Tag: ಸಿಮ್ರಾನ್

  • ಆ ದೊಡ್ಡ ಸ್ಟಾರ್ ಜೊತೆ ನಟಿಸುತ್ತಿಲ್ಲ: ಸಿಮ್ರಾನ್ ಫುಲ್ ಗರಂ..!

    ಆ ದೊಡ್ಡ ಸ್ಟಾರ್ ಜೊತೆ ನಟಿಸುತ್ತಿಲ್ಲ: ಸಿಮ್ರಾನ್ ಫುಲ್ ಗರಂ..!

    ಕಾಲಿವುಡ್‌ನ ನಟ ವಿಜಯ್ ದಳಪತಿ (Vijay Thalapathy) ನಟನೆಯ ಕೊನೆಯ ಸಿನಿಮಾ `ದಳಪತಿ 69′. ಹಾಗಾಗಿನೇ ಈ ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಆದ್ರೆ, ಅಸಲಿ ಮ್ಯಾಟರ್ ಇದಲ್ಲ. ಈ ಸಿನಿಮಾದಲ್ಲಿ ವಿಜಯ್‌ಗೆ ಜೋಡಿಯಾಗಿ ಸಿಮ್ರಾನ್ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಹರಿದಾಡ್ತಿದ್ದವು. ಆದ್ರೆ, ಈ ವಿಷಯ ಕೇಳಿ ನಟಿ ಸಿಮ್ರಾನ್ (Simran) ಫುಲ್ ಗರಂ ಆಗಿದ್ದಾರೆ.

    ಹೌದು, ಸುಳ್ಳು ಸುದ್ದಿ ಹರಡುವವರ ವಿರುದ್ಧ ಸಿಮ್ರಾನ್ ಕಿಡಿಕಾರಿದ್ದಾರೆ. `ಪ್ರತಿ ಸಲ ಈ ಥರದ ಸುಳ್ಳು ಸುದ್ದಿ ಕೇಳಿ ಕೇಳಿ ಸಾಕಾಗಿ ಹೋಗಿದೆ. ಯಾರೋ ಹೇಳುವುದನ್ನ ಕೇಳಿ ನನ್ನ ಸ್ನೇಹಿರು ನಂಬುವುದು ನನಗೆ ನೋವುಂಟು ಮಾಡಿದೆ. ಇಲ್ಲಿಯವರೆಗೆ ನಾನು ಸೈಲಾಂಟಾಗಿದ್ದೆ. ಯಾವ ದೊಡ್ಡ ಸ್ಟಾರ್ ನಟರ ಜೊತೆ ಸಿನಿಮಾ ಮಾಡುವ ಆಸೆ ನನಗಿಲ್ಲ. ನನ್ನ ಗಮನ ಬೇರೆಕಡೆ ಇದೆ. ನಾನು ಈಗಾಗಲೇ ಸಾಕಷ್ಟು ಸಿನಿಮಾಗಳನ್ನ ವಿಜಯ್ ಜೊತೆಗೆ ಮಾಡಿದ್ದೀನಿ’ ಅಂತಾ ಟ್ವಿಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ ಸಿಮ್ರಾನ್. ಇದನ್ನೂ ಓದಿ: ‘ದೇವರ’ ಚಿತ್ರದ ಟ್ರೈಲರ್ ರಿಲೀಸ್- ಆ್ಯಕ್ಷನ್ ಅವತಾರದಲ್ಲಿ ಜ್ಯೂ.ಎನ್‌ಟಿಆರ್

    ವಿಜಯ್ ದಳಪತಿ ಜೊತೆ ಈಗಾಗಲೇ ಸಾಕಷ್ಟು ಸಿನಿಮಾಗಳನ್ನ ಮಾಡಿದ್ದೇನೆ. ಯಾವ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸುವ ಬಯಕೆ ನನಗಿಲ್ಲ ಎಂದು ಕಡ್ಡಿ ತುಂಡಾಗುವ ಹಾಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ರೂರ‍್ಸ್ ಹರಡುವವರಿಗೆ ಸಿಮ್ರಾನ್ ಉತ್ತರ ಕೊಟ್ಟಿದ್ದಾರೆ. `ದಳಪತಿ 69′ ಸಿನಿಮಾದಲ್ಲಿ ಸಿಮ್ರಾನ್ ಹೆಸರು ತಳುಕು ಹಾಕಿಕೊಂಡಿತ್ತು ಈಗ ಗಾಳಿ ಸುದ್ದಿಗೆ ಖುದ್ದಾಗಿ ಸಿಮ್ರಾನ್ ತೆರೆ ಎಳೆದಿದ್ದಾರೆ.

    ವಿಜಯ್ ದಳಪತಿ ಅಭಿನಯದ `ದಿ ಗೋಟ್’ ಇದೇ ತಿಂಗಳು ತೆರೆಕಂಡು ಅಭಿಮಾನಿಗಳಿಗೆ ರಸದೌತಣ ನೀಡಿತ್ತು. ಇನ್ನೇನು ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ `69′ ಪ್ರಿ-ಪ್ರೊಡಕ್ಷನ್ ವರ್ಕ್ ಮುಗಿಸಿದ್ದು, ಶೂಟಿಂಗ್‌ಗೆ ಹೋಗೋಕೆ ತಯಾರಿ ಮಾಡಿಕೊಂಡಿದೆ. ಇದನ್ನೂ ಓದಿ: ಹರಿದ ಪ್ಯಾಂಟ್ ಧರಿಸಿ ಸ್ಟೈಲೀಶ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

  • ಅಜಿತ್ ಕುಮಾರ್ ಸಿನಿಮಾದಲ್ಲಿ ನಟಿಮಣಿಯರ ದರ್ಬಾರ್

    ಅಜಿತ್ ಕುಮಾರ್ ಸಿನಿಮಾದಲ್ಲಿ ನಟಿಮಣಿಯರ ದರ್ಬಾರ್

    ಮಿಳಿನ ಸೂಪರ್ ಸ್ಟಾರ್ ಅಜಿತ್ ಕುಮಾರ್ (Ajith Kumar) ಇಂದು (ಮೇ.1) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಸಿನಿಮಾವನ್ನು ಅಜಿತ್ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಹೊಸ ವಿಚಾರವೊಂದು ಚರ್ಚೆಗೆ ಗ್ರಾಸವಾಗುತ್ತಿದೆ.

    ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ಚಿತ್ರಕ್ಕೆ ಸೇರ್ಪಡೆಯಾಗುವ ಕಲಾವಿದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಶ್ರೀಲೀಲಾ (Sreeleela) ಈ ಚಿತ್ರಕ್ಕೆ ನಾಯಕಿ ಎಂಬ ಸುದ್ದಿ ಬೆನ್ನಲ್ಲೇ ಸಿಮ್ರಾನ್, ಪುಟ್ನಂಜ ನಟಿ ಮೀನಾ (Meena) ಅವರ ಹೆಸರು ಕೇಳಿ ಬರುತ್ತಿದೆ. ಇದನ್ನೂ ಓದಿ:‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

    ಸಿಮ್ರಾನ್, ಮೀನಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಅಜಿತ್‌ಗೆ ನಾಯಕಿಯರಾಗಿ ನಟಿಸಿದ್ದರು. ಈಗ ಮತ್ತೆ ಈ ಚಿತ್ರದ ಮೂಲಕ ಸಾಥ್ ನೀಡುತ್ತಿದ್ದಾರೆ. ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾಯಬೇಕಿದೆ.

    ಮೇ 10ರಿಂದ ಹೈದರಾಬಾದ್‌ನಲ್ಲಿ ಮೊದಲ ಹಂತದ ಶೂಟಿಂಗ್ ಶುರುವಾಗಲಿದೆ. ಅಜಿತ್ ಕುಮಾರ್ ಎಂಟ್ರಿ ಮತ್ತು ಆ್ಯಕ್ಷನ್ ಭಾಗದ ಶೂಟಿಂಗ್ ನಡೆಯಲಿದೆ. ಈ ಚಿತ್ರದ ಮೂಲಕ ಶ್ರೀಲೀಲಾ ತಮಿಳಿಗೆ ಎಂಟ್ರಿ ಕೊಡಲಿದ್ದಾರೆ. ಶ್ರೀಲೀಲಾ ನಾಯಕಿ ಎಂಬ ಸುದ್ದಿಗೆ ಅಧಿಕೃತ ಘೋಷಣೆ ಆಗಬೇಕಿದೆ.

  • ‘ಅಥರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಾರ್ತಿಕ್ ರಾಜು

    ‘ಅಥರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಾರ್ತಿಕ್ ರಾಜು

    ನೆ ದೇವ್ರು, ಹಾಲುಂಡ ತವರು, ಕರುಳಿನ ಕೂಗು ಮುಂತಾದ ಯಶಸ್ವಿ ಚಿತ್ರಗಳ ನಿರ್ಮಾಪಕ ವೈಜಾಕ್ ರಾಜು ಅವರ ಪುತ್ರ ಕಾರ್ತಿಕ್ ರಾಜು (Karthik Raju) ‘ಅಥರ್ವ’ (Atharva) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಥರ್ವ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.

    ನಮ್ಮ ತಂದೆ ವೈಜಾಕ್ ರಾಜು, ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ನಾನು ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದೇನೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಕನ್ನಡ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕೆಂಬ ನನ್ನ ಬಹುದಿನ ಕನಸು ಈಗ ಈಡೇರಿದೆ. ಇದಕ್ಕೂ ಮೊದಲು ನಾನು ಪುನೀತ್ ರಾಜಕುಮಾರ್ ಅವರ ವೀರ ಕನ್ನಡಿಗ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅಥರ್ವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ.  ಮಹೇಶ್ ರೆಡ್ಡಿ (Mahesh Reddy) ಈ ಚಿತ್ರದ ನಿರ್ದೇಶಕರು. ನುರಿತ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರೀಕರಣ ಮುಕ್ತಾಯವಾಗಿದೆ. ನವೆಂಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಚಿತ್ರದ ನಾಯಕ ಕಾರ್ತಿಕ್ ರಾಜು ತಿಳಿಸಿದರು.

    ನಾನು ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್. ಅನೇಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ನನ್ನ ಚೊಚ್ಚಲ ಚಿತ್ರ. ಕ್ಲೂಸ್ ಡಿಪಾರ್ಟ್ಮೆಂಟ್ ಎಂಬುದು ಪೊಲೀಸ್ ಡಿಪಾರ್ಟ್ಮೆಂಟ್ ವ್ಯಾಪ್ತಿಗೆ ಬರುತ್ತದೆ. ಈ ಕ್ಲೂಸ್ ಡಿಪಾರ್ಟ್ಮೆಂಟ್ ಬಳಸಿಕೊಂಡು ಹೆಚ್ಚಿನ ಸಿನಿಮಾಗಳು ಬಂದಿಲ್ಲ. ನಮ್ಮ ಚಿತ್ರದಲ್ಲಿ ಒಂದು ಕೊಲೆಯ ಸತ್ಯವನ್ನು ತಿಳಿಯಲು ಕ್ಲೂಸ್ ಡಿಪಾರ್ಟ್ಮೆಂಟ್ ಎಷ್ಟು ಮುಖ್ಯ ಎಂಬುದನ್ನು ತೋರಿಸಿದ್ದೇವೆ.‌ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ನೋಡಿ ಹಾರೈಸಿ ಎನ್ನುತ್ತಾರೆ ನಿರ್ದೇಶಕ ಮಹೇಶ್ ರೆಡ್ಡಿ.

    ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ ನಿರ್ವಹಿಸಿರುವುದಾಗಿ ನಾಯಕಿ ಸಿಮ್ರಾನ್ ಹೇಳಿದರು. ನಿರ್ಮಾಪಕ ಸುಭಾಷ್ ನೂತಲಪಾಟಿ , ಹಿರಿಯ ನಿರ್ಮಾಪಕ ವೈಜಾಕ್ ರಾಜು ಹಾಗೂ ವಿತರಕ ಮಾರ್ಸ್ ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]