Tag: ಸಿಮೆಂಟ್ ಲಾರಿ

  • ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಪಲ್ಟಿ- ಡ್ರೈವರ್ ಗ್ರೇಟ್ ಎಸ್ಕೇಪ್

    ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಪಲ್ಟಿ- ಡ್ರೈವರ್ ಗ್ರೇಟ್ ಎಸ್ಕೇಪ್

    ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿಯೊಮದು ಪಲ್ಟಿ ಹೊಡೆದ ಘಟನೆ ಸೋಮವಾರಪೇಟೆ ತಾಲೂಕಿನ ಶಾನಿವಾರಸಂತೆ ಸಮೀಪದ ಗುಡುಗಳಲೆ ರಸ್ತೆ ತಿರುವಿನಲ್ಲಿ ನಡೆದಿದೆ.

    ಸಿಮೆಂಟ್ ಲಾರಿ ಆಂಧ್ರ ಪ್ರದೇಶದಿಂದ ಕೊಡಗಿನ ಸೋಮವಾರಪೇಟೆ ಕಡೆಗೆ ಹೊರಟಿತ್ತು. ಆಂಧ್ರ ಪ್ರದೇಶ ಮೂಲದ ಇಮ್ತಾಸ್ ಎಂಬವರು ಲಾರಿ ಚಾಲನೆ ಮಾಡುತ್ತಿದ್ದರು. ಹೀಗೆ ಇಂದು ಬೆಳಗ್ಗೆ ಹಾಸನ ಜಿಲ್ಲೆಯ ಅರಕಲಗೂಡು ಮಾರ್ಗದಿಂದ ಶನಿವಾರಸಂತೆಗೆ ಅಗಮಿಸುತ್ತಿರುವ ಸಂದರ್ಭ ರಸ್ತೆ ತಿರುವಿನಲ್ಲಿ ಬೃಹದಾಕಾರದ ಗುಂಡಿ ಇದ್ದ ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಸ್ಥಳದಲ್ಲೇ ಪಲ್ಟಿಯಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಿಲ್ಲದ ದೊಡ್ಡವರ ಮಕ್ಕಳ ಆಕ್ಸಿಡೆಂಟ್ – Textile ಮಾಲೀಕನ ಮಗನ ಕಾರು ಅಪಘಾತ

    ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಸಿನಿಮಿಯ ರೀತಿಯಲ್ಲಿ ಲಾರಿಯಿಂದ ಯಾವುದೇ ಪ್ರಾಣಾಪಾಯ ಇಲ್ಲದೇ ಹೊರಬಂದಿದ್ದಾರೆ. ಸುಮಾರು 600 ಸಿಮೆಂಟ್ ಚೀಲಗಳನ್ನು ಲಾರಿ ಹೊತ್ತು ಬರುತ್ತಿತ್ತು ಎನ್ನಲಾಗಿದೆ. ಶನಿವಾರಸಂತೆ ಗುಡುಗಳಲೆ ರಸ್ತೆ ತಿರುವಿನಲ್ಲಿ ಆಗಿಂದಾಗ್ಗೆ ಈ ರೀತಿಯ ಅವಘಡಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಯಾವುದೇ ಸ್ಥಾನಮಾನ ಇಲ್ಲದಿದ್ರೂ ಕೊನೇ ಉಸಿರಿರುವವರೆಗೆ ಪಕ್ಷ ಸಂಘಟನೆ ಮಾಡ್ತೇನೆ: ಬಿಎಸ್‍ವೈ

     

  • ಎರಡು ಪ್ರತ್ಯೇಕ ಅಪಘಾತ- ಸಿಮೆಂಟ್ ಲಾರಿಗಳಿಗೆ ಇಬ್ಬರು ಬೈಕ್ ಸವಾರರು ಬಲಿ

    ಎರಡು ಪ್ರತ್ಯೇಕ ಅಪಘಾತ- ಸಿಮೆಂಟ್ ಲಾರಿಗಳಿಗೆ ಇಬ್ಬರು ಬೈಕ್ ಸವಾರರು ಬಲಿ

    – ಬೈಕ್ ಸವಾರರ ಪಾಲಿಗೆ ಯಮಸ್ವರೂಪಿಗಳಾದ ಸಿಮೆಂಟ್ ಲಾರಿಗಳು

    ಚಿಕ್ಕಬಳ್ಳಾಪುರ: ಸಿಮೆಂಟ್ ಲಾರಿಗಳು ಬೈಕ್ ಸವಾರರ ಪಾಲಿಗೆ ಯಮಸ್ವರೂಪಿಗಳಾಗಿದ್ದು, ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭಿರವಾಗಿದೆ.

    ಸಿಮೆಂಟ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಚಿಕುಂಟೆ ಬಳಿ ನಡೆದಿದೆ. ಆರೂಡಿ ಗ್ರಾಮದ 18 ವರ್ಷದ ಹರ್ಷವರ್ಧನ ಮೃತ ಬೈಕ್ ಸವಾರ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹರ್ಷವರ್ಧನ್ ತಂದೆ ಹನುಮಂತ ರೆಡ್ಡಿ ಸಹ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮತ್ತೊಂದು ಪ್ರಕರಣದಲ್ಲೂ ಸಿಮೆಂಟ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಚಿಕ್ಕಹೊಸಹಳ್ಳಿ ಗ್ರಾಮದ 20 ವರ್ಷದ ಮುತ್ತೇಗೌಡ ಸಹ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಸ್ಥಳೀಯರು ಭಯಭೀತರಾಗಿದ್ದಾರೆ.

    ಗೌರಿಬಿದನೂರು ತಾಲೂಕು ತೊಂಡೆಬಾವಿ ಬಳಿ ಎಸಿಸಿ ಸಿಮೆಂಟ್ ಕಾರ್ಖಾನೆ ಇದೆ. ಇಲ್ಲಿಂದ ಪ್ರತಿ ನಿತ್ಯ ನೂರಾರು ಲಾರಿಗಳು ಬೆಂಗಳೂರಿಗೆ ಓಡಾಟ ಮಾಡುತ್ತಿದ್ದು, ಲಾರಿ ಚಾಲಕರು ಅತಿ ವೇಗ ಅಜಾಗೂರೂಕತೆಯಿಂದ ಚಾಲನೆ ಮಾಡುತ್ತಾರೆ. ಹೀಗಾಗಿ ಸಿಮೆಂಟ್ ಲಾರಿಗಳಿಂದ ಪದೇ ಪದೇ ಅಪಘಾತಗಳಾಗುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಲಾರಿ ಚಾಲಕರಿಗೆ ಎಚ್ಚರಿಕೆ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳು ದಾಖಲಾಗಿವೆ.

  • ಕಂದಕಕ್ಕೆ ಬಿದ್ದು ಸಿಮೆಂಟ್ ಲಾರಿ ಅಪ್ಪಚ್ಚಿಯಾದ್ರೂ ಚಾಲಕ, ಕ್ಲೀನರ್ ಬಚಾವ್

    ಕಂದಕಕ್ಕೆ ಬಿದ್ದು ಸಿಮೆಂಟ್ ಲಾರಿ ಅಪ್ಪಚ್ಚಿಯಾದ್ರೂ ಚಾಲಕ, ಕ್ಲೀನರ್ ಬಚಾವ್

    ಗದಗ: ಸಿಮೆಂಟ್ ಲಾರಿಯೊಂದು ವೇಗವಾಗಿ ಬರುತ್ತಿದ್ದ ವೇಳೆ ರೋಡ್ ಬ್ರೇಕ್ ದಾಟುವಾಗ ಸ್ಟೇರಿಂಗ್ ಕಟ್ ಆಗಿ ರಸ್ತೆ ಪಕ್ಕ ಕಂದಕಕ್ಕೆ ಉರುಳಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣ ಹೊರವಲಯದಲ್ಲಿ ನಡೆದಿದೆ.

    ಘಟನೆಯಿಂದ ಲಾರಿ ಮುಂದಿನ ಭಾಗ ಸಂಪೂರ್ಣ ಪೀಸ್ ಪೀಸ್ ಆಗಿದೆ. ಲಾರಿಯಲ್ಲಿ ಸಿಲುಕಿರುವ ಚಾಲಕ, ಕ್ಲೀನರ್ ನನ್ನು ಸ್ಥಳೀಯರು ಕೂಡಲೇ ರಕ್ಷಣೆ ಮಾಡಿ ಇಬ್ಬರ ಪ್ರಾಣ ಉಳಿಸಿದ್ದಾರೆ. ಲಾರಿ ಮುಂದಿನ ಭಾಗ ಜಖಂ ಆಗಿರುವುದನ್ನ ನೋಡಿದ್ರೆ ಪವಾಡ ಸದೃಶ ರೀತಿಯಲ್ಲಿ ಚಾಲಕ, ಕ್ಲೀನರ್ ಪಾರಾಗಿದ್ದಾರೆ.

    ನರಳಾಡುತ್ತಿದ್ದ ಇವರನ್ನ ಸ್ಥಳೀಯ ಅನೇಕರು ದೇವರಂತೆ ಬಂದು ರಕ್ಷಣೆ ಮಾಡಿದ್ದಾರೆ. ಸುಮಾರು 600 ಸಿಮೆಂಟ್ ಬ್ಯಾಗ್ ತುಂಬಿಕೊಂಡು ಕಲಬುರಗಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಸಿಮೆಂಟ್ ಲಾರಿ ಕಂದಕಕ್ಕೆ ಉರುಳಿದೆ. ಚಾಲಕ ಶಿವಕುಮಾರ ಶೆಟ್ಟಿ ಹಾಗೂ ಕ್ಲೀನರ್ ಇಸ್ಮಾಯಿಲ್ ಸಾಬ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರಿಗೂ ಗಾಯಗಳಾಗಿದ್ದು, ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಚಾಲಕ ಕ್ಲೀನರ್ ಇಬ್ಬರು ಕಲಬುರಗಿ ಜಿಲ್ಲೆ ಚಿಂಚೊಳ್ಳಿ ಹಾಗೂ ನಾಗರಾಳ ನಿವಾಸಿಗಳು ಎನ್ನಲಾಗಿದೆ. ಈ ಘಟನೆ ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಪಲ್ಟಿ

    ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಪಲ್ಟಿ

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಪಲ್ಟಿಯಾದ ಘಟನೆ ನೆಲಮಂಗಲದ ಟಿ.ಬೇಗೂರು ಬಳಿ ನಡೆದಿದೆ.

    ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು ಕೆಲಕಾಲ ಟ್ರಾಫಿಕ್ ಜಾಂ ಉಂಟಾಗಿತ್ತು.

    ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 36 ಟನ್ ಸಿಮೆಂಟ್ ಕದ್ದವರು ಮಾಡಿದ್ದೇನು ಗೊತ್ತಾ..?

    36 ಟನ್ ಸಿಮೆಂಟ್ ಕದ್ದವರು ಮಾಡಿದ್ದೇನು ಗೊತ್ತಾ..?

    ಚಿಕ್ಕಬಳ್ಳಾಪುರ: 36 ಟನ್ ಸಿಮೆಂಟ್ ತುಂಬಿದ್ದ ಬೃಹತ್ ಟ್ಯಾಂಕರ್ ಲಾರಿಯನ್ನ ಕದ್ದಿದ್ದ ಕಳ್ಳರು ಒಂದು ಕಡೆ ಸಿಮೆಂಟ್ ಮತ್ತೊಂದು ಕಡೆ ಲಾರಿ ಬಿಟ್ಟು ಪರಾರಿಯಾಗಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಿಂದ ಸಿಮೆಂಟ್ ಟ್ಯಾಂಕರ್ ಕಳವು ಮಾಡಿದ್ದ ಖದೀಮರು, 36 ಟನ್ ಸಿಮೆಂಟ್ ಅನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ-ಹೊಸಕೋಟೆ ಮಾರ್ಗದ ವೈಜಕೂರು ಗ್ರಾಮದ ಬಳಿಯ ಬಡಾವಣೆಯಲ್ಲಿ ಡಂಪ್ ಮಾಡಿ, ಲಾರಿಯನ್ನ ಎಚ್ ಕ್ರಾಸ್ ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

    ಎಂಎಸ್‍ಕೆ ಲಾಜಿಸ್ಟಿಕ್ಸ್ ಕಂಪನಿಗೆ ಸೇರಿದ ಟಿಎನ್28 ಎಎಲ್ 9110 ನಂಬರಿನ ಟ್ಯಾಂಕರ್ ಇದಾಗಿದ್ದು, ದಾಲ್ಮಿಯಾ ಕಂಪನಿಗೆ ಸೇರಿದ ಸಿಮೆಂಟ್ ನ್ನ ಜಮ್ಮಲಮಡುಗು ವಿನಿಂದ ಹೊಸಕೋಟೆ ಗೆ ತುಂಬಿಕೊಂಡು ಬರಲಾಗಿತ್ತು. ಆದ್ರೆ ನಿಂತಿದ್ದ ಲಾರಿಯನ್ನ ಖದೀಮರು ಕದ್ದು ಈ ಕೃತ್ಯ ಎಸಗಿದ್ದು, ಸದ್ಯ ಕಳ್ಳ ಖದೀಮರಿಗಾಗಿ ಹೊಸಕೋಟೆ  ಪೊಲೀಸರು ಬಲೆ ಬೀಸಿದ್ದಾರೆ.