Tag: ಸಿಸಿಟಿವಿ ದೃಶ್ಯಾವಳಿ

  • ಸರಸವಾಡುವಾಗಲೇ ಪ್ರಿಯಕರನನ್ನು ಕೊಂದು ಬೆತ್ತಲೆ ತಿರುಗಿದ ಮಹಿಳೆ

    ಸರಸವಾಡುವಾಗಲೇ ಪ್ರಿಯಕರನನ್ನು ಕೊಂದು ಬೆತ್ತಲೆ ತಿರುಗಿದ ಮಹಿಳೆ

    ಹಾಸನ: ಸರಸವಾಡುವಾಗಲೇ ಜಗಳವಾಡಿ ಬೆತ್ತಲೆಯಿದ್ದ ಪ್ರಿಯಕರನನ್ನೇ ಬಡಿದು ಕೊಂದು ಮಹಿಳೆಯೂ ಬೆತ್ತಲೆಯಾಗಿಯೇ ಓಡಿದ ಘಟನೆ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಆರೋಪಿ ಮಹಿಳೆ ಬೆತ್ತಲಾಗಿ ಓಡಾಡಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಡಿಸೆಂಬರ್ 1ರ ರಾತ್ರಿ ಹೊಳೆನರಸೀಪುರದ ಮಳಿಗೆ ಆವರಣದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಆಧಾರದ ಮೇರೆಗೆ ಹೊಳೆನರಸೀಪುರ ಪೊಲೀಸರು ಹತ್ಯೆ ಪ್ರಕರಣ ಬೇಧಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅರಕಲಗೂಡು ತಾಲೂಕಿನ ಬಸವಾಪಟ್ಟಣ ನಿವಾಸಿ ಮಂಜು(43) ಕೊಲೆಯಾದ ದುರ್ದೈವಿ. ಹೊಳೆನರಸೀಪುರದ ವಸಂತಾ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ವಸಂತಾ ಜೊತೆ ಮಂಜು ಅನೈತಿಕ ಸಂಬಂಧವಿತ್ತು. ರಾತ್ರಿ ಒಟ್ಟಿಗೇ ಇಬ್ಬರು ಕುಡಿದು, ತಿಂದು ಸರಸದಲ್ಲಿ ತೊಡಗಿರುವಾಗಲೇ ಮಂಜು ಮೇಲೆ ವಸಂತಾ ಹಲ್ಲೆ ಮಾಡಿ ಕೊಲೆಗೈದಿದ್ದಾಳೆ. ಇದನ್ನೂ ಓದಿ: ಜಾಲಿ ರೈಡ್ ಕರೆದುಕೊಂಡು ಹೋಗಿ ಪತ್ನಿಯನ್ನೇ ಕೊಂದ

    ಇಬ್ಬರೂ ಬೆತ್ತಲೆ ಇರುವಾಗಲೇ ಬಡಿದಾಡಿಕೊಂಡು, ವಂಸತಾ ದೊಣ್ಣೆಯಿಂದ ಮಂಜು ತಲೆಗೆ ಹೊಡೆದು ಬೆತ್ತಲಾಗೇ ಓಡುತ್ತಿರೊ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ಅತಿಯಾಗಿ ರಕ್ತಸ್ರಾವವಾದ ಪರಿಣಾಮ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾಗಿ ಪ್ರೀತಿ ನಿರೂಪಿಸೆಂದ – ನಿರಾಕರಿಸಿದ ಪ್ರೇಯಸಿಯ ಕತ್ತು ಸೀಳಿದ

    ಸೋಮವಾರ ಪುರಸಭೆ ಮಳಿಗೆ ಮುಂದೆ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿಯೇ ಮಂಜು ಮೃತದೇಹ ಪತ್ತೆಯಾಗಿತ್ತು. ಬಳಿಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಹಾಗು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸಿಪಿಐ ಅಶೋಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ವಂಸತಾಳನ್ನು ಬಂಧಿಸಲಾಗಿದೆ.

  • ಕನಸುಗಳನ್ನು ಹೊತ್ತು ಬೆಂಗ್ಳೂರಿಗೆ ಬರ್ತಿದ್ದವ ಶವವಾದ

    ಕನಸುಗಳನ್ನು ಹೊತ್ತು ಬೆಂಗ್ಳೂರಿಗೆ ಬರ್ತಿದ್ದವ ಶವವಾದ

    ಹಾಸನ: ಕನಸುಗಳನ್ನು ಹೊತ್ತು ಹೊಸ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುತ್ತಿದ್ದ ಬಂಟ್ವಾಳದ ಯುವಕ ತಡರಾತ್ರಿ ಹಾಸನದ ಬಳಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯಾವಳಿಗಳು ಬೆಚ್ಚಿಬೀಳಿಸುವಂತಿದೆ.

    ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಅಭಿಷೇಕ್(29) ಅವರಿಗೆ ಬೆಂಗಳೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಅವರು ಭಾನುವಾರ ರಾತ್ರಿ ಮಾಣಿಯಿಂದ ಸಾರಿಗೆ ಬಸ್ ಹತ್ತಿದ್ದರು. ಬೆಳಗ್ಗೆ ಹೊಸ ಕೆಲಸಕ್ಕೆ ಹೋಗುವ ಖುಷಿಯಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಆದರೆ ದುರಾದೃಷ್ಟವಶಾತ್ ತಡರಾತ್ರಿ ಅವರು ಜಿಲ್ಲೆಯ ಚನ್ನರಾಯಪಟ್ಟಣದ ಹಿರೀಸಾವೆ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ಬೆಂಗಳೂರಿನಲ್ಲಿಯೇ ಅಭಿಷೇಕ್ ಕುಟುಂಬ ನೆಲೆಸಿತ್ತು. ಆದರೆ ಸಂಬಂಧಿಯ ಮದುವೆಗೆಂದು ಅಭಿಷೇಕ್ ಹಾಗೂ ಅವರ ಕುಟುಂಬ ಮಾಣಿಗೆ ತೆರೆಳಿತ್ತು. ಹೀಗೆ ಮದುವೆ ಮುಗಿಸಿಕೊಂಡು ಅಭಿಷೇಕ್ ಹಾಗೂ ಅವರ ತಮ್ಮ ಬೆಂಗಳೂರಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ಬಸ್ ಅಪಘಾತಕ್ಕೀಡಾಗಿ ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ತಮ್ಮ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಮಂಗಳೂರು ಕಡೆಯಿಂದ ಬೆಂಗಳೂರಿನ ಕಡೆಗೆ ಸಾರಿಗೆ ಬಸ್ಸು ವೇಗದಿಂದ ಬರುತ್ತಿತ್ತು. ಈ ವೇಳೆ ಹಿರಿಸಾವೆ ಗ್ರಾಮದ ಬಸ್ ನಿಲ್ದಾಣದ ಬಳಿ ಇನ್ನೋವಾ ಕಾರು, ಬಸ್ ಎದುರು ಬಂದು ನಿಂತಿರುವುದನ್ನು ಕಂಡ ಬಸ್ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾರೆ. ಆದರೆ ಸಾಕಷ್ಟು ವೇಗದಲ್ಲಿ ಬರುತ್ತಿದ್ದ ಬಸ್ ಬ್ರೇಕ್ ಹಾಕಿದ ರಭಸಕ್ಕೆ ಒಮ್ಮೆಲೆ ಪಲ್ಟಿಯಾಗಿದೆ. ಅಪಘಾತದ ಭೀಕರತೆಯ ಸಿಸಿಟಿವಿ ದೃಶ್ಯಾವಳಿಗಳು ಭಯಹುಟ್ಟಿಸುವಂತಿದೆ.

    ತಡರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಒಟ್ಟು 46 ಮಂದಿ ಪ್ರಯಾಣಿಕರು ಬಸ್ಸಿನಲ್ಲಿ ಇದ್ದರು. ಸದ್ಯ ಗಾಯಾಳುಗಳನ್ನು ಚಿಕಿತ್ಸೆ ನೀಡಿ ಪರ್ಯಾಯ ವ್ಯವಸ್ಥೆಯೊಂದಿಗೆ ಕಳಹಿಸಿಕೊಡಲಾಗಿದೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಅಪಾರ್ಟ್‌ಮೆಂಟ್‌ನಿಂದ ಬಿದ್ದು ಅಮೆರಿಕ ಮೂಲದ ಯುವತಿ ಸಾವು – ಬೀಳೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಅಪಾರ್ಟ್‌ಮೆಂಟ್‌ನಿಂದ ಬಿದ್ದು ಅಮೆರಿಕ ಮೂಲದ ಯುವತಿ ಸಾವು – ಬೀಳೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೆಂಗಳೂರು: ಕುಡಿದ ಅಮಲಿನಲ್ಲಿ  ಅಪಾರ್ಟ್‌ಮೆಂಟ್‌  ಮೇಲಿಂದ ಬಿದ್ದು ಕೊಲಂಬಿಯಾ ಮೂಲದ ಯುವತಿ ಸಾವನ್ನಪ್ಪಿರುವ ಘಟನೆ ಜೀವನ್ ಭೀಮಾ ನಗರದಲ್ಲಿ ಭಾನುವಾರದಂದು ನಡೆದಿದೆ.

    ಕರೀನಾ ಡೇನಿಯಲ್ (25) ಮೃತ ದುರ್ದೈವಿ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದ ಕರೀನಾ, ಇಂದಿರಾನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸ್ನೇಹಿತೆ ಮರಿಯಾ ಜೊತೆ ಜೆ.ಬಿ ನಗರದ  ಅಪಾರ್ಟ್‌ಮೆಂಟ್‌ ವೊಂದರಲ್ಲಿ ವಾಸವಾಗಿದ್ದಳು.

    ಶನಿವಾರ ಕರೀನಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ತನ್ನ ಸ್ನೇಹಿತೆ ಮರಿಯಾ ಜೊತೆಗೆ ಕರೀನಾ ಪಾರ್ಟಿಗೆ ಹೋಗಿದ್ದಳು. ಪಾರ್ಟಿ ಮುಗಿಸಿಕೊಂಡು ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ  ಅಪಾರ್ಟ್‌ಮೆಂಟ್‌ ಗೆ ಇಬ್ಬರು ವಾಪಾಸಾಗಿದ್ದಾರೆ. ಈ ವೇಳೆ ಸಿಗರೇಟ್ ಸೇದಲು ಬಾಲ್ಕನಿಗೆ ಹೋದಾಗ ಮೊದಲೇ ಕುಡಿದ ಅಮಲಿನಲ್ಲಿದ್ದ ಕರೀನಾ ಬಾಲ್ಕನಿ ಮೇಲಿನಿಂದ ಜಾರಿ ಬಿದ್ದು ಮೃತಪಟ್ಟಿದ್ದಾಳೆ.

    ಯುವತಿ ಆಕಸ್ಮಿಕವಾಗಿ ಬಿದ್ದಿದ್ದಾ ಅಥವಾ ಆತ್ಮಹತ್ಯೆ ಮಾಡಿಕೊಂಡಿರುವುದಾ ಎಂಬುದು ತಿಳಿದು ಬಂದಿಲ್ಲ. ಆದರೆ  ಅಪಾರ್ಟ್‌ಮೆಂಟ್‌  ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಯುವತಿ ಬೀಳುತ್ತಿರುವ ದೃಶ್ಯ ಸೆರೆಯಾಗಿದೆ. ಜೆ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಕರೀನಾ ಸಾವಿನ ಸುದ್ದಿಯನ್ನು ರಾಯಭಾರ ಕಚೇರಿಗೆ ನೀಡಲಾಗಿದ್ದು, ರಾಯಭಾರ ಕಚೇರಿಯ ಅಧಿಕಾರಿಗಳ ಮೂಲಕ ಕರೀನಾ ಕುಟುಂಬಸ್ಥರಿಗೆ ಸಾವಿನ ಸುದ್ದಿಯನ್ನು ತಲುಪಿಸಲಾಗಿದೆ. ವಿದೇಶಿ ಪ್ರಜೆಗಳು ಮೃತಪಟ್ಟಲ್ಲಿ ಕುಟುಂಬ ಸದಸ್ಯರ ಸಮ್ಮುಖ ಮತ್ತು ರಾಯಭಾರ ಕಚೇರಿ ಸಿಬ್ಬಂದಿ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎನ್ನುವ ನಿಯಮವಿದೆ. ಹೀಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    https://www.youtube.com/watch?v=gGoguigXi1E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹಾಡಹಗಲೇ ಸರಗಳ್ಳರ ಅಟ್ಟಹಾಸ-ಸರ ಕಿತ್ಕೊಂಡು ಮಹಿಳೆಯಿಂದ ಪೊರಕೆ ಏಟು ತಿನ್ನುತ್ತಲೇ ಎಸ್ಕೇಪ್

    ಹಾಡಹಗಲೇ ಸರಗಳ್ಳರ ಅಟ್ಟಹಾಸ-ಸರ ಕಿತ್ಕೊಂಡು ಮಹಿಳೆಯಿಂದ ಪೊರಕೆ ಏಟು ತಿನ್ನುತ್ತಲೇ ಎಸ್ಕೇಪ್

    ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಬ್ಬರು ಕಳ್ಳರು ಹಾಡಹಗಲೇ ಮಹಿಳೆಯ ಕತ್ತಿನಿಂದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಮಹಿಳೆ ತನ್ನ ಕೈಯಲ್ಲಿದ್ದ ಪೊರೆಕೆಯಿಂದಲೇ ಬಾರಿಸಿದ್ದು, ಕಳ್ಳರಿಬ್ಬರು ಬೈಕಿನಲ್ಲಿ ಎಸ್ಕೇಪ್ ಆಗಿದ್ದಾರೆ.

    ಸಿದ್ದಗಂಗಮ್ಮ ಎಂಬವರೇ ಸರ ಕಳೆದುಕೊಂಡ ಮಹಿಳೆ. ನವೆಂಬರ್ 2ರಂದು ಕೆರೆಗುಡ್ಡದಹಳ್ಳಿಯ ಲೇಕ್ ವ್ಯೂವ್ ಲೇಔಟ್‍ನಲ್ಲಿ ಸರಗಳ್ಳತನ ನಡೆದಿದ್ದು, ಈ ದೃಶ್ಯಾವಳಿಗಳು ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಿದ್ದಗಂಗಮ್ಮ ಅವರು ಬೆಳಗಿನ ಜಾವ ಮನೆಯ ಮುಂದೆ ಕಸ ಗುಡಿಸುತ್ತಿದ್ದಾಗ ಸರಗಳ್ಳತನ ನಡೆದಿದೆ.

    ಕಳ್ಳತನ ನಡೆದಿದ್ದು ಹೇಗೆ?: ಎಂದಿನಂತೆ ಬೆಳಗಿನ ಜಾವ ಸಿದ್ದಗಂಗಮ್ಮ ಅವರು ಮನೆಯ ಮುಂದೆ ಕಸ ಬಳೆದಿದ್ದಾರೆ. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಸ್ವಲ್ಪ ಸಮಯ ನಿಂತು ಸುತ್ತಮುತ್ತ ನೋಡಿದ್ದಾರೆ. ಒಬ್ಬ ಬೈಕಿನಲ್ಲಿಯೇ ಕೂತಿದ್ದು, ಹಿಂಬದಿ ಸವಾರ ಕೆಳಗಡೆ ಇಳಿದಿದ್ದಾನೆ. ಇನ್ನೇನು ಸಿದ್ದಗಂಗಮ್ಮರ ಸರ ಕಿತ್ತುಕೊಳ್ಳುವಷ್ಟರಲ್ಲಿ ಅಲ್ಲಿಗೆ ಇನ್ನೊಬ್ಬ ಮಹಿಳೆ ಬಂದಿದ್ದಾರೆ. ಕೂಡಲೇ ಸರಗಳ್ಳ ತನ್ನ ಹಿಂದೆ ಸರಿದಿದ್ದಾನೆ. ಬಂದ ಮಹಿಳೆ ತಮ್ಮ ಮನೆಯತ್ತ ಸಾಗಿದ ತಕ್ಷಣ, ಹಿಂಬದಿ ಸವಾರ ಏನೋ ಕೇಳುವ ನೆಪದಲ್ಲಿ ಸಿದ್ದಗಂಗಮ್ಮರ ಹತ್ತಿರ ಬಂದಿದ್ದಾನೆ. ಮಾತನಾಡುತ್ತಾ ಕ್ಷಣಾರ್ಧದಲ್ಲಿ ಕತ್ತಿನಿಂದ ಸರ ಕಿತ್ತುಕೊಂಡು ಬೈಕಿನಲ್ಲಿ ಮಿಂಚಿನಂತೆ ಇಬ್ಬರೂ ಮಾಯವಾಗಿದ್ದಾರೆ.

    ಸಿದ್ದಗಂಗಮ್ಮ ತಮ್ಮ ಕೈಯಲ್ಲಿದ್ದ ಪೊರಕೆಯಿಂದ ಕಳ್ಳನತ್ತ ಎಸೆದಿದ್ದಾರೆ. ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದು, ಹಿಂಬದಿ ಸವಾರ ಹೆಲ್ಮೆಟ್ ಹಾಕಿಲ್ಲ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

    https://youtu.be/YWnCJlIVAi8

  • ಎಸ್‍ಐ ನಯಾಜ್ ಮೇಲೆ ಲಾಂಗು ಮಚ್ಚಿನಿಂದ ಹಲ್ಲೆ – ರೌಡಿ ನದೀಮ್ ಗ್ಯಾಂಗ್‍ನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

    ಎಸ್‍ಐ ನಯಾಜ್ ಮೇಲೆ ಲಾಂಗು ಮಚ್ಚಿನಿಂದ ಹಲ್ಲೆ – ರೌಡಿ ನದೀಮ್ ಗ್ಯಾಂಗ್‍ನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

    ಬೆಂಗಳೂರು: ನಗರದ ಡಿಜಿ ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮೇಲೆ ರೌಡಿಗಳು ಮಚ್ಚು ಬೀಸಿದ ಪ್ರಕರಣದ ಸಿಸಿಟಿವಿ ದೃಶ್ಯ ಜನರನ್ನ ಬೆಚ್ಚಿ ಬೀಳಿಸಿದೆ.

    ಏರಿಯಾದಲ್ಲಿ ರೌಡಿಗಳು ಮಚ್ಚು ಹಿಡಿದು ಓಡೋ ದೃಶ್ಯಗಳು ಜನರನ್ನ ಭಯಭೀತಗೊಳಿಸಿದೆ. ಕಳೆದ ಗುರವಾರ ಸಂಜೆ ಡಿಜಿ ಹಳ್ಳಿಯ ಶಾಂಪುರ ರಸ್ತೆಯಲ್ಲಿ ರೌಡಿ ಶೀಟರ್ ಉಮರ್‍ನನ್ನ ಕೊಲೆ ಮಾಡಲು ನದೀಮ್ ಗ್ಯಾಂಗ್ ಅಟ್ಟಿಸಿಕೊಂಡು ಹೋಗ್ತಿತ್ತು. ಇದನ್ನ ನೋಡಿದ ಡಿಜಿ ಹಳ್ಳಿಯ ಸಬ್ ಇನ್ಸ್ ಪೆಕ್ಟರ್ ನಯಾಜ್ ಆರೋಪಿಗಳನ್ನ ಹಿಡಿಯಲು, ಕೊಲೆ ಮಾಡೋದನ್ನ ತಡೆಯಲು ಗ್ಯಾಂಗ್‍ನ ಹಿಂದೆ ಓಡಿದ್ದಾರೆ. ಕೊನೆಗೆ ನದೀಮ್ ಗ್ಯಾಂಗ್ ಸಬ್ ಇನ್ಸ್ ಪೆಕ್ಟರ್ ನಯಾಜ್ ಮೇಲೆಯೇ ಮುಗಿಬಿದ್ದು, ಮಚ್ಚಿನಿಂದ ನಯಾಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

    ರೌಡಿಗಳು ಪೊಲೀಸ್ರ ಮೇಲೆಯೇ ಹೀಗೆ ಮಚ್ಚು ಬೀಸ್ತಾರೆ ಅಂದ್ರೆ ಸಾಮಾನ್ಯ ಜನರ ಗತಿ ಏನು ಅನ್ನೋ ಭಯದಲ್ಲಿ ಜನರು ಬದುಕ್ತಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಎಸ್‍ಐ ಚೇತರಿಸಿಕೊಳ್ತಿದ್ದಾರೆ.

    ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿ, ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಸಬ್ ಇನ್ಸ್ ಪೆಕ್ಟರ್ ನಯಾಜ್ ಹಾಗು ಪೇದೆಗಳು ಸ್ಥಳಕ್ಕೆ ಹೋಗಿದ್ರು. ನಯಾಜ್ ಮಫ್ತಿಯಲ್ಲಿದ್ರು. ಆರೋಪಿಗಳಿಗೆ ಪೊಲೀಸರು ಅಂತಾ ಗೊತ್ತಾಗಿಲ್ಲ. ಗಂಭೀರವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಘಟನೆಯ ಸಂದರ್ಭದಲ್ಲಿ ಸಬ್ ಇನ್ಸ್ ಪೆಕ್ಟರ್ ರಿವಾಲ್ವಾರ್ ಇಟ್ಟುಕೊಂಡಿರಲಿಲ್ಲ. ಈ ಬಗ್ಗೆಯೂ ಸಹ ಆಡಳಿತಾತ್ಮಕವಾಗಿ ತನಿಖೆ ನಡೆಸ್ತಿದ್ದೇವೆ ಅಂತ ತಿಳಿಸಿದ್ರು.

    ಸಾರ್ವಜನಿಕ ಸ್ಥಳದಲ್ಲಿ ಲಾಂಗು ಮಚ್ಚು ಹಿಡಿದು ಓಡಾಡುವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಈ ಬಗ್ಗೆ ಜನರು ಭಯ ಪಡುವ ಅವಶ್ಯಕತೆಯಿಲ್ಲ. ಪ್ರಕರಣದ ಆರೋಪಿಗಳನ್ನ ಬಂಧಿಸಲು ಈಗಾಗಲೇ ಬಾಣಸವಾಡಿ ಎಸಿಪಿ ಯವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈಗಿನ ಘಟನೆ ಬಗ್ಗೆ ಯಾರೂ ಭಯ ಬೀಳೋದು ಬೇಡ. ನಾವು ಈಗಾಗಲೇ ಈ ಪ್ರಕರಣವನ್ನ ಗಂಭೀರವಾಗಿ ತಗೆದುಕೊಂಡಿದ್ದೇವೆ ಅಂತ ಹೇಳಿದ್ರು.

    https://www.youtube.com/watch?v=JaZLrxeCuHw&feature=youtu.be