ನವದೆಹಲಿ: ಜಿ20 ಶೃಂಗಸಭೆಯ (G20 Summit) ಮೊದಲ ದಿನ ಅಂತ್ಯಗೊಂಡಿದೆ. ದೆಹಲಿಯ ಭಾರತ್ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವ ನಾಯಕರು ಹಾಗೂ ಪ್ರತಿನಿಧಿಗಳಿಗೆ ಔತಣಕೂಟವನ್ನು (Dinner) ಆಯೋಜಿಸಿದ್ದು, ಭಾರತದ ವೈವಿಧ್ಯಮಯ ಭಕ್ಷ್ಯಗಳನ್ನು ನೀಡಲಾಗಿದೆ.
ರಾಷ್ಟ್ರದ ಹಾಗೂ ವಿಶ್ವದ ನಾಯಕರಿಗೆ ದೇಶದ ವಿಶಿಷ್ಟ ಭೋಜನದ ಅನುಭವವನ್ನು ನೀಡಲಾಗಿದೆ. ಬೆಳ್ಳಿ, ಚಿನ್ನ ಲೇಪಿತ ಪಾತ್ರೆಗಳಲ್ಲಿ ಊಟವನ್ನು ಬಡಿಸಿ, ದೇಶದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ನೋಟವನ್ನು ಪ್ರದರ್ಶಿಸಲಾಗಿದೆ.
ಭೋಜನದ ಮೆನುವಿನಲ್ಲೇನಿದೆ?
ಭಾರತ ತನ್ನ ಎಲ್ಲಾ ವೈವಿಧ್ಯತೆಗಳೊಂದಿಗೆ ರುಚಿಯು ದೇಶದ ಪ್ರತಿ ಪ್ರದೇಶಕ್ಕೂ ಹೇಗೆ ಸಂಪರ್ಕಿಸುತ್ತದೆ ಎಂಬ ಪರಿಚಯದೊಂದಿಗೆ ಮೆನುವನ್ನು (Menu) ಪ್ರಾರಂಭಿಸಲಾಗಿದೆ. ಸಂಪ್ರದಾಯಗಳು, ಪದ್ಧತಿಗಳು ಹಾಗೂ ಹವಾಮಾನದ ಸಂಯೋಜನೆಯೊಂದಿಗೆ ಭಾರತ ಹಲವು ವಿಧಗಳಲ್ಲಿ ವೈವಿಧ್ಯಮಯವಾಗಿದೆ. ಈ ಎಲ್ಲಾ ರುಚಿ ನಮ್ಮನ್ನು ಸಂಪರ್ಕಿಸುತ್ತದೆ ಎಂದು ಬರೆಯಲಾಗಿದೆ.
ಮೆನುವಿನಲ್ಲಿ ಸಿರಿಧಾನ್ಯಗಳ (Millets) ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಅವುಗಳ ಪೌಷ್ಟಿಕಾಂಶ ಮಾತ್ರವಲ್ಲದೇ ಕೃಷಿ ಕ್ಷೇತ್ರಕ್ಕೆ ಎಷ್ಟು ಮೌಲ್ಯಯುತವಾಗಿದೆ ಎಂಬುದನ್ನು ವಿವರಿಸಲಾಗಿದೆ.
ಬಡಿಸಲಾದ ವಿಶೇಷ ಖಾದ್ಯಗಳೇನು? ಮುಖ್ಯ ಅಡುಗೆ:
ವನವರ್ಣಂ: ಮಶ್ರೂಮ್‌ನೊಂದಿಗೆ ಟಾಪಿಂಗ್ ಮಾಡಲಾದ ಹಲಸು ಹಣ್ಣಿನ ಗ್ಯಾಲೆಟ್, ಕುರುಕಲು ಅನುಭವ ನೀಡುವ ಸಣ್ಣ ರಾಗಿ ಮತ್ತು ಕರಿಬೇವಿನ ಎಲೆಯೊಂದಿಗೆ ಫ್ರೈ ಮಾಡಲಾದ ಕೇರಳದ ಕೆಂಪು ಅನ್ನ. ಇದನ್ನೂ ಓದಿ: ಜಿ20 ಸಭೆಯಲ್ಲಿ ರಷ್ಯಾ-ಉಕ್ರೇನ್ ವಾರ್; ವಿಶ್ವ ನಾಯಕರ ಘೋಷಣೆಯೇನು?
ಭಾರತೀಯ ಬ್ರೆಡ್‌ಗಳು:
ಮುಂಬೈ ಪಾವ್: ಈರುಳ್ಳಿ ಬೀಜದ ಸುವಾಸನೆಯ ಮೃದುವಾದ ಬನ್.
ಬಕರಖಾನಿ: ಏಲಕ್ಕಿ ಸುವಾಸನೆಯ ಸಿಹಿ ರೋಟಿ.
ಮೈಸೂರು: ಮನೆ ಬಾಗಿಲಿಗೆ ಶರ್ಟ್, ಪ್ಯಾಂಟ್ ತಲುಪಿಸುವ ವ್ಯವಸ್ಥೆ ಇದ್ದಾಗ.. ರೈತರ ಬಳಕೆಯ ಉಪಕರಣಗಳು, ಗೊಬ್ಬರವನ್ನು ಸರ್ಕಾರ ಯಾಕೆ ತಲುಪಿಸಲು ಆಗಲ್ಲ ಎಂದು ʼಪಬ್ಲಿಕ್ ಟಿವಿʼ (Public TV) ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಪ್ರಶ್ನಿಸಿದರು.
ಮೈಸೂರಿನ (Mysuru) ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಸುತ್ತೂರು ಜಾತ್ರೆಯ (Suttur Jatra) ಅಂಗವಾಗಿ ಶನಿವಾರ ಸಿರಿಧಾನ್ಯಗಳ ಕುರಿತ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ರೈತರ ಮನೆ ಬಾಗಿಲಿಗೆ ಗೊಬ್ಬರ, ಕೃಷಿ ಉಪಕರಣಗಳು ತಲುಪಿಸಬೇಕಿದೆ. ಇದಕ್ಕಾಗಿ ಗ್ರಾಮೀಣ ಅಮೆಜಾನ್ (Amazon) ಅನ್ನು ಸರ್ಕಾರವೇ ಆರಂಭಿಸಬೇಕು. ಈ ಮೂಲಕ ಹೇಗೆ ತಾಲ್ಲೂಕು ಕೇಂದ್ರಗಳಿಗೆ ಅಮೆಜಾನ್‌ನಿಂದ ಜನ ಬಳಕೆಯ ಉತ್ಪನ್ನಗಳು ಅವರ ಮನೆ ಬಾಗಿಲು ತಲುಪುತ್ತದೆಯೋ, ಅದೇ ರೀತಿ ಕೃಷಿ ಉತ್ಪನ್ನಗಳು ತಲುಪಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಬಿರುಗಾಳಿ ಬೀಸುತ್ತಿದೆ: ಬೊಮ್ಮಾಯಿ
ನಮ್ಮ ಪೂರ್ವಜರ ಆರೋಗ್ಯ ಪದ್ಧತಿ ಬಹಳ ಉತ್ಕೃಷ್ಟವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದನ್ನು ನಾವು ಕಳೆದುಕೊಂಡೆವು. ಆ ಪದ್ಧತಿ ಕಳೆದುಕೊಂಡ ಮೇಲೆ ನಮಗೆ ಅದರ ಬಗ್ಗೆ ಈಗ ಜ್ಞಾನ ಮೂಡುತ್ತಿದೆ. ಹೀಗಾಗಿ ಸಿರಿಧಾನ್ಯದ ಬಗ್ಗೆ ಎಲ್ಲರೂ ಮಾತಾಡುತ್ತಿದ್ದಾರೆ. ಸಿರಿಧಾನ್ಯದ ಕ್ರಾಂತಿ ಆಗಬೇಕು. ನಮ್ಮ ಆರೋಗ್ಯ, ಭೂಮಿ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಸಿರಿಧಾನ್ಯ ಬೇಸಾಯ ಹೆಚ್ಚಾಗಬೇಕಿದೆ ಎಂದು ತಿಳಿಸಿದರು.
ಸರ್ಕಾರದ ಹಲವು ಯೋಜನೆಗಳು ಜನರಿಗೆ ಗೊತ್ತೇ ಆಗುವುದಿಲ್ಲ. ಸಿರಿಧಾನ್ಯ ಬೆಳೆದರೆ ಅದರ ಮಾರುಕಟ್ಟೆ ಹೇಗೆ ಎಂಬುದನ್ನು ಸರ್ಕಾರ ಮೊದಲು ತಿಳಿಸಬೇಕು. ಬರೀ ಸಿರಿಧಾನ್ಯದ ಭಾಷಣ ಮಾಡಿದರೆ ಸಾಲದು, ಸಿರಿ ಧಾನ್ಯದ ಬೆಳೆಯನ್ನು ಲಾಭಕ್ಕೆ ಮಾರುವುದು ಹೇಗೆ ಎಂಬುದನ್ನು ಮೊದಲ ತಿಳಿಸಿ. ಮೈಸೂರಿನ ಯಾವುದಾದರೂ ತಾಲೂಕನ್ನು ಸಿರಿಧಾನ್ಯದ ತಾಲೂಕಾಗಿ ಗುರುತಿಸಿ ಎಂದು ಹೇಳಿದರು. ಇದನ್ನೂ ಓದಿ: ಉಚಿತ ಭಾಗ್ಯದ ಗೊಂದಲ ಬಗೆಹರಿಸಲು ಅಖಾಡಕ್ಕೆ ಇಳಿದ್ರಾ ವಿಪಕ್ಷ ನಾಯಕ ಸಿದ್ದರಾಮಯ್ಯ
ಸಿರಿಧಾನ್ಯ ಬೆಳೆಯಲು ರೈತರಿಗೆ ಆರ್ಥಿಕ ಮಾರ್ಗಗಳ ಧೈರ್ಯ ತುಂಬಿ. ರೈತರ ಮನೆಗೆ ಸರ್ಕಾರಗಳು ಗೊಬ್ಬರ ಕಳಿಸಬೇಕು. ಕೃಷಿ ಉಪಕರಣಗಳನ್ನು ಸರ್ಕಾರ ರೈತರ ಮನೆಗೆ ಗ್ರಾಮೀಣ ಅಮೆಜಾನ್ ಸೃಷ್ಟಿಯಾಗಬೇಕು. ಗ್ರಾಮೀಣ ಅಮೆಜಾನ್ ಸೃಷ್ಟಿಯಾದರೆ, ಸಾವಿರಾರು ಯುವಕರಿಗೆ ಕೆಲಸ ಸಿಗುತ್ತದೆ. ತಾಲೂಕು ಮಟ್ಟಕ್ಕೆ ಶರ್ಟ್, ಪ್ಯಾಂಟ್ ತಲುಪಿಸುವ ವ್ಯವಸ್ಥೆ ಇದ್ದಾಗ ರೈತರ ಬಳಕೆಯ ಉಪಕರಣಗಳು, ಗೊಬ್ಬರವನ್ನು ಸರ್ಕಾರ ಯಾಕೆ ತಲುಪಿಸಲು ಆಗಲ್ಲ ಎಂದು ಪ್ರಶ್ನಿಸಿದರು.
ವಿಚಾರ ಸಂಕಿರಣದಲ್ಲಿ ಪ್ರಗತಿಪರ ಕೃಷಿಯಲ್ಲಿ ಸಾಧನೆ ಮಾಡಿರುವ ರೈತರನ್ನು ಸನ್ಮಾನಿಸಲಾಯಿತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ವಿಚಾರ ಸಂಕಿರಣದ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆರ್‌ಎಸ್‌ಎಸ್‌ನ ಮುಕಂದ್ ಅವರು ಸೇರಿದಂತೆ ಹಲವು ಗಣ್ಯರು, ಸ್ವಾಮೀಜಿಗಳು ಭಾಗವಹಿಸಿದ್ದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: 2023ರ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಲಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯಲು ಸಾಕಷ್ಟು ವಾತಾವರಣ ಹೆಚ್ಚಾಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, 2023ರ ವೇಳೆಗೆ ಕರ್ನಾಟಕ ಸಿರಿಧಾನ್ಯ ರಫ್ತು ಮಾಡುವಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲನೇ ರಾಜ್ಯವಾಗಬೇಕು. ಈ ಪ್ರಸ್ತಾವನೆಯನ್ನು ಎಲ್ಲಾ ದೇಶಗಳು ಒಪ್ಪಿಕೊಂಡಿವೆ ಎಂದು ಹೇಳಿದರು.
ಶೋಭಾ ಕರಂದ್ಲಾಜೆ ಹೇಳಿದ್ದೇನು?
ಕರ್ನಾಟಕದಲ್ಲಿ ಸಿರಿಧಾನ್ಯಕ್ಕೆ ಹೆಚ್ಚು ಒತ್ತು ನೀಡಲು ಹೆಚ್ಚು ಬೆಳೆಯಲು ಉತ್ತಮ ವಾತಾವರಣವಿದೆ. ಭಾರತದ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಎಲ್ಲಾ ತೋಟಗಾರಿಕಾ ಮತ್ತು ಆಹಾರಧಾನ್ಯಗಳ ರಫ್ತುದಾರರನ್ನು ಸೇರಿಸಿ ಸೆಪ್ಟೆಂಬರ್ 22 ರಂದು ಸಭೆ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯದ ಕೃಷಿ ಇಲಾಖೆ ಮಾಡಿದ ಮೊಬೈಲ್ ಬೆಳೆ ಆಪ್ ಸಮೀಕ್ಷೆ ಇಡೀ ದೇಶಕ್ಕೆ ಮಾದರಿಯಾಗಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ಒತ್ತು ನೀಡಿ ಗುಣಮಟ್ಟದ ಉತ್ಪಾದನೆ, ಸಂಗ್ರಹಣೆ, ಮಾರ್ಕೆಟಿಂಗ್, ಮಾರಾಟ ಮಾಡಲು ಪ್ರತಿಯೊಂದು ಜಿಲ್ಲೆಯಲ್ಲಿಯೂ ಕ್ಲಸ್ಟರ್ ಮಾಡಲು ನಿರ್ಧರಿಸಲಾಗಿದೆ.
ಕರ್ನಾಟಕದಲ್ಲಿ ಸಿರಿಧಾನ್ಯಕ್ಕೆ ಹೆಚ್ಚು ಒತ್ತು ನೀಡಲು ಹೆಚ್ಚು ಬೆಳೆಯಲು ಉತ್ತಮ ವಾತಾವರಣವಿದೆ. ಭಾರತದ ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಎಲ್ಲಾ ತೋಟಗಾರಿಕಾ ಮತ್ತು ಆಹಾರಧಾನ್ಯಗಳ ರಫ್ತುದಾರರನ್ನು ಸೇರಿಸಿ ಸೆಪ್ಟೆಂಬರ್ 22 ರಂದು ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ರಫ್ತುದಾರರು ಇದರಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯದ ಕೃಷಿ ಇಲಾಖೆ ಮಾಡಿದ ಮೊಬೈಲ್ ಬೆಳೆ ಆಪ್ ಸಮೀಕ್ಷೆ ಇಡೀ ದೇಶಕ್ಕೆ ಮಾದರಿಯಾಗಿದೆ.ಒಂದು ಜಿಲ್ಲೆಒಂದು ಉತ್ಪನ್ನ ಯೋಜನೆಗೆ ಒತ್ತು ನೀಡಿ ಗುಣಮಟ್ಟದ ಉತ್ಪಾದನೆ, ಸಂಗ್ರಹಣೆ, ಮಾರ್ಕೆಟಿಂಗ್, ಮಾರಾಟ ಮಾಡಲು ಪ್ರತಿಯೊಂದು ಜಿಲ್ಲೆಯಲ್ಲಿಯೂ ಕ್ಲಸ್ಟರ್ ಮಾಡಲು ನಿರ್ಧರಿಸಲಾಗಿದೆ.
ರೈತ ಕೃಷಿಯಲ್ಲಿ ಮುಂದುವರೆದು ಲಾಭದಾಯಕವಾಕಬೇಕು. ಕೃಷಿ ಜೀವನಾಧಾರ ಕಸುಬಾಗಿದ್ದು, ಒಟ್ಟು ಕೃಷಿಕರಲ್ಲಿ ಶೇ.80 ರಷ್ಟು ಸಣ್ಣ ಮತ್ತು ಮಧ್ಯಮ ಕೃಷಿಕರಿದ್ದಾರೆ. ಈ ಸಣ್ಣ ಮತ್ತು ಮಧ್ಯಮ ರೈತರು ನಗರಕ್ಕೆ ವಲಸೆ ಬರುವುದು ಹೆಚ್ಚಾಗುತ್ತಿದ್ದು, ಕಳೆದ 5-6 ವರ್ಷಗಳಲ್ಲಿ ಕೃಷಿಕನ ಬದುಕಿಗೆ ಒತ್ತು ಕೊಡಲು ಹಾಗೂ ರೈತನನ್ನು ರೈತರ ಆದಾಯ ಇಮ್ಮಡಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ತಲೆ ಎತ್ತಲಿದೆ ಸಾಂಬಾರ್ ಪಾರ್ಕ್
ಮೋದಿ ನೇತೃತ್ವದಲ್ಲಿ 1.31 ಸಾವಿರ ಕೋಟಿ ಈ ವರ್ಷ ಕೃಷಿ ಬಜೆಟ್ ಆಗಿದೆ. ಇದನ್ನು ಹೊರತುಪಡಿಸಿ ಕೃಷಿ ಮೂಲಭೂತ ನಿಧಿ ಅಡಿಯಲ್ಲಿ 1 ಲಕ್ಷ ಕೋ.ರೂ.ಹೆಚ್ಚುವರಿ ಹಣವನ್ನು ಕೊಯ್ಲೋತ್ತರ ಉತ್ಪಾದನೆಗೆ ಮಾರ್ಕೆಟಿಂಗ್ ಗೆ ಕೇಂದ್ರ ಹಣ ತೊಡಗಿಸುತ್ತಿದೆ. ಸಣ್ಣ ರೈತ ಕೃಷಿ ಜೊತೆ ಮಿಶ್ರ ಬೆಳೆ ಬೆಳೆದ ರೈತ ಲಾಭದಾಯಕವಾಗಿದೆ. ಡೈರಿ, ಹಸು ಸಾಕಾಣೆ, ಪಶುಸಂಗೋಪನೆ, ಅಗ್ರೋ ಫಾರೆಸ್ಟ್ರಿ, ಮೀನುಗಾರಿಕೆ ಸೇರಿದಂತೆ ಹಲವಾರು ಉಪಕಸುಬುಗಳಿಗೆ ಸರ್ಕಾರ ನೆರವು ನೀಡುತ್ತಿದೆ.ಎಲ್ಲಾ ರಾಜ್ಯ ಒಗ್ಗೂಡಿ ರೈತನನ್ನು ಲಾಭದಾಯಕನನ್ನಾಗಿಸಲು ಕೇಂದ್ರ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮೀನುಗಾರಿಗೆ, ಪಶುಸಂಗೋಪನೆ ಸೇರಿದಂತೆ ಬೇರೆಬೇರೆ ಕಸುಬುಗಳಿಗೆ ಒತ್ತು ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಾಯ ಮಾಡುತ್ತಿವೆ. ಎಲ್ಲಾ ಸಣ್ಣ ರೈತರನ್ನು ಒಗ್ಗೂಡಿಸಲು ಎಫ್.ಪಿ.ಒ (ಕೃಷಿ ಉತ್ಪಾದಕರ ಸಂಘ) 10 ಸಾವಿರ ಕೃಷಿ ಉತ್ಪಾದಕರ ಸಂಘ ಮಾಡಲು ಕೇಂದ್ರ ಒತ್ತು ನೀಡಲು ನಿರ್ಧರಿಸಿದೆ. 750 ಎಫ್.ಪಿ.ಓಗಳನ್ನು ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಾಗಲು ಸಿಎಂ ಬೊಮ್ಮಾಯಿ ಕರೆ ನೀಡಿದ್ದಾರೆ. ಅದರಂತೆ ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಎಫ್.ಪಿ.ಓ ಮಾಡಲು ಉದ್ದೇಶಿಸಲಾಗಿದೆ.
ಪೆಟ್ರೋಲ್ ಗೆ ಪರ್ಯಾಯವಾಗಿ ಎಥೆನಾಲ್ ಬಳಸಬಹುದಾಗಿದ್ದು, ಕರ್ನಾಟಕದಲ್ಲಿ ಮಂಡ್ಯ ಸೇರಿದಂತೆ ಬಹುತೇಕ ನೀರಾವರಿ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದು, ಸಕ್ಕರೆಯಿಂದ ಎಥೆನಾಲ್ ತಯಾರಿಸಲು ಒತ್ತು ನೀಡಲಾಗುತ್ತಿದೆ. 9.5 ಬಿಲಿಯನ್ ಮೆಟ್ರಿಕ್ ಟನ್ ಸಕ್ಕರೆಯಿಂದ ಎಥಿನಾಲ್ ಮಾಡಲಾಗಿದೆ. ಅದರಂತೆ ಗೋಧಿ ಸೇರಿದಂತೆ ಬಹುತೇಕ ಧಾನ್ಯಗಳಿಂದಲೂ ಎಥಿನಾಲ್ ತಯಾರಿಸಬಹುದಾಗಿದೆ .
ರಾಜ್ಯ ಸರ್ಕಾರ ಅಭಿವೃದ್ಧಿ ಪಡಿಸಿರುವ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು. ಆಂಧ್ರ ಪ್ರದೇಶದಲ್ಲಿ ಕೃಷಿ ಭರವಸಾ ಯೋಜನೆ ಜಾರಿ ಮಾಡಿದ್ದಾರೆ. ತಮಿಳುನಾಡಿನಲ್ಲಿ ತರಕಾರಿ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಈ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕು. ರಫ್ತು ಉದ್ಯಮಕ್ಕೆ ಉತ್ತೇಜನ ನೀಡಲು ಕ್ರಮ ವಹಿಸಲಾಗುವುದು. ಒಳನಾಡಿನ ಮೀನುಗಾರಿಕೆಗೆ ಉತ್ತೇಜನ. ರೇಷ್ಮೆ ಬೆಳೆ ಉತ್ತೇಜನ, ರೇಷ್ಮೆಗೆ ಈ ಮಾರುಕಟ್ಟೆ ಜಾರಿಗೆ ತರಲು ತೀರ್ಮಾನ. ಶೇ.50 ರಷ್ಟು ರೈತರು ಇ ಪೇಮೆಂಟ್ ವ್ಯವಸ್ಥೆಗೆ ಅಳವಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಈ ಬಾರಿಯೂ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಬೇಕು: ಬಿಎಸ್‍ವೈ
57 ಕೋಟಿ ರೈತರಿಗೆ ನೇರವಾಗಿ ಅವರ ಅಕೌಂಟ್ ಗೆ ಬೆಳೆ ವಿಮೆ ಹಣ ತಲುಪಿಸಲಾಗಿದೆ. ದೇಶ ಇತಿಹಾಸದಲ್ಲಿ 320 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಲಾಗಿದೆ. ಫುಡ್ ಪ್ರೊಸೆಸಿಂಗ್ ಆಹಾರ ರಫ್ತು ಮಾಡಲು ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ವಿಂಗ್ ಮಾಡಲು ಮನವಿ ಮಾಡಿದ್ದೇನೆ. ಅವರೊಂದಿಗೆ ಚರ್ಚಿಸಲಾಗುತ್ತಿದೆ.
ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಎನ್ ಆರ್.ಇಜಿ ಮೂಲಕ ಜಾರಿಗೆ ಆದ್ಯತೆ ನೀಡಲಾಗುವುದು. ಎಫ್ಪಿ ಒ ಗಳ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುವುದು. ಎಫ್‍ಪಿಒ 25 ವಿವಿಧ ರೀತಿಯ ಕ್ರಮಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರವಾಹ ಪರಿಹಾರವಾಗಿ ಎನ್ ಡಿ ಆರ್ ಎಫ್ ಮೂಲಕ 630 ಕೋಟಿ ಬಿಡುಗಡೆ ಮಾಡಲಾಗಿದೆ. ಕೊರೊನಾ ದಿಂದ ಎರಡು ವರ್ಷ ಹಿನ್ನಡೆಯಾಗಿದೆ. ಕೊರೊನಾ ಕಾರಣದಿಂದ ಸ್ವಲ್ಪ ಮುಂದೂಡಿಕೆಯಾಗಿದೆ .ರಸಗೊಬ್ಬರ ಬೆಲೆ ಹೆಚ್ಚಳವಾದರೂ ಕೇಂದ್ರ ಸರ್ಕಾರ ಸಬ್ಸಿಡಿ ಕೊಡುತ್ತಿದೆ. ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ ಮೂರು ಬಿಲ್ ಗಳ ಬಗ್ಗೆ ಬಹಳ ಸ್ಪಷ್ಟವಿದೆ. ಮೂವತ್ತು ವರ್ಷಗಳಿಂದ ಅನೇಕ ಸಮಿತಿಗಳು ನೀಡಿರುವ ವರದಿಗಳ ಆಧಾರದಲ್ಲಿ ಕಾಯ್ದೆಗಳನ್ನು ಜಾರಿಗೆ ಜಾರಿಗೆ ತರಲಾಗಿದೆ. ಸ್ವಾಮಿನಾಥನ್ ವರದಿ ಪ್ರಕಾರ ಎಪಿಎಂಸಿ ಯಲ್ಲಿ ರೈತರಿಗೆ ಅನ್ಯಾಯಗುತ್ತಿದೆ ಎಂದು ಹೇಳಿದ್ದಾರೆ. ರೈತರ ಜೊತೆ ಕೇಂದ್ರ ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದರು.
– ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ – ರಾಜ್ಯವ್ಯಾಪಿ ಜನಪ್ರಿಯವಾಗುತ್ತಿದೆ ಸಿರಿಧಾನ್ಯಗಳ ಪೌಡರ್
ಮೇಲ್ನೋಟಕ್ಕೆ ಎಷ್ಟೇ ಗಟ್ಟಿಮುಟ್ಟಾಗಿದ್ರು ಕಾಯಿಲೆಗಳು ಕಾಡಲು ಶುರು ಮಾಡಿವೆ. ಕಾಯಿಲೆ ಅಂದಾಕ್ಷಣ ದೊಡ್ಡದೊಡ್ಡ ಕಾಯಿಲೆಗಳೇ ಆಗಬೇಕೆಂದೇನಿಲ್ಲ. ದೊಡ್ಡ ಕಾಯಿಲೆಯಿಂದ ಹಿಡಿದು ಸಣ್ಣ ನೆಗಡಿ, ಕೆಮ್ಮೂ ಸಹ ಘಟಾನುಘಟಿಗಳನ್ನ ನಡುಗಿಸಿ ಬಿಡುತ್ತಿದೆ. ಇಷ್ಟಕ್ಕೆಲ್ಲ ಕಾರಣ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದು.
ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣ ಏನು ಅಂತ ನೋಡಿದರೆ ನಾವು ತಿನ್ನುತ್ತಿರುವ ಆಹಾರದಲ್ಲಿ ಯಾವುದೇ ಸತ್ವ ಇಲ್ಲ. ಜೊತೆಗೆ ಆಹಾರವೇ ಸ್ಲೋ ಪಾಯಿಸನ್ ಆಗಿ ನಮ್ಮನ್ನ ನಿಶ್ಯಕ್ತರನ್ನಾಗಿ ಮಾಡುತ್ತಿದೆ. ನಾವು ತಿನ್ನುತ್ತಿರುವ ಆಹಾರ ಬೆಳೆಯಲು ಭೂಮಿಗೆ ಹಾಕುತ್ತಿರುವ ರಸಗೊಬ್ಬರ, ಕೀಟಗಳಿಂದ ಕಾಪಾಡಲು ಕೀಟ ನಾಶಕ ಬಳಸುತ್ತಿದ್ದಾರೆ. ಬೆಳೆ ಬೆಳೆದ ಮೇಲೆ ಇದನ್ನು ನಾವು ಆಹಾರವಾಗಿ ಬಳಸುತ್ತಿದ್ದೇವೆ. ಇದರಲ್ಲಿ ಬಹುತೇಕ ಪೋಷಕಾಂಶಗಳು ನಾಶವಾಗಿ ನಮ್ಮ ದೇಹಕ್ಕೆ ರಸಗೊಬ್ಬರದ ಅಂಶ ಹಾಗೂ ಕೀಟ ನಾಶಕ ಅಂಶ ಸೇರ್ಪಡೆಯಾಗ್ತಿದೆ. ಇದು ನಮ್ಮ ಆರೋಗ್ಯ ಹಾಳಾಗಲು ಕಾರಣವಾಗಿದೆ.
ಇದಕ್ಕೆಲ್ಲ ಪರಿಹಾರ ಏನು ಅಂತ ನೋಡೋದಾದ್ರೆ, ಮೊದಲು ನಮ್ಮ ಆಹಾರದ ಆರೋಗ್ಯವನ್ನ ಕಾಪಾಡಬೇಕು. ಅಂದ್ರೆ ರಸಗೊಬ್ಬರ ರಹಿತ, ಕೀಟ ನಾಶಕ ಬಳಸದೆ ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರವನ್ನ ಬಳಸಲು ಶುರು ಮಾಡಬೇಕು. ಇಷ್ಟಕ್ಕೆ ನಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳು ಸಿಗೋದು ಸ್ವಲ್ಪ ಕಷ್ಟ. ಯಾಕಂದ್ರೆ ನಮ್ಮಲ್ಲಿ ಒಂದೊಂದು ಧಾನ್ಯಗಳು ಒಂದೊಂದು ವಿಶೇಷ ಗುಣಗಳನ್ನ ಹೊಂದಿದೆ.
ಸಿರಿಧಾನ್ಯಗಳು ಇತ್ತೇಚೆಗೆ ಸಾಮಾನ್ಯವಾಗಿ ಕಾಡುವ ಬಿಪಿ, ಶುಗರ್ ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಬಿಜಾಪುರದಿಂದ ಬಿಳಿ ಜೋಳ, ಬಳ್ಳಾರಿ ನವಣೆ, ಹಾವೇರಿಯ ಕಡಲೆಕಾಳು, ಶಿರಾದ ಕೊರಲೆ, ಚಿಕ್ಕನಾಯಕನಹಳ್ಳಿಯ ಹೆಸರುಕಾಳು, ಚಿಕ್ಕಮಗಳೂರಿನ ಏಲಕ್ಕಿ, ಪುತ್ತೂರಿನ ಮೆಣಸು, ಬೆಳ್ತಂಗಡಿಯ ಗೋಡಂಬಿ, ಚಳ್ಳಕೆರೆಯ ಕಡಲೆ ಬೀಜ, ಕೋಲಾರದ ರಾಗಿ, ಮೈಸೂರಿನ ಹುರುಳಿಕಾಳು, ದಾವಣಗೆರೆಯ ಮುಸುಕಿನ ಜೋಳ, ಹೊಸದುರ್ಗದ ಸಾಮೆ ಊದಲು, ಕಲಬುರಗಿಯಿಂದ ತೊಗರಿಕಾಳು, ಬಾಗಲಕೋಟೆಯ ಸಜ್ಜೆ ಸೇರಿದಂತೆ 9 ಸಿರಿಧಾನ್ಯ ಹಾಗೂ 14 ಕಾಳುಗಳನ್ನ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ರೈತರಿಂದ ನೇರವಾಗಿ ಖರೀದಿ ಮಾಡಿ ಈ ಜೀನಿಯನ್ನ ತಯಾರಿಸಲಾಗುತ್ತದೆ. ರೈತರಿಂದ ನೇರವಾಗಿ ಸಿರಿಧಾನ್ಯಗಳನ್ನ ಖರೀದಿ ಮಾಡಿದ ನಂತರ ಅದನ್ನ ಅಕ್ಕಿ ಮಾಡಲಾಗುತ್ತದೆ.
ಸಿರಿಧಾನ್ಯಗಳು ಸೇರಿದಂತೆ 14 ರೀತಿಯ ಕಾಳುಗಳನ್ನು ನೀರಿನಲ್ಲಿ ತೊಳೆದು ನೆರಳಿನಲ್ಲಿ ಒಣಗಿಹಾಕಲಾಗುತ್ತದೆ. ಒಣಗಿದ ಕಾಳುಗಳನ್ನ ಮಹಿಳೆಯರು ಕ್ಲೀನ್ ಮಾಡ್ತಾರೆ. ನಂತರ ಮಣ್ಣಿನ ಮಡಿಕೆಯಲ್ಲಿ ಹದವಾಗಿ ಹುರಿಯಲಾಗುತ್ತೆ. ಹುರಿದ ಕಾಳುಗಳನ್ನ ಸರಿಯಾದ ಪ್ರಮಾಣದಲ್ಲಿ ಒಟ್ಟಿಗೆ ಮಿಶ್ರಣ ಮಾಡಲಾಗುತ್ತದೆ.
ನಂತರ ಹುರಿದ ಕಾಳುಗಳನ್ನ ಪೌಡರ್ ಮಾಡಿ ಪ್ಯಾಕ್ ಮಾಡಲಾಗುತ್ತದೆ. ನೀವು ಮನೆಯಲ್ಲಿ ಹೇಗೆ ಅಕ್ಕಿ ಹಿಟ್ಟು, ರಾಗಿ ಹಿಟ್ಟನ್ನ ಮಾಡುತ್ತಿರೋ ಅದೇ ರೀತಿ ಮಾಡಲಾಗುತ್ತದೆ. ಇದರ ಎಕ್ಸ್ಪೆರಿ ಡೇಟ್ ಕೇವಲ 5 ತಿಂಗಳು ಮಾತ್ರ. ನ್ಯಾಚುರಲ್ ಆಗಿ ಪೌಡರ್ ಪ್ಯಾಕೇಟ್ ಆದ 5 ತಿಂಗಳ ವರೆಗೆ ಕೆಡುವುದಿಲ್ಲ. ಓಪನ್ ಮಾಡಿದ ನಂತರ ಒಂದು ತಿಂಗಳಲ್ಲಿ ಖಾಲಿ ಮಾಡಬೇಕು. ಬಳಕೆ ಮಾಡುವಾಗ ಮಾತ್ರ ತೆರೆದು, ಉಳಿದ ಸಂದರ್ಭದಲ್ಲಿ ಪ್ಯಾಕೇಟ್ ಮುಚ್ಚಿಡಬೇಕು.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಯರಗುಂಟೆ ಗ್ರಾಮದಲ್ಲಿ 200 ಜನರಿಗೆ ದಿಲೀಪ್ ಉದ್ಯೋಗ ನೀಡಿದ್ದಾರೆ. ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ಯಂತ್ರಗಳನ್ನ ಹಾಕದೇ ಕೈಯಿಂದಲೇ ಮಾಡಿಸಲಾಗುತ್ತಿದೆ. ಒಂದು ಯಂತ್ರ 20 ಜನರ ಕೆಲಸ ಕಸಿದುಕೊಳ್ಳುತ್ತದೆ. ಹಾಗಾಗಿ ನಾವು ಯಂತ್ರಗಳನ್ನ ಹಾಕೋದಿಲ್ಲ ಅಂತಾರೆ ದಿಲೀಪ್.
ಮಧ್ಯಾಹ್ನ ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನೂ ಸಹ ದಿಲೀಪ್ ಮಾಡ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀನಿ ತಯಾರಿಕೆ ಮಾಡ್ತಿದ್ರು. ಬೆಂಗಳೂರಿನ ಕಂಪನಿಗಳಂತೆಯೇ ಕಾರ್ಮಿಕರಿಗೆ ಯೂನಿಫಾರಂ ಜೊತೆಗೆ ಹೈಜೆನಿಕ್ ಮೇಂಟೇನ್ ಮಾಡಲು ಹ್ಯಾಂಡ್ ಗ್ಲೌಸ್, ಮಾಸ್ಕ್, ಕ್ಯಾಪ್‍ಗಳನ್ನು ಇಲ್ಲಿನ ಕಾರ್ಮಿಕರು ಬಳಸ್ತಾರೆ. ಒಟ್ಟಾರೆ ಜೀನಿ ತಯಾರಿಕೆಯಲ್ಲಿ ಸುರಕ್ಷಿತಾ ಕ್ರಮಗಳನ್ನ ಜೀವಿತಾ ಎಂಟಪ್ರ್ರೈಸಸ್ ಅನುಸರಿಕೊಂಡು ಹೋಗುತ್ತಿದೆ.