ಡಮಾಸ್ಕಸ್: ಸಿರಿಯಾ (Syria) ರಾಜಧಾನಿ ಡಮಾಸ್ಕಸ್‌ನ ನಗರದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ (Israel Bombs Attack) ಬೆಚ್ಚಿ ಲೈವ್ ನೀಡುತ್ತಿದ್ದ ಟಿವಿ ನಿರೂಪಕಿ ಎದ್ದು ಓಡಿರುವ ದೃಶ್ಯ ಕಂಡುಬಂದಿದೆ.
ಹೌದು. ರಾಜಧಾನಿ ಡಮಾಸ್ಕಸ್‌ನಲ್ಲಿರುವ ಮಿಲಿಟರಿ ಹೆಡ್‌ಕ್ವಾಟ್ರಸ್ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ. ಈ ವೇಳೆ ಬಾಂಬ್ ಬಿದ್ದ ಕಟ್ಟಡದ ಸುತ್ತ ದಟ್ಟ ಹೊಗೆ ಆವರಿಸಿದೆ. ಇತ್ತ ಬಾಂಬ್ ಶಬ್ಧ ಕೇಳುತ್ತಿದ್ದಂತೆ ಟಿವಿ ಆಂಕರ್ (TV Anchor) ಲೈವ್‌ನಿಂದಲೇ ಕಿರುಚಿಕೊಂಡು ಓಡಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ತೆಲಂಗಾಣ ಮಾಡೆಲ್ ಜಾತಿ ಜನಗಣತಿಗೆ ಕಾಂಗ್ರೆಸ್ ಮಣೆ- ಸಿದ್ದರಾಮಯ್ಯ ವರದಿ ಕಸದ ಬುಟ್ಟಿಗೆ: ಶಾಸಕ ಸುನಿಲ್ ಕುಮಾರ್ ವ್ಯಂಗ್ಯ
— ישראל כ”ץ Israel Katz (@Israel_katz) July 16, 2025
ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ (Social Media) ಖಾತೆಯಲ್ಲಿ ಸಂದೇಶವೊಂದನ್ನ ಹಂಚಿಕೊಂಡಿರುವ ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಸಿರಿಯಾದಲ್ಲಿ ಸಮುದಾಯವನ್ನ ರಕ್ಷಿಸುತ್ತೇವೆ. ಡಮಾಸ್ಕಸ್‌ಗೆ ನೀಡಬೇಕಿದ್ದ ಎಲ್ಲಾ ಎಚ್ಚರಿಕೆಗಳು ಮುಗಿದಿವೆ, ಇನ್ನೇನಿದ್ದರೂ ದಾಳಿಯಷ್ಟೇ ಎಂದಿದ್ದಾರೆ. ಅಲ್ಲದೇ ಸುವೈದಾದಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯನಿರ್ವಹಿಸುವುದನ್ನ ಮುಂದುವರಿಸುತ್ತೆ. ಸರ್ಕಾರಿ ಪಡೆಗಳು ಈ ಪ್ರದೇಶದಿಂದ ಹಿಂದೆ ಸರಿಯುವವರೆಗೂ ದಾಳಿ ಮಾಡುವುದನ್ನು ಮುಂದುವರಿಸುತ್ತದೆ. ಮುಂದೆ ಪ್ರತೀಕಾರದ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮತ್ತೆ ಸ್ಮಾರ್ಟ್ ಮೀಟರ್ ಹಗರಣ ಕೆದಕಿದ ಬಿಜೆಪಿ – ಸಚಿವ ಜಾರ್ಜ್ ವಿರುದ್ಧ ಖಾಸಗಿ ದೂರು
ಏನಿದು ಘರ್ಷಣೆ?
ದಕ್ಷಿಣ ಸಿರಿಯಾದ ಸುವೈದಾದಲ್ಲಿ ಕಳೆದ ಕೆಲ ದಿನಗಳಿಂದ ಅಲ್ಪಸಂಖ್ಯಾತ ಡ್ರೂಜ್ ಸಮುದಾಯ ಮತ್ತು ಬೆಡೋಯಿನ್ ಬುಡಕಟ್ಟು ಜನಾಂಗದ ಸಶಸ್ತ್ರ ಗುಂಪುಗಳ ನಡುವೆ ನಿರಂತರ ಘರ್ಷಣೆಗಳು ನಡೆಯುತ್ತಿವೆ. ಈ ನಡುವೆ ಡ್ರೂಜ್ ಸಮುದಾಯದ ಪರವಾಗಿ ನಿಂತಿರುವ ಇಸ್ರೇಲ್, ಸಂಘರ್ಷ ತಡೆಯಲು ಸ್ವೀಡಾ ಪಟ್ಟಣಕ್ಕೆ ತನ್ನ ಸೈನ್ಯ ಕಳುಹಿಸಿತ್ತು. ಆದಾಗ್ಯೂ ಸಿರಿಯಾ ಸಮುದಾಯದ ಜೊತೆಗೆ ಘರ್ಷಣೆಗೆ ಇಳಿದಿತ್ತು. ಇದರಿಂದಾಗಿ ಮಧ್ಯ ಪ್ರವೇಶಿಸಿರುವ ಇಸ್ರೇಲ್ ಸಿರಿಯಾದ ಮಿಲಿಟರಿ ಕ್ವಾಟ್ರಸ್ ಮೇಲೆ ದಾಳಿ ನಡೆಸಿದೆ.
ಒಂದು ಕಾಲದಲ್ಲಿ ನಾಗರಿಕತೆ ಮತ್ತು ಇತಿಹಾಸದ ಸಂಕೇತವಾಗಿದ್ದ ಸಿರಿಯಾ (Syria) ಅಂತರ್ಯುದ್ಧದಿಂದ ನಲುಗಿಹೋಗಿದೆ. ಈ ಬೆನ್ನಲ್ಲೇ ಆರ್ಥಿಕ ಬಿಕ್ಕಟ್ಟು ದೇಶದ ಜನರನ್ನ ಕಿತ್ತುತಿನ್ನುವ ಪರಿಸ್ಥಿತಿಗೆ ತಂದೊಡ್ಡುತ್ತಿದೆ. ಹೌದು. ಬಂಡುಕೋರರ ಗುಂಪು ಸಿರಿಯಾವನ್ನ ಆಕ್ರಮಿಸುತ್ತಿದ್ದಂತೆ ಉಚ್ಚಾಟಿತ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ (Bashar al-Assad) ದೇಶದಿಂದ ಪಲಾಯನ ಮಾಡಿದ್ದಾರೆ. ಇದರಿಂದಾಗಿ ಅಂತಾರಾಷ್ಟ್ರೀಯ ನಿರ್ಭಂಧಗಳು ಹಾಗೂ ಜಾಗತಿಕ ಪ್ರತ್ಯೇಕತೆಯು ದೇಶವನ್ನ ಹಣದುಬ್ಬರದ ಬಲೆಯಲ್ಲಿ ಸಿಲುಕಿದೆ. ಈ ಎಲ್ಲ ಬೆಳವಣಿಗೆಯೂ ಜನರನ್ನ ಸಂಕಷ್ಟಕ್ಕೆ ದೂಡಿದೆ.
ಬಿಕ್ಕಟ್ಟಿಗೆ ಸಾಕ್ಷಿಯಾಯ್ತು ಆಕೆಯ ಒಂದು ವೀಡಿಯೋ….
2-3 ದಿನಗಳ ಹಿಂದೆ ಟ್ರಾವೆಲ್ ಬ್ಲಾಗರ್ ಇಲೋನಾ ಕಾರ್ಫಿನ್ ಸಿರಿಯಾದ ರೆಸ್ಟೋರೆಂಟ್‌ವೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಒಂದು ಕಾಫಿ ಆರ್ಡರ್ ಮಾಡಿ 50 ಸಿರಿಯನ್ ಪೌಂಡ್ ಕೊಡಲು ಮುಂದಾಗಿದ್ದಾರೆ. ಈ ವೇಳೆ ರೆಸ್ಟೋರೆಂಟ್‌ನ ಸಪ್ಲೈಯರ್ 25,000 ಪೌಂಡ್ ಇಟ್ಟು ಹೋಗುವಂತೆ ಹೇಳಿದ್ದನ್ನು ಕೇಳಿ ಆಕೆ ಹೌಹಾರಿದ್ದಾಳೆ. ಬಳಿಕ ಅಲ್ಲಿನ ಪರಿಸ್ಥಿತಿಯನ್ನ ವೀಡಿಯೋವೊಂದರಲ್ಲಿ ವಿವರಿಸಿದ್ದಾಳೆ.
ಇನ್ಮುಂದೆ ಸಿರಿಯಾದಲ್ಲಿ ಸರಕುಗಳನ್ನ ಖರೀದಿ ಮಾಡಲು ಪರ್ಸ್‌ಗಳನ್ನ ಕೊಂಡೊಯ್ಯುವ ಅಗತ್ಯವಿಲ್ಲ. ಕಂತೆ ಕಂತೆ ಹಣ ನೀಡಬೇಕಾಗಿರೋದ್ರಿಂದ ಮೂಟೆಯನ್ನೇ ಹೊತ್ತೊಯ್ಯಬೇಕು ಎನ್ನುವಷ್ಟು ಪರಿಸ್ಥಿತಿ ಇಲ್ಲಿ ಹದಗೆಟ್ಟಿದೆ. ಇಲ್ಲಿನ ರೆಸ್ಟೋರೆಂಟ್‌ಗಳಲ್ಲಿ, ಇನ್ನಿತರ ಮಳಿಗೆಗಳಲ್ಲಿ ಪದಾರ್ಥಗಳ ಬೆಲೆಯನ್ನ ಬರೆಯಲಾಗಿಲ್ಲ. ಏಕೆಂದರೆ ಯಾವುದೇ ಬೆಲೆಗಳನ್ನು ನಿಗದಿಪಡಿಸಿಲ್ಲ. ಆದ್ರೆ ಖರೀದಿ ಮಾಡಲು ಹೋದ್ರೆ ಒಂದಕ್ಕೆ ಹತ್ತುಪಟ್ಟು ಬೆಲೆ ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ನಿರ್ಬಂಧಗಳಿರುವ ಕಾರಣ ವಿದೇಶಗಳಿಂದ ವಸ್ತುಗಳ ರಫ್ತಿನಲ್ಲೂ ಕಡಿಮೆಯಾಗಿದೆ. ಸಹಜವಾಗಿಯೇ ದೇಶಿಯ ವಸ್ತುಗಳ ಮೇಲೆ ಜನ ಅವಲಂಬಿತರಾಗಿದ್ದಾರೆ. ಇದರಿಂದ ಬೆಲೆ ಗಗನಕ್ಕೇರಿದೆ.
ಸಾಂದರ್ಭಿಕ ಚಿತ್ರ
ಕೆಲ ದಿನಗಳ ಹಿಂದೆಯಷ್ಟೇ 1 ಯುಎಸ್ ಡಾಲರ್‌ನ ಮೌಲ್ಯ 50 ಸಿರಿಯನ್ ಪೌಂಡ್‌ಗಳಷ್ಟಿತ್ತು. ಆದರೀಗ 15,000 ಸಿರಿಯನ್ ಪೌಂಡ್‌ನಷ್ಟು ತಲುಪಿದೆ. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಅಂದ್ರೆ, 1 ಕಪ್ ಕಾಫಿಯ ಬೆಲೆ 25,000 ಸಿರಿಯನ್ ಪೌಂಡ್ ತಲುಪಿದೆ. ಕೋಟ್ಯಂತರ ಜನ ಯುವತಿಯ ವೀಡಿಯೋ ವೀಕ್ಷಣೆ ಮಾಡಿದ್ದಾರೆ. ಸಿರಿಯನ್ನರು ಆತಂಕಗೊಂಡಿದ್ದಾರೆ. ಕೆಲವರು ಅಂತಾರಾಷ್ಟ್ರೀಯ ಸಹಾಯದ ಕೊರತೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸಿರಿಯಾದ ಪುನರ್ ನಿರ್ಮಾಣಕ್ಕೆ ಸಹಾಯಹಸ್ತವನ್ನ ಇಡೀ ವಿಶ್ವವೇ ಚಾಚುವಂತೆ ಮನವಿ ಮಾಡಿದ್ದಾರೆ.
ಸಿರಿಯಾ ಬಿಕ್ಕಟ್ಟಿಗೆ – ದುಸ್ಥಿತಿಗೆ ಅಮೆರಿಕವೇ ಕಾರಣವಾ?
ಸಿರಿಯಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ಪ್ರಕ್ಷುಬ್ಧ ವಾತಾವರಣಕ್ಕೆ ಅಮೆರಿಕವೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು. ಸಿರಿಯಾ ನೆಮ್ಮದಿಯಾಗಿತ್ತು & ಸಿರಿಯಾ ಜನ ಸಾಮಾನ್ಯ ಪ್ರಜೆಗಳ ರೀತಿಯೇ ಜೀವನವನ್ನ ಕೂಡ ನಡೆಸುತ್ತಿದ್ದರು. ಆದ್ರೆ ಅದೊಂದು ದಿನ ಮಾತ್ರ ಭೀಕರ ಘಟನೆ ನಡೆದೇ ಹೊಗಿತ್ತು. ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಆಡಳಿತದ ವಿರುದ್ಧ ತಿರುಗಿದ್ದ ಬಂಡುಕೋರರ ಗುಂಪು, 2011ರ ಸಮಯದಲ್ಲಿ ಬೃಹತ್ ಹೋರಾಟ ಶುರು ಮಾಡಿಬಿಟ್ಟಿತ್ತು. ಹೀಗೆ ಶುರುವಾದ ಹೋರಾಟವು ಸುಮಾರು 13 ವರ್ಷ, 9 ತಿಂಗಳು ನಡೆದಿತ್ತು. ಕೊನೆಗೆ ಸಿರಿಯಾ ಅಧ್ಯಕ್ಷರೇ ಓಡಿ ಹೋಗುವಂತೆ ಆಗಿದೆ. ಇದೀಗ ಸಿರಿಯಾ ದೇಶದ ನೆಲದಲ್ಲಿ ಬಂಡುಕೋರರು ನೆಲೆಯೂರಿದ್ದಾರೆ. ಇಂತಹ ಸ್ಥಿತಿಗೆ ವಿಶ್ವದ ದೊಡ್ಡಣ್ಣ ಅಮೆರಿಕವೇ ಕಾರಣ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
ಸಿರಿಯಾದಲ್ಲಿ ಅಮೆರಿಕದ ಪಾತ್ರವೇನು?
2011ಕ್ಕೂ ಮುನ್ನವೇ ಸಿರಿಯಾ ಸರ್ಕಾರ ಮತ್ತು ಬಂಡುಕೋರರ ನಡುವೆ ಸಂಘರ್ಷ ಶುರುವಾಗಿತ್ತು. ಇದನ್ನೇ ಬಳಸಿಕೊಂಡ ಅಮೆರಿಕ 2011ರಲ್ಲಿ ದಂಗೆ ಕೋರರಿಗೆ ಶಸ್ತ್ರಾಸ್ತ್ರ, ತರಬೇತಿ ನೀಡಲು ಶುರು ಮಾಡಿತು. 2014ರಲ್ಲಿ 15 ಸಾವಿರ ದಂಗೆಕೋರರನ್ನು ಸಿದ್ಧ ಮಾಡುವ ಗುರಿ ಇರಿಸಿಕೊಂಡಿದ್ದ ಅಮೆರಿಕಕ್ಕೆ ಇದು ಸಾಧ್ಯವಾಗಲೇ ಇಲ್ಲ. ಅತ್ತ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್‌ಗೆ ಐಸಿಸ್‌ನ ಬೆಂಬಲವೂ ಸಿಕ್ಕಿತು. ಇದರ ಮಧ್ಯೆ 2014ರಲ್ಲಿ ಒಬಾಮಾ ಆಡಳಿತವು ಬಹ್ರೈನ್, ಜೋರ್ಡಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೈಟ್ಸ್‌ನ ಬೆಂಬಲದೊಂದಿಗೆ ಐಸಿಸ್ ಇದ್ದ ಸ್ಥಳಗಳ ಮೇಲೆ ದಾಳಿ ಶುರು ಮಾಡಿತು. ಅಷ್ಟೇ ಅಲ್ಲ, 2017ರಲ್ಲಿ ಸಿರಿಯಾದ ಪಡೆಗಳನ್ನೂ ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿತು. ಈಗಲೂ ಸಿರಿಯಾದಲ್ಲಿ ಅಮೆರಿಕದ ಸೇನೆ ಇದ್ದು, ಆಗಾಗ ಸಂಘರ್ಷಗಳು ನಡೆಯುತ್ತಲೇ ಇವೆ. ಸಿರಿಯಾ ಸರ್ಕಾರಕ್ಕೆ ರಷ್ಯಾ ನೇರವಾಗಿಯೇ ಬೆಂಬಲ ನೀಡುತ್ತಿದೆ. ಆದ್ರೆ ಬಂಡುಕೋರರ ಗುಂಪೇ ಸಿರಿಯಾವನ್ನಾಳುತ್ತಿದ್ದು ಶೋಷನಿಯ ಸ್ಥಿತಿಗೆ ಕಾರಣವಾಗಿದೆ.
ಸಿರಿಯಾದಲ್ಲಿ ಅಮೆರಿಕದ ಈಗಿನ ಪಾತ್ರ ಏನು?
ಐಸಿಸ್ ಮರು ಸಂಘಟನೆಯನ್ನು ತಡೆಯಲು ಸಿರಿಯಾದ ಕೆಲವು ಭಾಗಗಳಲ್ಲಿ ಅಮೆರಿಕ ನೂರಾರು ಸೈನಿಕರನ್ನು ನಿಯೋಜನೆ ಮಾಡಿದೆ. ಅಲ್ಲದೇ ಅಸ್ಸಾದ್ ಸರ್ಕಾರವನ್ನು ವಿರೋಧಿಸಿದ್ದ ಮಧ್ಯಮ ಸಶಸ್ತ್ರ ಗುಂಪುಗಳಿಗೆ ಅಮೆರಿಕ 1 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಮಿಲಿಟರಿ ಸಹಾಯವನ್ನು ನೀಡಿದೆ. ಈ ಪೈಕಿ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್, ಈಶಾನ್ಯ ಸಿರಿಯಾದ ಕುರ್ಡ್‌ಗಳ ನೇತೃತ್ವದ ಮಿಲಿಟರಿ ಪಡೆ ಹೆಚ್ಚಿನ ಹಣಕಾಸಿನ ನೆರವು ಪಡೆದಿದೆ. ಮುಖ್ಯವಾಗಿ ಭಾರೀ ಹಣಕಾಸು ವಹಿವಾಟುಗಳ ಬಗ್ಗೆ ನಿರ್ಬಂಧ ಹೇರಿದೆ. ಇದೆಲ್ಲವೂ ಸಿರಿಯಾದ ಶೋಚನೀಯ ಸ್ಥಿತಿಗೆ ಕಾರಣವಾಗಿದೆ.
ರಷ್ಯಾ-ಉಕ್ರೇನ್ ಯುದ್ಧ ಅಸ್ಸಾದ್ ಪತನಕ್ಕೆ ಹೇಗೆ ಕಾರಣ?
ಸಿರಿಯಾದ ಮಿತ್ರರಾಷ್ಟ್ರವಾಗಿರುವ ರಷ್ಯಾ ಸಿರಿಯಾಕ್ಕೆ ಬೆಂಬಲ ನೀಡಿದೆಯಾದರೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ ಉಕ್ರೇನ್ ವಿರುದ್ಧ ರಷ್ಯಾ ಈಗಾಗಲೇ ಯುಧ್ಧವನ್ನು ಎದುರಿಸುತ್ತಿದೆ. ಡೊನಾಲ್ಡ್ ಟ್ರಂಪ್ ನಿಯೋಜಿತ ಅಧ್ಯಕ್ಷರಾಗಿದ್ದು, ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಲ್ಲಿಯವರೆಗೂ ಜೋ ಬೈಡನ್ ಅಧಿಕಾರದಲ್ಲಿದ್ದಾರೆ. ಇತ್ತೀಚೆಗೆ ಬೈಡನ್, ರಷ್ಯಾ ಮೇಲೆ ಮಿಸೈಲ್ ದಾಳಿ ನಡೆದಲು ಉಕ್ರೇನ್ ಅಧ್ಯಕ್ಷರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರಿಂದ ರಷ್ಯಾ – ವಿರುದ್ಧದ ದಾಳಿಯನ್ನು ತೀವ್ರಗೊಳಿಸಿದೆ. ಇತ್ತೀಚೆಗೆ ರಷ್ಯಾದ ಗಗನ ಚುಂಬಿ ಕಟ್ಟಡಗಳ ಮೇಲೆ ಸ್ಫೋಟಕ ತುಂಬಿದ ಡ್ರೋನ್ ದಾಳಿ ನಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಮುಂದಿನ ದಿನಗಳಲ್ಲಿ ಸಿರಿಯಾದ ಬಿಕ್ಕಟ್ಟು ಯಾವ ರೀತಿ ಬಗೆಹರಿಯಲಿದೆ? ಜಾಗತಿಕ ಒಕ್ಕೂಟಗಳು ಸಿರಿಯಾ ನೆರವಿಗೆ ಧಾವಿಸಲಿವೆಯೇ ಎಂಬುದನ್ನು ಕಾದುನೋಡಬೇಕಿದೆ.
ಡಮಾಸ್ಕಸ್: ಯುದ್ಧಪೀಡಿತ ಸಿರಿಯಾದಿಂದ 75 ಮಂದಿ ಭಾರತೀಯರನ್ನು (Indians) ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. ಅಲ್ಲದೇ ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ಒತ್ತಿ ಹೇಳಿದೆ.
ಇಸ್ಲಾಮಿಕ್ ಬಂಡುಕೋರು ಸಿರಿಯಾ (Syria) ಅಧ್ಯಕ್ಷ ಬಶರ್ ಅಲ್ ಅಸ್ಸಾದ್ (Bashar al-Assad) ಸರ್ಕಾರವನ್ನು ಪತನಗೊಳಿಸಿದ್ದು, ಸ್ವತಂತ್ರ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಈ ಬೆಳವಣಿಗಳ ನಡುವೆ 75 ಭಾರತೀಯ ಪ್ರಜೆಗಳನ್ನು ಸಿರಿಯಾದಿಂದ ಸ್ಥಳಾಂತರಿಸಲಾಗಿದೆ. ಸ್ಥಳಾಂತರಿಸಿದವರಲ್ಲಿ ಸೈದಾ ಜೈನಾಬ್‌ನಲ್ಲಿ ಸಿಲುಕಿದ್ದ ಜಮ್ಮು ಮತ್ತು ಕಾಶ್ಮೀರದ 44 ‘ಜೈರೀನ್’ಗಳೂ (ಯಾತ್ರಿಕರೂ) ಸೇರಿದ್ದಾರೆ. ಇದನ್ನೂ ಓದಿ: ಕಣ್ಮರೆಯಾಗಿದ್ದ ವಿಮಾನ ಮಾಸ್ಕೋದಲ್ಲಿ ಲ್ಯಾಂಡ್ – ಪದಚ್ಯುತ ಸಿರಿಯಾ ಅಧ್ಯಕ್ಷ ಅಸ್ಸಾದ್‌ಗೆ ಪುಟಿನ್ ರಾಜಾಶ್ರಯ
ಎಲ್ಲಾ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಲೆಬನಾನ್‌ಗೆ ದಾಟಿದ್ದು, ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಭಾರತಕ್ಕೆ ಹಿಂತಿರುಗುತ್ತಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ನೋವಿಲ್ಲದ ಸಾವಿಗೆ ರಹದಾರಿ – ಯುಕೆನಲ್ಲಿ ಹೊಸ ಮಸೂದೆ ಮಂಡನೆ!
ಭಾರತ ಸರ್ಕಾರವು ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಸಿರಿಯಾದಲ್ಲಿ ಉಳಿದಿರುವ ಭಾರತೀಯ ಪ್ರಜೆಗಳು ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಅವರ ತುರ್ತು ಸಹಾಯವಾಣಿ ಸಂಖ್ಯೆ +963 993385973 (ವಾಟ್ಸಾಪ್‌ನಲ್ಲಿಯೂ ಸಹ) ಮತ್ತು ಇಮೇಲ್ ಐಡಿ (hoc.damascus@mea.gov.in)ಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಭಾರತ ಸರ್ಕಾರವು ಸಿರಿಯಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ
ವಾಷಿಂಗ್ಟನ್: ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಅಮೆರಿಕ(USA) ಸಿರಿಯಾದ (Syria) ಮೇಲೆ ವೈಮಾನಿಕ ದಾಳಿ (Airstrikes) ನಡೆಸಿದೆ.
ಸಿರಿಯಾ ಸರ್ವಾಧಿಕಾರಿ ಬಶರ್ ಅಲ್ ಅಸ್ಸಾದ್ (Bashar al-Assad) ಅವರ ಆಡಳಿತ ಕೊನೆಗೊಂಡ ಬೆನ್ನಲ್ಲೇ ಅಮೆರಿಕ ಐಸಿಸ್ (ISIS) ಉಗ್ರ ಸಂಘಟನೆಯ ನೆಲೆಯ ಮೇಲೆ ದಾಳಿ ನಡೆಸಿದೆ. ಮಧ್ಯ ಸಿರಿಯಾದಲ್ಲಿರುವ 75ಕ್ಕೂ ಹೆಚ್ಚು ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದೆ.
ಸರ್ವಾಧಿಕಾರಿ ಅಸ್ಸಾದ್ ದೇಶ ತೊರೆದ ನಂತರ ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಉಗ್ರರು ಸಿರಿಯಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಘಟನೆ ವಶಪಡಿಸಿಕೊಂಡರೂ ಅಲ್ಲಿ ಐಸಿಸ್ ಉಗ್ರರು ಇನ್ನೂ ಇದ್ದಾರೆ. ಮುಂದಿನ ದಿನಗಳಲ್ಲಿ ಐಸಿಸ್ ಉಗ್ರರು ಚಿಗುರಿ ಮತ್ತೆ ಹೋರಾಟಕ್ಕೆ ಇಳಿಯಬಾರದು ಎಂಬ ಕಾರಣಕ್ಕೆ ಅಮೆರಿಕ ಏರ್‌ಸ್ಟ್ರೈಕ್ ನಡೆಸಿದೆ. ಇದನ್ನೂ ಓದಿ: ಕಣ್ಮರೆಯಾಗಿದ್ದ ವಿಮಾನ ಮಾಸ್ಕೋದಲ್ಲಿ ಲ್ಯಾಂಡ್ – ಪದಚ್ಯುತ ಸಿರಿಯಾ ಅಧ್ಯಕ್ಷ ಅಸ್ಸಾದ್‌ಗೆ ಪುಟಿನ್ ರಾಜಾಶ್ರಯ
ಪೂರ್ವ ಸಿರಿಯಾದಲ್ಲಿ ಅಮೆರಿಕ ಸುಮಾರು 900 ಪಡೆಗಳನ್ನು ಹೊಂದಿದೆ. ಈ ಸೈನಿಕರು ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ.
ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿ, ಸಿರಿಯಾದಲ್ಲಿ ಸೃಷ್ಟಿಯಾಗಿರುವ ನಿರ್ವಾತದ ಲಾಭವನ್ನು ಪಡೆಯಲು ಐಸಿಸ್ ಪ್ರಯತ್ನಿಸುತ್ತಿದೆ. ಐಸಿಸ್ ಮೇಲೆ ಅಮೆರಿಕ ಕಣ್ಣಿಟ್ಟು ಅವರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.
ಅಸ್ಸಾದ್ ಅಸ್ಸಾಂ ಆಡಳಿತದ ಪತನದಿಂದ ಜನತೆಗೆ ನ್ಯಾಯ ಸಿಕ್ಕಿದೆ. ಇದು ಸಿರಿಯಾದಲ್ಲಿ ದೀರ್ಘಕಾಲದಿಂದ ಬಳಲುತ್ತಿರುವ ಜನರಿಗೆ ಸಿಕ್ಕಿದ ಐತಿಹಾಸಿಕ ಕ್ಷಣ ಎಂದು ಹೇಳಿದರು.
ಇಸ್ರೇಲ್‌ನಿಂದಲೂ ದಾಳಿ:
ಇನ್ನೊಂದು ಕಡೆ ಇಸ್ರೇಲ್ ಸಿರಿಯಾದ ಮೇಲೆ ವಾಯು ದಾಳಿ ನಡೆಸಿದೆ. ಸೇನೆಯ ಕೇಂದ್ರ ಕಚೇರಿ, ಗುಪ್ತಚರ ಸಂಸ್ಥೆ ಮತ್ತು ಕಸ್ಟಮ್ಸ್‌ನ ಕಚೇರಿಗಳನ್ನು ಒಳಗೊಂಡ ಕಟ್ಟಡದ ಮೇಲೆ ದಾಳಿ ನಡೆದಿದೆ. ಇರಾನ್‌ನ ವಿಜ್ಞಾನಿಗಳು ಈ ಸಂಕೀರ್ಣದಲ್ಲಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದರು ಎಂದು ಇಸ್ರೇಲ್ ಈ ಹಿಂದೆ ಹೇಳಿಕೊಂಡಿತ್ತು.
ಮಾಸ್ಕೋ: ಪದಚ್ಯುತ ಸಿರಿಯಾದ (Syria) ಅಧ್ಯಕ್ಷ, ಸರ್ವಾಧಿಕಾರಿ ಬಶರ್ ಅಲ್-ಅಸ್ಸಾದ್ (Bashar al-Assad) ಮತ್ತು ಕುಟುಂಬಕ್ಕೆ ರಷ್ಯಾ (Russia) ರಾಜಾಶ್ರಯ (Asylum) ನೀಡಿದೆ. ಉಗ್ರರು ರಾಜಧಾನಿ ಡಮಾಸ್ಕಸ್ ವಶಪಡೆಯುತ್ತಿದ್ದಂತೆ ಭಾನುವಾರ ಮುಂಜಾನೆ ಸಿರಿಯಾ ತೊರೆದ ಅವರು ಮಾಸ್ಕೋಗೆ ಬಂದಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.
ಮಾನವೀಯ ಆಧಾರದ ಮೇಲೆ ರಷ್ಯಾ (Russia) ಅವರಿಗೆ ಆಶ್ರಯ ನೀಡಿದೆ ಎಂದು ವರದಿಯಾಗಿದೆ. ರಷ್ಯಾ ಮೊದಲಿನಿಂದಲೂ ಅಸ್ಸಾದ್ ಸರ್ಕಾರದ ಬೆಂಬಲಕ್ಕೆ ನಿಂತಿತ್ತು. ಐಸಿಸ್ ಉಗ್ರರನ್ನು ಮಟ್ಟ ಹಾಕಲು ರಷ್ಯಾ ಅಸ್ಸಾದ್‌ಗೆ ಬೆಂಬಲ ನೀಡಿತ್ತು. ಉಕ್ರೇನ್ ಮೇಲಿನ ದಾಳಿಯ ಸಮಯದಲ್ಲಿ ಅಸ್ಸಾದ್ ರಷ್ಯಾವನ್ನು ಬೆಂಬಲಿಸಿದ್ದರು. ಇದನ್ನೂ ಓದಿ: ಸಿರಿಯಾದಲ್ಲಿ ಭಾರತೀಯ ಪ್ರಜೆಗಳು ಸೇಫ್ – ರಾಯಭಾರ ಕಚೇರಿಯಿಂದ ಮಾಹಿತಿ
A massive crowd of “Allahu Akbar” shouting Syrians has gathered in Utrecht today next to The Netherlands’ tallest Church tower.
Since they’re all so overjoyed, I’d say we put them straight on a one-way flight back home to Syria.???????? pic.twitter.com/01QVrEScDd
ಭಾನುವಾರ ಮುಂಜಾನೆ ಡಮಾಸ್ಕಸ್‌ನಿಂದ ಟೇಕಾಫ್ ಆದ ವಿಮಾನ ದಾರಿ ಮಧ್ಯೆ ಪಥವನ್ನು ಬದಲಾಯಿಸಿತ್ತು. ಅಷ್ಟೇ ಅಲ್ಲದೇ ವಿಮಾನ ಎತ್ತರವು ತಗ್ಗಿತ್ತು ದಿಢೀರ್ ಕಣ್ಮರೆಯಾಗಿತ್ತು. ಹೀಗಾಗಿ ವಿಮಾನ ಪತನ ಹೊಂದಿದ್ಯಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಈಗ ವಿಮಾನ ಸುರಕ್ಷಿತವಾಗಿ ರಷ್ಯಾದಲ್ಲಿ ಲ್ಯಾಂಡ್ ಆದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.
ಶತ್ರುಗಳಿಗೆ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಉದ್ದೇಶ ಪೂರ್ವಕವಾಗಿಯೇ ವಿಮಾನದ ಟ್ರಾನ್ಸ್‌ಪಾಂಡರ್ ಅನ್ನು ಸ್ವಿಚ್ ಆಫ್ ಮಾಡಲಾಗಿತ್ತು. ಹೀಗಾಗಿ ವಿಮಾನಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್‌ಗಳಿಗೆ ಈ ಮಾಹಿತಿ ಲಭ್ಯವಾಗಿರಲಿಲ್ಲ.
ಡಮಾಸ್ಕಸ್: ಸಿರಿಯಾದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಸುರಕ್ಷಿತವಾಗಿದ್ದಾರೆ, ಅವರಿಗೆ ಸಹಾಯ ಮಾಡಲು ಭಾರತೀಯ ರಾಜಭಾರ ಕಚೇರಿ (Indian Embassy) ಲಭ್ಯವಿದೆ. ಯುದ್ಧ ಪೀಡಿತ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ರಾಯಭಾರ ಕಚೇರಿಯು ಕಾರ್ಯಾಚರಣೆ ಮುಂದುವರಿಸಿದ್ದು, ಎಲ್ಲಾ ಭಾರತೀಯ ವಿದ್ಯಾರ್ಥಿಗಳೊಂದಿಗೆ (Indian Students) ಸಂಪರ್ಕದಲ್ಲಿರುವುದಾಗಿ ತಿಳಿದುಬಂದಿದೆ.
ಭಾರತೀಯರ ಸಹಾಯಕ್ಕಾಗಿ ಕಚೇರಿಯಲ್ಕಿ ತುರ್ತು ಸಹಾಯವಾಣಿ (ಮೊ.ಸಂ. +963 993385973 (ವಾಟ್ಸಾಪ್ ಸಹ ಇದೆ), ಇ-ಮೇಲ್ hoc.damascus@mea.gov.in) ಆರಂಭಿಸಲಾಗಿದೆ. ಯುದ್ಧಪೀಡಿತ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯರು ತಕ್ಷಣಕ್ಕೆ ಲಭ್ಯವಿರುವ ವಾಣಿಜ್ಯ ವಿಮಾನಗಳಲ್ಲಿ ಹೊರಟು ಭಾರತಕ್ಕೆ ತೆರಳಿ, ಉಳಿದವರು ಸುರಕ್ಷತೆ ಕಾಯ್ದುಕೊಳ್ಳಿ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ದೇಶ ತೊರೆಯುತ್ತಿದ್ದ ಸಿರಿಯಾ ಅಧ್ಯಕ್ಷನಿದ್ದ ವಿಮಾನ ಕಣ್ಮರೆ – ಕ್ಷಿಪಣಿ ದಾಳಿಗೆ ಪತನ?
ಜಿಹಾದಿ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ದಂಗೆಕೋರರು ಸಿರಿಯಾದ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಬಿಕ್ಕಟ್ಟು ತಲೆದೋರಿದ್ದು, ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯರು ಆದಷ್ಟು ಬೇಗ ಹಿಂತಿರುಗುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ. ಜೊತೆಗೆ ಮುಂದಿನ ಅಧಿಸೂಚನೆವರೆಗೆ ಭಾರತೀಯ ಪ್ರಜೆಗಳು ಸಿರಿಯಾ ಪ್ರಯಾಣವನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಕೆನಡಾ| ಸೆಕ್ಯೂರಿಟಿಯಾಗಿ ಕೆಲಸ ಮಾಡ್ತಿದ್ದ ಭಾರತೀಯ ವಿದ್ಯಾರ್ಥಿಯನ್ನ ಗುಂಡಿಕ್ಕಿ ಹತ್ಯೆ – ಇಬ್ಬರು ಶಂಕಿತರ ಬಂಧನ
3ನೇ ಅತಿದೊಡ್ಡ ನಗರ ಬಂಡುಕೋರರ ವಶ:
ಇಸ್ಲಾಮಿ ಉಗ್ರಗಾಮಿ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ (HTS) ನೇತೃತ್ವದ ಸಿರಿಯನ್ ಬಂಡುಕೋರರು ದಾಳಿಯನ್ನು ತೀವ್ರಗೊಳಿಸಿದ್ದಾರೆ. ಸಿರಿಯಾದ 3ನೇ ಅತಿದೊಡ್ಡ ನಗರವಾದ ಹೋಮ್ಸ್ ಅನ್ನು ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ, ಈ ಬೆನ್ನಲ್ಲೇ ರಾಜಧಾನಿ ಡಮಾಸ್ಕಸ್‌ನ ಗಡಿ ತಲುಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬಂಡುಕೋರರು ರಾಜಧಾನಿ ಡಮಾಸ್ಕಸ್ ಪ್ರವೇಶಿಸುತ್ತಿದ್ದಂತೆ ಸಿರಿಯಾ ತೊರೆದ ಅಧ್ಯಕ್ಷ ಅಸ್ಸಾದ್
ಸಿರಿಯಾ ಅಧ್ಯಕ್ಷ ಪಲಾಯನ:
ಇನ್ನೂ ಬಂಡುಕೋರರು ಸಿರಿಯಾ ರಾಜಧಾನಿ ಡಮಾಸ್ಕಸ್ ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ದೇಶ ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮದ ಜೊತೆ ಮಾತನಾಡಿದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್ ರೆಹಮಾನ್, ಭಾನುವಾರ ಮುಂಜಾನೆ ವಿಮಾನದ ಮೂಲಕ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಡಮಾಸ್ಕಸ್: ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ (Bashar al-Assad) ಅವರಿದ್ದ ವಿಮಾನ ಪತನಗೊಂಡಿದ್ಯಾ ಹೀಗೊಂದು ದೊಡ್ಡ ಪ್ರಶ್ನೆ ಎದ್ದಿದೆ.
ಬಂಡುಕೋರರು ಸಿರಿಯಾ (Syria) ರಾಜಧಾನಿ ಡಮಾಸ್ಕಸ್ (Damascus) ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಭಾನುವಾರ ಬೆಳಗ್ಗೆ ಸಿರಿಯಾವನ್ನು ತೊರೆದು ಅಜ್ಞಾತ ಸ್ಥಳದತ್ತ ತೆರಳಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈಗ ಅವರಿದ್ದ ವಿಮಾನ (Plane) ಮಧ್ಯದಲ್ಲೇ ಪತನಗೊಂಡಿದೆ ಎಂದು ವರದಿಯಾಗುತ್ತಿದೆ.
Developing:
A Syrian IL-76T coming from Damascus lost fast altitude near Homs and possibly crashed west of that city. There are rumors that it was Assad‘s plane. pic.twitter.com/K6IvQILlsw
ಡಮಾಸ್ಕಸ್‌ನಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವಾಗ ಅವರಿದ್ದ ವಿಮಾನ ಪತನಗೊಂಡಿರಬಹುದು ಅಥವಾ ಹೊಡೆದುರುಳಿಸಲ್ಪಟ್ಟಿರಬಹುದು ಎಂದು ವರದಿಯಾಗಿದೆ. ಇಲ್ಲಿಯವರೆಗೆ ಅಸ್ಸಾದ್ ವಿಮಾನ ಏನಾಯ್ತು ಎನ್ನುವುದರ ಬಗ್ಗೆ ಯಾರೂ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
Flightradar24.com ಮಾಹಿತಿಯ ಪ್ರಕಾರ ಸಿರಿಯನ್ ಏರ್ ಇಲ್ಯುಶಿನ್ Il-76T ವಿಮಾನ ಡಮಾಸ್ಕಸ್ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ. ವಿಮಾನವು ಆರಂಭದಲ್ಲಿ ಸಿರಿಯಾದ ಕರಾವಳಿ ಪ್ರದೇಶದ ಕಡೆಗೆ ಸಾಗುತ್ತಿತ್ತು. ದಾರಿ ಮಧ್ಯೆ ಅದು ವಿರುದ್ಧ ದಿಕ್ಕಿಗೆ ಸಾಗಿ ಕಣ್ಮರೆಯಾಗಿದೆ. ಇದನ್ನೂ ಓದಿ: ಬಂಡುಕೋರರು ರಾಜಧಾನಿ ಡಮಾಸ್ಕಸ್ ಪ್ರವೇಶಿಸುತ್ತಿದ್ದಂತೆ ಸಿರಿಯಾ ತೊರೆದ ಅಧ್ಯಕ್ಷ ಅಸ್ಸಾದ್
Did Bashar al-Assad’s Plane Crash?
Sudden Disappearance and Altitude Change Suggests It Was Shot Down!!
Unconfirmed information is being circulated about the sudden descent of the plane that was reportedly carrying Assad after it disappeared from radar and dropped suddenly from… pic.twitter.com/fpFQxQaq0K
ವಿಮಾನದ ಹಠಾತ್ ಕಣ್ಮರೆಯಾದ ಬೆನ್ನಲ್ಲೇ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕ್ಷಿಪಣಿ ದಾಳಿಯಿಂದ ವಿಮಾನ ಪತನಗೊಂಡಿರಬಹುದು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೆಬನಾನಿನ ವಾಯುಪ್ರದೇಶದ ಬಳಿ 3,650 ಮೀಟರ್ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ದಿಢೀರ್ 1,070 ಮೀಟರ್‌ಗೆ ಇಳಿದಿದೆ. ದಿಢೀರ್ ಇಳಿದಿದ್ದು ಮತ್ತು ಹಠಾತ್ ಕಣ್ಮರೆಯಾಗಿದ್ದನ್ನು ನೋಡಿದರೆ ವಿಮಾನವನ್ನು ಹೊಡೆದು ಉರುಳಿಸಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಡಮಾಸ್ಕಸ್: ಬಂಡುಕೋರರು ಸಿರಿಯಾ (Syria) ರಾಜಧಾನಿ ಡಮಾಸ್ಕಸ್ (Damascus) ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ (Bashar al-Assad) ದೇಶವನ್ನು ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮದ ಜೊತೆ ಮಾತನಾಡಿದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್ ರೆಹಮಾನ್, ಭಾನುವಾರ ಮುಂಜಾನೆ ವಿಮಾನದ ಮೂಲಕ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.
— ???? ???????????????????????????????? ???????????????? (@cheguwera) December 8, 2024
ಜುಲೈ 2000 ಇಸ್ವಿಯಲ್ಲಿ ಅಧಿಕಾರ ಸ್ವೀಕರಿಸಿದ್ದ ಬಶರ್ ಅಲ್ ಅಸ್ಸಾದ್ ಸರ್ಕಾರಕ್ಕೆ ರಷ್ಯಾ (Russia) ಮತ್ತು ಇರಾನ್ (Iran) ಬೆಂಬಲ ನೀಡಿತ್ತು. ಇಸ್ರೇಲ್ ಯುದ್ಧದಲ್ಲಿ ಇರಾನ್ ತೊಡಗಿಸಿಕೊಂಡಿದ್ದರೆ ಉಕ್ರೇನ್ ಯುದ್ಧದಲ್ಲಿ ರಷ್ಯಾ ತೊಡಗಿಸಿಕೊಂಡಿದೆ. ಈ ಎರಡು ದೇಶಗಳ ಯುದ್ಧದಲ್ಲಿ ತೊಡಗಿಸಿಕೊಂಡಿದ್ದರ ಪರಿಣಾಮ ಸಿರಿಯಾ ಈಗ ಏಕಾಂಗಿಯಾಗಿದೆ.
ಸಿರಿಯಾದಲ್ಲಿ ಕಳೆದ 13 ವರ್ಷಗಳಿಂದ ಅಂತರ್ಯುದ್ಧ ನಡೆಯುತ್ತಿದೆ. ಈ ಹಿಂದೆ ಅಸ್ಸಾದ್ ವಿರೋಧಿ ಬಂಡಾಯಗಾರರಲ್ಲಿ ಒಗ್ಗಟ್ಟು ಇರಲಿಲ್ಲ. ಆದರೆ ಈ ಬಾರಿ ಎಲ್ಲರೂ ಒಗ್ಗಟ್ಟಾಗಿರುವ ಕಾರಣ ಬಂಡುಕೋರರ ಸಂಘಟನೆ ಶಕ್ತಿಯುತವಾಗಿದೆ.
2011ರಲ್ಲಿ ಶಾಲೆಯ ಗೋಡೆಗಳ ಮೇಲೆ ಅಸ್ಸಾದ್ ವಿರೋಧಿ ಬರಹಗಳನ್ನ ಬರೆದ ಕೆಲ ಯುವಕರನ್ನು ಬಂಧಿಸಲಾಗಿತ್ತು. ಬಂಧಿತ ಯುವಕರಿಗೆ ಸರ್ಕಾರ ಹಿಂಸೆ ನೀಡುತ್ತಿದೆ ಎಂಬ ಆರೋಪ ಬಂದ ನಂತರ ಸಿರಿಯಾದಲ್ಲಿ ಅಂತರ್ ಯುದ್ಧ ಆರಂಭವಾಗಿತ್ತು.
ಡೆಮಾಸ್ಕಸ್: ಸಿರಿಯಾದಲ್ಲಿ (Syria) ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದರೆ. ಆದಷ್ಟು ಬೇಗ ಅಲ್ಲಿಂದ ಭಾರತಕ್ಕೆ ವಾಪಸ್ ಆಗಿ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ.
ಜಿಹಾದಿ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ದಂಗೆಕೋರರು ಸಿರಿಯಾದ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಬಿಕ್ಕಟ್ಟು ತಲೆದೋರಿದ್ದು, ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತುರ್ತು ಸಹಾಯವಾಣಿ ಸಂಖ್ಯೆಯನ್ನು (+963 993385973) ಡೆಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಾಗಿ ಹಂಚಿಕೊಳ್ಳಲಾಗಿದೆ. ಈ ಸಂಖ್ಯೆಗೆ WhatsApp ನಲ್ಲಿ ಓದಿದ ಹೇಳಿಕೆಯನ್ನು ಸಹ ಬಳಸಬಹುದು. ಜೊತೆಗೆ ತುರ್ತು ಇಮೇಲ್ ಐಡಿಯನ್ನು ಕೂಡ ಸೇರಿಸಬಹುದು.
ಅಂಕಾರಾ: ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ (TUSAS) ಪ್ರಧಾನ ಕಚೇರಿ ಮೇಲೆ ದಾಳಿ (Terror Attack) ನಡೆಸಿದ್ದಕ್ಕೆ ಪ್ರತಿಯಾಗಿ ಟರ್ಕಿ ವಾಯುಪಡೆಯು ಬುಧವಾರ ಇರಾಕ್ (Iraq) ಮತ್ತು ಸಿರಿಯಾದಲ್ಲಿನ (Syria) ಕುರ್ದಿಶ್ ಉಗ್ರಗಾಮಿಗಳ ಮೇಲೆ ವಾಯು ದಾಳಿ (Airstrikes) ನಡೆಸಿದೆ.
ಈ ವೈಮಾನಿಕ ದಾಳಿಯಲ್ಲಿ 30ಕ್ಕೂ ಹೆಚ್ಚು ಗುರಿಗಳನ್ನು ನಾಶಗೊಳಿಸಲಾಗಿದೆ ಎಂದು ಟರ್ಕಿಯ (Turkey) ರಕ್ಷಣಾ ಸಚಿವಾಲಯ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ಕುರ್ದಿಶ್ ಉಗ್ರಗಾಮಿಗಳು (Kurdish Militants) ಏರೋಸ್ಪೇಸ್ ಕಚೇರಿ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿರುವುದು ವಿಶೇಷ. ರಕ್ಷಣಾ ಕಂಪನಿಯ ಮೇಲಿನ ದಾಳಿಯ ಹಿಂದೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಅಥವಾ ಪಿಕೆಕೆ ಕೈವಾಡವಿದೆ ಟರ್ಕಿ ರಕ್ಷಣಾ ಸಚಿವ ಯಾಸರ್ ಗುಲೇರ್ ಹೇಳಿದ್ದಾರೆ.
ಬ್ರಿಕ್ಸ್ ಸಭೆಯಲ್ಲಿ ಭಾಗಿಯಾಗಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ನಾನು ಈ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
TUSAS ಸಂಸ್ಥೆ ನಾಗರಿಕ ಮತ್ತು ಮಿಲಿಟರಿ ವಿಮಾನಗಳು, ಮಾನವರಹಿತ ವೈಮಾನಿಕ ವಾಹನಗಳು, ರಕ್ಷಣಾ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಜೋಡಿಸುತ್ತದೆ. ಕುರ್ದಿಶ್ ಉಗ್ರಗಾಮಿಗಳ ವಿರುದ್ಧದ ಹೋರಾಟದಲ್ಲಿ ಟರ್ಕಿ ಮೇಲುಗೈ ಸಾಧಿಸುವಲ್ಲಿ ಅದರ UAV ಗಳು ಪ್ರಮುಖ ಪಾತ್ರವಹಿಸಿದ್ದು ಸುಮಾರು 10 ಸಾವಿರ ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಇಬ್ಬರು ಉಗ್ರರು ಈ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದಾರೆ.
1980 ರ ದಶಕದಿಂದಲೂ ಕುರ್ದಿಶ್‌ಗಳು ಆಗ್ನೇಯ ಟರ್ಕಿಯಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಡುತ್ತಿದ್ದಾರೆ. ಇದನ್ನು ಟರ್ಕಿ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಇದನ್ನು ಉಗ್ರ ಸಂಘಟನೆ ಎಂದು ಕರೆದಿವೆ.
#BREAKING: CCTV footage shows attackers, likely with suicide vests, including a female attacker Farah Karim.
ಬುಧವಾರ ಶಸ್ತ್ರಸಜ್ಜಿತರಾಗಿ ಓರ್ವ ಪುರುಷ, ಮಹಿಳೆ TUSAS ಕಾಂಪ್ಲೆಕ್ಸ್‌ಗೆ ಆಗಮಿಸಿ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೊನೆಗೆ ಭದ್ರತಾ ಪಡೆ ಇಬ್ಬರು ಹತ್ಯೆ ಮಾಡಿದ್ದಾರೆ.