Tag: ಸಿಸಿಐ

  • ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ

    ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ

    ನವದೆಹಲಿ: ಆಪಲ್‌ ಐಫೋನ್‌ (Apple iphone) ದೇಶದ ಸ್ಪರ್ಧಾ ಕಾನೂನುಗಳನ್ನು ಉಲ್ಲಂಘಿಸಿರುವುದು ಭಾರತೀಯ ಸ್ಪರ್ಧಾತ್ಮಕ ಆಯೋಗ(CCI)) ತನಿಖೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ.

    ಸಿಸಿಐ ಕಳೆದ ವಾರ ಆಪಲ್ ಮತ್ತು ಆಪಲ್ ಇಂಟರ್‌ನ್ಯಾಶನಲ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್‌ನೊಂದಿಗೆ ತನ್ನ ಗೌಪ್ಯ ವರದಿಯನ್ನು ಹಂಚಿಕೊಂಡಿದ್ದು ಪ್ರತಿಕ್ರಿಯೆ ನೀಡಲು ಅವಕಾಶ ಮಾಡಿಕೊಟ್ಟಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

    ಇಲ್ಲಿಯವರೆಗೆ ಸಿಸಿಐ ಕಡೆಯಿಂದ ಅಧಿಕೃತವಾಗಿ ಐಫೋನ್‌ ಕಾನೂನು ಉಲ್ಲಂಘಿಸಿದ ಬಗ್ಗೆ ಯಾವುದೇ ವಿಚಾರ ಪ್ರಕಟವಾಗಿಲ್ಲ.

    ಐಫೋನ್‌ ಮೇಲಿರುವ ಆರೋಪ ಏನು?
    ಮುಖ್ಯವಾಗಿ ಡಿಜಿಟಲ್‌ ಕಂಟೆಂಟ್‌ಗೆ ಹಣ ಪಾವತಿಸಿ ಸೇವೆ ಪಡೆದುಕೊಳ್ಳುವ In-App Purchase (IAP) ವಿಷಯಯಕ್ಕೆ ಸಿಸಿಐ ತಕರಾರು ಎತ್ತಿದೆ. ಅಪ್ಲಿಕೇಶನ್‌ನಲ್ಲಿನ ಹೆಚ್ಚುವರಿ ವೈಶಿಷ್ಟ್ಯ ಅಥವಾ ಸೇವೆಯ ಖರೀದಿಗೆ 30% ವರೆಗೆ ಶುಲ್ಕ ಹೋಗುತ್ತಿದೆ. ಇದು ಭಾರತದ ಸ್ಪರ್ಧೆಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಪರಿಗಣಿಸಿದೆ.

    ಬಳಕೆದಾರರು ಅಪ್ಲಿಕೇಶನ್‌ ಖರೀದಿಯನ್ನು ಮಾಡಲು ನಿರ್ಧರಿಸಿದಾಗ ಈ ಆಪ್‌ ಏನನ್ನು ಒಳಗೊಂಡಿದೆ ಎಂಬುದರ ವಿವರವಾದ ವಿವರಣೆಯನ್ನು ಅವರಿಗೆ ನೀಡಲಾಗುತ್ತದೆ. ಈ ಹಂತದಲ್ಲಿ ಬಳಕೆದಾರರು ಖರೀದಿಯೊಂದಿಗೆ ಮುಂದುವರಿಯಬಹುದು ಅಥವಾ ಖರೀದಿಸದೆಯೇ ಅಪ್ಲಿಕೇಶನ್‌ಗೆ ಹಿಂತಿರುಗಬಹುದು. ಎಲ್ಲಾ ಪಾವತಿಗಳನ್ನು ಅಪ್ಲಿಕೇಶನ್ ಸ್ಟೋರ್‌ ಮೂಲಕವೇ ಮಾಡಲಾಗುತ್ತದೆ. IAP ಗೆ ಒಪ್ಪಿಗೆ ನೀಡಿದರೆ ಹೆಚ್ಚುವರಿ ವೈಶಿಷ್ಟ್ಯಗಳು, ವಿಷಯ ಅಥವಾ ಸೇವೆಗಳು ಸಿಗುತ್ತದೆ.

    2021 ರಲ್ಲಿ ಸಿಸಿಐ ತನಿಖೆ ಆರಂಭಿಸಿದಾಗ ಗ್ರಾಹಕರು ಡೌನ್‌ಲೋಡ್ ಮಾಡಲು ಮತ್ತು ಡಿಜಿಟಲ್ ವಿಷಯವನ್ನು ಖರೀದಿಸಲು ಸುರಕ್ಷಿತ ವೇದಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಆಪಲ್‌ ಸಮರ್ಥನೆ ನೀಡಿತ್ತು. ಇದನ್ನೂ ಓದಿ: ಬೆಂಗಳೂರಿನ ಟೆಕ್ಕಿಗಳ Work Culture ಹೊಗಳಿದ ಅಮೆಜಾನ್‌ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ

    ದಂಡ ವಿಧಿಸಿದ್ದ ಯುರೋಪಿಯನ್‌ ಯೂನಿಯನ್‌
    ಈ ಹಿಂದೆ ಐಫೋನ್‌ ಅಮೆರಿಕದ ಆಪಲ್‌ ಕಂಪನಿಗೆ ಯೂರೋಪಿಯನ್‌ ಯೂನಿಯನ್‌ನ (European Union) ಆಂಟಿಟ್ರಸ್ಟ್ ನಿಯಂತ್ರಕ ಭರ್ಜರಿ 1.84 ಬಿಲಿಯನ್‌ ಯುರೋ (ಅಂದಾಜು 16,584 ಕೋಟಿ ರೂ.) ದಂಡವನ್ನು ವಿಧಿಸಿತ್ತು.

    ಸ್ಪರ್ಧಾತ್ಮಕ ನಿಯಮ ಉಲ್ಲಂಘಿಸಿ ಆ್ಯಪಲ್‌ ತನ್ನ ಉತ್ಪನ್ನಗಳಲ್ಲಿ ಸಂಗೀತ ಸೇವೆ ನೀಡುವ ಹಲವು ಕಂಪನಿಗಳ ಆಪ್‌ಗಳ ಸೇವೆ ನಿರ್ಬಂಧ ಹೇರಿ ತಾನು ಸೂಚಿಸಿದ ಉತ್ಪನ್ನಗಳನ್ನು ಮಾತ್ರ ಗ್ರಾಹಕರು ಬಳಸುವಂತೆ ಮಾಡಿದೆ.ಇದು ಅನಾರೋಗ್ಯಕರ ಸ್ಪರ್ಧೆಗೆ ಉದಾಹರಣೆ ಎಂದು ಅಭಿಪ್ರಾಯಪಟ್ಟ ಒಕ್ಕೂಟ ಭಾರೀ ಪ್ರಮಾಣದ ದಂಡ ವಿಧಿಸಿತ್ತು.

    ಒಂದು ದಶಕದವರೆಗೆ, ಆಪ್ ಸ್ಟೋರ್ ಮೂಲಕ ಸಂಗೀತ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ವಿತರಣೆಗಾಗಿ ಆಪಲ್ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ಯುರೋಪಿಯನ್‌ ಯೂನಿಯನ್‌ ಆಂಟಿಟ್ರಸ್ಟ್ ನಿಯಮಗಳ ಅಡಿಯಲ್ಲಿ ಈ ರೀತಿ ನಿರ್ಬಂಧ ಹೇರುವುದು ಕಾನೂನುಬಾಹಿರ ಎಂದು ಒಕ್ಕೂಟ ಹೇಳಿತ್ತು.

    ಐದು ವರ್ಷದ ಹಿಂದೆ ಡಿಜಿಟಲ್‌ ಮ್ಯೂಸಿಕ್‌ (Digital Music) ಸೇವೆ ನೀಡುವ ಸ್ಪಾಟಿಫೈ (Spotify) ನೀಡಿದ ದೂರಿನ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಒಕ್ಕೂಟ ಈಗ ಅಂತಿಮ ನಿರ್ಧಾರ ಪ್ರಕಟಿಸಿತ್ತು.

    ಯಾವುದೇ ಕಂಪನಿಗೆ ಗ್ರಾಹಕರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಗ್ರಾಹಕನಿಗೆ ಏನು ಬೇಕೋ ಅದನ್ನು ಪಡೆಯಲು ಸ್ವಾತಂತ್ರ್ಯ ನೀಡಬೇಕು. ಬೇರೆ ಸೇವೆ ಬಳಸಲು ಅವಕಾಶ ನೀಡದೇ ತಾನು ನೀಡಿದ್ದನ್ನೇ ಬಳಸಬೇಕು ಎಂಬ ನೀತಿಯನ್ನು ಅಳವಡಿಸಿದವರಿಗೆ ಈ ತೀರ್ಪು ಪ್ರಬಲ ಸಂದೇಶವನ್ನು ಕಳುಹಿಸಿದೆ ಎಂದು ಸ್ಪಾಟಿಫೈ ತೀರ್ಪನ್ನು ಸ್ವಾಗತಿಸಿ ಅಭಿಪ್ರಾಯ ವ್ಯಕ್ತಪಡಿಸಿತ್ತು.

     

  • 1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ

    1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ

    ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ವಿಧಿಸಿದ 1,337 ಕೋಟಿ ರೂ. ದಂಡದ ಪೈಕಿ ಶೇ.10 ರಷ್ಟು ಮೊತ್ತವನ್ನು ಠೇವಣಿ ಇಡುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (NCALT) ಗೂಗಲ್‌ಗೆ ನಿರ್ದೇಶಿಸಿದೆ.

    ಸಿಸಿಐ ಆದೇಶವನ್ನು ಪ್ರಶ್ನಿಸಿ ಗೂಗಲ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಎನ್‌ಸಿಎಲ್‌ಟಿ,  2022ರ ಅಕ್ಟೋಬರ್‌ನಲ್ಲಿ  ಸಿಸಿಐ ನೀಡಿದ ಆದೇಶಕ್ಕೆ ಯಾವುದೇ ತಡೆ ನೀಡುವುದಿಲ್ಲ. ಗೂಗಲ್‌(Google) ಶೇ.10 ರಷ್ಟು ದಂಡವನ್ನು ಪಾವತಿಸಬೇಕು ಎಂದು ಸೂಚಿಸಿ  ಮುಂದಿನ ವಿಚಾರಣೆಯನ್ನು ಫೆ.13 ರಂದು ನಡೆಸುವುದಾಗಿ ತಿಳಿಸಿದೆ.

    ಗೂಗಲ್‌ ಕಂಪನಿಯ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಸಿಂಗ್ವಿ, ಯುರೋಪಿಯನ್‌ ಆಯೋಗ ನೀಡಿದ ಆದೇಶವನ್ನು ಕಾಪಿ ಪೇಸ್ಟ್‌ ಮಾಡಿ ಸಿಸಿಐ ಆದೇಶ ಪ್ರಕಟಿಸಿದೆ ಎಂದು ವಾದಿಸಿದರು. ಆಂಡ್ರಾಯ್ಡ್‌ ಮೊಬೈಲ್ ಸಾಧನ ತಯಾರಕರ ಮೇಲೆ ಕಾನೂನುಬಾಹಿರ ನಿರ್ಬಂಧಗಳನ್ನು ವಿಧಿಸಿದ ಆರೋಪಕ್ಕಾಗಿ ಯುರೋಪಿಯನ್‌ ಆಯೋಗ ಗೂಗಲ್‌ ಮೇಲೇ 4.1 ಶತಕೋಟಿ ಯುರೋಗಳಷ್ಟು ದಂಡ ವಿಧಿಸಿತ್ತು. ಇದನ್ನೂ ಓದಿ: ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

    ಸಿಸಿಐ ದಂಡ ಹಾಕಿದ್ದು ಯಾಕೆ?
    ಆಂಡ್ರಾಯ್ಡ್‌ ಪ್ಲೇಸ್ಟೋರ್‌ಗೆ(Android Play Store) ಸಂಬಂಧಿಸಿದ ನೀತಿಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಿಸಿಐ ಗೂಗಲ್‌ ದಂಡ ವಿಧಿಸಿತ್ತು.

    ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಆ್ಯಪ್‌ ಸಿಗಬೇಕಾದರೆ ಅದು ‘ಪ್ಲೇ ಸ್ಟೋರ್‌’ನಲ್ಲಿ ಇರಬೇಕಾಗುತ್ತದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಕೆಲವು ಉಚಿತವಾಗಿ ಲಭ್ಯವಾದರೆ ಇನ್ನು ಕೆಲವು ಹಣ ಕೊಟ್ಟು ಖರೀದಿಸಬೇಕಾಗುತ್ತದೆ.

    ಪ್ಲೇಸ್ಟೋರ್‌ನಲ್ಲಿ ಪಾವತಿ ಮಾಡಿದ ಆಪ್‌ಗಳಿಗಾಗಿ ಗೂಗಲ್ ತನ್ನದೇ ಆದ ಬಿಲ್ಲಿಂಗ್ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಆದರೆ ಇದು ಕಾನೂನು ಸಮ್ಮತವಲ್ಲದ ನಡವಳಿಕೆ ಎಂದು ಸಿಸಿಐಯಲ್ಲಿ ಹಲವು ದೂರು ದಾಖಲಾಗಿತ್ತು

    ಹಣ ನೀಡಿ ಖರೀದಿಸಬೇಕಿರುವ ಆ್ಯಪ್‌ಗಳು ಆ್ಯಪ್‌ ಸ್ಟೋರ್‌ನಲ್ಲಿ ಇರಬೇಕಾದರೆ ಆ್ಯಪ್‌ ಡೆವಲರ್‌ಗಳು ಗೂಗಲ್‌ ಪ್ಲೇ ಬಿಲ್ಲಿಂಗ್ ವ್ಯವಸ್ಥೆಯ ಭಾಗವಾಗಿರಲೇಬೇಕು ಎಂಬ ನಿಯಮ ನ್ಯಾಯಯುತವಲ್ಲ. ಈ ಎಲ್ಲಾ ಅನ್ಯಾಯದ ವ್ಯಾಪಾರದ ಅಭ್ಯಾಸಗಳನ್ನು ನಿಲ್ಲಿಸಬೇಕು. ಆ್ಯಪ್ ಖರೀದಿ ಪ್ರಕ್ರಿಯೆಗೆ ಬೇರೆ ಬಿಲ್ಲಿಂಗ್ ಸೇವೆಗಳನ್ನು ಬಳಸಲು ಆ್ಯಪ್‌ ಡೆವಲಪರ್‌ಗಳಿಗೆ ಅವಕಾಶ ನೀಡಬೇಕು ಸಿಸಿಐ ಸೂಚಿಸಿತ್ತು.

    ಪ್ಲೇ ಸ್ಟೋರ್, ಗೂಗಲ್ ಸರ್ಚ್, ಗೂಗಲ್ ಕ್ರೋಮ್, ಯೂಟ್ಯೂಬ್‌ನಂತಹ ಗೂಗಲ್ ಅಭಿವೃದ್ಧಿ ಪಡಿಸಿದ ವಿವಿಧ ಅಪ್ಲಿಕೇಶನ್‌ಗಳನ್ನು ಸಿಸಿಐ ಪರಿಶೀಲನೆ ನಡೆಸಿತ್ತು. ಪರಿಶೀಲನೆಯ ಮೌಲ್ಯಮಾಪನದ ಆಧಾರದ ಮೇಲೆ ಎಲ್ಲಾ ಸಂಬಂಧಿತ ಮಾರುಕಟ್ಟೆಗಳಲ್ಲಿ ಗೂಗಲ್‌ ಪ್ರಬಲವಾಗಿದೆ ಎಂದು ಸಿಸಿಐ ಹೇಳಿತ್ತು.

    ಈ ಹಿಂದೆ ಆನ್‍ಲೈನ್ ಜಾಹಿರಾತುಗಳ ಪ್ರದರ್ಶನಕ್ಕೆ ತನ್ನ ಮಾರುಕಟ್ಟೆಯನ್ನು ದುರುಪಯೋಗ ಪಡಿಸಿದ್ದಕ್ಕೆ ಗೂಗಲ್ ಕಂಪನಿ ಮೇಲೆ ಫ್ರಾನ್ಸ್ ಸ್ಪರ್ಧಾ ನಿಯಂತ್ರಕವು 220 ದಶಲಕ್ಷ ಯೂರೋ(ಅಂದಾಜು 1948 ಕೋಟಿ ರೂ.) ದಂಡವನ್ನು ವಿಧಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • 5 ದಿನದಲ್ಲಿ ಮತ್ತೆ ಗೂಗಲ್‌ಗೆ ಭಾರತ ದಂಡ – 936 ಕೋಟಿ ಫೈನ್ ಹಾಕಿದ ಸಿಸಿಐ

    5 ದಿನದಲ್ಲಿ ಮತ್ತೆ ಗೂಗಲ್‌ಗೆ ಭಾರತ ದಂಡ – 936 ಕೋಟಿ ಫೈನ್ ಹಾಕಿದ ಸಿಸಿಐ

    ನವದೆಹಲಿ: 5 ದಿನಗಳ ಹಿಂದಷ್ಟೇ ಭಾರತೀಯ ಸ್ಪರ್ಧಾ ಆಯೋಗ (CCI) ಟೆಕ್ ದೈತ್ಯ ಗೂಗಲ್‌ಗೆ (Google) ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ 1,337 ಕೋಟಿ ರೂ. ದಂಡವನ್ನು (Fine) ವಿಧಿಸಿತ್ತು. ಇದೀಗ ಸಿಸಿಐ ಇಂತಹುದೇ ಕಾರಣವನ್ನು ನೀಡಿ ಗೂಗಲ್‌ಗೆ ಮತ್ತೊಮ್ಮೆ ಭಾರೀ ಮೊತ್ತದ ದಂಡವನ್ನು ವಿಧಿಸಿದೆ.

    ಪ್ಲೇ ಸ್ಟೋರ್ ನೀತಿಗಳಿಗೆ ಸಂಬಂಧಿಸಿದಂತೆ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಮಂಗಳವಾರ ಸಿಸಿಐ ಬರೋಬ್ಬರಿ 936.44 ಕೋಟಿ ರೂ. ದಂಡವನ್ನು ವಿಧಿಸಿದೆ. ಇದು 1 ವಾರದೊಳಗೆ ಗೂಗಲ್‌ಗೆ ಸಿಸಿಐ ವಿಧಿಸಿರುವ 2ನೇ ದಂಡವಾಗಿದೆ.

    ಸ್ಮಾರ್ಟ್ ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳು ಹಾಗೂ ಪ್ರೋಗ್ರಾಂಗಳನ್ನು ಚಲಾಯಿಸಲು ಆಪರೇಟಿಂಗ್ ಸಿಸ್ಟಮ್‌ನ (OS) ಅಗತ್ಯವಿರುತ್ತದೆ. ಗೂಗಲ್ 2005ರಲ್ಲಿ ಸ್ವಾಧೀನಪಡಿಸಿಕೊಂಡ ಆಂಡ್ರಾಯ್ಡ್ (Android) ಕೂಡಾ ಅಂತಹುದೇ ಒಂದು ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಇದೀಗ ಸಿಸಿಐ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನ ಪರವಾನಗಿಗೆ ಸಂಬಂಧಿಸಿದಂತೆ ಗೂಗಲ್‌ನ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿದೆ. ಪ್ಲೇ ಸ್ಟೋರ್, ಗೂಗಲ್ ಸರ್ಚ್, ಗೂಗಲ್ ಕ್ರೋಮ್, ಯೂಟ್ಯೂಬ್‌ನಂತಹ ಗೂಗಲ್ ಸ್ವಾಮ್ಯದ ವಿವಿಧ ಮೊಬೈಲ್ ಅಪ್ಲಿಕೇಶನ್‌ಗಳಲ್ಲೂ ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ವಿಶ್ವದ ಅತ್ಯಂತ ಕೊಳಕು ಮನುಷ್ಯ ನಿಧನ

    ಪ್ಲೇಸ್ಟೋರ್‌ನಲ್ಲಿ ಪಾವತಿ ಮಾಡಿದ ಆಪ್‌ಗಳಿಗಾಗಿ ಗೂಗಲ್ ತನ್ನದೇ ಆದ ಬಿಲ್ಲಿಂಗ್ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಆದರೆ ಇದು ಕಾನೂನು ಸಮ್ಮತವಲ್ಲದ ನಡವಳಿಕೆ. ಈ ಎಲ್ಲಾ ಅನ್ಯಾಯದ ವ್ಯಾಪಾರದ ಅಭ್ಯಾಸಗಳನ್ನು ನಿಲ್ಲಿಸುವಂತೆ ಹಾಗೂ ನಿರ್ದಿಷ್ಟ ಸಮಯದೊಳಗೆ ತನ್ನ ನಡಾವಳಿಯನ್ನು ಸರಿಪಡಿಸಿಕೊಳ್ಳುವಂತೆ ಗೂಗಲ್‌ಗೆ ಸಿಸಿಐ ನಿರ್ದೇಶಿಸಿದೆ.

    ಆದರೆ ಗೂಗಲ್ ದಂಡ ವಿಧಿಸಿರುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕ್ರಮದಿಂದ ಭಾರತದ ಗ್ರಾಹಕರು ಹಾಗೂ ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕಂಪನಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಮೌಢ್ಯಕ್ಕೆ ಸೆಡ್ಡು – ಗ್ರಹಣ ವೇಳೆ ಬಾಳೆಹಣ್ಣು, ಚುರುಮುರಿ ಸೇವಿಸಿದ ಜನ

    Live Tv
    [brid partner=56869869 player=32851 video=960834 autoplay=true]

  • ಭಾರತದ ಸ್ಪರ್ಧಾತ್ಮಕ ಆಯೋಗದಿಂದ ಗೂಗಲ್‌ಗೆ 1,337 ಕೋಟಿ ದಂಡ

    ಭಾರತದ ಸ್ಪರ್ಧಾತ್ಮಕ ಆಯೋಗದಿಂದ ಗೂಗಲ್‌ಗೆ 1,337 ಕೋಟಿ ದಂಡ

    ನವದೆಹಲಿ: ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಆಲ್ಫಾಬೆಟ್ ಇಂಕ್‌ನ ಗೂಗಲ್‌ಗೆ (Google) ಭಾರತದ ಸ್ಪರ್ಧಾತ್ಮಕ ಆಯೋಗ (CCI) ಬರೋಬ್ಬರಿ 1,337 ಕೋಟಿ ರೂ. ದಂಡವನ್ನು (Fine) ವಿಧಿಸಿದೆ.

    ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಗೂಗಲ್ ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳನ್ನು ನಡೆಸಿರುವುದಕ್ಕಾಗಿ ಸಿಸಿಐ ದಂಡ ವಿಧಿಸಿರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದೆ.

    2019ರ ಏಪ್ರಿಲ್‌ನಲ್ಲಿ ದೇಶದಲ್ಲಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ಫೋನ್ ಗ್ರಾಹಕರು ಗೂಗಲ್ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನಿಯಂತ್ರಕರು ಆದೇಶಿಸಿದ್ದರು. ಮೊಬೈಲ್ ಆಪ್ ವಿತರಣೆ ಒಪ್ಪಂದ (ಎಂಎಡಿಎ) ಹಾಗೂ ವಿಘಟನೆ ವಿರೋಧಿ ಒಪ್ಪಂದಕ್ಕೆ (ಎಎಫ್‌ಎ) ಸಂಬಂಧಿಸಿದಂತೆ ಗೂಗಲ್ ವಿರುದ್ಧ ಅಕ್ರಮ ವ್ಯವಹಾರಗಳ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಪೊಲೀಸ್ ಅಧಿಕಾರಿಗಳು ಶಿಸ್ತು ಮೀರಿದರೆ ದಂಡ, ಕೆಲಸದಿಂದ ವಜಾ – ಸರ್ಕಾರದಿಂದ ನಿಯಮ ಜಾರಿ

    ಇದೀಗ ಸಿಸಿಐ ಗೂಗಲ್‌ಗೆ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿರುವುದಕ್ಕೆ 1,337 ಕೋಟಿ ರೂ. ದಂಡ ವಿಧಿಸಿದೆ. ಮಾತ್ರವಲ್ಲದೇ ಅನ್ಯಾಯದ ವ್ಯವಹಾರಗಳನ್ನು ನಿಲ್ಲಿಸಿ, ನಿರ್ದಿಷ್ಟ ಸಮಯದೊಳಗೆ ಎಲ್ಲಾ ಸರಿಪಡಿಸಿಕೊಳ್ಳುವಂತೆ ಹೇಳಿದೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ

    Live Tv
    [brid partner=56869869 player=32851 video=960834 autoplay=true]

  • ಜಗ್ಗೇಶ್, ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್‍ಗೆ ಸಿಸಿಐಯಿಂದ ನೋಟಿಸ್

    ಜಗ್ಗೇಶ್, ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್‍ಗೆ ಸಿಸಿಐಯಿಂದ ನೋಟಿಸ್

    ಬೆಂಗಳೂರು: ಭಾರತೀಯ ಸ್ಪರ್ಧಾತ್ಮಕ ಆಯೋಗದಿಂದ(ಸಿಸಿಐ)ನಟ ಜಗ್ಗೇಶ್, ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್ ಮತ್ತು ನಿರ್ದೇಶಕ ಎಂ ಎಸ್ ರಮೇಶ್‍ ಅವರಿಗೆ ನೋಟಿಸ್ ಜಾರಿಯಾಗಿದೆ.

    ಕಳೆದ ಮಾರ್ಚ್ 3 ರಂದು ಡಬ್ಬಿಂಗ್ ಚಿತ್ರ `ಸತ್ಯದೇವ್ ಐಪಿಎಸ್’ ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ವಾಟಾಳ್ ನಾಗರಾಜ್ ಸೇರಿದಂತೆ ಸಾ ರಾ ಗೋವಿಂದು, ಜಗ್ಗೇಶ್ ಮುಂತಾದವರು ವಿರೋಧ ವ್ಯಕ್ತಪಡಿಸಿ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸಿದ್ದರು. ಹೀಗಾಗಿ ಡಬ್ಬಿಂಗ್ ಪರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಕೃಷ್ಣಮೂರ್ತಿ ಈ ವಿರೋಧವನ್ನು ಖಂಡಿಸಿ ಸಿಸಿಐಗೆ ದೂರು ನೀಡಿದ್ದರು.

    ದೂರಿನ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕದಲ್ಲಿ ಡಬ್ಬಿಂಗ್ ವಿರೋಧಿಸಿದವರ ಬಗ್ಗೆ ಸಿಸಿಐ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: ಡಬ್ಬಿಂಗ್ ಮಾಡಿದ್ರೆ ಯಾರದ್ದೋ ಮಗುವಿಗೆ ಇನ್ಯಾರೋ ತಂದೆ ಆದಂಗೆ ಇರುತ್ತೆ: ದರ್ಶನ್

    ಇದನ್ನೂ ಓದಿ: ಡಬ್ಬಿಂಗ್ ಬೇಕೋ ಬೇಡ್ವೋ ಜನರೇ ತೀರ್ಮಾನ ಮಾಡ್ತಾರೆ: ನಟ ಶಿವರಾಜ್‍ಕುಮಾರ್