Tag: ಸಿಯೋಲ್

  • ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿದ ಟ್ರಂಪ್

    ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿದ ಟ್ರಂಪ್

    – ಅಪರೂಪದ ಭೂಮಿಯ ನಿಕ್ಷೇಪಗಳ ಪೂರೈಕೆಗೆ ಅಮೆರಿಕ – ಚೀನಾ ಒಪ್ಪಂದ

    ನವದೆಹಲಿ/ಸಿಯೋಲ್: ಚೀನಾ (China) ಮೇಲೆ ಅಮೆರಿಕ (America) ವಿಧಿಸುತ್ತಿರುವ ಶೇ.57ರಷ್ಟು ಟ್ಯಾರಿಫ್ (Tariffs) ಅನ್ನು ಶೇ.47ಕ್ಕೆ ಇಳಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.

    ಆರು ವರ್ಷಗಳ ನಂತರ ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನ ಭೇಟಿಯಾಗಿ ದ್ವೀಪಕ್ಷೀಯ ಮಾತುಕತೆ ನಡೆಸಿದ್ದಾರೆ. ಎರಡು ದೇಶಗಳ ನಡುವೆ ಅಪರೂಪದ ಭೂಮಿಯ ನಿಕ್ಷೇಪಗಳ ಪೂರೈಕೆಗೆ ಒಪ್ಪಂದವಾಗಿದೆ. ಸಭೆಯ ನಂತರ ರಷ್ಯಾದಿಂದ ಕಚ್ಚಾತೈಲ ಪೂರೈಕೆ ನಡುವೆ ಚೀನಾದಿಂದ ಆಮದು ಮಾಡುವ ಸರಕುಗಳಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು 57% ನಿಂದ 47%ಗೆ ಕಡಿಮೆ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದನ್ನೂ ಓದಿ: 6 ವರ್ಷಗಳ ನಂತರ ದ.ಕೊರಿಯಾದಲ್ಲಿ ಅಮೆರಿಕ-ಚೀನಾ ಅಧ್ಯಕ್ಷರ ಭೇಟಿ; ಜಿನ್‌ಪಿಂಗ್‌ ಶ್ರೇಷ್ಠ ನಾಯಕ ಎಂದ ಟ್ರಂಪ್‌

    ಬಳಿಕ ಮಾತನಾಡಿದ ಟ್ರಂಪ್, ಈ ಸಭೆಯಲ್ಲಿ ಬಹಳಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಎರಡು ದೇಶಗಳ ನಡುವೆ ವ್ಯಾಪಾರ ಮತ್ತು ಸಹಕಾರದ ಬಗ್ಗೆ ಹಲವು ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ನಾವು ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿದ್ದೇವೆ. ನಮಗೆ ಉತ್ತಮ ಸಂಬಂಧವಿದೆ. ನಾವು ಅತ್ಯಂತ ಯಶಸ್ವಿ ಸಭೆ ನಡೆಸಲಿದ್ದೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಜಿನ್‌ಪಿಂಗ್ ಬಹಳ ಕಠಿಣ ಸಂಧಾನಕಾರರು. ಅವರು ಒಂದು ದೊಡ್ಡ ದೇಶದ ಶ್ರೇಷ್ಠ ನಾಯಕ. ನಾವು ಬಹಳ ಸಮಯದವರೆಗೆ ಉತ್ತಮ ಸಂಬಂಧವನ್ನು ಹೊಂದಲಿದ್ದೇವೆ ಟ್ರಂಪ್ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಕಠಿಣ ವ್ಯಕ್ತಿ, ಶೀಘ್ರವೇ ಭಾರತದ ಜೊತೆ ವ್ಯಾಪಾರ ಒಪ್ಪಂದ: ಟ್ರಂಪ್‌ ಸುಳಿವು

    ಹಲವು ಸವಾಲುಗಳ ನಡುವೆಯೂ ಚೀನಾ ಮತ್ತು ಯುಎಸ್ ಸಂಬಂಧ ಉತ್ತಮವಾಗಿದೆ. ನಾವಿಬ್ಬರೂ ಸರಿಯಾದ ಹಾದಿಯಲ್ಲಿ ಉಳಿಯಬೇಕು. ಚೀನಾ-ಯುಎಸ್ ಸಂಬಂಧಗಳನ್ನು ಖಚಿತಪಡಿಸಿಕೊಳ್ಳಬೇಕು. ಚೀನಾದ ಅಭಿವೃದ್ಧಿಯು ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸುವ ನಿಮ್ಮ ದೃಷ್ಟಿಕೋನದೊಂದಿಗೆ ಕೈಜೋಡಿಸುತ್ತದೆ ಎಂದು ನಾನು ಭಾವಿಸಿದ್ದೇನೆ. ಎರಡೂ ದೇಶಗಳು ಪರಸ್ಪರ ಯಶಸ್ವಿಯಾಗಲು ಮತ್ತು ಒಟ್ಟಿಗೆ ಸಮೃದ್ಧಿಯಾಗಲು ಸಂಪೂರ್ಣವಾಗಿ ಸಮರ್ಥವಾಗಿವೆ. ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಪಾಲುದಾರರು ಮತ್ತು ಸ್ನೇಹಿತರಾಗಿರಬೇಕು ಎಂದು ನಾನು ಹಲವು ಬಾರಿ ಸಾರ್ವಜನಿಕವಾಗಿ ಹೇಳಿದ್ದೇನೆ. ಇತಿಹಾಸವು ನಮಗೆ ಕಲಿಸಿದ್ದು ಇದನ್ನೇ ಎಂದು ಜಿನ್‌ಪಿಂಗ್ ಮಾತನಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ದುರ್ಬುದ್ಧಿ – ವಯನಾಡ್ ಪ್ರಿಯಾಂಕಾ ಗಾಂಧಿ ಕ್ಷೇತ್ರ ಅಂತ ಆರೋಪ ಮಾಡ್ತಿದ್ದಾರೆ: ರಾಮಲಿಂಗಾರೆಡ್ಡಿ

    ಚೀನಾ ನಡುವೆ ಮಾತುಕತೆ ನಡೆಯುತ್ತಿರುವ ಹೊತ್ತಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ತಕ್ಷಣ ಪ್ರಾರಂಭಿಸಲು ಯುದ್ಧ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ರಷ್ಯಾ ಮತ್ತು ಚೀನಾ ನಡೆಸಿದ ಪರಮಾಣು ಪರೀಕ್ಷೆಗಳಿಗೆ ನೇರ ಪ್ರತಿಕ್ರಿಯೆಯಾಗಿ ಮೂವತ್ತು ವರ್ಷಗಳ ಬಳಿಕ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆ ಅಮೆರಿಕ ಮುಂದಾಗಿದೆ. ಇದನ್ನೂ ಓದಿ: ದಾಖಲಾತಿ ಇಟ್ಟುಕೊಂಡು ಬಿಜೆಪಿಯವ್ರು ಆರೋಪ ಮಾಡಲಿ – ಖಾದರ್‌ ಪರ ರಾಮಲಿಂಗಾರೆಡ್ಡಿ ಬ್ಯಾಟಿಂಗ್

  • ಪತ್ನಿಯ ವಿಚ್ಛೇದನದಿಂದ ಕೋಪಗೊಂಡ ಪತಿ – ರೈಲಿಗೆ ಬೆಂಕಿ ಹಚ್ಚಿ ಹುಚ್ಚಾಟ

    ಪತ್ನಿಯ ವಿಚ್ಛೇದನದಿಂದ ಕೋಪಗೊಂಡ ಪತಿ – ರೈಲಿಗೆ ಬೆಂಕಿ ಹಚ್ಚಿ ಹುಚ್ಚಾಟ

    – 22 ಜನರಿಗೆ ಉಸಿರಾಟದ ಸಮಸ್ಯೆ, 129 ಜನರಿಗೆ ಸ್ಥಳದಲ್ಲೇ ಚಿಕಿತ್ಸೆ

    ಸಿಯೋಲ್: ಹೆಂಡತಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡ ಪತಿ ರೈಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮಾಡಿದ ಘಟನೆ ದಕ್ಷಿಣ ಕೊರಿಯಾದ (South Korea) ಸಿಯೋಲ್‌ನಲ್ಲಿ (Seoul) ನಡೆದಿದೆ.

    ರೈಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಯನ್ನು ವಾನ್ (67) ಎಂದು ಗುರುತಿಸಲಾಗಿದೆ. ಪತ್ನಿ ವಿಚ್ಛೇದನ ಕೊಟ್ಟ ಕೋಪದಲ್ಲಿಯೇ ಪತಿ ಯೆಯೋಯಿನಾರು ನಿಲ್ದಾಣದಿಂದ ಮಾಪೋ ನಿಲ್ದಾಣಕ್ಕೆ ತೆರಳುವ ರೈಲಿಗೆ ಹತ್ತಿದ್ದ. ಜೊತೆಗೆ ಬೆಂಕಿ ಹಚ್ಚುವ ಪ್ಲ್ಯಾನ್‌ ಕೂಡ ಮಾಡಿಕೊಂಡಿದ್ದ. ಬೆಳಿಗ್ಗೆ 8:42ರ ಸುಮಾರಿಗೆ ರೈಲು ಹಾನ್ ನದಿಯ ಕೆಳಗಿರುವ ಸಿಯೋಲ್ ಸುರಂಗ ಮಾರ್ಗ ೫ರಲ್ಲಿ ಚಲಿಸುತ್ತಿದ್ದಂತೆಯೇ ದಿಢೀರನೇ ಗ್ಯಾಸೋಲಿನ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹತ್ತುತ್ತಲೇ ತನ್ನ ಬಟ್ಟೆಗೂ ಬೆಂಕಿ ಹಚ್ಚಿಕೊಂಡಿದ್ದಾನೆ. ಇದರ ಪರಿಣಾಮ ರೈಲಿನಲ್ಲಿದ್ದ ೨೨ ಜನರು ಉಸಿರಾಟದ ಸಮಸ್ಯೆಯಾಗಿದೆ. ಉಸಿರಾಟದ ಸಮಸ್ಯೆಯಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ದಾವಣಗೆರೆ | ವಂದೇ ಭಾರತ್‌ ರೈಲಲ್ಲಿ ಕಾಣಿಸಿಕೊಂಡ ಬೆಂಕಿ – ತಪ್ಪಿದ ಭಾರೀ ಅನಾಹುತ

    129 ಜನರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ವಾನ್‌ನನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯಿಂದಾಗಿ ರೈಲಿಗೆ ಸುಮಾರು 330 ಮಿಲಿಯನ್‌ನಷ್ಟು (33 ಕೋಟಿ ರೂ.) ಹಾನಿಯಾಗಿದೆ ಎಂದು ಮೂಲಗಳು ತಿಳಿಸಿದೆ.

    ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೊಲೆ ಯತ್ನ ಹಾಗೂ ರೈಲ್ವೆ ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಆತನ ವಿರುದ್ಧ ಕೇಸ್ ದಾಖಲಿಸಿದ್ದಾರೆ.ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ದಾರುಣ ಸಾವು – ಸ್ಫೋಟಕ ರಹಸ್ಯ ಬಿಚ್ಚಿಟ್ಟ ಆ ಪತ್ರ

  • ದಕ್ಷಿಣ ಕೊರಿಯಾದಲ್ಲಿ ಕಾಡ್ಗಿಚ್ಚು – 24 ಸಾವು, 27 ಸಾವಿರ ಜನರ ಸ್ಥಳಾಂತರ

    ದಕ್ಷಿಣ ಕೊರಿಯಾದಲ್ಲಿ ಕಾಡ್ಗಿಚ್ಚು – 24 ಸಾವು, 27 ಸಾವಿರ ಜನರ ಸ್ಥಳಾಂತರ

    – 200 ಕಟ್ಟಡಗಳಿಗೆ ಹಾನಿ

    ಸಿಯೋಲ್: ದಕ್ಷಿಣ ಕೊರಿಯಾದ (South Korea) ಆಗ್ನೇಯ ಭಾಗಗಳಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿಗೆ 24 ಮಂದಿ ಸಾವನ್ನಪ್ಪಿದ್ದು, 200 ಕಟ್ಟಡಗಳಿಗೆ ಹಾನಿಯಾಗಿದೆ. ಅಲ್ಲದೇ ಆ ಪ್ರದೇಶದಲ್ಲಿದ್ದ 27,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಉತ್ತರ ಜಿಯೋಂಗ್ ಸಾಂಗ್ ಪ್ರಾಂತ್ಯದ ಸ್ಯಾಚಿಯಾಂಗ್ (Sancheong) ಕೌಂಟಿಯಲ್ಲಿ ಮಾ. 21ರಂದು ಸಂಜೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ರಾಜಧಾನಿ ಸಿಯೋಲ್‌ನಿಂದ ಸುಮಾರು 180 ಕಿ.ಮೀ ಆಗ್ನೇಯಕ್ಕಿರುವ ಉಯಿಸಿಯಾಂಗ್ ಕೌಂಟಿ ಭಾಗಕ್ಕೆ ಈ ಬೆಂಕಿಯು ವ್ಯಾಪಿಸಿತ್ತು. ಇದನ್ನೂ ಓದಿ: ಸತ್ಯವಂತರಿಗಿದು ಕಾಲವಲ್ಲ.. ದುಷ್ಟಜನರಿಗೆ ಸುಭಿಕ್ಷಕಾಲ: ಉಚ್ಚಾಟನೆಗೆ ದಾಸರ ಹಾಡಿನ ಮೂಲಕ ಯತ್ನಾಳ್ ಕೌಂಟರ್

    ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಗೌನ್ಸಾ ದೇವಾಲಯ ಸೇರಿದಂತೆ ನೂರಾರು ಕಟ್ಟಡಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಜೊತೆಗೆ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ ಪ್ರವಾಸಿ ತಾಣ ಹಾಹೋ ಫೋಕ್ ಗ್ರಾಮದ 8 ಕಿ.ಮೀ ಪ್ರದೇಶಕ್ಕೆ ಬೆಂಕಿ ಆವರಿಸಿಕೊಂಡಿದೆ. ಇದನ್ನೂ ಓದಿ: Aashiqui 3: ಕಾರ್ತಿಕ್‌ ಆರ್ಯನ್‌, ಶ್ರೀಲೀಲಾ ನಟನೆಯ ಸಿನಿಮಾ ಶೂಟಿಂಗ್‌ ಶುರು

    ಉಯಿಸಿಯಾಂಗ್‌ನಲ್ಲಿ (Uiseong) ಕಾಡ್ಗಿಚ್ಚು ನಿಯಂತ್ರಣ ಕಾರ್ಯದಲ್ಲಿದ್ದ ಹೆಲಿಕಾಪ್ಟರೊಂದು ಪತನಗೊಂಡಿದೆ. ಪರಿಣಾಮ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾರೆ. ಕಾಡ್ಗಿಚ್ಚಿನಲ್ಲಿ 26ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಜೈಕಾರ ಹಾಕೋನೇ ಬೇರೆ, ಜಿಲೇಬಿ ತಿನ್ನೋರೆ ಬೇರೆ: ಶಿವರಾಮ್ ಹೆಬ್ಬಾರ್

    ಉಯಿಸಿಯಾಂಗ್ ಕೌಂಟಿ ಪ್ರದೇಶದಲ್ಲಿ ಹೆಚ್ಚು ಗಾಳಿ ಬೀಸುತ್ತಿದ್ದು, ಬೆಂಕಿಯ ಕೆನ್ನಾಲಿಗೆಯೂ ಅನೇಕ ಪ್ರದೇಶಗಳಿಗೆ ಆವರಿಸಿಕೊಳ್ಳುತ್ತಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಪರಮೇಶ್ವರ್‌ಗೆ ಮುಖ್ಯಮಂತ್ರಿ ಭಾಗ್ಯ: ಹಾಲುಮತ ಗೊರವಯ್ಯರಿಂದ ಕಾರ್ಣಿಕ ಭವಿಷ್ಯ

    130 ಹೆಲಿಕಾಪ್ಟರ್, 4,650 ಅಗ್ನಿಶಾಮಕ ದಳ ಹಾಗೂ ಸೈನಿಕರ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

  • ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಸಿಯೋಲ್: ಹಠಾತ್‌ ಬೆಳವಣಿಗೆಯಲ್ಲಿ ದಕ್ಷಿಣ ಕೊರಿಯಾದ (South Korea) ತುರ್ತು ಪರಿಸ್ಥಿತಿಯನ್ನು  ಘೋಷಣೆ ಮಾಡಲಾಗಿದೆ.

    ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಲ್ (Yoon Suk Yeol) ಅವರು ಮಂಗಳವಾರ ರಾತ್ರಿ ದೂರದರ್ಶನ ಭಾಷಣದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು (Martial Law) ಘೋಷಣೆ ಮಾಡುವುದಾಗಿ ಪ್ರಕಟಿಸಿದರು.

    ಉತ್ತರ ಕೊರಿಯಾದ (North Korea) ಕಮ್ಯುನಿಸ್ಟ್ ಪಡೆಗಳ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ಜನರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಲೂಟಿ ಮಾಡುವ ರಾಜ್ಯ ವಿರೋಧಿ ಅಂಶಗಳನ್ನು ನಿರ್ಮೂಲನೆ ಮಾಡಲು ತುರ್ತು ಸಮರ ಕಾನೂನನ್ನು ಘೋಷಿಸುತ್ತೇನೆ ಎಂದು ಯೂನ್ ಸುಕ್ ಯೆಲ್ ತಮ್ಮ ಭಾಷಣದಲ್ಲಿ ತಿಳಿಸಿದರು.

    ಜನರ ಜೀವನೋಪಾಯವನ್ನು ಪರಿಗಣಿಸದೆ, ವಿರೋಧ ಪಕ್ಷವು ಕೇವಲ ದೋಷಾರೋಪಣೆ ಮಾಡುತ್ತಿದೆ. ವಿಶೇಷ ತನಿಖೆಗಳು ಮತ್ತು ತಮ್ಮ ನಾಯಕನನ್ನು ನ್ಯಾಯದಿಂದ ರಕ್ಷಿಸುವ ಸಲುವಾಗಿ ಆಡಳಿತವನ್ನು ನಿಷ್ಕ್ರಿಯಗೊಳಿಸಿದೆ ಎಂದು ದೂರಿದರು.


    ದಕ್ಷಿಣ ಕೊರಿಯಾದಲ್ಲಿ 1980 ರ ನಂತರ ಮೊದಲ ಬಾರಿಗೆ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ಮಿಲಿಟರಿ ಆಡಳಿತದ ಸಮಯದಲ್ಲಿ ಸಂಸತ್ತು ಮತ್ತು ರಾಜಕೀಯ ಪಕ್ಷಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮಾಧ್ಯಮಗಳು ಮಿಲಿಟರಿ ನಿಯಂತ್ರಣದಲ್ಲಿರುತ್ತಾರೆ ಎಂದು ವರದಿಯಾಗಿದೆ.

  • ಶವವಾಗಿ ಪತ್ತೆಯಾದ 25 ವರ್ಷದ ಖ್ಯಾತ ಪಾಪ್ ಗಾಯಕ: ಮುಂದುವರೆದ ಸರಣಿ ಸಾವು

    ಶವವಾಗಿ ಪತ್ತೆಯಾದ 25 ವರ್ಷದ ಖ್ಯಾತ ಪಾಪ್ ಗಾಯಕ: ಮುಂದುವರೆದ ಸರಣಿ ಸಾವು

    ಕ್ಷಿಣ ಕೊರಿಯಾದಲ್ಲಿ (South Korea) ಕಳೆದ ಮೂರ್ನಾಲ್ಕು ವರ್ಷಗಳಿಂದ ನಟರು ಹಾಗೂ ಗಾಯಕರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ (Death). ಈ ಹಿಂದೆ ಖ್ಯಾತ ಪಾಪ್ ಗಾಯಕರಾದ ಜೊಂಗ್ಹ್ಯನ್,  ಗೂ ಹಾರಾ, ಸುಲ್ಲಿ ಹೀಗೆ ಅನೇಕ ಗಾಯಕರು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಯುವ ಪಾಪ್ ಗಾಯಕ ಮೂನ್ ಬಿನ್ (Moon Bin) ಮೃತದೇಹ ಅವರ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.

    ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ 25ರ ಹರೆಯದ ಗಾಯಕ ಕೊರಿಯಾದ ಪ್ರಸಿದ್ಧ ಬಾಯ್ ಬ್ಯಾಂಡ್ ಆಸ್ಟ್ರೋದ (Boy Band Astro) ಸದ್ಯಸನಾಗಿದ್ದರು. ನಿನ್ನೆ ರಾತ್ರಿ ಶವವಾಗಿ ಪತ್ತೆಯಾಗುವ ಮೂಲಕ ಅಸಂಖ್ಯಾತ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಅವರ ಹಠಾತ್ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಮೂನ್ ಬಿನ್ ದಕ್ಷಿಣ ಕೊರಿಯಾದ ಸಿಯೋಲ್ ಎಂಬಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ ಅವರ ಮ್ಯಾನೇಜರ್ ಮೂನ್ ಬಿನ್ ಮನೆಗೆ ಬಂದಾಗ ಅವರು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಕೂಡಲೇ ಅವರು ದಕ್ಷಿಣ ಕೊರಿಯಾದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಇದೊಂದು ಆತ್ಮಹತ್ಯೆ ಇರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದ ಬಂದ ನಂತರವೇ ಅಸಲಿ ಕಾರಣ ಗೊತ್ತಾಗಲಿದೆ.

    ಎಂಟು ವರ್ಷಗಳ ಹಿಂದೆ ಪಾಪ್ ಲೋಕಕ್ಕೆ ಕಾಲಿಟ್ಟವರು ಮೂನ್ ಬಿನ್. 2016ರಲ್ಲಿ ಫ್ಯಾಂಟಜಿಯೊ ಲೇಬಲ್ ಮೂಲಕ ಗಾಯಕರಾಗಿ ಗುರುತಿಸಿಕೊಂಡವರು. ಆನಂತರ ಸಾಕಷ್ಟು ಗೀತೆಗಳಿಗೆ ದನಿಯಾಗಿದ್ದಾರೆ. ತಮ್ಮದೇ ಶೈಲಿಯ ಹಾಡುಗಳ ಮೂಲಕ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

  • ದಕ್ಷಿಣ ಕೊರಿಯಾದ ಹ್ಯಾಲೋವೀನ್ ದುರಂತದಲ್ಲಿ ಖ್ಯಾತ ನಟ, ಗಾಯಕ ಸಾವು

    ದಕ್ಷಿಣ ಕೊರಿಯಾದ ಹ್ಯಾಲೋವೀನ್ ದುರಂತದಲ್ಲಿ ಖ್ಯಾತ ನಟ, ಗಾಯಕ ಸಾವು

    ಸಿಯೋಲ್: ದಕ್ಷಿಣ ಕೊರಿಯಾದ (South Korea) ರಾಜಧಾನಿ ಸಿಯೋಲ್‌ನಲ್ಲಿ (Seoul) ಶನಿವಾರ ನಡೆದ ಹ್ಯಾಲೋವೀನ್ (Halloween) ದುರಂತದ ಆಘಾತದಿಂದ ಅಲ್ಲಿನ ಜನತೆ ಇನ್ನೂ ಹೊರ ಬಂದಿಲ್ಲ. ಅಷ್ಟರಲ್ಲಾಗಲೇ ಘಟನೆಯಲ್ಲಿ ಮೃತಪಟ್ಟವರ ಗುಂಪಿನಲ್ಲಿ ಖ್ಯಾತ ಗಾಯಕ ಹಾಗೂ ನಟನೊಬ್ಬನೂ ಸೇರಿದ್ದ ಎಂಬ ಸುದ್ದಿ ತಿಳಿದು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಿಯೋಲ್‌ನ ಇಟಾವಾನ್ (Itaewon) ಜಿಲ್ಲೆಯಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ (Stampede) ನಟ, ಗಾಯಕ ಲೀ ಜಿಹಾನ್ (Lee Jihan) ಮೃತಪಟ್ಟಿರುವುದಾಗಿ ದೃಢವಾಗಿದೆ. 24 ವರ್ಷದ ತಾರೆಯ ಹಠಾತ್ ನಿಧನಕ್ಕೆ ಅವರ ಕುಟುಂಬ, ಅಭಿಮಾನಿಗಳು ಸೇರಿದಂತೆ ಅಲ್ಲಿನ ಜನತೆ ಸಂತಾಪ ವ್ಯಕ್ತಪಡಿಸಿದ್ದಾರೆ.

    ಲೀ ಜಿಹಾನ್ ಅವರು ದಕ್ಷಿಣ ಕೊರಿಯಾದ ಗಾಯನ ಸ್ಪರ್ಧೆಯ ಪ್ರೊಡ್ಯೂಸ್ 101 ರಲ್ಲಿ ಮಾಜಿ ಸ್ಪರ್ಧಿಯಾಗಿದ್ದಾರೆ. ಅವರು ಟುಡೇ ವಾಸ್ ಅನದರ್ ನಾಮ್ ಹ್ಯುನ್ ಡೇ ಮೂಲಕ ನಟನಾ ಕ್ಷೇತಕ್ಕೆ ಪಾದಾರ್ಪಣೆ ಮಾಡಿದರು. ವರದಿಗಳ ಪ್ರಕಾರ, ಲೀ ಜಿ ಹಾನ್ ಅವರ ಅಂತ್ಯಕ್ರಿಯೆ ನವೆಂಬರ್ 1 ರಂದು ನಡೆಯಲಿದೆ. ಇದನ್ನೂ ಓದಿ: ಮಗಳಿಗೆ ಗಾಯ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಜೀವಂತ ಏಡಿಯನ್ನೇ ತಿಂದ ವ್ಯಕ್ತಿ ಆಸ್ಪತ್ರೆ ಸೇರಿದ

    2 ವರ್ಷದ ಕೋವಿಡ್ ನಿರ್ಬಂಧವನ್ನು ತೆಗೆದು ಹಾಕಿದ ಬಳಿಕ ಇದು ದಕ್ಷಿಣ ಕೊರಿಯಾದ ಮೊದಲ ಹ್ಯಾಲೋವೀನ್ ಆಚರಣೆಯಾಗದೆ. ಶನಿವಾರ ಹಬ್ಬದ ವಾತಾವರಣದಲ್ಲಿ ಇಟಾವಾನ್‌ನ ಕಿರಿದಾದ ಒಂದು ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿ, ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ ಹೆಚ್ಚಿನವರು ಉಸಿರುಗಟ್ಟಿ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅದರಲ್ಲೂ ಮೃತಪಟ್ಟವರಲ್ಲಿ ಹೆಚ್ಚಿನವರು 20 ವರ್ಷದ ಆಸುಪಾಸಿನವರು ಎಂಬುದು ಇನ್ನಷ್ಟು ಆಘಾತ ತಂದಿದೆ.

    ವರದಿಗಳ ಪ್ರಕಾರ ಸಿಯೋಲ್‌ನ ಹ್ಯಾಲೋವೀನ್ ದುರಂತದಲ್ಲಿ 151 ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್ ರಾಷ್ಟ್ರೀಯ ಶೋಕಾಚರಣೆಯ ಅವಧಿಯನ್ನು ಘೋಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ರಂಭಾ ಕಾರು ಭೀಕರ ಅಪಘಾತ : ರಂಭಾ ಪುತ್ರಿಗೆ ತೀವ್ರ ಗಾಯ

    Live Tv
    [brid partner=56869869 player=32851 video=960834 autoplay=true]

  • ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

    ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

    ಸಿಯೋಲ್: ನೈಸರ್ಗಿಕ ಜೀವವಿಜ್ಞಾನದಿಂದ ಪ್ರೇರಿತವಾದ ದಕ್ಷಿಣ ಕೊರಿಯಾದ ಸಂಶೋಧಕರು ಊಸರವಳ್ಳಿಯಂತೆ ಬದಲಾಗುವ ಕೃತಕ ಚರ್ಮವನ್ನು ಕಂಡು ಹಿಡಿದಿದ್ದಾರೆ.

    sದಕ್ಷಿಣ ಕೊರಿಯಾದ ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಕೋ ಸೆಯುಂಗ್ ಹ್ವಾನ್ ಈ ಕೃತಕ ಚರ್ಮವನ್ನು ಕಂಡು ಹಿಡಿದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ನೈಸರ್ಗಿಕ ಜೀವವಿಜ್ಞಾನದಿಂದ ಪ್ರೇರಿತನಾಗಿ ಕೃತಕ ಚರ್ಮದಂತಹ ವಸ್ತುವನ್ನು ಕಂಡು ಹಿಡಿದಿದ್ದೇನೆ. ಈ ಕೃತಕ ಚರ್ಮ ತಾಪಮಾನಕ್ಕೆ ತಕ್ಕಂತೆ ಊಸರವಳ್ಳಿಯ ರೀತಿ ತಕ್ಷಣ ತನ್ನ ಬಣ್ಣವನ್ನ ಬದಲಾಯಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳ ಮಧ್ಯೆ ಮಾರಾಮಾರಿ- ಮೂವರಿಗೆ ಗಾಯ

    ಒಂದು ವೇಳೆ ನಾವು ಮರುಭೂಮಿ ರೀತಿಯ ಪ್ರದೇಶಕ್ಕೆ ಹೋದರೆ ಈ ರೀತಿಯ ಚರ್ಮವನ್ನು ಧರಿಸಬಹುದು. ಈ ಮೂಲಕ ನಾವು ಎಷ್ಟೇ ಬಿಸಿಲಿನಲ್ಲಿದ್ದರೂ ಸುಲಭವಾಗಿ ಓಡಾಡಬಹುದು. ಅದೇ ರೀತಿ ನಾವು ತಯಾರಿಸುವ ಈ ಕೃತಕ ಚರ್ಮವನ್ನು ಆ ವಾತಾವರಣಕ್ಕೆ ತಕ್ಕಂತೆ ಬದಲಾಯಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಕೋ ಸೆಯುಂಗ್ ಹ್ವಾನ್ ಮತ್ತು ಅವರ ತಂಡ ವಿವಿಧ ಬಣ್ಣಗಳ ಮೇಲೆ ರೋಬೋಟ್ ಅನ್ನು ಬಿಟ್ಟು ತಮ್ಮ ಪ್ರಯೋಗವನ್ನು ಪ್ರದರ್ಶಿಸಿದರು. ರೋಬೋಟ್ ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳ ಮೇಲೆ ಹೋಗುತ್ತ ಇದ್ದಂತೆ ಆ ಬಣ್ಣಗಳಿಗೆ ತಿರುಗುತ್ತಿತ್ತು ಇದನ್ನು ನೋಡಿದ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಬೆರಗಾಗಿ ನಿಂತಿದ್ದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ

    ಈ ಕುರಿತು ಪ್ರತಿಕ್ರಿಯಿಸಿದ ಕೋ, ಸೆನ್ಸರ್‍ಗಳಿಂದ ಪತ್ತೆಯಾದ ಬಣ್ಣದ ಮಾಹಿತಿಯನ್ನು ಮೈಕ್ರೊಪ್ರೊಸೆಸರ್ ಗೆ ಮತ್ತು ನಂತರ ಸಿಲ್ವರ್ ನ್ಯಾನೊವೈರ್ ಹೀಟರ್‍ಗಳಿಗೆ ವರ್ಗಾಯಿಸಲಾಗುತ್ತದೆ. ಹೀಟರ್‍ಗಳು ಒಂದು ನಿರ್ದಿಷ್ಟ ತಾಪಮಾನವನ್ನು ತಲುಪಿದ ನಂತರ, ಥರ್ಮೋಕ್ರೋಮಿಕ್ ಲಿಕ್ವಿಡ್ ಸ್ಫಟಿಕ ಪದರವು ಅದರ ಬಣ್ಣವನ್ನು ಬದಲಾಯಿಸುತ್ತೆ ಎಂದು ತಿಳಿಸಿದರು.

  • ಮನೆಯಲ್ಲಿ ಪ್ರಸಿದ್ಧ ಅಂತಾರಾಷ್ಟ್ರೀಯ ಪಾಪ್ ಗಾಯಕಿ ಶವವಾಗಿ ಪತ್ತೆ

    ಮನೆಯಲ್ಲಿ ಪ್ರಸಿದ್ಧ ಅಂತಾರಾಷ್ಟ್ರೀಯ ಪಾಪ್ ಗಾಯಕಿ ಶವವಾಗಿ ಪತ್ತೆ

    ಸಿಯೋಲ್: ಪಾಪ್ ಗಾಯಕಿ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಸೋಮವಾರ ದಕ್ಷಿಣ ಕೊರಿಯಾದ ಜಿಯೊಂಗ್ಲಿನಲ್ಲಿ ನಡೆದಿದೆ.

    ಸುಲ್ಲಿ(25) ಶವವಾಗಿ ಪತ್ತೆಯಾದ ಗಾಯಕಿ. ಸುಲ್ಲಿ ಮ್ಯಾನೇಜರ್ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದನು. ಆದರೆ ಆಕೆ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಮ್ಯಾನೇಜರ್ ಆಕೆಯ ಮನೆಗೆ ಬಂದಿದ್ದಾನೆ. ಈ ವೇಳೆ ಸುಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ಮಾರ್ಚ್ 29, 1994ರಂದು ಹುಟ್ಟಿದ ಸುಲ್ಲಿ, ಕೆ-ಪಾಪ್ ಬ್ಯಾಂಡ್‍ನ ಸದಸ್ಯೆ ಆಗಿದ್ದಳು. ಮಾಧ್ಯಮಗಳ ಪ್ರಕಾರ ಸಾಮಾಜಿಕ ಜಾಲತಾಣದಲ್ಲಿ ಜನರು ನಿಂದಿಸುತ್ತಿದ್ದಕ್ಕೆ 2014ರಲ್ಲಿ ಸುಲ್ಲಿ ತನ್ನ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದಳು. ಬಳಿಕ 2015ರಲ್ಲಿ ಆ ತಂಡದಿಂದ ಹೊರಬಂದು ನಟನೆಯತ್ತ ಆಸಕ್ತಿ ವಹಿಸಿದ್ದಳು.

    ಸುಲ್ಲಿ ಮೂರು ವರ್ಷಗಳ ನಂತರ ಅಂದರೆ 2018ರಲ್ಲಿ ಸಂಗೀತ ಕೆಲಸವನ್ನು ಪುನರಾಂಭಿಸಿದ್ದಳು. ಜೂನ್ 2019ರಲ್ಲಿ ಸುಲ್ಲಿ ಗಾಬ್ಲಿನ್ ಎಂಬ ಆಲ್ಬಂ ಮೂಲಕ ಸೋಲೋ ಗಾಯಕಿಯಾಗಿ ಡೆಬ್ಯು ಮಾಡಿದ್ದಳು. ನಂತರ 2005ರಲ್ಲಿ ಸುಲ್ಲಿ ಕಿರುತೆರೆಯಲ್ಲಿ ನಟಿಸಲು ಶುರು ಮಾಡಿದ್ದಳು.

    2012ರಲ್ಲಿ ‘ಬ್ಯೂಟಿಫುಲ್ ಯೂ’ ಕಾರ್ಯಕ್ರಮಕ್ಕಾಗಿ ಸುಲ್ಲಿ ನ್ಯೂ ಸ್ಟಾರ್ ಅವಾರ್ಡ್ ಪಡೆದುಕೊಂಡಿದ್ದಳು. ಸುಲ್ಲಿ ಪ್ಯಾನಿಕ್ ಡಿಸಾರ್ಡರ್ (ಭಯದಿಂದ ಅಸ್ವಸ್ಥತೆ)ನಿಂದ ಬಳಲುತ್ತಿದ್ದಳು. ಅಲ್ಲದೆ ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ, “ನನಗೆ ಜೊತೆ ಆತ್ಮೀಯರಾಗಿದ್ದವರೇ ನನ್ನನ್ನು ಬಿಟ್ಟು ಹೋಗಿದ್ದಾರೆ. ನನಗೆ ಅವರಿಂದ ತುಂಬಾ ನೋವಾಗಿತ್ತು. ನನ್ನನ್ನು ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲ ಎಂದು ಅನಿಸುತ್ತಿತ್ತು” ಎಂದು ಹೇಳಿಕೊಂಡಿದ್ದಳು.

  • ಸ್ಪೈಕ್ಯಾಮ್ ಮೂಲಕ 800 ದಂಪತಿಯ ಸೆಕ್ಸ್ ಲೈವ್: ಅತಿ ದೊಡ್ಡ ಹಗರಣ ಬೇಧಿಸಿದ ಪೊಲೀಸರು

    ಸ್ಪೈಕ್ಯಾಮ್ ಮೂಲಕ 800 ದಂಪತಿಯ ಸೆಕ್ಸ್ ಲೈವ್: ಅತಿ ದೊಡ್ಡ ಹಗರಣ ಬೇಧಿಸಿದ ಪೊಲೀಸರು

    ಸಿಯೋಲ್: ಹೋಟೆಲ್‍ಗಳಲ್ಲಿ ತಂಗಿದ್ದ ದಕ್ಷಿಣ ಕೊರಿಯಾದ ಸುಮಾರು 800 ದಂಪತಿಯ ಸೆಕ್ಸ್ ನಲ್ಲಿ ತೊಡಗಿದ್ದ ವಿಡಿಯೋವನ್ನು ಸ್ಪೈಕ್ಯಾಮ್ ಮೂಲಕ ಲೈವ್ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

    ದೇಶದ ಸ್ಪೈಕ್ಯಾಮೆರಾ ಪ್ರಕರಣಗಳಲ್ಲೇ ಇದು ಅತಿ ದೊಡ್ಡ ಸೆಕ್ಸ್ ಹಗರಣ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಸ್ಪೈಕ್ಯಾಮ್ ಹಗರಣ ಈಗ ಜಾಸ್ತಿ ನಡೆಯುತ್ತಿದ್ದು, ಸಾಮಾನ್ಯವಾಗಿ ರಹಸ್ಯವಾಗಿ ಶಾಲೆಗಳು, ಟ್ರಯಲ್ ರೂಮ್ ಮತ್ತು ಮಹಿಳೆಯರ ಶೌಚಾಲಯ ಸೇರಿದಂತೆ ಅನೇಕ ಕಡೆಯಲ್ಲಿ ಈ ಕ್ಯಾಮೆರಾವನ್ನು ಬಳಸಲಾಗುತ್ತದೆ. ಆದರೆ ಹೋಟೆಲ್ ನಲ್ಲಿ ಸ್ಪೈಕ್ಯಾಮ್ ಬಳಸಿ ಅದನ್ನು ಲೈವ್ ಮಾಡಿದ್ದು ಇದೆ ಮೊದಲು ಎಂದು ತಿಳಿದು ಬಂದಿದೆ.

    ನಾಲ್ವರು ಹುಡುಗರು ಈ ರೀತಿ ಸಣ್ಣ ಕ್ಯಾಮೆರಾಗಳನ್ನು 30 ಹೋಟೆಲ್ ಗಳಲ್ಲಿ 42 ರೂಮ್‍ಗಳಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ಅಳವಡಿಸಿದ್ದಾರೆ. ಹೇರ್ ಡ್ರೈಯರ್, ಗೋಡೆ ಸಾಕೆಟ್ (ಸ್ವಿಚ್ ಬೋರ್ಡ್)ಮತ್ತು ಡಿಜಿಟಲ್ ಟಿವಿ ಬಾಕ್ಸ್ ಗಳಲ್ಲಿ ರಹಸ್ಯವಾಗಿ ಸ್ಪೈಕ್ಯಾಮೆರಾ ಅವರನ್ನು ಅಳವಡಿಸಲಾಗಿತ್ತು. ನಂತರ ಅದರ ಮೂಲಕ 42 ರೂಮ್ ಗಳಲ್ಲಿ ನಡೆಯುವ ದೃಶ್ಯಗಳನ್ನು ವೆಬ್ ಸೈಟ್ ವೊಂದು ತನ್ನ 4000 ಗ್ರಾಹಕರಿಗೆ 24 ಗಂಟೆಗಳ ಕಾಲ ಲೈವ್ ಮಾಡಿದೆ. ಈ ಲೈವ್ ವಿಡಿಯೋಗಾಗಿ ಗ್ರಾಹಕರು ಪ್ರತಿ ತಿಂಗಳು 50 ಸಾವಿರ ವೊನ್( ಅಂದಾಜು 3 ಸಾವಿರ ರೂ.) ಪಾವತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ಮೂರು ತಿಂಗಳಿಂದ ಸುಮಾರು 800 ದಂಪತಿಯ ಸೆಕ್ಸ್ ನಲ್ಲಿ ತೊಡಗಿದ್ದನ್ನು ವೆಬ್ ಸೈಟ್ ಮೂಲಕ ಲೈವ್ ಮಾಡಲಾಗಿದೆ. ಈ ಹಗರಣದ ಮೂಲಕ ಗ್ಯಾಂಗ್ ಸುಮಾರು 70 ಲಕ್ಷ ವೊನ್(ಅಂದಾಜು 4.25 ಲಕ್ಷ ರೂ.) ಗಳಿಸಿದ್ದಾರೆ. ಈ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    2017 ರಲ್ಲಿ ದಕ್ಷಿಣ ಕೊರಿಯಾದಲ್ಲಿ ಸ್ಪೈಕಾಮ್ ಹಗರಣಕ್ಕೆ ಸಂಬಂಧಿಸಿದಂತೆ 5,400 ಕ್ಕಿಂತಲೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಸಿಯೋಲ್‍ನಲ್ಲಿ ಮೀಟೂ ಅಭಿಯಾನದಲ್ಲಿ ಸಾವಿರಾರು ಮಹಿಳೆಯರು ಸ್ಪೈಕಾಮ್ ವೀಡಿಯೋಗಳ ವಿರುದ್ಧ ಪ್ರತಿಭಟಿಸಿದ್ದರು.

  • ಆಟ ಆಡೋದ್ರಲ್ಲೇ ಕಾಲ ಕಳೆಯುತ್ತಿದ್ದ ಪತಿಯ ಗುಪ್ತಾಂಗವನ್ನೇ ಕತ್ತರಿಸಿದ್ಳು!

    ಆಟ ಆಡೋದ್ರಲ್ಲೇ ಕಾಲ ಕಳೆಯುತ್ತಿದ್ದ ಪತಿಯ ಗುಪ್ತಾಂಗವನ್ನೇ ಕತ್ತರಿಸಿದ್ಳು!

    ಸಿಯೋಲ್: ಪತ್ನಿಯೊಬ್ಬಳು ತನ್ನ ಪತಿಯ ಗುಪ್ತಾಂಗವನ್ನೇ ಕತ್ತರಿಸಿದ ಆಘಾತಕಾರಿ ಘಟನೆಯೊಂದು ದಕ್ಷಿಣ ಕೊರಿಯಾದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    50 ವರ್ಷದ ಕಿಮ್ ಎಂಬ ಮಹಿಳೆ ತನ್ನ 54 ವರ್ಷದ ಪತಿಯ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಕಿಮ್ ತನ್ನ ಪತಿ ತನ್ನೊಂದಿಗೆ ಕಾಲ ಕಳೆಯದೇ ದಿನವಿಡೀ ಗಾಲ್ಫ್ ಆಡೋದ್ರಲ್ಲೇ ಕಾಲ ಕಳೆಯುತ್ತಾನೆ. ಅಲ್ಲದೇ ಖರ್ಚಿಗೆ ಹಣ ಕೊಡುತ್ತಿರಲಿಲ್ಲ. ಇದರಿಂದ ಬೇಸತ್ತು ಈ ಕೃತ್ಯ ಎಸಗಿರುವುದಾಗಿ ಪೊಲೀಸರಲ್ಲಿ ಹೇಳಿದ್ದಾಳೆ.

    ರಾತ್ರಿ ಗಂಡ ಮಲಗಿದ್ದ ಸಂದರ್ಭದಲ್ಲಿ ಅಡುಗೆ ಮನೆಯಿಂದ ಹರಿತವಾದ ಚಾಕು ತಂದು ಆತನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಬಳಿಕ ಅದನ್ನು ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ್ದಾಳೆ. ಘಟನೆಯಿಂದ ರಕ್ತದ ಮಡುವುನಲ್ಲಿ ಬಿದ್ದು ಕಿರುಚಾಡುತ್ತಿದ್ದ ಗಂಡಸಿನ ಧ್ವನಿಯನ್ನು ಆಲಿಸಿದ ನೆರೆಮೆನಯವರು ಬಂದು ನೋಡಿದ್ದಾರೆ.

    ಈ ವೇಳೆ ಆತ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದನು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಾಯಾಳು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.