿದ್ದಾರೆ. ಮಲಗುವ ಮುನ್ನ ಪೆನ್ನು, ಪೇಪರ್ ಪಡೆದು ಇಡೀ ದಿನ ಏನೇನು ನಡೆಯಿತ್ತು ಎಂಬುದರ ಬಗ್ಗೆ ಬರೆದಿದ್ದಾರೆ.
ಇಂದು 9 ಗಂಟೆಯ ಬಳಿಕ ಎಸಿಪಿ ಸುಬ್ರಮಣ್ಯ ನೇತೃತ್ವದಲ್ಲಿ ರವಿಬೆಳಗೆರೆ ವಿಚಾರಣೆ ನಡೆಯಲಿದೆ. ವಿಚಾರಣೆ ಬಳಿಕ ಸ್ಥಳ ಮಹಜರ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ರವಿ ಬೆಳೆಗೆರೆ ಆರೋಗ್ಯದ ಸ್ಥಿತಿ ನೋಡಿಕೊಂಡು ಮಹಜರ್ ಮಾಡಲು ನಿರ್ಧಾರ ಮಾಡಿದ್ದಾರೆ. ರವಿ ಕಚೇರಿ, ಮನೆ ಮತ್ತು ಸುನೀಲ್ ಹೆಗ್ಗರವಳ್ಳಿ ಮನೆ ಬಳಿ ಮಹಜರ್ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ:ರವಿ ಬೆಳಗೆರೆಗೆ ಸಿಗರೇಟ್ ಕೊರತೆಯಂತೆ!
ಇತ್ತ ಪತ್ರಿಕರ್ತ ಸುನೀಲ್ ಹೆಗ್ಗರವಳ್ಳಿ ಕೂಡ ಇಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಲಿದ್ದು, ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳಿಗೆ ಹೇಳಿಕೆ ನೀಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.